You are on page 1of 3

೩೧ಅಕ್ಟೋಬರ್ ೨೦೨೨

ಶ್ರೀಗುರುಭ್ಯೋನ್ನಮ: ಹರಿ:
~~~~~ ಸಮಯ ರಾಮಾಯಣ ಭಾಗ ೧ ~~~~~

ಪದ್ಮಪುರಾಣ : ಪಾತಾಳಖಂಡ: ಅಧ್ಯಾಯ ೩೬

ಈಶ್ವರಸ್ಯ ಧನುರ್ಭಗ್ನಂ ಜನಕಸ್ಯ ಗೃಹೇ ಸ್ಥಿತಂ |


ರಾಮ: ಪಂಚದಶೇ ವರ್ಷೇ ಷಡ್ವರ್ಷಾಮಥ ಮೈಥಿಲೀಂ || ೧೫ ||

ಉಪಯೇಮೇ ವಿವಾಹೇನ ರಮ್ಯಾಂ ಸೀತಾಮಯೋನಿಜಾಂ |


ಕೃತಕೃತ್ಯಸ್ತದಾ ಜಾತ: ಸೀತಾಂ ಸಂಪ್ರಾಪ್ಯ ರಾಘವ: || ೧೬ ||

ಭಾವಾರ್ಥ :
ಜನಕನ ಮನೆಯಲ್ಲಿ ಈಶ್ವರನ ಧನುಸ್ಸನ್ನು ಮುರಿದನು. ರಾಮನ ಹದಿನೈದನೆಯ ವರ್ಷದಲ್ಲಿ ಆರುವರ್ಷ ವಯಸ್ಸುಳ್ಳ ಅಯೋನಿಜಳಾದ
ಸೀತೆಯನ್ನು ಮದುವೆಯಾದನು. ಸೀತೆಯನ್ನು ಹೊಂದಿ ಕೃತಕೃತ್ಯನಾದನು.

ತತೋ ದ್ವಾದಶವರ್ಷಾಣಿ ರೇಮೇ ರಾಮಸ್ತಯಾ ಸಹ |


ಸಪ್ತವಿಂಶತಿಮೇ ವರ್ಷೇ ಯೌವರಾಜ್ಯಮಕಲ್ಪಯತ್ || ೧೭ ||

ಭಾವಾರ್ಥ :
ಅನಂತರ ಹನ್ನೆರಡು ವರ್ಷಗಳ ವರೆಗೂ ರಾಮನು ಅವಳೊಡನೆ ಇದ್ದನು. ರಾಮನ ಇಪ್ಪತ್ತೇಳನೆಯ ವರ್ಷದಲ್ಲಿ ಯುವರಾಜ ಪಟ್ಟವನ್ನು
ಕಟ್ಟಿದನು.

ರಾಜಾನಮಥ ಕೈಕೇಯೀ ವರದ್ವಯಮಯಾಚತ |


ತಯೋರೇಕೇನ ರಾಮಸ್ತು ಸಸೀತಸ್ಸಹಲಕ್ಷ್ಮಣ: || ೧೮ ||

ಜಟಾಧರ: ಪ್ರವ್ರಜತಾಂ ವರ್ಷಾಣೀಹ ಚತುರ್ದಶ |


ಭರತಸ್ತು ದ್ವಿತೀಯೇನ ಯೌವರಾಜ್ಯಾಧಿಪೋs ಸ್ತು ಮೇ || ೧೯ ||

ಭಾವಾರ್ಥ :
ಆ ಯುವರಾಜ ಪಟ್ತವನ್ನು ಕಟ್ಟುವ ಕಾಲದಲ್ಲಿ ಕೈಕೇಯಿಯು ರಾಜನನ್ನು ಎರಡು ವರಗಳನ್ನು ಕೇಳಿಕೊಂಡಳು. ಒಂದು ವರದಿಂದ ರಾಮನು
ಜಟಾಧಾರಿಯಾಗಿ ಸೀತೆ ಲಕ್ಷ್ಮಣರೊಂದಿಗೆ ಹದಿನಾಲ್ಕು ವರ್ಷಗಳು ಕಾಡಿಗೆ ಹೋಗುವಂತೆಯೂ, ಮತ್ತೊಂದು ವರದಿಂದ ಭರತನಿಗೆ
ಯೌವರಾಜ್ಯವನ್ನು ಕಟ್ಟುವಂತೆಯೂ ಕೇಳಿಕೊಂಡಳು.

ಜಾನಕೀಲಕ್ಷ್ಮಣಸಖಂ ರಾಮಂ ಪ್ರಾವ್ರಾಜಯನ್ನೃಪ: |


ತ್ರಿರಾತ್ರಮುದಕಾಹಾರಶ್ಚತುರ್ಥೇ ಹಿ ಫಲಾಶನ: || ೨೦ ||

ಭಾವಾರ್ಥ :
ರಾಜನು ಸೀತಾಲಕ್ಷ್ಮಣರೊಡನೆ ರಾಮನನ್ನು ಕಾಡಿಗೆ ಕಳುಹಿಸಿದನು. ರಾಮನು ಮೂರು ದಿನಗಳು ಹಾಲನ್ನು ಕುಡಿದಿದ್ದುಕೊಂಡು ನಾಲ್ಕನೆಯ
ದಿನ ಫಲವನ್ನು ತಿಂದು ಐದನೆಯ ದಿನ ಚಿತ್ರಕೂಟದಲ್ಲಿ ಆಶ್ರಮವನ್ನು ಮಾಡಿಕೊಂಡನು.

ಸಶೇಷ ...

🙏🙇 ಓಂ ತತ್ ಸತ್ 🙇🙏
... ಮುದ್ರಾರಾಕ್ಷಸನ ಹಾವಳಿಗಾಗಿ ( Typographical errors) ಕ್ಷಮೆ ಕೋರುತ್ತೇನೆ ...
ಶ್ರೀಹರಿ ಪ್ರೀಯತಾಂ | ಶ್ರೀಮನ್ಮಧ್ವಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು {

-------------------------------------------
೦೧ ನವಂಬರ್ ೨೦೨೨
ಶ್ರೀಗುರುಭ್ಯೋನ್ನಮ: ಹರಿ:
~~~~~ ಸಮಯ ರಾಮಾಯಣ ಭಾಗ ೨ ~~~~~

ಪದ್ಮಪುರಾಣ : ಪಾತಾಳಖಂಡ: ಅಧ್ಯಾಯ ೩೬

ಪಂಚಮೇ ಚಿತ್ರಕೂಟೇ ತು ರಾಮ: ಸ್ಥಾನ ಮಕಲ್ಪಯತ್ |


ಅಥ ತ್ರಯೋದಶೇ ವರ್ಷೇ ಪಂಚವಟ್ಯಾಂ ಮಹಾಮುನೇ || ೨೧ ||

ರಾಮೋ ವಿರೂಪಯಾಮಾಸ ಶೂರ್ಪಣಖಾಂ ನಿಶಾಚರೀಂ |


ವನೇ ವಿಚರತಸ್ತಸ್ಯ ಜಾನಕ್ಯಾ ಸಹಿತಸ್ಯ ಚ || ೨೨ ||
ಭಾವಾರ್ಥ :
ಆಮೇಲೆ ಕಾಡಿಗೆ ಹೋದ ಹದಿಮೂರನೆಯ ವರ್ಷದಲ್ಲಿ ಪಂಚವಟಿಯಲ್ಲಿ ಶೂರ್ಪಣಖಿಯೆಂಬ ರಾಕ್ಷಸಿಯನ್ನು ರಾಮನು ವಿರೂಪಮಾಡಿದನು.
ಅನಂತರ ಇವರು ಕಾಡಿನಲ್ಲಿರುತ್ತಿರಲು ರಾವಣನೆಂಬ ರಾಕ್ಷಸನು ತನ್ನ ಪಾಪದ ಪರಿಪಕ್ವತೆಯಿಂದ ಆ ಸೀತೆಯನ್ನು ಕದಿಯಲು ಬಂದನು.

ಆಗತೋ ರಾಕ್ಷಸಸ್ತಾಂ ವೈ ಹರ್ತುಂ ಪಾಪವಿಪಾಕತ: |


ತತೋ ಮಾಘಾಸಿತಾಷ್ಟಮ್ಯಾಂ ಮುಹೂರ್ತೇ ವೃಂದಸಂಜ್ಞಕೇ || ೨೩ ||

ರಾಘವಾಭ್ಯಾಂ ವಿನಾ ಸೀತಾಂ ಜಹಾರ ದಶಕಂಧರ: |


ತೇನೈವಂ ಹ್ರಿಯಮಾಣಾ ಸಾ ಚಕ್ರಂದ ಕುರರೀ ಯಥಾ || ೨೪ ||

ಭಾವಾರ್ಥ :
ಅನಂತರ ಮಾಘ ಬಹುಳ ಅಷ್ಟಮಿಯ ದಿನ ವೃಂದ ಎನ್ನುವ ಒಂದು ಮುಹೂರ್ತದಲ್ಲಿ ರಾಮಲಕ್ಷ್ಮಣರಿಲ್ಲದಿರುವಾಗ ದಶಕಂಧರನು ಆಕೆಯನ್ನು
ಕದ್ದನು. ಅವನು ಕದ್ದುಕೊಂಡು ಹೋಗುತ್ತಿರುವಾಗ ಹುಲ್ಲೆಯು ಅಳುವಂತೆ ಅವಳು ಅಳುತ್ತಾ ಹೋದಳು.

ರಾಮ ರಾಮೇತಿ ಮಾಂ ರಕ್ಷ ರಕ್ಷ ಮಾಂ ರಕ್ಷಸಾ ಹೃತಾಂ |


ಯಥಾ ಶ್ಯೇನ: ಕ್ಷುಧಾ ಕ್ರಾಂತ: ಕ್ರಂದಂತೀಂ ವರ್ತಿಕಾಂ ನಯೇತ್ || ೨೫ ||

ಭಾವಾರ್ಥ :
ರಾಮ ರಾಮ, ನನ್ನನ್ನು ಕಾಪಾಡು, ನನ್ನನ್ನು ಕಾಪಾಡು, ರಾಕ್ಷಸನು ಕದ್ದುಕೊಂಡು ಹೋಗುತ್ತಿದ್ದಾನೆ, ಕಾಪಾಡು ಎಂದು ಹಸಿದ ಗಿಡುಗನು,
ದು:ಖಪಡುತ್ತಿರುವ ಕುರವಕಹಕ್ಕಿಯನ್ನು ಹೊತ್ತುಕೊಂಡು ಹೋಗುತ್ತಿರುವಾಗ ಹೇಗೆ ಅಳುವುದೋ ಹಾಗೆ ಆಳುತ್ತಿದ್ದಳು.

ಗ್ರಂಥಋಣ: ಪದ್ಮಮಹಾಪುರಾಣಂ, ಶ್ರೀ ಜಯಚಾಮರಾಜೇಂದ್ರ ಗ್ರಂಥಮಾಲಾ

ಸಶೇಷ ...

🙏🙇 ಓಂ ತತ್ ಸತ್ 🙇🙏
... ಮುದ್ರಾರಾಕ್ಷಸನ ಹಾವಳಿಗಾಗಿ ( Typographical errors) ಕ್ಷಮೆ ಕೋರುತ್ತೇನೆ ...
ಶ್ರೀಹರಿ ಪ್ರೀಯತಾಂ | ಶ್ರೀಮನ್ಮಧ್ವಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು {

---------------------------------------------------------
೧೪ ನವೆಂಬರ್ ೨೦೨೩

ಶ್ರೀಗುರುಭ್ಯೋನ್ನಮ: ಹರಿ:
~~~~~ ಸಮಯ ರಾಮಾಯಣ ಭಾಗ ೧ ~~~~~

ಪದ್ಮಪುರಾಣ : ಪಾತಾಳಖಂಡ: ಅಧ್ಯಾಯ ೩೬

ಮಾಘಶುಕ್ಲದ್ವಿತೀಯಾಯಾಶ್ಚೈತ್ರಕೃಷ್ಣಚತುರ್ಧಶೀ |
ಸಪ್ತಾಶೀತಿದಿನಾನ್ಯೇವ ಮಧ್ಯಂ ಪಂಚದಶಾಹಕಂ || ೬೮ ||

ಯುದ್ಧಾವಹಾರಸ್ಸಂಗ್ರಾಮೋ ದ್ವಾಸಪತ್ತಿದಿನಾನ್ಯಭೂತ್ |
ಸಂಸ್ಕಾರೋ ರಾವಣಾದೀನಾಮಮಾವಾಸ್ಯಾದಿನೇs ಭವೇತ್ || ೬೯ ||

ಭವಾರ್ಥ :
ಮಾಘಶುದ್ಧ ದ್ವಿತೀಯೆಯಿಂದ ಚೈತ್ರ ಕೃಷ್ಣ ಚತುರ್ದಶಿಯ ವರೆಗೆ ಇಪ್ಪತ್ತೇಳು ದಿನಗಳ ವರೆಗೆ ಯುದ್ಧಕಾಲವು. ಹದಿನೈದು ದಿನಗಳು
ಯುದ್ಧವನ್ನು ಮಧ್ಯದಲ್ಲಿ ನಿಲ್ಲಿಸಿದರು. ಅನಂತರ ಇಪ್ಪತ್ತೆರಡು ದಿನಗಳು ಮತ್ತೆ ಯುದ್ಧ ನಡೆಯಿತು. ಚೈತ್ರ ಬಹುಳ ಅಮಾವಾಸ್ಯೆಯ ದಿನ
ರಾವಣನ ಅಂತ್ಯಸಂಸ್ಕಾರವು ನಡೆಯಿತು.

ವೈಶಾಖಸ್ಯ ಚತುರ್ಥ್ಯಾಂ ತು ರಾಮ: ಪುಷ್ಪಕವಿಮಾಶ್ರಿತ: |


ವಿಹಾಯಸಾ ನಿವೃತ್ತಸ್ತು ಭೂಯೋs ಯೋಧ್ಯಾಂ ಪುರೀಂ ಪ್ರತಿ || ೭೩ ||

ಭಾವಾರ್ಥ :
ವೈಶಾಖ ಶುದ್ಧ ಚತುರ್ಥಿಯ ದಿನ ರಾಮನು ಪುಷ್ಪಕವಿಮಾನವನ್ನೇರಿ ಆಕಾಶಮಾರ್ಗದಲ್ಲಿ ಹೊರಟು ಅಯೋಧ್ಯೆಗೆ ಹಿಂತಿರುಗಿದನು.

ನಂದಿಗ್ರಾಮೇ ತು ಷಷ್ಠ್ಯಾಂ ಸ ಭರತೇನ ಸಮಾಗಮ: |


ಸಪ್ತಮ್ಯಾಮಭಿಷಿಕ್ತೋs ಸೌ ಭೂಯೋs ಯೋಧ್ಯಾಂ ರಘೂದ್ವಹ: || ೭೫ ||

ಭಾವಾರ್ಥ :
ವೈಶಾಖ ಶುದ್ಧ ಷಷ್ಠಿಯ ದಿನ ನಂದಿಗ್ರಾಮದಲ್ಲಿ ಭರತನೊಡನೆ ಸೇರಿದನು. ಸಪ್ತಮೀ ದಿನ ಅಯೋದ್ಯೆಯಲ್ಲಿ ರಾಮನು ಅಭಿಷಿಕ್ತನಾದನು.

ಗ್ರಂಥಋಣ: ಪದ್ಮಮಹಾಪುರಾಣಂ, ಶ್ರೀ ಜಯಚಾಮರಾಜೇಂದ್ರ ಗ್ರಂಥಮಾಲಾ

ಸಶೇಷ ...

🙏🙇 ಓಂ ತತ್ ಸತ್ 🙇🙏
... ಮುದ್ರಾರಾಕ್ಷಸನ ಹಾವಳಿಗಾಗಿ ( Typographical errors) ಕ್ಷಮೆ ಕೋರುತ್ತೇನೆ ...
ಶ್ರೀಹರಿ ಪ್ರೀಯತಾಂ | ಶ್ರೀಮನ್ಮಧ್ವಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು {

PadmaPurana_vol11b P212 (p420)

You might also like