You are on page 1of 29

ಗಾದೆಗಳು :

ಸನ್ಯಾಸಿಗೆ ಯಾತರ ಕಳವಳ ಅಂದ್ರೆ ಅನ್ನ ದ್ದೊಂದೇ ಕಳವಳ.


ಸಿರಿ ಸೋಂಕಿದವರ ಪರಿ ಬೇರೆ
ಸೊಸೆಗೆ ಮನೆವಾಸ, ಅತ್ತೆಗೆ ಪರವಾಸ
ಸುಖೀವಂತ್ಗೆ ದುಕ್ಕ ಹೇಳುವತ್ಗೆ ಅಳೂದು ಬುಟ್ಬು ಟ್ಟು ನನ್ನ ಕೂಡ್ಕೊ ಅಂದನಂತೆ
ಸ್ವ ಧರ್ಮ ತಪ್ಪು ದ್ರೂ ಅಧರ್ಮ ಮಾಡಬಾರ್ದು
ಸುಳ್ಳು ದೇವರಿಗೆ ಕಳ್ಳ ಪೂಜಾರಿ.
ಸ್ವ ರ್ಗವೂ ತಪ್ಪಿತು ದುರ್ಗವೂ ತಪ್ಪಿತು
ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ .
ಕಾಗೆಗೆ ಯಜಮಾನನ ಸ್ಥಾನ ಕೊಟ್ಟ ರೆ ಮನೆ ತುಂಬಾ ಪಿಷ್ಟ .
ಇತರರ ಕಣ್ಣಿನ ಕಸ ಕಾಣುವುದು, ತನ್ನ ಕಣ್ಣಿನ ಕಸ ಕಾಣುವುದಿಲ್ಲ .
ತನ್ನ ಮೊಸರನ್ನು ಯಾರೂ ಹುಳಿ ಅನ್ನು ವುದಿಲ್ಲ .
ನಾನು ಅಗೆಯುವಲ್ಲಿ ಕಲ್ಲು , ಅಜ್ಜ ಅಗೆಯುವಲ್ಲಿ ಮಣ್ಣು .
ದಡ್ಡ ಮನುಷ್ಯ ನೆಲಕ್ಕೆ ಭಾರ, ಅನ್ನ ಕ್ಕೆ ಖಾರ.
ದಡ್ಡ ನಿಗೆ ಹಗಲು ಕಳೆಯುವುದಿಲ್ಲ , ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ .
ಹುಲಿಯ ಬಣ್ಣ ವನ್ನು ಮೆಚ್ಚಿ, ನರಿ ತನ್ನ ಕೂದಲನ್ನು ಭಸ್ಮ ಮಾಡಿಕೊಂಡಂತೆ.
ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.
ತಿನ್ನ ಲು, ಉಣ್ಣ ಲು ಇದ್ದ ರೆ ಯಾವತ್ತೂ ನೆಂಟರು.
ಶರೀರಕ್ಕೆ ಸುಖ, ಹೊಟ್ಟೆಗೆ ದುಃಖ.
ನೂರಾರು ರೋಗಿಗಳನ್ನು ಕೊಂದು ಒಬ್ಬ ವೈದ್ಯ ಆದಂತೆ !
ವಿವಿಧ ರೋಗಗಳಿಗೆ ಮದ್ದಿವೆ, ಹೊಟ್ಟೆ ಉರಿಗೆ ಮದ್ದಿಲ್ಲ .
ಅಡಿಕೆಕಾಯಿಯನ್ನು ಚೀಲದೊಳಗೆ ಹಾಕಬಹುದು, ಮರ ಆದ ನಂತರ ಹಾಕಬಹುದೇ?
ಲಾಭ ನೋಡಿ ಬಾಳೆ ಹಣ್ಣು ತಿಂದಂತೆ.
ಮುಳ್ಳ ನ್ನು ಮುಳ್ಳಿನಿಂದಲೇ ತೆಗೆಯಬೇಕು.
ಕೋತಿ ಮೊಸರನ್ನ ತಿಂದು,ಮೇಕೆ ಬಾಯಿಗೆ ಒರೆಸಿದಂತೆ
ಹೆಣ್ಣು ತಿರುಗಿ ಕೆಟ್ಟ ಳು, ಗಂಡು ಕೂತು ಕೆಟ್ಟ ನು.
ಹತ್ತು ಮಕ್ಕ ಳ ತಾಯಿ ದಾರಿಯಲ್ಲಿ ಸಿಕ್ಕಿ ದ್ದ ನ್ನು ತಿಂದಂತೆ.
ತಾಯಿಯನ್ನು ಹೊಡೆಯಬಾರದು, ಗುಬ್ಬಿಯ ಗೂಡನ್ನು ತೆಗೆಯಬಾರದು.
ನಾಯಿಯು ನಮ್ಮ ನ್ನು ಕಚ್ಚಿದರೆ ನಾಯಿಯನ್ನು ಕಚ್ಚ ಲು ನಮ್ಮಿಂದ ಆಗುವುದೇ?
ಬೆಲ್ಲ ಇದ್ದ ಲ್ಲಿ ನೊಣ ತಿರುಗಾಡಿದಂತೆ.
ಹುಣಸೆ ಹುಳಿಯೆಂದು ಅಂಬಡೆ ತಿಂದ ಹಾಗೆ.
ಮೃತ್ಯು ಬಂದ ಮೇಲೆ ವೈದ್ಯ ಬಂದ.
ಶಸ್ತ್ರದಿಂದಾದ ಗಾಯ ಮಾಯುತ್ತದೆ, ನಾಲಿಗೆಯಿಂದಾದ ಗಾಯ ಮಾಯುವುದಿಲ್ಲ .
ಚರ್ಮ ಹೋದರೂ ಪರವಾಗಿಲ್ಲ , ಕಾಸು ಹೋಗಬಾರದು ಎಂದಂತೆ.
ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಹೇಳಿದ ಹಾಗೆ.
ರಾವಣನ ಮಾತಿಗೆ ಮನಸೋತವ, ರಾಮನ ಮಾತಿಗೆ ಜಾಣನಾಗುವನೇ?
ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು.
ದುಷ್ಟ ರ ಸಂಗದಿ ನೆರಳು ಕೊಯ್ಯ ದೆ ಬಿಡದು ಕೊರಳು.
ನೀನಾಗದೆ ರಣಹೇಡಿ, ಕೀರ್ತಿ ಪಡೆ ಪ್ರಾಣ ನೀಡಿ.
ನಿನ್ನ ಲ್ಲಿ ನೀ ಹುಡುಕು, ಅರಿಷಡ್ವ ರ್ಗಗಳ ಹೊರ ಹಾಕು.
ಸಜ್ಜ ನರ ಮಾತು ಸಿಹಿ, ದುರ್ಜನರ ತುತ್ತು ಕಹಿ.
ಬುದ್ಧಿ ಇದ್ದ ವನಲ್ಲಿ ಶ್ರದ್ಧೆ, ನಿದ್ದೆ ಬಾರದವನಲ್ಲಿ ವಿದ್ಯೆ.
ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ.
ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು.
ಆಳಾಗದವ ಅರಸನಲ್ಲ , ಹಟ ಹಿಡಿದವ ಸಾಮ್ರಾಟನಲ್ಲ .
ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.
ವಿಶ್ವಾಸಿ ನೀನಾಗು, ಘಾತುಕಕ್ಕೆ ಬಗ್ಗ ದೆ ಮುನ್ನು ಗ್ಗು .
ಹೆಂಡತಿಯ ಮಾತು ಆಗದಿರಲಿ ಕೊಯ್ದು ಕೊಳ್ಳು ವಂತೆ ಕತ್ತು .
ಕಣ್ಣಿಗೆ ಕಂಡದ್ದೆಲ್ಲಾ ನುಣ್ಣ ಗಿರುವುದಿಲ್ಲ .
ನಿನ್ನ ದಲ್ಲ ಸರ್ವ ಆಸ್ತಿ, ಒಳ್ಳೆಯದಲ್ಲ ಗರ್ವ ಜಾಸ್ತಿ.
ಮನಸ್ಸು ಇಲ್ಲ ದಿದ್ದ ರೆ ಗಟ್ಟಿ, ಎಲ್ಲ ವೂ ಮೂರಾಬಟ್ಟಿ.
ಮಾಡಿ ಉಣ್ಣು ಬೇಡಿದಷ್ಟು , ತಗಾದೆ ಮಾಡದೇ ಉಣ್ಣು ನೀಡಿದಷ್ಟು .
ಒಣ ಮಾತು ಒಣಗಿದ ಹುಲ್ಲು , ಒಳ್ಳೆಯ ಮಾತು ಬೆಳ್ಳ ಗಿನ ಹಾಲು.
ತತ್ವ ದಲ್ಲಿ ಸತ್ವ ಹುಡುಕು, ವ್ಯ ಥೆಯಲ್ಲಿ ಕಥೆ ಹುಡುಕು.
ಇಲಿ ಸಿಕ್ಕ ರೆ ಬೆಕ್ಕು ಆಗುವುದು ಹುಲಿ.
ಕಾಗೆಯ ಕೈಯಲ್ಲಿ ಕೊಟ್ಟ ರೆ ಕಾರಭಾರ, ಅದು ಮಾಡುವುದೇ ಉಪಕಾರ?
ಹೋಗುವುದು ಮೂಡಿದ ಹೊತ್ತು , ಹೋಗೋದಿಲ್ಲ ಆಡಿದ ಮಾತು.
ದೈವ ಕಾಡುವುದು ವಿಧಿಗಾಗಿ, ನೀರು ಸಮುದ್ರ ಸೇರುವುದು ನದಿಗಾಗಿ.
ಬಡವರ ಕಣ್ಣೀರಿಗೆ ಕರುಣೆ ಬಂದೀತೆ ಬೆಣ್ಣೆಗೆ?
ಸಲುಗೆ ಕೊಟ್ಟ ರೆ ಸಾಕೂ ಹೆಗ್ಗ ಣವೂ ಸಹ ಏರುವುದು ಹೆಗಲಿಗೆ.
ಹುಟ್ಟಿದ ಮಗು ತರುವುದು ತೊಟ್ಟ ಲಿಗೆ ನಗು.
ಸ್ವಾರ್ಥ ಉಳಿಸಿದವ ಪಾಪಾತ್ಮ , ನಿಸ್ವಾರ್ಥ ಗಳಿಸಿದವ ಪುಣ್ಯಾತ್ಮ .
ಬೇಸರವಿರಬಾರದು, ಅವಸರ ಮಾಡಬಾರದು.
ಎಚ್ಚ ರ ತಪ್ಪಿ ಮಾತನಾಡಬಾರದು, ಹುಚ್ಚ ನಂತೆ ವರ್ತಿಸಬಾರದು.
ಬಿಡುಕು ಮಾತಿಗೆ ಮಾಡಿಕೊಳ್ಳ ದಿರು ಕೆಡುಕು.
ಹಾಲಿಗೆ ಹುಳಿ ಹಿಂಡಿದರೆ ಮೊಸರು, ಮಣ್ಣಿಗೆ ನೀರು ಹಾಕಿದರೆ ಕೆಸರು.
ಗದ್ದೆ ಸುಟ್ಟ ರೂ ಹಾಳಾಗದು ಗಾದೆ.
ನಿನ್ನ ಲ್ಲಿರುವ ಮಾನ ನಿನಗೆ ಕೊಡುವುದು ಬಹುಮಾನ.
ಮಾಟ ಮಾಡಿದೋನ ಮನೆ ಹಾಳು.
ಒಬ್ಬ ರ ಕೂಳು ಇನ್ನೊಬ್ಬ ರ ಕುತ್ತು .
ಒಳಿತಾಗಿ ಮುಗಿದಿದ್ದೆಲ್ಲ ವೂ ಒಳ್ಳೆಯದೇ.
ಹೊಳೆಯುವುದೆಲ್ಲಾ ಚಿನ್ನ ವಲ್ಲ .
ಓಡಿದವನಿಗೆ ಓಣಿ ಕಾಣಲಿಲ್ಲ , ಹಾಡಿದವನಿಗೆ ಹಾದಿ ಕಾಣಲಿಲ್ಲ .
ಬರಿಗೈಯವರ ಬಡಿವಾರ ಬಹಳ.
ಎಲ್ಲ ಕೆಡುಕಿಗೂ ಮೂಲ ಹೊಟ್ಟೆಕಿಚ್ಚು .
ಸ್ವ ರ್ಗದಲ್ಲಿ ಸೇವೆಗೈಯುವುದಕ್ಕಿಂತ ನರಕದಲ್ಲಿ ಆಳುವುದೇ ಲೇಸು.
ಅರೆಗೊಡದ ಅಬ್ಬ ರವೇ ಬಹಳ.
ಮರಿ ಮಾಡುವ ಮೊದಲೇ ಮೊಟ್ಟೆಗಳನ್ನು ಎಣಿಸಬೇಡ.
ಆಪತ್ತಿಗಾದವನೇ ನಿಜವಾದ ಗೆಳೆಯ.
ಇಂದಿನ ಸೋಲು ನಾಳಿನ ಗೆಲುವು.
ಧೈರ್ಯವಿದ್ದ ವನಿಗೆ ದೈವವೂ ಅನುಕೂಲ.
ದುಡ್ಡಿಗಿಂತ ದೊಡ್ಡ ಹೆಸರೇ ಉತ್ತಮ.
ಪ್ರಯತ್ನ ಕ್ಕೆ ಪರಮೇಶ್ವ ರನೂ ಸಹಾಯ ಮಾಡುವನು.
ಉತ್ತಮವಾದ ನಗು ನೇಸರನ ಮಗು.
ಸದಾಚಾರಣೆಯ ಉದಾಹರಣೆಯೇ ಉತ್ತಮವಾದ ಉಪದೇಶ.
ಪ್ರಾಮಾಣಿಕತೆಯಿಂದಲೇ ಪಾರಮಾರ್ಥ.
ಕರೆದುಣ್ಣು ವ ಕೆಚ್ಚ ಲನ್ನು ಕೊರೆದುಂಡ ಹಾಗೆ.
ಉದ್ದು ದ್ದ ಮಾತಿನವರ ಮೊಳಕೈ ಮೊಂಡ.
ಕಿಡಿ ಸಣ್ಣ ದಾದರೂ ಕಾಡೆಲ್ಲ ವನ್ನು ಸುಡುತ್ತದೆ.
ನೋಡಿ ನಡೆದವರಿಗೆ ಕೇಡಿಲ್ಲ .
ಕೃತಿ ಇಲ್ಲ ದ ಮಾತು ಕಸ ಬೆಳೆದ ತೋಟವಿದ್ದಂತೆ.
ಚಿಂತೆ ಮಾಡಿದರೆ ಸಂತೆ ಸಾಗೀತೆ?
ದುಡ್ಡ ನ್ನು ಕಾದಿಟ್ಟು ಕೊಳ್ಳ ದವನು ಹಣವಂತನು ಹೇಗೆ ಆದಾನು?
ಮಕ್ಕ ಳ ಬಾಯಿಗೆ ಹಣ್ಣು ಕೊಟ್ಟು ಮಣ್ಣು ಬಿಡಿಸು.
ತಾಯಿ ಬೇಕು ಇಲ್ಲ ವೇ ಬಾಯಿ ಬೇಕು.
ಸೀರಿಗೇಡಿಗೆ ಸೀರೆ ಉಡಿಸಿದರೆ ಕೆರಿ ದಂಡಿ ಮ್ಯಾಗ ನಿಂತು ಕೇಕೆ ಹಾಕಿದಳು.
ಪೀತಾಂಬರ ಉಟ್ಟ ರೂ ಕೊತ್ತಂಬರಿ ಮಾರೋದು ತಪ್ಪ ಲಿಲ್ಲ .
ಪೇಚಾಟದಲ್ಲಿ ಬಿದ್ದ ವನಿಗೆ ಪೀಕಲಾಟವೇ ಗತಿ.
ಹಾರುವನ ತೊತ್ತಾಗಬೇಡ ಗಾಣಿಗನ ಎತ್ತಾಗಬೇಡ.
ಮಂತ್ರಕ್ಕಿಂತ ಉಗುಳೇ ಹೆಚ್ಚು .
ಹಂಪಿಗೆ ಹೋಗುವುದಕ್ಕಿಂತ ಕೊಂಪೆಯಲ್ಲಿರುವುದೇ ಲೇಸು.
ಎಡಗಣ್ಣು ಹೊಡೆದರೆ ನಾರಿಗೆ ಶುಭ.
ಊಟವೆಂದರೆ ಊರು ಬಿಟ್ಟು ಹೋದಂತೆ.
ಎಲ್ಲ ಮುಗಿದ ಮೇಲೆ ತೀರ್ಥಯಾತ್ರೆಗೆ ಹೊರಟಂತೆ.
ಒಗ್ಗ ಟ್ಟಿಲ್ಲ ದ ಊರಲ್ಲಿ ಒಪ್ಪ ತ್ತೂ ಇರಬೇಡ.
ಒಕ್ಕ ಣ್ಣ ತನಗೆ ಹತ್ತು ಕಣ್ಣು ಅಂತಿದ್ನಂತೆ.
ಕಣ್ಣಿಗೂ ಮೂಗಿಗೂ ಮೂರು ಗಾವುದ.
ಕಲಹವೇ ಕೇಡಿಗೆ ಮೂಲ.
ಊರೇ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದಂತೆ.
ಮಾತಿಗೆ ಸಿಕ್ಕಿ ದರೆ ಮಳೆಗೆ ಸಿಕ್ಕಂತೆ.
ನಾಲಿಗೆಯಿಂದ ಕೆಳಗೆ ಬಿದ್ದ ರೆ ನರಕ.
ವೇದ ಸುಳ್ಳಾದರು ಗಾದೆ ಸುಳ್ಳಾಗದು.
ಅಡಿಕೆಗೆ ಹೋದ ಮಾನ ಆನೆ ಕೊಟ್ಟ ರು ಬರಲ್ಲ .
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
ಎತ್ತು ಏರಿಗೆಳೀತು, ಕೋಣ ನೀರಿಗೆಳೀತು.
ಎತ್ತಿಗೆ ಜ್ವ ರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ.
ಕೈ ಕೆಸರಾದರೆ ಬಾಯಿ ಮೊಸರು.
ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?
ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.
ಮಾತು ಬೆಳ್ಳಿ, ಮೌನ ಬಂಗಾರ.
ಮಾತು ಮನೆ ಮುರಿತು, ತೂತು ಓಲೆ ಕೆಡಿಸಿತು.
ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
ಮನೆಗೆ ಮಾರಿ, ಊರಿಗೆ ಉಪಕಾರಿ.
ಆಳಾಗಬಲ್ಲ ವನು ಅರಸನಾಗಬಲ್ಲ .
ಊರಿಗೆ ದೊರೆ ಆದರೂ ತಾಯಿಗೆ ಮಗನೆ.
ಹೆತ್ತವರಿಗೆ ಹೆಗ್ಗ ಣ ಮುದ್ದು .
ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆ) ಬಾಗಿಲು ಹಾಕಿದರಂತೆ.
ಗಿಡವಾಗಿ ಬಗ್ಗ ದ್ದು , ಮರವಾಗಿ ಬಗ್ಗೀತೇ?
ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.
ಮನಸಿದ್ದ ರೆ ಮಾರ್ಗ.
ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ.
ಆರಕ್ಕೇರಲಿಲ್ಲ , ಮೂರಕ್ಕೀಳಿಯಲಿಲ್ಲ .
ಆರು ಕೊಟ್ಟ ರೆ ಅತ್ತೆ ಕಡೆ, ಮೂರು ಕೊಟ್ಟ ರೆ ಸೊಸೆ ಕಡೆ.
ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ .
ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
ಬೆಕ್ಕು ಕಣ್ಮು ಚ್ಚಿ ಹಾಳು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ ?
ಬೆಕ್ಕಿ ಗೆ ಚೆಲ್ಲಾ ಟ ಇಲಿಗೆ ಪ್ರಾಣ ಸಂಕಟ.
ಬೆಳ್ಳ ಗಿರೋದೆಲ್ಲ ಹಾಲಲ್ಲ , ಹೊಳೆಯೋದೆಲ್ಲ ಚಿನ್ನ ಅಲ್ಲ .
ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು .
ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು.
ಚಿಂತೆ ಇಲ್ಲ ದವನಿಗೆ ಸನ್ತೇಲು ನಿದ್ದೆ.
ದೇವರು ವರ ಕೊಟ್ಟ ರು ಪೂಜಾರಿ ಕೊಡೆಬೇಕಲ್ಲ .
ಹನುಮಂತಾನೆ ಬಾಲ ಕಡಿತಿರುವಾಗ, ಇವನ್ಯಾವನೋ ಶಾವಿಗೆ ಕೇಳಿದನಂತೆ.
ತುಂಬಿದ ಕೊಡ ತುಳುಕುವುದಿಲ್ಲ .
ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
ಹನಿ ಹನಿ ಸೇರಿದರೆ ಹಳ್ಳ , ತೆನೆ ತೆನೆ ಸೇರಿದರೆ ಬಳ್ಳ .
ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು .
ಹುಚ್ಚ ರ ಮದುವೆಯಲ್ಲಿ ಉನ್ಡೋನೆ ಜಾಣ.
ಜಾಣನಿಗೆ ಮಾತಿನ ಪೆಟ್ಟು , ದಡ್ಡ ನಿಗೆ ದೊಣ್ಣೆ ಪೆಟ್ಟು .
ಹಾಸಿಗೆ ಇದ್ದ ಷ್ಟು ಕಾಲು ಚಾಚು
ಬೀದೀಲಿ ಹೊಗೊ ಮಾರೀನ ಮನೆಗೆ ಕರೆದಂಗೆ
ಮಾಡಿದುಣ್ಣೊ ಮಾರಾಯ
ಉಪ್ಪ ತಿಂದ ಮೇಲೆ ನೀರು ಕುಡಿಯಲೇ ಬೆಕು
ಯಾರದೊ ದುಡ್ಡಿನಲ್ಲಿ ಯೆಲ್ಲ ಮನ್ನ ಜಾತ್ರೆ
ಆಗೊದೆಲ್ಲ ವೊಳ್ಳೆದಕ್ಕೆ
ಗಂಡ-ಹೆಂಡಿರ ಜಗಳ ತಿಂದು ಮಲುಗೊ ವರೆಗೆ
ಕಾಲಕ್ಕೆ ತಕ್ಕಂತೆ ನಡಿಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು
ಅನ್ನ ಹಾಕಿದ ಮನೆಗೆ ಕನ್ನ ಹಕಬೇಡ
ಮಾರಿ ಕಣ್ಣು ಹೋರಿ ಮ್ಯಾಲೆ, ಕಟುಕನ್ ಕಣ್ಣು ಕುರಿ ಮ್ಯಾಲೆ.
ಪಾಲಿಗೆ ಬಂದದ್ದೆ ಪರಮಾನ್ನ .
ಸಾವಿರ ಸುಳ್ಳು ಹೇಲಿ ಒಂದು ಮದುವೆ ಮಾಡು
ಕಳ್ಳ ನ ನಂಬಿದ್ರು ಕುಳ್ಳ ನ ನಂಬಬೇಡ
ನೆಲಕ್ಕೆ ಬಿದ್‍ದ್ರೂ ಮೀಸೆ ಮಣ್ಣಾಗಿಲ್ಲ
ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೊ
ದೇವರು ಒಲಿದರೂ ಪೂಜಾರಿ ಒಲಿಯೊಲ್ಲ .
ನಮ್ಮ ದೇವರ ಸತ್ಯ ನಮಗೆ ಗೊತ್ತು .
ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
ಕೈ ಕೆಸರಾದರೆ ಬಾಯಿ ಮೊಸರು.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ .
ರೋಗಿ ಬಯಸಿದ್ದು ಹಾಲು-ಅನ್ನ ವೈದ್ಯ ಹೇಳಿದ್ದು ಹಾಲು-ಅನ್ನ
ಕಳ್ಳ ನಿಗೊಂದು ಪಿಳ್ಳೆ ನೆವ
ಕುಣಿಯಲಾರದವಳು ನೆಲ ಡೊಂಕು ಅಂದಳಂತೆ
ಹೋದೆಯಾ ಪಿಶಾಚಿ ಅಂದ್ರೆ ಬಂದೆಯಾ ಗವಾಕ್ಷೀಲಿ
ಹೋದ ಪುತ್ತ ಬಂದ ಪುತ್ತ ಪುಟ್ಟ ನ ಕಾಲಿಗೆ ನೀರಿಲ್ಲ
ಶಿವ ಪೂಜೇಲಿ ಕರಡಿ ಬಿಟ್ಟಂಗೆ
ಸೋದರ ಮಾವನ ಚಾಳು ತುಂಡಪುಂಡರ ಪಾಲು
ನೆಂಟರೆಲ್ಲ ಖರೆ, ಕಂಟಲೆ ಚೀಲಕ್ಕೆ ಕೈ ಹಾಕಬೇಡ
ಅಂಗೈ ಹುಣ್ಣಿಗೆ ಕನ್ನ ಡಿ ಯಾಕೆ
ಅಕ್ಕ ಸತ್ತರೆ ಅಮಾಸೆ ನಿಲ್ಲ ದು, ಅಣ್ಣ ಸತ್ತರೆ ಹುಣ್ಣಿಮೆ ನಿಲ್ಲ ದು
ಹುಣ್ಣಿಮೆ ಬರುವನಕ ಅಮಾಸೆ ನಿಲ್ಲ ದು, ಅಮಾಸೆ ಬರುವನಕ ಹುಣ್ಣಿಮೆ ನಿಲ್ಲ ದು
ಎತ್ತೂ ಕೋಣಕ್ಕೆ ಎರಡು ಕೋಡು, ನಮ್ಮ ಅಯ್ಯಂಗಾರ್ಗೆ ಮೂರು ಕೋಡು
ಹಗೆ ಮಾತು ಆತುಕೊಂಡ, ತುಟಿ ಬಿಚ್ಚ ದೆ ಕೂತುಕೊಂಡ
ಮಕ ನೋಡಿ ಮಾರು ಹೋದ, ಗುಣ ನೋಡಿ ದೂರ ಹೋದ
ಅಪ್ಪಂತೋನಿಗೆ ಇಪ್ಪ ತ್ತೊಂದು ಕಾಯಿಲೆ
ಅಟ್ಟಿಕ್ಕಿ ದೋಳಿಗಿನ್ನ ಬೊಟ್ಟಿಕ್ಕಿ ದೋಳು ಹೆಚ್ಚು
ಅಪ್ಪಂತೋನಿಗೆ ಇಪ್ಪ ತ್ತೊಂದು ಕಾಯಿಲೆ
ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ
ಪಾಪ ಅಂದ್ರೆ ಕರ್ಮ ಬರ್ತದೆ
ಅರಸು ಆದೀಕ (=ಆದಾಯ) ತಿಂದ, ಪರದಾನಿ ಹೂಸು ಕುಡಿದ
ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು
ಇಟ್ಟು ಕೊಂಡಾಕಿ ಇರೂತನ ಕಟ್ಟಿಕೊಂಡಾಕಿ ಕಡೀತನ
ಇತ್ತಿತ್ತ ಬಾ ಅಂದ್ರೆ ಇದ್ದ ಮನೇನೂ ಕಿತ್ತು ಕೊಂಡ
ಹರುವಯ್ಯ ನ ಎಲೆ ಇಂಬ, ಒಕ್ಕ ಲಿಗನ ಮನೆ ಇಂಬ
ಗವುಜಿ ಗದ್ದ ಲ ಏನೂ ಇಲ್ಲ , ಗೋವಿಂದ ಭಟ್ಟ ಬಾವೀಲಿ ಬಿದ್ದ
ಇದ್ದ ವರು ಇದ್ದ ಹಾಗೆ ಸಿದ್ಧಾ ದೇವಿಗೆ ಸಿಡಿಲು ಬಡೀತು
ಅಂದು ಬಾ ಅಂದ್ರೆ ಮಿಂದು ಬಂದ
ಹಣ ಇದ್ದೋರಿಗೆ ಏನೆಲ್ಲ , ಗುಣ ಇದ್ದೋರಿಗೆ ಏನಿಲ್ಲ
ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ
ಅಜ್ಜ ! ಮದುವೆ ಅಂದ್ರೆ ನನಗೋ ಅಂದ
ಅಕ್ಕ ನನ್ನ ವಳಾದ್ರೆ ಬಾವ ನನ್ನ ವನೇನು
ಅಕ್ಕ ನ ಹಗೆ ಬಾವನ ನೆಂಟು
ಅಕ್ಕ ರೆಯ ಅಕ್ಕ ಬಂದಾಗೇ ಸಕ್ಕ ರೆಯೆಲ್ಲ ಕಹಿ ಆಯ್ತು
ಅಕ್ಕ ಬರಬೇಕು ಅಕ್ಕಿ ಮುಗೀಬಾರದು
ನೀರೆ ನಿನ್ನ ಮಾತು ನಿಜವೇನೆ ನೀರ ಕಡಿದರೆ ಬೆಣ್ಣೆ ಬಂದಾದೇನೆ
ಅಕ್ಕಿ ಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ
ಅಕ್ಕಿ ಸರಿಯಾಗ ಬಾರದು ಅಕ್ಕ ನ ಮಕ್ಕ ಳು ಬಡವಾಗ ಬಾರದು
ಅಗಸನ ಬಡಿವಾರವೆಲ್ಲ ಹೆರರ ಬಟ್ಟೆ ಮೇಲೆ
ಅಗಸರ ಕತ್ತೆ ಕೊಂಡು ಹೋಗಿ, ಡೊಂಬರಿಗೆ ತ್ಯಾಗ ಹಾಕಿದ ಹಾಗೆ
ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ
ಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಗಂಡನ ಚಿಂತೆ, ಮೊಮ್ಮ ಗಳಿಗೆ ಕಜ್ಜಾ ಯದ ಚಿಂತೆ
ಅಜ್ಜಿ ಸಾಕಿದ ಮಗ ಬೊಜ್ಜ ಕ್ಕೂ ಬಾರದು
ಅಡವಿಯ ದೊಣ್ಣೆ ಪರದೇಸಿಯ ತಲೆ
ಗಿಡವಾಗಿ ಬಗ್ಗ ದ್ದು ಮರವಾಗಿ ಬಗ್ಗೀತೆ
ಅತಿ ಆಸೆ ಗತಿಗೇಡು
ಅತ್ಯಾಶ ಬಹುದುಃಖಾಯ ಅತಿ ಸರ್ವತ್ರ ವರ್ಜಯೇತ್
ಅತಿ ಸ್ನೇಹ ಗತಿ ಕೇಡು
ಅರ್ತಿಗೆ ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆ
ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ
ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು
ಅಬದ್ಧ ಕ್ಕೆ ಅಪ್ಪ ಣೆಯೇ ಅಂದ್ರೆ ಬಾಯಿಗೆ ಬಂದಷ್ಟು
ಅರಗಿನಂತೆ ತಾಯಿ, ಮರದಂತೆ ಮಕ್ಕ ಳು
ಅಮ್ಮ ನ ಮನಸ್ಸು ಬೆಲ್ಲ ದ ಹಾಗೆ, ಮಗಳ ಮನಸ್ಸು ಕಲ್ಲಿನ ಹಾಗೆ
ಅರಮನೆಯ ಮುಂದಿರಬೇಡ, ಕುದರೆಯ ಹಿಂದಿರಬೇಡ
ಅರಸನ ಕುದರೆ ಲಾಯದಲ್ಲೆ ಮುಪ್ಪಾಯಿತು
ಅರೆಪಾವಿನವರ ಅಬ್ಬ ರ ಬಹಳ
ಅಲ್ಪ ರ ಸಂಗ ಅಭಿಮಾನ ಭಂಗ
ಅಳಿವುದೇ ಕಾಯ ಉಳಿವುದೇ ಕೀರ್ತಿ
ಆವು ಕಪ್ಪಾದ್ರೆ ಹಾಲು ಕಪ್ಪೇನು
ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ
ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ
ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ
ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ
ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ
ಆಡೋದು ಮಡಿ ಉಂಬೋದು ಮೈಲಿಗೆ
ಓದೋದು ಕಾಶಿ ಖಂಡ, ತಿನ್ನೋದು ಮಶಿ ಕೆಂಡ
ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟ ಣ
ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು
ಆರು ಯತ್ನ ತನ್ನ ದು, ಏಳನೇದು ದೇವರಿಚ್ಛೆ
ಹಾಕೋದು ಬಿತ್ತೋದು ನನ್ನಿಚ್ಛೆ ; ಆಗೋದು ಹೋಗೋದು ದೇವರಿಚ್ಛೆ
ಆಲಸ್ಯಂ ಅಮೃತಂ ವಿಷಂ
ಆಲಸಿ-ಮುಂಡೇದ್ಕೆ ಎರಡು ಖರ್ಚು, ಲೋಭಿ-ಮುಂಡೇದ್ಕೆ ಮೂರು ಖರ್ಚು
ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು
ಆಸೆಗೆ ಕೊನೆಯಿಲ್ಲ
ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ
ಹೆತ್ತವರಿಗೆ ಅಂಬಲಿ ಬಿಡದಿದ್ದ ರೂ, ಹಂಬಲ ಬಿಡದಿದ್ದ ರೆ ಸಾಕು
ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ
ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ
ಸಾದೆತ್ತಿಗೆ ಎರಡು ಹೇರು (ಹೊರೆ)
ಹೆತ್ತವರು ಹೆಸರಿಕ್ಕ ಬೇಕು
ಓಡಿ ಹೋಗೊಳು ಮೊಸರಿಗೆ ಹೆಪ್ಪು ಹಾಕ್ತಾಳ
ಕಣ ಕಾಯಬಹುದು, ಹೆಣ ಕಾಯಾಕೆ (ಬೇಸರದಿಂದ ಹೊತ್ತು ಕಳೆಯಲಿಕ್ಕೆ) ಆಗೊದಿಲ್ಲ
ಕತೆ ಹೇಳೋಕೆ ಹ್ಞುಂ-ಗುಟ್ಟೋರಿರಬೇಕು, ನೆಟ್ಟ ಗೆ ಬಾಳೋಕೆ ಛೀ-ಗುಟ್ಟೋರಿರಬೇಕು
ಕಳ್ಳ ನ ಮನಸ್ಸು ಹುಳ್ಳ ಗೆ
ಸಂತೆ ಸೇರೋಕೆ ಮೊದಲು ಗಂಟು ಕಳ್ಳ ರು ಸೇರಿದರು
ಅಪ್ಪ ನ ಮನೇಲಿ ಸೈ ಅನ್ನಿಸಿಕೊಂಡೋಳು, ಅತ್ತೆ ಮನೇಲೂ ಸೈ ಅನ್ನಿಸಿಕೊಣ್ತಾಳೆ
ಅನ್ನ ಇಕ್ಕಿ ಸಾಕು ಅನ್ನಿಸ ಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ
ಹೆಂಡ್ರನ್ನ ಸಸಾರ (=ತಾತ್ಸಾರ) ಮಾಡಿದ್ರೆ ಸಂಸಾರ ನಿಸ್ಸಾರವಾಗ್ತದೆ
ಹಾಲಿಲ್ಲ ಬಟ್ಟ ಲಿಲ್ಲ ಗುಟುಕ್ ಅಂದ
ಕೊಡೋದು ಕೊಳ್ಳೋದು ಗಂಡಂದು, ಮಜ ಮಾಡೋದು ಹೆಂಡ್ರು ದ್ದು
ಅಂಕೆ ಇಲ್ಲ ದ ಚತುರೆ, ಲಗಾಮು ಇಲ್ಲ ದ ಕುದುರೆ
ಊರಿಗಾಗದ ಗೌಡ, ಮೇಲೆರಗುವ ಗಿಡುಗ
ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು
ಯೋಗ ಇದ್ದ ಷ್ಟೇ ಭೋಗ
ಹಾಕ್ಮ ಣೆ, ನೂಕ್ಮ ಣೆ, ಯಾಕ್ಮ ಣೆ
ತೇಗಿ ತೇಗಿ ಬೀಗಿ ಬಿದ್ದ
ತಾಮ್ರದ ನಾಣ್ಯ ತಾಯಿ ಮಕ್ಕ ಳನ್ನ ಕೆಡಿಸ್ತು
ಮುದ್ದು ಮುದ್ದು ತೊಗಲೆ ಬಿದ್ದು ಬಿದ್ದು ನಗಲೆ
ಹೌದಪ್ಪ ನ ಮನೇಲಿ ಹೌದಪ್ಪ , ಇಲ್ಲ ಪ್ಪ ನ ಮನೇಲಿ ಇಲ್ಲ ಪ್ಪ
ಹೋದ ಬದುಕಿಗೆ ಹನ್ನೆರಡು ದೇವರು
ಹೋದ್ರೆ ಒಂದು ಕಲ್ಲು , ಬಂದ್ರೆ ಒಂದು ಹಣ್ಣು
ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ
ಹೋದಾ ಪುಟ್ಟಾ, ಬಂದಾ ಪುಟ್ಟಾ, ಪುಟ್ಟ ನ ಕಾಲಿಗೆ ನೀರಿಲ್ಲ
ಇಕ್ಕ ಲಾರದ ಕೈ ಎಂಜಲು
ಇಕ್ಕು ವಳು ನಮ್ಮ ವಳಾದ್ರೆ ಕೊಟ್ಟಿಗೆಯಲ್ಲಾ ದರೂ ಉಣಲಕ್ಕು
ಇಕ್ಕೇರಿ ತನಕ ಬಳಗ, ಮಾನ ಮುಚ್ಚ ಲಿಕ್ಕೆ ಅರಿವೆ ಇಲ್ಲ
ಹೆಸರಿಗೆ ಹೊನ್ನ ಹೆಗ್ಗ ಡೆ, ಎಸರಿಗೆ ಅಕ್ಕಿ ಇಲ್ಲ
ಇಡೀ ಮುಳುಗಿದರೂ ಮೂಗು ಮೇಲೆ
ಇದ್ದ ಊರ ಸುದ್ದಿ ಇದ್ದ ಲ್ಲಿ ತೆಗೆಯ ಬಾರದು, ಬೇವೂರ ಸುದ್ದಿ ಹೋದಲ್ಲಿ ತೆಗೆಯ ಬಾರದು
ಇದ್ದ ದ್ದು ಹೇಳಿದರೆ ಹದ್ದಿನಂತ ಮೋರೆ ಆಯಿತು
ನಿಜ ಆಡಿದರೆ ನಿಷ್ಠೂ ರ
ಇದ್ದ ದ್ದು ಹೋಯಿತು ಮದ್ದಿನ ಗುಣದಿಂದ
ಇದ್ದ ಲ್ಲಿ ಗವುಡ ಹೋದಲ್ಲಿ ಕಿವುಡ
ತನ್ನೂ ರಲಿ ರಂಗ, ಪರೂರಲಿ ಮಂಗ
ಇಬ್ಬ ರ ನ್ಯಾಯ, ಮೂರನೇಯವನಿಗೆ ಆದಾಯ
ಇಲ್ಲ ದ ಬದುಕು ಮಾಡಿ ಇಲಿಗೆ ಚಣ್ಣ ಹೊಲಿಸಿದರು
ಇಲಿಯ ವ್ಯಾಜ್ಯ ಕ್ಕೆ ಬೆಕ್ಕು ಸಾಕ್ಷಿ
ಇಲಿ ಹೆಚ್ಚಿದವೆಂದು, ಮನೆಗೆ ಉರಿ ಇಡ ಬಾರದು
ಎಡದ ನೆತ್ತಿಗೆ ಬಡಿದರೆ ಬಲದ ನೆತ್ತಿಗೆ ತಾಕಿತು
ಯಾರದೋ ದುಡ್ಡು ; ಎಲ್ಲ ಮ್ಮ ನ ಜಾತ್ರೆ
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು
ಮದುವೆ ಮಡಿನೋಡು ಮನೆ ಕಟ್ಟಿ ನೋಡು
ಇಲಿಯಾಗಿ ನೂರುದಿನ ಬಾಳೋದಕ್ಕಿಂತ ಹುಲಿಯಾಗಿ ಮೂರು ದಿನ ಬಾಳೋದು ಲೇಸು
ಮಾತು ಬೆಳ್ಳಿ, ಮೌನ ಬಂಗಾರ
ಕೈ ಕೆಸರಾದ್ರೆ ಬಾಯಿ ಮೊಸರು
ಸಂಸಾರಿ ಸಾವಾಸ ಮಾಡಿ ಸನ್ಯಾಸಿ ಕೆಟ್ಟ
ಮಾತು ಮನೆ ಮುರೀತು, ತೂತು ಒಲೆ ಕೆಡಿಸ್ತು
ಕುಂತು ತಿಂದರೆ, ಕುಡಿಕೆ ಹೊನ್ನೂ ಸಾಲದು
ಮುತ್ತು ಒಡೆದರೆ ಹೋಯ್ತು , ಮಾತು ಆಡಿದರೆ ಹೋಯ್ತು
ತುಂಬಿದ ಕೊಡ, ತುಳುಕೋದಿಲ್ಲ
ಕಾಮಾಲೆ ಕಣ್ಣೊನಿಗೆ ಕಂಡಿದ್ದೆಲ್ಲ ಹಳದಿ ನೇ
ಮದುವೆಯಾಗೋ ಗುಂಡ ಅಂದ್ರೆ ನೀನೇ ನನ್ನ ಹೆಂಡ್ತಿ ಅಂದ
ಮಾಡೋದು ದುರಾಚಾರ, ಮನೆ ಮುಂದೆ ಬೃಂದಾವನ
ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ
ಮಾತು ಬಲ್ಲ ವನಿಗೆ ಜಗಳವಿಲ್ಲ , ಊಟ ಬಲ್ಲ ವನಿಗೆ ರೋಗವಿಲ್ಲ
ಮೂರ್ತಿ ಚಿಕ್ಕ ದಾದ್ರು ಕೀರ್ತಿ ದೊಡ್ಡ ದು
ಹಾಳೂರಿಗೆ ಉಳಿದವನೇ ಗೌಡ
ಹಿರೀಅಕ್ಕ ನ ಚಾಳಿ ಮನೆ ಮಕ್ಕ ಳಿಗೆಲ್ಲಾ
ಹೊಟ್ಟೆಗೆ ಹಿಟ್ಟಿಲ್ಲ ದಿದ್ದ ರೂ ಜುಟ್ಟಿಗೆ ಮಲ್ಲಿಗೆ ಹೂವು
ಜನ ಮರುಳೋ ಜಾತ್ರೆ ಮರುಳೋ
ಜಟ್ಟಿ ಬಿದ್ದ ರೂ ಮೀಸೆ ಮಣ್ಣಾಗಲಿಲ್ಲ
ಕಾರ್ಯವಾಸಿ ಕತ್ತೆ ಕಾಲು ಕಟ್ಟು
ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು
ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ
ಕೋಪದಲ್ಲಿ ಕುಯ್ದ ಮೂಗು ಶಾಂತಿಯಲ್ಲಿ ಬಂದೀತೇ
ಕೋತಿ ತಾನೂ ಕೆಡೋದಲ್ದೆ ವನಾನೂ ಕೆಡಿಸ್ತು
ಕೊಟ್ಟ ದ್ದು ತನಗೆ; ಬಚ್ಚಿಟ್ಟ ದ್ದು ಪರರಿಗೆ
ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಈರಭದ್ರ
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ
ಕುಂಬಾರಂಗೆ ವರುಷ; ದೊಣ್ಣೆಗೆ ನಿಮಿಷ
ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದರು
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
ಕೈಯಲ್ಲಿ ಶರಣಾರ್ಥಿ, ಕಂಕುಳಲ್ಲಿ ದೊಣ್ಣೆ
ನಾಯಿ ಬೊಗಳಿದರೆ ದೇವಲೋಕ ಹಾಳೇನು
ನಾಯಿ ಬಾಲ ಡೊಂಕು
ಓದಿ ಓದಿ ಮರುಳಾದ ಕೂಚು ಭಟ್ಟ
ಒಲ್ಲ ದ ಗಂಡನಿಗೆ ಮೊಸರಲ್ಲಿ ಕಲ್ಲು
ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು
ರಾಮೆಶ್ವ ರಕ್ಕೆ ಹೋದ್ರೂ ಶನೀಶ್ವ ರನ ಕಾಟ ತಪ್ಪ ಲಿಲ್ಲ
ಸಾವಿರ ಸುಳ್ಳು ಹೇಳಿ ಒಂಡು ಮಡುವೆ ಮಾಡು
ಬೇಲಿನೆ ಎದ್ದು ಹೊಲ ಮೇಯಿತಂತೆ
ಭಂಗಿ ದೇವರಿಗೆ ಹೆಂಡಗುಡುಕ ಪೂಜರಿ
ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ
ಎತ್ತು ಈಯಿತು ಅನ್ದ ರೆ ಕೊಟ್ಟಿಗೆಗೆ ಕಟ್ಟು ಎನ್ದ ರಂತೆ
ಗಂಡ ಹೆಂಡಿರ ಜಗಳ ಉನ್ಡು ಮಲಗೊ ತನಕ
ಹಿಡಿದ ಕೆಲಸ ಕೈ ಹತ್ತಲ್ಲ , ತಿಂದ ಅನ್ನ ಮೈ ಹತ್ತಲ್ಲ
ಮೇಲೆ ಬಿದ್ದು ಬಂದೋಳು ಮೂರು ಕಾಸಿಗೂ ಕಡೆ
ಮೂರೂ ಬಿಟ್ಟೋಳು ಊರಿಗೆ ದೊಡ್ಡೋಳು
ಕೋತಿಯಂಥೋನು ಕೆಣಕಿದ, ಮೂತಿಗೆ ಹೆಟ್ಟಿಸಿಕೊಂಡು ತಿಣಕಿದ
ಮುಳ್ಳಿನಿಂದ ಮುಳ್ಳು ತೆಗೆ, ಹಗೆಯಿಂದ ಹಗೆ ತೆಗೆ
ಆನೆಯಂಥದೂ ಮುಗ್ಗ ರಿಸ್ತದೆ
ಚರ್ಮ ಸುಕ್ಕಾದ್ರೆ ಮುಪ್ಪು , ಕರ್ಮ ಮುಕ್ಕಾದ್ರೆ ಮುಕ್ತಿ
ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲ ದೋರಿಗೆ ಮಿಡುಕಾಟ
ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ
ಕಟ್ಟಿದ ಕೆರೆಗೆ ಕೋಡಿ ತಪ್ಪ ಲ್ಲ , ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪ ಲ್ಲ
ದುಡ್ಡಿಗೆ ದುಡ್ಡು ಗಂಟು ಹಾಕಿದ್ಯೋ? ಬೆನ್ನಿಗೆ ಹೊಟ್ಟೆ ಅಂಟು ಹಾಕಿದ್ಯೋ?
ಬಿಮ್ಮ ಗಿದ್ದಾಗ ಹಮ್ಮು , ಬಿಮ್ಮು ತಪ್ಪಿದಾಗ ದಮ್ಮು
ಊರು ಬಾವಿಗೆ ಬಿದ್ದ ರೂ, ಊರ ಬಾಯಿಗೆ ಬೀಳಬಾರದು
ವಶಗೆಡದೆ ಹಸಗೆಡಲ್ಲ
ಯಜಮಾನಿಲ್ಲ ದ ಮನೆ ಮೇಟಿ ಇಲ್ಲ ದ ಕಣ ಎರಡೂ ಒಂದೆ
ಯಾರೂ ಇಲ್ಲ ದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ
ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ
ಯಾರೂ ಇಲ್ಲ ದ ಮನೆಗೆ ನಾನು ಜೋಗಪ್ಪ ಅಂದ
ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪ ದು
ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು
ಯುಕ್ತಿಯ ಮಾತು ಮಕ್ಕ ಳಿಂದಾದರೂ ತಿಳುಕೊ
ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮುದ್ದೆ ಉಣ್ತಾ ಮಜ್ಜಿಗೆ ಓಡಾಟ
ಯೋಗ್ಯ ತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ
ರಟ್ಟೆ ಮುರಿದು ರೊಟ್ಟಿ ತಿನ್ನು ಕಟ್ಟೆ ಹಾಕಿ ಅನ್ನ ಉಣ್ಣು
ರಸ ಬೆಳೆದು ಕಸ ತಿನ್ನ ಬೇಡ, ಹಸ ಕಟ್ಟಿ ಮೊಸರಿಗೆ ಪರದಾಡಬೇಡ
ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ
ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ
ರಾಗಿಕಲ್ಲು ತಿರುಗುವಾಗ ರಾಜ್ಯ ವೆಲ್ಲಾ ನೆಂಟರು
ರಾಜ ಇರೋತನಕ ರಾಣಿ ಭೋಗ
ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ
ರಾಮ ಅನ್ನೋ ಕಾಲದಲ್ಲಿ ರಾವಣ ಬುದ್ಧಿ
ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
ಲಕ್ಕಿ ಸೊಪ್ಪಾದರೂ ಲೆಕ್ಕ ದ ಮುದ್ದೆ ಉಣಬೇಕು
ಲಂಚ ಕೊಟ್ಟು ಮಂಚ ಏರು ವಂಚನೆ ಮಾಡಿ ಕೈಲಾಸ ಏರು
ಲಾಭವಿಲ್ಲ ದ ವ್ಯಾಪಾರ ಕತ್ತೆ ಮೈ ಪರಚಿದಂಗೆ
ಲಿಂಗ ಹರಿದ ಮೇಲೆ ಜಂಗಮನ ಹಂಗೇನು
ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು
ವಿನಾಶ ಕಾಲಕ್ಕೆ ವಿಪರೀತ ಬುದ್ಧಿ
ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ
ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ
ಶಿವಾ ಅರಿಯದ ಸಾವು ಇಲ್ಲ ಮನಾ ಅರಿಯದ ಪಾಪ ಇಲ್ಲ
ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ
ಶೆಟ್ಟಿ ಸುಂಗಾರ ಆಗೋದರೊಳಗೆ ಪಟ್ಟ ಣ ಹಾಳಾಯ್ತು
ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ ಅತ್ತೆ
ಸತ್ತ ಮೇಲಿನ ಸೊರ್ಗಕ್ಕಿಂತ ಇದ್ದ ನರಲೋಕ ವಾಸಿ
ಸತ್ತವರಿಗೆ ಸಂಗವಿಲ್ಲ ಕೆಟ್ಟ ವರಿಗೆ ನೆಂಟರಿಲ್ಲ
ಸತ್ತೋರ ಮಕ್ಕ ಳು ಇದ್ದೋರ ಕಾಲ್ದ ಸೀಲಿ
ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು
ಸಮಯಕ್ಕಾದವನೆ ನೆಂಟ ಕೆಲಸಕ್ಕಾದವನೆ ಬಂಟ
ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದ ರೂ ಲದ್ಧಿ
ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ
ಸವತಿ ಸಣ್ಣ ವಳಲ್ಲ ದಾಯಾದಿ ಚಿಕ್ಕ ವನಲ್ಲ
ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳ ರು
ಸಂತೇಲಿ ಮಂತ್ರ ಹೇಳಿದಂಗೆ
ಸಂದೀಲಿ ಸಮಾರಾಧನೆ ಮಾಡ್ದಂಗೆ
ಸಾಯ್ತಿನಿ ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆ
ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ
ಸಾಯೋ ಮುಂದೆ ಸಕ್ಕ ರೆ ತುಪ್ಪ ತಿನಿಸಿದರಂತೆ
ಸಾಲ ಅಂದ್ರೆ ಶೂಲ, ಕಾಲ ಅಂದ್ರೆ ಯಮ
ಸಾಲಗಾರನ ಮನೆಗೆ ಸವುದೆ ಹೊತ್ತರೆ ಮೇಲಣ ಬಡ್ಡಿಗೆ ಸಮವಾಯಿತು
ಸಾಲಗಾರ ಸುಮ್ಮ ನಿದ್ದ ರೂ ಸಾಕ್ಷಿದಾರ ಸುಮ್ಮ ನಿರ
ಸಾವಿರ ಕುದರೆ ಸರದಾರ ಮನೇ ಹೆಣ್ತಿಗೆ ಪಿಂಜಾರ
ಸಾವಿರ ಕೊಟ್ಟ ರೂ ಸವತಿ ಮನೆ ಬೇಡ
ಸಾವಿರ ಸಲ ಗೋವಿಂದ ಅಂದರು, ಒಬ್ಬ ದಾಸಯ್ಯ ನಿಗೆ ಭಿಕ್ಷೆ ನೀಡಲಿಲ್ಲ
ಸಾವಿರ ವರ್ಷ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದ
ಸುಳ್ಳು ದೇವರಿಗೆ ಕಳ್ಳ ಪೂಜಾರಿ
ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ
ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ
ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು
ಸೊಕ್ಕಿ ದ್ದು ಉಕ್ತದೆ ಉಕ್ಕಿ ದ್ದು ಒಲೆಗೆ ಹಾರ್ತದೆ
ಹಗಲು ಅರಸನ ಕಾಟ ಇರುಳು ದೆವ್ವ ದ ಕಾಟ
ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾ ಳದ ಶಾವಿಗೆ ಎಷ್ಟು ಕೊಟ್ಟೀಯ
ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ
ಹಗೆಯೋನ ಕೊಲ್ಲಾ ಕೆ ಹಗಲೇನು ಇರುಳೇನು
ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಗ್ಹಾಕೊಂಡ
ಹಣ ಅಂದ್ರೆ ಹೆಣವೂ ಬಾಯಿ ಬಿಡ್ತ ದೆ
ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತಿತ್ತು
ಹತ್ತು ಕಟ್ಟು ವಲ್ಲಿ ಒಂದು ಮುತ್ತು ಕಟ್ಟು
ಹತ್ತರೊಟ್ಟಿಗೆ ಹನ್ನೊಂದು ಜಾತ್ರೆಯೊಟ್ಟಿಗೆ ಗೋವಿಂದು
ಹತ್ತು ತಿಂಗಂಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ
ಹತ್ತು ಮಕ್ಕ ಳ ತಾಯಾದರೂ ಸತ್ತ ಮಗನ್ನ ಮರೆಯೊದಿಲ್ಲ
ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ
ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು
ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ
ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆ
ಹರೆಯಕ್ಕೆ ಬಂದಾಗ ಹಂದಿನೂ ಚಂದ
ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ
ಹಲ್ಲು ಬಿದ್ದ ಮುದುಕಿ ಎಲ್ಲಿ ಬಿದ್ದ ರೇನು
ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು
ಹಸಿದು ಹಲಸಿನ ಹಣ್ಣು ತಿನ್ನು ಉಂಡು ಮಾವಿನ ಹಣ್ಣು ತಿನ್ನು
ಹಳೆ ಮನೆಗೆ ಹೆಗ್ಗ ಣ ಸೇರಿಕೊಂಡಂಗೆ
ಹಂದಿ ತನ್ನ ಚಂದಕ್ಕೆ ವೃಂದಾವನ ಆಡ್ಕೊ ಣ್ತು
ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ
ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ
ಹಾಲಪ್ಪ ಅಂತ ಹೆಸರಿದ್ದ ರೂ ಮಜ್ಜಿಗೆಗೆ ಗತಿ ಇಲ್ಲ
ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು
ಹಾಲು ಕುಡಿದ ಮಕ್ಕ ಳೇ ಬದುಕಲಿಲ್ಲ ವಿಷ ಕುಡಿದ ಮಕ್ಕ ಳು ಬದುಕ್ಯಾರೆ
ಹಾಲು ಮಾರಿದ್ದು ಹಾಲಿಗೆ ನೀರು ಮಾರಿದ್ದು ನೀರಿಗೆ
ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ
ಹಾಳೂರಿಗೆ ಉಳಿದೋನೇ ಗೌಡ, ಬೆಂಗಳೂರಿಗೆ ಬಂದೋನೇ ಬಹದ್ದೂ ರ
ಹಿಟ್ಟು ಹಳಸಿತ್ತು ನಾಯೂ ಹಸಿದಿತ್ತು
ಹಿತವಿಲ್ಲ ದ ಗಂಡ ಹಿಂದಿದ್ದ ರೇನು ಮುಂದಿದ್ದ ರೇನು
ಹಿತ್ತಲ ಗಿಡ ಮದ್ದ ಲ್ಲ ಹತ್ತರ ಮಾತು ರುಚಿಯಲ್ಲ
ಹಿರಿಯಕ್ಕ ನ ಚಾಳಿ ಮನೆಮಕ್ಕ ಳಿಗೆಲ್ಲ
ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ
ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು
ಹುಟ್ಟು ಗುಣ ಸುಟ್ಟ ರೂ ಹೊಗೊದಿಲ್ಲ
ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪ ಲ್ಲ
ಹುತ್ತ ಬಡಿದರೆ ಹಾವು ಸಾಯುವುದೇ
ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ
ಹುಳ್ಳಿಕಾಳೂ ತಿನ್ನೊ ಮುಕ್ಕ ಒಬ್ಬ ಟ್ಟಿನ ಹೂರ್ಣ ಕೇಳಿದಂಗೆ
ಹೆಡ್ಡಾಳಾದ್ರೂ ದೊಡ್ಡಾಳು ಮೇಲು
ಹೆಣ್ಣು ಚಂದ ಕಣ್ಣು ಕುರುಡು ಅಂದಂಗೆ
ಹೆಣು ಮಕ್ಕ ಳು ಇದ್ದ ಮನೆ ಕನ್ನ ಡಿಯಂಗೆ
ಹೆತ್ತ ಅಮ್ಮ ನ್ನ ತಿನ್ನೋಳು ಅತ್ತೆಯಮ್ಮ ನ್ನ ಬಿಟ್ಟಾಳ
ಹೇಳೊದು ವೇದ ಹಾಕೊದು ಗಾಳ
ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು
ಗಾಳಿ ಬಂದಾಗ ತೂರಿಕೊ, ಧಾರಣೆ ಬಂದಾಗ ಮಾರಿಕೊ
ಹೊರೆ ಹೊತ್ತು ಕೊಂಡು ಗ್ರಹಗತಿ ಕೇಳ್ದಂದೆ
ಕಂಗಾಲಾದರೂ ಹಂಗಾಳಾಗಬಾರದು
ಕೊಣನಿಗೆ ಕೊಸೆಯೋ ಸಂಕಟ, ಎಮ್ಮೆಗೆ ಈಯೋ ಸಂಕಟ
ನಿಯತ್ತಿಲ್ಲ ದೋರಿಗೆ ಬರಕತ್ತಿಲ್ಲ
ನಾಯಿಗೆ ಕೆಲಸಿಲ್ಲ , ನಿಲ್ಲೋಕೆ ಹೊತ್ತಿಲ್ಲ
ನಡತೆ ಕಲಿಯೋದು ಏರುಬಂಡೆ ನಡತೆ ಕೆಡೋದು ಜಾರುಬಂಡೆ
ಎಂಟು ವರ್ಷಕ್ಕೆ ನನ್ನ ಮಗ ದಂಟಾದ
ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ
ದಾಯವಾಗಿ(=ದಾನವಾಗಿ) ಸಿಕ್ಕಿ ದರೆ, ನನಗೆ ಒಂದಿರಲಿ ನಮ್ಮ ಪ್ಪ ನಿಗೆ ಒಂದಿರಲಿ
ಮುಲಾಜಿಗೆ ಬಸುರಾಗಿ ಹೇರೋಕೆ ತಾವಿಲ್ಲ
ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ , ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು
ತೇದು ಇಕ್ಕಿ ದೋಳಿಗಿಂತ ಸಾದು ಇಕ್ಕಿ ದೋಳು ಹೆಚ್ಚು
ಬಾಯ್ ತೆವಲು ತೀರಿಸಿಕೊಳ್ಳೋಕೆ ಎಲೆ ಅಡಿಕೆ ಬೇಕು, ಮೈ ತೆವಲು ತೀರಿಸಿಕೊಳ್ಳೋಕೆ ಒಡಂಬಡಿಕೆ ಬೇಕು
ತೂತು ಗತ್ತಲೇಲಿ ತಾತನ ಮದುವೆ
ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು
ತಾಳ ತಪ್ಪಿದ ಬಾಳು, ತಾಳಲಾರದ ಗೋಳು
ಅವರವರ ತಲೆಗೆ ಅವರವರದೇ ಕೈ
ಡಂಬು (=ಬೂಟಾಟಿಕೆ) ನನ್ನ ಕೇಳು, ಡಬ್ಬು ನನ್ನ ಹೆಂಡ್ರನ್ನ ಕೇಳು
ಉಂಡ ಮನೆ ಜಂತೆ ಎಣಿಸಬಾರದು
ಬೆಳ್ಳ ಯ್ಯ ಕಾಕಾ ಅರಿವಯ್ಯ ಮೂಕ
ಕ್ರಮ ಕಾಣದ ನಾಯಿ ಕಪಾಳೆ ನೆಕ್ತು
ಸೊಪ್ಪು ಸೆದೆ ತಿನ್ನೋರ ಒಪ್ಪ ನೋಡು, ತುಪ್ಪ ತೊಗೆ ತಿನ್ನೋರ ರಂಪ ನೋಡು
ಎಲ್ಲ ರ ಹಲ್ಲೊಳಗೆ ನುರಿದು ಹೋಗೋದಕ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ
ಹಣ ಎರವಲು ತಂದು ಮಣ ಉರುವಲು ಕೊಂಡ
ಸಮಯಕ್ಕಿ ಲ್ಲ ದ ನೆರವು ಸಾವಿರ ಇದ್ದ ರೂ ಎರವು (ಅನ್ಯ )
ಉಂಡದ್ದು ಊಟ ಆಗಲಿಲ್ಲ , ಕೊಂಡದ್ದು ಕೂಟ ಆಗಲಿಲ್ಲ
ಉಪ್ಪಿಕ್ಕಿ ದವರನ್ನು ಮುಪ್ಪಿನ ತನಕ ನೆನೆ
ಎಂಥೆಂಥ ದೇವರಿಗೇ ಅಂತರಾಟ ಆಗಿರುವಾಗ ಕಾಲ್ಮು ರುಕ ದೇವರಿಗೆ ಕೈಲಾಸವೇ
ಹೊಳೆಗೆ ಸುರಿದರೂ ಅಳೆದು ಸುರಿ
ಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದ
ಉಂಬಾಗ ಉಡುವಾಗ ಊರೆಲ್ಲ ನೆಂಟರು
ಉಂಬೋಕೆ ಉಡೋಕೆ ಅಣ್ಣ ಪ್ಪ ಕೆಲಸಕ್ಕ ಷ್ಟೇ ಇಲ್ಲ ಪ್ಪ
ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ
ಉಡೋಕೆ ಇಲ್ಲ ದವ ಮೈಲಿಗೆಗೆ ಹೇಸ, ಉಂಬೋಕೆ ಇಲ್ಲ ದವ ಎಂಜಲಿಗೆ ಹೇಸ
ಉತ್ತಮನು ಎತ್ತ ಹೋದರೂ ಶುಭವೇ
ಉತ್ತಮ ಹೊಲ ಮಧ್ಯ ಮ ವ್ಯಾಪಾರ ಕನಿಷ್ಠ ಚಾಕರಿ
ಕೃಷಿತೋನಾಸ್ತಿ ದುರ್ಭಿಕ್ಷಂ
ಉದ್ಯೋಗವೇ ಗಂಡಸಿಗೆ ಲಕ್ಷಣ
ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ
ಊರು ದೂರಾಯಿತು ಕಾಡು ಹತ್ತರಾಯಿತು
ಊರೆಲ್ಲ ಸೂರೆ ಆದ ಮೇಲೆ ಬಾಗಿಲ ಮುಚ್ಚಿದರು
ಎಡವಿದ ಕಾಲು ಎಡವುದು ಹೆಚ್ಚು
ಎರಡು ದಾಸರ ನಂಬಿ ಕುರುಡು ದಾಸ ಕೆಟ್ಟ
ಎರಡೂ ಕೈ ತಟ್ಟಿದರೆ ಸದ್ದು
ಎಲ್ಲ ರೂ ಪಾಲಕೀಲಿ ಕೂತರೆ ಹೊರೋರು ಯಾರು
ಎಲ್ಲಾ ಬಣ್ಣ ಮಸಿ ನುಂಗಿತು
ಏರಿದವ ಇಳಿದಾನು
ಏಳರಲ್ಲಿ ಬರಲೋ? ಎಪ್ಪ ತ್ತರಲ್ಲಿ ಬರಲೋ?
ಒಂದು ಕಣ್ಣೀಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ
ಕಂಡದ್ದು ಕಾಣೆ ಉತ್ತಮ ಕಂಡದ್ದು ಕಂಡೆ ಮಧ್ಯ ಮ, ಕಾಣದ್ದು ಕಂಡೆ ಅಧಮ
ಒಕ್ಕ ಣ್ಣ ರ ನಾಡಿಗೆ ಹೋದ್ರೆ ಒಂದು ಕಣ್ಣು ಮುಚ್ಚಿ ನಡೆಯಬೇಕು
ಒಂಡಂಬಡಿಕೆ ಇಂದ ಆಗದು ದಡಂಬಡಿಕೆ ಇಂದ ಆದೀತೇ
ನಯಶಾಲಿ ಆದವನು ಜಯಶಾಲಿ ಆದಾನು
ಒಂದು ಹೊತ್ತು ಉಂಡವ ಯೋಗಿ ಎರಡು ಹೊತ್ತು ಉಂಡವ ಭೋಗಿ ಮೂರು ಹೊತ್ತು ಉಂಡವ ರೋಗಿ ನಾಲ್ಕು ಹೊತ್ತು ಉಂಡವ
ಎತ್ತು ಕೊಂಡು ಹೋಗಿ
ಒಲ್ಲ ದ ಗಂಡಗೆ ಬೆಣ್ಣೇಲಿ ಕಲ್ಲು
ಬಾಯಲ್ಲಿ ಬೆಲ್ಲ ಕರುಳು ಕತ್ತರಿ
ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ
ಕಂಡವರ ಮಕ್ಕ ಳನ್ನು ಬಾವಿಯಲ್ಲಿ ದೂಡಿ ಆಳ ನೋಡಿದ ಹಾಗೆ
ಬೀದೀ ಕೂಸು ಬೆಳೀತು ಕೋಣೇ ಕೂಸು ಕೊಳೀತು
ಕಚ್ಚು ವ ನಾಯಿ ಬೊಗಳದು ಬೊಗಳುವ ನಾಯಿ ಕಚ್ಚ ದು
ಕಡು ಕೋಪ ಬಂದಾಗ ತಡಕೊಂಡವನೇ ಜಾಣ
ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು
ಕಪ್ಪ ರ ತಿಪ್ಪೇಲಿಟ್ಟ ರೆ ತನ್ನ ವಾಸನೆ ಬಿಟ್ಟೀತೇ
ಕಬ್ಬು ಡೊಂಕಾದ್ರೆ ಸವಿ ಡೊಂಕೇ
ಕಲ್ಲು ಇದ್ದಾಗ ನಾಯಿ ಇಲ್ಲ ನಾಯಿ ಇದ್ದಾಗ ಕಲ್ಲು ಇಲ್ಲ
ಕಳ್ಳ ನ ಹೆಜ್ಜೆ ಕಳ್ಳ ನೇ ಬಲ್ಲ
ಹಣ ಇಲ್ಲ ದವ ಹೆಣಕ್ಕಿಂತ ಕಡೆ
ಕಿಡಿಯಿಂದ ಕಾಡ ಸುಡ ಬಹುದು
ಕೀರ್ತಿಯೇ ಕೈಲಾಸ ಅಪಕೀರ್ತಿಯೇ ನರಕ
ಕೀಲು ಸಣ್ಣ ದಾದರೂ ಗಾಲಿ ನಡೆಸುತ್ತದೆ
ಕುರುಡು ಕಣ್ಣಿಗಿಂತ ಮೆಳ್ಳೆ ಗಣ್ಣು ವಾಸಿ
ಕೂತು ಉಣ್ಣೋನಿಗೆ ಕುಡಿಕೆ ಹೊನ್ನು ಸಾಲದು
ಕೆಡುವ ಕಾಲಕ್ಕೆ ಬುದ್ಧಿ ಇಲ್ಲ ಮರಣ ಕಾಲಕ್ಕೆ ಮದ್ದಿಲ್ಲ
ಕೈಗೆ ಬಂದ ತುತ್ತು ಬಾಯಿಗೆ ಇಲ್ಲ
ಕೊಡಲಿ ಕಾವು ಕುಲಕ್ಕೆ ಸಾವು
ಬಿದ್ದ ರೂ ಮೀಸೆ ಮಣ್ಣಾಗಲಿಲ್ಲ
ಅಡಿಗೆ ಬಿದ್ಫ ರೂ ಮೀಸೆ ಮೇಲೆ
ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ
ಬಂಟರ ಅಬ್ಬ ರ ಸೇವಿನ ಗೊಬ್ಬ ರ
ಊರಿಗೆ ಬಂದ ನೀರೆ ನೀರಿಗೆ ಬಾರದಿರುತ್ತಾಳೆಯೇ?
ಸರಿಸುಮಾರಾಗಿ ಸಮಾನಾರ್ಥಕ ಗಾದೆಗಳು
ಧರ್ಮಕ್ಕೆ ದಟ್ಟಿ ಕೊಟ್ಟ ರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರು
ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು
ಆಕಳು ದಾನಕ್ಕೆ ಕೊಟ್ರೆ, ಹಲ್ಲು ಹಿಡಿದು ನೊಡಿದ್ರಂತೆ.
ಮಳೆ ಹುಯ್ದ ರೆ ಕೇಡಲ್ಲ ; ಮಗ ಉಂಡರೆ ಕೇಡಲ್ಲ
ಮಘೆ ಮಳೆ ಬಂದಷ್ಟೂ ಒಳ್ಳೇದು, ಮನೆ ಮಗ ಉಂಡಷ್ಟೂ ಒಳ್ಳೇದು
ಓದಿ ಓದಿ ಮರುಳಾದ ಕೂಚು ಭಟ್ಟ ; ಓದದೆ ಅನ್ನ ಕೊಟ್ಟ ನಮ್ಮ ರೈತ
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು
ಕಾಸಿಗೆ ತಕ್ಕ ಕಜ್ಜಾ ಯ.
ಕಂತೆಗೆ ತಕ್ಕ ಬೊಂತೆ
ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ
ಅಗ್ಗ ದ ಮಾಲು;ಮುಗ್ಗಿದ ಜೋಳ
ಹರಯದಲ್ಲಿ ಹಂದಿ ಕೂಡ ಚೆನ್ನಾಗಿರುತ್ತೆ.
ಹೆತ್ತೋರ್ಗೆ ಹೆಗ್ಗ ಣ ಮುದ್ದು , ಕಟ್ಗೊಂಡೋರ್ಗೆ ಕೋಡಂಗಿ ಮುದ್ದು .
ಪಾಪಿ ಸಮುದ್ರ ಹೊಕ್ಕ ರೂ ಮೊಳಕಾಲುದ್ದ ನೀರು
ರಾಮೇಶ್ವ ರಕ್ಕೆ ಹೋದರೂ ಶನೇಶ್ವ ರನ ಕಾಟ ತಪ್ಪ ಲಿಲ್ಲ
ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೇ ಮೇಲೆ ಬಿತ್ತು
ಊರು ಸುಟ್ಟ ರೂ ಹನುಮಂತರಾಯ ಹೊರಗೆ
ನಮಾಜು ಮಾಡಲು ಹೋಗಿ ಮಸೀದಿ ಕೆಡವಿಕೊಂಡ ಹಾಗೆ
ಮಾಡಿದ್ದು ಣ್ಣೋ ಮಹರಾಯ
ಉಪ್ಪು ತಿಂದವನು ನೀರು ಕುಡಿಯಲೇ ಬೇಕು
ತಾ ಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯ ಮ, ಆಳು ಮಾಡಿದ್ದು ಹಾಳು
ಅಟ್ಟ ಮೇಲೆ ಒಲೆ ಉರಿಯಿತು, ಕೆಟ್ಟ ಮೇಲೆ ಬುದ್ಧಿ ಬಂತು
ಊರು ಸೂರೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರಂತೆ
ಹಾವು ಸಾಯಬಾರದು , ಕೋಲು ಮುರೀಬಾರದು
ಅಕ್ಕಿ ಮೇಲೆ ಆಸೆ, ನೆಂಟರ ಮೆಲೆ ಪ್ರೀತಿ
ಬಲ್ಲ ವನೇ ಬಲ್ಲ ಬೆಲ್ಲ ದ ರುಚಿಯ
ಕತ್ತೆಗೇನು ಗೊತ್ತು ಕಸ್ತೂ ರಿ ವಾಸನೆ
ತೋಟ ಶೃಂಗಾರ, ಒಳಗೆ ಗೋಣಿ ಸೊಪ್ಪು
ಹೊರಗೆ ಥಳುಕು, ಒಳಗೆ ಹುಳುಕು
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕಂಡನಂತೆ
ಕಳ್ಳ ನ ಮನಸ್ಸು ಹುಳ್ಳ ಹುಳ್ಳ ಗೆ
ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೆ ? ಆಕಳು ಕಪ್ಪಾದರೂ ಹಾಲು ಕಪ್ಪೆ ?
ಕಬ್ಬು ಡೊಂಕಾದರೆ ಸಿಹಿ ಡೊಂಕೆ ?
ಕೋಣನ ಮುಂದೆ ಕಿನ್ನ ರಿ ಬಾರಿಸಿದಂತೆ
ಗೋರ್ಕಲ್ಲ ಮೇಲೆ ಮಳೆಗರೆದಂತೆ
ಸುಂಕದವನ ಮುಂದೆ ಸುಖದುಃಖವೇ
ರೊಟ್ಟಿ ಜಾರಿ ತುಪ್ಪ ಕ್ಕೆ ಬಿದ್ದಂತೆ
ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ರು ಹೇಳಿದ್ದು ಹಾಲು ಅನ್ನ
ಕುರುಡರ ರಾಜ್ಯ ದಲ್ಲಿ ಒಕ್ಕ ಣ್ಣ ನೇ ರಾಜ
ಊರಿಗೆಲ್ಲಾ ಒಬ್ಬ ಳೇ ಪದ್ಮಾವತಿ
ಹಾಳೂರಿಗೆ ಉಳಿದವನೇ ಗೌಡ
ಅಳಿದೂರಿಗೆ ಉಳಿದವನೇ ಗೌಡ
ತನ್ನ ಓಣೀಲಿ ನಾಯಿಯೇ ಸಿಂಹ
ಯಾರದೋ ದುಡ್ಡು ; ಎಲ್ಲ ಮ್ಮ ನ ಜಾತ್ರೆ
ಗಾಳಿ ಬಂದಾಗ ತೂರಿಕೋ
ಹುಚ್ಚು ಮುಂಡೆ ಮದುವೇಲಿ ಉಂಡವನೇ ಜಾಣ
ಕೊಟ್ಟ ವನು ಕೋಡಂಗಿ; ಇಸ್ಕೊಂಡೋನು ಈರಭದ್ರ
ಕಾಸಿದ್ರೆ ಕೈಲಾಸ
ದುಡ್ಡೇ ದೊಡ್ಡ ಪ್ಪ ,ಬುದ್ಧಿ ಅದರಪ್ಪ
ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ
ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ
ಪುರಾಣ ಹೇಳೊಕೆ; ಬದನೆಕಾಯಿ ತಿನ್ನೋಕೆ
ಹೇಳೋದು ಶಾಸ್ತ್ರ, ಹಾಕೋದು ಗಾಣ
ಹೇಳೋದು ಶಾಸ್ತ್ರ,ತಿನ್ನೋದು ಬದನೆಕಾಯಿ
ನೂರು ಜನಿವಾರ ಒಟ್ಟಿಗಿರಬಹುದು; ಮೂರು ಜಡೆ ಒಟ್ಟಿಗಿರುವುದಿಲ್ಲ
ಹೆಣ್ಣಿಗೆ ಹೆಣ್ಣೇ ವೈರಿ
ಗಾಯದ ಮೇಲೆ ಬರೆ ಎಳೆದಂತೆ
ಹುಣ್ಣಿನ ಮೇಲೆ ಉಪ್ಪು ಸವರಿದಂತೆ
ಅತಿ ಆಸೆ ಗತಿ ಕೇಡು
ವಿನಾಶ ಕಾಲೇ ವಿಪರೀತ ಬುದ್ಧಿ
ಆಸೆಯೇ ದು:ಖಕ್ಕೆ ಮೂಲ
ಅತಿಯಾದರೆ ಅಮೃತವೂ ವಿಷ
ಓಲೆ ಆಸೆಗೆ ಬೆಕ್ಕು ಮೂಗುತಿ ಕಳಕೊಂಡಿತು
ಅತಿ ಸ್ನೇಹ ಗತಿ ಕೆಡಿಸಿತು
ಹೊಳೆಯಲ್ಲಿ ಹುಣಿಸೇ ಹಣ್ಣು ಕಿವಿಚಿದಂತೆ
ನೀರಿನಲ್ಲಿ ಹೋಮ ಮಾಡಿದಂತೆ
ಅಟ್ಟ ದ ಮೇಲಿಂದ ಬಿದ್ದ ವನಿಗೆ ದಡಿಗೆ ತಗೊಂಡು ಹೇರಿದರಂತೆ
ತೋಳ ಬಿದ್ದ ರೆ ಆಳಿಗೊಂದು ಕಲ್ಲು
ಮೆತ್ತಗಿದ್ದ ಲ್ಲಿ ಮತ್ತೊಂದು ಗುದ್ದ ಲಿ
ನಿಸ್ಸ ಹಾಯಕರ ಮೇಲೆ ಹುಲ್ಲು ಕಡ್ಡಿ ಸಹ ಭುಸುಗುಡುತ್ತದೆ
ಮೆತ್ತಗಿದ್ದ ವರನ್ನು ಮೊಣಕೈಯಲ್ಲಿ ಗುದ್ದಿದರು
ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡರಂತೆ
ಅಂಗೈ ತೋರಿಸಿ ಅವಲಕ್ಷಣ ಅಂತ ಅನ್ನಿಸಿಕೊಂಡರಂತೆ
ಇರಲಾರದೆ ಇರುವೆ ಬಿಟ್ಟು ಕೊಂಡು ಕಿರುಗೂರಿಗೆ ಹೋದರಂತೆ ಕಣಿ ಕೇಳುವುದಕ್ಕೆ
ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊಂಡಂತೆ
ಬೀದೀಲಿ ಹೋಗೋ ಮಾರೀನ ಮನೆ ಹೊಕ್ಕು ಹೋಗು ಅಂದಂತಾಯ್ತು
ಕೊಚ್ಚೆ ಮೇಲೆ ಕಲ್ಲು ಹಾಕಿದಂತೆ
ಸಲಿಗೆ ಕೊಟ್ಟ ಸೊಣಗ ಸಟ್ಟು ಗ ನೆಕ್ಕಿ ತಂತೆ
ಇತ್ತತ್ತ ಬಾ ಅಂದ್ರೆ ಇದ್ದ ಮನೆ ಕಿತ್ಕೊಂಡರು
ಅಯ್ಯೋ ಪಾಪ ಅಂದ್ರೆ ಅರ್ಧ ಆಯುಸ್ಸು
ಬಡವನ ಸಿಟ್ಟು ದವಡೆಗೆ ಮೂಲ
ಬಡವನ ಕೋಪ ದವಡೆಗೆ ಮೂಲ
ಬಡವ ನೀ ಮಡಗಿದ ಹಾಗಿರು
ಕುದಿಯುವ ಎಣ್ಣೆಯಿಂದ ಕಾದ ತವದ ಮೇಲೆ ಬಿದ್ದ ಹಾಗೆ
ಬಾಣಲೆಯಿಂದ ಬೆಂಕಿಗೆ
ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರಂತೆ
ಬೇಲಿಯೇ ಎದ್ದು ಹೊಲ ಮೇಯ್ದಂತೆ
ಕಾಡಿಗೆ ಹೋಗೋ ವಯಸ್ಸಿನಲ್ಲಿ ಬ್ರಾಹ್ಮ ಣ ಓಂ ಕಲಿತ
ನನ್ನ ಮಗ ಎಂಟು ವರ್ಷಕ್ಕೆ ದಂಟು ಎಂದ
ಬೆಳೆಯುವ ಪೈರು ಮೊಳಕೆಯಲ್ಲಿ
ಮೂರು ವರ್ಷಕ್ಕೆ ಬಂದಿದ್ದು ಮೂವತ್ತು ವರ್ಷಕ್ಕೆ ಬಂತು
ಯಥಾ ರಾಜಾ ತಥಾ ಪ್ರಜಾ
ನೂಲಿನಂತೆ ಸೀರೆ; ತಾಯಿಯಂತೆ ಮಗಳು
ಸಂಕಟ ಬಂದಾಗ ವೆಂಕಟರಮಣ
ಕಾರ್ಯವಾಸಿ ಕತ್ತೆ ಕಾಲು ಕಟ್ಟು
ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ?
ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ
ಆಕಾಶ ನೋಡೊದಕ್ಕೆ ನೂಕುನುಗ್ಗ ಲೆ ?
ಅಂಗೈ ಹುಣ್ಣಿಗೆ ಕನ್ನ ಡಿ ಬೇಕೆ?
ಪ್ರತ್ಯ ಕ್ಷ ಕಂಡರೂ ಪ್ರಮಾಣಿಸಿ ನೋಡು
ಬೆಳ್ಳ ಗಿರೋದೆಲ್ಲ ಹಾಲಲ್ಲ
ಅಲ್ಪ ರ ಸಂಗ ಅಭಿಮಾನ ಭಂಗ
ಸಗಣಿಯವನೊಡನೆ ಸ್ನೇಹಕ್ಕಿಂತ ಗಂಧದವನ ಜೊತೆ ಗುದ್ದಾಟ ಮೇಲು
ಸಗಣಿಯವನ ಸರಸಕ್ಕಿಂತ, ಗಂಧದವನ ಗುದ್ದಾಟ ಮೇಲು
ಅಲ್ಪ ವಿದ್ಯಾ ಮಹಾಗರ್ವಿ
ಅಂಬಲಿ ಕುಡಿಯುವವನಿಗೆ, ಮೀಸೆ ಹಿಡಿಯುವವನೊಬ್ಬ
ಗಂಜಿ ಕುಡಿಯೋನಿಗೆ,ಮೀಸೆ ಹಿಡಿಯುವವನೊಬ್ಬ
ತುಂಬಿದ ಕೊಡ ತುಳುಕುವುದಿಲ್ಲ
ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೆ ?
ನರಿ ಕೂಗು ಗಿರಿ ಮುಟ್ಟು ತ್ತದೆಯೆ ?
ಕೈ ಕೆಸರಾದರೆ ಬಾಯಿ ಮೊಸರು
ದುಡಿಮೆಯೇ ದುಡ್ಡಿನ ತಾಯಿ
ಕಾಯಕವೇ ಕೈಲಾಸ
ಆಳಾಗಬಲ್ಲ ವನು ಅರಸಾಗಬಲ್ಲ
ಕಷ್ಟ ಪಟ್ಟ ರೆ ಫಲವುಂಟು
ದುಡಿಮೆಯೇ ದೇವರು
ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ
ಗಿಣಿ ಸಾಕಿ ಗಿಡುಗದ ಕೈಗೆ ಕೊಟ್ಟ ರು
ಚಿತ್ತಾರದ ಅಂದವನ್ನು ಮಸಿ ನುಂಗಿತು
ಸಾವಿರ ಚಿತ್ತಾರ ಮಸಿ ನುಂಗಿತು
ಕದ ತಿನ್ನೋವನಿಗೆ ಹಪ್ಪ ಳ ಈಡಲ್ಲ
ರಾವಣಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ
ಸಮುದ್ರ ದಾಟಿದವನಿಗೆ ಹಸುವಿನ ಹೆಜ್ಜೆ ದೊಡ್ಡ ದೆ
ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು
ಮಾತು ಬೆಳ್ಳಿ; ಮೌನ ಬಂಗಾರ
ಮಾತು ಮನೆ ಕೆಡಿಸಿತು; ತೂತು ಒಲೆ ಕೆಡಿಸಿತು
ಊಟ ಬಲ್ಲ ವನಿಗೆ ರೋಗವಿಲ್ಲ , ಮಾತು ಬಲ್ಲ ವನಿಗೆ ಜಗಳವಿಲ್ಲ
ಒಂದು ಹೊತ್ತು ತಿನ್ನೋವ್ನು ಯೋಗಿ, ಎರಡು ಹೊತ್ತು ತಿನ್ನೋವ್ನು ಭೋಗಿ, ಮೂರು ಹೊತ್ತು ತಿನ್ನೋವ್ನು ರೋಗಿ, ನಾಕು ಹೊತ್ತು
ತಿನ್ನೋವ್ನ ಎತ್ಕೊಂಡು ಹೋಗಿ
ಹೊತ್ತಿಗಿಲ್ಲ ದ ಗಾದೆ, ಊಟಕ್ಕಿ ಲ್ಲ ದ ಉಪ್ಪಿನಕಾಯಿಯಂತೆ.
ಆದ ಕೆಲಸಕ್ಕೆ ಅತ್ತೆಗಳು ಬಂದಂತೆ
ಊಟಕ್ಕಿ ಲ್ಲ ದ ಉಪ್ಪಿನಕಾಯಿ ..ಕ್ಕೆ ಸಮಾನ
ಹಲ್ಲಿದ್ದಾಗ ಕಡ್ಲೆ ಇಲ್ಲ ; ಕಡ್ಲೆ ಇದ್ದಾಗ ಹಲ್ಲಿಲ್ಲ
ಚೆಲ್ಲಿದ ಹಾಲಿಗೆ ಅತ್ತು ಪ್ರಯೋಜನವಿಲ್ಲ
ಬಂದ ದಾರಿಗೆ ಸುಂಕವಿಲ್ಲ
ತಾಯಿಗಿಂತ ಬಂಧುವಿಲ್ಲ ; ಉಪ್ಪಿಗಿಂತ ರುಚಿಯಿಲ್ಲ
ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲು ದು
ಕಣ್ಣ ರಿಯದಿದ್ದ ರೂ ಕರುಳರಿಯುತ್ತದೆ
ಬೆರಳು ತೋರಿಸಿದರೆ ಹಸ್ತ ನುಂಗಿದರಂತೆ
ಉಸ್ ಎಂದರೆ ಉಸಳಿ ಬೇಡಿದ್ದ ನಂತೆ
ಮನೆ ತುಂಬ ಮುತ್ತಿದ್ದ ರೆ ...ಗೂ ಪೋಣಿಸಿಕೊಂಡರಂತೆ
ಮುತ್ತು ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೋ ತೊಟ್ರಂತೆ.
ಗಂಧ ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೂ ಬಳಿದುಕೊಂಡರಂತೆ
ಅತ್ತ ದರಿ; ಇತ್ತ ಪುಲಿ
ಬಿಸಿ ತುಪ್ಪ ; ನುಂಗೋದಕ್ಕೂ ಆಗೊಲ್ಲ ; ಉಗುಳೋದಕ್ಕೂ ಆಗೊಲ್ಲ
ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ
ಮನೇಗೆ ಬೆಂಕಿ ಬಿದ್ದಾಗ ಭಾವಿ ತೋಡಕ್ಕೆ ಶುರು ಮಾಡಿದರಂತೆ
ಸಂತೆ ಹೊತ್ತಿಗೆ ಮೂರು ಮೊಳ ನೇದ ಹಾಗೆ
ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಅಂದರಂತೆ
ಆತುರಗಾರನಿಗೆ ಬುದ್ಧಿ ಮಟ್ಟ
ಹೊಟ್ಟೆಗೆ ಹಿಟ್ಟಿಲ್ಲ ದಿದ್ದ ರೂ ಜುಟ್ಟಿಗೆ ಮಲ್ಲಿಗೆ ಹೂವು
ತನಗೇ ಜಾಗವಿಲ್ಲ ; ಕೊರಳಲ್ಲಿ ಡೋಲು ಬೇರೆ
ಉಣ್ಣೋಕಿಲ್ಲ ದಿದ್ದ ರೂ ಸಣ್ಣ ಕ್ಕಿ ಅನ್ನ ತಿಂದರು ; ಉಡೋಕಿಲ್ಲ ದಿದ್ದ ರೂ ಪಟ್ಟೆ ಸೀರೆ ಉಟ್ಟ ರು
ನದೀನೇ ನೋಡದೆ ಇರೋನು ಸಮುದ್ರ ವರ್ಣನೆ ಮಾಡಿದ ಹಾಗೆ
ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ
ಅಲ್ಪ ನಿಗೆ ಐಶ್ವ ರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದನಂತೆ
ಸಣ್ಣ ವರ ನೆರಳು ಉದ್ದ ವಾದಾಗ ಸೂರ್ಯನಿಗೂ ಮುಳುಗುವ ಕಾಲ
ಮಂತ್ರಕ್ಕಿಂತ ಉಗುಳೇ ಜಾಸ್ತಿ
ಮೂಗಿಗಿಂತ ಮೂಗುತಿ ಭಾರ
ಇಬ್ಬ ರ ಜಗಳ ಮೂರನೆಯವನಿಗೆ ಲಾಭ
ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು.
ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು (ರಾಘವಾಂಕ)
ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು
ಏತಿ ಅಂದರೆ ಪ್ರೇತಿ ಅಂದಂತೆ
ಓದುವಾಗ ಓದು; ಆಡುವಾಗ ಆಡು
ಓದಿ ಬರೆಯೋ ಕಾಲದಲ್ಲಿ ಆಡಿ ಮಣ್ಣು ಹುಯ್ಕೊಂಡರು
ಕೈಯ್ಯ ಲ್ಲೆ ಬೆಣ್ಣೆ ಇಟ್ಟು ಕೊಂಡು,ತುಪ್ಪ ಕ್ಕೆ ಊರೆಲ್ಲ ಅಲೆದರಂತೆ
ಕಂಕುಳಲ್ಲಿ ಮಗು ಇಟ್ಟು ಕೊಂಡು ಊರೆಲ್ಲ ಹುಡುಕಿದರಂತೆ
ಊರಿಗೆ ಉಪಕಾರಿ, ಮನೆಗೆ ಮಾರಿ
ಮನೆಗೆ ಮಾರಿ, ಪರರಿಗೆ ಉಪಕಾರಿ
ತಮ್ಮ ನೇಲಿ ಹೆಗ್ಗ ಣ ಸತ್ತು ಬಿದ್ದಿದ್ದ ರೂ ಬೇರೇ ಮನೇ ಸತ್ತ ನೊಣದ ಕಡೆಗೆ ಬೆಟ್ಟು ಮಾಡಿದರು
ತನ್ನ ಎಲೇಲಿ ಕತ್ತೆ ಸತ್ತು ಬಿದ್ದಿದ್ರೆ , ಪಕ್ಕ ದ ಎಲೇಲಿ ನೊಣ ಹೊಡೆಯಕ್ಕೆ ಹೋದ
ಕೋತಿಗೆ ಹೆಂಡ ಕುಡಿಸಿದಂತೆ
ಮಂಗನ ಕೈಗೆ ಮಾಣಿಕ್ಯ ಕೊಟ್ಟ ಹಾಗೆ
ಹೆಂಡ ಕುಡಿದ ಕಪಿಗೆ ಚೇಳು ಕಡಿದ ಹಾಗೆ
ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು
ಅಮ್ಮ ನವರು ಪಟ್ಟ ಕ್ಕೆ ಬಂದಾಗ,ಅಯ್ಯ ನವರು ಚಟ್ಟ ಕ್ಕೇರಿದರು
ಕೆಲಸವಿಲ್ಲ ದ ಬಡಗಿ ಮಗುವಿನ ... ಕೆತ್ತಿದ
ಕೆಲಸವಿಲ್ಲ ದ ಕುಂಬಾರ ಮಕ್ಕ ಳ ಅಂ.. ತಟ್ಟಿದ
ಕೆಲಸವಿಲ್ಲ ದ ಆಚಾರಿ ಮಗನ ತಲೆ ಕೆತ್ತಿದನಂತೆ
ಆರಕ್ಕೆ ಹೆಚ್ಚಿಲ್ಲ ; ಮೂರಕ್ಕೆ ಕಡಿಮೆಯಿಲ್ಲ
ಆರಕ್ಕೇರಲ್ಲ , ಮೂರಕ್ಕಿ ಳಿಯಲ್ಲ
ಕಳ್ಳ ನ ಹೆಂಡತಿ ಎಂದಿದ್ದ ರೂ ...ಯೆ
ಕಳ್ಳ ನ ಹೆಂಡತಿ ಎಂದಿದ್ದ ರೂ ಮುಂ..
ಶರಣರ ಬದುಕನ್ನು ಅವರ ಮರಣದಲ್ಲಿ ನೋಡು
ಅಯ್ಯಾ ಎಂದರೆ ಸ್ವ ರ್ಗ; ಎಲವೋ ಎಂದರೆ ನರಕ
ಸಜ್ಜ ನರ ಸಂಗ ಹೆಜ್ಜೇನು ಸವಿದಂತೆ
ಈಸಿ ನೋಡು , ಇದ್ದು ಜೈಸಿ ನೋಡು
ಹೂವಿನ ಜೊತೆ ದಾರ ಮುಡಿಯೇರಿತು
ಹೂವಿನಿಂದ ನಾರಿಗೂ ಸ್ವ ರ್ಗ
ಗೆದ್ದೆತ್ತಿನ ಬಾಲ ಹಿಡಿದ ಹಾಗೆ
ಆರು ದೋಸೆ ಕೊಟ್ರೆ ಅತ್ತೆ ಕಡೆ, ಮೂರು ದೋಸೆ ಕೊಟ್ರೆ ಸೊಸೆ ಕಡೆ
ಆರು ದೋಸೆ ಕೊಟ್ರೆ ಅತ್ತೆ ಕಡೇ,ಮೂರು ದೋಸೆ ಕೊಟ್ರೆ ಮಾವನ ಕಡೆ
ನಾಯಿ ಬಾಲ ಡೊಂಕು
ನಾಯಿ ಬಾಲಕ್ಕೆ ದೆಬ್ಬೆ ಕಟ್ಟಿದ ಹಾಗೆ
ಜಟ್ಟಿ ಜಾರಿ ಬಿದ್ದ ರೂ ಮೀಸೆ ಮಣ್ಣಾಗಲಿಲ್ಲ
ಜಟ್ಟಿ ಜಾರಿದರೆ ಅದೂ ಒಂದು ಪಟ್ಟು
ಮುದಿ ... ಮಹಾ ಪತಿವ್ರತೆ (ವೃದ್ಧ ನಾರೀ ಪತಿವ್ರತಾ)
ಸೂಳೆ ಮುಪ್ಪಾಗಿ ಗೊರವಿತ್ತಿಯಾದಳು
ಕಂಕುಳಲ್ಲಿ ದೊಣ್ಣೆ; ಕೈಯಲ್ಲಿ ಶರಣಾರ್ಥಿ
ಬಾಯಲ್ಲಿ ಬೆಣ್ಣೆ;ಬಗಲಲ್ಲಿ ದೊಣ್ಣೆ.
ಕೂರೆಗೆ ಹೆದರಿ ಸಂತೆಯಲ್ಲಿ ಸೀರೆ ಬಿಚ್ಚಿದರಂತೆ
ಕೂರೆಗೆ ಹೆದರಿ ಸೀರೆ ಬಿಚ್ಚೆ ಸೆದರು
ಕಾಸು ಕೊಟ್ಟು ಬ್ರಹ್ಮೇತಿ ತಗೊಂಡರು
ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡ ಹಾಗೆ
ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ
ಹೆಂಗಸರ ಬುದ್ಧಿ ಸೊಂಟದಿಂದ ಕೆಳಗೆ
ಹಾಡ್ತಾ ಹಾಡ್ತಾ ರಾಗ; ಉಗುಳ್ತಾ ಉಗುಳ್ತಾ ರೋಗ
ಹಾಡ್ತಾ ಹಾಡ್ತಾ ರಾಗ , ನರಳ್ತಾ ನರಳ್ತಾ ರೋಗ
ಹೊಸ ವೈದ್ಯ ನಿಗಿಂತ ಹಳೆ ರೋಗಿಯೇ ಮೇಲು
ಹೊಸ ಡಾಕ್ಟ ರ್‌ಗಿಂತ ಹಳೇ ಕಾಂಪೌಂಡರ್ ವಾಸಿ
ಉರಿಯೋ ಗಾಯಕ್ಕೆ ಉಪ್ಪು ಸವರಿದಂತೆ
ಕುರು ಮೇಲೆ ಬರೆ ಎಳೆದ ಹಾಗೆ
ಸಮುದ್ರದ ನೆಂಟಸ್ತನ ; ಉಪ್ಪಿಗೆ ಬಡತನ
ಸಮುದ್ರದ ಮದ್ಯೆ ಇದ್ದ ರೂ ಉಪ್ಪಿಗೆ ಬರವಂತೆ
ಇತರೆ
ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿದ್ರು
ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪ ಲಿ ಏಟು
ಉಪ್ಪು ತಿಂದ ಮನೆಗೆ ಎರಡು ಬಗೆಯ ಬಂದ
ಅಡಿಕೆ ಕದ್ದ ಮಾನ ಆನೆ ಕೊಟ್ರೂ ಬರೊಲ್ಲ
ಅಲ್ಲುಂಟೆ, ಇಲ್ಲುಂಟೆ, ಕಲ್ಲ ಲ್ಲುಂಟೆ, ಶಿವದಾನ.
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು.
(ಅವರು) ಚಾಪೆ ಕೆಳಗೆ ತೂರಿದರೆ (ನೀನು) ರಂಗೋಲಿ ಕೆಳಗೆ ತೂರು.
ವೇದ ಸುಳ್ಳಾದ್ರು ಗಾದೆ ಸುಳ್ಳ ಲ್ಲ .
ಬೆಂಕಿ ಇಲ್ಲ ದೆ ಹೊಗೆ ಏಳಲ್ಲ
ಹಿತ್ತಲ ಗಿಡ ಮದ್ದ ಲ್ಲ
ಇರುಳು ಕಂಡ ಭಾವೀಲಿ ಹಗಲು ಬಿದ್ದ ರು
ಒಲಿದರೆ ನಾರಿ ಮುನಿದರೆ ಮಾರಿ
ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಬಂಧ ಅಂದ್ರಂತೆ
ಕಳ್ಳ ನ್ನ ನಂಬಿದ್ರೂ ಕುಳ್ಳ ನ್ನ ನಂಬಬಾರದು
ಮೋಟಾಳಿಗೊಂದು ಚೋಟಾಳು
ಮಳ್ಳೀ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದ್ರೆ, ಮೂರು ಮತ್ತೊಂದು ಅಂದ್ಲಂತೆ
ಹಾಲಿನಲ್ಲಿ ಹುಳಿ ಹಿಂಡಿದಂತೆ
ಕೂತು ತಿನ್ನು ವವನಿಗೆ ಕುಡಿಕೆ ಹಣ ಸಾಲದು
ದೇವರು ವರ ಕೊಟ್ಟ ರೂ ಪೂಜಾರಿ ವರ ಕೊಡ
ಚಂಡಾಲ ದೇವರಿಗೆ ಚಪ್ಪ ಲಿ ಸೇವೆ
ಹೆಂಡ ಕುಡಿಯುವ ದೇವರಿಗೆ ಹೇ.. ತಿನ್ನು ವ ಪೂಜಾರಿ
ಹನುಮಂತರಾಯ ಹಗ್ಗ ತಿನ್ನು ವಾಗ ಪೂಜಾರಿ ಶಾವಿಗೆ ಬೇಡಿದನಂತೆ
ಬಡವರ ಮನೆ ಊಟ ಚೆನ್ನ , ದೊಡ್ಡ ವರ ಮನೆ ನೋಟ ಚೆನ್ನ
ಎತ್ತಿಗೆ ಜ್ವ ರ ಬಂದ್ರೆ, ಎಮ್ಮೆಗೆ ಬರೆ ಎಳೆದರಂತೆ
ಶಂಖದಿಂದ ಬಿದ್ದ ರೆ ತೀರ್ಥ
ಈಚಲ ಮರದ ಕೆಲಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ
ಬಾಯಿ ಬಿಟ್ಟ ರೆ ಬಣ್ಣ ಗೇಡು
ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು
ಅಜ್ಜಿಗೆ ಅರಿವೆ ಚಿಂತೆ ಮೊಮ್ಮ ಗಳಿಗೆ ಮಿಂ..ನ ಚಿಂತೆ
ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ
ಊರಿಗೆ ಬಂದವಳು ನೀರಿಗೆ ಬಾರದೇ ಇರುವಳೇ?
ಶಿವಪೂಜೇಲಿ ಕರಡಿ/ಕರಡಿಗೆ ಬಿಟ್ಟ ಹಾಗೆ
ಇದ್ದ ದ್ದು ಇದ್ದ ಹಾಗೆ ಹೇಳಿದ್ರೆ, ಎದ್ದು ಬಂದು ಎದೆಗೆ ಒದ್ದ ನಂತೆ
ಒಕ್ಕ ಣ್ಣ ನ ರಾಜ್ಯ ದಲ್ಲಿ ಒಂದು ಕಣ್ಣು ಮುಚ್ಚಿಕೊಂಡು ನಡಿ
ಅಡುಗೆ ಮಾಡಿದವಳಿಗಿಂತ ಬಡಿಸಿದವಳೇ ಮೇಲು
ಒಲ್ಲ ದ ಗಂಡನಿಗೆ ಮೊಸರಲ್ಲಿ ಕಲ್ಲು
ಸೀರೆ ಗಂಟು ಬಿಚ್ಚೋವಾಗ ದಾರದ ನಂಟು ಯಾರಿಗೆ ಬೇಕು?
ಕುಡಿಯೋ ನೀರಿನಲ್ಲಿ ಬೆರಳಾಡಿಸೋ ಬುದ್ಧಿ (ಕುಡಿಯೋ ನೀರಿನಲ್ಲಿ ... ಅದ್ದು ವ ಬುದ್ಧಿ)
ಮೀಸೆ ಬಂದಾಗ ದೇಶ ಕಾಣದು ಮೊ.. ಬಂದಾಗ ನೆಲ ಕಾಣದು
ಅನುಕೂಲ ಸಿಂಧು; ಅಭಾವ ವೈರಾಗ್ಯ
ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೊಲ್ಲ
ಎಲ್ಲಾ ರ ಮನೇ ದೋಸೇನೂ ತೂತು
ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ
ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ
ಮಾಡಿದೋರ ಪಾಪ ಆಡಿದೋರ ಬಾಯಲ್ಲಿ
ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತೆ
ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಅಂದಂತೆ
ಹೌದಪ್ಪ ನ ಚಾವಡಿಯಲ್ಲಿ ಅಲ್ಲ ಪ್ಪ ನನ್ನು ಕೇಳುವವರಾರು ?
ಹೊಳೆ ನೀರಿಗೆ ದೊಣೆನಾಯ್ಕ ನ ಅಪ್ಪ ಣೆ ಏಕೆ ?
ರಂಗನ ಮುಂದೆ ಸಿಂಗನೆ ? ಸಿಂಗನ ಮುಂದೆ ಮಂಗನೆ ?
ಜಾಣನಿಗೆ ಮಾತಿನ ಪೆಟ್ಟು ; ದಡ್ಡ ನಿಗೆ ದೊಣ್ಣೆಯ ಪೆಟ್ಟು
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು
ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ
ಬಿರಿಯಾ ಉಂಡ ಬ್ರಾಹ್ಮ ಣ ಭಿಕ್ಷೆ ಬೇಡಿದ
ತೋಳ ಹಳ್ಳ ಕ್ಕೆ ಬಿದ್ದ ರೆ ಆಳಿಗೊಂದು ಕಲ್ಲು
ಅಂಕೆ ಇಲ್ಲ ದ ಕಪಿ ಲಂಕೆ ಸುಟ್ಟಿತು
ಬೆಟ್ಟ ಅಗೆದು ಇಲಿ ಹಿಡಿದಂತೆ
ಇಲಿ ಬಂತು ಎಂದರೆ ಹುಲಿ ಬಂತು ಎಂದರು
ಇಡಿಯ ಮುಳುಗಿದವನಿಗೆ ಚಳಿಯೇನು?ಮಳೆಯೇನು?
ಬೆಕ್ಕಿ ಗೆ ಚೆಲ್ಲಾ ಟ: ಇಲಿಗೆ ಪ್ರಾಣಸಂಕಟ
ಕೋಣೆಯ ಕೂಸು ಕೊಳೆಯಿತು; ಓಣಿಯ ಕೂಸು ಬೆಳೆಯಿತು
ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ
ಸತ್ಯ ಕ್ಕೆ ಸಾವಿಲ್ಲ ; ಸುಳ್ಳಿಗೆ ಸುಖವಿಲ್ಲ
ದೇವಸ್ಥಾನದಲ್ಲಿ ಊದಿನ ಕಡ್ಡಿ ಹಚ್ಚ ದಿದ್ದ ರೂ ಚಿಂತೆಯಿಲ್ಲ ; ... ಬಿಡಬೇಡ
ಚಿಂತೆ ಇಲ್ಲ ದವನಿಗೆ ಸಂತೆಯಲ್ಲೂ ನಿದ್ದೆ ಬಂತು
ಸಂಸಾರ ಗುಟ್ಟು ; ವ್ಯಾಧಿ ರಟ್ಟು
ಮದುವೇಲಿ ಗಂಡು, ಸ್ಮ ಶಾನ ಯಾತ್ರೇಲಿ ಹೆಣವಾಗೋ ಬಯಕೆ
ಐದು ಬೆರಳೂ ಒಂದೇ ಸಮ ಇರೋಲ್ಲ
ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುತ್ತದೆಯೆ ?
ಮುಖ ನೋಡಿ ಮಣೆ ಹಾಕು
ದೀಪದ ಕೆಳಗೆ ಯಾವತ್ತೂ ಕತ್ತಲೇ
ಕುರಿ ಕೊಬ್ಬಿದಷ್ಟೂ ಕುರುಬನಿಗೇ ಲಾಭ
ತಮ್ಮ ಕೋಳಿ ಕೂಗಿದ್ದ ರಿಂದಲೇ ಬೆಳಗಾಯಿತು ಎಂದುಕೊಂಡರು
ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೆ ?
ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ
ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ
ಸಾವಿರ ಕುದುರೆ ಸರದಾರ, ಮನೆ ಹೆಂಡತಿ ಕಾಸ್ತಾರ
ಆಪತ್ತಿಗಾದವನೇ ನೆಂಟ
ಶಂಖದಿಂದ ಬಂದರೇ ತೀರ್ಥ
ಹನಿಹನಿಗೂಡಿದರೆ ಹಳ್ಳ ; ತೆನೆತೆನೆಗೂಡಿದರೆ ಬಳ್ಳ
ಎಲ್ಲಾ ಜಾಣ; ತುಸ ಕೋಣ
ಕಟ್ಟಿಕೊಂಡವಳು ಕಡೇ ತನಕ; ಇಟ್ಟು ಕೊಂಡವಳು ಇರೋ ತನಕ
ಕೆಟ್ಟ ಕಾಲ ಬಂದಾಗ ಕಟ್ಟಿಕೊಂಡವಳೂ ಕೆಟ್ಟ ವಳು
ನವಿಲನ್ನು ನೋಡಿ ಕೆಂಬೂತ ಪುಕ್ಕ ಕೆದರಿತಂತೆ
ಅಂತೂ ಇಂತೂ ಕುಂತಿ ಮಕ್ಕ ಳಿಗೆ ರಾಜ್ಯ ವಿಲ್ಲ
ಅಂಕೆಯಲ್ಲಿದ್ದ ಹೆಣ್ಣು , ಮಜ್ಜಿಗೆಯಲ್ಲಿದ್ದ ಬೆಣ್ಣೆ ಕೆಡೊಲ್ಲ
ಇದ್ದೋರು ಮೂರು ಜನರಲ್ಲಿ ಕದ್ದೋರು ಯಾರು ?
ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ
ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ
ಹೆದರುವವರ ಮೇಲೆ ಕಪ್ಪೆ ಎಸೆದಂತೆ
ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂದರಂತೆ
ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲು ತ್ತದೆಯೆ ?
ಅಕ್ಕ ಸಾಲಿ ಅಕ್ಕ ನ ಚಿನ್ನಾನೂ ಬಿಡ
ಅರವತ್ತಕ್ಕೆ ಅರಳು ಮರಳು
ಜನ ಮರುಳೋ ಜಾತ್ರೆ ಮರುಳೋ
ಕುಂಟನಿಗೆ ಎಂಟು ಚೇಷ್ಟೆ, ಕುರುಡನಿಗೆ ನಾನಾಚೇಷ್ಟೆ
ಬೊಗಳುವ ನಾಯಿ ಕಚ್ಚು ವುದಿಲ್ಲ
ಕೈಗೆಟುಕದ ದ್ರಾಕ್ಷಿ ಹುಳಿ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದರು
ದುಷ್ಟ ರಿಂದ ದೂರವಿರು
ಒಂದು ಕಣ್ಣಿಗೆ ಬೆಣ್ಣೆ; ಮತ್ತೊಂದು ಕಣ್ಣಿಗೆ ಸುಣ್ಣ
ಕಂಡೋರ ಮಕ್ಕ ಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ
ದೂರದ ಬೆಟ್ಟ ಕಣ್ಣಿಗೆ ನುಣ್ಣ ಗೆ
ಹಂಗಿನ ಅರಮನೆಗಿಂತಾ ಗುಡಿಸಿಲೇ ಮೇಲು
ಮುಸುಕಿನೊಳಗೆ ಗುದ್ದಿಸಿಕೊಂಡಂತೆ
ಕದ್ದು ತಿಂದ ಹಣ್ಣು , ಪಕ್ಕ ದ ಮನೆ ಊಟ ಎಂದೂ ಹೆಚ್ಚು ರುಚಿ
ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು ?
ಹಳೆ ಚಪ್ಪ ಲಿ, ಹೊಸಾ ಹೆಂಡತಿ ಕಚ್ಚೊ ಲ್ಲ
ರವಿ ಕಾಣದ್ದ ನ್ನು ಕವಿ ಕಂಡ
ಕೆಟ್ಟು ಪಟ್ಟ ಣ ಸೇರು
ಗಿಡವಾಗಿ ಬಗ್ಗ ದ್ದು ಮರವಾಗಿ ಬಗ್ಗೀತೆ ?
ಕಾಲಿನದು ಕಾಲಿಗೆ; ತಲೆಯದು ತಲೆಗೆ
ವಿದ್ಯೆ ಇಲ್ಲ ದವನು ಹದ್ದಿಗಿಂತಲೂ ಕಡೆ
ಕನ್ನ ಡಿ ಒಳಗಿನ ಗಂಟು ಕೈಗೆ ದಕ್ಕೀತೆ ?
ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ
ಗಣೇಶನನ್ನು ಮಾಡಲು ಹೋಗಿ ಅವರ ಅಪ್ಪ ನನ್ನು ಮಾಡಿದಂತೆ
ಮಾಡಬಾರದ್ದು ಮಾಡಿದರೆ ಆಗಬಾರದ್ದೇ ಆಗುತ್ತೆ
ನರಿಗೆ ಹೇಳಿದರೆ ನರಿ ತನ್ನ ಬಾಲಕ್ಕೆ ಹೇಳಿತಂತೆ
ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ
ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೆ ?
ಕೊಟ್ಟಿದ್ದು ತನಗೆ; ಬಚ್ಚಿಟ್ಟ ದ್ದು ಪರರಿಗೆ
ಮದುವೆಯಾಗೋ ಗುಂಡ ಅಂದರೆ ನೀನೇ ನನ್ನ ಹೆಂಡತಿಯಾಗು ಅಂದ ಹಾಗೆ
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
ತಾನೂ ತಿನ್ನ ; ಪರರಿಗೂ ಕೊಡ
ಗಂಡಸಿಗೇಕೆ ಗೌರಿ ದು:ಖ ?
ನಗುವ ಹೆಂಗಸು, ಅಳುವ ಗಂಡಸು ಇಬ್ಬ ರನ್ನೂ ನಂಬಬಾರದು
ಗುಡ್ಡ ಕಡಿದು ಹಳ್ಳ ತುಂಬಿಸಿ ನೆಲ ಸಮ ಮಾಡಿದ ಹಾಗೆ
ಹನುಮಂತನೇ ಹಗ್ಗ ತಿನ್ನು ವಾಗ ಪೂಜಾರಿಗೆ ಶ್ಯಾವಿಗೆ ಬೇಕಂತೆ
ರತ್ನ ತಗೊಂಡು ಹೋಗಿ ಗಾಜಿನ ತುಂಡಿಗೆ ಹೋಲಿಸಿದರು
ಗಾಜಿನ ಮನೇಲಿರೋವ್ರು ಅಕ್ಕ ಪಕ್ಕ ದ ಮನೇ ಮೇಲೆ ಕಲ್ಲೆಸೆಯಬಾರದು
ಉಂಡೂ ಹೋದ; ಕೊಂಡೂ ಹೋದ
ಎಲೆ ಎತ್ತೋ ಜಾಣ ಅಂದರೆ ಉಂಡೋರೆಷ್ಟು ಮಂದಿ ಅಂದನಂತೆ
ಕೋತಿ ತಾನು ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿತಂತೆ
ಹಾಡಿದ್ದೇ ಹಾಡಿದ ಕಿಸಬಾಯಿ ದಾಸ
ಹಸಿ ಗೋಡೆ ಮೇಲೆ ಹರಳು ಎಸೆದಂತೆ
ಊರು ಹೋಗು ಅನ್ನು ತ್ತೆ; ಕಾಡು ಬಾ ಅನ್ನು ತ್ತೆ
ಕಾಮಾಲೆ ಕಣ್ಣಿನವನಿಗೆ ಲೋಕವೆಲ್ಲಾ ಹಳದಿಯಂತೆ
ಕಳೆದುಕೊಂಡ ವಸ್ತು ವನ್ನು ಕಳೆದುಹೋದ ಜಾಗದಲ್ಲೇ ಹುಡುಕು
ಲಂಘನಮ್ ಪರಮೌಷಧಮ್
ಹಾಲು ಕುಡಿದ ಮಕ್ಕ ಳೇ ಬದುಕೊಲ್ಲ ; ಇನ್ನು ವಿಷ ಕುಡಿದ ಮಕ್ಕ ಳು ಬದುಕುತ್ತವೇ ?
ಗಾಳಿ ಗುದ್ದಿ ಮೈ ಕೈ ನೋಯಿಸಿಕೊಂಡಂತೆ
ತಲೆ ಗಟ್ಟಿ ಇದೆ ಅಂತ ಕಲ್ಲಿಗೆ ಹಾಯಬಾರದು
ಹಳೇ ಗಂಡನ ಪಾದವೇ ಗತಿ
ಹಬ್ಬ ದ ದಿನವೂ ಹಳೇ ಗಂಡನೇ ?
ಕಳ್ಳ ನಿಗೊಂದು ಪಿಳ್ಳೆ ನೆವ
ಅಳೋ ... ಮೇಲೆ ಗಳು ಬಿತ್ತು
ಸನ್ಯಾಸಿ ಬೆಕ್ಕು ಸಾಕಿದ ಹಾಗೆ
ತನ್ನ ಬೆನ್ನು ತಾನೇ ತಟ್ಟಿಕೊಂಡ ಹಾಗೆ
ಪಕ್ಕ ದ ಮನೇಗೆ ಬಿದ್ದ ಬೆಂಕಿ ಬಿಸಿ ತನ್ನ ಮನೇಗೆ ಬೀಳೋವರೆಗೂ ತಾಕಲ್ಲ
ಹುಚ್ಚು ಮನಸಿಗೆ ಹತ್ತು ಹಲವು ಮುಖಗಳು
ಶೆಟ್ಟಿ ಶೃಂಗಾರ ಆಗೋದ್ರಲ್ಲಿ ಪಟ್ಣ ಕೆಡ್ತು
ಅತ್ತೂ ಕರೆದೂ ಔತಣ ಮಾಡಿಸಿಕೊಂಡಂತೆ
ಕರೆಯದವರ ಮನೆಗೆ ಕಳಸಗಿತ್ತಿಯಾಗು
ಹಂಚಿದವರಿಗೆ ಹಲ್ಲು ಬಾಯಿ
ಕುಣೀಲಾರದ ಸೂಳೆ ನೆಲ ಡೊಂಕು ಅಂದ್ಳಂತೆ
ಬಿಡಿಯಕ್ಕೆ ಬಸಿರಾದರೆ ಹಡೆಯೋದು ಕಷ್ಟ
ದಾಕ್ಷಿಣ್ಯ ಕ್ಕೆ ಬಸಿರಾಗೋದು
ಪ್ರಥಮ ಚುಂಬನೇ ದಂತ ಭಗ್ನ ಮ್
ಹೊಸದರಲ್ಲಿ ಅಗಸ ಗೋಣಿಯನ್ನು ಎತ್ತಿ ಎತ್ತಿ ಒಗೆದನಂತೆ
ಕೋತಿ ತಾನು ಕೆಡೋದಲ್ದೆ ವನ ಎಲ್ಲ ಕೆಡಿಸಿತಂತೆ
ಕೈಲಾಗದೋನು ಮೈ ಪರಚಿಕೊಂಡ
ಕಜ್ಜಿ ಹೋದರೂ ಕಡಿತ ಹೋಗಲಿಲ್ಲ
ಆನೆ ದಾನ ಮಾಡಿದವನು ಸರಪಣಿಗೆ ಜಗಳಾಡುವನೆ ?
ಎತ್ತು ಹೊರಬಲ್ಲ ಭಾರವನ್ನು ಕರು ಹೊರಬಲ್ಲು ದೆ ?
ದೊಡ್ಡ ವರು ಹೇಳಿದ ಹಾಗೆ ಮಾಡು; ಮಾಡಿದ ಹಾಗೆ ಮಾಡಬೇಡ
ಏತಿ ಅಂದರೆ ಪ್ರೇತಿ
ದಂಡಿಗೆ ಹೆದರಲಿಲ್ಲ , ದಾಳಿಗೆ ಹೆದರಲಿಲ್ಲ , ಇನ್ನು ನಿನ್ನ ಗಳಗಂಟೆಗೆ
ಶುಭ ನುಡಿಯೋ ಸೋಮ ಅಂದರೆ ಗೂಬೆ ಕಾಣ್ತಲ್ಲೋ ಮಾಮ ಅಂದ ಹಾಗೆ
ಹಲವು ಸಲ ಸಾಯುವವನು ಹೇಡಿ,ವೀರಯೋಧನಿಗೊಂದೇ ಸಲ ಸಾವು
ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲ ವೇ ?
ಮುಟ್ಟಿದೋರ ಮೇಲೆ ಬಿಟ್ಟೆ ನನ್ನ ಪ್ರಾಣ
ಮಾಡೋರನ್ನು ಕಂಡರೆ ನೋಡು ನನ್ನ ಸಿರೀನ
ಮೊಲ ಎಬ್ಬಿಸಿ ...ಕ್ಕೆ ಕೂತರು
ಹುಟ್ತಾ ಹುಟ್ತಾ ಅಣ್ಣ ತಮ್ಮಂದಿರು; ಬೆಳೀತಾ ಬೆಳೀತಾ ದಾಯಾದಿಗಳು
ಮಗೂನ ಚಿವುಟೋದು, ತೊಟ್ಟಿಲು ತೂಗೋದು
ತಾನು ಮಾಡುವುದು ಉತ್ತಮ; ಮಗ ಮಾಡುವುದು ಮಧ್ಯ ಮ; ಆಳು ಮಾಡುವುದು ಹಾಳು
ವೈದ್ಯ ರ ಹತ್ತಿರ, ವಕೀಲರ ಹತ್ತಿರ ಸುಳ್ಳು ಹೇಳಬೇಡ
ಆನೆಗೆ ಚಡ್ಡಿ ಹೊಲಿಸಿದ ಹಾಗೆ
ಕಪ್ಪೆ ತಕ್ಕ ಡೀಲಿ ಹಾಕಿದ ಹಾಗೆ
ಮೂರ್ತಿ ಚಿಕ್ಕ ದಾದರೂ ಕೀರ್ತಿ ದೊಡ್ಡ ದು
ಕೋತಿ ಕಜ್ಜಾ ಯ ಹಂಚಿದ ಹಾಗೆ.
ಕಬ್ಬಿಣ ಕಾದಿರುವಾಗಲೇ ಬಡಿಯಬೇಕು
ಅರ್ಧ ಆದ ಕೆಲಸವನ್ನು ಅರಸನಿಗೂ ತೋರಿಸಬೇಡ
ಅತ್ತೆ ಒಡೆದ ಪಾತ್ರೆಗೆ ಬೆಲೆಯಿಲ್ಲ
ಬೇಲಿಯೇ ಎದ್ದು ಹೊಲ ಮೇದಂತೆ
ಪಾಪಿ ಧನ ಪ್ರಾಯಶ್ಚಿತ್ತಕ್ಕೆ
ಒಂದು ಒಳ್ಳೇ ಮಾತಿಗೆ ಸುಳ್ಳೇ ಪ್ರಧಾನ
ಪಾಲಿಗೆ ಬಂದದ್ದು ಪಂಚಾಮೃತ
ಕಂಡ ಕಳ್ಳ ಜೀವ ಸಹಿತ ಬಿಡ
ಕಂಡ ಮನೆಗೆ ಕಳ್ಳ ಬಂದ , ಉಂಡ ಮನೆಗೆ ನೆಂಟ ಬಂದ
ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು (ಮುದ್ದ ಣ)
ಮಕ್ಕ ಳಿಲ್ಲ ದ ಮನೆಯಲ್ಲಿ ಅಜ್ಜ ಅಂಬೆಗಾಲಿಟ್ಟ
ಅಜ್ಜಿ ನೂತದ್ದೆಲ್ಲಾ ಅಜ್ಜ ನ ಉಡಿದಾರಕ್ಕೆ.
ಮಕ್ಕ ಳಿಸ್ಕೂ ಲ್ ಮನೇಲಲ್ವೇ? (ಕೈಲಾಸಂ)
'ಕೋ' ಅನ್ನೋದು ಕುಲದಲ್ಲಿಲ್ಲ ,'ತಾ' ಅನ್ನೋದು ತಾತರಾಯನ ಕಾಲದ್ದು
ದೇವನೊಬ್ಬ ನಾಮ ಹಲವು
ಸದಾಶಿವನಿಗೆ ಅದೇ ಧ್ಯಾನ
ಬಡ ದೇವರನ್ನು ಕಂಡರೆ ಬಿಲ್ಪ ತ್ರೇನೂ 'ಭುಸ್' ಅಂತಂತೆ
ಬೆಂದ ಮನೆಗೆ ಹಿರಿದದ್ದೇ ಲಾಭ
ಸಂದೀಲಿ ಸಮಾರಾಧನೆ
ಎದ್ದ ರೆ ಆಳಲ್ಲ
ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟ ಹಾಗೆ
ಪಾಂಡವರು ಪಗಡೆಯಾಡಿ ಕೆಟ್ಟ ರು ; ಹೆಣ್ಣು ಮಕ್ಕ ಳು ಕವಡೆಯಾಡಿ ಕೆಟ್ಟ ರು
ಮಾಡೋದು ಅನಾಚಾರ ; ಮನೆ ಮುಂದೆ ಬೃಂದಾವನ
ಉರಿಯೋ ಬೆಂಕಿಗೆ ತುಪ್ಪ ಸುರಿದ ಹಾಗೆ
ಗಾಣಿಗಿತ್ತಿ ಅಯ್ಯೋ ಅಂದರೆ ನೆತ್ತಿ ತಂಪಾದೀತೇ?
ಮೊದಲಿದ್ದ ವಳೇ ವಾಸಿ ಎಬ್ಬಿಸಿದರೆ ಉಣ್ಣೋಳು
ಗುಂಪಿನಲ್ಲಿ ಗೋವಿಂದ
ನಾಯೀನ ತಗೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿದರೆ ... ಕಂಡು ಇಳಿಬಿತ್ತು
ಚೇಳಿಗೊಂದೇ ಬಸಿರು ; ಬಾಳೆಗೊಂದೇ ಗೊನೆ
ಹೀನ ಸುಳಿ ಬೋಳಿಸಿದರೂ ಹೋಗೋದಿಲ್ಲ
ಮಾಡಿದರೆ ಮನೆ ; ಹೂಡಿದರೆ ಒಲೆ
ಕಣ್ಣು ಕಟ್ಟಿ ಕಾಡಲ್ಲಿ ಬಿಟ್ಟ ಹಾಗೆ
ಉಂಡದ್ದೇ ಉಗಾದಿ ; ಮಿಂದದ್ದೇ ದೀವಳಿಗೆ
ಕಡ್ಡೀನ ಗುಡ್ಡ ಮಾಡು.
ಅತ್ತು ಹೆದರಿಸೋನೊಬ್ಬ  ;ಹೇ.. ಹೆದರಿಸೋನೊಬ್ಬ
ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು
ತಾನು ಕಳ್ಳ ,ಪರರ ನಂಬ
ಓಡಿ ಹೋಗೋ ಬಡ್ಡಿ ಹಾಲು ಹೆಪ್ಪಿಟ್ಟಾಳೆ?
ಗಡ್ಡ ಕ್ಕೆ ಬೇರೆ ಸೀಗೇಕಾಯಿ
ನೆಂಟರಿಗೆ ದೂರ ; ನೀರಿಗೆ ಹತ್ತಿರ
ಕುಲ ಸೋಸಿ ಹೆಣ್ಣು ತಗೊಂಡು ಬಾ ; ಜಲ ಸೋಸಿ ನೀರು ತಗೊಂಡು ಬಾ
ಬಾಯಿದ್ದೋರು ಬರಗಾಲದಲ್ಲೂ ಬದುಕಿದರು
ಹದರಿದವರ ಮೇಲೆ ಕಪ್ಪೆ ಎಸೆದರು
ಅಳಿಯ ಮನೆ ತೊಳಿಯ
ನಾಯಿ ಮೊಲೇಲಿ ಖಂಡುಗ ಹಾಲಿದ್ದ ರೇನು, ದೇವರಿಗಿಲ್ಲ ದಿಂಡರಿಗಿಲ್ಲ
ಮಾಘ ಕಾವ್ಯ ಮಗನಿಗೆ ಬೇಡ
ಮುಂದೆ ಬರೋ ಕೋಡಿಗಿಂತ ಹಿಂದೆ ಬರೋ ಬಾಲಾನೇ ವಾಸಿ
ಪಾಯಸ ಮಾಡಿ ನಾಯಿ ಬಾಲದಲ್ಲಿ ತೊಳಸಿದ ಹಾಗೆ
ಆತುರಕ್ಕೆ ಅಜ್ಜಿ ಮೈನೆರೆದಳು
ಮಾಡಬಾರದ್ದು ಮಾಡಿದರೆ, ಆಗಬಾರದ್ದು ಆಗತ್ತೆ
ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿಕೊಂಡಿತು
ದನ ತಿನ್ನು ವವನಿಗೆ ಗೊಬ್ಬ ರದ ಆಣೆ
ಪಾಪಿ ಚಿರಾಯು
ಕಣ್ಣು ಕುರುಡಾದರೆ ಬಾಯಿ ಕುರುಡೇ
ಅಳಿಯನ ಕುರುಡು ಬೆಳಗಾದರೆ ಗೊತ್ತಾಗತ್ತೆ
ಎಲ್ಲ ರ ಮನೆ ದೋಸೇನೂ ತೂತೇ.
ಚಿನ್ನ ದ ಸೂಜೀಂತ ಕಣ್ಣು ಚುಚ್ಚಿಕೊಳ್ಳು ವುದಕ್ಕೆ ಆಗುತ್ತದೆಯೇ?
ಹಣ ಅಂದರೆ ಹೆಣಾನೂ ಬಾಯಿ ಬಿಡುತ್ತದೆ
ಜರಡಿ ಸೂಜಿಗೆ ಹೇಳಿತಂತೆ: ನಿನ್ನ ಬಾಲದಲ್ಲಿ ತೂತು
ಅಹಂಕಾರಕ್ಕೆ ಉದಾಸೀನವೇ ಮಟ್ಟು .
ಎಲ್ಲಾ ಜಾಣ,ತುಸಾ ಕೋಣ.
ಸಂತೆಗೂ ಮುಂಚೆ ಗಂಟು ಕಳ್ಳ ರು ನೆರೆದರಂತೆ
ಹುಚ್ಚು ಬಿಟ್ಟ ಹೊರತು ಮದುವೆ ಆಗೋಲ್ಲ ; ಮದುವೆ ಆದ ಹೊರತು ಹುಚ್ಚು ಬಿಡಲ್ಲ
ಬೈದು ಹೇಳಿದವರು ಬದುಕಕ್ಕೆ ಹೇಳಿದರು
ನಗೋ ಗಂಡಸನ್ನೂ ಅಳೋ ಹೆಂಗಸನ್ನೂ ನಂಬಬೇಡ
ವ್ರತ ಕೆಟ್ಟ ರೂ ಸುಖ ಪಡಬೇಕು
ಕೊಂದ ಪಾಪ ತಿಂದು ಪರಿಹಾರ
ಅಗ್ಗ ದ ಆಸೆಗೆ ಗೊಬ್ಬ ರ ತಗೊಂಡರು
ಅತ್ತೂ ಕರೆದೂ ಔತಣ ಹೇಳಿಸಿಕೊಂಡರು
ನೆಚ್ಚಿನೆಮ್ಮೆ ಕೋಣನನ್ನೀಯಿತು
ಬಸವನ ಹಿಂದೆ ಬಾಲ,ಸೂಜಿ ಹಿಂದೆ ದಾರ
ಕುದುರೆ ಕಂಡರೆ ಕಾಲುನೋವು
ಖಂಡಿತ ವಾದಿ,ಲೋಕ ವಿರೋಧಿ
ಅತ್ತೆ ಆಸ್ತೀನ ಅಳಿಯ ದಾನ ಮಾಡಿದ
ರಾಮ ರಾಜ್ಯ ಬಂದರೂ ರಾಗಿ ಬೀಸೋದು ತಪ್ಪ ಲಿಲ್ಲ
ಆಡು ಮುಟ್ಟ ದ ಸೊಪ್ಪಿಲ್ಲ
ಊರ ದನ ಕಾದು ದೊಡ್ಡ ಬೋರೇಗೌಡ ಅನ್ನಿಸಿಕೊಂಡ
ಹಣ್ಣು ತಿಂದವನು ನುಣುಚಿಕೊಂಡ; ಸಿಪ್ಪೆ ತಿಂದವನು ಸಿಕ್ಕಿ ಹಾಕಿಕೊಂಡ
ಗೌರಿ ಹಬ್ಬ ಕ್ಕೆ ಬಂದ ಗತಿಗೆಟ್ಟ ಅಳಿಯ
ಜೀನ ಗಳಿಸಿದ ;ಜಾಣ ತಿಂದ
ಶೆಟ್ಟಿ ಬಿಟ್ಟ ಲ್ಲೆ ಪಟ್ಣ
ಉಟ್ಟ ರೆ ತೊಟ್ಟ ರೆ ಪುಟ್ಟ ಕ್ಕ ಚೆನ್ನ
ಹಾವು ಸಾಯಬಾರದು ;ಕೋಲು ಮುರಿಯಬಾರದು
ಕಾಸಿಗೊಂದು,ಕೊಸರಿಗೆರಡು
ಉ.. ಕುಡಿದರೂ ತನ್ನಿಚ್ಚೇಲಿರಬೇಕು
ಸ್ವ ತಂತ್ರವೋ,ಸ್ವ ರ್ಗಲೋಕವೋ
ಊಟ ತನ್ನಿಚ್ಚೆ ,ನೋಟ ಪರರಿಚ್ಚೆ
ತಾಳಿದವನು ಬಾಳಿಯಾನು
ಲಾಲಿಸಿದರೆ ಮಕ್ಕ ಳು ; ಪೂಜಿಸಿದರೆ ದೇವರು
ಹುಚ್ಚ ಲ್ಲ ,ಬೆಪ್ಪ ಲ್ಲ ,ಶಿವಲೀಲೆ
ಅಳಿಯ ಅಲ್ಲ ,ಮಗಳ ಗಂಡ
ಹೊಟ್ಟೇಲಿರೋ ಸಿಟ್ಟು ರಟ್ಟೇಲಿಲ್ಲ
ತಲೆಗೆಲ್ಲಾ ಒಂದೇ ಮಂತ್ರವಲ್ಲ
ಬಾಲ ಸುಟ್ಟ ಬೆಕ್ಕಿ ನ ಹಾಗೆ
ಹಿತ್ತಿಲ ಗಿಡ ಮದ್ದ ಲ್ಲ
ಸರಿಸರಿಯಾಗಿದ್ರೆ,ಪರಿಪರಿ ನೆಂಟರು
ಇಷ್ಟ ನ್ನು ಕಂಡೆಯಾ ಕೃಷ್ಣಂಭಟ್ಟಾ ಅಂದರೆ,ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡಿರು
ಹಾಕು ಮಣೆ,ನೂಕು ಮಣೆ,ತಳ್ಳು ಮಣೆ
(ನೀನು)ಮೊಳ ಬಿಟ್ಟ ರೆ,(ನಾನು) ಮಾರು ಬಿಡುತ್ತೇನೆ
ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟ ರು.
ಕರೆದು ಹೆಣ್ಣು ಕೊಟ್ಟ ರೆ ಮಲ್ಲೋಗರ ಬಂತಂತೆ.
ಚೇಳಿಗೆ ಪಾರುಪತ್ಯ ಕೊಟ್ಟ ರೆ ಮನೆಯವರಿಗೆಲ್ಲಾ ಮುಟ್ಟಿಸಿತಂತೆ.
ದಿನಾ ಸಾಯೋರಿಗೆ ಅಳೋರ್ ‍ಯಾರು?
ಊರು ಅಂದ ಮೇಲೆ ಹೊಲಗೇರಿ ಇಲ್ಲ ದೆ ಇರುತ್ತದೆಯೇ?
ಮೇಯುವುದಕ್ಕೆ ಮುಂದೆ ;ಮೀಯುವುದಕ್ಕೆ ಹಿಂದೆ

ಒಗಟುಗಳು :
ಗೂಡಿನಲ್ಲಿನ ಪಕ್ಷಿ ನಾಡೆಲ್ಲ  ನೋಡುತ್ತದೆ-ಕಣ್ಣು

೨. ಕಾಸಿನ ಕುದುರೆಗೆ ಬಾಲದ ಲಗಾಮು-ಸೂಜಿ ದಾರ

೩. ಎಲೆ ಇಲ್ಲ , ಸುಣ್ಣ  ಇಲ್ಲ , ಬಣ್ಣ ವಿಲ್ಲ  ತುಟಿ ಕೆಂಪಗಾಗಿದೆ, ಮಳೆಯಿಲ್ಲ  , ಬೆಲೆಯಿಲ್ಲ  , ಮೈಹಸಿರಾಗಿದೆ-ಗಿಳಿ

೪. ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ , ಮುಚ್ಚಿದರೆ ಹಾನಿ ಇದೇನು?-ಮೂಗು, ಬಾಯಿ

೫. ಸುತ್ತ ಮುತ್ತ ಸುಣ್ಣ ದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ  ಇದು ಏನು?-ಮೊಟ್ಟೆ

೬. ಅಂಗಳದಲ್ಲಿ ಹುಟ್ಟು ವುದು, ಅಂಗಳದಲ್ಲಿ ಬೆಳೆಯುವುದು, ತನ್ನ  ಮಕ್ಕ ಳ ಹಂಗಿಸಿಮಾತಾಡುವುದು ಇದು ಏನು? ಕೋಳಿ

೭. ಇದ್ದ ಲು ನುಂಗುತ್ತ , ಗದ್ದ ಲ ಮಾಡುತ್ತಾ, ಉದ್ದ ಕ್ಕೂ  ಓಡುತ್ತಾ ಮುಂದಕ್ಕೆ ಸಾಗುವನಾನ್ಯಾರು?-ರೈಲು


೮. ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬ ರು, ಒಬ್ಬ ನು ಒಬ್ಬ ರಿಗೆಬಡಿಸುವಸ್ಟ ರಲ್ಲಿ ಇನ್ನೊಬ್ಬ ನು ಹನ್ನೆರಡು ಜನಕ್ಕೂ  ಬಡಿಸಿರು
ತ್ತಾನೆ-ಗಡಿಯಾರ
೯. ಹಸಿರು ಹಾವರಾಣಿ, ತುಂಬಿದ ತತ್ರಾಣಿ, ಹೇಳದಿದ್ದ ರೆ ನಿಮ್ಮ  ದೇವರಾಣಿ-ಕಲ್ಲಂಗಡಿ ಹಣ್ಣು
೧೦. ಮೊಟ್ಟೆ ಒಡೆಯೋ ಹಾಗಿಲ್ಲ  ಕೊಡ ಮುಳುಗಿಸೋ ಹಾಗಿಲ್ಲ  ಬರಿ ಕೊಡೆ ತಗೊಂಡುಬಾರೋ ಹಾಗಿಲ್ಲ -ತೆಂಗು

೧೨. ಕಡಿದರೆ ಕಚ್ಚೋಕೆ ಆಗೋಲ್ಲ  , ಹಿಡದ್ರೆ ಮುಟ್ಟೋಕೆ ಸಿಗೋಲ್ಲ -ನೀರು

೧೩.ಒಂದು ರುಮಾಲು ನಮ್ಮ ಪ್ಪ ನೂ ಸುತ್ತಲಾರ.-ದಾರಿ

೧೪. ಅಬ್ಬ ಬ್ಬ  ಹಬ್ಬ  ಬಂತು, ಸಿಹಿಕಹಿ ಎರಡೂ ತಂತು.-ಯುಗಾದಿ

೧೫. ಹುಟ್ಟು ತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ .-ಬದನೆಕಾಯಿ.

೧೬. ಸಾಗರ ಪುತ್ರ ,ಸಾರಿನ ಮಿತ್ರ.-ಉಪ್ಪು

೧೭. ಸಾವಿರಾರು ಹಕ್ಕಿ ಗಳು, ಒಂದೇ ಬಾರಿಗೆ ನೀರಿಗಿಳಿತವೆ.-ಅಕ್ಕಿ

೧೮. ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು.-ನವಿಲು.

೧೯. ಕಣ್ಣಿಲ್ಲ , ಕಾಲಿಲ್ಲ  ,ಆದರು ಚಲಿಸುತಿದೆ ಯಾವುದು ಎಲ್ಲಿದೆ ಬಲ್ಲಿದನ ಹೇಳಿರಲ.-ನದಿ

೨೦. ಹಲ್ಲಿಲ್ಲ ದ ಹಕ್ಕಿ ಗೆ ಗೂಡು ತುಂಬ ಮರಿಗಳು.-ಕೋಳಿ

೨೧. ಮೋಟು ಗೋಡೆ ಮೇಲೆ, ದೀಪ ಉರೀತಿದೆ.-ಮೂಗುಬೊಟ್ಟು

೨೨. ಹೊಂಚು ಹಾಕಿದ ದೆವ್ವ , ಬೇಡ ಬೇಡ ಎಂದರೂ ಜೂತೆಯೇ ಬರುತ್ತೆ.-ನೆರಳು

೨೩. ಮರನು ಮರನೇರಿ ಮತ್ತೆ ಮರನೇರಿ ಬಸವನಾ ಕತ್ತೇರಿ ತಿರುಗುತ್ತಿದೆ-ಗಾಣ

೨೪. ಹೊಕ್ಕಿ ದ್ದು  ಒಂದಾಗಿ ಹೊರಟಿದ್ದು  ಅದು ನೂರಾಗಿ-ಶ್ಯಾವಿಗೆ


೨೫. ಮಣ್ಣು  ಆಗಿದೆ ಕಲ್ಲು  ಸಿಕ್ಕಿ ತು, ಕಲ್ಲು  ಆಗಿದೆ ಬೆಳ್ಳಿ ಸಿಕ್ಕಿ ತು, ಬೆಳ್ಳಿ ಒಡೆದ ನೀರು ಸಿಕ್ಕಿ ತು-ತೆಂಗಿನಕಾಯಿ
೨೬. ಕತ್ತಲೆ ಮನೆಯಲಿ ಕಾಳವ್ವ  ಕುಂತವ್ಳೆ ಕುಯ್ಯೋ, ಮರ್ರೋ ಅಂತವಳೇ-ತಂಬೂರಿ

http://kannadajanapriyaogatugalu.blogspot.in/
http://www.nammakannadanaadu.com/karnataka-janapada/gadegalu.php

ಸುಭಾಷಿತಗಳು:

ಜೀವನದಲ್ಲಿ ದೊಡ್ಡ ಕೆಲಸ, ಕಾರ್ಯವೆಂಬುದು ಇಲ್ಲ ವೇ ಇಲ್ಲ . ದೊಡ್ಡ


ಪ್ರೀತಿಯಿಂದ ಮಾಡಿದ ಎಷ್ಟೇ ಸಣ್ಣ ಕೆಲಸವಾದರೂ ಅದು ದೊಡ್ಡ ಕೆಲಸ,
ಕಾರ್ಯವೇ.

ಬಹಳಷ್ಟು ಜನ ತಮ್ಮ ಪಾಲಿನ ಆನಂದವನ್ನು ಕಳೆದುಕೊಂಡು ಬಿಡುತ್ತಾರೆ. 


ಕಾರಣ, ಅವರಿಗದು ಸಿಗಲಿಲ್ಲ ವೆಂದಲ್ಲ . ಆದರೆ ಸಿಕ್ಕಾಗ ನಿಂತು ಅನುಭವಿಸುವುದನ್ನು ಮರೆತುಬಿಡುತ್ತಾರೆ - ಅನಾಮಿಕ

ಅದೃಷ್ಟ ವಂತ ಎಂದರೆ ಅವಕಾಶವನ್ನು ಪಡೆಯುವವನು, ಬುದ್ದಿವಂತ ಎಂದರೆ ಅವಕಾಶವನ್ನು ಸೃಷ್ಠಿಸಿಕೊಳ್ಳು ವವನು,
ಪಡೆದ ಅವಕಾಶವನ್ನು ಉಪಯೋಗಿಸಿಕೊಳ್ಳು ವವನೇ ಗೆಲ್ಲು ವವನು... !!
<><><> ಸ್ವಾಮಿ ವಿವೇಕಾನಂದರು <><><>

ನಮಗೆ ಬಹಳಷ್ಟು ಶಕ್ತಿಯಿದೆ ಎ೦ದು ಭ್ರಮಿಸಿ ಗಾಳಿಯನ್ನು ಗುದ್ದಿದರೆ ನಮ್ಮ


ಮೈಗೆ ನೋವಾಗುತ್ತದೆಯೇ ಹೊರತು, ಅದರಿ೦ದ ಯಾವುದೇ
ಪ್ರಯೋಜನವೂ ಆಗುವುದಿಲ್ಲ ...!!

ಯಾರು ಕಿವುಡರೋ,ಕುರುಡರೋ,ಅವರೇ ಈ ಮನುಷ್ಯ ಲೋಕದಲ್ಲಿ ಧನ್ಯ ರು.|


ಏಕೆಂದರೆ ಚಾಡಿಗಳನ್ನು ಕೇಳಲಾರರು, ಮತ್ತು ದುಷ್ಟ ರ ಏಳಿಗೆಯನ್ನು ನೋಡಲಾರರು.||

ತರ್ಕವು ಕೇವಲ ಬುದ್ಧಿಯ ವಿಷಯ ; ಬುದ್ಧಿಯ ವಿಷಯವನ್ನು , ಹೃದಯ


ಒಪ್ಪ ದಿದ್ದ ರೆ ಅದನ್ನು ತ್ಯ ಜಿಸಬೇಕು 
- ಮಹಾತ್ಮ ಗಾಂಧಿ. 

ಪರರ ಹೀಗೆಳೆಯುವರು ಸದಾ ಕಾಲ ತಮ್ಮ ಗುಣದ ಪ್ರದರ್ಶನ


ಮಾಡುತ್ತಿರುತ್ತಾರೆ - ಅನಾಮಿಕ

ತಾಯಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುವಿನ ಹಣೆಗಿಂತಲೂ


ಸ್ವ ಚ್ಛ ವಾದದ್ದು ಈ ಪ್ರಪಂಚದಲ್ಲಿ ಮತ್ತೇನೂ ಇಲ್ಲ . ಬ್ರಹ್ಮ ಕೂಡ ಅದುವರೆವಿಗೂ
ಆ ಹಣೆಯ ಮೇಲೆ "ಬರಹ" ಬರೆದಿರುವುದಿಲ್ಲ
-ಯಂಡಮೂರಿ ವೀರೇಂದ್ರನಾಥ
http://nudimuttugalu.blogspot.in/2014/03/65.html

You might also like