You are on page 1of 3

ಪಾಠ – ೨.

ಸೀನಸೆಟ್ಟರು ನಮ್ಮ ಟೀಚರು 


I. ಕೃತಿಕಾರರ ಪರಿಚಯ 
ಹೆಸರು: ವಿ.ಗಾಯತ್ರಿ 
ಕೃತಿಗಳು: ತುಂಗಾ, ತೊತ್ತೊಚಾನ್, ಎಳೆಯರಿಗಾಗಿ ಪರಿಸರ, ಪರಿಸರ ಶಿಕ್ಷಣದಲ್ಲಿ ಅಗತ್ಯ ಕಲಿಕೆಗಳು 
ಆಯ್ದಕೃತಿ: ತುಂಗಾ 

  
II. ಕೆಳಗಿನ ಪದಗಳ ಅರ್ಥ ಬರೆಯಿರಿ. 
೧. ಆಲೆಮನೆ – ಬೆಲ್ಲ ಮಾಡುವ ಸ್ಥಳ 
೨. ಬೇಸಾಯ – ವ್ಯವಸಾಯ 
೩. ನಾಟಿ – ಸಸಿ ನೆಡುವುದು 
೪. ಪರಿವರ್ತಿತ – ಬದಲಾದ 
೫. ತೀವ್ರ – ಹೆಚ್ಚು 
೬. ತಳಹದಿ – ಬುನಾದಿ 
೭. ತೆನೆ – ತುಂಬಿದ ಪೈರಿನ ತುದಿ 
  
III. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. 
೧. ಮಾಂಡವಿ ಟೀಚರ್ ಯಾರನ್ನು ಪರಿಚಯಿಸಿದರು? 
ಉತ್ತರ : ಮಾಂಡವಿ ಟೀಚರ್ ಸೀನಸೆಟ್ಟರನ್ನು ಪರಿಚಯಿಸಿದರು. 

೨. ಸೀನಸೆಟ್ಟರು ಜಮೀನಿನಲ್ಲಿ ಏನನ್ನು ಬೆಳೆಯುತ್ತಿದ್ದರು? 


ಉತ್ತರ : ಸೀನಸೆಟ್ಟರು ಜಮೀನಿನಲ್ಲಿ ಸಾಸಿವೆಯನ್ನು ಬೆಳೆಯುತ್ತಿದ್ದರು. 

೩. ಮಕ್ಕಳು ಏನನ್ನು ಹಾಕಿಕೊಂಡು ಗದ್ದೆಗೆ ಇಳಿದರು? 


ಉತ್ತರ : ಮಕ್ಕಳು ಕಂಬಳಿಗೊಪ್ಪೆ ಹಾಕಿಕೊಂಡು ಗದ್ದೆಗೆ ಇಳಿದರು. 

೪. ಹಾಲಪ್ಪನ ಕಾಲನ್ನು ಏನು ಕಚ್ಚಿತು? 


ಉತ್ತರ : ಹಾಲಪ್ಪನ ಕಾಲನ್ನು ನೀರಾವು ಕಚ್ಚಿತು. 

೫. ಮನೆಯ ಅಟ್ಟ ಮಕ್ಕಳಿಗೆ ಯಾವ ಟವರ್ ಆಗಿ ಪರಿವರ್ತಿತಗೊಂಡಿತ್ತು? 


ಉತ್ತರ : ಮನೆಯ ಅಟ್ಟ ಮಕ್ಕಳಿಗೆ ‘ಗದ್ದೆ ವೀಕ್ಷಣೆಯ ಟವರ್’ ಆಗಿ ಪರಿವರ್ತಿತಗೊಂಡಿತ್ತು. 
  
IV. ಕೆಳಗಿನ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯದಲ್ಲಿ ಉತ್ತರಿಸಿ. 
೧. ಸೀನಸೆಟ್ಟರ ವೇಷ ಹೇಗಿತ್ತು? 
ಉತ್ತರ : ಸೀನಸೆಟ್ಟರು ತುಂಬಾ ಹಳೆಯದಾದ ಒಗೆದ ಪಂಚೆಯೊಂದನ್ನು ಸೊಂಟಕ್ಕೆ ಸುತ್ತಿ ಮೇಲಕ್ಕೆ ಎತ್ತಿ
ಕಟ್ಟಿದ್ದರು. ಒಗೆದ ಚೌಕುಳಿ ಚೌಕುಳಿಯ ಅಂಗಿ, ಅದಕ್ಕಿಂತ ಹಳೆಯ ಟವಲಿನಿಂದ ತಲೆಗೆ ಲಪ್ಪಟೆ ಕಟ್ಟಿದ್ದರು. 
 
೨. ದೊಡ್ಡ ತರಗತಿಗಳಿಗೆ ಹೋದಂತೆ ಮಕ್ಕಳು ಏನಾಗುತ್ತಾರೆಂದು ಮಾಂಡವಿಗೆ ಅನಿಸಿತ್ತು? 
ಉತ್ತರ : ದೊಡ್ಡ ತರಗತಿಗಳಿಗೆ ಹೋದಂತೆ ಮಕ್ಕಳು  ತಮ್ಮ ಶಾಲಾ ಶಿಕ್ಷಣಕ್ಕೂ ಮಣ್ಣಿನ ಬದುಕಿಗೂ ಏನೂ
ಸಂಬಧವಿಲ್ಲದಂತೆ ವರ್ತಿಸುತ್ತಾರೆ ಎಂದೆನಿಸಿತ್ತು. ಅದಕ್ಕಾಗಿ ಶಾಲಾ ಶಿಕ್ಷಣ ನಿಜ ಬದುಕಿನ ಜೊತೆಗೆ
ಹಾಸುಹೊಕ್ಕಿನ ಸಂಬಂಧ ಹೊಂದಿರಬೇಕು, ಅದೇ ಅವರ ಶಿಕ್ಷಣ ಮಾದರಿಯ ತಳಹದಿ ಕೂಡಾ ಆಗಬೇಕೆಂದು, 
ಶಾಲಾ ಶಿಕ್ಷಣದಲ್ಲಿ ಬೇಸಾಯವನ್ನು ಅಳವಡಿಸುವುದು ಮಾಂಡವಿಯ ಮುಖ್ಯ ಉದ್ದೇಶವಾಗಿತ್ತು. 

೩. ಮಕ್ಕಳು ಸಸಿ ಕಿತ್ತ ಬಗೆ ಹೇಗಿತ್ತು? 


ಉತ್ತರ : ಮೊದಮೊದಲು ಮಕ್ಕಳಿಗೆ ಹಿಡಿ ತುಂಬಾ ಸಸಿಗಳನ್ನು ಬುಡಸಮೇತ ಕೀಳುವುದು ಸುಲಭವಾಗಲಿಲ್ಲ.
ಅನೇಕ ಸಸಿಗಳನ್ನು ಹಾಳು ಮಾಡಿದರು. ಹತ್ತಾರು ಬಾರಿ ಕಿತ್ತು ಕಿತ್ತು ಪ್ರಯತ್ನಿಸಿದರು. ಅನಂತರ ಅವರಿಗೆ
ಕೀಳುವುದು ಅಭ್ಯಾಸವಾಗಿ ವೇಗವೂ ಹಿಡಿಯಿತು.  

೪. ಹಾಲಪ್ಪನಿಗೆ ಹಾವು ಕಚ್ಚಿದಾಗ ಸೀನಸೆಟ್ಟರು ಏನು ಹೇಳಿದರು? 


ಉತ್ತರ : ಹಾಲಪ್ಪನಿಗೆ ಹಾವು ಕಚ್ಚಿದಾಗ ಸೀನಸೆಟ್ಟರು ಅವನನ್ನು ಹಿಡಿದುಕೊಂಡು, “ಹೆದರಬೇಡ ಮಗ, ಎಂತಾ
ಆಗಲ್ಲ. ಅದು ನೀರಾವು. ವಿಷದ ಹಾವಲ್ಲ. ಒಂದು ಮೀನು ಕಚ್ಚಿದರೆ ಹೆಂಗೋ ಅಷ್ಟೇ” ಎಂದು ತಿಳಿ ಹೇಳಿ, ಅವನನ್ನು
ಸಮಾಧಾನಿಸಿದರು. 
  
V. ಕೆಳಗಿನ ಮಾತುಗಳನ್ನು ಸಂದರ್ಭಸಹಿತ ವಿವರಿಸಿ. 
೧. “ಹಂಗಾರೆ ಸೀನಸೆಟ್ರು ನಮ್ಮ ಟೀಚರು”. 
ಉತ್ತರ : ಈ ಮೇಲಿನ ವಾಕ್ಯವನ್ನು ‘ಸೀನಸೆಟ್ಟರು ನಮ್ಮ ಟೀಚರು’ ಎಂಬ ಪಾಠದಿಂದ ಆರಿಸಲಾಗಿದೆ.  
ಮಾಂಡವಿ ಟೀಚರು ಸೀನಸೆಟ್ಟರನ್ನು ಹೊಸ ಟೀಚರ್ ಎಂದು ಪರಿಚಯಿಸಿದಾಗ, ತುಂಗಾ ಅವರನ್ನು ತನ್ನ
ಪರಿಚಯಸ್ಥರು ಎಂದು ಗುರುತಿಸಿದ ಸಂದರ್ಭದಲ್ಲಿ  ಈ ಮೇಲಿನ ಮಾತನ್ನು ಹೇಳುತ್ತಾಳೆ. 

೨. “ಮುಂಚೆ ಸಸಿಗಳನ್ನು ಕೀಳಾಣ” 


 ಉತ್ತರ : ಈ ಮೇಲಿನ ವಾಕ್ಯವನ್ನು ‘ಸೀನಸೆಟ್ಟರು ನಮ್ಮ ಟೀಚರು’ ಎಂಬ ಪಾಠದಿಂದ ಆರಿಸಲಾಗಿದೆ.
ಜಡಿಮಳೆಯಲ್ಲೇ ಶಾಲಾ ಮಕ್ಕಳು ಕಂಬಳಿಗೊಪ್ಪೆ ಹಾಕಿಕೊಂಡು ಸಂಭ್ರಮದಿಂದ ಗದ್ದೆಗೆ ಇಳಿದಾಗ,  ಸೀನಸೆಟ್ಟರು
ಬೇಸಾಯದ ಪಾಠ ಪ್ರಾರಂಭಿಸುವ ಸಂದರ್ಭದಲ್ಲಿ ಮಕ್ಕಳನ್ನು ಉದ್ದೇಶಿಸಿ  ಮೇಲಿನ ಮಾತನ್ನು ಹೇಳುತ್ತಾರೆ. 

೩. “ಇವತ್ತು ಪೂರಾ ಕಿತ್ತೇ ಹೋಗಾಣ” 


ಉತ್ತರ : ಈ ಮೇಲಿನ ವಾಕ್ಯವನ್ನು ‘ಸೀನಸೆಟ್ಟರು ನಮ್ಮ ಟೀಚರು’ ಎಂಬ ಪಾಠದಿಂದ ಆರಿಸಲಾಗಿದೆ.  
ಮಕ್ಕಳು ಉತ್ಸಾಹದಿಂದ ಸಸಿಗಳನ್ನು ಕೀಳುತ್ತಿದ್ದಾಗ ಸೀನಸೆಟ್ಟರು “ಇವತ್ತಿಗೆ ಇಷ್ಟು ಸಾಕು” ಎಂದು ಹೇಳಿದ
ಸಂದರ್ಭದಲ್ಲಿ, ಸಸಿಗಳನ್ನು ಕೀಳುವುದರಲ್ಲಿ ಸಂಭ್ರಮ ಹಿಡಿಸಿಕೊಂಡಿದ್ದ ಮಕ್ಕಳು ಈ ಮೇಲಿನ ವಾಕ್ಯವನ್ನು
ಸೀನಸೆಟ್ಟರಿಗೆ ಹೇಳಿದರು. 

೪. “ಕೈ ಎಲ್ಲಿಗ್ ಹೋತು” 


ಉತ್ತರ : ಈ ಮೇಲಿನ ವಾಕ್ಯವನ್ನು ‘ಸೀನಸೆಟ್ಟರು ನಮ್ಮ ಟೀಚರು’ ಎಂಬ ಪಾಠದಿಂದ ಆರಿಸಲಾಗಿದೆ.  
ಬೇಸಾಯದ ಕೆಲಸವನ್ನು ಮಾಡುವಾಗ ಶ್ರಮ ತಿಳಿಯದೆ ಇರಲೆಂದು ಯಶೋದ ಪ್ರಶ್ನೆ ಉತ್ತರಗಳ ಚಕ್ರದ
ಆಟವನ್ನು ಕಲಿತು ಬಂದಿದ್ದಳು. ಮಕ್ಕಳ ಜೊತೆ ಕೆಲಸ ಮಾಡುತ್ತಾ ಈ ಆಟವನ್ನು ಆಡುತ್ತಿದ್ದ ಸಂದರ್ಭದಲ್ಲಿ ಈ
ಮೇಲಿನ ಮಾತನ್ನು ಮಕ್ಕಳು ಹೇಳಿದರು. 
  ********************************* 

You might also like