You are on page 1of 8

ಎಸ್.ಎಸ್.ಎಲ್.ಸಿ - ಪಿ.ಯು.ಸಿ. ನಂತರ ಮುಂದೇನು?

ಪ್ರಸಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಎಸ್.ಎಸ್.ಎಲ್.ಸಿ. / ಪಿ.ಯು.ಸಿ. ವಿದ್ಯಾರ್ಥಿಗಳ ಭವಿಷ್ಯದ ಜೀವನದ ಹಾದಿಯನ್ನು

ನಿರ್ಧರಿಸುವ ನಿರ್ಣಾಯಕ ಘಟ್ಟವಾಗಿದೆ. ಬದುಕಿಗೆ ಯಾವ ವೃತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು

ನಿರ್ಧರಿಸುವ ಸಂದರ್ಭವಾಗಿದೆ. ಸಹಜವಾಗಿ ಯಾವ ಕೋರ್ಸ್ ನ್ನು ಆಯ್ಕೆ ಮಾಡಿಕೊಳ್ಳಬೇಕು? ಎಂಬ ಪ್ರಶ್ನೆ ಎಲ್ಲ

ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿರುತ್ತದೆ. ಪ್ರಾಯಶಃ ವಿದ್ಯಾರ್ಥಿಗಳಿಗಿಂತ ಪಾಲಕರಿಗೆ ತಮ್ಮ ಮಕ್ಕಳನ್ನು ಯಾವ

ಕೋರ್ಸ್ ಗೆ ದಾಖಲಾತಿ ಮಾಡಿಸಿದರೆ ಉಜ್ವಲವಾದ ಭವಿಷ್ಯ ಇದೆ ಹಾಗೂ ವೃತ್ತಿಯ ಆಯ್ಕೆ ಹೇಗೆ ಮಾಡಬೇಕು ಎಂಬ

ಗೊಂದಲ ಹೆಚ್ಚಿರುತ್ತದೆ.

ಎಸ್‌ಎಸ್‌ಎಲ್‌ಸಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಆಯ್ಕೆ ಮಾಡುವುದು ಒಂದು ಸವಾಲಾಗಿ

ಪರಿಣಮಿಸುತ್ತದೆ. ಅದುವರೆಗಿನ ವಿದ್ಯಾರ್ಥಿ ಜೀವನದಲ್ಲಿ ಆಯ್ಕೆಗಳಿಗೆ ಅವಕಾಶ ಇರುವುದಿಲ್ಲ. ನಿರ್ಧಾರ ಮಾಡಲೇ

ಬೇಕಾದ ಒತ್ತಡ ಇರುವುದರಿಂದ ತಮಗೆ ತಿಳಿದಿರುವ ಮಾಹಿತಿಯ ಮೇಲೆ ನಿರ್ಧಾರ ಮಾಡುವ ಅನಿವಾರ್ಯತೆ

ಬರುತ್ತದೆ. ಇಲ್ಲಿ ಪೋಷಕರ ನಿರ್ಧಾರ ಮಹತ್ವದ್ದಾಗುತ್ತದೆ. ಮಾಹಿತಿ ಕೊರತೆಯಿಂದ ತೆಗೆದುಕೊಳ್ಳುವ ನಿರ್ಧಾರ ಮಕ್ಕಳ

ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಇಂದಿನ ಕಾಲ-ಮಾನದ ಅಗತ್ಯ, ಬೆಳವಣಿಗೆಗಳನ್ನು ಗಮನಿಸಿ

ನಿರ್ಧರಿಸುವುದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನದಿ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

ಇಂದು ಶಿಕ್ಷಣ ಕ್ಷೇತ್ರ ವ್ಯಾಪಕವಾಗಿ ಬೆಳೆದಿದೆ. ಬಹು ಆಯ್ಕೆಗೆ ವಿಫುಲ ಅವಕಾಶವಿದೆ. ಸಾಂಪ್ರದಾಯಕವಾಗಿ

ತಮ್ಮ ಮಕ್ಕಳು ಇಂಜಿನಿಯರ್/ ಡಾಕ್ಟರ್ ಆಗಬೇಕು ಎಂಬ ಕನಸು ಕಾಣುವುದರಿಂದ ಹೊರಬಂದು ಇರುವ ಎಲ್ಲ

ಅವಕಾಶಗಳ ಬಗ್ಗೆ ಯೋಚಿಸುವ ಅಗತ್ಯವಿದೆ. ಪಾಲಕರಿಗೆ ತಮ್ಮ ಮಕ್ಕಳು ಉತ್ತಮ ಕೋರ್ಸ್ ಗಳನ್ನು

ಆಯ್ಕೆಮಾಡಿಕೊಂಡು ಸಫಲತೆ ಪಡೆಯಲಿ ಎಂಬ ಕನಸು ಸಹಜವಾದದ್ದೆ. ಆದರೆ, ಆಯ್ಕೆಯಲ್ಲಿ ಜಾಗೃತಿವಹಿಸುವ

ಅಗತ್ಯವಿದೆ. ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಕೋರ್ಸ್ ಗೆ ಸೇರಿಸುವ ಮುನ್ನ ಮಕ್ಕಳ ಆಸಕ್ತಿ, ಸಾಮರ್ಥ್ಯಗಳನ್ನು

ತಿಳಿದು ನಿರ್ಧರಿಸುವುದು ಅಪೇಕ್ಷಣೀಯ. ಮಕ್ಕಳ ಸಹಜ ಅರಿವು, ಆಸಕ್ತಿಗಳಿಗೆ ವಿರುದ್ಧವಾಗಿರುವ ಶಿಕ್ಷಣದಲ್ಲಿ ಮಕ್ಕಳು

ಯಶಸ್ವಿಯಾಗದೆ ಬದುಕಿನಲ್ಲಿ ವಿಫಲರಾಗುತ್ತಿರುವ ನಿದರ್ಶನಗಳು ಸಾಕಷ್ಟಿವೆ. ಇಂದು ಶಿಕ್ಷಣದ ಬಗ್ಗೆ ಸಲಹೆ ನೀಡುವ

ಸಲಹಾ ಸಂಸ್ಥೆಗಳಿವೆ. ತಜ್ಞರಿದ್ದಾರೆ. ಹಲವು ಮಾರ್ಗದರ್ಶಿ ಪುಸ್ತಕಗಳಿವೆ. ಅಂತರ್ಜಾಲದಲ್ಲಿಯೂ ಮಾಹಿತಿಗಳು ಲಭ್ಯ.

ಅವೆಲ್ಲವನ್ನು ಗಮನಸಿದರೆ ಉತ್ತಮ ಆಯ್ಕೆ ಸಾಧ್ಯವಾಗಬಹುದು.


ಇರುವ ಆಯ್ಕೆಗಳು ಒಂದಿಷ್ಟು ಮಾಹಿತಿ

ಎಸ್.ಎಸ್.ಎಲ್.ಸಿ.ಯ(10 ನೇ ತರಗತಿ) ನಂತರ ಪಿ.ಯು.ಸಿ ಸೇರ ಬಯಸುವ ವಿದ್ಯಾರ್ಥಿಗಳಿಗೆ ವಿಜ್ಞಾನ,

ವಾಣಿಜ್ಯ ಮತ್ತು ಕಲೆ ಲಭ್ಯವಿರುವ ಮೂರು ವಿಭಾಗಗಳಾಗಿವೆ. ಈ ಧಾರೆಗಳಲ್ಲಿ (Stream) ವಿವಿಧ ಶಾಖೆಗಳು,

ಉಪಶಾಖೆ, ಶಿಸ್ತುಗಳು ಇರುತ್ತವೆ. ಇದಲ್ಲದೆ ಡಿಪ್ಲೊಮಾ, ಐಟಿಐ(ಕೈಗಾರಿಕಾ ತರಬೇತಿ ಸಂಸ್ಥೆ)ಗಳಲ್ಲದೆ ಇತರ ಹಲವು

ಕೋರ್ಸ್ ಗಳು ಇಷ್ಟೊಂದು ಆಯ್ಕೆ ಮತ್ತು ವಿಸ್ತೃತ ವಿಷಯಗಳನ್ನು ಹೊಂದಿರುವುದರಿಂದ ಆಯ್ಕೆ ಮಾಡಲು ಅವುಗಳ ಬಗ್ಗೆ

ತಿಳಿದಿರುವ ಅಗತ್ಯವಿದೆ. ಪಿಯುಸಿ ಸೇರುವವರಿಗೆ ವಿಷಯಗಳ ಬಗ್ಗೆ ಅರಿವು ಇರುತ್ತದೆ. ಆ ವಿಷಯಕ್ಕೆ ಹೋಗದೆ, ಇಲ್ಲಿ

ಡಿಪ್ಲೊಮಾ ಮತ್ತಿತರ ಕೆಲವು ಕೋರ್ಸ್ ಗಳ ಪಟ್ಟಿಕೊಟ್ಟ್ಟಿದೆ. ಇಲ್ಲಿ ಕೊಟ್ಟಿರುವ ವಿಷಯಗಳಲ್ಲದೇ ಸಾಕಷ್ಟು ಆಯ್ಕೆಗಳಿವೆ.

ನಿದರ್ಶನಕ್ಕೆ ಬಿಎಸ್‌ಸಿಯಲ್ಲೇ 52 ವಿಷಯಗಳವೆ.

ಡಿಪ್ಲೊಮಾ ಕೋರ್ಸ್ಗಳು

• ಇಂಜಿನಿಯರಿಂಗ್(23 ವಿಷಯಗಳವೆ)

• ಹೋಟೆಲ್ ನಿರ್ವಹಣೆ

• ಪತ್ರಿಕೋದ್ಯಮ

• ಗ್ರಾಫಿಕ್ ಡಿಸೈನಿಂಗ್

• ಫ್ಯಾಷನ್ ಡಿಸೈನಿಂಗ್

• ಛಾಯಾಗ್ರಹಣ

• ಮನೋವಿಜ್ಞಾನ

• ಪ್ರಾಥಮಿಕ ಶಿಕ್ಷಣ

• ಡಿಜಿಟಲ್ ಮಾರ್ಕೆಟಿಂಗ್

• ಲಲಿತಕಲೆ

• ಇಂಗ್ಲಿಷ್

• ವೆಬ್ ವಿನಾಸ

• ಆಟದ ವಿನ್ಯಾಸ

• ಪ್ರಸದನ ಮತ್ತು ಸೌಂದರ್ಯ

• ಬೇಕರಿ ಮತ್ತು ಮಿಠಾಯಿ


• ಈವೆಂಟ್ ಮ್ಯಾನೇಜ್‌ಮೆಂಟ್

• ಸಾಗರ ಎಂಜಿನಿಯರಿA ಗ್

• ಅನಿಮೇಷನ್

• ಜವಳಿ ವಿನ್ಯಾಸ

• ಚರ್ಮದ ವಿನ್ಯಾಸ

• ಜವಳಿ ಎಂಜಿನಿಯರಿA ಗ್

ಪಾಲಿಟೆಕ್ನಿಕ್ ಕೋರ್ಸ್ ಗಳು

• ಕಂಪ್ಯೂಟರ್ ಪ್ರೋಗ್ರಾಮಿಂಗ್

• ಮಾರ್ಕೆಟಿಂಗ್ ನಿರ್ವಹಣೆ

• ಪೆಟ್ರೋಲಿಯಂ ಎಂಜಿನಿಯರಿಂಗ್

• ಅನಿಮೇಷನ್ ಕಲೆಗಳು ಮತ್ತು ವಿನ್ಯಾಸ

• ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್

• ಬಾಲ್ಯದ ಶಿಕ್ಷಣ ಮತ್ತು ಆರೈಕೆ

• ಡಿಪ್ಲೊಮಾ ಇನ್ ಅಕೌಂಟಿಂಗ್

ಪ್ಯಾರಾಮೆಡಿಕಲ್ ಕೋರ್ಸ್ ಗಳು

* ಆಸ್ಪತ್ರೆ ಸಹಾಯಕ

• ಗ್ರಾಮೀಣ ಆರೋಗ್ಯ ರಕ್ಷಣೆ

• ಪೆಥಾಲಜಿ ಲ್ಯಾಬ್ ತಂತ್ರಜ್ಞ

• ಪ್ಯಾರಾಮೆಡಿಕಲ್ ನರ್ಸಿಂಗ್

• ಫಿಸಿಯೋಥೆರಪಿ

• ನರ್ಸಿಂಗ್ ಸಹಾಯಕ

• ಕ್ಷ-ಕಿರಣ ತಂತ್ರ

• ಇಸಿಜಿ ತಂತ್ರಜ್ಞಾನ

• ವಿಕಿರಣಶಾಸ್ತ್ರ
• ಔಷಧಾಲಯ

* ದಂತ ಯಂತ್ರ ವಿಜ್ಞಾನ

ಐಟಿಐ ಕೋರ್ಸ್ ಗಳು

• ಎಲೆಕ್ಟ್ರೀಷಿಯನ್

• ರೇಡಿಯಾಲಜಿ ತಂತ್ರಜ್ಞ

• ವಿಮಾ ಏಜೆಂಟ್

• ಡಿಜಿಟಲ್ ಛಾಯಗ್ರಾಹಕ

• ಫ್ಯಾಷನ್ ವಿನ್ಯಾಸ ಮತ್ತು ತಂತ್ರಜ್ಞಾನ

• ಹೊಲಿಗೆ ತಂತ್ರಜ್ಞಾನ

• ಟೂಲ್ ಮತ್ತು ಡೈ ಮೇಕಿಂಗ್

• ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಕಲೆ

ವೃತ್ತಿಪರ ಕೋರ್ಸ್ ಗಳು

• ಇ-ಕಾಮರ್ಸ್

• ಡಿಜಿಟಲ್ ಮಾರ್ಕೆಟಿಂಗ್

• ಔದ್ಯೋಗಿಕ ಚಿಕಿತ್ಸೆ

• ಕೃಷಿ

• ಪತ್ರಿಕೋದ್ಯಮ

• ಅನಿಮೇಷನ್‌ನಲ್ಲಿ ಪ್ರಮಾಣಪತ್ರ

• ಮಾತನಾಡುವ ಇಂಗ್ಲಿಷ್‌ನಲ್ಲಿ ಪ್ರಮಾಣಪತ್ರ ಕೋರ್ಸ್

• ಪ್ರಮಾಣಪತ್ರ ಮೊಬೈಲ್ ರಿಪೇರಿ ಕೋರ್ಸ್

• ವಾಣಿಜ್ಯ ಅಭ್ಯಾಸದಲ್ಲಿ ಡಿಪ್ಲೊಮಾ

• ಕಾಸ್ಮೆಟಾಲಜಿಯಲ್ಲಿ ಡಿಪ್ಲೊಮಾ

• ಸ್ಟೆನೋಗ್ರಫಿಯಲ್ಲಿ ಡಿಪ್ಲೊಮಾ

• ಚರ್ಮದ ತಂತ್ರಜ್ಞಾನದಲ್ಲಿ ಡಿಪ್ಲೊಮಾ


• ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ

• 3D ಅನಿಮೇಷನ್‌ಗಳಲ್ಲಿ ಡಿಪ್ಲೊಮಾ

ಕಲೆ ವಿಭಾಗದಲ್ಲಿರುವ ಕೋರ್ಸ್ ಗಳು

• ಲಲಿತಕಲೆ

• ವಾಣಿಜ್ಯ ಕಲೆ

• ಗ್ರಾಫಿಕ್ ಡಿಸೈನಿಂಗ್

• ಸ್ಪೋಕನ್ ಇಂಗ್ಲೀಷ್

• ಫಂಕ್ಷನಲ್ ಇಂಗ್ಲೀಷ್

• ಸಾಮಾಜಿಕ ಮಾಧ್ಯಮ ನಿರ್ವಹಣೆ

• ಹೋಟೆಲ್ ಮ್ಯಾನೇಜ್‌ಮೆಂಟ್

• ಹಿಂದಿಯಲ್ಲಿ ಪ್ರಮಾಣಪತ್ರ

ವಾಣಿಜ್ಯದಲ್ಲಿರುವ ಡಿಪ್ಲೊಮಾ ಕೋರ್ಸ್ ಗಳು:

• ಟ್ಯಾಲಿಯಲ್ಲಿ ಸರ್ಟಿಫಿಕೇಟ್ ಕೋರ್ಸ್

• ಬ್ಯಾಂಕಿಂಗ್

• ಅಪಾಯ ಮತ್ತು ವಿಮೆ

• ಕಂಪ್ಯೂಟರ್ ಅಪ್ಲಿಕೇಶನ್

• ಹಣಕಾಸು ಲೆಕ್ಕಪತ್ರದಲ್ಲಿ ಸುಧಾರಿತ

• ಇ-ಕೌಂಕಿಂಗ್ ತೆರಿಗೆ

ವಿಜ್ಞಾನದಲ್ಲಿ 10 ನೇ ನಂತರದ ಡಿಪ್ಲೊಮಾ ಕೋರ್ಸ್ ಗಳು

• ಮಾಹಿತಿ ತಂತ್ರಜ್ಞಾನ

• ಆಹಾರ ಉತ್ಪಾದನೆಯಲ್ಲಿ ಕರಕುಶಲ ಕೋರ್ಸ್

• ಡೀಸೆಲ್ ಯಂತ್ರಶಾಸ್ತ್ರ

• ಡೆಂಟಲ್ ಮೆಕ್ಯಾನಿಕ್ಸ್
• ಡೆಂಟಲ್ ಹೈಜೀನಿಸ್ಟ್

• ಎಲೆಕ್ಟ್ರಿಕಲ್ ಎಂಜಿನಿಯರಿಂಗ್

• ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್

ಬಿಎಸ್‌ಸಿ ಕೋರ್ಸ್ ಗಳ ಪಟ್ಟಿ

ಬಿಎಸ್‌ಸಿ ಮಾಹಿತಿ ತಂತ್ರಜ್ಞಾನದಲ್ಲಿ ಬಿಎಸ್‌ಸಿ (ಐಟಿ)

ಬಿಎಸ್‌ಸಿ ಕಂಪ್ಯೂಟರ್ ಸೈನ್ಸ್

ಬಿಎಸ್‌ಸಿ ನರ್ಸಿಂಗ್

ಬಿಎಸ್‌ಸಿ ಫ್ಯಾಷನ್ ಡಿಸೈನಿಂಗ್

ಬಿಎಸ್‌ಸಿ ಅನಿಮೇಷನ್

ಬಿಎಸ್‌ಸಿ ಗಣಿತ

ಬಿಎಸ್‌ಸಿ ಕೃಷಿ

ಬಿಎಸ್‌ಸಿ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್

ಬಿಎಸ್‌ಸಿ ಫಾರೆಸ್ಟ್ರಿ

ಬಿಎಸ್‌ಸಿ ಅರಿವಳಿಕೆ(Anesthesia)

ಬಿಎಸ್‌ಸಿ ಹಡಗು ಸಂಬಂಧ (Nautical)

ಬಿಎಸ್‌ಸಿ ಭೂವಿಜ್ಞಾನ

ಬಿಎಸ್‌ಸಿ ಕಾರ್ಡಿಯಾಲಜಿ

ಬಿಎಸ್‌ಸಿ ಮೈಕ್ರೋಬಯಾಲಜಿ

ಬಿಎಸ್‌ಸಿ ಏರೋನಾಟಿಕ್ಸ್

ಬಿಎಸ್‌ಸಿ ಏವಿಯೇಷನ್

ಬಿಎಸ್‌ಸಿ ದೃಷ್ಯ ಸಂವಹನ

ಬಿಎಸ್‌ಸಿ ಸೈಕಾಲಜಿ

ಬಿಎಸ್‌ಸಿ ರೇಡಿಯಾಲಜಿ
ಬಿಎಸ್‌ಸಿ ಮಾನವಶಾಸ್ತ್ರ

ಬಿಎಸ್‌ಸಿ ಅನ್ಯಾಟಮಿ

ಬಿಎಸ್‌ಸಿ ಉತ್ಪನ್ನ ವಿನ್ಯಾಸ

ಬಿಎಸ್‌ಸಿ ಭೌತಶಾಸ್ತ್ರ

ಬಿಎಸ್‌ಸಿ ರಸಾಯನಶಾಸ್ತ್ರ

ಬಿಎಸ್‌ಸಿ ಜೀವಶಾಸ್ತ್ರ

ಬಿಎಸ್‌ಸಿ ಆಣ್ವಿಕ ಜೀವಶಾಸ್ತ್ರ(Molecular Biology)

ಬಿಎಸ್‌ಸಿ ಪರಿಸರ ವಿಜ್ಞಾನ

ಬಿಎಸ್‌ಸಿ ಅರ್ಥಶಾಸ್ತ್ರ

ಬಿಎಸ್‌ಸಿ ಆಹಾರ ತಂತ್ರಜ್ಞಾನ

ಬಿಎಸ್‌ಸಿ ಭೂವಿಜ್ಞಾನ

ಬಿಎಸ್‌ಸಿ ಗೃಹ ವಿಜ್ಞಾನ

ಬಿಎಸ್‌ಸಿ ಆತಿಥ್ಯ ವ್ಯವಸ್ಥೆ

ಬಿಎಸ್‌ಸಿ ಅಂಕಿ-ಅಂಶಗಳು

ಬಿಎಸ್‌ಸಿ ಜೀವ ವಿಜ್ಞಾನ(ಲೈಫ್ ಸೈನ್ಸಸ್)

ಬಿಎಸ್‌ಸಿ ಸಸ್ಯಶಾಸ್ತ ç

ಬಿಎಸ್‌ಸಿ ಮೈಕ್ರೋಬಯಾಲಜಿ

ಬಿಎಸ್‌ಸಿ ಬಯೋ ಟೆಕ್ನಾಲಜಿ

ಬಿಎಸ್‌ಸಿ ಬಯೋ ಕೆಮಿಸ್ಟ್ರಿ

ಬಿಎಸ್‌ಸಿ ಪ್ರಾಣಿಶಾಸ್ತ್ರ

ಬಿಎಸ್‌ಸಿ ಭೂಗೋಳ

ಬಿಎಸ್‌ಸಿ ಕ್ಲಿನಿಕಲ್ ರಿಸರ್ಚ್

ಬಿಎಸ್‌ಸಿ ಆರೋಗ್ಯ ನಿರ್ವಹಣೆ

ಬಿಎಸ್‌ಸಿ ಆಡಿಯಾಲಜಿ ಮತ್ತು ಸ್ಪೀಚ್ ಥೆರಪಿ


ಬಿಎಸ್‌ಸಿ ಫಿಸಿಯೋ ಥೆರಪಿ

ಬಿಎಸ್‌ಸಿ ನೇತ್ರ ತಂತ್ರಜ್ಞಾನ

ಬಿಎಸ್‌ಸಿ OTT (The Operation Theatre technician)

ಬಿಎಸ್‌ಸಿ(ರೆಸ್ಪಿರೇಟರಿ ಥೆರಪಿ ಟೆಕ್ನಾಲಜಿ)

ಬಿಎಸ್‌ಸಿ(ಡಯಾಲಿಸಿಸ್ ಥೆರಪಿ)

You might also like