You are on page 1of 9

ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ

ಪೀಠಿಕೆ :-
ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರವು ಉದ್ಯಮಶೀಲತೆ ತನಗೆ ತಾನೇ ಜಯಿಸುತ್ತದೆ ಎಂದು ನಂಬಿದೆ ಅದನ್ನು ಸೂಕ್ತ
ನಿರ್ದೇಶನ ಚಟುವಟಿಕೆಯ ಮೂಲಕ ಪರಿಣತರಿಂದ ತರಬೇತಿ ಹಾಗೂ ಅಭಿವೃದ್ಧಿಪಡಿಸುವುದರೊಂದಿಗೆ ಮನುಷ್ಯನ ಸಾಮರ್ಥ್ಯ ಹಾಗೂ
ಸಂಪನ್ಮೂಲವನ್ನು ಬೆಳಕಿಗೆ ತರುವಲ್ಲಿ ಈ ಸಂಸ್ಥೆಯು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಸಂಸ್ಥೆಯ ಇತಿಹಾಸ ದೇಯ ಗುರಿ ಆಡಳಿತ
ವ್ಯವಸ್ಥೆ ಸಂಸ್ಥೆಯು ಆಯೋಜಿಸುವ ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳು ಮತ್ತು ಸಂಸ್ಥೆಯ ಬಗೆಗಿನ ಮಹತ್ತರವಾದ ಮಾಹಿತಿಯನ್ನು ಈ ಕೆಳಗೆ
ಸ್ವ ವಿವರವಾಗಿ ವಿವರಿಸಬಹುದಾಗಿದೆ

ಭೌಗೋಳಿಕ ಹಿನ್ನೆಲೆ :-
ಈ ಸಂಸ್ಥೆಯು ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ 15 ಕಿಲೋಮೀಟರ್ ದೂರದಲ್ಲಿರುವ ಬೇಲೂರು
ಇಂಡಸ್ಟ್ರಿಯಲ್ ಏರಿಯಾ ಧಾರವಾಡದಲ್ಲಿದೆ
ಇತಿಹಾಸ:-
ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಧಾರವಾಡ 15/05/1997 ರಂದು ನೋಂದಣಿಯಾಗಿದೆ ಪ್ರಸ್ತುತವಾಗಿ ಕರ್ನಾಟಕ
ಸರ್ಕಾರದ ಉತ್ತೇಜನೆಯೊಂದಿಗೆ ಸಂಸ್ಥೆಯು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ವ್ಯಾಪ್ತಿಯಲ್ಲಿ
ಕಾರ್ಯನಿರ್ವಹಿಸುತ್ತಿದೆ ಉದ್ಯಮಶೀಲತೆಯ ಶಿಕ್ಷಣ ಅಥವಾ ತರಬೇತಿಯಲ್ಲಿ ಶ್ರೇಷ್ಠತೆಯ ಕೇಂದ್ರ ಮತ್ತು ಉದ್ಯಮಶೀಲತೆಯ ಅವಕಾಶಗಳಿಗಾಗಿ
ಸಂಶೋಧನೆ ಮತ್ತು ಯೋಜನೆ ಮಾರ್ಗದರ್ಶನಕ್ಕಾಗಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ
ಸಂಸ್ಥೆಯು ಆಯೋಜಿಸಿರುವ ಕಾರ್ಯಕ್ರಮಗಳು :-
1) ದಿಶಾ ಹಾಗೂ ಕೌಶಲ್ಯ ಯೋಜನೆ :-
ಕೌಶಲ್ಯಾಬಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಸಂಯುಕ್ತ
ರಾಷ್ಟ್ರಗಳ ಅಭಿವೃದ್ಧಿ ಸಂಸ್ಥೆಯ ಪ್ರಾಯೋಜಕತ್ವದ ದಿಶಾ ಯೋಜನೆಯನ್ನು 2017-18 ಹಾಗೂ 2018-19 ನೇ ಸಾಲಿನಲ್ಲಿ ಹಾಗೂ 2019-20 ರಲ್ಲಿ
ಪ್ರಯೋಜಕತ್ವದ ಅಡಿ ಯುವಕರ ಮತ್ತು ಯುವತಿಯರಿಗೆ ಔಟ್ರಿಚ್ ಹಾಗೂ ಪ್ರೇರಣ ತರಬೇತಿಯನ್ನು ದಿಶಾ ಸ್ಟಡಿ ಹಾಗೂ ಕೌಶಲ್ಯ ಯೋಜನೆಯಲ್ಲಿ
ನೀಡಲಾಗುತ್ತದೆ
2) ವಿಜ್ಞಾನ ಹಾಗೂ ತಂತ್ರಜ್ಞಾನ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ :-
ಭಾರತ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಪ್ರಾಯೋಜಕತ್ವದಲ್ಲಿ ಧಾರವಾಡ ,ಬೆಳಗಾವಿ, ಉತ್ತರ ಕನ್ನಡ,
ವಿಜಯಪುರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಗಳನ್ನು ನಾಲ್ಕು ವರ್ಷದ
ಅವಧಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಹೊಸ ಉದ್ಯಮಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈ ಯೋಜನೆಗಳನ್ನು ಯಶಸ್ವಿಯಾಗಿ
ಪೂರ್ಣಗೊಳಿಸಲಾಗಿದೆ
3) ಸುಜಲಾ ಯೋಜನೆ :-
ವಿಶ್ವ ಬ್ಯಾಂಕ್ ನೆರವಿನ ಕರ್ನಾಟಕ ಸರ್ಕಾರದ ಜಲಾನಯನ ಅಭಿವೃದ್ಧಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಧಾರವಾಡ ಹಾವೇರಿ
ಹಾಗೂ ತುಮಕೂರು ಜಿಲ್ಲೆಗಳ ವಿವಿಧ ಜಲಾನಯನ ಪ್ರದೇಶಗಳಲ್ಲಿ ವಿವಿಧ ಉದ್ಯಮಶೀಲತಾ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಂಡು
ಸ್ವಸಹಾಯ ಸಂಘದ ಅಭ್ಯರ್ಥಿಗಳು ಆದಾಯ ಉತ್ಪನ್ನ ಚಟುವಟಿಕೆಗಳನ್ನು ಪ್ರಾರಂಭಿಸುವಲ್ಲಿ ಪ್ರೋತ್ಸಾಹಿಸಲಾಗಿದೆ
4) ಸಂಕಲ್ಪ ಯೋಜನೆ:-
2020-21 ನೇ ಸಾಲಿನಲ್ಲಿ ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಸಚಿವಾಲಯದ ಯೋಜನೆಯಾದ ಸಂಕಲ್ಪ
ಯೋಜನೆಯನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯದ 18 ಜಿಲ್ಲೆಗಳಲ್ಲಿ ಉದ್ಯಮಶೀಲತಾ ವಿಕಸನ
ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಈ ಯೋಜನೆ ಅಡಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 35 ಕಿರು ಅಥವಾ ಸಣ್ಣ ಉದ್ಯಮಗಳು
ಸ್ಥಾಪನೆ ಆಗಿರುತ್ತವೆ
ಇತರೆ ಕಾರ್ಯಕ್ರಮಗಳು
• ಉದ್ಯಮಶೀಲತೆ ಜಾಗೃತಿ ಕಾರ್ಯಕ್ರಮ
• ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ
• ಗ್ರಾಮೀಣ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ
• ತರಬೇತಿದಾರರ ತರಬೇತಿ ಕಾರ್ಯಕ್ರಮ
• ಬೋಧಕರ ಅಭಿವೃದ್ಧಿ ಕಾರ್ಯಕ್ರಮ
• ವ್ಯಾಪಾರ ಅವಕಾಶಗಳ ಗುರುತಿಸುವಿಕೆ
• ಯೋಜನಾ ವರದಿಗಳನ್ನು ತಯಾರಿಸುವುದು
• ಸಣ್ಣ ಉದ್ಯಮಿಗಳ ನಿರ್ಧಾರ ಕೈಗೊಳ್ಳುವ ತಂತ್ರಜ್ಞಾನ
ಈ ಮೇಲ್ಕಂಡ ಕಾರ್ಯಕ್ರಮಗಳಲ್ಲಿ ವ್ಯಾಪಾರ ಅಥವಾ ಕೈಗಾರಿಕಾ ಕ್ಷೇತ್ರದಲ್ಲಿ ಯಾವ ಅನುಭವವೂ ಇಲ್ಲದ ಜೊತೆಗೆ
ಕುಟುಂಬದ ಬೆಂಬಲವು ಇಲ್ಲದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಪ್ರತಿನಿಧಿಗಳಿಗೆ ಅಗತ್ಯ ಮಾಹಿತಿ ಒದಗಿಸುವ ಅತ್ಯುತ್ತಮ
ಕಾರ್ಯಕ್ರಮಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸುತ್ತದೆ ಮಧ್ಯಮ ಮಟ್ಟದ ವ್ಯವಸ್ಥಾಪಕರು ಉಪಾಧ್ಯಾಯರು ಲೆಕ್ಕಿಗರು ವ್ಯಾಪಾರಸ್ಥರು
ತಾಂತ್ರಿಕ ಹಾಗೂ ತಾಂತ್ರಿಕ ವಿದ್ಯಾ ಸಂಸ್ಥೆಗಳ ಹೊಸ ಪದವೀಧರರು ಕಸಬುದಾರರು ಶಿಕ್ಷಣದಿಂದ ವಂಚಿತರಾದವರು ಮಹಿಳೆಯರು ಹಿಂದುಳಿದ
ವರ್ಗದವರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ
ಕಾರ್ಯಕ್ರಮಗಳ ಉದ್ದೇಶಗಳು
• ಶಿಕ್ಷಣ ಹಾಗೂ ತರಬೇತಿಯ ಮೂಲಕ ಉದ್ಯಮಶೀಲತೆಯನ್ನು ಪರಿಣಿತವಾಗಿ ಅಧಿಕಗೊಳಿಸುವುದು
• ಸ್ವ ಉದ್ಯೋಗ ಅವಕಾಶಗಳನ್ನು ಗುಣಾತ್ಮಕವಾಗಿ ಪರಿಚಯಿಸುವುದು
• ಸಣ್ಣ ಪ್ರಮಾಣದ ಉದ್ಯಮದಾರರ ನಿರ್ವಹಣಾ ಸಾಮರ್ಥ್ಯವನ್ನು ಸುಧಾರಿಸುವುದು

ಧಾರವಾಡ ವ್ಯಾಪ್ತಿಯಲ್ಲಿ ಈ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿರುವ ಸ್ಥಳಗಳು


• ಧಾರವಾಡ
• ಹುಬ್ಬಳ್ಳಿ
• ಕಲಘಟಗಿ
• ಕುಂದಗೋಳ
• ನವಲಗುಂದ
• ಅಣ್ಣಿಗೇರಿ
• ಅಳ್ನಾವರ
ಆಡಳಿತ ವ್ಯವಸ್ಥೆ
ನಿರ್ದೇಶಕರು
ಜಂಟಿ ನಿರ್ದೇಶಕರು
ಉಪನಿರ್ದೇಶಕರು
ತರಬೇತಿ ಅಧಿಕಾರಿಗಳು
ಕೌಶಲ್ಯಾಭಿವೃದ್ಧಿ ಅಧಿಕಾರಿಗಳು
ಸತ್ಯತೆಗಾರರು
ಜವಾನರು

ದಾಖಲಾತಿ ವ್ಯವಸ್ಥೆ
ಈ ಸಂಸ್ಥೆಯಲ್ಲಿ ದಾಖಲೆಗಳನ್ನು ಕೈಬರಹದ ಮೂಲಕ ಮತ್ತು ಗಣಕಯಂತ್ರದ ಮೂಲಕ ನಿರ್ವಹಣೆ ಮಾಡುತ್ತಾರೆ ಮತ್ತು ಪ್ರತಿಯೊಂದು
ದಾಖಲೆಗಳನ್ನು ಸಂಗ್ರಹಿಸಿ ಇಡಲಾಗುತ್ತದೆ
BY-
ನಂದೀಪ ಪಾಟೀಲ

You might also like