You are on page 1of 35

ವಿದ್ಯಾರ್ಥಿ ಜೀವನದ ಸಮಯಪರಿಪಾಲನೆಗೆ ಅತ್ಯುತ್ತಮ

ಮಾರ್ಗಗಳು ಇಲ್ಲಿವೆ..
Suneel Bn | Vijaya KarnatakaUpdated: Mar 14, 2020, 2:16 PM
Subscribe

ಸಮಯ ಪರಿಪಾಲನೆ ವಿದ್ಯಾರ್ಥಿ ಜೀವನದಲ್ಲಿ ಒಂದು ಮೂಲಭೂತ ಕರ್ತವ್ಯ


ಆಗಿರಬೇಕು. ಆಗ ಮಾತ್ರ ಅಂದುಕೊಂಡ ಎಲ್ಲಾ ಗುರಿಗಳನ್ನು ಮುಟ್ಟಲು
ಸಾಧ್ಯ. ಆದ್ದರಿಂದ ಸಮಯ ನಿರ್ವಹಣೆಗೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ವಿದ್ಯಾರ್ಥಿಗಳೇ ಆಗಲಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವವರೇ ಆಗಲಿ ಟೈಮ್‌ ಮ್ಯಾನೇಜ್ಮೆಂಟ್‌


ಮಾಡುವುದು ಮುಖ್ಯ. ಅದು ಒಂದು ಕಲೆಯು ಹೌದು. ಬಹು ಸಂಖ್ಯಾತ ಸ್ಟೂಡೆಂಟ್ಸ್‌ ತಮ್ಮ
ಯಾವುದೇ ಪ್ರಾಜೆಕ್ಟ್‌ಗಳು, ಹೋಮ್ ವರ್ಕ್‌ಗಳನ್ನು ಮುಗಿಸಲು ಸಮಸ್ಯೆ ಎದುರಿಸುತ್ತಲೇ
ಇರುತ್ತಾರೆ. ಕೊನೆ ಕ್ಷಣದಲ್ಲಿ ಪೇಚಾಡುವುದು, ಶಿಕ್ಷಕರು-ಉಪನ್ಯಾಸಕರಿಂದ ಬೈಗುಳ ಕೇಳುವುದು
ಸಾಮಾನ್ಯ. ಇಂತಹ ಸಮಸ್ಯೆಗಳಿಂದ ದೂರಾಗಲು, ವಿದ್ಯಾಭ್ಯಾಸ ಸುಂದರವಾಗಿಯೂ,
ಆಸಕ್ತದಾಯಕವಾಗಿಯೂ ಇರುವಂತೆ ನೋಡಿಕೊಳ್ಳಲು ಉತ್ತಮ ಟೈಮ್‌ ಮ್ಯಾನೇಜ್‌ಮೆಂಟ್
ಅಗತ್ಯ. ಹಾಗಿದ್ರೆ ಆ ಟೈಮ್‌ ಟೇಬಲ್‌ ಹೇಗಿರಬೇಕು, ಸಮಯಪಾಲನೆ ಮಾಡುವುದು ಹೇಗೆ ಎಂದು
ಇಲ್ಲಿ ತಿಳಿಸಲಾಗಿದೆ.

ಸಮಯ ಪಾಲನೆ ವಿದ್ಯಾರ್ಥಿಗಳಿಗೆ ಏಕೆ ಮುಖ್ಯ

ಉತ್ತಮ ಸಮಯ ಪಾಲನೆಯ ಪ್ಲಾನ್ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್‌ಗಳು, ಹೋಮ್‌ ವರ್ಕ್‌ಗಳನ್ನು ಸರಿಯಾದ ಸಮಯಕ್ಕೆ ಮುಗಿಸಬಹುದು. ಇದರಿಂದ
ವಿದ್ಯಾರ್ಥಿ ಹೆಚ್ಚು ಆರ್ಗನೈಜ್ಡ್‌ ಆಗಿರಬಹುದು, ಆತ್ಮವಿಶ್ವಾಸದಿಂದಿರಬಹುದು, ಹೆಚ್ಚು ಕಲಿಯಬಹುದು, ಸದಾ ಚಟುವಟಿಕೆಯಿಂದರಬಹುದು. ಮುಂದೂಡುವಿಕೆ
ಸಮಸ್ಯೆಯಿಂದ ದೂರ ಉಳಿಯಬಹುದು. ಅಲ್ಲದೇ ಒತ್ತಡ, ಹತಾಶೆ, ಕಡಿಮೆ ಅಂಕಗಳ ಸಮಸ್ಯೆ ಎಲ್ಲವುಗಳಿಂದಲೂ ದೂರ ಇರಬಹುದು. ಸಮಯ ಪಾಲನೆಯ
ಬಹುಮುಖ್ಯ ಉಪಯೋಗವೆಂದರೆ ತಮ್ಮ ಮೇಲೆ ತಮಗೆ ಆಗುವ ಬೇಸರದಿಂದ ದೂರ ಇರಬಹುದು.

ಸಮಯ ಪಾಲನೆಗೆ ಸಹಾಯಕವಾಗುವ ಈ ಕೆಳಗಿನ ಸಲಹೆಗಳನ್ನು ಯಾವಾಗಲು ಫಾಲೋ ಮಾಡಿರಿ.

ವೇಳಾಪಟ್ಟಿ ರಚಿಸಿ
ಯಾವುದೇ ಶಿಕ್ಷಣ ಹಂತದ ವಿದ್ಯಾರ್ಥಿಗೆ ಆದರೂ ಟೈಮ್‌ ಟೇಬಲ್ ಉತ್ತಮ ಟೂಲ್. ಅದರಲ್ಲೂ
ಶಾಲಾ ಹಂತದಲ್ಲೇ ಸಮಯ ಪಾಲನೆ ಬಗ್ಗೆ ಅಭ್ಯಾಸ ಮಾಡಿಸುವುದು ಒಳ್ಳೆಯದು. ಇದರಿಂದ
ಸರಿಯಾದ ಸಮಯಕ್ಕೆ ಶಿಕ್ಷಕರು ಕೊಟ್ಟ ಯೋಜನೆಗಳು ಮತ್ತು ಹೋಮ್‌ವರ್ಕ್‌ ಮುಗಿಸಬಹುದು.
ಇದರಿಂದ ವಿದ್ಯಾರ್ಥಿಗೆ ಒಳ್ಳೆಯ ಪ್ರಶಂಸೆ ಸಿಗುವ ಮೂಲಕ ಇನ್ನೂ ಹೆಚ್ಚು ಹೆಚ್ಚು ಕಲಿಯಲು
ಉತ್ಸಾಹ ಬರುತ್ತದೆ. ಮಕ್ಕಳಿಗೆ ಪೋಷಕರೆ ಟೈಮ್‌ ಟೇಬಲ್‌ ರಚಿಸಿ ಕೊಡುವುದು ಉತ್ತಮ.
ಪ್ರತಿಯೊಂದು ವಿಷಯವನ್ನು ಬೇರೆ ಬೇರೆ ಕಲರ್‌ಗಳಲ್ಲಿ ರಚಿಸಿ.

ಅಡೆತಡೆಗಳಿಂದ ದೂರವಿರಿ
ಮೊಬೈಲ್‌ ಬಳಕೆ, ಸಾಮಾಜಿಕ ಜಾಲತಾಣ ಬಳಕೆ, ಸ್ನೇಹಿತರೊಂದಿಗೆ ಅತಿಯಾದ ಸಮಯ ಕಳೆಯುವುದರಿಂದ
ವಿದ್ಯಾಭ್ಯಾಸದ ಹಲವು ಚಟುವಟಿಕೆಗಳಿಗೆ ತೊಡಕುಂಟಾಗುತ್ತದೆ. ಇತ್ತೀಚೆಗೆ ಶಾಲಾ-ಕಾಲೇಜು ಮಕ್ಕಳು ಸಹ ತಮ್ಮ
ಸ್ನೇಹಿತರ ಹುಟ್ಟುಹಬ್ಬ ಆಚರಣೆಯ ಕ್ರೇಜ್‌ನಲ್ಲಿ ತೊಡಗಿದ್ದಾರೆ. ಇಂತಹ ಹೊಸ ಕ್ರೇಜ್‌ಗಳು ಎಷ್ಟು ಸಮಯವನ್ನು
ಹಾಳುಮಾಡುತ್ತಿವೆ ಎಂಬುದು ಅವರಿಗೆ ತಿಳಿಯದ ವಿಷಯವಾಗಿದೆ.
ಪರೀಕ್ಷಾ ಸಿದ್ಧತಾ ಸಮಯದಲ್ಲಿ ಟೈಮ್‌ಮ್ಯಾನೇಜ್ಮೆಂಟ್‌ಹೇಗೆ?

ಪ್ರತಿ ಸೆಷನ್‌ಗೆ ಗುರಿ ನಿಗದಿಪಡಿಸಿ


ಓದಲು ಕೂರುವ ಪ್ರತಿ ಸೆಷನ್‌ಗಳಲ್ಲಿ ಇಂತಿಷ್ಟು ನೋಟ್ಸ್‌ ಓದಿ ಮುಗಿಸಬೇಕು, ಇಂತಿಷ್ಟು ಪ್ರಾಜೆಕ್ಟ್‌ ಮುಗಿಸಬೇಕು
ಎಂದು ಗೋಲ್‌ಸೆಟ್‌ಮಾಡಿರಿ. ಆಗ ಮಾತ್ರ ನೀವು ಸರಿಯಾಗಿ ಸಮಯಪಾಲನೆ ಮಾಡಬಹುದು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಲು ಈ 5 ಟಿಪ್ಸ್ ಫಾಲೋ ಮಾಡಿ..

ಪ್ರಾಜೆಕ್ಟ್‌ಪ್ಲಾನ್‌ಸಿದ್ಧಪಡಿಸಿ
ಕೊನೆ ಕ್ಷಣದಲ್ಲಿ ಗಾಬರಿ ಆಗುವುದರಿಂದ ತಪ್ಪಿಸಿಕೊಳ್ಳಲು, ಯಾವುದೇ
ಅಸೈನ್‌ಮೆಂಟ್‌ಗಳು ಇದ್ದಲ್ಲಿ ಪೂರ್ವ ಸಿದ್ಧತೆಯಾಗಿ ವೇಳಾಪಟ್ಟಿ ಫಾಲೋ
ಮಾಡಿ. ಪಾಲಕರು ತಮ್ಮ ಮಕ್ಕಳಿಗೆ ಇಂತಹ ಸಂದರ್ಭಗಳಲ್ಲಿ
ಸಮಯಪಾಲನೆಗೆ ಹೆಚ್ಚು ಮಹತ್ವ ನೀಡಬೇಕು ಮತ್ತು ಸಹಾಯ
ಮಾಡಬೇಕು.
10 ನೇ ತರಗತಿ ನಂತರ ಕ್ರೀಡಾಶಕ್ತರಿಗೆ ಯಾವೆಲ್ಲಾ ಕೋರ್ಸ್‌ಗಳಿವೆ ಗೊತ್ತೇ?

ಒಂದು ಸಮಯದಲ್ಲಿ ಒಂದೇ ಕೆಲಸ ನಿರ್ವಹಿಸಿ


ಒಂದು ಸಮಯದಲ್ಲಿ ಎರಡು ಕಡೆ ಗಮನಹರಿಸುವುದರಿಂದ ಯಾವುದೇ ಕೆಲಸ
ಪೂರ್ಣಗೊಳ್ಳುವುದಿಲ್ಲ. ಹಾಗೂ ಗುಣಮಟ್ಟ ಕಾಪಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಒಂದು
ಕೆಲಸ ನಿರ್ವಹಿಸಬೇಕಾದರೆ ಅದನ್ನು ಪೂರ್ಣಗೊಳಿಸಿ, ನಂತರ ಮತ್ತೊಂದು ಪ್ರಾಜೆಕ್ಟ್‌ ಕಡೆ ಗಮನ
ಹರಿಸಬಹುದು.

8-10 ಗಂಟೆಗಳ ನಿದ್ರೆ ಇರಲಿ


ವಿದ್ಯಾರ್ಥಿ ಜೀವನದಲ್ಲಿ ಓದಲು ಕಠಿಣ ಶ್ರಮ ಎಷ್ಟು ಮುಖ್ಯವೋ, ಓದಿದ ಎಲ್ಲಾ ಮಾಹಿತಿಗಳು ನೆನಪಿನಲ್ಲಿ ಉಳಿಯಲು ಉತ್ತಮ ನಿದ್ರೆಯೂ ಅಷ್ಟೇ ಮುಖ್ಯ.
ಆದ್ದರಿಂದ ಓದಿಗೆ ಇರುವಂತೆ ಟೈಮ್‌ಟೇಬಲ್ ನಿದ್ರೆಗೂ ಇರಲಿ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಲು ಈ 5 ಟಿಪ್ಸ್
ಫಾಲೋ ಮಾಡಿ..
Suneel Bn | Vijaya KarnatakaUpdated: 12 Mar 2020,
4:32 pm

Subscribe
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಲು ಎಲ್ಲ ಪ್ರಶ್ನೆಗಳಿಗೂ
ಸರಿ ಉತ್ತರ ನೀಡುವುದು ಒಂದು ಕಡೆ ಮುಖ್ಯವಾದರೆ. ಮತ್ತೊಂದು
ಕಡೆ ಹಲವು ರೀತಿ ಎಚ್ಚರ ವಹಿಸುವ ಅಗತ್ಯವು ಇರುತ್ತದೆ. ಈ ಬಗ್ಗೆ
ಇಲ್ಲಿ ಸಲಹೆಗಳನ್ನು ನೀಡಲಾಗಿದೆ.
 
ಸ್ಪರ್ಧಾತ್ಮಕ ಪರೀಕ್ಷೆಗಳು ತುಂಬ ಶಿಸ್ತಿನಿಂದ ನಡೆಯುತ್ತವೆ.
ಬಹುತೇಕ ಪರೀಕ್ಷೆಯ ಪ್ರಶ್ನೆಗಳು ಬಹು ಆಯ್ಕೆ
ಮಾದರಿಯದ್ದಾಗಿರುತ್ತವೆ. ಆದ್ದರಿಂದ ಸುಲಭ ಎನ್ನುವುದಕ್ಕಿಂತ
ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವೇ. ಕಾರಣ ಯಾವುದೇ ಉತ್ತರ
ಆಯ್ಕೆಗಳನ್ನು ನೋಡಿದರು ಹೋಲಿಕೆ ಇದ್ದು, ಇದೇ ಸರಿಯುತ್ತರ
ಇರಬಹುದು ಎನಿಸುತಿರುತ್ತದೆ. ಯಾವುದೇ ಕಾಂಪಿಟೇಟಿವ್
ಪರೀಕ್ಷೆಗಳ ಪ್ರಶ್ನೆಗಳನ್ನು ತುಂಬಾ ಸೂಕ್ಷ್ಮವಾಗಿ
ವಿನ್ಯಾಸಗೊಳಿಸಲಾಗಿರುತ್ತದೆ. ಕೆಲವೇ ಅಭ್ಯರ್ಥಿಗಳು ಮಾತ್ರ
ಸುಲಭವಾಗಿ ಈ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ಡೆಡ್‌ಲೈನ್‌
ಒಳಗೆ ಉತ್ತರ ನೀಡಬಲ್ಲರು. ಯಾವುದೇ ಸ್ಮರ್ಧಾತ್ಮಕ ಪರೀಕ್ಷೆಗಳು
ಅಥವಾ ಪ್ರವೇಶ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಲು ಈ ಕೆಳಗಿನ
ಸಲಹೆಗಳನ್ನು ತಪ್ಪದೇ ಫಾಲೋ ಮಾಡಿರಿ.
Advertisement

ಪ್ರಶ್ನೆಪತ್ರಿಕೆ ಮೇಲಿನ ಸೂಚನೆಗಳನ್ನು ಓದಿಕೊಳ್ಳಿರಿ

ಪ್ರಶ್ನೆಗಳಿಗೆ ಉತ್ತರ ನೀಡುವ ಮುನ್ನ, ಪತ್ರಿಕೆಯ ಮೇಲಿರುವ


ಸೂಚನೆಗಳನ್ನು ಓದಿಕೊಳ್ಳಿ. ಹಲವು ಪರೀಕ್ಷೆಗಳಲ್ಲಿ ಹೆಚ್ಚು ಸೆಕ್ಷನ್‌ಗಳು
ಮತ್ತು ಹೆಚ್ಚು(Extra) ಪ್ರಶ್ನೆಗಳು ಇರುತ್ತವೆ. ಸೂಚನೆಯಲ್ಲಿ ಎಷ್ಟು
ಪ್ರಶ್ನೆಗಳಿಗೆ ಉತ್ತರ ನೀಡಬೇಕು, ಯಾವ ಪ್ರಶ್ನೆಗಳು ಯಾರಿಗೆ ಎಂದು
ತಿಳಿಸಲಾಗಿರುತ್ತದೆ. ( ಅಂಧರಿದ್ದಲ್ಲಿ ಅವರಿಗೆ ಪ್ರತ್ಕೇಕ ಪ್ರಶ್ನೆಗಳು
ಇರುತ್ತವೆ). ಅಲ್ಲದೇ ಯಾವ ವಿಭಾಗವನ್ನು ಎಷ್ಟು ಸಮಯದೊಳಗೆ
ಉತ್ತರಿಸಿ ಮುಗಿಸಬೇಕು ಎಂದು ಸಹ ತಿಳಿಸಲಾಗಿರುತ್ತದೆ.

ಆಪ್ಟಿಟ್ಯೂಡ್ ಪರೀಕ್ಷೆಯ ಪ್ರಶ್ನೆಗಳನ್ನು ಎಚ್ಚರದಿಂದ ಓದಿಕೊಳ್ಳಿ

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಪ್ಟಿಟ್ಯೂಡ್ ಸೆಕ್ಷನ್‌ನ


ಪ್ರಶ್ನೆಗಳನ್ನು ಹೆಚ್ಚು ಗಮನಹರಿಸಿ ಓದಿಕೊಳ್ಳಬೇಕು. ಉತ್ತರ ನೀಡುವ
ಮುನ್ನ ಎರಡು ಬಾರಿ ಓದಿ ಅರ್ಥಮಾಡಿಕೊಂಡ ನಂತರ ಉತ್ತರ
ನೀಡಬೇಕು. ಈ ಸೆಕ್ಷನ್‌ನಲ್ಲಿ ಸಣ್ಣ ತಪ್ಪುಗಳು ಸಹ ಸಂಪೂರ್ಣ ಪರೀಕ್ಷೆ
ಪತ್ರಿಕೆಗೆ ನೀಡಿದ ಎಫರ್ಟ್‌ಅನ್ನು ವ್ಯರ್ಥಮಾಡಿಬಿಡಬಹುದು.

ಒಂದೇ ಪ್ರಶ್ನೆಯಲ್ಲಿ ಸಮಯ ಕಳೆಯದಿರಿ

ಆನ್‌ಲೈನ್‌ ಆಪ್ಟಿಟ್ಯೂಡ್‌ ಟೆಸ್ಟ್‌ನಲ್ಲಿ ಸಮಯ ಬಹುಮುಖ್ಯ. ಆದ್ದರಿಂದ


ಉತ್ತರಗೊತ್ತಿಲ್ಲದ, ಅರ್ಥವಾಗದ ಪ್ರಶ್ನೆಯಲ್ಲಿ ಹೆಚ್ಚು ಸಮಯ
ಯೋಚಿಸುತ್ತಾ ಕೂರಬೇಡಿ. ಮೊದಲು ಗೊತ್ತಿರುವ ಪ್ರಶ್ನೆಗಳಿಗೆ ಬೇಗ
ಉತ್ತರ ನೀಡಿ. ನಂತರ ಉಳಿದ ಸಮಯದಲ್ಲಿ ಹಿಂದೆ ಬಿಟ್ಟ ಎಲ್ಲ
ಪ್ರಶ್ನೆಗಳಿಗೂ ಉತ್ತರ ನೀಡಿ.
ಗೆಸ್‌ಮಾಡಿ ಉತ್ತರಿಸದಿರಿ

ಹಲವು ಸ್ಪರ್ಧಾತ್ಮಕ ಪರೀಕ್ಷೆಗಳು ತಪ್ಪು ಉತ್ತರಗಳಿಗೆ ನೆಗೆಟಿವ್


ಅಂಕಗಳನ್ನು ಹೊಂದಿರುತ್ತವೆ. ಆದ್ದರಿಂದ ಕೇವಲ ಗೆಸ್‌ಮಾಡುವ
ಮೂಲಕ ಉತ್ತರ ನೀಡಬೇಡಿ. ನಿಮಗೆ ಗೊತ್ತಿಲ್ಲದಿದ್ದಲ್ಲಿ, ಉತ್ತರದ
ಮೇಲೆ ಕಾನ್ಫಿಡೆಂಟ್‌ಇಲ್ಲದಿದ್ದಲ್ಲಿ, ಅಂತಹ ಪ್ರಶ್ನೆಗಳಿಗೆ ಉತ್ತರ
ನೀಡದೆ ಬಿಟ್ಟುಬಿಡುವುದೇ ಉತ್ತಮ.
ಹೆಚ್ಚುವರಿ ಪ್ರಶ್ನೆಗಳನ್ನು ಅಟೆಂಡ್ ಮಾಡದಿರಿ
ಕೆಲವು ಪ್ರಶ್ನೆ ಪತ್ರಿಕೆಗಳು ಹೆಚ್ಚುವರಿ ಪ್ರಶ್ನೆಗಳನ್ನು ಹೊಂದಿರುತ್ತವೆ.
ಕೆಲವು ಸೆಕ್ಷನ್‌ಗಳಲ್ಲೂ ಈ ರೀತಿ ಪ್ರಶ್ನೆಗಳನ್ನು ನೀಡಲಾಗಿರುತ್ತದೆ.
120 ಪ್ರಶ್ನೆಗಳಲ್ಲಿ 100 ಪ್ರಶ್ನೆಗಳಿಗೆ, 60 ಪ್ರಶ್ನೆಗಳಲ್ಲಿ 50 ಪ್ರಶ್ನೆಗಳಿಗೆ 6
ಪ್ರಶ್ನೆಗಳಲ್ಲಿ 5 ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು
ಸೂಚಿಸಲಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸೂಚಿಸಿರುವ ನಿರ್ದಿಷ್ಟ
ಸಂಖ್ಯೆಯ ಪ್ರಶ್ನೆಗಳಿಗೆ ಉತ್ತರ ನೀಡಿರಿ. ಹಾಗೆ ಹೆಚ್ಚಿನ ಸಮಯ
ಇದ್ದಲ್ಲಿ ಈ ಪ್ರಶ್ನೆಗಳಿಗೆ ನೀಡಿದ ಉತ್ತರಗಳನ್ನು ಮತ್ತೊಮ್ಮೆ
ಪರಾಮರ್ಶಿಸಿ.

ಕಾಲೇಜು ಪರೀಕ್ಷೆಗಳಿಗೆ ಪರಿಣಾಮಕಾರಿಯಾಗಿ ಓದಲು


ಈ ಸಲಹೆಗಳು
Suneel Bn | Vijaya KarnatakaUpdated: 4 Mar 2020, 4:50 pm
Subscribe

ವಿದ್ಯಾಭ್ಯಾಸ ಸಮಯದಲ್ಲಿ ವಿದ್ಯಾರ್ಥಿಗಳು ಕಾಲೇಜು ಪರೀಕ್ಷೆಗಳಿಗೆ


ಪರಿಣಾಮಕಾರಿಯಾಗಿ ಓದುವುದು ಹೇಗೆ, ಹೆಚ್ಚು ಅಂಕಗಳಿಸಲು ಯಾವ
ರೀತಿ ಓದಬೇಕು ಎಂದು ಇಲ್ಲಿ ತಿಳಿಸಲಾಗಿದೆ.

ಕೆಲವು ಯುವಕ-ಯುವತಿಯರು ಯಾವುದೇ ಪರೀಕ್ಷೆ ಬರೆದು ಫಲಿತಾಂಶ ಬಂದ ನಂತರ, 'ನಾನು


ಎಕ್ಸಾಮ್‌ಗೆ ಒಂದು ದಿನ ಮುಂಚೆ ಓದಿದ್ದು ಅಷ್ಟೆ. ಎರಡು ದಿನ ಮುಂಚೆ ಓದಿದ್ದು ಅಷ್ಟೆ. ಫಸ್ಟ್‌ ಕ್ಲಾಸ್‌
ನಲ್ಲಿ ಪಾಸ್‌ ಆಗಿದ್ದೇನೆ. ಏನಾದ್ರು ತಿಂಗಳುಗಟ್ಟಲೇ ಓದಿದ್ರೆ ಜಿಲ್ಲಾ ಮಟ್ಟದಲ್ಲಿ, ವಿವಿ ಮಟ್ಟದಲ್ಲಿ
ಮೊದಲನೇ ಸ್ಥಾನ ಪಡೆಯುತ್ತಿದ್ದೆನೇನೋ..' ಹೀಗೆ ಹೇಳುತ್ತಿರುತ್ತಾರೆ. ಆದರೆ ಹೀಗೆ ಹೇಳುವವರ
ಸ್ಟಡಿ ಟಿಪ್ಸ್‌ ಎಲ್ಲರಿಗೂ ವರ್ಕ್‌ ಆಗುವುದಿಲ್ಲ. ಹಾಗೆ ಎಲ್ಲಾ ವಿಷಯಗಳ ಅಧ್ಯಯನಕ್ಕೂ ಫಾಲೋ
ಮಾಡಲು ಆಗುವುದಿಲ್ಲ. ಕಾಲೇಜು ಪರೀಕ್ಷೆಗಳಿಗೆ ಕಡಿಮೆ ಸಮಯ ಓದಿದ್ರು ಹೇಗ್‌ಓದಬೇಕು, ಹೆಚ್ಚು
ಅಂಕಗಳಿಸಲು ಯಾವ ಮಾರ್ಗಗಳನ್ನು ಅನುಸರಿಸಬೇಕು ಎಂದು ಇಲ್ಲಿ ತಿಳಿಸಲಾಗಿದೆ. ಈ ಅನನ್ಯ
ಸ್ಟಡಿ ಟಿಪ್ಸ್‌ಗಳು ಯಾವುವು ಎಂದು ಕೆಳಗಿನಂತೆ ಓದಿ ತಿಳಿಯಿರಿ.
Advertisement

'ನಾನು ಓದಬೇಕು' ಬದಲಾಗಿ 'ನನಗೆ ಓದು ಬೇಕು'


ನಾನು ಓದಬೇಕು ಎಂದು ಫೀಲ್‌ ಮಾಡುವ ಬದಲು ನನಗೆ ಓದು ಅಗತ್ಯ, ನನಗೆ ಓದು ಬೇಕು
ಎಂದು ಭಾವಿಸಿ. ಈ ಪರೀಕ್ಷೆ ಪಾಸ್‌ ಮಾಡಿ ಹೆಚ್ಚು ಅಂಕಗಳಿಸಬೇಕು, ಹೆಚ್ಚು ಕಲಿಯಬೇಕು, ಇದು
ನನ್ನಿಂದ ಸಾಧ್ಯ ಎಂದು ನಂಬಿರಿ. ಓದಲು ಮೊದಲು ಮನಸ್ಸು ಗಟ್ಟಿಗೊಳಿಸಿಕೊಳ್ಳುವುದು ಮುಖ್ಯ.
ಓದಲು ಹೆಚ್ಚು ಉತ್ಸುಕತೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ನೀವು ಎಷ್ಟು ದೀರ್ಘಕಾಲ ಓದುತ್ತೀರಿ
ಎಂಬುದಕ್ಕಿಂತ, ಇಷ್ಟದಿಂದ ಕಡಿಮೆ ಅವಧಿ ಓದಿದ್ರು ನೆನಪಿನಲ್ಲಿ ಉಳಿಯುವುದೆಷ್ಟು ಎಂಬುದು
ತಿಳಿಯುತ್ತದೆ.
ಅರ್ಧಗಂಟೆಗೆ ಒಮ್ಮೆ 5 ನಿಮಿಷ ವಿರಾಮ
ದೀರ್ಘಾವಧಿ ಓದುತ್ತಲೇ ಕುಳಿತುಕೊಳ್ಳುವ ಬದಲು, ನೀವು ಓದುತ್ತಿರುವ ಟಾಪಿಕ್‌ ಅರ್ಥವಾಗದೇ
ತಲೆಯೊಳಗೆ ಹೋಗುತ್ತಿಲ್ಲ ಎಂದಾಗ ಬ್ರೇಕ್‌ ತೆಗೆದುಕೊಳ್ಳಿ. ಪ್ರತಿ ಅರ್ಧತಾಸಿಗೆ ಅಥವಾ ನಿಮ್ಮ
ಅಗತ್ಯಕ್ಕೆ ತಕ್ಕಂತೆ ಕನಿಷ್ಠ 5 ನಿಮಿಷ ಬ್ರೇಕ್‌ ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ಪ್ರಾಡಕ್ಟಿವಿಟಿ
ಹೆಚ್ಚಿಸಿಕೊಳ್ಳಬಹುದು. ನೆನಪಿನಲ್ಲಿ ಉಳಿಯದ 20 ಪುಟ ಓದುವ ಬದಲು,
ನೆನಪಿಟ್ಟುಕೊಳ್ಳಬಹುದಾದ 10 ಪುಟಗಳನ್ನೇ ಓದಿರಿ.

ಧ್ಯಾನ ಮಾಡಿರಿ
ವಿದ್ಯಾರ್ಥಿಗಳು ವ್ಯಾಸಂಗ ಸಮಯದಲ್ಲಿ ಮನಸ್ಸು ವಿಚಲಿತಗೊಳ್ಳುವ ಯಾವುದೇ
ಅಲೋಚನೆಗಳನ್ನು ಹೊಂದಿರಬಾರದು. ಇದರಿಂದ ದೂರ ಇರಬೇಕೆಂದರೆ ದಿನನಿತ್ಯ
ಧ್ಯಾನ ಮುಖ್ಯ. ಮಾನಸಿಕವಾಗಿ ಯಾವುದೇ ಒತ್ತಡವಿಲ್ಲದೇ ಓದಿನ ಮೇಲೆ ಫೋಕಸ್
ಮಾಡಲು ಮೆಡಿಟೇಶನ್ ಸಹಾಯ ಮಾಡುತ್ತದೆ. ಪರೀಕ್ಷೆ ಭಯ, ಹೋಮ್‌ ವರ್ಕ್‌,
ಇತರೆ ಯಾವುದೇ ಡೆಡ್‌ಲೈನ್‌ ಎಲ್ಲವನ್ನು ಬದಿಗಿಟ್ಟು, ಓದಿದ್ದು ನೆನಪಿನಲ್ಲಿ
ಇರಬೇಕೆಂದರೆ ಧ್ಯಾನ ಮಾಡಿರಿ.

ಇತರರಿಗೆ ಬೋಧನೆ ಮಾಡಿ


ತರಗತಿಯಲ್ಲಿ ಕೇಳಿದ ಪಾಠ ಅಥವಾ ನೀವೇ ಓದಿದ ವಿಷಯಗಳನ್ನು ಇತರರಿಗೆ ಟೀಚ್‌ ಮಾಡಲು
ನಿಮಗೆ ಸಾಧ್ಯವಾಗಲಿಲ್ಲ ಎಂದರೆ, ನಿಮಗೆ ಅರ್ಥವೇ ಆಗಿಲ್ಲ ಎಂದರ್ಥ. ಇದನ್ನು ಒಮ್ಮೆ ಪ್ರಯೋಗಿಸಿ
ಸಹ ನೋಡಿ. ಬೋಧಿಸಲು ಗೆಳೆಯರಿಲ್ಲ, ಕುಟುಂಬದಲ್ಲಿ ಯಾರೂ ಇಲ್ಲ ಎಂದಲ್ಲಿ ನೀವೇ ಇತರರಿಗೆ
ಟೀಚ್‌ಮಾಡುತ್ತಿರುವ ಹಾಗೆ ಕಲ್ಪಿಸಿಕೊಳ್ಳಿ.

ಓದಲು ನಿರ್ದಿಷ್ಟ ಸ್ಥಳ ನಿಗದಿಪಡಿಸಿಕೊಳ್ಳಿ


ನೀವು ಓದುವ ಸ್ಥಳ ಹೇಗಿರಬೇಕು, ಅದು ಮನೆಯಲ್ಲಿ ಯಾವುದಾಗಿರಬೇಕು
ಎಂದು ನಿಗದಿಗೊಳಿಸಿಕೊಳ್ಳಿ. ಆ ಸ್ಥಳ ಎಂದ ತಕ್ಷಣ ನಿಮ್ಮ ಮನಸ್ಸಿನಲ್ಲಿ ಓದು
ಎಂದು ಬರಬೇಕು. ಸಾಮಾನ್ಯವಾಗಿ ಅದು ನೀವು ಮಲಗುವ ಅಥವಾ
ವಿಶ್ರಮಿಸುವ ಸ್ಥಳವಾಗದಿರಲಿ. ಮನೆಯಲ್ಲಿ ಉತ್ತಮ ಸ್ಥಳ ಸಿಗದಿದ್ದಲ್ಲಿ ಕಾಫಿ
ಶಾಫ್‌, ಗ್ರಂಥಾಲಯ, ಅಥವಾ ಯಾವುದೋ ಶಾಂತ ವಾತಾವರಣದ
ಪರಿಸರ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಅದು ನಿಮ್ಮ ಪ್ರಾಡಕ್ಟಿವಿಟಿಗೆ
ಉತ್ತೇಜನ ನೀಡುವಂತಿರಲಿ.

ನೋಟ್ಸ್‌ಮಾಡುವ ಟೆಕ್ನಿಕ್‌ಬಳಸಿ
ಒಬ್ಬೊಬ್ಬರು ಒಂದೊಂದು ರೀತಿ ಓದುತ್ತಾರೆ. ಒಂದೊಂದು ರೀತಿ
ಕಲಿಯುತ್ತಾರೆ. ಪ್ರತಿಯೊಬ್ಬರು ಸಹ ಅವರಿಗೆ ಅವರೇ ಯಾವ ರೀತಿ ಓದಿದ್ರೆ
ನಾನು ಹೆಚ್ಚು ತಿಳಿದುಕೊಳ್ಳುತ್ತೇನೆ ಎಂದು ಅರಿತಿರಬೇಕು.
ಬಹುಸಂಖ್ಯಾತರಿಗೆ ಉಪಯುಕ್ತವಾಗುವ ಕಲಿಕೆಯ ಒಂದು ಉತ್ತಮ ವಿಧಾನ
ಎಂದರೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ನೋಟ್ಸ್‌ ಪ್ರಿಪೇರ್‌
ಮಾಡಿಕೊಳ್ಳುವುದು. ಹಾಗೂ ಉಪನ್ಯಾಸಕರು ಬೋಧಿಸುವ ಸಂದರ್ಭದಲ್ಲಿ
ಶಾರ್ಟ್‌ ನೋಟ್ಸ್‌, ಪಾಯಿಂಟ್ಸ್‌ ಮಾಡಿಕೊಳ್ಳುವುದು ಕಲಿಕೆಗೆ ತುಂಬಾ
ಸಹಾಯಕವಾಗುತ್ತದೆ.

ಹಿನ್ನೆಲೆಯ ಕ್ಲಾಸಿಕಲ್ ಮ್ಯೂಸಿಕ್


ಹಾಡಿನ ಜೊತೆಗೆ ಮ್ಯೂಸಿಕ್ ಇದ್ದರೆ ಓದಲು ಹೆಚ್ಚು ಗಮನಹರಿಸಲು
ಸಾಧ್ಯವಾಗದಿರಬಹುದು. ಆದರೆ ಓದುವ ವೇಳೆ ಶಾಂತವಾದ ಕ್ಲಾಸಿಕಲ್
ಮ್ಯೂಸಿಕ್‌ಕೇಳುತ್ತಿದ್ದರೆ ಬ್ರೈನ್‌ಬೂಸ್ಟರ್‌ಎಂದರೆ ತಪ್ಪಾಗಲಾರದು. ಒಮ್ಮೆ
ಪ್ರಯತ್ನಿಸಿ ನೋಡಿ. ಅನುಕೂಲ ಎಂದರೆ ಮುಂದುವರೆಸಿ.

ಉದ್ದೇಶಪೂರಕವಾಗಿ ಓದಿರಿ
ಯಾವುದೇ ಉದ್ದೇಶ ಇಲ್ಲದೇ ಸುಮ್ಮನೇ ಓದಬೇಡಿ. ನೀವು ಓದುವ
ಸೋರ್ಸ್‌ನಿಂದ ನಿಮ್ಮ ಉಪನ್ಯಾಸಕರಿಗೆ ಏನು ಬೇಕು, ಪರೀಕ್ಷೆಗೆ ಯಾವ
ರೀತಿ ಅನುಕೂಲವಾಗಲಿದೆ, ಅಥವಾ ಇತರೆ ಯಾವೆಲ್ಲಾ ಅನುಕೂಲಗಳು,
ತಿಳುವಳಿಕೆ ಆ ಮಾಹಿತಿಯಿಂದ ತಿಳಿಯುತ್ತದೆ ಎಂದು ಅರಿತು ಓದುವುದು
ಉತ್ತಮ.

ಪ್ರತಿ ಟಾಪಿಕ್‌ಬೋಧಿಸಿದ ನಂತರ ಓದುವ ಹವ್ಯಾಸ ಇರಲಿ


ಪರೀಕ್ಷೆ ನಾಳೆ ಇರುವಾಗ ಓದಿ ಎಲ್ಲವನ್ನು ಬರೆಯುತ್ತೇನೆ ಎಂಬ ಒಣಜಂಬ
ಮೈಗೂಡಿಸಿಕೊಳ್ಳದಿರಿ. ಉಪನ್ಯಾಸಕರು ಬೋಧಿಸಿದ ನಂತರ ಪ್ರತಿದಿನ ಓದಿಕೊಳ್ಳಿ.
ನಿಮ್ಮ ಸಂಶಯಗಳಿಗೆ ಆಗಲೇ ಉತ್ತರ ಸಿಗುತ್ತದೆ. ಅಲ್ಲದೇ ಹೆಚ್ಚು ಪ್ರಶ್ನೆಗಳಿಗೆ ಉತ್ತರ
ಕಂಡುಕೊಳ್ಳಬಹುದು. ಹೆಚ್ಚು ಕಲಿಯಲು ಸಹ ಈ ರೀತಿಯ ಓದು ಅನುಕೂಲ. ಪರೀಕ್ಷೆ
ನಾಳೆ ಇರುವಾಗ ಯಾವುದೇ ಒತ್ತಡವಿಲ್ಲದೇ ಪರೀಕ್ಷೆ ಬರೆಯಬಹುದು.

ಸುಲಭ ಟಾಪಿಕ್‌ಗಳಿಂದ ಓದು ಆರಂಭಿಸಿ


ನಿಮಗೆ ಓದಲು ಮನಸ್ಸು ಇಲ್ಲದಿರುವಾಗ ಸುಲಭವಾಗಿರುವ ವಿಷಯಗಳನ್ನು
ಓದುವ ಮೂಲಕ ಆರಂಭಿಸಿ. ನಂತರ ಓದುವ ಉತ್ಸುಕತೆ ನಿಮಗೆ ಹೆಚ್ಚುತ್ತದೆ.
ದೀರ್ಘಕಾಲ ಓದಲು ಮನಸ್ಸು ಹಿಡಿತದಲ್ಲಿರುತ್ತದೆ.
Save Time: ಈ ಕೆಲವು ಅಭ್ಯಾಸಗಳನ್ನು ಬಿಟ್ಟರೆ ನಿಮ್ಮ ಅಮೂಲ್ಯ ಸಮಯ ಹಾಳಾಗದಂತೆ
ತಡೆಯಬಹುದು!
Time management: ಮನುಷ್ಯ ಸೋಮಾರಿಯಾದಷ್ಟು ಆತನಿಗೆ ಮಾಡುವ ಕೆಲಸಗಳ ಮೇಲೆ ಉತ್ಸಾಹವೇ ಇರುವುದಿಲ್ಲ.. ಹೀಗಾಗಿ ಸೋಮಾರಿತನ ಹಾಗೂ
ಆಲಸ್ಯತನವನ್ನ ಹೊರಗೆ ಬಿಟ್ಟಾಗ, ನಾವು ಯಾವ ಕೆಲಸವನ್ನು ಮಾಡಬೇಕು ಎಂದು ಕೊಂಡಿರುತ್ತೇವೆ ಆ ಕೆಲಸವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯ

ಸಾಂದರ್ಭಿಕ ಚಿತ್ರ

 NEWS18 KANNADA

 LAST UPDATED : DECEMBER 16, 2021, 12:46 IST

 SHARE THIS:




ಪ್ರತಿಯೊಬ್ಬರಿಗೂ ಜೀವನದಲ್ಲಿ (Life) ಸಮಯ (Time) ನಿರ್ವಹಣೆ ಎಂಬುದು ಬಹಳ ಮುಖ್ಯವಾದದ್ದು.. ಕೆಲವೊಮ್ಮೆ ಎಷ್ಟು ಬೇಗ ಸಮಯ ಮುಗಿದು ಹೋಯಿತು ಎನ್ನುವ ಅನುಭವ
(Experience) ಬರುತ್ತದೆ.. ಇನ್ನು ಕೆಲವೊಮ್ಮೆ ಸಮಯದ ಜೊತೆ ಇನ್ನು ಮುಂದೆ ಸಾಗುವುದು ಬಹುತೇಕರಿಗೆ ಕಷ್ಟವಾಗಿರುತ್ತದೆ.. ಇನ್ನು ಕೆಲವರು ಅಂದುಕೊಂಡ ಕೆಲಸವನ್ನು ಸರಿಯಾದ
ಸಮಯಕ್ಕೆ ಮಾಡಲಾಗದೇ ಸಮಯವನ್ನೇ ದೂಷಿಸುತ್ತಾರೆ. ಆದರೆ ಹೇಗೆ ಸಮಯ ಮುಂದೆ ಹೋಗುತ್ತಿದೆ ಎಂದು ನಾವು ಅಂದುಕೊಳ್ಳುತ್ತಾ ಕೂರುವ ಬದಲು ಇರುವ ಸಮಯದಲ್ಲಿ ನಮ್ಮ ಕೆಲಸವನ್ನ
ಮಾಡಿಕೊಳ್ಳುವುದು ಸೂಕ್ತ.. ಕೆಲವರು ದಿನಪೂರ್ತಿ ಹರಟೆ (Time Waste) ಹೊಡೆದು ಕೊನೆಗಳಿಗೆಯಲ್ಲಿ ಕೆಲಸ ಮಾಡಲು ಶುರು ಮಾಡಿ, ಅಯ್ಯೋ ನಮಗೆ ಸಮಯವೇ ಸಾಲುತಿಲ್ಲ ಇಷ್ಟು ಬೇಗ
ಟೈಮ್ ಮುಗಿದು ಹೋಯಿತು ಎಂದು ಕೊರಗಲು ಶುರುಮಾಡುತ್ತಾರೆ..ಇದು ಅವರದೇ ತಪ್ಪು ಆಗಿರುತ್ತದೆ.. ಹೀಗಾಗಿ ನೀವು ನಿಮ್ಮ ಜೀವನದಲ್ಲಿ ಸರಿಯಾಗಿ ಟೈಮ್ ಮ್ಯಾನೇಜ್ಮೆಂಟ್ (Time
Management) ಮಾಡುವುದು ಬಹಳ ಮುಖ್ಯ.. ಹೀಗಾಗಿ ನೀವು ಎಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದೀರಾ ಎಂಬುದನ್ನು ಅರಿತುಕೊಳ್ಳುವುದು ಅಷ್ಟೇ ಮುಖ್ಯ.. ಅಲ್ಲದೇ ನೀವು ನಾವು ಹೇಳುವುದನ್ನು
ಸರಿಯಾಗಿ ಪಾಲನೆ ಮಾಡಿದರೆ ನಿಮ್ಮ ಸಮಯವನ್ನು ಉಳಿತಾಯ ಮಾಡಿಕೊಳ್ಳಬಹುದು..

1) ಆಲಸ್ಯ: ಮನುಷ್ಯ ಸೋಮಾರಿಯಾದಷ್ಟು ಆತನಿಗೆ ಮಾಡುವ ಕೆಲಸಗಳ ಮೇಲೆ ಉತ್ಸಾಹವೇ ಇರುವುದಿಲ್ಲ.. ಹೀಗಾಗಿ ಸೋಮಾರಿತನ ಹಾಗೂ ಆಲಸ್ಯತನವನ್ನ ಹೊರಗೆ ಬಿಟ್ಟಾಗ, ನಾವು ಯಾವ
ಕೆಲಸವನ್ನು ಮಾಡಬೇಕು ಎಂದು ಕೊಂಡಿರುತ್ತೇವೆ ಆ ಕೆಲಸವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯ.. ಕೆಲವರು ಕೆಲಸದ ಅವಧಿ ಮೀರಿ ಹೋದರೂ ಸಹ, ಕೆಲಸವನ್ನ
ಪೂರ್ಣಗೊಳಿಸದೆ ಇಲ್ಲಸಲ್ಲದ ಒತ್ತಡಗಳನ್ನು ತಮ್ಮ ಮೈಮೇಲೆ ಮಾಡಿಕೊಳ್ಳುತ್ತಾರೆ.. ಇದಕ್ಕೆಲ್ಲಾ ಕಾರಣ ನಮ್ಮ ಬಳಿ ಇನ್ನೂ ಸಮಯವಿದೆ ಎನ್ನುವ ಭಾವನೆ.. ಹೀಗಾಗಿ ಆಲಸ್ಯದ ಭಾವ ಬಿಡುವುದು
ಮುಖ್ಯ.

ಇದನ್ನೂ ಓದಿ: ಕೆಲಸದ ಒತ್ತಡದಿಂದ ಹೈರಾಣಾಗಿ ಹೋಗಿದ್ದೀರಾ? ಹೀಗೆ ಮಾಡಿ, ಬೇಗ ರಿಲ್ಯಾಕ್ಸ್ ಆಗಬಹುದು

2) ಬೇರೊಬ್ಬರ ಕೆಲಸ ಮಾಡುವುದು: ನಮ್ಮ ಕೆಲಸವೇ ಸಂಪೂರ್ಣವಾಗಿ ಮುಗಿದಿರುವುದಿಲ್ಲ.. ಅಂತದ್ರಲ್ಲಿ ಇನ್ನೊಬ್ಬರ ಕೆಲಸ ಮಾಡಲು ಮುಂದಾದಾಗ ಸಮಯ ವ್ಯರ್ಥವಾಗುತ್ತದೆ.. ಹೀಗಾಗಿ
ಮೊದಲು ನಮ್ಮ ಕೆಲಸವನ್ನು ಮಾಡಿಕೊಂಡು ಸಮಯ ಉಳಿದರೆ ಇನ್ನೊಬ್ಬರ ಕೆಲಸಕ್ಕೆ ಸಹಾಯ ಮಾಡುವುದು ಸೂಕ್ತ..
3) ಸೋಶಿಯಲ್ ಮೀಡಿಯಾ: ಇತ್ತೀಚಿನ ದಿನಗಳಲ್ಲಿ ಕಾಲಹರಣ ಮಾಡಲು ಉತ್ತಮ ವೇದಿಕೆ ಅಂದರೆ ಅದು ಸೋಶಿಯಲ್ ಮೀಡಿಯಾ.. ಸೋಷಿಯಲ್ ಮೀಡಿಯಾದ ಹುಚ್ಚು ಅದು ಎಷ್ಟರಮಟ್ಟಿಗೆ
ಆವರಿಸಿಕೊಂಡಿರುತ್ತದೆ ಅಂದರೆ ಜನರು ತಾವು ಮಾಡುತ್ತಿರುವ ಕೆಲಸಗಳನ್ನು ಮರೆತು ಸೋಶಿಯಲ್ ಮೀಡಿಯಾದಲ್ಲಿ ಮುಳುಗಿ ಹೋಗಿ ಬಿಡುತ್ತಾರೆ.. ಇದರಿಂದ ಅಂದುಕೊಂಡ ಕೆಲಸ ಸರಿಯಾದ
ಸಮಯಕ್ಕೆ ಆಗುವುದಿಲ್ಲ.. ಹೀಗಾಗಿ ಸಾಧ್ಯವಾದಷ್ಟು ಸೋಶಿಯಲ್ ಮೀಡಿಯಾದಿಂದ ದೂರವಿರುವುದು ಉತ್ತಮ.
PROMOTED CONTENT

By 

Tips to Handle the Volatility With This Bear Market Trading Guide.Bybit Learn

Electricity ka bill hai Bachana toh Luminous Solar hi laganaLuminous India

4) ಅನಗತ್ಯ ಮಾತುಕಥೆ: ನಮ್ಮ ಕೆಲಸ ಕೆಲಸ ಮಾಡುವುದಕ್ಕಿಂತ ಬೇರೊಬ್ಬರೊಂದಿಗೆ ಅನಗತ್ಯವಾಗಿ ಮಾತು ಕಥೆಯಲ್ಲಿ ತೊಡಗಿಕೊಳ್ಳುವುದು, ನಾವು ಮಾಡುವ ಕೆಲಸದ ಮೇಲೆ ಪರಿಣಾಮ
ಬೀರಲಿದೆ.. ನಾವು ಅನಗತ್ಯವಾಗಿ ಅವರೊಂದಿಗೆ ಸಂವಹನ ನಡೆಸುತ್ತಿದ್ದೇವೆ ಎಂದು ತಿಳಿದಿದ್ದರೂ ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಚರ್ಚಿಸುತ್ತಿರುವುದರಿಂದ ನಾವು ಅಂದುಕೊಂಡ ಕೆಲಸಗಳು
ನಿಗದಿತ ಸಮಯಕ್ಕೆ ಆಗುವುದಿಲ್ಲ..

ಇದನ್ನೂ ಓದಿ: ಮೂಲಂಗಿ ಪರೋಟ ಎಷ್ಟು ರುಚಿಕರ ಗೊತ್ತಾ? ನೀವೂ ಟ್ರೈ ಮಾಡಿ

5) ವಸ್ತುಗಳನ್ನು ಅಸ್ತವ್ಯಸ್ತವಾಗಿ ಇಡುವುದು: ಒಂದು ವಸ್ತುವನ್ನು ತೆಗೆದುಕೊಂಡು ಬಳಸಿದರೆ ಮತ್ತು ಅದೇ ವಸ್ತುವನ್ನು ಅದೇ ಜಾಗದಲ್ಲಿ ಇಡುವುದು ಸೂಕ್ತ..ಇಲ್ಲದಿದ್ದರೆ ನಮಗೆ ಬೇಕಾದಾಗ ವಸ್ತುವನ್ನು
ಹುಡುಕುವುದರಲ್ಲಿಯೇ ನಾವು ಸಮಯ ವ್ಯರ್ಥ ಮಾಡಬಹುದು..
ಈಗ ಪರೀಕ್ಷೆಯ ಸಮಯ. ಹೀಗಾಗಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕಾಗಿ
ಸಮಯ ನಿರ್ವಹಣೆ ಮಾಡುವುದು ತುಂಬಾ ಕಷ್ಟ ಎಂದೆನಿಸಬಹುದು.
ಅದಕ್ಕಾಗಿ ಇಲ್ಲಿದೆ ಒಂದಿಷ್ಟು ಸಲಹೆ.
 

ಈಗ ಪರೀಕ್ಷೆಯ ಸಮಯ. ಹೀಗಾಗಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕಾಗಿ ಸಮಯ ನಿರ್ವಹಣೆ ಮಾಡುವುದು ತುಂಬಾ ಕಷ್ಟ ಎಂದೆನಿಸಬಹುದು. ಅದಕ್ಕಾಗಿ ಇಲ್ಲಿದೆ
ಒಂದಿಷ್ಟು ಸಲಹೆ.

 ಟಾಪ್‌ಸೆಲ್ಲಿಂಗ್‌ಇಲೆಕ್ಟ್ರಾನಿಕ್ಸ್‌ವಸ್ತುಗಳ ಮೇಲೆ ಶೇ.50 ರಿಯಾಯಿತಿ


- ಕೆಲವರಿಗೆ ರಾತ್ರಿ ಓದುವ ಹವ್ಯಾಸ, ಇನ್ನು ಕೆಲವರಿಗೆ ಬೆಳಗ್ಗೆ ಬೇಗನೆ ಎದ್ದು ಓದುವ ಅಭ್ಯಾಸ. ಆದ್ದರಿಂದ ನಿಮಗೆ ಯಾವುದು ಸೂಕ್ತ ಎನಿಸುತ್ತದೆಯೋ ಅದೇ
ಹೊತ್ತಿನಲ್ಲಿ ಓದುವುದು ಉತ್ತಮ. ಓದುತ್ತಾ ನಿದ್ರೆ ಬರುವಂತಾದರೆ ಆಗ ಪ್ರಾಕ್ಟಿಕಲ್‌ಗಳ ಬಗ್ಗೆ ಗಮನ ಹರಿಸಿ. ಇದರಿಂದ ಮೆದುಳು ಮತ್ತೆ ಸಹಜ ಸ್ಥಿತಿಗೆ ಬರಲು
ಸಾಧ್ಯವಾಗಿ, ಮುಂದಿನ ಓದಿನತ್ತ ಏಕಾಗ್ರತೆ ಸಾಧಿಸಲು ನೆರವಾಗುತ್ತದೆ.

- ಪೂರ್ವ ನಿರ್ಧಾರಿತ ಜಾಗ ಮತ್ತು ಸಮಯ ನಿಮ್ಮನ್ನು ಸುಲಭವಾಗಿ ಓದುವ ಮೂಡ್‌ನತ್ತ ಸಾಗಿಸುತ್ತದೆ. ಒಂದು ವಾರ ಮೊದಲೇ ಅಂತಹ ಜಾಗ ಮತ್ತು
ಸಮಯವನ್ನು ನಿರ್ಧರಿಸಿಕೊಳ್ಳಬೇಕು. ಆ ಪ್ರದೇಶ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದಲ್ಲದೆ, ಓದಿನಲ್ಲಿ ತಲ್ಲೀನತೆ ಸಾಧಿಸಲು ನೆರವಾಗುತ್ದೆ.
- ಪ್ರತಿ ಪರೀಕ್ಷೆಯ ಪ್ರಾಮುಖ್ಯತೆಯನ್ನು ಗಮನದಲ್ಲಿಕೊಳ್ಳಿ. ಬಹು ಮುಖ್ಯವಾದ ವಿಷಯಗಳ ಓದು ಮೊದಲಾಗಿರಲಿ. ಬಳಿಕ ಉಳಿದ ವಿಷಯದ ಬಗ್ಗೆ ಗಮನ ಹರಿಸಿ.

- ಪ್ರತಿ ಬಾರಿ ಓದುವಾಗಲೂ ಮೊದಲ ಸುತ್ತಿನಲ್ಲಿ 50 ನಿಮಿಷಗಳಿಗಿಂತ ಹೆಚ್ಚು ಕಾಲ ಅಭ್ಯಾಸ ಮಾಡುತ್ತಾ ಇರಬಾರದು. ಈ ನಿರ್ದಿಷ್ಟ ಅವಧಿಯ ಬಳಿಕ 10 ನಿಮಿಷ
ವಿರಾಮ ತೆಗೆದುಕೊಳ್ಳಬೇಕು. ವಾಕಿಂಗ್, ಸ್ನಾನ, ಹಣ್ಣು-ಹಂಪಲು ತಿನ್ನುವುದು ಇತ್ಯಾದಿಗೆ ಆ ಸಮಯ ಮೀಸಲಾಗಿಡಬೇಕು.

You might also like