You are on page 1of 26

ಕ್ರಮ ವಿಷಯ ಪುಟ ಸಂಖ್ಯೆ

ಸಂಖ್ಯೆ

1 ಕಲಿಕೆ ಮತ್ತು ಬೋಧನೆಯಲ್ಲಿ ಭಾಷಾ ಸಮಸ್ಯೆ

2 ಸಂಬಂಧಿತ ಸಾಹಿತ್ಯಾವಲೋಕನ

3 ಸಂಶೋಧನಾ ವಿಧಾನ

4 ದತ್ತಾಂಶಗಳ ವಿಶ್ಲೇಷಣೆ ಮತ್ತು ಅರ್ಥೈಸುವಿಕೆ

5 ಸಾರಾಂಶ ಮತ್ತು ಉಪಸಂಹಾರ


ಅಧ್ಯಾಯ :೧. ಕಲಿಕೆ ಮತ್ತು ಬೋಧನೆಯಲ್ಲಿ ಭಾಷಾ ಸಮಸ್ಯೆ

ಪೀಠಿಕೆ

ಆದಿ ಮಾನವ ಆಧುನಿಕ ಮಾನವನಾದ ಬಗೆ, ಅದೇ ರೀತಿ ಅನಾಗರಿಕ ಮಾನವ ನಾಗರಿಕನಾದ
ಬಗೆಯನ್ನು ಎಲ್ಲರೂ ಅರಿತಿರುವರು. ಅನಾಗರಿಕ ಮಾನವ ಪ್ರಾರಂಭದಲ್ಲಿ ಉಡಲು ಮರದ ತೊಗಟೆ,
ತಿನ್ನಲು ಗೆಡ್ಡೆಗೆಣಸು, ವಾಸಿಸಲು ಮರದ ಪೊಟರೆ ಇತ್ಯಾದಿಗಳನ್ನು ಬಳಸುತ್ತಿದ್ದನು. ಆದರೆ ಒಬ್ಬರು
ಮತ್ತೊಬ್ಬರ ಜೊತೆ ವಿಷಯ, ಭಾವನೆಯನ್ನು ಹಂಚಿಕೊಳ್ಳಲು ಯಾವುದೇ ಮಾಧ್ಯಮವಿರಲಿಲ್ಲ. ಅವರೇ
ಕಂಡುಕೊಂಡಂತೆ ಕೆಲ ವಿಚಾರಗಳಿಗೆ ಕೂಗುವುದು, ಚೀರಾಡುವುದು, ನೆಗೆದಾಡುವುದು ಇತ್ಯಾದಿಗಳನ್ನು
ಬಳಸಿ ತಮ್ಮ ನೋವು-ನಲಿವುಗಳನ್ನು ಈ ಮೂಲಕ ಹಂಚಿಕೊಳ್ಳುತ್ತಿದ್ದರು. ಕಾಲ ಸರಿದಂತೆ ಅವರು ಕೆಲ
ಸಂಜ್ಮೆಗಳ ಮೂಲಕ ತಮ್ಮ ಬೇಕು ಬೇಡಗಳನ್ನು ಪೂರೈಸಿಕೊಳ್ಳತೊಡಗಿದರು. ಹೀಗೆ ಆದಿ ಮಾನವನ
ಬುದ್ಧಿ ವಿಕಾಸಗೊಂಡ ಹಾಗೆ ಆತನ ನಡೆ, ನುಡಿ, ಆಚಾರ, ವಿಚಾರಗಳಲ್ಲಿ ತೀವ್ರತರ
ಬದಲಾವಣೆಗಳಾದವು. ಆರ೦ಭದಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಕಷ್ಟಪಡುತ್ತಿದ್ದ ಮಾನವ
ನಾಗರಿಕನಾದಂತೆಲ್ಲಾ ಭಾವನೆಗಳನ್ನು, ಆಲೋಚನೆಗಳನ್ನು ಅಭಿಪ್ರಾಯಗಳನ್ನು ವಿನಿಮಯ
ಮಾಡಿಕೊಳ್ಳಲು ಭಾಷೆಯನ್ನು ಬಳಕೆ ಮಾಡಲು ಪ್ರಾರಂಭಿಸಿದನು.

ಪ್ರತಿನಿತ್ಯ ಮಾನವ ಬಿಟ್ಟು ಬಿಡದೆ ಆಹಾರವನ್ನು ಹೇಗೆ ಸೇವಿಸುವನೋ ಹಾಗೆಯೇ ಭಾಷೆಯನ್ನು


ಸಹ ಬಳಕೆ ಮಾಡುವನು. ಭಾಷೆ ಮಾನವನನ್ನು ಪ್ರಬುದ್ಧನನ್ನಾಗಿಸುವುದಲ್ಲದೆ ಆತನ ವ್ಯಕ್ತಿತ್ವಕ್ಕೆ ಒ೦ದು
ಮೆರುಗು ತರುವುದು. ಹೀಗೆ ಏನೆಲ್ಲಾ ವೈಶಿಷ್ಟ್ಯತೆಯನ್ನು ಪಡೆದಿರುವ ಭಾಷೆಯಲ್ಲಿ ಸಮಸ್ಯೆಗಳು
ಉಂಟಾದರೆ ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಗಳು ಸಮಸ್ಯೆಗೆ ಈಡಾಗಬೇಕಾಗುತ್ತದೆ.

೧.೧ ಅರ್ಥ
“ಭಾಷೆ' ಎಂಬ ಪದವು ಸಂಸ್ಕೃತದ “ಭಾಷ್‌' ಎಂಬ ಧಾತುವಿನಿಂದ ಬಂದಿದೆ. “ಭಾಷ್‌”
ಎಂದರೆ "ಮಾತನಾಡು', “ಹೇಳು', “ಉಚ್ಚರಿಸು' ಎಂಬರ್ಥ ಬರುವುದು.

“ಭಾಷೆ' ಎಂಬುದಕ್ಕೆ ಸ೦ವಾದಿಯಾಗಿ ಇಂಗ್ಲಿಷಿನಲ್ಲಿ language ಎನ್ನುವರು. language ಎಂಬ


ಇಂಗ್ಲಿಷ್‌ಪದ ಲ್ಯಾಟಿನ್‌ಭಾಷೆಯ Lingua ಎ೦ಬ ಪದದಿಂದ ಬಂದುದಾಗಿದೆ.Lingua  ಎ೦ದರೆ ನಾಲಿಗೆ
ಎಂದರ್ಥ. "ಆಲೋಚನೆಗಳು, ಭಾವನೆಗಳು, ನಾಲಿಗೆಯ ಮುಖಾಂತರ ಉಚ್ಚರಿಸಲ್ಪಟ್ಟು ಅವು ಮಾತಿನ
ರೂಪದಲ್ಲಿ ಹೊರ ಬರುವುದನ್ನೇ ಭಾಷೆ' ಎಂದು ಕರೆಯುವರು.

ವ್ಯಕ್ತಿ ತನ್ನ ಆಲೋಚನೆ, ಭಾವನೆ, ಅಭಿಪ್ರಾಯ ಇನ್ನು ಮುಂತಾದವುಗಳನ್ನು ಧ್ವನಿ ಸಂಕೇತಗಳ


ಮೂಲಕ ಅಭಿವ್ಯಕ್ತಿಪಡಿಸುವುದೇ ಭಾಷೆ ಎಂದು ಸಾಮಾನ್ಯ ಅರ್ಥದಲ್ಲಿ ಹೇಳಬಹುದು.

ವ್ಯಾಖೈಗಳು

ಬ್ಲಾಕ್‌ಮತ್ತು ಟ್ರಾಗರ್‌.: "ಒಂದು ಸಾಮಾಜಿಕ ಸಮೂಹ ಪರಸ್ಪರ ಸಹಕಾರಕ್ಕಾಗಿ ಬಳಸುವ ಧ್ವನಿ


ಸ೦ಕೇತಗಳ ವ್ಯವಸ್ಥೆಯೇ ಭಾಷೆ”.

ಪರ್ಡಿನೆಂಡ್‌ಡಿ ಸಸೂರ್‌: “ಮನುಷ್ಯನು ತನ್ನ ಭಾವನೆಗಳನ್ನು ಅಭಿವ್ಯಕ್ತಿಪಡಿಸಲು ರೂಪಿಸಿಕೊಂಡಿರುವ


ಧ್ದನಿ ಸಂಕೇತಗಳೇ ಭಾಷೆ.

ಸ್ವರೂಪ :

1. ಭಾಷೆ ಒಂದು ವ್ಯವಸ್ಥೆ.

2. ಭಾಷೆ ಸಂಕೇತಗಳ ವ್ಯವಸ್ಥೆ.

3. ಭಾಷೆ ಆನುಕರಣಾತ್ಮಕವಾದುದು.

4. ಭಾಷೆ ನಿತ್ಯ ಪರಿವರ್ತನಶೀಲವಾದುದು.

5. ಭಾಷೆ ದ್ದನಿ ಸಂಕೇತಗಳ ಯಾದೃಚ್ಛಿಕ ವ್ಯವಸ್ಥೆಯಾಗಿದೆ.

6. ಭಾಷೆಯು ತನ್ನದೇ ಆದ ಭೌಗೋಳಿಕ ಎಲ್ಲೆಯನ್ನು ಒಳಗೊಂಡಿರುವುದು.

7. ಭಾಷೆ ಒಂದು ಅಭಿವ್ಯಕ್ತಿ ಸಾಧನ.

8. ಭಾಷೆ ದೈವದತ್ತವಾಗಿರದೆ ಮಾನವ ನಿರ್ಮಿತವಾಗಿದೆ. 

೧.೨ ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಯ ಪರಿಕಲ್ಪನೆ

A.ಕಲಿಕಾ ಪರಿಕಲ್ಪನೆ
ಕಲಿಕೆ ಎಂದರೆ ವ್ಯಕ್ತಿಯ ವರ್ತನೆಯಲ್ಲಿ ಬದಲಾವಣೆಗಳನ್ನು ತರುವುದಾಗಿದೆ. ಮಾನವರು ತಮ್ಮ
ಜೀವನ ಪೂರ್ತಿ ಅನೇಕ ಬದಲಾವಣೆಗಳನ್ನು ಹೊಂದುತ್ತಿರುತ್ತಾರೆ.ಈ ರೀತಿಯ ಕಲಿಕೆ ಜ್ಞಾನ, ಕುಶಲತೆ
ಆಸಕ್ತಿ, ನಾನಾ ಬಗೆಯ ಸಾಮರ್ಥ್ಯಗಳು ಮತ್ತು ಅಭಿರುಜಿಗಳಿಗೆ ಸಂಬಂಧಪಟ್ಟಿರಬಹುದು. ಇವುಗಳನ್ನು
ವ್ಯವಸ್ಥಿತ ರೀತಿಯಲಿ ಮಕ್ಕಳಿಗೆ ಒದಗಿಸಿಕೊಡುವುದೇ ಶಿಕ್ಷಣದ ಮುಖ್ಯ ಕರ್ತವ್ಯವಾಗಿರುತ್ತದೆ.
ಆದುದರಿಂದ ಶಿಕ್ಷಣದ ಯಾವುದೇ ಹಂತದಲ್ಲಿ ಕಲಿಕೆ ಮುಖ್ಯವಾಗುತ್ತದೆ. ವಿವಿಧ ಅನುಭವಗಳಿಂದ
ಮಕ್ಕಳು ಕಲಿಯುತ್ತಾರೆ, ಇದರಿಂದ ಅವರ ವರ್ತನೆಯಲ್ಲಿ ಸೂಕ್ತ ಬದಲಾವಣೆಗಳಾಗುತ್ತವೆ, ಇದನ್ನೇ
ಕಲಿಕೆ ಎನ್ನುತ್ತಾರೆ.

"ಕಲಿಕೆ, ಹವ್ಯಾಸಗಳು, ಜ್ಞಾನ ಮತ್ತು ಮನೋಭಾವಗಳ ಗಳಿಕೆಯೇ ಆಗಿದೆ. ಇದು ಹೊಸ


ರೀತಿಯಲ್ಲಿ ಕೆಲಸ ಮಾಡುವುದು, ತಡೆಗಳನ್ನು ನಿವಾರಿಸಿಕೊಳ್ಳುವುದು, ಹೊಸ ಸನ್ನಿವೇಶಗಳಿಗೆ
ಹೊಂದಿಕೊಳ್ಳುವುದು ಇವುಗಳನ್ನು ಒಳಗೊಂಡಿದೆ. ಇದು ವರ್ತನೆಯ ಪ್ರಗತಿಪರ ಬದಲಾವಣೆಯನ್ನು
ಸೂಚಿಸುತ್ತದೆ ಮತ್ತು ವ್ಯಕ್ತಿಗೆ ತನ್ನ ಆಸಕ್ತಿಗಳನ್ನು ಪೂರೈಸಿಕೊಂಡು, ಗುರಿ ಸಾಧಿಸಲು ಸಹಾಯ
ಮಾಡುತ್ತದೆ." -ಕ್ರೋ ಮತ್ತು ಕೋ.

B.ಬೋಧನೆಯ ಪರಿಕಲ್ಪನೆ

ಶೈಕ್ಷಣಿಕ ಪ್ರಕ್ರಿಯೆಯ ಒಂದು ಪ್ರಮುಖವಾದ ಭಾಗ ಬೋಧನೆ. ಬೋಧನೆ ಎಂಬುದು ಮೂರು


ಧ್ರುವಗಳನ್ನು ಹೊಂದಿರುವ ಪ್ರಕ್ರಿಯೆಯಾಗಿದೆ. ಇಲ್ಲಿ ಶಿಕ್ಷಕ, ವಿದ್ಯಾರ್ಥಿ, ಹಾಗೂ ವಿಷಯಗಳು ಪ್ರಮುಖ
ಅಂಶಗಳು ಈ ಮೂರು ಅಂಶಗಳ ನಡುವೆ ಸೌಹಾರ್ದಯುತ ಸಂಬಂಧ ಕಾಣಬಹುದು. ಆದ್ದರಿಂದ
ಬೋಧನೆ ಯನ್ನು ಶಿಕ್ಷಕ, ವಿದ್ಯಾರ್ಥಿ ಹಾಗೂ ವಿಷಯಗಳ ಮಧ್ಯ ಸೌಹಾರ್ದಯುತ ಸಂಬಂಧ ಸ್ಥಾಪಿಸುವ
ಪ್ರಕ್ರಿಯೆ ಎನ್ನಬಹುದು. ಬೋಧನೆ ಶಿಕ್ಷಕ ಹಾಗೂ ವಿದ್ಯಾರ್ಥಿಗಳನ್ನು ಬೋಧಿಸುವ ವಿಷಯದ ಮೂಲಕ
ಸಂಪರ್ಕಿಸುತ್ತದೆ.       

ಬೋಧನೆ ಎಂದರೆ ತರಗತಿ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ವಿಷಯ ಜ್ಞಾನವನ್ನು


ತಲುಪಿಸುವ ಕ್ರಿಯೆಯಾಗಿದೆ. ಇದು ಅಂತಿಮವಾಗಿ ವಿದ್ಯಾರ್ಥಿಗಳಲ್ಲಿ ಜ್ಞಾನ, ಕೌಶಲ ಮತ್ತು
ಮನೋಧೋರಣಗೆಗಳ ಗಳಿಕೆಗೆ ಕಾರಣವಾಗುತ್ತದೆ. ಪೂರ್ವ ನಿರ್ಧುರಿತವಾದ ಗುರಿಗಳನ್ನು ಸಾಧಿಸಲು
ಶಿಕ್ಷಕ, ವಿದ್ಯಾರ್ಥಿ, ತರಗತಿ ವಾತಾವರಣ, ಪಠ್ಯಕ್ರಮ ಇವುಗಳ ಜೊತೆಗೆ ಕೆಲವು ಕಾರಕಗಳು
ಕ್ರಮಬದ್ಧವಾಗಿ ‌ಆಂತರ್‌ಕ್ರಿಯಿಸುವ ಪ್ರಕ್ರಿಯೆಯಾಗಿದೆ.

"ಬೋಧನೆ ಎಂಬುದು ಕಲಿಕೆಯನ್ನು ಉತ್ತೇಜಿಸುವ, ಮಾರ್ಗದರ್ಶಿಸುವ, ನಿರ್ದೇಶಿಸುವ ಮತ್ತು


ಪ್ರೋತ್ಸಾಹಿಸುವ ಪ್ರಕ್ರಿಯೆಯಾಗಿದೆ" -ಬರ್ಟನ್

೧.೩. ತ್ರಿಭಾಷಾ ಸೂತ್ರ

ಭಾರತದಲ್ಲಿ ಅನೇಕ ಭಾಷೆಗಳನ್ನಾಡುವ ಜನರಿದ್ದು, ಅವರಲ್ಲಿ ಒ೦ದು ರೀತಿಯ ಸಮನ್ವಯವನ್ನು


ತರುವ ನಿಟ್ಟಿನಲ್ಲಿ ಹಾಗೂ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿ ಮತ್ತು ಬೆಳವಣಿಗೆಯ ದೃಷ್ಟಿಯಿ೦ದ
1956 ರಲ್ಲಿ ಭಾಷಾವಾರ್ದು ಪ್ರಾಂತ್ಯಗಳನ್ನು ರಚಿಸಿ ಪ್ರಮುಖವಾಗಿ ಒಟ್ಟು 15 ಭಾಷೆಗಳನ್ನು ಭಾರತದ
ಅಧಿಕೃತ ಭಾಷೆಗಳನ್ನಾಗಿ ಗುರುತಿಸಲಾಯಿತು. ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ
ಪರಿಗಣಿಸಲಾಯಿತು. ಭಾರತದಲ್ಲಿನ ವಿವಿಧ ರಾಜ್ಯಗಳಲ್ಲಿ ಏಕರೂಪ ಭಾಷಾನೀತಿ ಇರದ ಕಾರಣ
ಇದನ್ನು ಮನಗಂಡು ಸಾವಿರ ೧೯೮೬ ರಲ್ಲಿ ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ಯು ಒಂದು ಹೊಸ
ಭಾಷಾ ಸೂತ್ರವನ್ನು ರೂಪಿಸಿತು. ಇದಕ್ಕೆ ತ್ರಿಭಾಷಾ ಸೂತ್ರ ಎಂದು ಕರೆಯಲಾಯಿತು.೧೯೬೧ ರಲ್ಲಿ
ಕೇಂದ್ರ ಮಟ್ಟದಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸುದೀರ್ಘ ಚರ್ಚೆ ನಡೆಸಿ
ಅಂತಿಮವಾಗಿ ತ್ರಿಭಾಷಾಸೂತ್ರವನ್ನು ಆದಷ್ಟು ಸರಳೀಕೃತಗೊಳಿಸಿ ಜಾರಿಗೆ ತರಲಾಯಿತು. ಈ
ಸೂತ್ರದನ್ವಯ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯು ಪ್ರಮುಖವಾಗಿ ಮೂರು ಭಾಷೆಗಳನ್ನು
ಕಳೆಯಬೇಕೆಂದು ತೀರ್ಮಾನಿಸಲಾಯಿತು. ಅವುಗಳು ಈ ಮುಂದಿನಂತಿವೆ.

1.ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ

2. ಇಂಗ್ಲಿಷ್‌ಅಥವಾ ಯಾವುದಾದರೊಂದು ಆಧುನಿಕ ಯುರೋಪಿಯನ್‌ಭಾಷೆ

3. ಅ) ಹಿಂದಿ -ಹಿ೦ದಿಯನ್ನು ಮಾತೃಭಾಷೆಯಾಗಿ ಆಡದಿರುವ ಪ್ರದೇಶಗಳಲ್ಲಿ

  ಆ) ಒ೦ದು ಆಧುನಿಕ ಭಾರತೀಯ ಭಾಷೆ-ಹಿ೦ದಿ ಮಾತನಾಡುವ ಪ್ರದೇಶಗಳಲ್ಲಿ

1961 ರಲ್ಲಿ ಮುಖ್ಯಮಂತ್ರಿಗಳ ಸಭೆಯಲ್ಲಿ ಸರಳೀಕೃತಗೊಳಿಸಿದ ತ್ರಿಭಾಷಾ ಸೂತ್ರವನ್ನು ಜಾರಿಗೆ ತಂದ


ಮೇಲೆ ಪನ್ನ 1964-66 ರ ಕೊಠಾರಿ ಶಿಕ್ಷಣ ಆಯೋಗವು ಒಂದು ಸುಧಾರಿತ ತ್ರಿಭಾಷಾ ಸೂತ್ರವನ್ನು
ಶಿಫಾರಸ್ಸು ಮಾಡಿತು. ಇದರನ್ವಯ ಸೆಕೆಂಡರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಈ ಕೆಳಕಾಣಿಸಿದ್ದ
ವಿಷಯಗಳನ್ನು ಕಲಿಯಬೇಕೆ೦ದಿತು. ಅವುಗಳೆಂದರೆ

1.ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ.

2. ಹಿಂದಿ ಅಥವಾ ಜಾರಿಯಲ್ಲಿರುವವರೆಗೆ ಸಹಾಯಕ ಆಡಳಿತ ಭಾಷೆ ಇಂಗ್ಲಿಷ್‌ಮತ್ತು

3(1 ಮತ್ತು (2)ರಲ್ಲಿ ಉಲ್ಲೇಖಿಸಿದ ಮತ್ತು ಶಿಕ್ಷಣ ಮಾಧ್ಯಮವಾಗಿ ಉಪಯೋಗಿಸಿದ ಒಂದು ಆಧುನಿಕ
ಭಾರತೀಯ ಭಾಷೆ ಅಥವಾ ವಿದೇಶಿ ಭಾಷೆ.

ಕೊಠಾರಿ ಶಿಕ್ಷಣ ಆಯೋಗವು (1964-66) ಶಿಕ್ಷಣದ ವಿವಿಧ ಹಂತಗಳಲ್ಲಿ ಈ ಕೆಳಕಾಣಿಸಿದ


ಭಾಷೆಗಳನ್ನು ವಿದ್ಯಾರ್ಥಿಗಳ್ಳ ಕಲಿಯಬೇಕೆಂದಿತು ಅದರ ಪ್ರಕಾರ-

1. ಕೆಳ ಪ್ರಾಥಮಿಕ ಹಂತ : * ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ

2. ಉನ್ನತ ಪ್ರಾಥಮಿಕ ಹಂತ : * ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ. * ಹಿ೦ದಿ ಅಥವಾ ಇಂಗ್ಲಿಷ್‌

3.ಸೆಕೆಂಡರಿ ಹಂತ :
1 ಹಿಂದಿ ಮಾತನಾಡದಿರುವ ಪ್ರದೇಶಗಳಲ್ಲಿ 8) ಹಿಂದಿ ಮಾತನಾಡುವ ಪ್ರದೇಶಗಳಲ್ಲಿ * ಮಾತೃಭಾಷೆ
ಅಥವಾ ಪ್ರಾದೇಶಿಕ ಭಾಷೆ. * ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ * ಇಂಗ್ಲಿಷ್‌
* ಇಂಗ್ಲಿಷ್‌. * ಹಿ೦ದಿ
*ಹಿಂದಿಗೆ ಬದಲಾಗಿ ಒಂದು ಆಧುನಿಕ ಭಾಷೆ

4. +2 ಹಂತ (ಪಿ.ಯು)

ಯಾವುದಾದರೂ ಎರಡು ಭಾಷೆಗಳನ್ನು ಕಲಿಯುವುದು. ಅವುಗಳಲ್ಲಿ ಮಾತ್ಕಭಾಷೆ ಅಥವಾ ಪ್ರಾದೇಶಿಕ


ಭಾಷೆ ಇಂಗ್ಲಿಷ್‌, ಹಿ೦ದಿ ಮತ್ತು ಸಂಸ್ಕೃತ ಒಳಗೊಂಡಿರುವುದು.

ತ್ರಿಭಾಷಾ ಸೂತ್ರವನ್ನು ಅಳವಡಿಸುವಲ್ಲಿನ ತೊಂದರೆಗಳು

1. ಮೂರು ಭಾಷೆಗಳನ್ನು ಮಕ್ಕಳು ಕಲಿಯುವುದರಿಂದ ಹೆಚ್ಚು ಹೊರೆ ಎನಿಸುವುದು.

2. ಮೂರು ಭಾಷೆಗಳನ್ನು ಬೋಧಿಸಲು ಪ್ರತ್ಯೇಕವಾಗಿ ಮೂರು ಜನ ಶಿಕ್ಷಕರನ್ನು ನೇಮಿಸುವುದರಿಂದ


ಆರ್ಥಿಕವಾಗಿ ಹೊರೆಯಾಗುವುದು.

2.ಒಲ್ಲದ ಮನಸ್ಸಿನಿಂದ ಸೂತ್ರದ ಜಾರಿಗೆ ಪ್ರಯತ್ನಿಸುವುದು.

3.ಮೂರು ಭಾಷೆಗಳನ್ನು ಏಕೆ ಕಲಿಯಬೇಕೆ೦ದು ಪೋಷಕರ ನಿಲುವಾಗಿದೆ.

4.ದಕ್ಷಿಣ ಭಾರತದ ಹಿ೦ದಿಯೇತರ ರಾಜ್ಯಗಳು ಹಿಂದಿ ಹೇರಿಕೆಯ ಬಗ್ಗೆ ತಳೆದಿರುವ ಪ್ರಜಾಸತ್ತಾತ್ಮಕ


ನಿಲುವು ಈ ಸೂತಿದ ಜಾರಿಗೆ ತೊಡಕಾಗಿದೆ.

ಆದಾಗ್ಯೂ ತ್ರಿಭಾಷಾ ಸೂತ್ರವನ್ನು ಎಲ್ಲಾ ರಾಜ್ಯಗಳು ಜಾರಿಗೆ ತಂದಿದ್ದರೂ ತಮಿಳುನಾಡಿನಲ್ಲಿ


ಮಾತ್ರ ಇಂದಿಗೂ ದ್ವಿಭಾಷಾ ಸೂತ್ರವನ್ನೇ ಅಳವಡಿಸಿಕೊಂಡಿರುವರು - 1) ಮಾತೃಭಾಷೆ ಅಥವಾ
ಪ್ರಾದೇಶಿಕ ಭಾಷೆ 2) ಇಂಗ್ಲಿಷ್‌. ಹಿಂದಿಯನ್ನು ಆ ರಾಜ್ಯದ ಶಾಲಾ ಮಕ್ಕಳು ಕಲಿಯುತ್ತಿಲ್ಲ. ಇದು ಆ
ರಾಜ್ಯದ ಜನರ ಭಾಷಾಭಿಮಾನವನ್ನು ಎತ್ತಿ ತೋರಿಸುತ್ತದೆ,

೧.೪. ಭಾಷಾ ಸಮಸ್ಯೆ

ಮಾನವನ ಜೀವನದಲ್ಲಿ ಸಂವಹನದ ಅತ್ಯಮೂಲ್ಯ ಸಾಧನವಾಗಿರುವ ಭಾಷೆಯಲ್ಲಿ ನಾವು ಅನೇಕ


ಸಮಸ್ಯೆಗಳನ್ನು ಕಾಣಬಹುದು. ಉದಾಹರಣೆಗೆ ತೊದಲುವಿಕೆ, ಅಸ್ಪಷ್ಟ ಉಚ್ಚಾರಣೆ, ಮಾತು
ಬಾರದಿರುವುದು, ಪದಗಳನ್ನು ನುಂಗುವುದು ಇತ್ಯಾದಿ. ಇಂತಹ ಸಮಸ್ಯೆಗಳು ದಿನನಿತ್ಯದ
ಜೀವನದಲ್ಲಿಯೂ ಸಹ ಸಮಸ್ಯೆಗಳಾಗುತ್ತವೆ ಹಾಗೂ ಕಲಿಕಾ ಮತ್ತು ಬೋಧನಾ ಪ್ರಕ್ರಿಯೆಯಲ್ಲಿಯೂ
ಸಹ ಈ ಭಾಷಾ ಸಮಸ್ಯೆಗಳು ತೊಡಕನ್ನುಂಟು ಮಾಡುತ್ತಿವೆ.

ಕಲಿಕೆಯ ಮೇಲೆ ಭಾಷಾ ಸಮಸ್ಯೆಯ ಪ್ರಭಾವ


 ವಿದ್ಯಾರ್ಥಿಗಳ ಏಕಾಗ್ರತೆಯ ಕೊರತೆಯಿಂದ ಆಲಿಸುವಿಕೆಯಲ್ಲಿ ದೋಷ ಉಂಟಾಗುತ್ತದೆ.
 ವಿದ್ಯಾರ್ಥಿಗಳಲ್ಲಿ ಕಿವುಡುತನ ಕಿವಿಯ ತಮಟೆ ಗಳಲ್ಲಿ ದೋಷವಿರುವುದು ಇತ್ಯಾದಿಗಳಿಂದ
ಬೋಧಿಸುವ ವಿಷಯ ಸ್ಪಷ್ಟವಾಗಿ ಕೇಳದೆ ಪರಿಪೂರ್ಣ ಅರ್ಥಗ್ರಹಿಕೆ ಆಗುವುದಿಲ್ಲ.
 ನಾಲಿಗೆ ಸರಿಯಾಗಿ ಹೊರಗಿರುವುದು, ಹಲ್ಲಿನ ರಚನೆಯ ದೋಷ, ಉಸಿರಾಟದ ಸಮಸ್ಯೆ
ಮುಂತಾದವುಗಳು ವಿದ್ಯಾರ್ಥಿಗಳ ಉಚ್ಚಾರಣೆಯ ಮೇಲೆ ಪ್ರಭಾವ ಬೀರಿ ಕಲಿಕೆಯನ್ನು
ಕುಂಠಿತಗೊಳಿಸುತ್ತವೆ
 ವಿದ್ಯಾರ್ಥಿಗಳ ಶಬ್ದ ಭಂಡಾರದ ಸಮಸ್ಯೆಯು ಕಲಿಕೆಯ ಮೇಲೆ ಪ್ರಭಾವವನ್ನು ಬೀರುತ್ತದೆ.
 ವಿದ್ಯಾರ್ಥಿಗಳ ಶಾಲೆ ಹಾಗೂ ಮನೆಯ ಪರಿಸರಗಳು ಭಾಷೆಯ ಮೇಲೆ ಪ್ರಭಾವವಿರುವುದರಿಂದ
ಕಲಿಕೆ ಪ್ರಭಾವಿತವಾಗುತ್ತದೆ.

ಬೋಧನೆಯ ಮೇಲೆ ಭಾಷಾ ಸಮಸ್ಯೆಯ ಪ್ರಭಾವ

 ಶಿಕ್ಷಕರಲ್ಲಿರುವ ಭಾಷಾ ಸಮಸ್ಯೆಗೆ ಬೋಧನೆ ಪರಿಣಾಮಕಾರಿಯಾಗಿಸುವಲ್ಲಿ ಅಡ್ಡಿಯನ್ನುಂಟು


ಮಾಡುತ್ತದೆ.
 ಶಿಕ್ಷಕರು ಮೆಲುದನಿಯಲ್ಲಿ ಬೋಧಿಸಿದಾಗ ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಆಲಿಸಲು ಸಮಸ್ಯೆ
ಉಂಟಾಗುತ್ತದೆ.
 ಶಿಕ್ಷಕರ ಮಾತುಗಾರಿಕೆ ಯಲ್ಲಿರುವ ದೋಷಗಳು ವಿದ್ಯಾರ್ಥಿಗಳಿಗೆ ಗೊಂದಲವನ್ನುಂಟು
ಮಾಡುತ್ತದೆ.
 ಶಿಕ್ಷಕರ ಉಚ್ಚಾರಣೆಯಲ್ಲಿ ದೋಷ ಇದ್ದರೆ ಅದು ವಿದ್ಯಾರ್ಥಿಗಳ ಉಚ್ಚಾರಣೆಯಲ್ಲಿ ದೋಷವನ್ನು
ಉಂಟುಮಾಡುತ್ತದೆ.
 ಶಿಕ್ಷಕರು ವ್ಯಾಕರಣದಲ್ಲಿ ಉತ್ತಮ ಪರಿಣಿತಿ ಹೊಂದಿದ್ದಲ್ಲಿ ವಿದ್ಯಾರ್ಥಿಗಳಿಗೆ ಭಾಷೆಯನ್ನು
ಸರಿಯಾಗಿ ಬೋಧಿಸಲು ಸಾಧ್ಯವಾಗುವುದಿಲ್ಲ.

೧.೫.ಅಧ್ಯಯನದ ಉದ್ದೇಶ

 ಭಾಷೆಯ ಪ್ರಾಮುಖ್ಯತೆಯನ್ನು ಅರಿಯುವುದು.


 ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮಪಡಿಸಲು ಭಾಷೆಯ ಪಾತ್ರವನ್ನು ತಿಳಿಯುವುದು.
 ಬೋಧನೆ ಹಾಗೂ ಭಾಷೆಯ ನಡುವೆ ಇರುವ ಸಂಬಂಧವನ್ನು ಅರ್ಥೈಸಿಕೊಳ್ಳುವುದು.
 ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಯ ಮೇಲೆ ಭಾಷಾ ಸಮಸ್ಯೆಯ ಪ್ರಭಾವವನ್ನು ಅರಿಯುವುದು.
ಅಧ್ಯಾಯ -2 “ಸಂಬಂಧಿತ ಸಾಹಿತ್ಯದ ಪುನರಾವಲೋಕನ?”

2.1 ಪೀಠಿಕೆ.

2.2 ಸಂಬಂಧಿತ ಸಾಹಿತ್ಯದ ಅರ್ಥ.

2.3 ಸಂಬಂಧಿತ ಸಾಹಿತ್ಯದ ಪುನರಾವಲೋಕನದ ಮಹತ್ವ | 2.4 ಸಂಬಂಧಿತ ಸಾಹಿತ್ಯದ


ಪುನರಾವಲೋಕನ.

ಅಧ್ಯಾಯ - 2 ಸಂಬಂಧಿಸಿದ ಸಾಹಿತ್ಯಾವಲೋಕನ

ಪೀಠಿಕೆ

ಸಾದನೆಯು ಮಾನವನನ್ನು ಪ್ರಗತಿ ಪಥದೆಡೆಗೆ ಕೊಂಡೊಯ್ಯುವ ಪ್ರಮುಖ ಸಾದನವಾಗಿದೆ. ಹಿ೦ದಿನ


ಜ್ಞಾನದ ತಳಹದಿಯು ಮೇಲೆ ವ್ಯಕ್ತಿಗೆ ಹೊಸ ಜ್ಞಾನವನ್ನು ನೀಡುವುದು ಸ೦ಶೋಧನೆಯ
ಕಾರ್ಯವಾಗಿದೆ. ಹೀಗೆ ಹೊಸ ಜ್ಞಾನವನ್ನು ನಿರಂತರವಾಗಿ ಪಡೆಯುವುದರಿಂದ ಜ್ಞಾನದ ಎಲ್ಲಾ
ಮಜಲುಗಳು ವಿಕಸನ ಹೊಂದುತ್ತವೆ. ಯಾವುದೇ ನಿರ್ದಿಷ್ಟ ಕ್ಷೇತ್ರದಲ್ಲಿ/್ಷೇತ್ರಕ್ಕೆ ಸಂಬ೦ಧಿಸಿದಂತೆ.
ಇತರೆ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಕಾರಿಯಾಗಿದೆ. ಆದ್ದರಿಂದ ಸಾಹಿತ್ಯಕ್ಕೆ ಸಂಬಂಧಪಟ್ಟ
ಪುನರಾವಲೋಕನವು ಸ೦ಶೋಧಕನಿಗೆ ಜ್ಞಾನ ಉಗ್ರಾಣವನ್ನು ತೆರೆಯುವ ಒ೦ದು ಬೀಗದ ಕೈ
ಇದ್ದಹಾಗೆ.
2.1. ಸಂಬ೦ಧಿತ ಸಾಹಿತ್ಯಾವಲೋಕನದ ಅರ್ಥ ಮತ್ತು ವ್ಯಾಖ್ಯಾನ.

ಸಾಹಿತ್ಯಾ - “ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಪಡೆದಂತಹ ಜ್ಞಾನವನ್ನು ಸಾಹಿತ್ಯ ಎನ್ನುವರು'.

ಅವಲೋಕನ---"ಪಡೆದ೦ತಹ ಜ್ಞಾನವನ್ನು ವ್ಯವಸ್ಥಿತವಾಗಿ ಸಂಘಟನೆ ಮಾಡುವುದನ್ನು


ಸಾಹಿತ್ಯಾವಲೋಕನ ಎನ್ನುವರು'.
ಸಂಶೋಧನೆಗೆ ಒ೦ದು ವಿಷಯ ವಸ್ತುವನ್ನು ಆಯ್ಕೆ ಮಾಡಿಕೊ೦ಡು ಅಭ್ಯಾಸಕ್ಕೆ ತೊಡಗಿದ ಕೂಡಲೇ,
ಸಂಶೋಧಕ ಆ ವಿಷಯಕ್ಕೆ ಸ೦ಬ೦ಧಿಸಿದ ಆಕರಗಳು ಸಾಮಾಗ್ರಿಗಳು ಎಲ್ಲೆಲ್ಲಿ ಸಿಗುತ್ತವೆ, ಎ೦ಬುದನ್ನು
ಹುಡುಕಿ ಸಂ೦ಗ್ರಹಿಸಬೇಕಾಗುತ್ತದೆ. ಇದನ್ನೆ ಪೂರಕ ಸಾಹಿತ್ಯಾವಲೋಕನ ಎನ್ನುತ್ತಾರೆ.
ಉದಾನಿಯತಕಾಲಿಕಗಳು,ಫ್ರೌಢ ಪ್ರಬಂಧ, ಕಿರು ಪ್ರಬ೦ಧ, ವಿಶ್ವಕೋಶಗಳು, ಇವುಗಳಿಗೆ
ಸಾಹಿತ್ಯವೆಂದು ಕರೆಯಲಾಗಿದೆ ಚಾರ್ಟರ್‌ಬಿ ಗುಡ್‌*ಬಹು ವ್ಯಾಪಕವಾಗಿ ದತ್ತಾಂಶಗಳ ಸ೦ಗ್ರಹಣೆ,
ವಿಶ್ಲೇಷಣೆ, ಫಲಿತಾ೦ಶ, ಸಮಸ್ಯೆಯ ಹಿನ್ನೆಲೆ, ವ್ಯಾಖ್ಯಾನ, ಚರಾ೦ಶಗಳ ಮಹತ್ವತೆ
ಇವೆಲ್ಲವುಗಳನ್ನೊಳಗೊ೦ಡ ಜ್ಞಾನ ಭ೦ಡಾರ ಇದಾಗಿದೆ. ಈ ಎಲ್ಲಾ ಜ್ಞಾನದ ಭಂಡಾರದ ಕೊಠಡಿಯ
ಬೀಗದ ಕೀಲಿ ಇದಾಗಿದೆ. ಸಂಬಂದಿಸಿದ ಸಾಹಿತ್ಯವನ್ನು 2 ರೀತಿಯಾಗಿ ಗುರುತಿಸಬವುದಾಗಿದೆ.” ಗುಡ್‌
ಮತು ಬಾರ ಪಕಾರ "ಒಬ್ಬ ಉತ್ತಮವಾದ ವೈಧ್ಯನು ಹೇಗೆ ಹೋಸ ಹೋಸ ಔಷದಿಗಳನ್ನು ಕಾಹಿಲೆಗೆ
ಕಂಡು ಹಿಡಿಯುತ್ತಾನೋ, ಹಾಗೇ ಒಬ್ಬ ಶಿಕ್ಷಣದ ವಿದ್ಯಾರ್ಥಿ ಸಂಶೋಧಕ ಅಥವಾ ಅನ್ವೇಷಕರು ಸಹ
ಎಲ್ಲಿ, ಯಾವ, ಮಾಹಿತಿ ದೊರಕುತ್ತದೆ ಎ೦ಬುದನ್ನು ಗುರುತಿಸಿ, ಮತ್ತು ಅದನ್ನು
ಉಪಯೋಗಿಸಿಕೊಳ್ಳುವುದರಲ್ಲಿ, ಪ್ರಾವೀಣ್ಯತೆಯನ್ನು ಹೊಂದಿರಬೇಕು ಎಂದಿದ್ದಾರೆ.”

2.2. ಸಂಬಂಧಿಸಿದ ಸಾಹಿತ್ಯಾವಲೋಕನ ಅವಶ್ಯಕತೆ.

ಸಂಶೋಧಕ ದುಂಬಿಯಂತೆ ನೂರಾರುಕಡೆಗಳಿ೦ದ ಅಪಾರ ಸಾಮಗ್ರಿಗಳನ್ನು ಸ೦ಗ್ರಹಿಸಬೇಕಾಗುತ್ತದೆ,


ಇದು ಅನಿವಾರ್ಯವಾದ ಅವಶ್ಯಕವಾದ ಘಟಕವಾಗಿದೆ. ಅಧ್ಯಯನ ವಿಷಯಕ್ಕೆ ಸಂಬಂದಿಸಿದ ಪೂರಕ
ಸಾಹಿತ್ಯ, ಅಥವಾ ಸಾಮಗ್ರಿಯಿಲ್ಲದೆ ಸಂಶೋಧನೆಯ ರಥ ಮುಂದೆ ಸಾಗದು. ಆಯ್ಕೆ ಮಾಡಿದ
ಸಂಶೋಧನ ವಿಷಯದ ಮೇಲೆ ಪ್ರತ್ಯಕ್ಷವಾಗಿಯೋ ಬೆಳಕನ್ನು ಚಲ್ಲುವ೦ಂತಹ ಅನೇಕ ಗ್ರಂಥಗಳು,
ದಾಖಲಾತಿಗಳು, ಕಡತಗಳು ವಿಶ್ವಕೋಶಗಳು, ನಿಘ೦ಟುಗಳು, ನಿಯತಾಕಾಲಿಕಗಳು,
ಗ್ರಂಥಾಲಯದಲ್ಲಿ ಹೇರಳವಾಗಿ ದೊರಕುತ್ತವೆ. ] ಪಾ.ಮಿಕ ಆಕರಗಳು ಸಂಶೋಧಕನು ತಾನೇ ಸ್ವತಃ
ವೀಕ್ಷಿಸಿ ದಾಖಲೆ ಮಾಡಿದ ವರದಿಗೆ ಪ್ರಾಥಮಿಕ ಆಕರಗಳು ಎನ್ನುವರು. 2 ಅನು. ೦ಗಿಕ ಆಕರಗಳು
ಬೇರೊಬ್ಬ ವ್ಯಕ್ತಿಯು ವೀಕ್ಷಿಸಿದ ಘಟನೆಗಳನ್ನು ಸ೦ಶೋಧನಕಾರನಿಗೆ ವರದಿ ಒಪ್ಪಿಸುವುದಕ್ಕೆ
ಅನುಷಂಗಿಕ ಆಕರಗಳು ಎನ್ನುವರು.

2.3 ಸಂಬಂಧಿತ ಸಾಹಿತ್ಯದ ಪುನರಾವಲೋಕನದ ಮಹತ್ವ

*ಒಂದು ಸಮಸ್ಯೆಗೆ ಸಾಕಷ್ಟು ಪರಿಹಾರ, ಸಾಕ್ಷ್ಯಆಧಾರಗಳನ್ನು ಒದಗಿಸುತ್ತಾರೆ.

*ತನ್ನ ಸಮಸ್ಯೆಯ ಬಗ್ಗೆ ಇತಿಮಿತಿಗಳನ್ನು ಹಾಕಿಕೊಳ್ಳುವಲ್ಲಿ ಸಂಶೋಧಕರಿಗೆ ಹೆಚ್ಚು ಸಹಾಯಕವಾಗಿದೆ.

*ಸಂಶೋಧಕರಿಗೆ ಧನಾತ್ಮಕ ಫಲಿತಾಂಶಗಳನ್ನು ಕೊಡುವ ಸಮಸ್ಯೆಯ ಕ್ಷೇತ್ರವನ್ನು ಆಯ್ಕೆ


ಮಾಡಕೊಂಡು ಉತ್ತಮ ಜ್ಞಾನ ಪಡೆಯಲು ಸಹಾಯ ಮಡುವುದು.

* ಪುನರಾವಲೋಕನ ಸಿದ್ದಾಂತಗಳನ್ನು ಪ್ರಾಕಲ್ಪನೆಗಳ.. ವಿವರಣೆಗಳನ್ನು ಒದಗಿಸುವುದರಿಂದ


ಸಂಶೋಧಕರು ತಾನು ಮಾಡುವ ಸಂಶೋಧನೆಯ ವಿಧಾನ ವ್ಯಾಪ್ತಿ ವಿಷಯ ಮತ್ತು ಬೆಳಸುವ ಕ್ರಮಗಳ
ಒಳನೋಟ ಬೀರಲು ಸಹಾಯಕ.

*ಸಂಶೋಧನೆಯ ಯಾವ ವಿಧಾನದ್ದಾಗಿದೆ ಎಂಬುದನ್ನು ಸೂಚಿಸುತ್ತದೆ.

* ಹಿಂದಿನ ಸಂಶೋಧನೆಗಳಿಂದ ಅಗಾಧ ಅನುಭವ ಪಡೆದು ಮತ್ತು ಸೃಜನಶೀಲಾ ಅಲೋಚನೆಗೆ


ಸಹಾಯಕ

*ನಮೂನೆಯಲ್ಲಿ ಆಯ್ಕೆಯಲ್ಲಿ ಸಹಾಯ ಮಾಡುತ್ತದೆ ಹಾಗೂ ಸೂಕ್ತ ವರದಿ ತಯಾರಿಸಲು ಸಹಾಯಕ.

   ಅಧ್ಯಾಯ -3.

                ಸಂಶೋಧನಾ ವಿಧಾನ

3.1. ಪೀಠಿಕೆ.

3.2. ಸಶೋಧನೆಯ ವಿಧಾನ.

3.3. ಪ್ರತಿಚಯನ.

3.4. ದತ್ತಾಂತ ಸಂಗ್ರಹಣೆಗೆ ಬಳಸಿದ ಸಾಧನಗಳು.

3.5. ದತ್ತಾಂಶ ಸಂಗ್ರಹಣೆ.


3.6. ದತ್ತಾಂಶ ಸಂಗ್ರಹಣೆಗೆ ಬಳಸಿದ ಸಂಖ್ಯಾಶಾಸ್ತ್ರದ ತಂತ್ರ.

ಅಧ್ಯಾಯ-3

ಪೀಠಿಕೆ:

ಪ್ರಸ್ತುತ ಅಧ್ಯನದಲ್ಲಿ ದತ್ತಾಂಶ ಸಂಗ್ರಹಣೆಗೆ, ಬಳಸಿದ ಸಾಧನಗಳ ಬಗ್ಗೆ ಪರಿಚಯಿಸಲಾಗಿದೆ.


ಸಂಶೋಧನೆ ಎನ್ನುವುದೊ೦ದು, ನಿದಾನವಾಗಿ ನಡೆಯುವ, ವೈಜ್ಞಾನಿಕ ವಿದಾನ, ಹಾಗು ಯೋಜನಬದ್ಧ
ಪ್ರಕ್ರಿಯೆಯಾಗಿದ್ದು. ಹೊಸ, ಹೊಸ, ಅಂಶಗಳನ್ನು ಕಂಡುಕೊಳ್ಳುವುದಕ್ಕೆ ಇದರ ಮುಖ್ಯ ಉದ್ದೇಶವಾಗಿದೆ.
ಜಾನ್‌ಡಬ್ಲ್ಯೂ ಬೆಸ್ಟ್‌ರವರ ಪ್ರಕಾರ “ಸಂಶೋಧನೆ ಎಂದರೆ, ನಡೆಯಲಿರುವ ಘಟನೆಗಳನ್ನು
ಮುಂದ್ಚಾಗಿ ಊಹಿಸಿಕೊಳ್ಳಲು, ಹಾಗೂ ಸಾಧ್ಯವಾದ ಮಟ್ಟಿಗೆ ನಿಯಂತ್ರಿತ ವರ್ತನೆಗಳ ಕ್ರಮಬದ್ಧ,
ಹಾಗೂ ವಸ್ತುನಿಷ್ಟ ವಿಶ್ಲೇಷಣೆಯಾಗಿದೆ.

3.2.ಸಂತೋಧನಾ ವಿಧಾನ:

ಸ೦ಶೋಧನಾ ಬರಹದಲ್ಲಿ ವಿವರಿಸಬಹುದಾದ ವಿಷಯ ಯಾವ ಮಾದರಿಯೆಂಬುದನ್ನು ಅವಲಂಬಿಸಿ


ಸಂಶೋಧನೆಯನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

1 ಐತಿಹಾಸಿಕ ಸ೦ಶೋಧನೆ.

2 ವಿವರಣಾತ್ಮಕ ಸಂಶೋಧನೆ.

3 ಪ್ರಾಯೋಗಿಕ ಸ೦ಶೋಧನೆ.

1 ಐತಿಹಾಸಿಕ ಸಂಶೋಧನೆ:-
ಹಿ೦ದೆ ನಡೆದಿರುವ ಘಟನೆಗಳಬಗ್ಗೆ ಅಧ್ಯನಮಾಡಿ, ವಿವರಿಸುವ ಗುರಿಯನನು ಹೊಂದಿರುವ
ಸ೦ಶೋಧನೆಯನ್ನು, ಐತಿಹಾಸಿಕ ಸ೦ಂಶೋಧನೆ ಎಂದು ಕರೆಯುವರು.

2 ವಿವರಣಾತ್ಮಕ ಸಂಶೋಧನೆ:-

ಪ್ರಸ್ತುತ ಇರುವ ಸ್ಥಿತಿಯನ್ನು ವೀಕ್ಷಿಸಿ, ವಿವರಿಸುವ, ಸಂಶೋಧನೆಯನ್ನು ವಿವರಣಾತ್ಮಕ, ಸ೦ಶೋಧನೆ


ಎನ್ನುವರು. ಇದು ಪ್ರಸ್ತುತ ಘಟನೆಗಳನ್ನು ಸಮಸ್ಯೆಗಳನ್ನು ಸ್ಥಿತಿಗಳನ್ನು ಅಧ್ಯಯನ ಮಾಡುವುದು.

3.ಪ್ರಾಯೋಗಿಕ ಸಂಶೋಧನೆ:-

ಒಂದು ವಿಷಯ ಅಥವಾ, ಸಮಸ್ಯೆಗೆ ಸಂಬಂಧಿಸಿದ ಹಲವಾರು ಚರಾಂಶಗಳನ್ನು, ಯಾವುದನ್ನಾದರು


ನಾವು ನಿಯಂತ್ರಿಸಿ, ಹೊ೦ದಾಣಿಕೆ ಮಾಡಿದರೆ, ಏನಾಗಬಹುದು ಏಂಬುದನ್ನು ಕಂಡು ಹಿಡಿಯುವ
ದೃಷ್ಟಿಯಿ೦ದ ಮಾಡುವ ಸಂಶೋಧನೆ.

ಪ್ರಸ್ತುತ ಅಧ್ಯನದಲ್ಲಿ, ವಿವರಣಾತ್ಮಕ ಸಂಶೋಧನಾ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ,


ವಿವರಣಾತ್ಮಕ ಸಂಶೋಧನೆಯಲ್ಲಿ 4 ವಿಧಗಳಿವೆ.

1. ಸಮೀಕ್ಷಾ ವಿಧಾನ.

2. ಅಂತರ್‌ಸಂಸಂಧ ವಿಧಾನ.

3. ಕಾರಣ ಹೊಲಿಕೆಗಳ ವಿಧಾನ.

4. ವಿಕಾಸಾತ್ಮಕ ವಿಧಾನ(ಅಧ್ಯಯನ).

3.3. ಪ್ರತಿಚಯನ

ಸ೦ಶೋಧನೆಗೆ ಆಯ್ಕೆ ಮಾಡಿಕೊ೦ಡ, ಸಮಸ್ಯೆಯು ವ್ಯಾಪಿಸಿದ ಸ೦ಪೂರ್ಣ ಕ್ಷೇತ್ರಕ್ಕೆ ಅಥವಾ


ಮಾಪನ ಮಾಡಬೇಕಾದ, ಯಾವುದೇ ಅಂಶದ ವ್ಯಾಪ್ತಿಗೆ ಒಳಪಡಬಹುದಾದ ಸಮಸ್ತ ಸಮೂಹಕ್ಕೆ
ಸಮುದಾಯ ಇಲ್ಲವೆ, “ಸಮಷ್ಟಿ” ಎನ್ನಲಾಗುತ್ತದೆ. ಇಂತಹ ಸಮೂಹವನ್ನು ಪ್ರತಿನಿದಿಸುವ
ಪ್ರತಿದರ್ಶಿಗಳನ್ನು ಆಯ್ಕೆ ಮಾಡಿಕೊಳ್ಳುವ, ಒಂದು ಪ್ರಕ್ರಿಯೆಯೇ ಪ್ರತಿಚಯನ. ಹೀಗೆ ಆಯ್ಕೆ
ಮಾಡಿಕೊ೦ಡ ಸಮುದಾಯದ ಸಣ್ಣ ಭಾಗವನ್ನು ಅಧ್ಯಯನ ಮಾಡುವುದರ, ಮೂಲಕ ಬಂದ
ಫಲಿತಾಂಶವನ್ನು, ಸಾಮಾನ್ಯೀಕರಣ ಗೊಳಿಸಬಹುದಾಗಿದೆ.

ಪ್ರತಿಚಯನದ ವಿಧಗಳು

* ಸ೦ಭವನೀಯ ಪ್ರತಿಚಯನ.
* ಸ೦ಭವನೀಯ ರಹಿತ ಪ್ರತಿಚಯನ.

ಸಂಭವನೀಯ ಪ್ರತಿಚಯನದಲ್ಲಿ 4 ವಿಧಗಳು :

1. ಯಾದೃಚ್ಛಿಕ ಪ್ರತಿಚಯನ.

2. ವ್ಯವಸ್ಥಿತ ಪ್ರತಿಚಯನ.

3. ಶ್ರೇಣಿಕೃತ ಪ್ರತಿಚಯನ.

4. ಗುಚ್ಛ ಪ್ರತಿಚಯನ.

ಪ್ರಸ್ತುತ ಅಧ್ಯಯನ ಯಾದೃಚ್ಛಿಕ ಪ್ರತಿಜಯನ ವಿಧಾನವನ್ನು ಬಳಾಸಲಾಗಿದೆ.

3.4. ದತ್ತಾಂಶ ಸಂಗ್ರಹಣೆಗೆ ಬಳಸಿದ ಸಾದನಗಳು.

ಪ್ರತಿಯೊ೦ದು ಅಧ್ಯಯನಕ್ಕೆ, ವಾಸ್ತವವಾದ ಮಾಹಿತಿಯ ಉಪಯುಕ್ತವಾದುದು. ಇಂತಹ


ಮಾಹಿತಿಯನ್ನು, ವಿವಿಧ ಸ೦ಪನ್ಮೂಲಗಳಿ೦ದ ಪ್ರತ್ಯಕ್ಷವಾದ, ಮತ್ತು ಪರೊಕ್ಷವಾಗಿ ಸಂಗ್ರಹಿಸಬಹುದು.
ಸ೦ಶೋಧನೆಯ ವೈವಿಧ್ಯತೆಗೆ ಅನುಗುಣವಾಗಿ, ವಿವಿಧ ಸಾದನಗಳನ್ನು ಅಥವಾ ತಂತ್ರಗಳನ್ನು
ಬಳಸಲಾಗುತ್ತದೆ. ಸಂಶೋಧಕರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಎವಿಧ ಸಾಧನಗಳನ್ನು
ಬಳಸಬಹುದು. ಪ್ರಸ್ತುತ ಅಧ್ಯಯನದಲ್ಲಿ ಪ್ರಶ್ನಾವಳಿಯನ್ನು ಬಳಸಲಾಗಿದೆ.

ಪ್ರಶ್ನಾವಳಿ

ಸಂಶೋಧನೆಯನ್ನು ನಡೆಸಲು ಅನುಕೂಲವಾಗಲು ಕಲಿಕೆ ಮತ್ತು ಬೋಧನೆಯಲ್ಲಿ ಭಾಷಾ ಸಮಸ್ಯೆಯ


ಕುರಿತು ಪ್ರಶ್ನಾವಳಿಯನ್ನು ತಯಾರಿಸಲಾಯಿತು. ಈ ಪ್ರಶ್ನಾವಳಿಯು ಹೌದು ಅಥವಾ ಇಲ್ಲ ಎಂಬ
ಉತ್ತರಗಳನ್ನು ಪಡೆಯುವಂತಹ ಪ್ರಶ್ನೆಗಳಾಗಿದ್ದವು.

ಈ ಪ್ರಶ್ನಾವಳಿಯ ಸಹಾಯದಿಂದ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಆಂಗ್ಲ ಮಾಧ್ಯಮ, ಕನ್ನಡ


ಮಾಧ್ಯಮ, ಪ್ರೌಢಶಾಲೆ, ಪ್ರಾಥಮಿಕ ಶಾಲೆ, ಬಾಲಕಿಯರ ಶಾಲೆ, ಮುಂತಾದವುಗಳಲ್ಲಿ ಮಾಹಿತಿಯನ್ನು
ಸಂಗ್ರಹಿಸಿ ದಾಖಲಿಸಲಾಗಿದೆ. ಈ ಶಾಲೆಗಳು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ವ್ಯಾಪ್ತಿಗೆ
ಒಳಪಟ್ಟಿದವೆ.

ಪ್ರಶ್ನಾವಳಿಗೆ ಉತ್ತರಿಸಿದ ಶಿಕ್ಷಕರೆಲ್ಲರೂ ತಾವು ಈವರೆಗೆ ವಿದ್ಯಾರ್ಥಿಗಳಲ್ಲಿ ಕಂಡುಕೊಂಡಿರುವ ಭಾಷಾ


ಸಮಸ್ಯೆಯ ಆಧಾರವಾಗಿ ಉತ್ತರವನ್ನು ನೀಡಿದ್ದಾರೆ.ಶಿಕ್ಷಕರಿಂದ ಪಡೆದ ಪ್ರತಿಯೋ೦ದು ಹೇಳಿಕೆಗೆ
ಅ೦ಕಗಳನ್ನು ಕೊಟ್ಟು ಮುಖ್ಯಶಿಕ್ಷಕರು, ಮತ್ತು ಸಹ ಶಿಕ್ಷಕರು ಪಡೆದ ತಲಾ ಅ೦ಕಗಳ ಮೊತ್ತವನ್ನು ಪಟ್ಟಿ
ಮಾಡಿದ ನ೦ತರ ಸಂಗ್ರಹಿಸಿದ ದತ್ತಾಂಶಗಳನ್ನು ವಿಶ್ಲೇಷಣೆಮಾಡಲು ಶೇಕಡಾ೦ಶ ತಂತ್ರವನ್ನು
ಬಳಸಲಾಗಿದ.

3.5. ದತ್ತಾಂತ ವಿಶ್ಲೇಷಣೆಯಲ್ಲಿ ಬಳಸಿದ ಸಂಖ್ಯಾಶಾಸ್ತ್ರೀಯ ತಂತ್ರ :

ಶೇಕಡವಾರು ಸರಾಸರಿ= ಪ್ರತಿಕ್ರಿಯೆಗಳ ಸಂಖ್ಯೆ *100

ಒಟ್ಟು ಪ್ರತಿದರ್ಶಿಗಳ ಸಂಖ್ಯೆ

ಅಧ್ಯಾಯ -4 ದತ್ತಾಂಶ ವಿಶ್ಲೇಷಣೆ ಮತ್ತು ಫಲತಾಂಶ ನಿರೂಪಣೆ (ಆರ್ಥೈಸುವಿಕೆ)

4.1.ಪೀಠಿಕೆ

4.2.ದತ್ತಾಂಶ ವಿಶ್ಲೇಷಣೆ ಅರ್ಥ

4.3.ದತ್ತಾಂಶ ವಿಶ್ಲೇಷಣೆ ಮತ್ತು ಅರ್ಥೈಸುವಿಕೆ.


| . | ಅಧ್ಯಾಯ -04 |

ದತ್ತಾಂತ ವಿಶ್ಲೇಷಣೆ ಮತ್ತು ಫಲಿತಾಂತ ನಿರೂಪಣೆ (ಅರ್ಥೈಸುವಿಕೆ)

ಪೀಠಿಕೆ
ಹಿ೦ದಿನ ಅಧ್ಯಯನ ದತ್ತಾಂಶ ಸಂಗ್ರಹಣಾ ವಿಧಾನೆ, ಯಾವ ಸಂಖ್ಯಾಶಾಸ್ತ್ರೀಯ ತಂತ್ರವನ್ನು
ಬಳಸಿದ್ದೇವೆ ಎ೦ಬುದನ್ನು ತಿಳಿಸಲಾಯಿತು. ಪ್ರಸ್ತುತ ಅಧ್ಯಾಯನದಲ್ಲಿ ಸಂಶೋಧನ ಕಾರ್ಯದ
ಮೂಲಕ ಬೇಕಾದಷ್ಟು, ಮಾಹಿತಿಯನ್ನು ಕ್ರಮಬದ್ಧವಾಗಿ ಕ್ರೋಢಿಕರಣ, ಮತ್ತು ವರ್ಗಿಕರಣ ಮಾಡಿ
ಅವುಗಳಿಗೆ, ಯಥೋಚಿತವಾಗಿ ವ್ಯಾಖ್ಯಾನ ನೀಡಿದಾಗೆ ಮಾತ್ರ ಸ೦ಶೋಧನೆ ಕಾರ್ಯವು ಏನನ್ನು
ಸಾಧಿಸಿದೆ, ಮತ್ತು ಏನನ್ನು ಸಾಧಿಸಿಲ್ಲ, ಎ೦ದು ಸಾರಿ ಹೇಳುತ್ತದೆ. ಎ೦ಬುದು ತಿಳಿದು ಬರುವುದು.
ಆದ್ದರಿ೦ದ ಸ೦ಶೋಧನಾ ಕಾರ್ಯದಲ್ಲಿ ಮಾಹಿತಿಯಲ್ಲಿ ವಿಶ್ಲೇಷಣೆ ಅರ್ಥ ನಿರೂಪಣೆ ಹಾಗೂ ವರದಿ
ತಯಾರಿಸುವಿಕೆಗೂ ಬಹಳಷ್ಟು ಮಹತ್ವವಿದೆ.

4.1. ದತ್ತಾಂಶ ವಿಶ್ಲೇಷಣೆಯ ಅರ್ಥ :

ಅ೦ಕಿ ಅ೦ಶಗಳನ್ನು ವಿಶ್ಲೇಷಿಸುವುದು, ಮತ್ತು ಈ ರೀತಿ ವಿಶ್ಲೇಷಣೆಯಿ೦ದ ಪರಿಣಾಮವನ್ನು ಸರಿಯಾಗಿ


ಅರ್ಥೈಸುವುದು, ಸ೦ಶೋಧನೆಯಲ್ಲಿ ಅತ್ಯಂತ ಪ್ರಮುಖವಾದ ಕಾರ್ಯವಾಗಿದೆ, ಆದುದರಿ೦ದ ಅಂಕಿ
ಅ೦ಶಗಳ ವಿಶ್ಲೇಷಣೆ ಮತ್ತು ಅರ್ಥೈಸುವಿಕೆ ಒಂದೇ ತೀರ್ಮಾನ ಕೈಗೊಳ್ಳಲು ಬರುವುದು.

1. ಜೆ ಹೆನಿಯವರ ಪ್ರಕಾರ.:“ಪಡೆದ ಸತ್ಯಾಂಶಗಳನ್ನು ಸರಿಯಾಗಿ ವಿಶ್ಲೇಷಿಸುವುದೇ ಸ೦ಶೋಧನೆ.”


2. ಗೂಡ್‌ಮತ್ತು ಹ್ಯಾಟ್‌ಹೇಳುವಂತ್ತೆ: “ಯಾವ ಸ೦ಶೋಧನೆಯ ಎಷಯನ್ನು ತಿಳಿದುಕೊಂಡಿರುವನು
ಅಂತಹ ವ್ಯಕ್ತಿಗೆ ತಾನು ಸ್ಹತಃ ಕಲೆಹಾಕಿದ ವಿಷಯ ವಿಶ್ಲೇಷಿಸಲು ಕಠಿಣವೆನಿಸಲಾರದು” ಎ೦ದು
ಹೇಳಿದ್ದಾರೆ.

4.2. ದತ್ತಾಂಶ ವಿಶ್ಲೇಷಣೆ ಮತ್ತು ಅರ್ಥೈಸುವಿಕೆ(ನಿರೂಪಣೆ)

ಸಂಶೋಧನೆಯ ಸ೦ದರ್ಭದಲ್ಲಿ ದೊರೆತ. ಎಲ್ಲಾ, ದತ್ತಾಂಶಗಳು ಕಚ್ಛಾರೂಪದ ಮಾಹಿತಿಗಳು


ಆಗಿರುತ್ತವೆ. ಈ ಏಲ್ಲಾ ಮಾಹಿತಿಯನ್ನು ಕ್ರೋಡಿಕರಿಸಿ, ಅವುಗಳನ್ನು

ವಿಶ್ಲೇಷಿಸುವುದು ಸ೦ಶೋಧನೆಯ ಪ್ರಮುಖ ಕಾರ್ಯವಾಗಿದೆ. ಮಾಹಿಶಿ ವಿಶ್ಲೇಷಣೆಯ ನಂತರ ದೊರೆತ


ಫಲಿತಾಂಶವನ್ನು ಅರ್ಥೈಸಬೇಕು ಅಲ್ಲದೇ ಆ ಫಲಿತಾ೦ಶವನ್ನು ನಮ್ಮ ಸ೦ಶೋಧನಾ
ಪ್ರಶ್ನೆಗಳೊಂದಿಗೆ ತಾಳೆ ನೋಡ ಬೇಕು.

ಪ್ರಸ್ತುತ ಅಧ್ಯಯನದಲ್ಲಿ ದಶ್ತಾಂಶಗಳ ವಿಶ್ಲೇಷಣೆಗಾಗಿ ಸಂಖ್ಯಾಶಾಸ್ತ್ರೀಯ ತಂತ್ರವಾದ


ಶೇಕಡವಾರುಗಳನ್ನು ಬಳಸಿಕೊಳ್ಳಲಾಗಿದೆ ಇದಕ್ಕೆ ಬಳಸಿದ ಸೂತ್ರ,

ಪ್ರತಿಕ್ರಿಯೆಗಳ ಸಂಖ್ಯೆ . 100

ಶೇಕಡವಾರು ಸರಾಸರಿ =ಒಟ್ಟು ಪ್ರತಿದರ್ಶಿಗಳ ಸಂಖ್ಯೆ ಶೇಕಡವಾರು ಸರಾಸರಿಯನ್ನು ಪ್ರಶ್ನೆಗಳಿಗೆ


ಕೊಟ್ಟ ಸರಿಯಾದ ಪ್ರತಿಕ್ರಿಯೆ ಅಂದರೆ ಅವರ ಒಟ್ಟು ಪ್ರಶ್ನೆಗಳಿಗೆ ಭಾಗಿಸಿದಾಗ ಬ೦ದ, ಉತ್ತರದಿ೦ದ
100 ಕ್ಕೆ ಗುಣಿಸಿದಾಗ ಬರುವ ಉತ್ತರವು ಶೇಕಡವಾರು ಪ್ರಮಾಣ ಹೆಚ್ಚು ಇರುತ್ತದೆಯೋ, ಅಲ್ಲಿ ಸಮಸ್ಯೆ
ಹೆಚ್ಚಾಗಿರುತ್ತದೆ ಎಂದು ತಿಳಿದು ಬರುತ್ತದೆ. ಅವುಗಳಿಗನುಗುಣವಾಗಿ ಪ್ರಶ್ನೆಗಳನ್ನು ತಯಾರಿಸಿ. ಈ
ಪ್ರಶ್ನೆಗಳಿಗೆ ಉತ್ತರಗಳನ್ನು ಶೇಕಡವಾರುಗಳ ಮೂಲಕ ಒದಗಿಸಲಾಗಿದೆ. '

ಪ್ರಶ್ನೆ.1.ಜ್ಞಾನದ ವರ್ಗಾವಣೆಗೆ ಭಾಷೆ ಒಂದು ಉತ್ತಮ ಮಾಧ್ಯಮವಾಗಿದೆಯೇ?

ಒಟ್ಟು ಶಾಲೆಗಳ ಪ್ರತಿಕ್ರಿಯೆ ಶೇಕಡವಾರು


ಸಂಖ್ಯೆ
ಹೌದು ಇಲ್ಲ ಹೌದು ಇಲ್ಲ

9 9 0 100% 0%

ಪ್ರಶ್ನೆ.2.ಭಾಷೆಯ ಸಮರ್ಪಕತೆ ಶಿಕ್ಷಣದ ಸಾರ್ಥಕತೆಯನ್ನು ತಿಳಿಸುತದೆಯೇ?                               

ಒಟ್ಟು ಶಾಲೆಗಳ ಪ್ರತಿಕ್ರಿಯೆ ಶೇಕಡವಾರು


ಸಂಖ್ಯೆ ಹೌದು ಇಲ್ಲ ಹೌದು ಇಲ್ಲ

9 9 0 100% 0%

ಪ್ರಶ್ನೆ.3. ಭಾಷೆ ಇರದೆ ಕಲಿಕೆ ಉಂಟಾಗುತ್ತದೆ ಎಂದು ಭವಿಸುವಿರಾ?

ಒಟ್ಟು ಶಾಲೆಗಳ ಪ್ರತಿಕ್ರಿಯೆ ಶೇಕಡವಾರು


ಸಂಖ್ಯೆ
ಹೌದು ಇಲ್ಲ ಹೌದು ಇಲ್ಲ

9 0 9 0% 100%

ಪ್ರಶ್ನೆ.4. ವಿದ್ಯಾರ್ಥಿಗಳಿಗೆ ತ್ರಿ ಭಾಷಾ ಸೂತ್ರ ಹೊರೆ ಎಂದು ಅನಿಸುತ್ತದೆ?

ಒಟ್ಟು ಪ್ರತಿಕ್ರಿಯೆ ಶೇಕಡವಾರು


ಶಾಲೆಗಳ
ಹೌದು ಇಲ್ಲ ಹೌದು ಇಲ್ಲ
ಸಂಖ್ಯೆ

9 8 1 89% 11%

ಪ್ರಶ್ನೆ.5. ಭಾಷೆ ಅಭಿವೃದ್ಧಿಯಲ್ಲಿ ಶಾಲೆ, ಮನೆ,ಸಮಾಜ ತಮ್ಮದೇ ಆದ ಪಾತ್ರ ನಿರ್ವಹಿಸುತ್ತವೆ ಇದನ್ನು


ಒಪ್ಪುತ್ತೀರಾ?

ಒಟ್ಟು ಶಾಲೆಗಳ ಪ್ರತಿಕ್ರಿಯೆ ಶೇಕಡವಾರು


ಸಂಖ್ಯೆ
ಹೌದು ಇಲ್ಲ ಹೌದು ಇಲ್ಲ

9 9 0 100% 0%

ಪ್ರಶ್ನೆ.6.ಶಿಕ್ಷಕರ ತೊದಲು ವಿಕೆ ಅಸ್ಪಷ್ಟ ಉಚ್ಚಾರಣೆ ಕಲಿಕೆಯನ್ನು ಕುಂಠಿತಗೊಳಿಸುತ್ತದೆ ಎಂಬುದು ಸರಿ


ಎನಿಸುತ್ತದೆಯೇ?
ಒಟ್ಟು ಶಾಲೆಗಳ ಪ್ರತಿಕ್ರಿಯೆ ಶೇಕಡವಾರು
ಸಂಖ್ಯೆ
ಹೌದು ಇಲ್ಲ ಹೌದು ಇಲ್ಲ

9 9 0 100% 0%

ಪ್ರಶ್ನೆ.7.ಕನ್ನಡ ಭಾಷಾ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಭಾಷೆಯನ್ನು ಕಲಿಯುವುದು ಒಂದು


ಸವಾಲಾಗಿದೆ ಇದನ್ನು ಒಪ್ಪುತ್ತಿರಾ?

ಒಟ್ಟು ಶಾಲೆಗಳ ಪ್ರತಿಕ್ರಿಯೆ ಶೇಕಡವಾರು


ಸಂಖ್ಯೆ
ಹೌದು ಇಲ್ಲ ಹೌದು ಇಲ್ಲ

9 9 0 100% 0%

ಪ್ರಶ್ನೆ.8. ವಿದ್ಯಾರ್ಥಿಗಳಲ್ಲಿರುವ ಮಾತುಗಾರಿಕೆಯ ದೋಷ ಶೈಕ್ಷಣಿಕ ಸಾಧನೆಯ ಮೇಲೆ ಪ್ರಭಾವ


ಬೀರುತ್ತದೆಯೇ?

ಒಟ್ಟು ಶಾಲೆಗಳ ಪ್ರತಿಕ್ರಿಯೆ ಶೇಕಡವಾರು


ಸಂಖ್ಯೆ
ಹೌದು ಇಲ್ಲ ಹೌದು ಇಲ್ಲ

9 8 1 89% 11%

ಪ್ರಶ್ನೆ.9.ಉತ್ತಮ ಬಾಷಾ ಕೌಶಲ್ಯದ ಅಭಿವೃದ್ಧಿಗೆ ಶಿಕ್ಷಕನ ಪ್ರಭಾವ ಅತಿ ಹೆಚ್ಚಾಗಿರುತ್ತದೆ.

ಒಟ್ಟು ಶಾಲೆಗಳ ಪ್ರತಿಕ್ರಿಯೆ ಶೇಕಡವಾರು


ಸಂಖ್ಯೆ
ಹೌದು ಇಲ್ಲ ಹೌದು ಇಲ್ಲ

9 9 0 100% 0%

ಪ್ರಶ್ನೆ.10. ಬರವಣಿಗೆಯಲ್ಲಿನ ಸಮಸ್ಯೆ ಕಲಿಕೆ ಮತ್ತು ಬೋಧನೆಯ ಮೇಲೆ ಪ್ರಭಾವ ಬೀರುತ್ತದೆಯೇ?

ಒಟ್ಟು ಶಾಲೆಗಳ ಪ್ರತಿಕ್ರಿಯೆ ಶೇಕಡವಾರು

ಹೌದು ಇಲ್ಲ ಹೌದು ಇಲ್ಲ


ಸಂಖ್ಯೆ

9 9 0 100% 0%

ಪ್ರಶ್ನೆ.11.ಆಲಿಸುವಿಕೆ ಮತ್ತು ಮಾತುಗಾರಿಕೆಯಿಂದ ಪದ ಸಂಪತ್ತು ವೃದ್ಧಿಯಾಗುತ್ತದೆ ಇದನ್ನು


ಒಪ್ಪುತ್ತೀರಾ?

ಒಟ್ಟು ಶಾಲೆಗಳ ಪ್ರತಿಕ್ರಿಯೆ ಶೇಕಡವಾರು


ಸಂಖ್ಯೆ
ಹೌದು ಇಲ್ಲ ಹೌದು ಇಲ್ಲ

9 9 0 100% 0%

ಪ್ರಶ್ನೆ.12.ಎಲ್ಲಾ ಆಂಗ್ಲ ಭಾಷಾ ಶಿಕ್ಷಕರು ಆಂಗ್ಲ ಭಾಷಾ ವ್ಯಾಕರಣದಲ್ಲಿ ನೈಪುಣ್ಯತೆ ಹೊಂದಿರುತ್ತಾರೆ.

ಒಟ್ಟು ಶಾಲೆಗಳ ಪ್ರತಿಕ್ರಿಯೆ ಶೇಕಡವಾರು


ಸಂಖ್ಯೆ
ಹೌದು ಇಲ್ಲ ಹೌದು ಇಲ್ಲ

9 8 1 89% 11%

ಪ್ರಶ್ನೆ.13. ಹಳೆಗನ್ನಡವನು ಓದಿ ವಿದ್ಯಾರ್ಥಿಗಳಿಗೆ ಅರ್ಥೈಸುವುದು ಶಿಕ್ಷಕರಿಗೆ ಒಂದು


ಸವಾಲಾಗಿದೆಯೇ?

ಒಟ್ಟು ಶಾಲೆಗಳ ಪ್ರತಿಕ್ರಿಯೆ ಶೇಕಡವಾರು


ಸಂಖ್ಯೆ
ಹೌದು ಇಲ್ಲ ಹೌದು ಇಲ್ಲ

9 7 2 78% 22%
ಪ್ರಶ್ನೆ.14.ರೇಡಿಯೋ ದೂರದರ್ಶನದಂತಹ ಉಪಕರಣಗಳು ಭಾಷ ಸಮಸ್ಯೆಯನ್ನು ಪರಿಹರಿಸಬಲ್ಲವೇ?

ಒಟ್ಟು ಶಾಲೆಗಳ ಪ್ರತಿಕ್ರಿಯೆ ಶೇಕಡವಾರು


ಸಂಖ್ಯೆ
ಹೌದು ಇಲ್ಲ ಹೌದು ಇಲ್ಲ

9 9 0 100% 0%

ಪ್ರಶ್ನ.15.ಹಿಂದಿ ಭಾಷಾ ಕಲಿಕೆ ಅವಶ್ಯಕತೆ ಇದೆಯೇ?

ಒಟ್ಟು ಶಾಲೆಗಳ ಪ್ರತಿಕ್ರಿಯೆ ಶೇಕಡವಾರು


ಸಂಖ್ಯೆ
ಹೌದು ಇಲ್ಲ ಹೌದು ಇಲ್ಲ

9 8 1 89% 11%

ಅಧ್ಯಾಯ 5

ಸಾರಾಂಶ ಮತ್ತು ಉಪಸಂಹಾರ

ಪೀಠಿಕೆ

ಹಿಂದಿನ ಅಧ್ಯಾಯದಲ್ಲಿ ದತ್ತಾಂಶಗಳ ವಿಶ್ಲೇಷಣೆ ಮತ್ತು ಅರ್ಥ ವಿವರಣೆಯನ್ನು ನೀಡಲಾಗಿದೆ


ಸಂಗ್ರಹಿಸಲಾದ ದತ್ತಾಂಶಗಳನ್ನು ಏಳು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ.

ಪ್ರಸ್ತುತ ಅಧ್ಯಯನದಲ್ಲಿ ಸಂಶೋಧನೆಯ ಎಲ್ಲಾ ಅಧ್ಯಯನ ಸಾರಾಂಶವನ್ನು ನೀಡಲಾಗುವುದು.


ಅಧ್ಯಯನದ ಅಗತ್ಯತೆ, ಉದ್ದೇಶಗಳು, ಮಾದರಿಯ ಆಯ್ಕೆ,ಸಾಧನ, ಸಂಶೋಧನಾ ವಿಧಾನ, ಅಂಕಿ
ಅಂಶಗಳ ದತ್ತಾಂಶಗಳ ವಿಶ್ಲೇಷಣೆ, ಅಧ್ಯಯನದ ಇತಿಮಿತಿಗಳು, ಅಧ್ಯಯನ ತೀರ್ಮಾನಗಳು ಮತ್ತು
ಶೈಕ್ಷಣಿಕ ನಿಹಿತಾರ್ಥಗಳ ಬಗ್ಗೆ ವಿವರಣೆಯನ್ನು ನೀಡಲಾಗುವುದು.

ಸಮಸ್ಯೆಯ ನಿರೂಪಣೆ
ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಯಲ್ಲಿ ಭಾಷಾ ಸಮಸ್ಯೆಯ ಕುರಿತು ಒಂದು ಅಧ್ಯಯನ.

ಅಧ್ಯಯನದ ಉದ್ದೇಶ

 ಭಾಷೆಯ ಪ್ರಾಮುಖ್ಯತೆಯನ್ನು ಅರಿಯುವುದು.


 ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮಪಡಿಸಲು ಭಾಷೆಯ ಪಾತ್ರವನ್ನು ತಿಳಿಯುವುದು.
 ಬೋಧನೆ ಹಾಗೂ ಭಾಷೆಯ ನಡುವೆ ಇರುವ ಸಂಬಂಧವನ್ನು ಅರ್ಥೈಸಿಕೊಳ್ಳುವುದು.
 ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಯ ಮೇಲೆ ಭಾಷಾ ಸಮಸ್ಯೆಯ ಪ್ರಭಾವವನ್ನು ಅರಿಯುವುದು.

ಸಂಶೋಧನಾ ವಿಧಾನ

ಯಾವುದೇ ಒಂದು ಸಂಶೋಧನೆಯು ಯಶಸ್ವಿ ಆಗಲು ಉತ್ತಮ ಸಂಶೋಧನಾ ವಿಧಾನ


ಅವಶ್ಯಕತೆ ಇದೆ .ಏಕೆಂದರೆ ಸಂಶೋಧನಾ ವಿಧಾನ ಪೂರ್ವ ನಿಯೋಜಿತವಾಗಿ ಅರ್ಥಗರ್ಭಿತವಾಗಿ
ಹಾಗೂ ಸಮಸ್ಯೆಗೆ ಸೂಕ್ತವಾದ ಪರಿಹಾರನೀಡುವ ವಿಧಾನಗಳಾಗಿರಬೇಕು. ಅಂತೆಯೇ
ಸಂಶೋಧನೆಯು ಸಫರವಾಗಿರಬೇಕು ಅಂದರೆ ಸಂಶೋಧನೆಯ ವಿಷಯ ಹಾಗೂ ಅದಕ್ಕೆ ಬೇಕಾದ
ದತ್ತಾಂಶಗಳನ್ನು ಅವಲಂಬಿಸಿದೆ

ಅಧ್ಯಯನದ ವ್ಯಾಪ್ತಿ

ಪ್ರಸ್ತುತ ಕಿರು ಸಂಶೋಧನೆ ವ್ಯಾಪ್ತಿಯು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ


ತಾಲೂಕಿನ ಕೆಲವು ಶಾಲೆಗಳಿಗೆ ಸೀಮಿತವಾಗಿದೆ

ಪ್ರತಿ ದರ್ಶಿ ಆಯ್ಕೆ :-

ಪ್ರಸ್ತುತ ಅಧ್ಯಯನಕ್ಕೆ ಉದ್ದೇಶಾತ್ಮಕ ಪ್ರತಿಕ್ಷಣದ ಮೂಲಕ ಹೊನ್ನಾಳಿ ಹಾಗೂ


ಬೆಳಗುತ್ತಿಯ 9 ಶಾಲೆಗಳನ್ನು ಮಾತ್ರ ತೆಗೆದುಕೊಳ್ಳಲಾಗಿದೆ

ದತ್ತಾಂಶ ಸಂಗ್ರಹಣಾ ಸಾಧನಗಳು :-

ಪ್ರಸ್ತುತ ಅಧ್ಯಯನದಲ್ಲಿ ಸಮೀಕ್ಷಾ ವಿಧಾನದ ಮೂಲಕ ಪ್ರಶ್ನಾವಳಿಯನ್ನು ಉಪಯೋಗಿಸಿ


ಸಂಗ್ರಹಿಸಿದ ದತ್ತಾಂಶವನ್ನು ಸಂಖ್ಯಾಶಾಸ್ತ್ರದ ಸಹಾಯದಿಂದ ಸರಾಸರಿ ಕಂಡುಹಿಡಿಯಿರಿ
ವಿಶ್ಲೇಷಿಸಬಹುದು

ದತ್ತಾಂಶಗಳ ವಿಶ್ಲೇಷಣೆಗೆ ಬಳಸಿದ ಸಂಖ್ಯಾಶಾಸ್ತ್ರೀಯ ತಂತ್ರಗಳು :-


ಪ್ರಸ್ತುತ ಅಧ್ಯಯನದಲ್ಲಿ ದತ್ತಾಂಶಗಳ ವಿಶ್ಲೇಷಣೆಗಾಗಿ ಸಂಖ್ಯಾ ಶಾಸ್ತ್ರೀಯ ತಂತ್ರವಾದ
ಇದಕ್ಕೆ ಬಳಸಿದ ಸೂತ್ರ ವೆನೆಂದರೆ ಶೇಕಡವಾರು= ಒಟ್ಟು ಪ್ರತಿಕ್ರಿಯೆಗಳಸಂಖ್ಯೆ

ಅಧ್ಯಯನದ ಫಲಿತಾಂಶ

ಸಂವಹನದ ಮೂಲ ಆಧಾರವಾಗಿರುವ ಭಾಷೆ, ಮನುಷ್ಯನ ಜೀವನದ ಎಲ್ಲಾ ರಂಗಗಳಲ್ಲಿಯೂ


ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತದೆ. ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶಿಕ್ಷಣ
ರಂಗದಲ್ಲಿಯೂ ಕೂಡ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತದೆ.

ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಯಲ್ಲಿ ಭಾಷಾ ಸಮಸ್ಯೆಯ ಕುರಿತು ಕೈಗೊಂಡ ಒಂದು


ಅಧ್ಯಯನದಲ್ಲಿ ಕಂಡುಕೊಂಡಂತಹ ಫಲಿತಾಂಶವೇನೆಂದರೆ.

 ಕಲಿಕೆ, ಬೋಧನೆ ಮತ್ತು ಭಾಷೆ ಒಂದಕ್ಕೊಂದು ಪರಸ್ಪರ ಸಂಬಂಧವನ್ನು ಹೊಂದಿವೆ


 ಭಾಷೆ ಭಾವನೆಗಳ ಜೊತೆಗೆ ವಿಷಯವನ್ನು ವರ್ಗಾಯಿಸುವ ಒಂದು ಸಾಧನವಾಗಿದೆ.
 ಭಾಷೆಯ ಹೊರತು ಕಲಿಕೆ ಶೂನ್ಯವಾಗುತ್ತದೆ.
 ಭಾಷಾ ಕಲಿಕೆಗೆ ಯಾವುದೇ ನಿರ್ದಿಷ್ಟ ಸಾಮರ್ಥ್ಯದ ಅಗತ್ಯವಿಲ್ಲದಿದ್ದರೂ ಇತಭಾಷೆಗಳನ್ನು
ಕಲಿಯಲು ನಿರ್ದಿಷ್ಟ ಸಾಮರ್ಥ್ಯದ ಅಗತ್ಯವಿದೆ.
 ಭಾಷೆಯ ಸೌಂದರ್ಯ ಪದ ಸಂಪತ್ತಿನ ಮೇಲೆ ಆಧಾರವಾಗಿದೆ..

ಉಪಸಂಹಾರ

ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ. ಎಂಬ ಮಾತಿನಂತೆ ಭಾಷೆ ಮಾತಿನ


ಮೂಲವಾಗಿದೆ. ಆದ್ದರಿಂದ ಕಲಿಕೆ, ಬೋಧನೆ, ಸಂವಹನ ಎಲ್ಲವುಗಳ ಮೂಲ ಆಧಾರ ಭಾಷೆಯಾಗಿದೆ.
ವಿದ್ಯಾರ್ಥಿಗಳಲ್ಲಿರುವ ಮಾತುಗಾರಿಕೆಯ, ಆಲಿಸುವಿಕೆಯ ದೋಷಗಳು ಭಾಷೆಯನ್ನು
ಕುಂಠಿತಗೊಳಿಸಬಲ್ಲವೂ.

ಒಟ್ಟಾರೆಯಾಗಿ ಹೇಳುವುದಾದರೆ, ಶಿಕ್ಷಕರು, ಪೋಷಕರು, ಸಮಾಜ, ವಾತಾವರಣ ವಿದ್ಯಾರ್ಥಿಗಳ


ಭಾಷೆರೂಪಿಸುವಲ್ಲಿ ಮುಖ್ಯವಾದ ಪಾತ್ರ ನಿರ್ವಹಿಸಬೇಕಿದೆ.

ಶೈಕ್ಷಣಿಕ ನಿಹಿತಾರ್ಥಗಳು
 ವಿದ್ಯಾರ್ಥಿಗಳ ಭಾಷಾ ಬೆಳವಣಿಗೆ ಶಿಕ್ಷಕರ ಕರ್ತವ್ಯವಾಗಿದೆ.
 ಭಾಷಾ ಸಾಮರ್ಥ್ಯ ಇಲ್ಲದಿರುವ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಭಾಷಾ ಸಾಮರ್ಥ್ಯವನ್ನು ಬೆಳೆಸಲು
ಸಾಧ್ಯವಿಲ್ಲ.
 ಶಾಲೆಯ ವಾತಾವರಣ ವಿದ್ಯಾರ್ಥಿಗಳಲ್ಲಿ ಭಾಷೆಯನ್ನು ವೃದ್ಧಿಸಲು ಪೂರಕವಾಗಿರಬೇಕು.
 ಶಾಲೆಗಳಲ್ಲಿ ಭಾಷಾ ಪ್ರಯೋಗಾಲಯಗಳು ಇರುವುದು ಮುಖ್ಯವಾಗಿದೆ.
 ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆಗಳನ್ನು ಕಲಿಸಲು ಉತ್ತಮ ಸಾಮರ್ಥ್ಯವಿರುವ ಶಿಕ್ಷಕರ
ಅಗತ್ಯವಿದೆ.
 ಭಾಷೆಗಳನ್ನು ಕಲಿಸಲು ದ್ವಿಭಾಷ ಪದ್ಧತಿ, ಬಹುಭಾಷಾ ಪದ್ಧತಿಗಳನ್ನು ಬಳಸುವುದು ಸೂಕ್ತ.

ಮುಂದಿನ ಸಂಶೋಧನೆಗೆ ಸಲಹೆಗಳು

 ವಿದ್ಯಾರ್ಥಿಗಳ ಕಲಿಕೆಗೆ ಅಂತರ್ಜಾಲ ಕಲಿಕೆ ಹಾಗೂ ಸಾಂಪ್ರದಾಯಿಕ ಕಲಿಕೆಗಳಲ್ಲಿ ಸೂಕ್ತವಾದ


ವಿಧಾನದ ಕುರಿತು ಒಂದು ಅಧ್ಯಯನ.
 ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವಲ್ಲಿ ಶಾಲೆಗಳ ಪಾತ್ರ.
 ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಬೌದ್ಧಿಕ ಹಾಗೂ ಭೌತಿಕ ಪರಿಸರದ
ಪ್ರಭಾವ.
 ಮೌಲ್ಯಾಧಾರಿತ ಮೌಲ್ಯಮಾಪನ ಮಾಡುವಲ್ಲಿ ಶಿಕ್ಷಕರ ಪಾತ್ರ.
 ವಿದ್ಯಾರ್ಥಿಗಳ ಮೇಲೆ ಮೊಬೈಲ್ ಬೀರುತ್ತಿರುವ ಪ್ರಭಾವದ ಕುರಿತು ಒಂದು ಅಧ್ಯಯನ.

You might also like