You are on page 1of 2

ಶ್ರೀಹರಿಯ ಅನುಗ್ರಹದಿಂದ ವರದಪ್ಪನಾಯಕ ಹಾಗೂ ಲಕ್ಷ್ಮಿದೇವಿ ದಂಪತಿಗಳಿಗೆ ಜನಿಸಿದ ಪುರಂದರ ದಾಸರ ಮೊದಲ ಹೆಸರು

ಶ್ರೀನಿವಾಸ ನಾಯಕ. ಆಗರ್ಭ ಶ್ರೀಮಂತರ ಕುಟುಂಬದಲ್ಲಿ ಜನಿಸಿದ ಇವರನ್ನು ‘ನವಕೋಟಿ ನಾರಾಯಣ’ ಎಂದೇ ಖ್ಯಾತರಾಗಿದ್ದರು.

ದಾಸ ಪರಂಪರೆಯಲ್ಲಿ ಪದಗಳನ್ನು ರಚಿಸುತಿದ್ದ ಶ್ರೀ ಪುರಂದರದಾಸರು ತಮ್ಮ ಜೀವಿತಾವಧಿಯಲ್ಲಿ ಐದು ಲಕ್ಷ ಹಾಡುಗಳನ್ನು ರಚನೆ
ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; 4,75,000 ಹಾಡುಗಳನ್ನು ರಚಸಿ ಪೌಷ ಕೃಷ್ಣ ಅಮಾವಾಸ್ಯೆಯಂದು ತಮ್ಮ ಅವತಾರ
ಮುಗಿಸಿದರು; ಮುಂದೆ ಅವರ ಮಗ ಮಧ್ವಪತಿದಾಸರು ಉಳಿದ 25,000 ಹಾಡುಗಳನ್ನು ರಚನೆ ಮಾಡಿದರು ಎಂದು
ಹೇಳಲಾಗುತ್ತಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರನ್ನು 'ದಾಸರೆಂದರೆ
ಪುರಂದರದಾಸರಯ್ಯಾ..!' ಎಂದು ಕೊಂಡಾಡಿದ್ದಾರೆ.

ಉದರವೈರಾಗ್ಯವಿದು ನಮ್ಮ
ಪದುಮನಾಭನಲ್ಲಿ ಲೇಶಭಕುತಿ ಇಲ್ಲ || ಪ ||

ಉದಯ ಕಾಲದಲೆದ್ದು ಗದಗದ ನಡುಗುತ


ನದಿಯಲಿ ಮಿಂದೆನೆಂದು ಹಿಗ್ಗುತಲಿ
ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು
ಬದಿಯಲಿದ್ದವರಿಗಾಶ್ಚರ್ಯದೋರುವುದು || ೧ ||

ಕರದಲಿ ಜಪಮಣಿ ಬಾಯಲಿ ಮಂತ್ರವು


ಅರಿವೆಯ ಮುಸುಕನು ಮೋರೆಗೆ ಹಾಕಿ
ಪರಸತಿಯರ ರೂಪ ಮನದಲಿ ಗುಣಿಸುತ
ಪರಮ ವೈರಾಗ್ಯಶಾಲಿಯೆನಿಸುವುದು || ೨ ||

ಕಂಚುಗಾರನಾ ಬಿಡಾರದಿಂದಲಿ
ಕಂಚು ಹಿತ್ತಾಳೆಯ ಪ್ರತಿಮೆಯ ನೆರಹಿ
ಮಿಂಚಬೇಕೆಂದು ಬಹುಜ್ಯೋತಿಗಳನೆ ಹಚ್ಚಿ
ವಂಚಕತನದಲಿ ಪೂಜೆಯ ಮಾಳ್ಪುದು || ೩ ||

ಬೂಟಕತನದಿ ಬಹಳ ಭಕುತಿ ಮಾಡಿ


ಸಾಟಿಯಿಲ್ಲವು ಎನಗೆಂದೆನಿಸಿ
ನಾಟಕಸ್ತ್ರೀಯಂತೆ ಬಯಲಡಂಬವ ತೋರಿ
ಊಟಕೆ ಸಾಧನ ಮಾಡಿಕೊಂಬುದಿದು || ೪ ||

ನಾನು ಎಂಬುದು ಬಿಟ್ಟು ಜ್ಞಾನಿಗಳೊಡಗೂಡಿ


ಏನಾದುದು ಹರಿಪ್ರೇರಣೆಯೆಂದು
ಶ್ರೀನಿಧಿ ಪುರಂದರ ವಿಠಲರಾಯನನು
ಕಾಣದೆ ಮಾಡಿದ ಕಾರ್ಯಗಳೆಲ್ಲ || ೫ ||

You might also like