You are on page 1of 1

ಸಂಧಿ

ಬಹಳ ಮಂದಿ ತಮ್ಮ ಜಾತಕವನ್ನು ಜ್ಯೋತಿಷಿಗಳಿಗೆ ತೋರಿಸುವುದಕ್ಕೇ ಹೆದರುತ್ತಾರೆ. ಇನ್ನು ಭವಿಷ್ಯದ ಬಗ್ಗೆ ಕೇಳುವುದಕ್ಕೆ

ಒಂದಕ್ಕೆ ನಾಲ್ಕು ಸಲ ಯೋಚಿಸುತ್ತಾರೆ. ಎಲ್ಲಿ ಯಾವುದೋ ದೋಷ ಹೇಳಿಬಿಡುತ್ತಾರೋ, ದೊಡ್ಡ ಮಟ್ಟದ- ವಿಪರೀತ ಖರ್ಚಿನ

ಹೋಮ- ಹವನ ಮಾಡಿಸಿ ಎಂದು ಹೇಳುತ್ತಾರೋ ಎಂಬ ಅಂಜಿಕೆ ಅವರದು. ಇದೇ ಕಾರಣಕ್ಕೆ ಸಮಸ್ಯೆ ಕುತ್ತಿಗೆಗೆ ಬಂದು ನಿಲ್ಲುವ

ತನಕ ಜ್ಯೋತಿಷಿಗಳ ಬಳಿ ಹೋಗುವುದಿಲ್ಲ. ಇರಲಿ, ಇದು ಅವರವರ ಇಷ್ಟ. ಕನಿಷ್ಠ ಪಕ್ಷ ಮಾಡಿಸಿಕೊಳ್ಳಲೇ ಬೇಕಾದ ಗ್ರಹ

ಶಾಂತಿಯನ್ನು ಮಾಡಿಸಿಕೊಳ್ಳುತ್ತಾರಾ ಅಂದರೆ, ಅದು ಇಲ್ಲ. ಏನಿದು ಕಡ್ಡಾಯವಾಗಿ ಮಾಡಿಸಲೇ ಬೇಕಾದ ಶಾಂತಿಪರಿಹಾರ

ಎಂಬ ಪ್ರಶ್ನೆ ಮೂಡುತ್ತದೆ.

ಯಾವುದೇ ವ್ಯಕ್ತಿಯ ಜಾತಕದಲ್ಲಿ ಗ್ರಹಗಳ ದಶೆ ಬದಲಾಗುವಾಗ ಈ 'ಸಂಧಿ ಶಾಂತಿ' ಮಾಡಲಾಗುತ್ತದೆ. ಹಾಗಂತ ಎಲ್ಲ

ಗ್ರಹಗಳಿಗೂ ಮಾಡಿಸುವುದಿಲ್ಲ. ಕುಜ ದಶೆ ಮುಗಿದು ರಾಹು ದಶೆ ಆರಂಭ ಆಗುವಾಗ, ಇನ್ನು ರಾಹುವಿನ ದಶೆ ಮುಗಿದು ಗುರು

ದಶೆಯ ಶುರುವಿನಲ್ಲಿ, ಶುಕ್ರ ದಶೆಯ ನಂತರ ರವಿ ದಶೆ ಶುರುವಿನಲ್ಲಿ ಶಾಂತಿ ಮಾಡಿಸಿಕೊಳ್ಳಲಾಗುತ್ತದೆ. ಇವುಗಳನ್ನು ಕುಜ-

ರಾಹು ಸಂಧಿ ಶಾಂತಿ, ರಾಹು- ಬೃಹಸ್ಪತಿ ಸಂಧಿ ಶಾಂತಿ ಹಾಗೂ ಶುಕ್ರಾದಿತ್ಯ ಸಂಧಿ ಶಾಂತಿ ಎನ್ನಲಾಗುತ್ತದೆ. ಜನ್ಮ ಜಾತಕದಲ್ಲಿ

ದಶಾ- ಭುಕ್ತಿ ವಿವರಗಳು ಇರುತ್ತವೆ. ಅದರಲ್ಲಿ ನೋಡಿದಾಗ ಈ ಸಂಧಿ ಸಮಯ ಯಾವುದು ಎಂದು ತಿಳಿಯುತ್ತದೆ.

ಕುಜ-ರಾಹು ಸಂಧಿಯ ಸಮಯದಲ್ಲಿ ಆ ಜಾತಕರಿಗೆ ವಿವಿಧ ರೀತಿಯ ಸಂಕಷ್ಟಗಳು ತಲೆದೋರುತ್ತವೆ. ಅಗ್ನಿ ಅವಘಡ,

ವಿದ್ಯಾಭ್ಯಾಸಕ್ಕೆ ಅಡಚಣೆ, ಅವಮಾನ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ರಾಹು ಬೃಹಸ್ಪತಿ ಗ್ರಹ ಸಂಧಿ

ಸಮಯದಲ್ಲಿ ಶಸ್ತ್ರಚಿಕಿತ್ಸೆ, ಆಪ್ತರು ಅಗಲುವುದು, ಭೂಮಿ ನಷ್ಟ ಸೇರಿದಂತೆ ಇತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ

ಆರೋಗ್ಯ ಸಮಸ್ಯೆಗಳು, ಅಪಘಾತ ಸಾಧ್ಯತೆಗಳು ಇರುತ್ತವೆ. ಶುಕ್ರ ದಶೆ ಮುಗಿದು ರವಿ ದಶೆ ಆರಂಭವಾಗುವಾಗ ಹೃದಯಕ್ಕೆ

ಸಂಬಂಧಿಸಿದ ಅನಾರೋಗ್ಯ ಸಮಸ್ಯೆ, ಪಿತ್ರಾರ್ಜಿತವಾದ ಆಸ್ತಿ ನಷ್ಟ, ವ್ಯಾಪಾರದಲ್ಲಿ ನಷ್ಟ ಇತ್ಯಾದಿ ಫಲಗಳನ್ನು

ಅನುಭವಿಸಬೇಕಾಗುತ್ತದೆ.

ಜನ್ಮ ಜಾತಕದಲ್ಲಿ ಕುಜ, ರಾಹು, ಗುರು, ಶುಕ್ರ ಮತ್ತು ರವಿ ಯಾವ ಸ್ಥಾನಗಳಲ್ಲಿ ಇದ್ದಾರೆ ಎಂಬುದನ್ನು ಸಹ

ಗಮನಿಸಬೇಕಾಗುತ್ತದೆ. ಲಗ್ನದಿಂದ ಎಷ್ಟನೇ ಸ್ಥಾನದಲ್ಲಿ ಆ ಗ್ರಹಗಳು ಸ್ಥಿತವಾಗಿವೆ ಎಂಬುದರ ಆಧಾರದಲ್ಲಿ ಅದರ ಕಾರಕತ್ವವನ್ನು

ನೋಡಿಕೊಂಡು, ಅದಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಈ ಗ್ರಹ ಸಂಧಿ

ಶಾಂತಿಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ. ಆ ಸಮಯಕ್ಕೆ ಸರಿಯಾಗಿ ಈ ಬಗ್ಗೆ ಜ್ಞಾನ ಇರುವ ಪುರೋಹಿತರ ಮೂಲಕ ಶಾಂತಿ

ಮಾಡಿಸಿಕೊಳ್ಳಿ

You might also like