You are on page 1of 9

ಶ್ರೀ ಸುಧಾಮನ ಹಾಡು.

ಸರ್ಪ ಭೂಷಣನ ಸುತನ ಭಕ್ತಿಯಿ೦ದ ಬಾಲಗೊ೦ಬೆ ಮತ್ತೆ ಅಜನ ಪತಿಯ ಪಾದಕ್ಕೆರಗುವೆ ||

ಎಲ್ಲ ದೇವತೆಗಳಿಗೆ ಎರಗಿ ಭಕ್ತಿಯಿ೦ದ ಲಕ್ಷ್ಮೀವಲ್ಲ ಭನ ಕಥೆಗಳನ್ನು ವರ್ಣಿಸುವೆನು ||

ಸ್ವಾಮಿ ರಾಮ ಕೃಷ್ಣ ರ ಪ್ರೇಮವನ್ನು ಪಡೆದ ಸುಧಾಮನೆ೦ಬ ಭಕ್ತ ಬಡವ ಬ್ರಾಹ್ಮ ಣನಿದ್ದ ನು |

ಸ್ನಾನ ಹೋಮ ಜಪವ ಮಾಡಿ ನೇಮ ನಿಷ್ಟೆಯಿ೦ದ ಉಪವು ದಾನವನ್ನೇ ಬೇಡಿ ಕಾಲ ಕಳೆದ ಬ್ರಾಹ್ಮ ಣ |

ಅಸನವಿಲ್ಲ ವ್ಯ ಸನವಿಲ್ಲ ಹಸಿದು ಮಕ್ಕ ಳನ್ನು ನೋಡಿ ಪತಿಯ ಪಾದಕ್ಕೆರಗಿ ನಿ೦ತಳು |

ತ೦ದೆ ತಾಯಿಗಳ ಕಡೆಗೆ ಬ೦ಧುಬಳಗದವರು ಹತ್ತಿ ಹೊ೦ದಿದವರು ಇಲ್ಲ ನಮಗೆ ಎ೦ದು ನುಡಿದಳು |

ಪತ್ನಿ ಮಾತು ಕೇಳಿ ಪರಮ ಭಕ್ತಿಯಿ0ದ ನುಡಿದ ಧರ್ಮಾತ್ಮ ಅರ್ಥ ಕಾಮ್ಯ ಗಳನ್ನು ಕೊಡುವ ಮೋಕ್ಷದಾಯಕ|

ಆದಿ ಮೂರುತಿ ಕೃಷ್ಣ ಓದಿಕೊ೦ಡ ಗೆಳೆಯನೊಬ್ಬ ಮಾಧವನ ಹೊರತು ಮತ್ತೊಬ್ಬ ರಿಲ್ಲ ವೋ|

ಆತನಿದ್ದ ಮೇಲೆ ನಮಗ್ಯಾತರ ದಾರಿದ್ರ್ಯವು ಪ್ರೀತಿಯಿ೦ದ ಹೋಗಿ ಬನ್ನಿರಿ ಎ೦ದು ನುಡಿದಳು|

ವರಮಹಾಲಕ್ಷ್ಮೀ ಅರಸು ಕೃಷ್ಣ ನ ಅರಮನೆಗೆ ಹೋಗಲಿಕ್ಕೆ ನಜ಼ರು ಏನು ಒಯ್ಯ ಲಿ ನರಹರಿಗೆ ಎ೦ದನು |

ಲಕ್ಕು ಮೇಷನ ದರ್ಶನಕ್ಕೆ ಹೋಗಲಿಕ್ಕೆ ಮೂರು ಮುಕ್ಕು ಅವಲಕ್ಕಿ ತಿರಿದು ತ೦ದುಕೊಟ್ಟ ಳು |

ಅದನ್ನು ಗ೦ಟು ಕಟ್ಟಿಕೊ೦ಡು ಬಗಲೊಳಗಿಟ್ಟು ಕೊ೦ಡು ನಗರಧರನ ನಗರಕ್ಕಾಗಿ ಬರುತಲಿದ್ದ ನು |

ಹಾದಿಗೆ ಹರಿವ ಜಲವ ಕ೦ಡು ಸ್ನಾನವನ್ನು ಮಾಡಿಕೊ೦ಡು ವೇದ ಪುಸ್ತಕವನ್ನೇ ಹಿಡಿದು ಓದಿಕೊ೦ಡನು | ಮಲ್ಲೆ,

ಮಲ್ಲಿಗೆ, ಜಾಜಿ ಅಲ್ಲಿದ್ದ ಫಲಗಳನ್ನೇ ನೋಡಿ ಲಕ್ಷ್ಮೀವಲ್ಲ ಭಗೆ ಅರ್ಪಿತವಾಗಲೆ೦ದು ನುಡಿದನು | ಗೋಪುರವಾ ಕ೦ಡು

ದ್ವಾರಕಾಪುರಕೆ ಕೈ ಮುಗಿದು ಶ್ರೀಪತಿಯ ಬಾಗಿಲಲ್ಲಿ ಬ೦ದು ನಿ೦ತನು |

ದ್ವಾರದಲ್ಲಿ ನಿ೦ತವರು ಯಾರು ಎ೦ದು ವಿಚಾರಿಸುತ ನಾರಾಯಣನ ಸಖನೆ೦ದು ಹೇಳುತ್ತಿದ್ದ ನು |

ನಡೆದ ನುಡಿಯ ಕೇಳುತಾಲಿ ನಡೆದು ಬ೦ದ ಚಾರಕರು ಒಡೆಯ ನಿಮ್ಮ ಗೆಳೆಯನ೦ತೆ ಬಡ ಬ್ರಾಹ್ಮ ಣ |

ಹುಟ್ಟು ಮೊದಲು ಅನ್ನ ವಿಲ್ಲ , ಹೊಟ್ಟೆಗು೦ಡ ಮನುಜನಲ್ಲ , ಗಟ್ಟಿ ಗಾಳಿ ಬರಲು ಹಾರುವ೦ತೆ ತೋರ್ಪನು |
ಅಸ್ತಿ ಚರ್ಮ ಆತನ ಹತ್ತಿಕೊ೦ಡ ಹೊಟ್ಟೆ ಬೆನ್ನು ಮತ್ತು ನುಡಿಯ ಮಾತನಾಡಲಾರನು |

ಛಿದ್ರ ಬಟ್ಟೆಯನ್ನೆ ಉಟ್ಟು ಚಿಗುರ ತುಳಸಿ ಕಿವಿಯಲಿಟ್ಟು ಪದ್ಮ ನಾಭ ಪಾಲಿಸೆ೦ದು ಕೂಗುತಿದ್ದ ನು |

ಮರದ ಗು೦ಡು ಸರಗಳನ್ನೆ ಕೊರಳೊಳಗೆ ಹಾಕಿಕೊ೦ಡು ಇರಳಿ ಚರ್ಮ ಸುತ್ತಿಕೊ೦ಡು ಎಡ ಬಗಲಲ್ಲಿಟ್ಟ ನು |

ನಾಮಾ೦ಕಿತವ ಕೇಳಲು, ಸುಧಾಮನೆ೦ದು ಹೇಳುತಿರಲು ನಾನಾ ಪರಿಯ ನಿಮ್ಮ ಸ್ತು ತಿಯ ಮಾಡುತ್ತಿದ್ದ ನು |

ಇಷ್ಟು ಎಲ್ಲ ಮಾತನ್ನು ಚಾರಕರು ಹೇಳುತಿರಲು ಭಕ್ತರೊಡೆಯ ಬಲು ಸ೦ಭ್ರಮದಿ೦ದೆದ್ದ ನು |

ಕರೆಸಿ ಕರವ ಪಿಡಿದು ದಿವ್ಯ ಆಸನದಲ್ಲಿ ಕುಳ್ಳಿರಿಸಿಕೊ೦ಡು ಕರೆಸಿ ಚಾಮರವ ಗಾಳಿ ಬೀಸುತ್ತಿದ್ದ ರು |

ಪನ್ನೀರು ತ೦ದು ಪಾದ ತೊಳೆದು, ದ್ರಾಕ್ಷಿ ಕಿತ್ತಳೆ ಹಣ್ಣು ತಿಳಿಯ ನೀರು ಪ್ರೀತಿಯಿ೦ದ ಕೊಟ್ಟ ರು |

ಪದುಮನಾಭ ಹರುಷದಿ ಮುದದಿ ಮಾತನಾಡಿದನು | ಮದುವೆ ಆಯಿತೆ ಸಖನಿಗೆ0ದು ಕೇಳಿದಾ |

ಸೋಳ ಸಾವಿರ ಸತಿಯರೊಡೆಯ ಶ್ರೀ ಕೃಷ್ಣ ಕೇಳೋ ರಾಣಿಯೊಬ್ಬ ಳಿರುವಳಯ್ಯ ಎನಗೆ ಎ೦ದನು |

ಇಷ್ಟು ದಿವಸ ಇಲ್ಲಿಗೆ ಬಾರದಿದ್ದ ಕಾರಣ ಈಗ ಕಳುಹಿ ಕೊಟ್ಟ ಳೆನ್ನ ಭಾರ್ಯೆಳೆ೦ದನು |

ಅಣ್ಣ ನಮ್ಮ ಅತ್ತಿಗೆ ನಮಗೆ ಏನು ಕಳುಹಿದಾಳು ನಿನ್ನ ಹೆಗಲ ಗ೦ಟು ಬಿಚ್ಚಿ ತೋರಿಸೆ೦ದನು |

ತಲೆಯ ಬಾಗಿ ವಿಪ್ರ ನಾಚಿ ನೆಲವ ನೋಡುತಿರಲು ಕೃಷ್ಣ ಸಲುಗೆಯಿ೦ದ ಗ೦ಟು ಎಳೆದು ಬಿಚ್ಚು ತ್ತಿದ್ದ ನು |

ಸುಜನ ಜನರು ಮಾಡುವ೦ಥ ಭಜನೆ ಒ0ದು ಸಾಕು ನಮಗೆ ರಜತ ಹೇಮ ರತ್ನಾಭರಣ ಯಾತಕೆ೦ದನು |

ಕು೦ದಣಾದ ಪಾತ್ರೆಯೊಳು ತಿರಿದು ತ0ದ ಪ್ರುತಕವನ್ನು ಮ೦ದರೋಧ್ಧಾರನು ಮುಷ್ಠಿ ತೆಗೆದುಕೊ೦ಡನು |

ಮುಷ್ಠಿ ಒ೦ದು ಬ್ಯಾಕೆ ಶ್ರೀ ಕೃಷ್ಣ ನು ತಾ ಮೆಲ್ಲು ತಿರಲು ಕಷ್ಟ ದಾರಿದ್ರವೆಲ್ಲ ಬಿಟ್ಟು ಹೋಯಿತು |

ಎರಡನೆಯ ಮುಕ್ಕು ಪಾಲಗಡಲ ಶಯನ ಮುಕ್ಕು ತಿರಲು ಸಡಗರದ ವೈಕು೦ಠದ ಪದವಿ ಮುಕ್ತಿಯಾಯಿತು |

ಮೂರನೆ ಮುಕ್ಕಿ ಗೆ ನಾರಿ ರುಕ್ಮಿ ಣಿ ಬ೦ದು ಕೃಷ್ಣ ಏನು ವಿಪ್ರಗೆ ಕೊಡುವೆ ಎನುತ ಕರವ ಪಿಡಿದಳು |

ಭಾವನೋರು ತ೦ದ ಬಹು ದೂರದ ಪದಾರ್ಥವು ತಾವು ಸವಿ ನೋಡುವ ದಾವ ನೀತಿಯು ಅಕ್ಕ ಕಳುಹಿಸಿದ

ಅವಲಕ್ಕಿ ನಮಗಿಲ್ಲ ದಾ೦ಗ ಮುಕ್ಕಿ ಬಿಡುವಿರಿ ಎನುತ ನಕ್ಕ ಳಾಗಲೆ |

ಇಷ್ಟು ಮ೦ದಿಯೊಳಗ ನೀ ಮುಷ್ಠಿ ಹಿಡಿದ ಕಾರಣ ದಿಟ್ಟ ತನವ ಎಲ್ಲಿ ಕಲಿತೆ ಹೇಳು ಎ೦ದನು |
ಸರ್ವರೊಳಗೆ ಅಧಿಕವಾದಗರ್ವಿನಾ ರುಕ್ಮಿ ಣಿಗೆ ಕರೆದು ಬುಧ್ಧಿ ಹೇಳಬಾರೆ ಸತ್ಯ ಭಾಮೆಗೆ೦ದನು |

ರ೦ಗ ನಿನ್ನ ಪಟ್ಟ ದರ್ಧಾ೦ಗಿನಿಯಾದ ರುಕ್ಮಿ ಣಿಗೆ ಮು೦ಗೈ ಹಿಡಿಯಲಿಕ್ಕೆ ಯಾರ ಭಯವು ಯಾತಕೆ೦ದಳು |

ವನಧಿಪಾಲ ಭೀಷ್ಮ ಕಾನ ಮಗಳು ಮುದ್ದು ರುಕ್ಮಿ ಣೀಗೆ ಪಶುವ ಕಾಯ್ವ ಗೊಲ್ಲ ರ೦ಜಿಕೆ ಯಾತಕೆ೦ದಳು |

ಆಲ ಶರಧಿ ಲಕ್ಷ್ಮೀ ಹುಟ್ಟಿ ಆಯವನೆ ಸೇರಿದ ಗೋಪಾಲಕರ ಭಯವು ನಮಗೆ ಯಾತಕೆ೦ದಳು |

ವ೦ಕಿ ತೋಳ ಪಿಡಿದ ವಯ್ಯಾರಿ ಸತ್ಯ ಭಾಮನ ಅ೦ಕದಲ್ಲಿ ಕುಳ್ಳಿರಿಸಿಕೊ೦ಡನಾಗ ಮೋಹದಿ |

ಎನ್ನ ಭಕ್ತರಲ್ಲಿ ಪ್ರೇಮ ನಿನಗ ಉ೦ಟಾದರ ಇನ್ನೊ೦ದು ಮುಕ್ಕು ಕೊಡುವೆ ಬಾರೆ ಎ೦ದನು |

ಬಾರೆ ಬಾ ರುಕ್ಮಿ ಣಿ ಭಾಮೆ ಎರಗಳಿದ್ದ ಮೇಲೆ ನೀಡ ನಿನ್ನ ಕರಗಳೊಡ್ಡಿ ನೀಡುವೆ ಎ೦ದನು |

ಮುದ್ದು ರುಕ್ಮಿ ಣಿ ಮು೦ದಕ್ಕೆ ಕರೆದು ಕೃಷ್ಣ ರಾಯ ಪದ್ಮ ರಾಯ ಪಾಲಿಸೆ೦ದು ಕೂಗುತ್ತಿದ್ದ ನು |

ಸೋಗಿನಾ ಗೊ೦ಬೆಯ೦ತೆ ಸೋಳ ಸಾವಿರ ಸತಿಯರೆಲ್ಲ ಭಾಮೆಯರು ಬ೦ದು ಕೃಷ್ಣ ನೆದುರು ನಿ೦ತರು |

ಪುಥ್ಥ ಳಿ ಗೊ೦ಬೆಯ೦ದದಿ ಅಷ್ಟ ಮಹಾ ಸತಿಯರೆಲ್ಲ ಶ್ರೀಕೃಷ್ಣ ನ ಮಾತನ್ನು ಕೇಳುತ ನಗುತ ನಿ೦ತರು |

ಕ೦ತುಪಿತನ ತನ್ನ ಜನಕ ನಿ೦ತು ನೀಡುತಿರಲು ಪ್ರುತಕ ಅನ೦ತವಾದವು |

ಮೂರು ಮುಷ್ಠಿ ಪ್ರತಕವು ಗುರುಸಾ೦ದೀಪರಲ್ಲಿ ಸರ್ವ ಗ್ರ೦ಥ ಓದಿಕೊ೦ಡು ಇರುವುದೆಲ್ಲಾ ಹೇಳಿದನಾ

ಇ೦ದಿರೇಶನು |

ಕಾಷ್ಟ ತನ್ನಿರೆ೦ದು ಗುರು ಪತ್ನಿ ನಮ್ಮ ನ್ನು ಕಳುಹಿದಾಳು ಅಟ್ಟ ಅರಣ್ಯ ದೊಳಗೆ ಆಡುತ್ತಿದ್ದೆವು |

ಕತ್ತಲೆ ಕವಿತರ೦ಜಿ ಕೆಟ್ಟ ಗಾಳಿ ಮಳೆಯು ಸುರಿಯುತಿರಲು ದೃಷ್ಟ ಹುಲಿಯು, ಕರಡಿ ಕೂಗುತ್ತಲಿದ್ದ ವು |

ಗಿಡಕರೊಬ್ಬ ರು ಹತ್ತಿಕೊ೦ಡು ಮಿಡುಕುತಾ ಕುಳಿತಿರಲು ಹುಡುಕುತಾ ಬ೦ದರಾಗ ನಮ್ಮ ಗುರುಗಳು |

ಅ೦ಜಬೇಡಿರಿ, ಅ೦ಜಬೇಡಿರಿ ಎ೦ದು ನಮಗೆ ಅಭಯ ಕೊಟ್ಟು ಚಿರ೦ಜೀವಿ ಆಗಿರೆ೦ದು ಹರಸುತ್ತಿದ್ದ ರು |

ಮಕ್ಕ ಳಿಲ್ಲ ದವರು ನಮ್ಮ ನ್ನು ರಕ್ಷಿಸಿದ ಗುರುಗಳಿಗೆ ಮಕ್ಕ ಳನ್ನು ಕೊಟ್ಟು ಗುರುದಕ್ಷಿಣೆಯನ್ನು |

ಆದವ ಅಡಿಗೆ ಏಳಿರೆ೦ದುಶ್ರೀದೇವಿ ಕರೆಯಲಾಗ ಮಾಧವನ ಸಹಿತ ಮಡಿಯನುಟ್ಟು ಬ೦ದನು |

ಮಡಿಯ ಜರದ ಮೇಲಿನ ಮುತ್ತಿನ ಉಡುದಾರವನ್ನೇ ಕಟ್ಟಿ, ಕಡಗ ಕ೦ಕಣವ ತ೦ದು ಕೈಯಲ್ಲಿಟ್ಟ ರು |
ಕ೦ಠಿ ಕ೦ಠ ಆಭರಣ ಹಾಕಿ ಟೊ೦ಕದುಡುದಾರವು ಕಿವಿಯಲ್ಲಿ ಎ೦ಟು ಮುತ್ತಿನ ಚೌಕಳಿಯಿಟ್ಟ ರು |

ಕುಡಿಯ ಬಾಳೆ ಎಲೆಯ ಹಾಕಿ ನಡುವೆ ಜ್ಯೋತಿ ತ೦ದಿರಿಸಿ ಕಡಲಿ, ಕೋಸ೦ಬ್ರಿ ಉಪ್ಪಿನಕಾಯಿ ರಸಗಳು, ಉಪ್ಪು

ಉಪ್ಪಿನಕಾಯಿ ಹಪ್ಪ ಳ ಸ೦ಡಿಗೆ ಮಿತ್ರ ಜಾ೦ಬವತೆಯರು ಬಡಿಸುತ್ತಿದ್ದ ರು |

ರುಬ್ಬಿದ೦ಬೊಡೆಯು, ಉಬ್ಬ ರಗುಳ್ಳೂ ರಿಗೆ, ಭದ್ರೆ ಜಾ0ಬವ0ತೆಯರು ಬಡಿಸುತ್ತಿದ್ದ ರು |

ಹಾಲು ತುಪ್ಪ ಮ೦ಡಿಗೆ ಮ್ಯಾಲೆ ಬೆಳ್ಳ ಸಕ್ಕ ರೆ ಭಾಮೆ ರುಕ್ಮಿ ಣಿಯರು ತ೦ದು ಬಡಿಸುತ್ತಿದ್ದ ರು |

ದು೦ಡು ಚಕ್ಕು ಲಿ, ಫೇಣಿ, ಉ0ಡಿ, ಖರ್ಚಿಕಾಯಿಗಳು, ಉ೦ಡು ಕೆನೆ ಮೊಸರು ಕೈ ತೊಳೆದುಬ೦ದರು |

ಕರ್ಪೂರದ ವೀಳ್ಯ ವನ್ನು ಅರ್ಥಿಯಿ೦ದ ಮೆಲ್ಲು ತಿರಲು ವಿಪ್ರಗಾಗ ತನ್ನ ಅರಮನೆಯ ತೋರಿದಾ |

ಜ೦ತದ ಹಲಗೆ ಮ೦ಚದಲ್ಲಿ, ಸ೦ಪಿಗೆ ಹೂವಿನ ಹಾಸಿಗೆಯಲ್ಲಿ, ಮು೦ಚೆ ಸುಧಾಮನಿಲ್ಲೆ ಪವಡಿಸೆ೦ದನು |

ಅಣಿಮುತ್ತು ಬಿಗಿದ ಮ೦ಚ ಅರಳು ಮಲ್ಲಿಗೆ ಹಾಸಿಗೆ ಭಾಮ ರುಕ್ಮಿ ಣಿ ಕೃಷ್ಣ ಸಹಿತ ಶಯನ ಮಾಡಿದಾ |

ಅರುಣ ಉದಯದಲ್ಲಿ ಎದ್ದು ಗ೦ಗ ತೆರಳಿ ಸ್ನಾನ ಮಾಡಿ ಪದ್ಮ ನಾಭನ ಅಪ್ಪ ಣೆಯ ಕೇಳಿದಾ |

ಹೋಗಿಬನ್ನಿರೆ೦ದು ವಿಪ್ರನಾಗಶಯನ ಅಪ್ಪ ಣೆ ಕೊಡಲು ಭಾಮೆ ರುಕ್ಮಿ ಣಿಯರಿಗೆ ಹೇಳುತ್ತಿದ್ದ ನು |

ಭಾಳ ತಡೆದು ಬ೦ದಿರೀಗ ಏಳು ಎ0ಟು ದಿನಗಳಿದ್ದು ಹೋಗಬಹುದೆ೦ದಳಾಗ ಆದಿಲಕುಮಿಯು |

ಸತಿಯಳೊಬ್ಬ ಳಿರುವಳಯ್ಯ ಜೊತೆಗೆ ಯಾರು ಇಲ್ಲ ದಿರಲು ಅತೀ ಬೇಗದಿ೦ದ ಅಪ್ಪ ಣೆ ಪಾಲಿಸೆ೦ದನು |

ಅಪ್ಪ ಣೆಯಗೊ೦ಡು ವಿಪ್ರ ಪಟ್ಟ ಶಾಲೆ ಇಳಿದು ಬರಲು ಸುತ್ತಿಬ೦ದು ಹಿಡಿದವಾಗ ಛತ್ರ ಚಾಮರ |

ಅ೦ಬರೀಪವಾದ ಮುತ್ತಿನ೦ಕಣವ ಏರಿಸಿ ಮು೦ದೆ ಮೂರು ಹೆಜ್ಜೆ ಕಳಿಸಿ ಹಿ0ದೆ ಬ೦ದನು |

ತ್ವ ರಿತದಿ೦ದ ಹರಿಯ ವಿಶ್ವ ಕರ್ಮನಾಗ ಕರೆಸಿದ | ಸರ್ವಭಾಗ್ಯ ನಗರವೆಲ್ಲ ನಿರ್ಮಿಸೆ೦ದನು |

ದ್ವಾರಮುತ್ತು ಬಿಗಿದ ದೊಡ್ಡ ದ್ವಾರ ಗೋಪುರಗಳು ದ್ವಾರಕೀಯಕ್ಕಿ ೦ತಧಿಕವಾಗಿ ತೋರ್ಪದು |

ಶ್ರೇಷ್ಠ ವಾದ ದಿವ್ಯ ದೊಡ್ಡ ಪಟ್ಟ ಣದ ಅರಮನೆಗಳು ಅಷ್ಟ ಐಶ್ವ ರ್ಯ ಬ೦ದು ಭರಿತವಾಯಿತು |

ಊರು ಬಿಟ್ಟು ಬರಲು ವಿಪ್ರ ದ್ವಾರ ಕಾವಲಿದ್ದ ಭಟರು ಹೋಗಬ್ಯಾಡ ನಿಲ್ಲೊ ನಿಲ್ಲು ಎನುತ ನುಡಿದರು |

ಅಚ್ಯು ತಾನ೦ದ ಕೊಟ್ಟ ವಸ್ತ್ರ ಆಭರಣವೆಲ್ಲ ಬಿಚ್ಚಿಕೊ೦ಡು ಬಿಳಿಯ ಕೋರಿ ಹಚ್ಚಿ ಕಳುಹ್ಯಾರು |
ಎತ್ತ ಹೋದರೆನ್ನ ಪ್ರಾರಬ್ಢ ಬೇರೆ ಯಾಗದೋ ಸತ್ಯ ವಾದ , ಬ್ರಹ್ಮ ಬರಹ ತಪ್ಪ ದೆ೦ದನು |

ಮಕ್ಕ ಳೆಲ್ಲ ಬ೦ದು ಅಪ್ಪ ಏನು ತ೦ದಿಯ೦ದು ಅಪ್ಪಿಕೊ೦ಡು ಕೇಳಿದಾರ ಇನ್ನೇನು ಹೇಳಲಿ |

ಸಡಗರುಳ್ಳ ಸತ್ಯ ಭಾಮೆ ಉಡುವದೊ೦ದು ಹಳೆಯ ಸೀರೆ ಕೊಡಬಾರದಿತ್ತ ಎನ್ನ ಮಡದಿಗೆ೦ದನು |

ಭಾಗ್ಯ ವ೦ತರೆಲ್ಲ ನಿರ್ಭಾಗ್ಯ ಬ೦ದರೇನು ಫಲ ರುಕ್ಮಿ ಣೀಗೆ ಕರುಣ ಹುಟ್ಟಿಧೋಯಿತೀಗಲೇ |

ನೀರೊಳಗೆ ಮೀನ ಬಳಿಕ ನಾರುತ್ತಿದ್ದ ಬೆಟ್ಟ ವ ಹೇರಮಾರಿ ಕೆ೦ಚಮಾರಿ ಕೆಳಗೆ ಮಾಡಿದಿ |

ಬೇರು ಸವಿದ ಗುಡ್ಡ ಗೌಹಾರ ತಿರುಗಿ ಕ೦ಬದಿ ಶೇರು ಕರಳು ಹಾರಕ್ಕಾಗಿ ತೆಗೆದು ಬಾಯನು |

ನೀನು ನನ್ನ ೦ತೆ ಬಡವನಾಗಿ ಬೇಡಿಕೊ೦ಡೆ ಭೂಮಿ ದಾನವನ್ನು ಕೊಡಲಿಕ್ಕೆ ಪಿಡಿಯಲಿಲ್ಲ ವೋ |

ನಾರನುಟ್ಟ ನಾರಿಬಿಟ್ಟ ಘೋರಾರಣ್ಯ ತಿರುಗಿ ಚೋರತನವ ಮಾಡಿ ನೀನು ಬಯಸಿಕೊಳ್ಳ ಲಿಲ್ಲ ವೋ |

ಬೆತ್ತಲಿದ್ದ ಬಿಳಿಯ ಕುದರಿ ಕಾಣದ೦ತೆ ಮಾಡಿದಿ | ಬಿಚ್ಚು ಕತ್ತಿ ಕಲಿಗಳಿ೦ದ ಹಿಡಿದು ತಿರುಗಿದಿ |

ಈಶನಾದ ನಿನಗೆ ಈ ಸಮುದ್ರ ವಾಸ ನಿನಗೆ ತಪ್ಪ ದೋ ಈಶನಾದ ಭೂ ಸಮುದ್ರ ದಾಟಿ ನಿ೦ತಿಯೋ |

ದುಷ್ಟ ಮಗಳ ನೀನು ಉ೦ಗುಷ್ಠ ದಿ೦ದ ಪಿಡಿದಿಯೋ | ಕೊಟ್ಟ ಶರಧಿ ಕರಡಿ ಮಗಳ ಮಾಡಿದಿ |

ಮಗಳ ವಿದುರನ ಬಾರಳಿದ್ದ ಬಸುರಿ ಬಾಣ೦ತಿ ಖರ್ಚಿಗಿಲ್ಲ ದಾ೦ಗ ನಾಭಿಯಿ೦ದ ನಾಲ್ಕು ಮುಖದ ಶಿಶುವಿನ

ಪಡೆದಿಯೋ |

ನಾಲ್ಕು ಮುಖದ ಬ್ರಹ್ಮ ನೆ೦ಬೋ ಏಕಪುತ್ರನ ಪಡೆದಿಯೋ |

೧೪ ಲೋಕ ಸೃಷ್ಟಿ ಮಾಡ೦ತಾಗ ಹೇಳಿದಿ |

ಅನ್ನ ಪಾನ ಬಿಟ್ಟ ವರು ಎನ್ನು ವರು ಎ೦ದು ಹೇಳುವಿ | ಅನ್ಯ ವಿಷಯ ಕೇಳಿದವರ ಕೆಳಗೆ ನೂಕುವಿ |

ಜಾತಿ ಕುಲಗಳಿಲ್ಲ ದೆ ಗೊಲ್ಲ ರೆ೦ದು ಉ೦ಡು ಬೆಳೆದೆ ಭೀತಿ ಭಯವು ಇಲ್ಲ ದೆ ಕರಡಿ ಮಗಳ ಕೂಡಿದಿ |

ಮಾತೆಯ ಬಿಡೆಯು ಇಲ್ಲ ದ ಮಾವನವರ ಮಡವಿದೀ | ಅನಾಥ ಬ್ರಾಹ್ಮ ಣನ ಬಿಡೆಯು ಯಾತಕೆ೦ದನು |

ಹತ್ತಲೊ೦ದು ರಥಗಳಿಲ್ಲ ಹದ್ದು ನಿರೊಳಾಡಿದಿ ಸರ್ಪದಲ್ಲೆ ಸುಖದ ಶಯನವನ್ನೇ ಮಾಡಿದಿ |

ತಾರಗುಣಗಳೆಣಿಸಲಿಕ್ಕೆ ಯಾರಿಗೆ ಅಸಾಧ್ಯ ವೋ ನಾಗಶಯನ ನಿನ್ನ ಗುಣವ ಪೊಗಳಾರೆನು |


ಹೆಜ್ಜೆ ಹೆಜ್ಜೆ ಗೊಮ್ಮೆ ಹರಿಯ ನಿ೦ದಿಸುತ್ತ ಬರುತಿರಲು ವಜ್ರ ಮಾಣಿಕದ ಗೋಪುರವ ಕ೦ಡನು |

ಇಲ್ಲಿ ದಿಕ್ಕು ತಪ್ಪಿದೆನು ಪುಲ್ಲ ನಾಭನ ಪಟ್ಟ ಣ ಹೌದು ಅಲ್ಲ ಎ೦ದು ಆಲೋಚಿಸಿ ಬ೦ದನು |

ದ್ವಾರಕೆ ಸುತ್ತಲಿರುವ ಸಾಗರ ಸಮುದ್ರವೆಲ್ಲ ಘೋರಿಗುಟ್ಟಿ ಬರುವ ತೆರೆಯ ಕಾಣನೆ೦ದನು |

ಊಟದಾಸೆಗಾಗಿ ಬ೦ದಗೌಟಕ ಬ್ರಾಹ್ಮ ಣ ಕೋಟಿ ಮಣಿಯ ಕ೦ಡು ಎನಗೆ ಹಾಸ್ಯ ಮಾಡುವರು |

ಭಕ್ಷದಾಸೆಗಾಗಿ ಬ೦ದ ಭಿಕ್ಷು ಕ ಬ್ರಾಹ್ಮ ಣ ಲಕ್ಷ್ಮೀರಮಣ ಕ೦ಡು ಎನಗೆ ಅಲಕ್ಷ್ಯ ಮಾಡಿದಾ |

ಆಕಳು ಕರುವಿನ ಹಿ೦ಡಿನ ಗೋಪಾಲಕರ ಕರೆದು ಕೊಳಲನೂದುತ್ತ ಕರುವಿನಾ ಹಿ೦ಡು ಬರುತ್ತಲಿದ್ದ ವು |

ಈ ಪುರವುದಾರದೆ೦ದು ಗೋಪಾಲಕರ ಕೇಳುತ್ತಿದ್ದ ವು | ಶ್ರೀಪತಿಯು ಕೊಟ್ಟ ಸುಧಾಮಗೆ೦ದನು |

ದನವ ಕಾಯ್ವ ಮಕ್ಕ ಳೆಲ್ಲ ಎನಗೆ ಹಾಸ್ಯ ಮಾಡುವರು ಜನುಮ ವ್ಯ ರ್ಥವೆ೦ದು ಮನದಿ ಮರುಗುತ್ತಿದ್ದ ರು |

ಆನೆ ಪಲ್ಲ ಕ್ಕಿ ತೇಜಿ ಅ೦ದಣವಾದ ರಥಗಳು ಕಾಲು ಸಾಲಾಳು ಜನರು ಬರುತಲಿದ್ದ ರು | ಪಟ್ಟ ಣದಾ ನಾಮವೇನು ,

ಪಟ್ಟ ಣದ ಅರಸುದಾರು ,

ಇಷ್ಟು ಮ೦ದಿ ಬರುವುದ್ಯಾರು ಎನುತ ಕೇಳಿದಾ | ಸು೦ದರ ಪಟ್ಟ ಣ ಸುಗುಣ ಸುಧಾಮನು ಇ೦ದಿರೇ೦ದ್ರ

ಪುರವನಾಳೋ ಅರಸು ಎ೦ದನು |

ಮರ್ಕಟಾ ಮಣಿಯ ಸರವ ಮರ್ಕಟದೊಳಗೆ ಹಾಕಿರುವ೦ಥ ತಿರುಕ ಬ್ರಾಹ್ಮ ಣನಿಗೆ ಇ೦ಥ ದ್ವ ರಿತನ್ಯಾತಕೋ |

ಹುಚ್ಚ ಹಾರವನೇ ಕೇಳೋ ಅಚ್ಯು ತಾ ಅರಸುತನವ ಮೆಚ್ಚಿಕೊಟ್ಟ ಇಚ್ಛೆ ಸ೦ಪೂರ್ಣವಾಯಿತು |

ಬಡವ ನಿನಗೆ ಒಬ್ಬ ರ ಗೊಡವಿ ಗೋಷ್ಠಿಯಾತಕೋ ನಡೆಯೋ ಸುಮ್ಮ ನೆ ಇ೦ಥಾ ಮಾತನಾಡಲಾಗದು |

ಇತ್ತ ಕುಚೇಲಿ ತನ್ನ ಉಪ್ಪ ರಿಗೆಯನ್ನೇರಿ ಮತ್ತೆ ಪತಿಯ ಬರುವ ದಾರಿಯನ್ನು ನೋಡುತ್ತಲಿದ್ದ ಳು |

ರಥವು ತೇಜಿ ಸಹಿತವಾಗಿ ರಾಜ ಬೀದಿ ಶೃ೦ಗರಿಸಿ ಜತೆಗೆ ಎಲ್ಲ ಜನರು ಮು೦ದೆ ನಡೆಯಿರೆ೦ದಳು |

ವಿಪ್ರವೇದ ಪಾಠಕರು ಮುತ್ತೈದೆಯರೆಲ್ಲ ರುರ೦ಭೆ ಕುಚಲ ಸಹಿತರಾಗಿ ನಡೆದು ಬ೦ದರು |

ಮಿ೦ದು ಪೀತಾ೦ಬರವನುಟ್ಟು ಮೇಲೆ ಜರದ ರವಿಕೆ ತೊಟ್ಟು ಕು೦ದಣಾದ ಡಾಬು ತ೦ದು ನಡುವಿಗಿಟ್ಟ ಳು |
ಎಳೆಯ ಕಾಳಿ೦ಗಪೊಲ್ವ ಹೆರಳಿಗೊಬ್ಬ ಹೂವ ಸುತ್ತಿ ಚೌರಿ ರಾಗುಟೆಯ ಚ೦ದ್ರದ ಗೊ೦ಡೆ ಹೊಳೆಯುತ್ತಾ

ತೂಕವಾದ ಸರಿಗೆ ಗೆಜ್ಜೆ ಟೀಕ್ಕಿ ನತ್ತು ವಡ್ಡಿಕಿ ಏಕವಾಳಿ ಸರವ ಪದಕ ಹಾಕುತ್ತಿದ್ದ ರು |

ವಜ್ರದ್ವಾಲೆ ಬುಗುಡಿ ಚ೦ದ್ರ ಚೆಲ್ವೆ ಬಾಳ ಗಲ್ಲ ಕ ಹೊ೦ದಿದ ಮುಕುರಿ ಬಳಿಕ ದ್ರಾಕ್ಷಿ ಗೊ೦ಚಲು |

ಸಕಲ ಆಭರಣದೊಳಗೆ ಶಿಖರವಾದ ಶ್ರೇಷ್ಠ ವೋ ಮುಕುರ ಮೂಗಿನಲ್ಲಿಟ್ಟು ಮುದ್ದು ಸೂಸುತಾ |

ಪಿಲ್ಲೆ ಕಾಲು೦ಗುರವನಿಟ್ಟು ಘಿಲ್ಲು ರುಳಿ ಪೈಜಣಾಕಿ ಘಲ್ಲು ಘಲ್ಲೆನುತ ಹೆಜ್ಜೆ ನದೆದು ಬ೦ದಳು |

ಕರ್ಣ ಸಮುದ್ರವೆ೦ಬೋ ಕೌತುಕ ವ್ಯಾಪಾರವನ್ನು ತಿಳಿಯದವರು ತಿಳಿಯಲಿಲ್ಲಾ ಎನುತ ಬ೦ದಳು |

ರಾಜ ಸಿ೦ಹಾಸನ ಏರಿದ ಸುಧಾಮನು ಬ್ರಾಹ್ಮ ಣರಿಗೆ ದಕ್ಷಿಣೆ ತಾ೦ಬೂಲ ಕೊಟ್ಟ ನು |

ಅ೦ದಿಗೀ ಅರಳಲಿ ಬಿ೦ದೂಲಿ ಬಾಪುರನಿಟ್ಟು ಕ೦ದರೆಲ್ಲ ಬ೦ದು ಬ೦ದು ಮು೦ದ ನಿ೦ತವು |

ತೊದಲ ನುಡಿಗಳಾಡುತಲಿ ಬರಲಿ ಬ0ದ ಮಕ್ಕ ಳನ್ನು ತೊಡೆಯನೇರಿ ತ೦ದೆ ಮುಖವ ನೋಡುತ್ತಿದ್ದ ವು |

ಅಚ್ಚು ಕೆ೦ಪು ಕರಿದು ಬಿಳಿದು ಅಚ್ಚ ನ್ನಾ ಹರಳಿನಾ ವಸ್ತ್ರ ನಮಗ ಯಾರು ಕೊಟ್ಟ ರು ಎನುತ ಕೇಳಿದರು |

ಗದ್ದ ಗಲ್ಲ ಹಿಡಿದು ಕೇಳು ಮುದ್ದು ಮಕ್ಕ ಳನ್ನೇ ನೋಡಿ ಪದ್ಮ ನಾಭನೆ೦ಬ ಧಣಿಯು ಕೊಟ್ಟ ನೆ೦ದನು |

ಹರಿದು ನೀನು ತಿರಿದು ತ೦ದ ಶೆರಿ ಅವಲಕ್ಕಿ ಗೆ ಹರಿಯು ಮಾಡಿದಾಶ್ಚ ರ್ಯ ಇನ್ನೇನು ಹೇಳಲಿ |

ಆತನ ಹೆ೦ಡಿರೊಳಗ ನಿನ್ನ ನಾ ನೆನಸುತ ಕೋತಿಯ೦ಗ ಕಣ್ಣು ಬಿಡುತ ಕುಳಿತನೆ೦ದನು |

ಜ್ಯೋತಿ ಮತ್ತು ಪೋಲುವೋ ಸೂಕ್ಷ್ಮವಾದ ಸತ್ಯ ಭಾಮೆ ಕೃಷ್ಣ ರಾಯರ ತೊಡೆಯ ಮೇಲೆ ಒಪ್ಪು ತ್ತಿದ್ದ ಳು |

ಅಲ್ಪ ಅವಲಕ್ಕಿ ಗೆ ಅಜನ ಕಲ್ಪ ತನಯನು೦ಡು ಸ್ವ ಲ್ಪ ಸವೆಯದಷ್ಟು ಭಾಗ್ಯ ಕೊಟ್ಟ ನಮ್ಮ ಪ್ಪ ಗ್ಯಾರು ಸರಿ ಇಲ್ಲ ವೋ |

ಬೆಳ್ಳೀ ಬ೦ಗಾರ ಕೊಟ್ಟು ಕಳ್ಳ ರಾ ಭಯ ಹಚ್ಚಿದಾ ಎಲ್ಲ ಸೆಳೆದುಕೊ೦ಡು ಎನ್ನ ಮನಸು ನೋಡಿದಾ | ತೋಪು

ಕರಿಯ ಕಾವಲಿ ಗೋಪುರ ದೇವಾಲಯ ನಾನ ಪರಿಯ ಚಿತ್ರ ಮ೦ಟಪ ರಚಿಸಿದ |

ಕೆರೆಯ ನೀರು ಕೆರೆಗೆ ಚೆಲ್ಲಿ ವರಗಳನ್ನು ಪಡೆದುಕೊ೦ಡು ಹರಿಯು ಕೊಟ್ಟ ಭಾಗ್ಯ ವೆಲ್ಲ ಹರಿಗೆ ಅರ್ಪಿಸಿ |

ಅಚ್ಚು ಗೋವು ಹಿ೦ಡು ದಾನ ಅಚ್ಚ್ಯು ತಾನರಸು ದಾನ ವಿಶ್ವ ಮೂರುತಿಗೆ ಕೊಟ್ಟ ದೀಪದಾನವು |

ಅನ್ನ ದಾನ, ಕನ್ಯಾದಾನ ಧಾನ್ಯ ಬೆಳೆದ ಧರುಣಿ ದಾನ, ಕನ್ಯಾದಾನ ಮಾಡಿ ಕೃತಾರ್ಥನಾದನು |
ಬಡವ ಸುಧಾಮನ ಬಿಡದೆ ಪೂರೈಸಿರೋ ಒಡೆಯ ಶ್ರೀರಾಮನೆ೦ದು ಹೊಗಳಿರೋ |

ಕಷ್ಟ ಬ೦ದ ಕಾಲಕ ಹರಿಯ ಮುಟ್ಟಿ ಭಜಿಸಿರೋ ಕಷ್ಟ ದಾರಿದ್ರ್ಯವೆಲ್ಲಾ ಬಿತ್ತು ಹೋಗುವದೋ |

ಭಕ್ತಿಯಿ0ದ ಈ ಕಥೀ ಚಿತ್ತ ಕೊಟ್ಟು ಕೇಳಿದವಗೆಪುತ್ರ ಸ೦ತಾನ ಕೊಡುವ ಪುರುಷೋತ್ತಮಾ |

ನೇಮದಿ೦ದಲಿ ಕಥೀ ಧ್ಯಾನವಿಟ್ಟು ಕೇಳಿದವರಿಗೆ ಕಾಮಿತಾರ್ಥ ಕೊಡುವ ಭೀಮೇಶ ಕೃಷ್ಣ ನು |

ಶ್ರೀ ಕೃಷ್ಣಾರ್ಪಣಮಸ್ತು |

ಜಯ ಜಯ ಪಾ0ಡುರ0ಗನಿಗೆ |

ಪಾಲಿಸು ಮ0ಗಳಾ0ಗನಿಗೆ ||

ಹಿಡಿಯು ಅವಲಕ್ಕಿ ಯು ನೀನು |

ಬಡವ ಸುಧಾಮನಿಗೆ ನೀನು ||

ತಡೆಯಾದೆ ನೀ ಭಾಗ್ಯ ವ ಕೊಟ್ಟೆನ್ |

ಒಡೆಯಾ ನೀನು ಹೌಧೌದೋ||

ಪಾರ್ಥಸಾರಥಿಯು ನೀ ಆದಿ |

ಪಾ0ಡವರನ್ನೆ ಕಾಯ್ದೆ ||

ಪಾಲನ ಮಾಡೋ ವೇನೋ ನೀನು |

ನಿನ್ನ ಪಾದ ನ0ಬಿದೇನೋ ಬ್ಯಾಗ ||

ಕರುಣಾವೀರಲಿಯು ನಿನಗೆ |

ಪರಮಾತ್ಮ ನೆ ನಿ0ದೆ ಸ್ಮ ರಣೆ ||

ತ್ವ ರಿತದೀ ನೀ ಬ0ದು ಕಾಯೋ |

ಗಿರಿಯೊಳ ವೇ0ಕಟರಮಣ ||

You might also like