You are on page 1of 6

Grade: IV Subject: Kannada

Total Marks: 40
Term I Examination Model Question Paper Date:
I.ಕೆಳಗಿನ ಗದ್ಯಭಾಗವನ್ನು ಓದಿ, ಕೊಟ್ಟಿರುವ ಯಾವುದಾದರೂ ೫ ಪ್ರಶ್ನೆಗಳಿಗೆ ಉತ್ತರವನ್ನು ಗುರುತಿಸಿ. 5X1M=5M
(Read the below given passage and choose the correct answer for any 5 questions.)

ನರಿಯೊಂದು ತುಂಬಾ ಹಸಿದಿತ್ತು ಅದು ಆಹಾರವನ್ನು ಹುಡುಕುತ್ತಾ ಅಲ್ಲಿ


ಮತ್ತು ಇಲ್ಲಿ ಅಲೆದಾಡಲು ಪ್ರಾರಂಭಿಸಿತು. ತುಂಬಾ ಸಮಯ ಹುಡುಕಿದ
ನಂತರವೂ ನರಿಗೆ ತಿನ್ನಲು ಏನೂ ಸಿಗಲಿಲ್ಲ , ಆಗ ನರಿಯ ಕಣ್ಣು ಗಳು
ಹತ್ತಿರದ ತೋಟದ ಮೇಲೆ ಬಿದ್ದಿತು. ತೋಟವು ತುಂಬಾ ಸುಂದರ
ಮತ್ತು ಹಸಿರು ಬಣ್ಣದ್ದಾಗಿತ್ತು. ನರಿಯು ತೋಟದ ಕಡೆಗೆ ವೇಗವಾಗಿ
ಚಲಿಸಲು ಪ್ರಾರಂಭಿಸಿತು.ನರಿಯು ತನಗೆ ತೋಟದಲ್ಲಿ ಏನಾದರೂ
ತಿನ್ನಲು ಸಿಗುತ್ತದೆ ಎಂದು ಯೋಚಿಸುತ್ತಾ ವೇಗವಾಗಿ ಚಲಿಸಲು
ಪ್ರಾರಂಭಿಸಿತು. ನರಿಯು ತೋಟವನ್ನು ತಲುಪಿದ ತಕ್ಷಣ, ತೋಟವು
ದ್ರಾಕ್ಷಿಯಿಂದ ತುಂಬಿರುವುದನ್ನು ನೋಡಿತು.

ಎಲ್ಲಾ ದ್ರಾಕ್ಷಿಗಳು ಸಂಪೂರ್ಣವಾಗಿ ಮಾಗಿದ್ದವು.ದ್ರಾಕ್ಷಿಯನ್ನು ನೋಡಿ ನರಿಗೆ


ತುಂಬಾ ಸಂತೋಷವಾಯಿತು.ದ್ರಾಕ್ಷಿಯ ವಾಸನೆಯಿಂದ, ದ್ರಾಕ್ಷಿಗಳು ಎಷ್ಟು
ರಸಭರಿತ ಮತ್ತು ಸಿಹಿಯಾಗಿರುತ್ತವೆ ಎಂಬ ಕಲ್ಪನೆ ನರಿಗೆ ಸಿಕ್ಕಿತ್ತು. ನರಿಯು
ತುಂಬಾ ಆತುರ ಮತ್ತು ಆಸೆಯಿಂದ ದ್ರಾಕ್ಷಿ ತಿನ್ನಲು ಜಿಗಿಯಿತು. ಆದರೆ ಅದು
ನರಿಯ ಕೈಗೆ ಹುಡುಕಲಿಲ್ಲ. ಎಷ್ಟೇ ಪ್ರಯತ್ನ ಮಾಡಿದರು ಕೊನೆಗೂ ನರಿಗೆ
ದ್ರಾಕ್ಷಿಯನ್ನು ತಲುಪಲು ಸಾಧ್ಯವಾಗಲಿಲ್ಲ.

1. ಯಾರು ತುಂಬಾ ಹಸಿದಿದ್ದರು?


a) ತೋಳ b) ನರಿ c) ಆನೆ d) ಹಸು
2. ನರಿಯ ಕಣ್ಣು ಎಲ್ಲಿ ಬಿದ್ದಿತ್ತು?
a) ಗದ್ದೆಯ ಮೇಲೆ b) ಕಾಡಿನ ಮೇಲೆ c) ತೋಟದ ಮೇಲೆ d) ಕೋತಿಯ ಮೇಲೆ
3. ತೋಟವು ತುಂಬಾ ಸುಂದರ ಮತ್ತು ____________ಬಣ್ಣದ್ದಾಗಿತ್ತು.
a) ನೀಲಿ b) ಕೆಂಪು c) ಬಿಳಿ d) ಹಸಿರು
4. ನರಿ ಏಕೆ ಜಿಗಿಯಿತು?
a) ಸೇಬು ತಿನ್ನಲು b) ದ್ರಾಕ್ಷಿ ತಿನ್ನಲು c) ಕಿತ್ತಳೆ ತಿನ್ನಲು d) ಕಲ್ಲಂಗಡಿ ತಿನ್ನಲು
5. ದ್ರಾಕ್ಷಿಗಳು ಹೇಗಿದ್ದವು?
a) ಒಣಗಿದ್ದವು b) ಮಾಗಿದ್ದವು c) ಹುಳಿಯಾಗಿದ್ದವು d) ಕಹಿಯಾಗಿದ್ದವು
6. ನರಿಗೆ ತುಂಬಾ _____________
a) ದುಃಖವಾಯಿತು b) ಬೇಸರವಾಯಿತು c) ಸಂತೋಷವಾಯಿತು d) ನೋವಾಯಿತು
1
II. ಕೆಳಗಿನ ಪದ್ಯಭಾಗವನ್ನು ಓದಿ, ಕೊಟ್ಟಿರುವ ಯಾವುದಾದರು ೫ ಪ್ರಶ್ನೆಗಳಿಗೆ ಉತ್ತರವನ್ನು ಗುರುತಿಸಿ. 5X1M=5M
(Read the poem given below and tick the correct answer for any 5 given questions)

ಮಳೆ ಮಳೆ ಮಳೆ ಆಕಾಶದಿ ಸುರಿವ ಮಳೆ


ಬಿಡದೆ ಸುರಿದ ಜಡಿ ಮಳೆ.
ರಾಜು ತೇಜು ಮಳೆಯಲಿ ಕುಣಿದರು
ಇವರು ಮಳೆಯಲಿ ನೆನೆದರು.
ಕಾಗದದ ಹಡಗು ಮಾಡಿದರು
ನೀರಲಿ ತೇಲಿಸಿ ಕುಣಿದರು.

1.ಮಳೆ ಎಲ್ಲಿ ಸುರಿಯುತ್ತಿದೆ? __________________________.


a. ಆಕಾಶದಲ್ಲಿ b. ಮನೆಯಲ್ಲಿ c.ಮೋಡದಲ್ಲಿ d.ಕಾಡಿನಲ್ಲಿ
2. ಸುರಿದ ಮಳೆ ಯಾವುದು? _________________________.
a. ಜಡಿಮಳೆ b. ಜೋರುಮಳೆ c. ಬೆಂಕಿಮಳೆ d. ತುಂತುರು ಮಳೆ
3. ಮಳೆಯಲ್ಲಿ ಯಾರು ಕುಣಿದರು? ______________________.
a. ರಾಮಶಾಮ b. ರಾಜುತೇಜು c. ರವಿರಾಮ d. ಚಂದಮಾಮ
4. ಹಡಗನ್ನು ಯಾವುದರಿಂದ ಮಾಡಿದರು? ________________.
a. ಕಾಗದಿಂದ b. ಕಬ್ಬಿಣದಿಂದ c. ಮುತ್ತಿನಿಂದ d.ತಗಡಿನಿಂದ
5. ಹಡಗನ್ನು ಎಲ್ಲಿ ತೇಲಿಸಿ ಕುಣಿದರು? ___________________.
a. ಮಳೆಯಲ್ಲಿ b. ನೀರಲ್ಲಿ c. ನದಿಯಲ್ಲಿ d.ಕೊಳದಲ್ಲಿ
6. ಕುಣಿದರು ಪದದ ಪ್ರಾಸ ಪದ _______________________.
a. ಮಾಡಿದರು b. ನೆನೆದರು c. ಕುಳಿತರು d. ನೆನೆದರು

III. ಸೂಚನೆಯಂತೆ ಕೆಳಗಿನ ಯಾವುದಾದರೂ 10 ಪ್ರಶ್ನೆಗಳಿಗೆ ಉತ್ತರಿಸಿ. 10X1M=10M


(Answer any ten of the following questions as instructed.)

1. ಗೌರವ ಪದದ ವಿರುದ್ಧಾರ್ಥಕ ಪದ _______________


a) ಸಮ ಗೌರವ b) ಅಗೌರವ c) ಅಪ ಗೌರವ d) ಸಗೌರವ

2. ಮಾದರಿಯಂತೆ ಬರೆಯಿರಿ. ರಾಜ:ಅರಸ,ದೊರೆ::ಅಮ್ಮ:__________________________


a) ತಾಯಿ,ಮಾತೆ b) ಅಮ್ಮ,ಅಪ್ಪ c) ತಾಯಿ-ತಂದೆ d) ತಾಯಿ ,ಅಜ್ಜಿ

3. ಈ ವಾಕ್ಯದ ಸರಿಯಾದ ರೂಪ. ಒಳ್ಳೆಯ ಹುಡುಗಿ ಇವಳು.

a) ಇವಳು ಒಳ್ಳೆಯ ಹುಡುಗಿ.


b) ಒಳ್ಳೆಯ ಇವಳು ಹುಡುಗಿ.
c) ಇವಳು ಹುಡುಗಿ ಒಳ್ಳೆಯ.
d) ಹುಡುಗಿ ಒಳ್ಳೆಯ ಇವಳು.
2

4. ನೋಡಿ+ ಇಲ್ಲ = ನೋಡಿಲ್ಲ :: ಮಾಡಿ + ಇಲ್ಲ = ________________


a) ಮಾಡಿಲ್ಲ b) ಮಾಡುವುದಿಲ್ಲ c) ಮಾಡೇಇಲ್ಲ d) ಮಾಡುವುದೇ ಇಲ್ಲ

5. ಈ ಗಾದೆಯನ್ನು ಪೂರ್ಣಗೊಳಿಸಿ. ಶಕ್ತಿಗಿಂತ _______________________


a) ಬುದ್ಧಿ ಮೇಲು b) ಯುಕ್ತಿಮೇಲು c) ಆಸೆ ಮೇಲು d) ನೀತಿಮೇಲು

6. ರಾಜ ಪದದ ಸಮಾನಾರ್ಥಕ ಪದ . ____________


a) ಸೈನಿಕ b) ಅರಸ c) ಮಂತ್ರಿ d) ಭಟ

7. ಇವುಗಳಲ್ಲಿ ಗುಂಪಿಗೆ ಸೇರದ ಪದ ? ಸೇಬು, ದಾಳಿಂಬೆ, ಮಾವು, ಈರುಳ್ಳಿ

a) ದಾಳಿಂಬೆ b) ಸೇಬು c) ಈರುಳ್ಳಿ d) ಮಾವು

8. ಕಸ ಪದದ ಜೋಡಿನುಡಿ ಪದ ___________

a) ಕಡ್ಡಿ b) ಗಿಸ c) ಪಟ d) ತೊಟ್ಟಿ

9. ಗುಡುಗಿತು ಪದದ ಪ್ರಾಸ ಪದ ___________

a) ಕವಿಯಿತು b) ನಡುಗಿತು c) ಜರುಗಿತು d) ಮುದುಡಿತು

10. ಭಾಷೆ + ಅಲ್ಲಿ = ____________ ಈ ವಾಕ್ಯವನ್ನು ಕೂಡಿಸಿ ಬರೆಯಿರಿ.

a) ಭಾಷೆಯಲ್ಲಿ b) ಭಾಷೆಯಿಂದ c) ಭಾಷೆಯಅಲ್ಲಿ d) ಭಾಷೆಅಲ್ಲಲ್ಲಿ

11. ಮುಗಿದಾವು ಪದದ ಬರೆಹದ ಭಾಷೆಯ ರೂಪ ____________

a) ಮುಗಿಯುವುವು b) ಮುಗಿಯುತ್ತವೆ c) ಮುಗಿಯಬಹುದು d) ಮುಗಿಯಾವು

12. ಅಜ್ಜ ಪದದ ಲಿಂಗ ಬದಲಿಸಿ ಬರೆದಾಗ ___________ ಆಗುತ್ತದೆ.

a) ಅಜ್ಜಿ b) ಅತ್ತೆ c) ಅಮ್ಮ d) ಅಜ್ಜಯ್ಯ

IV. ಕೆಳಗಿನ ಯಾವುದಾದರೂ ೨ ಪ್ರಶ್ನೆಗೆ ಎರಡು - ಮೂರು ವಾಕ್ಯಗಳಲ್ಲಿ ಉತ್ತರಿಸಿ. 2X2M=4M


(Answer the given any 2 of question in 2-3 sentences)

1. ಉಳುಮೆಯ ಬಗ್ಗೆ ಗುರುಗಳು ನೀಡಿದ ವಿವರಣೆ ಏನು?


2.ಉಲ್ಲಾಸನಿಗೆ ಸಂತೋಷವಾಗಲು ಕಾರಣವೇನು?

3. ಸಿಟ್ಟುಗೊಂಡ ಸರಸತಿಯನ್ನು ಸಮಾಧಾನ ಮಾಡಿದ ಬಗೆ ಹೇಗೆ?

V.1. ಕೆಳಗಿನ ಪದ್ಯ ಭಾಗವನ್ನು ಪೂರ್ಣಗೊಳಿಸಿ. 3M


(Complete the given blank verse)

ಕಲ್ಲಮ್ಮ ತಾಯಿ ______________________


___________________________ ನಾ ನಿನಗೆ
ಬೆಲ್ಲಾದಾರತಿಯಾ _______________________

ಅಥವಾ(OR)

2.ಆವರಣದಲ್ಲಿರುವ ಪದಗಳಲ್ಲಿ ಸೂಕ್ತ ಪದ ಆರಿಸಿ ಖಾಲಿ ಬಿಟ್ಟ ಸ್ಥಳದಲ್ಲಿ ಬರೆಯಿರಿ.


(Fill in any 3 blanks given below using the clue box)
ತಂಪು ಮಲೆನಾಡ ಶ್ರೀ ಜಯಚಾಮರಾಜೇಂದ್ರ ರಾಯಗಡ

1. ಶಿವಾಜಿ ಪಟ್ಟಾಭಿಷೇಕವು __________ದಲ್ಲಿ ನಡೆಯಿತು.

2. ಮೋಡ ಮೇಲಕೇರಿದಾಗ __________ತಗುಲಿತು.

3. ಕಿಶೋರನ ಅಜ್ಜಿಯ ಮನೆ ________ತಪ್ಪಿನಲ್ಲಿದೆ.


4. ಮೈಸೂರಿನಲ್ಲಿ ____________ಮೃಗಾಲಯವಿದೆ.

VI.ಈ ಕೆಳಗಿನ ಚಿತ್ರದ ಬಗ್ಗೆ ೩-೪ ವಾಕ್ಯಗಳಲ್ಲಿ ಬರೆಯಿರಿ. 3x1M=3M


(Observe the given picture and frame 3-4 sentences about the same.)

_____________________________________________________

_____________________________________________________

_____________________________________________________

_____________________________________________________

_____________________________________________________

_____________________________________________________

VII. ಕೆಳಗಿನ ಯಾವುದಾದರು ೬ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ. 6X1M=6M


(Answer any 6 questions in one sentence)
1. ಅಜ್ಜಿ ಮಕ್ಕಳಿಗೆ ಏನೇನು ಕೊಡಿಸಿದರು?

2. ತೋಟದಲ್ಲಿ ಹೆಚ್ಚಾಗಿ ಯಾವ ಗೊಬ್ಬರವನ್ನು ಬಳಸುತ್ತಿದ್ದರು?

3. ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಯಾವ ಯಂತ್ರವನ್ನು ನೋಡಿದಳು?

4. ಕೊಂಡಾಣದುರ್ಗ ಯಾರ ವಶದಲ್ಲಿತ್ತು?

5. ಸರಸತಿಗೆ ಸಿಟ್ಟು ಬಂತು ಏಕೆ?

6. ತಾಯಿಗೆ ಮಗನು ಏನೆಂದು ಕೇಳಿದನು?

7. ಸಾಮಾನ್ಯವಾಗಿ ಹೊಲವನ್ನು ಯಾವುದರಿಂದ ಉಳುತ್ತಾರೆ?

VI. ಈ ವಾಕ್ಯಗಳನ್ನು ಯಾರು, ಯಾರಿಗೆ ಹೇಳಿದರು? ಎಂದು ಬರೆಯಿರಿ. 2X2M=4M


(Who said to whom)
1. “ಬಾ ಕಂದ ಇಲ್ಲಿ ಕುಳಿತುಕೊ."
2. “ಇದು ಯಾವ ಬೆಳೆ?”

ಅಥವಾ (OR)
3. “ಗಲಾಟೆ ಮಾಡದೆ ಮೌನವಾಗಿ ಬನ್ನಿ”

You might also like