You are on page 1of 4

Whitefield Global School

Grade: VIII
Subject: Kannada (2nd Lang )
Worksheet

I. ಕೆಳಗಿನ ಪ್ರಶ್ನೆಗಳನ್ನು ಓದಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ :


1. ಮಗ್ಗದ ಸಾಹೇಬ ಅಂದರೆ ____ ಸಾಹೇಬ
ಅ ) ಕರೀಂ ಆ ) ಅಬ್ದುಲ್ ಕರೀಂ ಇ ) ಅಬ್ದುಲ್ ರಹೀಮ್ ಈ ) ರಹೀಮ್
2. `ನನಗೆ ಎರಡೇ ಮಕ್ಕಳು, ಕಳ್ಳರ ಪರಿಚಯ ನನಗಿಲ್ಲ´ ಈ ವಾಕ್ಯದಲ್ಲಿರುವ ಪಾಠದ ಆಕಾರ ಕೃತಿ____
ಅ ) ಆರಾಧನೆ ಆ ) ರುದ್ರಪ್ಪನ ರೌದ್ರ ಮತ್ತು ಇತರ ಕಥೆಗಳು
ಇ ) ಹುಚ್ಚು ಮನಸೀಫ ಮತ್ತು ಇತರ ಕಥೆಗಳು ಈ ) ಸಮಗ್ರ ಕಥೆಗಳು
3. ಪಾಪ ಅಬ್ದುಲ್ ರಹೀಮನ ಗತಿ .ಈ ವಾಕ್ಯದಲ್ಲಿ ಬರಬೇಕಾದ ಲೇಖನ ಚಿಹ್ನೆಗಳು.
ಅ ) ಭಾವ ಸೂಚಕ ಚಿಹ್ನೆ – ಪ್ರಶ್ನಾರ್ಥಕ ಚಿಹ್ನೆ.
ಆ ) ಉದ್ಧರಣ ಚಿಹ್ನೆ – ಅಲ್ಪ ವಿರಾಮ ಚಿಹ್ನೆ
ಇ ) ವಾಕ್ಯವೇಷ್ಟನ ಚಿಹ್ನೆ
ಈ ) ಅರ್ಧ ವಿರಾಮ ಚಿಹ್ನೆ – ಅಲ್ಪ ವಿರಾಮ ಚಿಹ್ನೆ .
4. `ಚಾವುಂಡರಾಯ ಪುರಾಣ´ ಕೃತಿಯನ್ನು ಬರೆದವರು.
ಅ ) ರನ್ನ ಆ ) ಚಾವುಂಡರಾಯ ಇ ) ರಾಚಮಲ್ಲ ಈ ) ಮಾರಸಿಂಹ.
5. ತಲಕಾಡಿನ ವಿಜಯದ ನೆನಪಿಗಾಗಿ ವಿಷ್ಣುವರ್ಧನನು ಕಟ್ಟಿಸಿದ ದೇವಾಲಯದ ಹೆಸರು ____
ಅ ) ವೀರಾಂಜನೇಯ ಆ ) ವೀರನಾರಾಯಣ ಇ ) ವೀರೇಶ್ವರ ಈ ) ಮಹೇಶ್ವರ.
6. ` ಏಕೈಕ´ ಪದ ಯಾವ ಸಂಧಿ
ಅ ) ಗುಣ ಸಂಧಿ ಆ ) ವೃದ್ಧಿ ಸಂಧಿ ಇ ) ಯಣ್ ಸಂಧಿ ಈ ) ಸವರ್ಣ ದೀರ್ಘ ಸಂಧಿ
7. ಗೊಲ್ಗೊಥಾ ಎಂಬುವುದು ___
ಅ ) ಖಂಡ ಕಾವ್ಯ ಆ ) ಕವನ ಸಂಕಲನ ಇ ) ಕೃತಿ ಈ ) ಕಾದಂಬರಿ
8. ಕನ್ನಡಿಗರು ತಾಯಿ ನಮ್ಮನ್ನೆಲ್ಲ ಹೇಗೆ ಆಡುತ್ತಾಳೆ.
ಅ ) ದ್ವೇಷದಿಂದ ಆ) ಅಸೂಯೆಯಿಂದ ಇ ) ಅಕ್ಕರೆಯಿಂದ ಈ ) ಕೋಪದಿಂದ
9. ಅವನು ಚೆಂಡನ್ನು ಎಸೆದನು – ಈ ವಾಕ್ಯದಲ್ಲಿರುವ ಕ್ರಿಯಾಪದವನ್ನು ಗುರುತಿಸಿ
ಅ ) ಚೆಂಡು ಆ ) ಎಸೆದನು ಇ ) ಅವನು ಈ ) ಎಸೆ
10.ವಿಶ್ವವನ್ನು ಒಗ್ಗೂಡಿಸಲು ಇರುವ ಏಕೈಕ ಸಾಧನ ___
ಅ ) ತಾಯಿಯ ಸಂಬಂಧ ಆ ) ಬಂಧುಗಳ ಸಂಬಂಧ ಇ ) ತಂದೆಯ ಸಂಬಂಧ ಈ ) ಸ್ನೇಹ
ಸಂಬಂಧ
11.ಗೆಳೆತನದಲ್ಲಿ ಯಾವ ಭೇದ ಇರುವುದಿಲ್ಲ
ಅ ) ಬಡವ ಆ ) ಶ್ರೀಮಂತ
ಇ ) ಮೇಲು-ಕೀಳು ಈ ) ಗಂಡು ಹೆಣ್ಣು

12.`ಗೆಳೆತನದಲ್ಲಿ´ ಈ ಪದದಲ್ಲಿರುವ ವಿಭಕ್ತಿ ಪ್ರತ್ಯ ಯ

ಅ ) ಸಪ್ತಮಿ ವಿಭಕ್ತಿ ಆ ) ಪ್ರಥಮ ವಿಭಕ್ತಿ ಇ ) ತೃತೀಯ ವಿಭಕ್ತಿ ಈ ) ಪಂಚಮಿ ವಿಭಕ್ತಿ


12.`ಜಂಗಮ´ ಪದದ ವಿರುದ್ಧಾರ್ಥಕ ಪದ
ಅ ) ವಿರಕ್ತಿ ಆ ) ವಿದ್ವಾಂಶ ಇ ) ಗುರು ಈ ) ಸ್ಥಾವರ
13.ಆಯ್ದಕ್ಕಿ ಮಾರಯ್ಯನ ಅಂಕಿತನಾಮ :
ಅ ) ಗುಹೇಶ್ವರ ಆ ) ಅಮುಗೆಶ್ವರ ಇ ) ಅಮರೇಶ್ವರ ಲಿಂಗ ಈ) ಅಪ್ಪಣ್ಣ ಪ್ರಿಯ
14.`ಕೋಗಿಲೆ´ ಪದದ ತದ್ಭವ ರೂಪ
ಅ ) ಕೋಕಿಲ ಆ ) ಸಂಕಿಲಾ
ಇ ) ಕೋಕಿಲೆ ಈ ) ಕೊಕಿಲಾ
15.ಜನಸಾಮಾನ್ಯರ ದನಿಯಾಗಿ ಸಾಹಿತ್ಯ ಕ್ರಾಂತಿಯನ್ನು ಉಂಟು ಮಾಡಿದ್ದು
ಅ ) ಜನಪದ ಸಾಹಿತ್ಯ ಆ) ಮಕ್ಕಳ ಸಾಹಿತ್ಯ ಇ ) ವಚನ ಸಾಹಿತ್ಯ ಈ ) ದಾಸ ಸಾಹಿತ್ಯ
II. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕೈದು ವಾಕ್ಯಗಳಲ್ಲಿ ಉತ್ತರಿಸಿ :
1. ಶಂಕರಪ್ಪ ಅವರು ರಹಿಮನ ಬಳಿಗೆ ಸಂಧಾನಕ್ಕಾಗಿ ಬಂದ ಪ್ರಸಂಗವನ್ನು ತಿಳಿಸಿ
2. ಸಳನ ವಂಶಕ್ಕೆ `ಹೊಯ್ಸಳ´ ಹೆಸರು ಬರಲು ಕಾರಣವೇನು?
3. ಕವಿ ಕನ್ನಡ ತಾಯಿಯಲ್ಲಿ ಏನೆಂದು ಕೋರುತ್ತಾರೆ?
4. ಗೆಳೆತನ ಇಹಲೋಕಕಿರುವ ಅಮೃತ ಹೇಗೆ? ತಿಳಿಸಿ.
5. ಅರಿವು, ಆಚಾರ, ಸಮ್ಯ ಜ್ಞಾನದ ಬಗ್ಗೆ ಅಮುಗೆರಾಯಮ್ಮನ ಅನಿಸಿಕೆ ಏನು?
6. ಹೊಸನಾಡೊಂದನ್ನು ಕಟ್ಟ ಬಯಸುವ ಕವಿ ಉತ್ಸಾಹ ಉದ್ವೇಗದಲ್ಲಿ ಹೇಳುವ ಮಾತುಗಳಾವುವು?
7. ಬೂದಿಯನ್ನು ಕೊಳದಲ್ಲಿ ಬಿಡುವುದರಿಂದ ಬದುಕು ಧನ್ಯವಾಗುವುದು ಹೇಗೆ? ವಿವರಿಸಿ.
8. ಶಿವಶರಣರು ಜಗವನ್ನೇ ಗೆದ್ದಿಹ ವಿಚಾರದಲ್ಲಿ ಲಿಂಗಮ್ಮನ ಅನಿಸಿಕೆ ಏನು?

III .ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು - ಹತ್ತು ವಾಕ್ಯಗಳಲ್ಲಿ ಉತ್ತರಿಸಿ:

1. ಕರಿಮ ಧನವಂತನಾದ ಬಗ್ಗೆ ಹೇಗೆ?ವಿವರಿಸಿ


2. ಕನ್ನಡ ನಾಡಿನ ಕವಿ ಹಾಗೂ ಕಲೆಯ ಮಹತ್ವವೇನು? ವಿವರಿಸಿ
3. ಗೆಳೆತನದ ಮಹತ್ವವನ್ನು ಕಣವಿ ಅವರು ಹೇಗೆ ತಿಳಿಸಿದ್ದಾರೆ?

IV ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ.

1 ``ಮಗ್ಗವಲ್ಲ ಕೊರಳಿಗೆ ಹಗ್ಗ!’’

2 ``ಅದು ಕಲಾಶ್ರೀ ವಿಹರಿಸುವ ನಂದನವನ´´

3`` ಭಾವ ಶುದ್ಧ ಸ್ಪಟಿಕ - ಬೆಳದಿಂಗಳು !´´

4`` ಕಾಯಕವನೇ ಪ್ರಸಾದ ಕಾಯಕ ಮಾಡಿ ಸಲಹಿದರು ´´

V . ಶಾಲೆಯ ವತಿಯಿಂದ ಕೈಗೊಳ್ಳುವ ಪ್ರವಾಸಕ್ಕಾಗಿ ಹಣ ಕಳಿಸಿ ಕೊಡುವಂತೆ ಕೋರಿ ತಂದೆಗೆ ಪತ್ರ ಬರೆಯಿರಿ

ಅಥವಾ

ನಿಮ್ಮ ಹೆಸರು ರಾಮ ಎಂದು ಭಾವಿಸಿ. ನಿಮ್ಮ ಬಡಾವಣೆಯಲ್ಲಿ ಬೀದಿ ದೀಪಗಳನ್ನು ಅಳವಡಿಸುವಂತೆ ಕೋರಿ
ನಿರ್ದೇಶಕರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ. ಬೆಂಗಳೂರು ೫೬೦೦೧ ಇವರಿಗೆ ಮನವಿ ಪತ್ರ
ಬರೆಯಿರಿ.

VI. ಪ್ರಬಂಧ ಬರೆಯಿರಿ.

೧. ಗ್ರಂಥಾಲಯ

೨. ಪರೀಕ್ಷೆಗಳು

೩. ಶಾಲಾ ಪ್ರವಾಸಗಳು

VII. ಗಾದೆಗಳನ್ನು ವಿಸ್ತರಿಸಿ ಬರೆಯಿರಿ.

೧. ಕೈ ಕೆಸರಾದರೆ ಬಾಯಿ ಮೊಸರು


೨. ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ

೩. ಮನಸ್ಸಿದ್ದರೆ ಮಾರ್ಗ

You might also like