You are on page 1of 26

ಚಿ: ಸುಧನ್ವ ಶ್ರೀವತ್ಸ, ವಯಸ್ಸು : 15, ಬೆಂಗಳೂರು

ಸಂಖ್ಯೆ ದೇವರ ನಾಮ ರಾಗ ರಚನೆ ಪುಟ


1 ದುಡು ದುಡು ಓಡಿ ಬಾರೊ ಶ್ರೀ ಪುರಂದರ ದಾಸರು 2
2 ಬಾರೋ ಬಾರೋ ಪಾಂಡುರಂಗ ಶ್ರೀ ನಾರಸಿಂಹ ದಾಸರು 3
3 ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ ಶ್ರೀ ವಾದಿರಾಜರು 3
4 ಶ್ರೀ ರಾಘವೇo ದ್ರ ಬಾರೋ ಶ್ರೀ ಜಗನ್ನಾಥ ದಾಸರು 4
5 ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ ಶ್ರೀ ವಿಜಯ ದಾಸರು 5
6 ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ ಶ್ರೀ ವಿಜಯ ದಾಸರು 6
7 ರಥವನೇರಿದ ರಾಘವೇಂದ್ರ ಶ್ರೀ ಗೋಪಾಲ ದಾಸರು 9
ಸದ್ಗುಣಗಣಸಾಂದ್ರಾ
8 ಕನಸ್ಸುಕಂಡೇನ ಮನದಲಿ ಕಳವಳಗೊ೦ಡೇನೆ ಶ್ರೀ ಪುರಂದರ ದಾಸರು 10
9 ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ಶ್ರೀ ಪುರಂದರ ದಾಸರು 11
10 ಕಾದನಾ ವತ್ಸವ ಹರಿ ಕಾದನಾ ಶ್ರೀ ವಿಜಯ ದಾಸರು 12
11 ಒಪ್ಪಿತೋ ಹರೀ ನಿಮ್ಮ ಚಲ್ವಿಕೇ ಶ್ರೀ ವಾದಿರಾಜರು 12
12 ಹಕ್ಕಿಯ ಹೆಗಲೇರಿ ಬಂದವಗೆ ಶ್ರೀ ಪ್ರಸನ್ನ ವೆಂಕಟ ದಾಸರು 14
13 ಎಚ್ಚರದಲಿ ನಡೆ ಮನವೆ ಶ್ರೀ ಪುರಂದರ ದಾಸರು 14
14 ತಾವಿಲ್ಲಿ ನೆನೆಯಲು ದಶಮತಿ ಗುರುಗಳು ಶ್ರೀವ್ಯಾಸತತ್ವಜ್ಞತೀರ್ಥ(ದಾಸರು) 15
15 ಸಾರಿ ಬಂದನೇ ಪ್ರಾಣೇಶ ಬಂದನೇ ಶ್ರೀ ಪುರಂದರ ದಾಸರು 16
16 ಶ್ರೀ ರಮಣಿ ಜಯ ತ್ರಿಭುವನ ಜನನಿ ಶ್ರೀ ಮಹೀಪತಿ ದಾಸರು 16
17 ಹನುಮಾನ್ ಕೀ ಜೈ ಶ್ರೀ ವಿದ್ಯಾಪ್ರಸನ್ನತೀರ್ಥರು 17

18 ಗೋವಿಂದ ನಿನ್ನ ನಾಮವೆ ಚೆಂದ ಶ್ರೀ ಪುರಂದರ ದಾಸರು 18


19 ಗಣಪತಿ ಎನ್ನ ಪಾಲಿಸೋ ಗ೦ಭೀರ ಶ್ರೀ ವೆ೦ಕಟ ವಿಠಲ ದಾಸರು 18
20 ಇಕ್ಕೋ ನೋಡೆ ರಂಗನಾಥನ ಶ್ರೀ ಪಾದರಾಜ ತೀರ್ಥರು 19
21 ಅನಿಮಿತ್ತ ಬಂಧುಅತಿದಯಾಸಿಂಧು ಶ್ರೀ ಪ್ರಸನ್ನ ವೆಂಕಟ ದಾಸರು 20
22 ದೇಹವ ದಂಡಿಸಲೇಕೆ ಮನುಜಾ 20
23 ವಿಶ್ವಾತ್ಮ ಪರಿಪೂರ್ಣ ವಿಶ್ವವ್ಯಾಪಕ ನೀನೆ ಶ್ರೀ ಮಹೀಪತಿ ದಾಸರು 21
24 ವಂದಿಪೆ ನಿನಗೆ ಗಣನಾಥ ಶ್ರೀ ಪಾದರಾಜ ತೀರ್ಥರು 22
25 ಯಾರೇ ರಂಗನ ಯಾರೇ ಕೃಷ್ಣನ ಶ್ರೀ ಪುರಂದರ ದಾಸರು 22
26 ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ ಶ್ರೀ ಪುರಂದರ ದಾಸರು 23
27 ರಾಯ ಬಾರೋ ರಾಘವೇಂದ್ರ ಬಾರೋ ಶ್ರೀ ಶ್ರೀಧ ವಿಠ್ಠಲ ದಾಸರು 23
28 ಕರೆವೆನು ಕೂಸೇ ಬಾರೋ ಕೋಮಲಾಂಗ ಶ್ರೀ ಇಂದಿರೇಶ ದಾಸರು 24
29 ನಿನ್ನ ಮಗ ಬೆನ್ನ ಬಿಡಲೊಲ್ಲ ಕಾಣೆ ಶ್ರೀ ಪುರಂದರ ದಾಸರು 24

1
30 ವಿದುರನ ಭಾಗ್ಯವಿದು ಶ್ರೀ ಪುರಂದರ ದಾಸರು 25

01
ದುಡು ದುಡು ಓಡಿ ಬಾರೊ ದುಡುಕುಗಾರ |
ದುಡು ದುಡು ಓಡಿ ಬಾರೊ | ಪ |
ದುಡು ದುಡು ಓಡಿ ಬಾ ನೋಡಿ ಮುದ್ದಾಡುವೆ |
ಪಾಡಿ ಮೈಮರೆತು ನಾನೋಡಿ ನಲಿಯುವೆ | ಅಪ |

ಪಿಡಿಯೋದು ತರವಲ್ಲವೋ ಪಾಂಡವ ಪಕ್ಷ|


ತಡವ್ಯಾಕೆ ಮಾಡುವಿಯೋ|
ಪಿಡಿಯೋದು ತರವಲ್ಲ ಬಿಡು ಬೇಗ ಬಿಡು ಬೇಗ |
ಪಂಡರಿಯಲಿ ನಿಂತ ಪುಂಡಲೀಕ ವರದ |೨|

ನಲಿವೇನು ನಿನ್ನ ನೋಡಿ ನಾಲ್ಮೊಗನಯ್ಯ |


ಲಲನೆಯರ ಮಧ್ಯದಲಿ |
ಕಾಲ್ಗೆಜ್ಜೆ ಪೆಂಡೆಗಳು ಗಲುಗಲು ರೆನುತಿರೆ |
ಸುಲಲಿತ ಮಹಿಮನೆ ಕೋಳಲಾ ಕೈಯ್ಯಲ್ಲಿ ಪಿಡಿದು|

ಗುರುತಂದೆ ಪುರಂದರ ವಿಠಲ ರಾಯ |


ವರಪಿತಾಂಬರಧರ |
ನೀರಜದಳ ನೇತ್ರ ನಿಗುಮಾರ ಸುಂದರ |
ನಲಿವೆನು ನಾ ನೋಡಿ ಗುರುವಂತರ್ಗತ ಸ್ವಾಮಿ |

2
02
ಬಾರೋ ಬಾರೋ ಪಾಂಡುರಂಗ ನೀನೇ ಗತಿ|
ತೋರೋ ತೋರೋ ನಿನ್ನ ಮುಖವ ರುಕ್ಮಿಣೀ ಪತಿ||

ಚಂದ್ರಭಾಗ ತೀರದಲ್ಲಿ ವಾಸವಾಗಿರುವಿ |


ಮಂದರ ಗಿರಿಧರ ಸಿಂಧು ಶಯನ ಅಂದವಾಗಿರುವಿ ||1||

ಶಂಖ ಚಕ್ರವನ್ನು ನೀನು ಎಲ್ಲಿ ಇಟ್ಟಿರುವಿ |


ಟೊಂಕದ ಮೇಲೆ ಕೈಯನಿಟ್ಟು ಏಕೆ ನಿಂತಿರುವಿ ?||2||

ಭಕ್ತರನೆಲ್ಲ ಉದ್ಧರಿಸುವ ನೀನೆ ದೊರೆ |


ಭಕ್ತವತ್ಸಲ ನಾರಸಿಂಹವಿಠ್ಠಲ ಹರೆ||3||

03
ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ |ಪ|
ಕುದುರೆ ಬಂದಿದೆ ವಾದಿರಾಜಗೆ ಮುದದಿ ಜ್ಞಾನ ಭಕುತಿ ಕೊಡುವ |ಅ.ಪ|

ಹಿಂಗಾಲಿO ರಕ್ಕಸರ ಒದೆವ ಕುದುರೆ


ಮುಂಗಾಲು ಕೆದರಿ ಬಾಲವ ಬೀಸಿ
ತಗ್ಗಿಸಿ ತಲೆಯ ಅಡಿಗಡಿಗೆ
ಜಿಗಿದು ಹಾರಿ ಹೂಂಕರಿಸುವ ||1||

ಗರುವಿ ಮಹಾಲಕುಮಿ ತನ್ನ


ವರನೆಂದು ಒಲಿದು ಬರುವ
ಉರದಿ ಶ್ರೀವತ್ಸ ಕೌಶುಭ ಧರಿಸಿ

3
ತಾ ಮೆರೆಯೋವಂಥ ಕುದುರೆ ||2||

ಹಲ್ಲಣ ವಿಲ್ಲದೆ ನಿಲ್ಲುವ ಕುದುರೆ


ವಲ್ಲದು ಕಡಿವಾಣ ಕುದುರೆ ಕಡಲೆ
ಬೆಲ್ಲವ ಮೆಲ್ಲುವ ಕುದುರೆ
ಚೆಲ್ವ ಹಯವದನನೆಂಬೋ ಕುದುರೆ ||3||

04
ಶ್ರೀ ರಾಘವೇo ದ್ರ ಬಾರೋ
ಕಾರುಣ್ಯ ವಾರಿಧಿ ಬಾರೋ |ಪ|
ಆರಾಧಿಪ ಭಕ್ತರ ಅಭೀಷ್ಟ ಪೂರೈಸುವ
ಪ್ರಭುವೇ |ಅ.ಪ|

ರಾಜವಂಶೋದ್ಭವ ಪಾದ
ರಾಜೀವ ಭೃಂಗನೇ ಬಾರೋ
ರಾಜಾಧಿ ರಾಜರೂಳು ವಿ
ರಾಜಿಸುವ ಚೆಲುವ ಬಾರೋ ||1||

ವ್ಯಾಸರಾಯನೆನಿಸಿ ನೃಪನ
ಕ್ಲೇಶ ಕಳೆದವನೆ ಬಾರೋ
ಶ್ರೀ ಸುಧೀಂದ್ರ ಕರಸಂಜಾತ
ವಾಸುದೇವಾರ್ಚಕನೇ ಬಾರೋ||2||

ಸನ್ಯಾಸ ಕುಲದೀಪ ಬಾರೋ


ಸನ್ನುತ ಸದ್ಗುಣನೇ ಬಾರೋ
ಮಾನ್ಯ ಜಗನ್ನಾಥ ವಿಠಲ

4
ಪ್ರಪನ್ನ ಜನರ ಪ್ರಿಯಾ ||3||
05
ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ|ಪ|
ತೋರಯ್ಯ ನಿನ್ನ ದಯ ತೋಯಜಾಂಬಕನೆ|ಅ.ಪ|

ದುರುಳರ ತರಿವಂಥ ವರಚಕ್ರಧಾರಿ


ಪರಮಾತ್ಮ ಪರಬೊಮ್ಮ ಪರರಿಗುಪಕಾರಿ||1||

ಅರಣ್ಯದಿ ಮೊರೆಯಿಟ್ಟು ಕರಿರಾಜಗೊಲಿದಿ


ತರಳ ಪ್ರಹ್ಲಾದನ್ನ ವೈರಿಯ ಮುರದಿ ||2||

ವರಶೇಷ ಗಿರಿಯಲ್ಲಿ ನಿರುತ ನೀನಿರುವಿ


ಹರಿದಾಸರು ಕರೆದರೆ ಎಲ್ಲಿದ್ದರೂ ಬರುವಿ||3||

ಅನಂತನಾಮನೆ ನಿನ್ನ ಅನಂತ ಸದ್ಗುಣವ


ನೆನೆವರಿಗೊಲಿವಂಥ ಪವಮಾನನೀಶಾ ||4||

ಅಜಭವಾಧಿಪ ನೀನು ವಿಜಯಸಾರಥಿಯೇ


ತ್ರಿಜಗವಂದಿತ ಈಶ ವಿಜಯವಿಠ್ಠಲನೇ ||5||

5
06
ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ
ದುರಿತ ತರಿದು ಪೊರೆವ ವಿಜಯಗುರುಗಳೆಂಬರ || ಪ ||

ದಾಸರಾಯನ ದಯವ ಸೂಸಿ ಪಡೆದನ


ದೋಷರಹಿತನ ಸಂತೋಷಭರಿತನ || ೧ ||

ಜ್ಞಾನವಂತನ ಬಲುನಿಧಾನಿ ಶಾಂತನ


ಮಾನ್ಯವಂತನ ಬಲುವದಾನ್ಯ ದಾಂತನ || ೨ ||

ಹರಿಯ ಭಜಿಸುವ ನರಹರಿಯ ಯಜಿಸುವ


ದುರಿತ ತ್ಯಜಿಸುವ ಜನಕೆ ಹರುಷ ಸುರಿಸುವ || ೩ ||

ಮೋದಭರಿತನ ಪಂಚ ಭೇದವರಿತನ


ಸಾಧು ಚರಿತನ ಮನ ವಿಷಾದ ಮರೆತನ || ೪ ||

ಇವರ ನಂಬಿದ ಜನಕೆ ಭವವಿದೆಂಬುದು


ಹವಣವಾಗದೋ ನಮ್ಮವರ ಮತವಿದು || ೫ ||

ಪಾಪಕೋಟಿಯ ರಾಶಿ ಲೇಪವಾಗದೊ


ತಾಪ ಕಳೆವನೋ ಬಲು ದಯಾಪಯೋನಿಧಿ || ೬ ||

ಕವನರೂಪದಿ ಹರಿಯ ಸ್ತವನಮಾಡಿದ


ಭುವನ ಬೇಡಿದ ಮಾಧವನ ನೋಡಿದ || ೭ ||

6
ರಂಗನೆಂದನ ಭವವು ಹಿಂಗಿತೆಂದನ
ಮಂಗಳಾಂಗನ ಅಂತರಂಗವರಿತನ || ೮ ||

ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ


ಸೂಸಿ ಪಡೆದನ ಉಲ್ಲಾಸತನದಲಿ || ೯ ||

ಚಿಂತೆ ಬ್ಯಾಡಿರೊ ನಿಶ್ಚಿಂತರಾಗಿರೊ


ಶಾಂತ ಗುರುಗಳ ಪಾದವಂತು ನಂಬಿರೋ || ೧೦ ||

ಖೇದವಾಗದೊ ನಿಮಗೆ ಮೋದವಾಹುದೊ


ಆದಿದೇವನ ಸುಪ್ರಸಾದವಾಹುದೊ || ೧೧ ||

ತಾಪ ತಡೆವನೊ ಬಂದ ಪಾಪ ಕಳೆವೆನು


ಶ್ರೀಪತಿಯಪಾದ ಸಮೀಪವಿಡುವನೋ || ೧೨ ||

ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ


ರಂಗನೊಲಿಯನೊ ಭಕ್ತಸಂಗದೊರೆಯದೇ || ೧೩ ||

ವೇದ ಓದಲು ಬರಿದೆ ವಾದಮಾಡಲು


ಹಾದಿಯಾಗದೊ ಬುಧರ ಪಾದ ನಂಬದೆ || ೧೪ ||

ಲೆಕ್ಕವಿಲ್ಲದಾ ದೇಶ ತುಕ್ಕಿಬಂದರು


ದುಃಖವಲ್ಲದೆ ಲೇಶ ಭಕುತಿ ದೊರೆಯದೊ || ೧೫ ||

ದಾನ ಮಾಡಲು ದಿವ್ಯಗಾನಪಾಡಲು


ಜ್ಞಾನ ದೊರೆಯದೊ ಇವರ ಅಧೀನವಾಗದೆ || ೧೬ ||

7
ನಿಷ್ಠೆಯಾತಕೆ ಕಂಡ ಕಷ್ಟವ್ಯಾತಕೆ
ದಿಟ್ಟಗುರುಗಳ ಪಾದ ಮುಟ್ಟಿಭಜಿಸಿರೊ || ೧೭ ||

ಪೂಜೆ ಮಾಡಲು ಕಂಡ ಗೋಜುಬೀಳಲು


ಬೀಜಮಾತಿನ ಫಲಸಹಜ ದೊರೆಯದು || ೧೮ ||

ಸುರರು ಎಲ್ಲರು ಇವರ ಕರವ ಪಿಡಿವರೊ


ತರಳರಂದದಿ ಹಿಂದೆ ತಿರುಗುತಿಪ್ಪರೊ || ೧೯ ||

ಗ್ರಹಗಳೆಲ್ಲವು ಇವರ್ಗೆ ಸಹಾಯ ಮಾಡುತ


ಅಹೋರಾತ್ರಿಲಿ ಸುಖದ ನಿವಹ ಕೊಡುವವೊ || ೨೦ ||

ವ್ಯಾಧಿ ಬಾರದೊ ದೇಹ ಬಾಧೆ ತಟ್ಟದೊ


ಆದಿದೇವನ ಸುಪ್ರಸಾದವಾಹುದೊ || ೨೧ ||

ಪತಿತಪಾಮರ ಮಂದಮತಿಯು ನಾ ಬಲು


ತುತಿಸಲಾಪೆನೆ ಇವರ ಅತಿಶಯಂಗಳ || ೨೨ ||

ಕರುಣದಿಂದಲಿ ಎಮ್ಮ ಪೊರೆವನಲ್ಲದೆ


ದುರಿತಕೋಟಿಯ ಬ್ಯಾಗ ತರಿವ ದಯದಲಿ || ೨೩ ||

ಮಂದಮತಿಗಳು ಇವರ ಚೆಂದವರಿಯದೆ


ನಿಂದೆ ಮಾಡಲು ಭವದಬಂಧ ತಪ್ಪದೊ || ೨೪ ||

ಇಂದಿರಾಪತಿ ಇವರ ಮುಂದೆ ಕುಣಿವನೊ


ಅಂದವಚನವ ನಿಜಕೆ ತಂದು ಕೊಡುವನೊ || ೨೫ ||

8
ಉದಯ ಕಾಲದಿ ಈ ಪದವ ಪಠಿಸಲು
ಮದಡನಾದರು ಜ್ಞಾನ ಉದಯವಾಹುದೊ || ೨೬ ||

ಸಟೆ ಇದಲ್ಲವೋ ವ್ಯಾಸವಿಠಲ ಬಲ್ಲನೊ


ಪಠಿಸಬಹುದಿದು ಕೇಳಿ ಕುಟಿಲರಹಿತರು || ೨೭ ||

07
ರಥವನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ ||ಪ||

ಸತತ ಮಾರ್ಗದಿ ಸಂತತ ಸೇವಿಪರಿಗೆ


ಅತಿ ಹಿತದಲಿ ಮನೋರಥವ ಕೊಡುವೆನೆಂದು ||ಅ.ಪ||

ಚತುರ ದಿಕ್ಕುವಿದಿಕ್ಕುಗಳಲ್ಲಿ ಚರಿಪ ಜನರಲ್ಲಿ


ಮಿತಿಯಿಲ್ಲದೆ ಬಂದು ಓಲೈಸುತಲಿ ವರವ ಬೇಡುತಲಿ
ನುತಿಸುತ ಪರಿಪರಿ ನತರಾಗಿ ಹರಿಗೆ
ಗತಿಪೇಳದೆ ಸರ್ವಥಾ ನಾ ಬಿಡೆನೆಂದು ||೧||

ಅತುಳ ಮಹಿಮಾನ ದಿನದಲ್ಲಿ ದಿತಿజ ವಂಶದಲಿ


ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮ ರೀತಿಯಲಿ
ಅತಿಶಯವಿರುತಿರೆ ಪಿತನ ಬಾಧೆಗೆ
ಮನ್ಮಥಪಿತನೊಲಿಸಿದ ಜಿತಕರುಣದಲಿ ||೨||

ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ


ಯತಿ ರಾಘವೇಂದ್ರ, ಮುನಿ ರಾಘವೇಂದ್ರ, ಪ್ರಭು ರಾಘವೇಂದ್ರ, ಗುರು ರಾಘವೇಂದ್ರ
ಪತಿತೋಧ್ಡಾರಿಯೆ ಪಾವನಕಾರಿಯೆ ಕರ ಮುಗಿವೆನು ದೊರೆಯೇ

9
ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ ಪ್ರತಿ
ಮಂತ್ರಾಲಯದೊಳು ಅತಿ ಮೆರೆವ ||೩||

08
ಕನಸ್ಸುಕಂಡೇನ ಮನದಲಿ ಕಳವಳಗೊ೦ಡೇನೆ |ಪ|
ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ |ಅ.ಪ|

ಪೋನ್ನದ ಕಡಗನಿಟ್ಟು ತಿಮ್ಮಯ್ಯ ತಾ


ಪೋಲ್ವನಾಮವನಿಟ್ಟು ||
ಅ೦ದುಗೆ ಘಲುಕೆನ್ನುತ
ಎನ್ನ ಮುಂದೆ ಬಂದು ನಿಂತಿದ್ದನಲ್ಲೇ II ೧ II

ಮಕರ ಕು೦ಡಲವನಿಟ್ಟು ತಿಮ್ಮಯ್ಯ ತಾ


ಕಸ್ತೂರಿ ತಿಲಕವನಿಟ್ಟು ||
ಗೆಜ್ಜೆ ಘಲುಕೆನುತಾ
ಸ್ವಾಮಿ ತಾ ಬಂದು ನಿಂತಿದ್ದನಲ್ಲೇ II ೨ II

ಮುತ್ತಿನ ಪಲ್ಲಕ್ಕಿ ಯತಿಗಳು


ಹೊತ್ತು ನಿಂತಿದ್ದರಲ್ಲೇ ||
ಛತ್ರಚಾಮರದಿಂದ ರಂಗಯ್ಯನ
ಉತ್ಸವ ಮೂರುತಿಯ II ೩ II

ತಾವರೆ ಕಮಲದಲಿ ಕೃಷ್ಣಯ್ಯ ತಾ


ಬಂದು ನಿಂತಿದ್ದನಲ್ಲೇ ||
ವಾಯು ಬೋಮ್ಮಾದಿಗಳು
ರಂಗಯ್ಯನ ಸೇವೆಯ ಮಾಡುವರೆ II ೪ II

10
ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮ೦ಟಪದಲ್ಲಿ
ಸವಾ೯ಭರಣದಿಂದ
ಪುರಂದರವಿಠಲನ ನೋಡಿದೆನೆೇ II ೫ II

09
ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ಸಾಹುಕಾರ
ವಿಠೋಬನಿರುವದು ನದಿತೀರ ಅಲ್ಲಿ ಪಂಢರೀಭಜನೆಯ ವ್ಯಾಪಾರ ||ಪ.||

ತಂದೆ ನೀನೆ ತಾಯಿ ನೀನೆ ಪಾಂಡುರಂಗ


ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ
ಭಕ್ತರ ಪೋಷಕ ಪಾಂಡುರಂಗ
ನಮ್ಮ ಮುಕ್ತಿದಾಯಕ ಪಾಂಡುರಂಗ ||೧||

ವಿಠೋಬನಿಗೆ ಪ್ರಿಯ ತುಳಸಿಹಾರ


ಅಲ್ಲಿ ಭಕ್ತ ಜನರ ವ್ಯಾಪಾರ
ವಿಠೋಬನಿಗೆ ಪ್ರಿಯ ಬುಕ್ಕಿಟ್ಟು ಗಂಧ
ಅಲ್ಲಿ ಚಂದ್ರಭಾಗ ಸ್ನಾನ ಬಲು ಅಂದ ||೨||

ಶ್ರೀಹರಿ ವಿಠ್ಠಲ ಪಾಂಡುರಂಗ


ಜಯ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಪಾಂಡುರಂಗ
ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||೩||

11
10
ಕಾದನಾ ವತ್ಸವ ಹರಿ ಕಾದನಾ |
ಮೋದದಿಂದ ಮಾಧವ |ಪ|
ವೇದವೇದ್ಯ ಸಾಧುವಿನುತರಾದಿಕಾ ರಮಣ ಕೃಷ್ಣ |ಅ.ಪ|

ಎಳೆ ಗರಿಕೆ ಇರುವ ಸ್ಥಳದಿ ಮೆರೆದು ವತ್ಸಗಳನೆ ನಿಲಿಸಿ ||


ಕೊಳಲು ತನ್ನ ಕೈಲಿ ಪಿಡಿದು ಮುರಳಿಗಾನ ಮಾಡುತ
ತನ್ನ ಸೆರಗು ತೆಗೆದು ಕೃಷ್ಣ ಕರುಗಳ ಬೆನ್ನೊರಿಸಿ |
ತಿನ್ನು ತಿನ್ನು ಹುಲ್ಲು ಎನುತ ತನ್ನ ಕಾರದಿಂದ್ ಒತ್ತುತಾ ||1||

ಉಡುಗಳಂತೆ ಕರುಗಳಾ ನಡುವೆ ಚಂದ್ರ ಧರೆಯೊಳು


ಪೊಡವಿಯೊಳಗೆ ಬೆಳೆದನು ಆ ಮೃಡನು ಕೊಂಡಾಡಲು
ಒಂದು ತಿಂಗಳ ಕರುಗಳು ಇಂದಿರೇಶನು ಮೇಯಿಸಲು
ಒಂದು ವರ್ಷದ ಕರುಗಳಂತೆ ಚಂದದಿಂದ ಬೆಳೆದವು ||2||

ಕನಕ ರಜತ ಸರಪಳಿ ದನಕರುಗಳ ಕೊರಳಲಿ |


ಮಿನುಗುತಿಪ್ಪ ಅರಳೆಲೆ ಅನೇಕ ನಾದದಿಂದಲಿ
ಅಜಗಳಂತಿದ್ದ ಕರುಗಳು ಗಜಗಳಂತೆ ಆದವು |
ತ್ರಿಜಗದೊಡೆಯ ವಿಜಯವಿಠ್ಠಲ ವ್ರಜಕೆ ದೊರೆಯಾಡಲು ||7||

11
ಒಪ್ಪಿತೋ ಹರೀ ನಿಮ್ಮ ಚಲ್ವಿಕೇ |
ಹೆಚ್ಚಿ ಗೋಕುಲ ಇಂದಿರಾನನೆ |ಪ|

ರಮಣಿನಾಥನೇ ಮಲಯದಾಯಕಾ |
ಶ್ರಮ ಕೊಡುವುದೋ ಅಲ್ಲವೊ ಧರ |ಅ.ಪ|

12
ಯಮುನೆ ಯಾರುಷಾ ಸರ್ವದಾ ಭಯಾ |
ವೃಷಭನಾ ಭಯಾ ರಾಕ್ಷಸಾ ಭಯ
ಏಳು ದಿವಸದಾ ಮಳೆಗಳಾಭಯಾ |
ಗೆದ್ದೆವೋ ಹರಿ ನಿಮ್ಮ ಪರಿಯಲಿ ||2||

ದರ್ಶನ ಮಾತ್ರದೀ ಪಾಪನಾಶನಾ


ಪದ್ಮಜಾಕ್ಷಿತೋ ಧರಣಿ ಮಂಡಲ
ಅತ್ತೆ ಮಾವರಾ ಮಾತು ಕೇಳದೇ
ಚಿತ್ತ ಭ್ರಮೆಯಲಿ ಇತ್ತ ಬಂದವೂ || 3 ||

ಬಂದೆವಲ್ಲದೇ ಕೃಷ್ಣವಿರಹದೀ |
ಮಂದಮಾರುತ ಗಾಳಿ ಬೀಸಲು
ಕೃಷ್ಣ ಬಂದನೇ ಫಲವ ತಂದನೇ |
ಸಖಿಯರೆಲ್ಲರೂ ಸಂತುಷ್ಟಿ ಪಟ್ಟರು || 4 ||

ಪೀತಾಂಬ್ರಧಾರಿಯಾ ದಿವ್ಯ ಮಾಲಿಕೇ |


ಕೃಷ್ಣರಾಜರಾ ಕೊರಳಿಗ್ಹಾಕಲು
ಇದು ಭಾಗವತ ವೆನ್ನಿ |
ಇದು ಗೋಪಿಕಾ ಗೀತಾ || 5 ||

ಇದು ಹೇಳಿ ಕೇಳಿದ ಸಜ್ಜನರಿಗೆ |


ಹಯವದನನು ಮುಕ್ತಿಕೊಡುವನು ||6||

13
12
ಹಕ್ಕಿಯ ಹೆಗಲೇರಿ ಬಂದವಗೆ
ನೋಡಕ್ಕ ಮನಸೋತೆ ನಾನವಗೆ |ಪ|

ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ತಾ ಕಾದಿದ


ಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ |ಅ.ಪ|

ಹದಿನಾರು ಸಾವಿರ ನಾರಿಯರ ಸೆರೆ ಮುದದಿಂದ ಬಿಡಿಸಿ ಮನೋಹರ


ಅದಿತಿಯ ಕುಂಡಲ ಗಳಿಸಿದ ಹರವಿಧಿಸುರ ನೃಪರನು ಸಲಹಿದನಾ||

ನರಕಚತುರ್ದಶಿ ಪರ್ವದ ದಿನ ಹರುಷದಿ ಪ್ರಕಟಾದನು ದೇವ


ಶರಣಾಗತಜನ ವತ್ಸಲಾ ರಂಗ ಪರಮ ಭಾಗವತರ ಪರಿಪಾಲ||

ಹೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿ ನಗರದ ಅರಸನ ಕೀರ್ತಿಯಾ


ಜಗದೀಶ ಪ್ರಸನ್ವೆಂಕಟೇಶನು ಭಕ್ತ ರಘಹಾರಿ ಶತಕೋಟಿಪ್ರಕಾಶನು||

13
ಎಚ್ಚರದಲಿ ನಡೆ ಮನವೆ ||ಪ||
ಮುದ್ದುಅಚ್ಯುತನ ದಾಸರ ನೆನೆಕಂಡ್ಯಾಮನವೆ ||ಅ||

ಅನ್ನ ದಾನವ ಮಾಡುವುದಿಲ್ಲಿ, ಮೃಷ್ಟಾನ್ನವ ತಂದು ಮುಂದಿಡುವರು ಅಲ್ಲಿ


ಅನ್ಯಾಯ ನುಡಿವುದು ಇಲ್ಲಿ, ನಿನ್ನ ಬೆನ್ನ ಚರ್ಮವ ಸೀಳಿ ತಿನಿಸುವರಲ್ಲಿ ||

ತಂದೆ ತಾಯಿಗಳ ಬಯ್ಯುವುದಿಲ್ಲಿ, ಹಲ್ಲು ಝಂಡೆಯ ಕಟ್ಟಿ ಸುಡಿಸುವರಲ್ಲಿ


ತಂದೆ ತಾಯ್ಗಳ ಸೇವೆ ಇಲ್ಲಿ, ದೇವೇಂದ್ರನ ಸಭೆಯ ತೋರುವರು ಅಲ್ಲಿ ||

14
ಹೆಣ್ಣು ಹೊನ್ನು ಬಯಸುವುದಿಲ್ಲಿ, ನಿನ್ನ ಕಣ್ಣಿಗೆ ಸುಣ್ಣವ ತುಂಬುವರಲ್ಲಿ
ಕನ್ಯಾದಾನವ ಮಾಡುವುದಿಲ್ಲಿ, ನಮ್ಮ ಪುರಂದರವಿಠಲ ಒಲಿಯುವನಲ್ಲಿ ||

14
ತಾವಿಲ್ಲಿ ನೆನೆಯಲು ದಶಮತಿ ಗುರುಗಳು
ನಾವಿಲ್ಲಿ ಸುಖಿಗಳು ಸುಲಭದಿಂದ

ಕೂರ್ಮರಮಣಿಯು ನೆನೆಯೆ ಕುಸುಗಳು


ಪೂರತಿ ಮನದೂಳಗಾಗುವಂತೆ
ತಾರಾರಾಮಣನು ತಾಮ್ಯಾಲೆ ಉದಿಸಲು
ವಾರಿಧಿ ಹರುಷದಿ ಉಕ್ಕುವಂತೆ || 1 ||

ತರಣಿ ಕಿರಣ ಪಸರಿಸೆ ಸರೋವರದಲ್ಲಿ


ಸರಸಿಜ ವಿಕಸಿತವಾಗುವಂತೆ
ವಾರಿಧಿ ಮಾಲ್ಹರೆ ತಾನೋಡಿ ಮಯೂರ
ಮೀರಿ ಹರುಷದಿ ಕುಣಿದಾಡುವಂತೆ || 2 ||

ವ್ಯಾಸ ದೇವರ ಕೂಡೆ ಮಾತುಗಳಾಡುವಾಗ


ಲೇಸು ಶಿಷ್ಯರಿಗೆನ್ನಿ ಶುಭ ನಮಗೆ
ವಾಸುದೇವ ವಿಠ್ಠಲ ಪಾಶದಿಂದಾಡುವಾಗ
ವಾಸ ಅಕ್ಷಯವೆನ್ನಿ ಕೃಷ್ಣಯಂತೆ || 3 ||

15
15
ಸಾರಿ ಬಂದನೇ ಪ್ರಾಣೇಶ ಬಂದನೇ |
ಸಾರಿ ಬಂದು ಲಂಕಾಪುರವ ಮೀರಿದ ರಾವಣನ ಕಂಡು |
ಧೀರನು ವೈಯಾರದಿಂದ | ||ಸಾರಿ ಬಂದನೆ||

ವಾಯುಪುತ್ರನೆ ಶ್ರೀರಾಮ ದೂತನೆ |


ಪ್ರೀತಿಯಿಂದ ಸೀತಾಂಗನೆಗೆ ಮುದ್ರಿಕೆಯ ತಂದಿತ್ತವನೆ ||1||
ಧೀರನೂ ವೈಯಾರದಿಂದ ||ಸಾರಿ ಬಂದನೆ||

ಭೀಮಸೇನನೆ ಕುಂತಿತನಯನೆ |
ವಿರಾಟನ ಮನೆಯೊಲಿ ನಿಂತು ಕೀಚಕನ ಸಂಹರಿಸಿದವನೆ ||2||
ಧೀರನೂ ವೈಯಾರದಿಂದ ||ಸಾರಿ ಬಂದನೆ||

ಮಧ್ವರಾಯನೆ ,ಸರ್ವಜ್ಞ ಶ್ರೇಷ್ಠನೆ |


ಅದ್ವ್ಯೆತವ ಗೆದ್ದು ಪುರಂದರವಿಠ್ಠಲನ ಮುಂದೆ ನಿಂದವನೆ||3||
ಧೀರನೂ ವೈಯಾರದಿಂದ ||ಸಾರಿ ಬಂದನೆ||

16
ಶ್ರೀ ರಮಣಿ ಜಯ ತ್ರಿಭುವನ ಜನನಿ
ನಮೋ ನಮೋ ನಮೋ ನಮೋ ||ಶ್ರೀ ರಮಣಿ||

ಅಂಭುಜನಾಭನ ಪ್ರಿಯ ಗುಣಸದನೀ


ಜಾಂಬೂನದಾಂಬರ ವರ್ಣಿ ನಮೋ ||

ಸುರ ಮುನಿ ವಂದ್ಯ ಪದದ್ವಯ ಪಾವಣಿ


ಸರಸೀರುಹ ದಳ ನಯನಿ ನಮೋ ||

16
ಗುರುವರ ಮಹೀಪತಿ ನಂದನುಧ್ಧಾರಿಣಿ
ಶರಣ ರಕ್ಷಕ ಘನ ಕರುಣಿ ನಮೋ ||

17
ಹನುಮಾನ್ ಕೀ ಜೈ, ಜೈ ಜೈ ಹನುಮಾನ್ ಕೀ ಜೈ|| ಪ ||
ಥೈ ಥೈ ಥೈ ಥೈ ಥೈಥಕ ಥೈಥಕ
ತಕಿಟ ತಕಿಟ ತಕ ಜೈ ಹನುಮಾನ್ || ಅ ಪ ||

ಹರಿ ಸರ್ವೋತ್ತಮನೆಂಬುವ ತತ್ವಕೆ ಜಯ


ಭೇರಿಯ ಹೊಡೆದೆಯೋ ಹನುಮ
ಢಣ ಢಣ ಢಣ ಢಣ ಢಣ ಢಣ
ಢಣ ಜಯಭೇರಿಯ ನಾದವು ಕೇಳುತಿದೆ || ೧ ||

ವೈಷ್ಣವ ತತ್ವಗಳನು ಬೋಧಿಸಿ


ಜಯಭೇರಿಯ ಹೊಡೆದೆಯೋ ಬಲ ಭೀಮ
ಢಣ ಢಣ ಢಣ ಢಣ ಢಣ ಢಣ
ಢಣ ಜಯಭೇರಿಯ ನಾದವು ಕೇಳುತಿದೆ || ೨ ||

ಮೋಕ್ಷಕೆ ಒಳ್ಳೆಯ ಮಾರ್ಗವ ತೋರುವ


ಜಯಭೇರಿಯ ಹೊಡೆದೆಯೋ ಮಧ್ವ
ಢಣ ಢಣ ಢಣ ಢಣ ಢಣ ಢಣ
ಢಣ ಜಯಭೇರಿಯ ನಾದವು ಕೇಳುತಿದೆ || ೩ ||

ಅಂದಿನ ನಾದವು ಇಂದು ನುಡಿಯುತಿರೆ


ಮಂದಿಗಳೆಲ್ಲರು ಕೇಳುವರು

17
ತಂದೆ ಪ್ರಸನ್ನನ ಮಂದಿರದಲಿ ಇದು
ಎಂದೆಂದಿಗೂ ಶಾಶ್ವತವಿರಲಿ || ೪ ||

18
ಗೋವಿಂದ ನಿನ್ನ ನಾಮವೆ ಚೆಂದ
ಸಾಧನ ಸಕಲವು ನಿನ್ನಾನಂದ

ಅಣುರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದ |


ನಿರ್ಮಲಾತ್ಮಕನಾಗಿ ಇರುವುದೇ ಆನಂದ ||

ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ |


ಈ ಪರಿ ಮಹಿಮೆಯ ತಿಳಿಯುವುದಾನಂದ ||

ಮಂಗಳ ಮಹಿಮಾ ಶ್ರೀ ಪುರಂದರ ವಿಠಲನ |


ಹಿಂಗದ ದಾಸರ ಸಲಹೋದೆ ಆನಂದ ||

19
ಗಣಪತಿ ಎನ್ನ ಪಾಲಿಸೋ ಗ೦ಭೀರ
ಗಣಪತಿ ಎನ್ನ ಪಾಲಿಸೋ

ಪಾರ್ವತಿನ೦ದನ ಸು೦ದರ ವದನ


ಶರ್ವಾದಿ ಸುರವಂದ್ಯ ಶಿರಭಾಗುವೆನು ||1||

ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತು


ಮಾಧವನಲಿ ಮನ ಸದಾ ನಿಲ್ಲಿಸು ನೀ ||2||

18
ಪ೦ಕಜ ನಯನಶ್ರೀ ವೆ೦ಕಟ ವಿಠಲನ
ಕಿ೦ಕರ ನೆನಿಸೆನ್ನ ಶ೦ಕರ ತನಯನೆ ||3||

20
ಇಕ್ಕೋ ನೋಡೆ ರಂಗನಾಥನ ಪುಟ್ಟಪಾದವ ||ಪ||
ಸಿಕ್ಕಿತೆ ಶ್ರೀ ಲಕ್ಷ್ಮೀಪತಿಯ ದಿವ್ಯಪಾದವ ||ಅ.ಪ||

ಶಂಖ ಚಕ್ರ ಗದಾ ಪದ್ಮ ಅಂಕಿತ ಪಾದವ


ಅಂಕುಶ ಕುಲಿಶ ಧ್ವಜರೇಖಾ ಅಂಕಿತ ಪಾದವ
ಪಂಕಜಾಸನನ ಹೃದಯದಲ್ಲಿ ನಲಿಯುವ ಪಾದವ
ಸಂಕಟಹರಣ ವೆಂಕಟೇಶನ ದಿವ್ಯ ಪಾದವ ||೧||

ಲಲನೆ ಲಕ್ಷ್ಮಿಯಂಕದಲ್ಲಿ ನಲಿಯುವ ಪಾದವ


ಜಲಜಾಸನನ ಅಭೀಷ್ಟವೆಲ್ಲ ಸಲಿಸುವ ಪಾದವ
ಮಲ್ಲರ ಗೆಲಿದು ಕಂಸಾಸುರನ ಕೊಂದ ಪಾದವ
ಬಲಿಯ ಮೆಟ್ಟಿ ಭಾಗೀರಥಿಯ ಪಡೆದ ಪಾದವ ||೨||

ಬಂಡೆಯ ಬಾಲೆಯ ಮಾಡಿದ ಉದ್ದಂಡ ಪಾದವ


ಬಂಡಿಲಿದ್ದ ಶಕಟಾಸುರನ ಒದ್ದ ಪಾದವ
ಅಂಡಜ ಹನುಮರ ಭುಜದೊಳೊಪ್ಪುವ ದಿವ್ಯಪಾದವ
ಕಂಡೆವೆ ಶ್ರೀರಂಗವಿಠಲನ ದಿವ್ಯಪಾದವ ||೩||

19
21
ಅನಿಮಿತ್ತ ಬಂಧುಅತಿದಯಾಸಿಂಧು
ಆನತ ನಾನೆಂದು ಅಭಯನೀಡಿಂದು ||ಪ||.

ಮಧುಕೈಟಭಾರಿ ಮುರಾಂತಕೋದಾರಿ
ಮದನೋದ್ಭವಕಾರಿ ಮನ್ನಿಸೆನ್ನನುದಾರಿ ||1||

ವೈಕುಂಠಸದನ ವಜ್ರಾಭರಣ
ಶ್ರೀಕರವದನ ಸಲಹೆನ್ನನುದಿನ ||2||

ಬಿಸಜಾಜನಯ್ಯ ಬರುಹಿ ಸುರಯ್ಯ


ಪ್ರಸನ್ವೆಂಕಟಯ್ಯ ಪಾಪವಾರಿಸಯ್ಯ ||3||

22
ದೇಹವ ದಂಡಿಸಲೇಕೆ ಮನುಜಾ
ಶ್ರೀಹರಿ ನಾಮವ ಸ್ನೇಹದಿ ಭಜಿಸಲೋ ಮನುಜಾ

ಭಕುತಿಯ ಸಾಧನ ಹರಿಯ ಪ್ರಸಾದಕೆ


ಮುಕುತಿಗೆ ಹರಿಯ ಪ್ರಸಾದವೆ ಸಾಧನ
ರುಕುಮಿಣಿ ರಮಣನು ಪೂರ್ಣ ಸ್ವರಮಣನು
ಭಕುತಿಗೆ ಸಜ್ಜನ ಸಂಗವೇ ಸಾಧನ

ವಾದ ವಿವಾದವು ಆಗಿ ಮುಗಿಯಿತೋ


ಮೋದ ತೀರ್ಥರ ಮತ ಸಾಧನ ಕೈಪಿಡಿ
ಓದಿನಿ ಸುಲಭದಿ ತತ್ವಗಳರಿಯುತ
ಮಾಧವ ನ o ಗ್ರಿಯ ಹರುಷದಿ ಭಜಿಸೆಲೋ

20
ಹೃದಯವು ನಿರ್ಮಲವಾಗುವ ತನಕ
ಮದಮತ್ಸರಗಳ ಸದೆ ಬಡೆಯುತಲಿ
ಎದೆಯಗೆಡದೆ ಸದಾ ಹರಿಯ ಭಜಿಸೆಲೋ
ಸದಮಲಗುಣನು ಪ್ರಸನ್ನನಾಗುವನು

23
ವಿಶ್ವಾತ್ಮ ಪರಿಪೂರ್ಣ ವಿಶ್ವವ್ಯಾಪಕ ನೀನೆ
ವಿಶ್ವವಂದಿತ ವಿಶ್ವನಾಥ ನೀನೆ ||

ವಿಶ್ವಾತ್ಮದಲ್ಯಾಡುವ ವಿಶ್ವಸ್ವರೂಪವು ನೀನೆ


ವಿಶ್ವ ನಿರ್ಮಿತ ವಿಶ್ವಪಾಲ ನೀನೆ
ವಿಶ್ವವುದ್ಧರಿಸುವ ವಿಶ್ವಪಾವನ್ನನೆ
ವಿಶ್ವಲಿಹ ವಿಶ್ವೇಶ್ವರ ನೀನೆ ||1||

ವಿಶ್ವತೋ ಚಕ್ಚು ನೀ ವಿಶ್ವತೋ ಮುಖ ನೀನೆ


ವಿಶ್ವತೋ ಬಹು ಸಾಕ್ಷಾತ್ ನೀನೆ
ವಿಶ್ವಾಂತ್ರ ಸೂತ್ರನೆ ವಿಶ್ವಂಭರನು ನೀನೆ
ವಿಶ್ವರಹಿತ ವಿರಾಜಿತನು ನೀನೆ ||2||

ವಿಶ್ವಾಂತರಾತ್ಮ ಭಾಸ್ಕರ ಕೋಟಿತೇಜನೆ


ವಿಶ್ವಾನಂದ ಘನಮಹಿಮ ನೀನೆ
ವಿಶ್ವಾತ್ಮ ಹಂಸ ಮಹಿಪತಿ ಗುರು ನಾಥನೆ
ವಿಶ್ವಾಸಲೋಲ ವಿಶ್ವೇಶ ನೀನೆ ||3||

21
24
ವಂದಿಪೆ ನಿನಗೆ ಗಣನಾಥ,ಮೊದಲೊಂದಿಪೆ ನಿನಗೆ ಗಣನಾಥಾ || ಪ ||
ಬಂದವಿಘ್ನಕಳೆಯೊ ಗಣನಾಥ || ಅ.ಪ ||

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ


ಸಂದ ರಣದಲಿ ಗಣನಾಥ || ೧ ||

ಆದಿಯಲ್ಲಿ ಧರ್ಮರಾಜ ಪೂಜಿಸಿದ ನಿನ್ನ ಪಾದ


ಸಾಧಿಸಿದ ರಾಜ್ಯ ಗಣನಾಥ || ೨ ||

ಮಂಗಳ ಮೂರುತಿ ಗುರು ರಂಗವಿಟ್ಠಲನ್ನ ಪಾದ


ಹಿಂಗದೆ ಪಾಲಿಸೋ ಗಣನಾಥ || ೩ ||

25
ಯಾರೇ ರಂಗನ ಯಾರೇ ಕೃಷ್ಣನ || ಪ ||
ಯಾರೇ ರಂಗನ ಕರೆಯ ಬಂದವರು || ಅ.ಪ ||

ಗೋಪಾಲ ಕೃಷ್ಣನ, ಪಾಪ ವಿನಾಶನ


ಈ ಪರಿಯಿಂದಲಿ ಕರೆಯ ಬಂದವರು || ೧ ||

ವೇಣು ವಿನೋದನ, ಪ್ರಾಣ ಪ್ರಿಯನ


ಜಾಣೆಯರಸರನ ಕರೆಯ ಬಂದವರು || ೨ ||

ಕರಿರಾಜ ವರದನ ಪರಮಪುರುಷನ


ಪುರಂದರ ವಿಠಲನ ಕರೆಯ ಬಂದವರು || ೩ ||

22
26
ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ || ಪ ||
ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕವಾಹನ || ಅ.ಪ ||

ನಿಟಿಲನೇತ್ರನೇ ದೇವಿ ಸುತನೆ ನಾಗಭೂಷಣ ಪ್ರೀಯನೇ


ಕಟಿತಾಟಾಂಕಿತ ಕೋಮಲಾಂಗನೇ ಕರ್ಣಕುಂಡಲ ಧಾರನೆ ||1||

ಬಟ್ಟಮುತ್ತಿನ ಪದಕಹಾರನೇ ಬಾಹುಹಸ್ತ ಚತುಷ್ಟನೇ


ಇಟ್ಟತೊಡುಗೆಯ ಹಿಮಕಂಕಣ ಪಾಶ ಅಂಕುಶಧಾರಣೆ ||2||

ಕುಕ್ಷಿಮಹಾ ಲಂಬೋಧರನೇ ನೀ ಇಕ್ಷುಚಾಪನ ಗೆಲಿದನೆ


ಪಕ್ಷಿವಾಹನ ಸಿರಿಪುರಂದರ ವಿಠ್ಠಲನ ನಿಜದಾಸನೇ ||3||

27
ರಾಯ ಬಾರೋ ರಾಘವೇಂದ್ರ ಬಾರೋ || ಪ ||
ಜೀಯಾ ನೀನಲ್ಲದೆ ಇನ್ನಾರು ಕಾಯ್ವರು || ಅ.ಪ ||

ಸಲ್ಹಾದಣ್ಣನೆ ಬಾರೋ ಪ್ರಹ್ಲಾದ ರಾಯನೇ ಬಾರೋ


ಬಾಹ್ಲೀಕ ರಾಜನಾಗಿ ಮೆರೆದಂಥ ಪ್ರಭುವೇ ಬಾರೋ | ೧ |

ತುಂಗಾವಾಸ ಮುನಿ ಪುಂಗವನೀವಾತ


ಜಂಗುಳಿ ಪಾಲಿಸಲು ಸಂಗೀತ ಪ್ರಿಯನೇ ಬಾರೋ | ೨ |

ಶ್ರೀಕರುಣಾಸಿಂಧು ಬಾರೋ ಸಾಕಬೇಕಯ್ಯಾ ಬಂಧೋ


ಶ್ರೀಕರ ಶ್ರೀದವಿಠಲನಾ ತೋರೊ ಬಾರೋ | ೩ |

23
28
ಕರೆವೆನು ಕೂಸೇ ಬಾರೋ ಕೋಮಲಾಂಗ || ಪ ||

ಬಾಲನೀಲಾವಾಲ ಲೋಲಶೀಲ |
ನಾರಾಯಣ ಸುರಪಾಲನ ಸುರಮೋಹನ || 1 ||

ಸಾರಹೀರ ಹಾರ ಮಾರಾಕರ |


ತೋರಿಸದೆ ತೋಷಿಸದೆ ಇರುವುದೇ |2||

ಈಶ ಹ್ರಿಶವಾಸ ಭೂಷಬಾಸ
ಪೋಶೀಪೆನೇ ಇಂದಿರೇಶನ ದೀಶನೇ||3||

29
ನಿನ್ನ ಮಗ ಬೆನ್ನ ಬಿಡಲೊಲ್ಲ ಕಾಣೆ ನಿನ್ನಾಣೆ ಜಾಣೆ || ಪ ||

ಅಲ್ಲಿ ನೋಡಲು ತಾನೇ ಇಲ್ಲಿ ನೋಡಲು ತಾನೇ |


ಪುಲ್ಲಲೋಚನೇ ಸುಪ್ರವೀಣೆ ||1||

ಹಿಂದೆ ನೋಡಲು ತಾನೇ ಮುಂದೆ ನೋಡಲು ತಾನೇ |


ಮಂದಿರದೊಳಗೆ ಹೊರಗಿಹನೆ ||2||

ಮುದ್ದು ಪುರಂದರ ವಿಠ್ಠಲರಾಯನು |


ಎದ್ದು ಬಂದು ಅಪ್ಪಿ ಕೊಂಡನೇ ||3||

24
30
ವಿದುರನ ಭಾಗ್ಯವಿದು ವಿದುರನ ಭಾಗ್ಯವಿದು ||
ಪದುಮ ಜಾಂಡ ತಲೆದೂಗುತಲಿದೆಕೋ ||

ಕುರುರಾಯನು ಖಳನನುಜನು ರವಿಜನು


ಗುರುಗಾಂಗೇಯರು ನೋಡುತಿರೆ|
ಹರಸಿ ರಥವ ನಡೆಸುತ ಹರಿ ಬೀದಿಲಿ
ಬರುತಿರೆ ಜನರಿಗೆ ಸೂಜಿಗವೆನಿಸುತ||1||

ಹೃದಯದೊಳಗೆ ನೆಲೆಗೊಂಡಿಹ ಹರಿಯನು


ಎದುರಿಗೆ ಕಾಣುತ ವಿದುರೆನುತ
ಸದನವ ನೂಕುತ ಲಾಕ್ಷಣ ಬೀದಿಗೆ
ಮುದದಿಂದಲಿ ಕುಣಿದಾಡುತ ಬಂದನು ||2||

ಸುರಕಾಶದಿ ನೆರೆದು ನೋಡಿ ಬಲು


ಹರುಷದಿ ವಿದುರನ ಪೊಗಳುವರು
ಸಿರಿದೇವಿಯರಸಶ್ರೀ ಪುರಂದರವಿಠಲನ
ಶರಣರೆ ಧನ್ಯರು ಧನ್ಯರು ಧರೆಯೊಳು ||3||

*ಹರೇ ಶ್ರೀನಿವಾಸ*

25
ಚಿ: ಸುಧನ್ವ ಶ್ರೀವತ್ಸ, ವಯಸ್ಸು : 15, ಬೆಂಗಳೂರು
ಸಂಖ್ಯೆ ದೇವರ ನಾಮ ರಚನೆ ಪುಟ
1 ದುಡು ದುಡು ಓಡಿ ಬಾರೊ ಶ್ರೀ ಪುರಂದರ ದಾಸರು 2
2 ಬಾರೋ ಬಾರೋ ಪಾಂಡುರಂಗ ಶ್ರೀ ನಾರಸಿಂಹ ದಾಸರು 3
3 ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ ಶ್ರೀ ವಾದಿರಾಜರು 3
4 ಶ್ರೀ ರಾಘವೇo ದ್ರ ಬಾರೋ ಶ್ರೀ ಜಗನ್ನಾಥ ದಾಸರು 4
5 ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ ಶ್ರೀ ವಿಜಯ ದಾಸರು 5
6 ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ ಶ್ರೀ ವಿಜಯ ದಾಸರು 6
7 ರಥವನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ ಶ್ರೀ ಗೋಪಾಲ ದಾಸರು 9
8 ಕನಸ್ಸುಕಂಡೇನ ಮನದಲಿ ಕಳವಳಗೊ೦ಡೇನೆ ಶ್ರೀ ಪುರಂದರ ದಾಸರು 10
9 ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ಶ್ರೀ ಪುರಂದರ ದಾಸರು 11
10 ಕಾದನಾ ವತ್ಸವ ಹರಿ ಕಾದನಾ ಶ್ರೀ ವಿಜಯ ದಾಸರು 12
11 ಒಪ್ಪಿತೋ ಹರೀ ನಿಮ್ಮ ಚಲ್ವಿಕೇ ಶ್ರೀ ವಾದಿರಾಜರು 12
12 ಹಕ್ಕಿಯ ಹೆಗಲೇರಿ ಬಂದವಗೆ ಶ್ರೀ ಪ್ರಸನ್ನ ವೆಂಕಟ ದಾಸರು 14
13 ಎಚ್ಚರದಲಿ ನಡೆ ಮನವೆ ಶ್ರೀ ಪುರಂದರ ದಾಸರು 14
14 ತಾವಿಲ್ಲಿ ನೆನೆಯಲು ದಶಮತಿ ಗುರುಗಳು ಶ್ರೀವ್ಯಾಸತತ್ವಜ್ಞತೀರ್ಥ(ದಾಸರು) 15
15 ಸಾರಿ ಬಂದನೇ ಪ್ರಾಣೇಶ ಬಂದನೇ ಶ್ರೀ ಪುರಂದರ ದಾಸರು 16
16 ಶ್ರೀ ರಮಣಿ ಜಯ ತ್ರಿಭುವನ ಜನನಿ ಶ್ರೀ ಮಹೀಪತಿ ದಾಸರು 16
17 ಹನುಮಾನ್ ಕೀ ಜೈ ಶ್ರೀ ವಿದ್ಯಾಪ್ರಸನ್ನತೀರ್ಥರು 17

18 ಗೋವಿಂದ ನಿನ್ನ ನಾಮವೆ ಚೆಂದ ಶ್ರೀ ಪುರಂದರ ದಾಸರು 18


19 ಗಣಪತಿ ಎನ್ನ ಪಾಲಿಸೋ ಗ೦ಭೀರ ಶ್ರೀ ವೆ೦ಕಟ ವಿಠಲ ದಾಸರು 18
20 ಇಕ್ಕೋ ನೋಡೆ ರಂಗನಾಥನ ಶ್ರೀ ಪಾದರಾಜ ತೀರ್ಥರು 19
21 ಅನಿಮಿತ್ತ ಬಂಧುಅತಿದಯಾಸಿಂಧು ಶ್ರೀ ಪ್ರಸನ್ನ ವೆಂಕಟ ದಾಸರು 20
22 ದೇಹವ ದಂಡಿಸಲೇಕೆ ಮನುಜಾ 20
23 ವಿಶ್ವಾತ್ಮ ಪರಿಪೂರ್ಣ ವಿಶ್ವವ್ಯಾಪಕ ನೀನೆ ಶ್ರೀ ಮಹೀಪತಿ ದಾಸರು 21
24 ವಂದಿಪೆ ನಿನಗೆ ಗಣನಾಥ ಶ್ರೀ ಪಾದರಾಜ ತೀರ್ಥರು 22
25 ಯಾರೇ ರಂಗನ ಯಾರೇ ಕೃಷ್ಣನ ಶ್ರೀ ಪುರಂದರ ದಾಸರು 22
26 ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ ಶ್ರೀ ಪುರಂದರ ದಾಸರು 23
27 ರಾಯ ಬಾರೋ ರಾಘವೇಂದ್ರ ಬಾರೋ ಶ್ರೀ ಶ್ರೀಧ ವಿಠ್ಠಲ ದಾಸರು 23
28 ಕರೆವೆನು ಕೂಸೇ ಬಾರೋ ಕೋಮಲಾಂಗ ಶ್ರೀ ಇಂದಿರೇಶ ದಾಸರು 24
29 ನಿನ್ನ ಮಗ ಬೆನ್ನ ಬಿಡಲೊಲ್ಲ ಕಾಣೆ ಶ್ರೀ ಪುರಂದರ ದಾಸರು 24

26

You might also like