You are on page 1of 8

ಹರೇ ಶ್ರೀನಿವಾಸ

ವಾಯಿ ಕೃಷ್ಣಾಚಾರ್ಯರ ಸ್ತೋತ್ರ ಪದ್ಯ

ವಾಯು ವಂಶ ಸಮದ್ಭೂತಂ


ವಾದೀಶ ಪದ ಸೇವಕಂ
ವಿಜಯಾರಾರ್ಯ ಕೃಪಾಪಾತ್ರಂ ಕೃಷ್ಣಾಚಾರ್ಯ ಗುರುಂ
ಭಜೆ।।

ವಾಯಿ ಕೃಷ್ಣಾಚಾರ್ಯರ ಸೋದರಳಿಯರಾದಾಂತಹ


ತಂದೆ ವರದ ಗೋಪಾಲವಿಠಲಾಂಕಿತ ಶ್ರೀ ಪ್ರಲ್ಹಾದ
ಗೌಡರು ತಮ್ಮ ಸೋದರಮಾವಂದಿರಾದ ಶ್ರೀ ವಾಯಿ
ಕೃಷ್ಣಾಚಾರ್ಯರನ್ನು ಈ ರೀತಿಯಲ್ಲಿ ಸ್ತೋತ್ರ ಮಾಡಿದ್ದಾರೆ.

ದಿಟ್ಟದಿ ನಿನ್ನಯ ಪದ ಪದ್ಮವನ್ನು ಮನ ಮುಟ್ಟಿ ಭಜಿಸುವೆ


ಕೃಷ್ಣರಾಯ

ಸೃಷ್ಟಿ ನಿನ್ನಂಥ ಇಷ್ಟ ಪುಷ್ಟನ ಕಾಣೆ ಶ್ರೀ ಕೃಷ್ಣರಾಯ


ಇಷ್ಟನು ದುಷ್ಟ ಪಾಪಿಷ್ಟ ನಾಗುವುದುಚಿತವೆ ಕೃಷ್ಣರಾಯ

ನಿನ್ನ ದೃಷ್ಟಿಲಿ ನೋಡೆನ್ನ ಶ್ರೇಷ್ಠ ಸೃಷ್ಟಿಪನಿಷ್ಟ ಕೃಷ್ಣರಾಯ

ಬಾಲನ ವ್ಯಾಕುಲ ಪಲಾಯನಗೈಸಿದೆ ಕೃಷ್ಣರಾಯ

ಕಾಲಕಾಲಕ್ಕೆ ನಮನಾಲಯದೊಳಗೆ ನನ್ನ ಪಾಲನ ಪಾಲಿಪ


ನಿಲ್ಲಿಸಿದೆ ಕೃಷ್ಣರಾಯ

ತರಳನು ಮರಳಿ ಖಳರೆ ಕೂಡಿ ಗರಳ ಸೇವಿಸಲು ಕಂಡು


ತ್ಯಜಿಸಿದೆ ಕೃಷ್ಣರಾಯ

ತರಳೆಯೆ ನೇ ನಿನ್ನ ಸುಧಿ ಮಳೆಗರೆಯುತ ಅರಳಿಸೋ


ಕೃಷ್ಣರಾಯ

ಒಡಹುಟ್ಟಿದವರಂತೆ ದುಷ್ಟ ಪಾಪಿಷ್ಟ ಬೆನ್ನಟ್ಟುವನೋ


ಕೃಷ್ಣರಾಯ
ಗುಟ್ಟದಿ ನಿನ್ನಯ ದೃಷ್ಟಿಲಿ ನೋಡೆ ಆ ದುಷ್ಟನ ಸುಟ್ಟಾಕೊ
ಕೃಷ್ಣರಾಯ

ಮಧ್ಯಾಹ್ನ ಸಮಯದಿ ಮದ್ವ ದಾಸನ ಭೂಷಿಪ ಶೇಷನ


ವೈರಿಯ ಕೃಷ್ಣರಾಯ

ದಾನವಗೈದು ದೂತಿಯ ಕರದಿಂದ ದೋಷಿ ಎಂದೆನಿಸಿದೆ


ಸಲಹೋ ಕೃಷ್ಣರಾಯ

ಅರಿಯದೇ ಪೊಗಿನಾಥ್ರತ್ರಿನಾಮನ ಕೂಡ ಭುಂಜಿಸಿದೆ


ಕೃಷ್ಣರಾಯ

ಅರಿಯು ನೀನಲ್ಲದೆ ಅನ್ಯರ ನಾ ಕಾಣೆ ಮೈಗಣ್ಣ


ಕೃಷ್ಣರಾಯರ

ಎನ್ನ ತನು-ಮನ-ಧನ ಧಾನ್ಯ ಮನೆಯ ಮಕ್ಕಳೆಲ್ಲ ನಿನ್ನ


ಚರಣಾಲಯವೊ ಕೃಷ್ಣರಾಯ

ನಿನ್ನ ಗುಣಗಳೆಲ್ಲ ಅಗಣಿತವೋ


ಅನ್ನಪೂರ್ಣೆಗೆ ಕೃಷ್ಣರಾಯ
ಆದಿ ಅನಾದಿ ಅನೇಕನಾದಿ ಜನ್ಮದಿ ಎನ್ನಲ್ಲಿದ್ಯೋ
ಕೃಷ್ಣರಾಯ

ದೇವ ದೇವೇಶ ನೀ ಎಂದು ದಯದಿಂದ ತೋರೊ


ಕೃಷ್ಣರಾಯ

ಚರಣದ ಚರ್ಮಲ ಚಂದು ಸೂಸೂವಸನ ತೋರ್ದೋ


ಕೃಷ್ಣರಾಯ

ಆಲಸ್ಯ ಮಾಡುತ ತಾಳದೆ ನಿನ್ನ ಬಲೀನ ತೊರ್ದೊ


ಕೃಷ್ಣರಾಯ

ನಾರಂಗಿ ಫಲವನ್ನು ತಿಂದು ನೀ ನವರಸಭರಿತದಿ ನಿಂತ್ಯೊ


ಕೃಷ್ಣರಾಯ

ನಾರಿಯ ಮನವ ನೀನರಿತು ನಿನ್ನ ಮನವನ್ನಿತ್ತೆ ಕೃಷ್ಣರಾಯ

ನೂರಾರು ಎರಡೊಂದು ನಿಂದಿಪ ಮತವನ್ನು ಚಂದದಿ


ಖಂಡಿಸಿದೆಯೋ ಕೃಷ್ಣರಾಯ
ಗಂಗಾದಿ ಕ್ಷೇತ್ರವು ಹಾಗದೇ ಚರಿಸಿ ತುಂಗದಿ ಬಂದು
ಮೈಗಂದ್ಹತ್ತೋರ್ದೊ ಕೃಷ್ಣರಾಯ

ಅಂಗದಿದ್ದುಕೊಂಡು ಪಂಚಭೇದ ವನರುಹಿದೆ ಕೃಷ್ಣರಾಯ

ತಾರತಮ್ಯವನಿತ್ತು ನಿರುತದಿ ಸ್ಮರಿಸೆಂದು


ತರುಳರಿಗುಪದೇಶಿಸಿದೆ ಕೃಷ್ಣರಾಯ

ಅರ್ಥಿಯಿಂದಲಿ ವೇದವೇದ್ಯ ತೀರ್ಥರ ಪ್ರಬಂಧ ನೀ


ತೋರಿ ನೀ ಕೃತಾರ್ಥನ ಮಾಡಿದೆಯೋ ಕೃಷ್ಣರಾಯ

ಸತಿ ಸುತ ಜನನಿ ಒಡಗೂಡಿ ವಿರೋಧಿಸೆ ಶಾಪವಿತ್ತೆ


ಕೃಷ್ಣರಾಯ

ಸತಿಜಾರನರಿತು ಮನದಲ್ಲಿ ಯೋಚಿಸಿ ಚೋರನಂದದಿ


ಜರಿದು ಚರಿಸಿದಿ ಕೃಷ್ಣರಾಯ

ಚರಿಸುತ ಧರೆಯೋಳು ಚೋರ ಜಾರನ ಪೊರೆದೆ


ಕೃಷ್ಣರಾಯ
ಅಂಗದಿ ಅಂಗಿತೊಟ್ಟು ಭಂಗವಿಲ್ಲದೆ ಕೂಡಲಗಿರಿಯಲಿ
ಭುಂಜಿಸಿದೆ ಕೃಷ್ಣರಾಯ

ತೀರ್ಥ ಗಿಂಡಿಯ ಮುಟ್ಟೆಂದು ಅಂಧಕರಾಯನ ಪೇಳಲ್ಲು


ಮುಟ್ಟಲಂಜದೆ ಗಾಡಿ ಧರಿಸಿದೆ ಕೃಷ್ಣರಾಯ

ತಂಡುಲವಿಲ್ಲದೆ ಪವಾಡ ತನದಿ ಕೂತ ದಂಡ ಭೀಮನ


ಸ್ಮರಿಸಿದ್ಯೋ ಕೃಷ್ಣರಾಯ

ತೊಂಡನ ಸತಿಯ ಕೈಗೊಂಡು ಪುಂಡ ಕಂಸಾರಿಯ


ಸ್ಮರಿಸಿದೆಯೊ ಕೃಷ್ಣರಾಯ

ಸ್ವಾದಿ ಕ್ಷೇತ್ರದಿ ಪೋಗಿ ಛತ್ರದಿ ಅರ್ಚಿಸಿಕೊಂಡ್ಯೊ


ಕೃಷ್ಣರಾಯ

ಮನ ವನ ಚರಿಸುತ ತಪವನೇ ಗೈಯುತ್ತಾ ಕಪಿಯನ್ನೆ


ಪುಡಕಿದ್ದ್ಯೋ ಕೃಷ್ಣರಾಯ
ಚಿಕ್ಕ ಬದಿರಿಲಿ ಪೋಗಿ ಬಲು ಅಕ್ಕರದಿ ನಿನ್ನ ಪಡೆದನ
ಕಪ್ಪುಗೊರಳನ ರೂಪದಿ ಕಂಡ್ಯೋ ಕೃಷ್ಣರಾಯ

ಸ್ವಪ್ನದಿ ಸರ್ವರ ಕಾಣುತ ಸ್ಪಪನದಿ ನೀ ಎರಿದಿಯೋ


ಕೃಷ್ಣರಾಯ

ತಾಮಸ ಜೀವನು ಜವನಂತೆ ಜೂಜಿಸಿ ಜೀವನವರಿಸಿದ್ಯೋ


ಕೃಷ್ಣರಾಯ

ಲೇಖವು ಬರೆಯಲು ಲೋಕಾವಧರಿಸಿದ ವಾರೂಣಿಶನಂತೆ


ಪೌರುಷ ತೋರಿ ಫಣಿರೋಗನಿತ್ತೆಯೋ ಕೃಷ್ಣರಾಯ

ಎನ್ನ ಜನ್ಮವಾದ ದಿನದಲ್ಲಿ ಜೀವೇಶ ರಾಯನ


ಪೂಜಿಸಿದೆಯೋ ಕೃಷ್ಣರಾಯ

ಪೂಜಾದಿ ಪೂಜಿಸಿ ಪೂರ್ಣ ಆಯುವಿತ್ತು ಜೀವನುದ್ಧರಿಸಿ


ಜೋಕೆಯೋ ಕೃಷ್ಣರಾಯ

ಅಕ್ಕನ ಕೈಯಲ್ಲಿ ದಿಕ್ಕಿಲ್ಲದವರಂತೆ ಸಿಕ್ಕು ಸುಖ ಪಟ್ಟ್ಯೋ


ಕೃಷ್ಣರಾಯ
ದಿಟ್ಟದಿ ನಿನ್ನಯ ಗುಟ್ಟು ತಿಳಿಸಿ ಬೆಟ್ಟದೊಡೆಯ ತಂದೆ
ವರದ ಗೋಪಾಲ ವಿಠಲನ ಪದ ಪದ್ಮಗಳನೆ ಮುಟ್ಟಿ
ಭಜಿಸುವಂತೆ ದಿಟ್ಟನ ಮಾಡು ಶ್ರೀಗುರು ಕೃಷ್ಣರಾಯ

ಹರೇಶ್ರೀನಿವಾಸ
ಶ್ರೀ ಕೃಷ್ಣಾರ್ಪಣಮಸ್ತು.

You might also like