You are on page 1of 1

ಮೊಗದಿ ನಗುವ ದಿನವು ಹರಸಿ ಬಾಳ ದಡದಿ ತಂದಾ

ಯಾವ ತರದಿ ನಿಮಗೆ ವಂದಿಪೆ ನಾನು ನಿಮಗೆ ಚಿರರುಣಿ

ಜನರ ಮುಂದಿನ ಬಾಳ ಕಟ್ಟುವ

ಯೋಗಿ ಸಂತತಿ ಬೆಳೆಯಲಿ

ದೇಶ ಕಟ್ಟಿ ರಾಜ್ಯ ಬೆಳೆಸುವ

ಬಾಳು ಸವೆಸುವ ದಿನಮಣಿ

ದಿನವೂ ದುಡಿವ ರೈತ ತರದಿ

ನಾಡ ಕಟ್ಟು ಕಾಯಕವೇ

ಸಾಗರ ಪಾದಿಯ ಜ್ಞಾನರಾಶಿಯ

ಅಲೆಯ ತರದಿ ತಲುಪಿದೆ

ದಾರಿ ಸವೆಸಿದ ಮೇಲೆ ತಿರುಗಿ ಕಾಣುವ ತರದಿ ಕುರುಹು

ಯಾರೂ ಮಾಡದ ನೀವು ತೋರಿದ ಕಾಳಜಿಯದೆ ನಿಮಗೆಂದು

ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ನಿಮ್ಮದು

ಗುರುವೆ ವಂದಿಪೆ ಗುರುವೆ ನಮಿಪೆ ಇರಲಿ ಗುರುಗಳು ಎಂದಿಗೂ

You might also like