You are on page 1of 26

ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 1

‫مدرسة الصفة اإلسالمية‬


MADRASATU SUFFAH AL ISLAMIYYA
SKYWAY COMPLEX, 6TH BLOCK, KRISHNAPURA,
SURATKAL, MANGALORE - 575 014
PH: 0824-2271449 MOB: 8722695551
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 2

ನಾ
ವು ಬಯಸದೆಯೇ ನಾವು ಹುಟ್ಟಿದೆವು. ನಾವು
ತಾಯಿಯ ಗರ್ಭದಿಂದ ಹೊರಬಂದಾಗ, ಇಲ್ಲಿ
ನಮಗೆ ಎಲ್ಲ ಸೌಕರ್ಯಗಳು ಸಜ್ಜಾಗಿದ್ದವು. ಉಸಿರಾಡಲು
ವಾಯು, ತಾಯಿಯ ಎದೆಹಾಲು, ಆಹಾರ–ಪಾನೀಯ,
ಹಣ್ಣು–ಹಂಪಲು, ಬಿಸಿಲು, ಮಳೆ, ತಂಪು, ಮಂಜು,
ಚಳಿ, ಸೆಖೆ ಎಲ್ಲವೂ ಸಿದ್ಧವಾಗಿದ್ದವು. ಭೂಮಿ, ಆಕಾಶ,
ನದಿ, ಸಮುದ್ರ, ಸೂರ್ಯ, ಚಂದ್ರ, ನಕ್ಷತ್ರಗಳೆಲ್ಲವೂ
ಈ ಮೊದಲೇ ನಮ್ಮ ಉಪಯೋಗಕ್ಕಾಗಿ ಸೃಷ್ಟಿಸಲಾಗಿ-
ತ್ತು. ಭೂಮಿಯ ಚಲನೆ, ಸೂರ್ಯನ ತಾಪ, ಚಂದ್ರನ
ಬೆಳಕು ಎಲ್ಲವೂ ನಮ್ಮ ಯಾವುದೇ ಪರಿಶ್ರಮವಿಲ್ಲದೆ
ನಮಗೆ ಬೇಕಾಗಿ ನಿರ್ಮಿಸಲಾಗಿತ್ತು.

ಈ ಸೌಕರ್ಯಗಳಲ್ಲಿ ಕೇವಲ ಒಂದನ್ನಾದರೂ ನಾವು


ಸೃಷ್ಟಿಸಿದ್ದೆಂದು ಹೇಳಲು ನಮಗೆ ಸಾಧ್ಯವೇ? ಖಂಡಿತ
ಇಲ್ಲ. ಇವೆಲ್ಲವೂ ಸ್ವಯಂ ಅಸ್ತಿತ್ವಕ್ಕೆ ಬಂದದ್ದಲವ
್ಲ ೆಂಬು-
ದು ಪರಮ ಸತ್ಯ. ಇವುಗಳ ಸೃಷ್ಟಿಯ ಹಿಂದೆ ಒಂದು
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 3

ಮಹಾಶಕ್ತಿ ಇದೆ. ಆ ಶಕ್ತಿಯನ್ನೇ ನಾವು ಸೃಷ್ಟಿಕರ್ತ


ಎಂದು ಕರೆಯುತ್ತೇವೆ. ಜನನ–ಮರಣವಿಲ್ಲದ, ಚಿರಂ-
ಜೀವಿಯಾದ, ಯಾರಿಂದಲೂ ಜನ್ಮ ಪಡೆಯದ, ಮೂ-
ರ್ತಿಯಲ್ಲಾಗಲಿ, ಗ�ೋರಿಯಲ್ಲಾಗಲಿ, ಚಿತ್ರದಲ್ಲಾಗಲಿ,
ಶಿಲೆಯಲ್ಲಾಗಲಿ ಆಡಗಿರದ ಏಕೈಕನಾದ ಸೃಷ್ಟಿಕರ್ತ...
ಅವನೇ ಅಲ್ಲಾಹ್...! ಎಲ್ಲವೂ ಅವನ ಸೃಷ್ಟಿಜಾಲಗಳು.
ಅವನ ಕರುಣೆಯಿಂದಲೇ ನಾವು ಆಸ್ತಿತ್ವಕ್ಕೆ ಬಂದಿದ್ದೇವೆ.

ವೇದಗ್ರಂಥಗಳಲ್ಲಿ ಸೃಷ್ಟಿಕರ್ತನ ಬಗ್ಗೆ ಸ್ಪಷ್ಟವ ಾಗಿ ತಿಳಿ-


ಸಲಾಗಿದೆ. ಸಕಲ ಸೌಕರ್ಯಗಳನ್ನು ಒದಗಿಸಿಕೊಟ್ಟು
ನಮ್ಮನ್ನು ಸಂರಕ್ಷಿಸುತ್ತಿರುವ ಮಹಾಮಹಿಮನಾದ ಆ
ಸೃಷ್ಟಿಕರ್ತನ ಬಗ್ಗೆ ನಾವು ತಿಳಿಯಬೇಕು. ಅವನಿಗೆ ಕೃ-
ತಜ್ಞರಾಗಬೇಕು. ಅವನನ್ನು ಮಾತ್ರ ಆರಾಧಿಸಬೇಕು.
ಅವನೊಡನೆ ಮಾತ್ರ ಪ್ರಾರ್ಥಿಸಬೇಕು. ಹರಕೆ, ಬಲಿಗ-
ಳೆಲ್ಲವೂ ಅವನಿಗೆ ಮಾತ್ರ ಅರ್ಪಿತವಾಗಬೇಕು. ಒಂದು
ವೇಳೆ ಜನರು ಅವಿವೇಕತನದಿಂದ ಸೃಷ್ಟಿಕರ್ತನನ್ನು
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 4

ಬಿಟ್ಟು ಸೃಷ್ಟಿಯನ್ನು ಆರಾಧಿಸಿದರೆ ಅವರನ್ನು ಭಯಾನ-


ಕವಾದ ನರಕಾಗ್ನಿಯಲ್ಲಿ ಎಸೆದು ಸುಡಲಾಗುತ್ತದೆಯೆಂ-
ದು ವೇದಗ್ರಂಥಗಳು ಎಚ್ಚರಿಕೆ ನೀಡುತ್ತವೆ. ಏಕೆಂದರೆ ಸೃ-
ಷ್ಟಿಕರ್ತನನ್ನು ಬಿಟ್ಟು ಬೇರೆಯವರನ್ನು ಆರಾಧಿಸುವುದು
ಸೃಷ್ಟಿಕರ್ತನ ಅನುಗ್ರಹಗಳಿಗೆ ಮಾನವನು ತ�ೋರುವ
ಮಹಾ ಕೃತಘ್ನತೆಯಾಗಿದೆ.

ಸರ್ವಲ�ೋಕಗಳನ್ನು ಸೃಷ್ಟಿಸಿದ ಜಗದೊಡೆಯನು ಸ್ವಯಂ


ತನ್ನನ್ನು ಪರಿಚಯಿಸಲು ಕಾಲ–ಕಾಲಕ್ಕೆ ಮಾನವರಿಂದ-
ಲೇ ಕೆಲವರನ್ನು ಆರಿಸಿ ಕಳುಹಿಸಿದ್ದಾನೆ. ಅವರನ್ನು ನಾವು
ಪ್ರವ ಾದಿಗಳೆಂದು ಕರೆಯುತ್ತೇವೆ. ಅವರೆಲ್ಲರೂ ಸೃಷ್ಟಿ-
ಕರ್ತನ ಆಜ್ಞಾನುಸಾರಿ (ಮುಸ್ಲಿಮ್) ಗಳು. ಸೃಷ್ಟಿಕರ್ತನ
ಸಂದೇಶಗಳಿಗೆ ಶರಣಾಗಿ ಇತರ ಜನರಿಗೆ ಮಾರ್ಗದರ್ಶ-
ಕರಾಗಿ ಬದುಕಿದವರು. ಅವನ ವತಿಯಿಂದ ಅವತೀ-
ರ್ಣವಾದ ಗ್ರಂಥಗಳಲ್ಲಿ ಅಂತಿಮ ಗ್ರಂಥವೇ ಕುರ್ಆನ್.
ದೇವನ ಕಡೆಯಿಂದ ಅವತೀರ್ಣವಾದ ಎಲ್ಲಾ ಗ್ರಂಥಗ-
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 5

ಳಲ್ಲಿಯೂ “ಲಾ ಇಲಾಹ ಇಲ್ಲಲ ್ಲಾಹ್” (ಅಲ್ಲಾಹನಲ್ಲದೆ


ಅನ್ಯ ಆರಾಧ್ಯರಿಲ್ಲ) ಎಂಬ ಸೂಕ್ತವು ಅತೀ ಶ್ರೇಷ್ಠವಾಗಿದೆ.

ಹಿಂದೂ ವೇದಗ್ರಂಥದಲ್ಲಿ ಏಕದೇವಾರಾಧನೆಯ


ಬಗ್ಗೆ ಪ್ರತಿಪಾದಿಸಲಾಗಿದೆ:

ಭೂಮಾಕಾಶಗಳು ಮತ್ತು ಅದರ ನಡುವೆ ಇರುವ ಎಲ್ಲ-


ವನ್ನೂ ಸೃಷ್ಟಿಸಿದವನು ಮಾತ್ರ ಸೃಷ್ಟಿಕರ್ತನು:

ಹಿರಣ್ಯ ಗರ್ಭ ಸಮವರ್ತ ತಾಗ್ರೇ, ಭೂತಸ್ಯ ಜಾತಃ


ಪರಿತೇಖ ಅಸೀತ್ | ಸದಾಧಾರ ಪ್ರಥಿವೀಂ ದ್ವಾಮು
ಥೇಮಂ ಕಸ್ಮೈ ದೇವಾಯ ಹವಿಶಾ ವಿಧೇಮ ||
(ಋಗ್ವೇದ 10:121:1)

“ಆದಿಯಲ್ಲಿ ಹಿರಣ್ಯ ಗರ್ಭ ಮಾತ್ರವೇ ಇದ್ದನು. ಅವನು


ಸಕಲ ಭೂಮಿ ಮತ್ತು ವನಗಳ ಅಧಿಕಾರಿಯಾಗಿದ್ದಾನೆ.
ಅವನು ಭೂಮಿ ಮತ್ತು ಸ್ವರ್ಗವನ್ನು ಅವರ ಸ್ಥಾನಗಳಲ್ಲಿ
ಸ್ಥಾಪಿಸಿದನು. ಸರ್ವ ಚರಾಚರಗಳು ಉಂಟಾಗಿರುವುದು
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 6

ಅವನಿಂದಾಗಿದೆ. ಇಡೀ ಲ�ೋಕವು ಅವನ ಅಜ್ಞೆಗಳನ್ನು


ಅನುಸರಿಸುತ್ತಿದೆ. ಆದುದರಿಂದ ಅವನಿಗೆ ಮಾತ್ರ ವಿಧೇ-
ಯರಾಗಿರಿ. ಸಕಲ ಭಾವನೆಗಳ ಪರಮಾಧಿಕಾರಿಯಾದ
ಒಂದು ಶಕ್.ತಿ ಆ ಶಕ್ಯ
ತಿ ಮೂಲದಿಂದಲೇ ಸರ್ವ ಚರಾ-
ಚರಗಳು ಸೃಷ್ಟಿಸಲ್ಪಟ್ಟವು. ಸರ್ವಲ�ೋಕಗಳು ಆ ಸೃಷ್ಟಿ-
ಕರ್ತನ ಅದೇಶಗಳನ್ನು ಅನುಸರಿಸುತ್ತಿವೆ.” (ಋಗ್ವೇದ
10:121:1)

ಸೃಷ್ಟಿಕರ್ತನು ಏಕೈಕನು:

ಏಕಂ ಬೃಹ್ಮ ದ್ವಿತೀಯ ನಾಸ್ತಿ (ಬ್ರಹ್ಮಸೂತ್ರ).

“ಭಗವಂತನು ಏಕೈಕನು. ದ್ವಿತೀಯನು ಇಲ್ಲ.”

ನೆಹ್ನ ನಾಸ್ತಿ ಕಿಂಚನ್ (ಬ್ರಹ್ಮಸೂತ್ರ) “ಇಲ್ಲ ಸ್ವಲ್ಪವೂ ಇಲ್ಲ.”

ಯ ಏಕ್ ಇತ್ ತಮುಷ್ಟಿಹಿ (ಋಗ್ವೇದ 5:45–16)

“ಅವನು ಒಬ್ಬನೇ ಆಗಿದ್ದಾನೆ. ಅವನನ್ನೇ ಪೂಜಿಸಿರಿ.”


ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 7

ಏಕಮ್ ಇವ ದ್ವಿತೀಯಂ (ಚಾಂ. ಉಪನಿಷತ್ 6:2–1)

“ಅವನ�ೋರ್ವನೇ ದ್ವಿತೀಯನಿಲ್ಲ.”

ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿರಿ:

ಮಾಚಿದನ್ಯದ್‌ವಿ ಶಂಸತ್ ಸಕಹಯೋ ಮ ರಿಶ್ಶನ್


ಯಥಾ (ಋಗ್ವೇದ 8:1–1)

“ಇತರ ಯಾರನ್ನೂ ಪೂಜಿಸಬೇಡಿರಿ. ದೇವನಾದ ಅವ-


ನನ್ನೇ ಪ್ರಶಂಸಿರಿ.”

ಅಂಧಂ ತಮಃ ಪ್ರ ವಿಶಂತಿಯೇ ಅಸಂಭೂತಿ


ಮುಪಾಸತೇ ತತ�ೋ ಭೂಯ ಇವತೇ ತಮೋ ಯವು
ಸಂಭೂತ್ಯಾಂ ರತಾಃ (ಈಶಾವಾಸ್ಯ ಉಪನಿಷತ್ ಮಂತ್ರ
12, ಯ. ವೇದ. 40,9)

“ಯಾರು ಅಸಂಭೂತಿಯನ್ನು ಉಪಾಸನೆ ಮಾಡುತ್ತಾ-


ರ�ೋ ಅವರು ಕುರುಡುಗತ್ತಲೆಯನ್ನು ಪ್ರವೇಶಿಸುತ್ತಾರೆ.
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 8

ಅದರೆ ಯಾರು ಸಂಭೂತಿಯಲ್ಲಿಯೇ ಮುಳುಗಿ ಹ�ೋಗಿ-


ರುತ್ತಾರ�ೋ ಅವರು ಅದಕ್ಕಿಂತಲೂ ಹೆಚ್ಚಿನ ಕತ್ತಲೆಯನ್ನು
ಹೊಂದುತ್ತಾರೆ.”

ಉಪಾಸನೆ=ಆರಾಧನೆ. ಅಸಂಭೂತಿ =ಪ್ರಾಕೃತಿಕ ವಸ್ತು.


ಉದಾ: ಗಾಳಿ, ನೀರು, ಬೆಂಕಿ ಇತ್ಯಾದಿ. ಸಂಭೂತಿ=ವಿ-
ಗ್ರಹ, ಟೇಬಲ್, ಕುರ್ಚಿ, ಯಂತ್ರ, ಕಾರು ಇತ್ಯಾದಿ.

ಖ್ಯಾತ ವಿದ್ವಾಂಸ ಶ್ರೀ ಪಂ. ಸುಧಾಕರ ಚತುರ್ವೇದಿಯ-


ವರು ಋಗ್ವೇದ ದರ್ಶನದಲ್ಲಿ ಭಾಷ್ಯ ಬರೆಯುತ್ತಾ, “ಅವ್ಯ-
ಕ್ತನಾದ ಭಗವಂತನನ್ನು ಸಾಕ್ಷಾತ್ಕರಿಸುವುದೆಂತು? ಪ್ರಚ-
ಲಿತ ವಿಗ್ರಹಾರಾಧನೆಯಿಂದ ಅದು ಖಂಡಿತ ಸಾಧ್ಯವಿಲ್ಲ.
ಜಡಾರಾಧನೆ ಚೇತನ ಸಾಕ್ಷಾತ್ಕಾರಕ್ಕೆ ವಿಗ್ರಹಾರಾಧನಾ
ರೂಪ ಎಂದಿಗೂ ನೆರವಾಗದು” ಎನ್ನುತ ್ತಾರೆ. (ಋ.
ದರ್ಶನ ಪುಟ: 15)

ಸೃಷ್ಟಿಕರ್ತನನ್ನು ನ�ೋಡಿದವರಿಲ್ಲ:
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 9

“ಅವನಿಗೆ ಸಂತಾನವಿಲ್ಲ, ಅವನು ಯಾರ ಸಂತಾನವೂ


ಅಲ್ಲ... ಅವನನ್ನು ಯಾವನೂ ಕಣ್ನ
ಣಿ ಿಂದ ನ�ೋಡಲಾರ-
ನು.” (ಶ್ವೇ.ಶ. ಉಪನಿಷತ್ 4:20)

“ಅವನಿಗೆ ಜನಕನಾಗಲಿ, ಅಧಿಪತಿಯಾಗಲಿ ಯಾವನೂ


ಇಲ್ಲ.” (ಶ್ವೇ.ಶ. ಉಪನಿಷತ್ 6:9)

“ಅವನ ರೂಪವು ನ�ೋಡಲು ಸಿಗದು. ಅವನಿಗೆ ದೇ-


ಹವಿಲ್ಲ. ಅವನು ಪರಿಶುದ್ಧನು.” (ಯಜುರ್ವೇದ 40:8)

ಸೃಷ್ಟಿಕರ್ತನು ರೂಪಾಂತರ ಹೊಂದುವುದಿಲ್ಲ:

ನತಸ್ಯ ಕಾರ್ಯ ಕಾರಣಂ ಚವಿದ್ಸತೇ

ನತಸ್ಯ ಸಮಸ್ ಚಾದ್ಯದಿಕಷ್ ಚ ದೃಶ್ಯತೇ

ಪರಾಸ್ಯ ಶಕ್ತಿರ್ ವಿವಿದೈವ ಶ್ರುಯತೇ

ಸ್ವಾಭವಿಕೇ ಜ್ಞಾನ ಬಲ ಕ್ರಿಯ ಾಚಃ (ಶ್ವೇ.ಶ. ಉಪನಿಷ-


ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 10

ತ್ 6:5)

“ಆ ಪರಬ್ರಹ್ಮನಿಗೆ ಜೀವವಾಗಲಿ, ಶರೀರವಾಗಲಿ ಇಂದ್ರಿ-


ಯವಾಗಲಿ ಇಲ್ಲ. ಅವನಿಗೆ ಸರಿಸಮಾನರಾಗಿ ಯಾರೂ
ಇಲ್ಲ. ಅವನ ಶಕ್ತಿ ವಿಶೇಷಣಗಳು ಹಲವು ರೀತಿಯಲ್ಲಿ
ವ್ಯಕವ
್ತ ಾಗುತ್ತದೆ. ಅವನು ಜ್ಞಾನಶಕ್ತಿಯ ಒಡೆಯನಾಗಿ-
ದ್ದಾನೆ.”

ನತಸ್ಯ ಪ್ರತಿಮಾ ಅಸ್ತಿ (ಶ್ವೇ.ಶ. ಉಪನಿಷತ್ 4:19 ಯ.


ವೇ. 32:3)

“ಅವನಿಗೆ (ದೇವನಿಗೆ) ಯಾವ ಹ�ೋಲಿಕೆ ಇಲ್ಲ. ಉಪಮೆ


ಇಲ್ಲ.”

ನತಸ್ಯ ಪ್ರತಿಮಾ ಅಸ್ತಿ ಯಸ್ಯ ನಾಮ ಮಹದ್ಯಶಃ (ಯ.


ವೇ. 32:3)

“ಯಾವನ ನಾಮವೇ ಮಹದ್ಯಶವೋ ಅವನಿಗೆ ಪ್ರತಿ-


ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 11

ಮೆಯಿಲ್ಲ. ಅವನಿಗೆ ಶರೀರವಾಗಲಿ, ಇಂದ್ರಿಯವಾಗಲಿ


ಇಲ್ಲ. ಅವನಿಗಿಂತ ಅಧಿಕನಾಗಲಿ, ಅವನಿಗೆ ಸಮಾನ-
ನಾಗಲಿ ಕಂಡು ಬರುವುದಿಲ್ಲ.” (ಶ್ವೇ.ಶ. ಉಪ 6:8 ಯ.
ವೇ. 40:8)

ಅವಜಾನಂತಿ ಮಾಂ ಮೂಢಾಃ ಮಾನುಷೀಂ ತನು-


ಮಾಶ್ರಿತಮ್| ಪರಂ ಭಾವ ಮಜಾನಂತ�ೋ ಮಮ
ಭೂತ ಮಹೇಶ್ವರಮ್|| ಮೋಘಾಶಾ ಮೋಘ
ಕರ್ಮಾಣ�ೋ ಮೋಘ ಜ್ಞಾನಾ ವಿಛೇತಸ| ರಾಕ್ಷಸೀ-
ಮಾ ಸುರೀಂ ಚೈವ ಪ್ರಕೃತಿಂ ಮೋಹನೀಂ ಶ್ರಿತಾಃ||

“ಎಲ್ಲಕ್ಕೂ ಹಿರಿಯ ಒಡೆಯನಾದ ನನ್ನ ನಿಜ ಸ್ವರ ೂ-


ಪವನ್ನು ತಿಳಿಯದ ಅವಿವೇಕಿಗಳು ನನ್ನನ್ನು ಮನುಷ್ಯ-
ರಂತೆ ಬೌತಿಕ ದೇಹದವನೆಂದು ಹೀಯಾಳಿಸುತ್ತಾರೆ.
ಅಂತಹವರ ಆಸೆ ಕೈಗೂಡದು. ಅವರ ಕರ್ಮ ಫಲ-
ಕೊಡದು. ಅವರ ಅರಿವು ಕೂಡ ವ್ಯರ್ಥ. ಅವಿವೇಕಿಗ-
ಳಾದ ಅಂತವರ ಮೋಹಕವಾದ ನನ್ನ ಮಾಯಾಶಕ್ತಿಗೆ
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 12

ಒಳಗಾಗಿ ರಾಕ್ಷಸರಂತೆ, ಅಸುರರಂತೆ ತಿಳಿಗೇಡಿ ಬಾಳನ್ನು


ಬಾಳುತ್ತಾರೆ.” (ಭಗವದ್ಗೀತೆ 9:11–12)

ಅವನು ತಿನ್ನುವುದಿಲ್ಲ, ಕುಡಿಯುವುದಿಲ್ಲ:

ಅಶನನ್ಯೆಯೇ ಅಭಿಚಾಕಸೀತಿ (ಯ.ವೇ. 1:164:20)

“ಅವನು ತಿನ್ನುವುದಿಲ್ಲ, ಕುಡಿಯುವುದಿಲ್ಲ, ಜೀವಿಗಳಿಗೆ


ತಿನ್ನಿಸುವ ವ್ಯವಸ್ಥೆ ಮಾಡುತ್ತಾನೆ.”

ಪ್ರಾರ್ಥನೆ

“ನಮ್ಮನ್ನು ಸತ್ಯ ಹಾದಿಯಲ್ಲಿ ಮುನ್ನಡೆಸು. ನಮ್ಮ ಪಾಪ-


ಗಳನ್ನು ನೀಗಿಸು. ಅದು ಪಥಭ್ರಷ್ಟತೆ ಮತ್ತು ಅಲೆದಾಟ-
ದಲ್ಲಿ ಮುಳುಗಿಸುತ್ತದೆ.” (ಯ.ವೇ. 40:16)

ವೇದಗಳು, ಉಪನಿಷತ್ತುಗಳು ಮತ್ತು ಬೃಹ್ಮಸೂತ್ರ ಸೃಷ್ಟಿ-


ಕರ್ತನಿಗೆ ರೂಪವಿಲ್ಲ, ರೂಪಾಂತರ ಹೊಂದುವುದಿಲ್ಲ,
ಅವನಿಗೆ ಯಾವ ಹ�ೋಲಿಕೆಯೂ ಇಲ್ಲ. ಮನುಷ್ಯರಲ್-ಲಿ
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 13

ರುವ ಅವಿವೇಕಿಗಳೇ ಎಚ್ಚರಗೊಳ್ಳಿರಿ. ಅವನನ್ನು ಮಾತ್ರ


ಆರಾಧಿಸಿರಿ ಎಂದು ಆಜ್ಞೆ ನೀಡುತ್ತದೆ.

ಕ್ರೈಸ್ತರು ವಿಶ್ವಾಸವಿಡುವ ಹಳೆ ಮತ್ತು ಹೊಸ


ಒಡಂಬಡಿಕೆಯಲ್ಲಿಯೂ ಸೃಷ್ಟಿಕರ್ತನನ್ನು ಮಾತ್ರ
ಆರಾಧಿಸಬೇಕೆಂದು ಹೇಳಲಾಗಿದೆ.

“ಇಸ್ರಾಯಿಲ್ ಜನಾಂಗವೇ ಕೇಳು: ನಿನ್ನ ದೇವನಾದ


ಸೃಷ್ಟಿಕರ್ತನು ಏಕೈಕನು.” (ಧರ್ಮೋ 6:4, ಮತ್ತಾಯ
4:10, 27:48)

“ಧರ್ಮಶಾಸ್ತ್ರಿಯೊಬ್ಬರು ಯೇಸುವಿನೊಡನೆ ಅಜ್ಞೆಗಳ-


ಲ್ಲಿ ಪ್ರಥಮ ಆಜ್ಞೆ ಯಾವುದೆಂದು ಕೇಳಿದಾಗ, ಓ ಇಸ್ರಾ-
ಯಿಲ್ ಜನವೇ ಕೇಳು, ನಮ್ಮ ದೇವರಾದ ಸರ್ವೇಶ್ವರ
ಏಕೈಕ ಸರ್ವೇಶ್ವರನು. ಇದನ್ನು ಕೇಳಿದ ಧರ್ಮಶಾಸ್ತ್ರಿ,
ಬ�ೋಧಕರೇ, ಚೆನ್ನಾಗಿ ಹೇಳಿದ್ದೀರಿ... ದೇವರು ಒಬ್ಬನೇ.
ಅವನ ಹೊರತು ಬೇರೆ ದೇವರಿಲ್ಲ ಎಂದು ನೀವು
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 14

ಹೇಳಿದ್ದು ಸತ್ಯ ಎಂದನು.” (ಮಾರ್ಕ 12:32)

“ಆಕಾಶದಲ್ಲಾಗಲೀ, ಭೂಮಿಯಲ್ಲಾಗಲೀ, ಭೂಮಿಯ


ಕೆಳಗಿನ ನೀರಿನಲ್ಲಾಗಲಿ ಇರುವ ಯಾವುದರ ರೂಪ
ಅಥವಾ ವಿಗ್ರಹವನ್ನು ಮಾಡಿಕೊಳ್ಳಬೇಡ. ಅವುಗ-
ಳಿಗೆ ಅಡ್ಡ ಬೀಳಬೇಡ, ಅವುಗಳನ್ನು ಆರಾಧಿಸಬೇಡ,
ಏಕೆಂದರೆ, ನಾನೇ ನಿನ್ನ ದೇವರಾದ ಸರ್ವೇಶ್ವರನು.
ನನಗೆ ಸಲ್ಲತಕ್ಕ ಗೌರವವನ್ನು ನಾನು ಮತ್ತೊಬ್ಬನಿಗೆ
ಸಲ್ಲಗೊಡಿಸುವುದಿಲ್ಲ.” (ಧರ್ಮೋ 5:80)

“ಆಲಿಸಿರಿ, ಓ ಇಸ್ರಾಯಿಲರೇ... ನಮ್ಮ ಏಕೈಕ ಪ್ರಭುವಾ-


ದವನೇ ಏಕೈಕ ದೇವನು.” (ಮಾರ್ಕ 12–29)

“ನಾನೇ ಆದಿ, ನಾನೇ ಅಂತ್ಯ. ನನ್ನ ಹೊರತಾದ ದೇ-


ವನಿಲ್ಲ. ನನ್ನನ್ನು ಹ�ೋಲುವರಾರೂ ಇಲ್ಲ.” (ಯೆಶಾಯ
44:6)

“ಈ ಜೀವನ ಶಾಶ್ವತ. ಅವರು ನಿನ್ನನ್ನು ಅರಿತಿರುವರು.


ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 15

ಸತ್ಯವಾದ ದೇವನು ಒಬ್ಬನೇ ಮತ್ತು ಯೇಸುಕ್ರೈಸ್ತರನ್ನು


ಕಳುಹಿಸಿದವ.” (ಯೋಹಾನ 17:3)

“ನಿಮ್ಮ ದೇವನಾದ ನಿಮ್ಮ ಕರ್ತನನ್ನು ಆರಾಧಿಸಿರಿ. ಅವ-


ನನ್ನು ಮಾತ್ರ ಪ್ರೀತಿಸಿರಿ.” (ಮತ್ತಾಯ 4:10)

“ನನ್ನ ಹೊರತಾದ ದೇವರಿಲ್ಲ. ಸಂರಕ್ಷಕ ಹಾಗೂ


ವಿಮೋಚಕ ನನ್ನ ಹೊರತಾಗಿ ಇಲ್ಲ. ತಿರುಗಿರಿ ನನ್ನ ಕಡೆ.
ಹಾಗಾದರೆ ನೀವು ರಕ್ಷಿಸಲ್ಪಡುವಿರಿ. ಪ್ರತಿಯೊಂದು ನನಗೆ
ಬಾಗುತ್ತದೆ.” (ಯೆಶಾಯ 45:21–23)

“ಕೇಳಿರಿ : ಓ ಇಸ್ರಾಯಿಲರೇ, ನಮ್ಮ ಪ್ರಭುವಾದ


ದೇವರು ಏಕೈಕನು.” (ಮತ್ತಾಯ 4:10)

ಸೃಷ್ಟಿಕರ್ತನ ಕುರಿತು ಅಂತಿಮ ದೈವಿಕ ಗ್ರಂಥ


ಕುರ್‌ಆನ್ ಹೇಳುತ್ತದೆ

“ಹೇಳಿರಿ, ಅವನು ಅಲ್ಲಾಹನು ಏಕೈಕನು.” (112:1)


ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 16

“ಅವನೇ ಆದಿ. ಅವನೇ ಅಂತ್ಯ. ಅವನೇ ಅಭಿವ್ಯಕ.್ತ


ಅವನೇ ಗುಪ.್ತ ಅವನು ಸರ್ವ ವಸ್ತುಗಳ ಜ್ಞಾನವುಳ್ಳ-
ವನು.” (57:3)

“ನಿಶ್ಚಯವಾಗಿಯೂ ನಾನೇ ಅಲ್ಲಾಹ್. ನನ್ನ ಹೊರತು


ಇನ್ನಾವ ದೇವನೂ ಇಲ್ಲ. ಕೇವಲ ನನ್ನನ್ನೇ ಆರಾಧಿಸಿ-
ರಿ.” (20:44)

“ಅವನಿಗೆ ಯಾವುದೇ ಸಂತಾನವಿಲ್ಲ. ಅವನು ಯಾರ


ಸಂತಾನವೂ ಅಲ್ಲ.” (112:3)

“ಅಲ್ಲಾಹನಿಗೆ ಹ�ೋಲಿಕೆಗಳನ್ನು ಕಲ್ಪಿಸಬೇಡಿರಿ. ಅಲ್ಲಾ-


ಹನಿಗೆ ತಿಳಿದಿದೆ, ನಿಮಗೆ ತಿಳಿದಿಲ್ಲ.” (16:74)

“ವಿಶ್ವದ ಯಾವ ವಸ್ತುವೂ ಅವನನ್ನು ಹ�ೋಲುವುದಿ-


ಲ್ಲ.” (42:11)

“ಅವನಿಗೆ ಸರಿಸಮಾನರು ಯಾರೂ ಇಲ್ಲ.” (112:4).


ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 17

“ಅಲ್ಲಾಹು ಮೂವರಲ್ಲೊಬ್ಬನೆಂದು ಹೇಳಿದವರು ನಿ-


ಶ್ಚಯವಾಗಿಯೂ ಸತ್ಯನಿಷೇಧಿಗಳಾದರು. ವಾಸ್ತವದಲ್ಲಿ
ಏಕದೇವನಲ್ಲದೆ ಅನ್ಯ ದೇವನಿಲ್ಲ. ಇವರು ಇಂತಹ ಮಾ-
ತುಗಳನ್ನು ನುಡಿಯುವುದನ್ನು ನಿಲ್ಲಿಸದಿದ್ದರೆ ಇವರಲ್ಲಿನ
ಸತ್ಯನಿಷೇಧಿಗಳನ್ನು ಯಾತನಾಮಯ ಶಿಕ್ಷೆ ಸ್ಪರ್ಶಿಸಿಯೇ
ತೀರುವುದು.” (5:73)

“ನಿಮ್ಮ ಪ್ರಭು ಗೌರವಾನ್ವಿತ ಪ್ರಭು. ಇವರು ಸೃಷ್ಟಿಸು-


ತ್ತಿರುವ ಎಲ್ಲಾ ಆರ�ೋಪಗಳಿಂದ ಮುಕ್ತನ ಾದ ಪರಮ
ಪಾವನನು.” (37:180)

“ಮನುಷ್ಯರೇ, ನಿಮ್ಮನ್ನು ಮತ್ತು ನಿಮ್ಮ ಪೂರ್ವಿಕರನ್ನು


ಸೃಷ್ಟಿಸಿದ ನಿಮ್ಮ ಪ್ರಭುವಿನ ಆರಾಧನೆ ಮಾಡಿರಿ. ನೀವು
ರಕ್ಷಣೆ ಹೊಂದಬಹುದು. ಅವನೇ ಭೂಮಿಯನ್ನು
ನಿಮಗೆ ಹಾಸನ್ನಾಗಿಯೂ ಆಕಾಶವನ್ನು ಮೇಲ್ಛಾವಣಿ-
ಯನ್ನಾಗಿಯೂ ಮಾಡಿದನು. ಮೇಲ್ಭಾಗದಿಂದ ಮಳೆ
ಸುರಿಸಿ ಅದರ ಮೂಲಕ ತರತರದ ಬೆಳೆಗಳನ್ನು ಉತ್ಪಾ-
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 18

ದಿಸಿ ನಿಮಗೆ ಆಹಾರ ಒದಗಿಸಿದನು. ಇದನ್ನು ಅರಿತಿರುವ


ನೀವು ಇತರರನ್ನು ಅಲ್ಲಾಹನಿಗೆ ಸರಿಸಮಾನರನ್ನಾಗಿ
ಮಾಡಬೇಡಿ.” (2:21, 22)

“ಇವರು ಅಲ್ಲಾಹನ ಮಹತ್ವವನ್ನು ಹೇಗೆ ಅರಿಯಬೇಕಿ-


ತ್ತೋ ಹಾಗೆ ಅರಿತುಕೊಳ್ಳಲೇ ಇಲ್ಲ...” (22:74)

“ನಿಮ್ಮ ಪ್ರಭು ಮರೆತು ಬಿಡುವವನಲ್ಲ. ಅವನು ಆಕಾ-


ಶಗಳ, ಭೂಮಿಯ ಮತ್ತು ಅವುಗಳ ನಡುವೆಯಿರುವ
ಸಕಲ ವಸ್ತುಗಳ ಪಾಲಕ ಪ್ರಭು. ಆದುದರಿಂದ ನೀವು
ಅವನ ಆರಾಧನೆ ಮಾಡಿರಿ. ಆರಾಧನೆಯಲ್ಲಿ ಸ್ಥಿರ-
ವಾಗಿರಿ. ನಿಮ್ಮ ತಿಳುವಳಿಕೆಯಲ್ಲಿ ಅವನಿಗಿರುವ ಗುಣ
ನಾಮದಂತೆ ಇರುವ ಯಾರಾದರೂ ಇದ್ದಾರೆಯೇ?”
(19:64–65)

“ಇವರು ಅಲ್ಲಾಹನನ್ನು ಬಿಟ್ಟು ಇತರ ಯಾರನ್ನು ಕರೆದು


ಪ್ರಾರ್ಥಿಸುತ್ತಿರುವರ�ೋ ಅವರು ಯಾವುದೇ ವಸ್ತುವಿನ
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 19

ಸೃಷ್ಟಿಕರ್ತರಲ್ಲ. ನಿಜವಾಗಿ ಅವರು ಸ್ವತಃ ಸೃಷ್ಟಿಗಳು.


ಅವರು ನಿರ್ಜೀವಿಗಳು. ಅವರು ಜೀವಂತವಿಲ್ಲ. ಅವರ-
ನ್ನು ಯಾವಾಗ (ಪುನಃ ಜೀವಂತಗೊಳಿಸಿ) ಎಬ್ಬಿಸಲಾಗು-
ವುದೆಂದು ಅವರಿಗೆ ತಿಳಿದಿಲ್ಲ.” (16:20–21)

“(ಜನರೇ) ನಿಮ್ಮ ದೇವರು ಏಕಮಾತ್ರ ಅಲ್ಲಾಹನಾಗಿ-


ದ್ದು, ಅವನ ಹೊರತು ಅನ್ಯ ದೇವನಾರೂ ಇಲ್ಲ. ಅವನ
ಜ್ಞಾನವು ಸಕಲ ವಸ್ತುಗಳನ್ನೂ ಅವರಿಸಿಕೊಂಡಿದೆ.”
(10:98)

“ಅವರಿಂದ ನಾನು ಜೀವನಾಧಾರ ಬಯಸುತ್ತಿಲ್ಲ. ಮತ್ತು


ನನಗೆ ಉಣ್ಣಿಸಬೇಕೆಂದು ನಾನಿಚ್ಛಿಸುವುದಿಲ್ಲ. ನಿಸ್ಸಂದೇಹ
ಅಲ್ಲಾಹನೇ ಜೀವನಾಧಾರ ಕೊಡುವವನು ಮತ್ತು ಶಕ್ತಿ-
ಶಾಲಿಯೂ ಆಗಿದ್ದಾನೆ.” (51:57–58)

ಇಲ್ಲಿ ಹಲವು ಮತ–ಧರ್ಮಗಳು, ಜಾತಿ–ಉಪಜಾತಿ-


ಗಳು ಅಸ್ತಿತ್ವದಲ್ಲಿವೆ. ಅವುಗಳಿಗೆಲ್ಲ ವಿಭಿನ್ನ ದೇವರುಗ-
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 20

ಳು, ದೇವಿಗಳು, ಔಲಿಯಾ, ಬೀಬಿಗಳು, ಪುಣ್ಯಾತ್ಮರು,


ಬಾಬಾಗಳು, ಮಹರ್ಷಿಗಳು, ಮುನಿಗಳು ಇದ್ದಾರೆ. ಕೆ-
ಲವರಿಗೆ ಮೂರ್ತಿಗಳಿವೆ, ಕೆಲವರಿಗೆ ಗ�ೋರಿಗಳು ಇವೆ.
ಜನರು ಅಂಧವಾಗಿ ಅವುಗಳನ್ನು ಆರಾಧಿಸುತ್ತಾರೆ.
ಅವುಗಳೊಡನೆ ಪ್ರಾರ್ಥಿಸುತ್ತಾರೆ. ತಮ್ಮ ಸಂಕಷ್ಟಗಳನ್ನು
ತ�ೋಡಿಕೊಂಡು ಅಭಯ ಕ�ೋರುತ್ತಾರೆ. ಇದಕ್ಕೆ ವೇ-
ದಗ್ರಂಥಗಳಲ್ಲಿ ಯಾವುದೇ ಆಧಾರವಿಲ್ಲ. ಕುರ್‌ಆನ್
ಹೇಳುತ್ತದೆ: “ಯಾವನಾದರೂ ಅಲ್ಲಾಹನ ಜೊತೆ ಬೇರೆ
ಯಾವುದೇ ದೇವನನ್ನು ಕರೆದು ಪ್ರಾರ್ಥಿಸಿದರೆ ಅವನ
ಈ ಕರ್ಮಕ್ಕೆ ಅವನಲ್ಲಿ ಯಾವುದೇ ಆಧಾರ–ಪ್ರಮ ಾಣ-
ವಿಲ್ಲ.” (23:117)

ಈ ದೇವ–ದೇವಿಯರ, ಪುಣ್ಯಾತ್ಮರ, ಗ�ೋರಿಗಳ, ಸಮಾ-


ಧಿಗಳ ಹೆಸರಲ್ಲಿ ಕ�ೋಟ್ಯಂತರ ರೂಪಾಯಿಗಳ ವ್ಯವಹಾರ
ನಡೆಯುತ್ತದೆ. ಹರಕೆ, ಉತ್ಸವ, ಉರೂಸ್, ನೇರ್ಚೆಗಳ
ಜೊತೆಗೆ ತಾಯಿತ, ಉರುಕು, ಮಾಟ ಮಂತ್ರಗಳೆಂಬ
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 21

ಕ್ಷುದ್ರ ಶಕ್ತಿಗಳು ಮೆರದಾಡುತ್ತವೆ. ಸ್ಫೋಟಕ–ಪಟಾಕಿ-


ಗಳು, ಚೆಂಡೆ–ಮದ್ದಳೆ, ದಫ್ ಮೊದಲಾದ ಧ್ವನಿ ಜನ-
ಕಗಳು ಬಳಕೆಯಾಗುತ್ತವೆ. ಜಗಜಗಿಸುವ ವಿದ್ಯುದ್ದೀ-
ಪಗಳಿಂದ ತಂತಮ್ಮ ಆರಾಧ್ಯರನ್ನು ಬೆಳಗಿಸುತ್ತಾರೆ. ಈ
ಆಚರಣೆ ನಂಬಿಕೆಗಳೆಲ್ಲವು ಆರ್ಥಿಕ, ಸಾಮಾಜಿಕ ಹಾಗೂ
ರಾಜಕೀಯ ಲಾಭ ಗಳಿಕೆಯ ಸಾಧನಗಳಾಗಿವೆ.

ಸೃಷ್ಟಿಗಳನ್ನು ಸೃಷ್ಟಿಕರ್ತನಾಗಿ ಮಾಡಿ ಪೂಜಿಸುವ,


ಪ್ರಾರ್ಥಿಸುವ ಈ ಅಂಧವಿಶ್ವಾಸ, ಅನಾಚಾರ ಢಂಬಾ-
ಚಾರಗಳಿಗೆ ಪರಿಹಾರವಿಲ್ಲವೇ? ಇದೆ. ಅತ್ಯಂತ ಸೂಕ್ತ
ಪರಿಹಾರವಿದೆ. ಅದು ಗೌಜಿ, ಗದ್ದಲ, ಘೋಷಣೆ ಸು-
ಡುಮದ್ಗ
ದು ಳಿಲ್ಲದೆ ನಿರ್ವಹಿಸುವ ಆರಾಧನೆ. ಅದುವೇ
ಸೃಷ್ಟಿಕರ್ತನಾದ ಅಲ್ಲಾಹನಿಗೆ ಮಾಡುವ ಆರಾಧನೆ. ಸೃ-
ಷ್ಟಿಕರ್ತನಿಗೆ ಮಾಡುವ ನೈಜ ಆರಾಧನೆಯಲ್ಲಿ ವಿದ್ಯುತ್
ದೀಪಾಲಂಕಾರವೋ, ಸುಡುಮದ್ದುಗಳೋ, ಸೀರಣಿಗ-
ಳೋ, ಪ್ರಸ ಾದಗಳೋ ಬೇಕಾಗಿಲ್ಲ. ಯಾವುದೇ ಖರ್ಚು
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 22

ವೆಚ್ಚಗಳಿಲ್ಲ. ಸರ್ವಸ್ವವನ್ನು ಸರ್ವಶಕ್ತನಿಗೆ ಸಮರ್ಪಿಸುವ


ಭಕ್ತಿ ನಿರ್ಭರವಾದ ಆರಾಧನೆ. ಇದನ್ನೇ ಅಂತ್ಯ ಪ್ರವಾದಿ
ಮುಹಮ್ಮದ್(ಸ) ರು ಘೋಷಿಸಿದರು.

ವಿಶ್ವಾಸಿ, ಅವಿಶ್ವಾಸಿ, ಹಿಂದೂ, ಮುಸ್ಲಿಮ್, ಯಹೂದಿ,


ಕ್ರೈಸ್ತ, ಶೂದ್ರ, ಬ್ರಾಹ್ಮಣ, ದ್ವೈತ, ಅದ್ವೈತವೆಂಬ ಭೇದ-
ವಿಲ್ಲದೆ ಮಾನವರೆಲ್ಲರೂ ಒಂದೇ ತಾಯಿಯ ಮಕ್ಕಳು,
ಎಲ್ಲರೂ ಒಬ್ಬನೇ ದೇವನ ಸೃಷ್ಟಿಗಳು ಎಂದು ಪ್ರವಾದಿ-
ಗಳೆಲ್ಲರೂ ಸಾರಿದರು. ಭವಿಷ್ಯತ್ ಪುರಾಣ ಬರೆದ ವ್ಯಾಸ
ಮುನಿಯವರು ಕೊನೆಯ ಪ್ರವಾದಿಯಾದ ಮುಹಮ್ಮ-
ದ್(ಸ) ರವರ ಆಗಮನದ ಕುರಿತು ಭವಿಷ್ಯ ಹೇಳಿರುವು-
ದನ್ನು ಕಾಣಬಹುದು.

“ಐತಸ್ಮಿನ್ನಂತರೇ ಮೇಚ್ಛ ಆಚಾರ್ಯೇಣ ಸಮನ್ವೀತ


ಮಹಾಮದ ಇತಿಖ್ಯಾತಃ ಶಿಷ್ಯ ಶಾಖಾಸಮನ್ವಿತ.”

“ಮಹಾಮದ್ ಎಂಬ ಹೆಸರಲ್ಲಿ ವಿದೇಶಿಯಾದ ಆಚಾ-


ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 23

ರ್ಯರು ತನ್ನ ಅನುಯಾಯಿಗಳೊಂದಿಗೆ ಪ್ರತ್ಯಕ್ಷರಾಗು-


ವರು.” (ಭವಿಷ್ಯತ್ ಪುರಾಣ 3:3:3:25–28)

ಲಿಂಗಬೇದೀ ಶಿಖಾಹೀನಃ ಶ್ಮ ಶ್ರುದಾರೀ ಸಧೂಷಕ||


ಉಚ್ಚಾಲಫೀ ಸರ್ವಭಕ್ಷೀ ಭವಿಷತಿ ಜನ ಮೋಮ್||
ವಿನ ಕೌಶಲಮ್ ಚವಶವಸ್ತೋ ಷಾ ಭಕ್ಷಯಾ ಮತಾ
ಮಾಮ್|| ಮುಸೈಲೈನವ ಸಂಸ್ಕಾರ ಕುಶೈರೀ ಭವ
ವಿಶ್ವತಿ ತಸ್ಮಾಲ್ ಮುಸಲ ವಂದ�ೋಹಿ ಜಾತೆಯೋ
ಧರ್ಮಾ ದೂಷಕ|| ಇತಿ ಪೈಶಾಚ ಧರ್ಮಶ್ಚ ಭವಿಷ್ಯತಿ
ಮಾಯಾಕೃತ|||

“ಅವನ ಅನುಯಾಯಿಗಳು ಮುಂಜಿ ಮಾಡುವರು.


ಅವರು ಜುಟ್ಟು ಇಡಲಾರರು. ಅವರು ಗಡ್ಡ (ದಾಡಿ)
ಬೆಳೆಸುವರು. ಅವರು ಕ್ರಾಂತಿಕಾರಿಗಳಾಗಿರುವರು. ಪ್ರಾ-
ರ್ಥನೆಗಾಗಿ ಉಚ್ಛ ಸ್ವರದಲ್ಲಿ ಅಹ್ವಾನಿಸುವರು. ಹಂದಿಯ
ಹೊರತು ಮಿಕ್ಕ ಮೃಗಗಳನ್ನು ಅವರು ಭಕ್ಷಿಸ ುವರು.
ಅವರು ಮುಸೈಲೈನವರು ಎಂದು ಅರಿಯಲ್ಪಡುವರು.
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 24

ಈ ಮಾಂಸ ಭಕ್ಷಕರ ಪರಂಪರೆ ನನ್ನಿಂದಾಗಿರುವುದು.”


(ಭವಿಷ್ಯತ್ ಪುರಾಣ 3:3:3:25–28)

ಪ್ರವಾದಿಗಳೆಲ್ಲರ ಘೋಷಣೆ ಒಂದೇ ಆಗಿತ್ತು. ಅದು ಸೃ-


ಷ್ಟಿಕರ್ತನಾದ ಏಕೈಕ ದೇವನನ್ನು ಮಾತ್ರ ಆರಾಧಿಸಬೇಕು
ಎಂಬುದು. ಸೃಷ್ಟಿಕರ್ತನನ್ನು ಮಾತ್ರ ಕರೆದು ಪ್ರಾರ್ಥಿಸು-
ವುದು, ಅವನಲ್ಲಿ ಮಾತ್ರ ಪ್ರಾರ್ಥಿಸುವುದು ಕಡ್ಡಾಯವಾ-
ಗಿದೆ. ಮನುಷ್ಯರು ತಮಗೆ ನೀಡಲಾದ ಬುದ್ಧಿಶಕ್ತಿಯನ್ನು
ಬಳಸಿ ಸೃಷ್ಟಿಕರ್ತನ ಅಸ್ತಿತ್ವವನ್ನು ಅರಿಯಲು ಪ್ರಯತ್ನಿ-
ಸಬೇಕು. ಸೃಷ್ಟಿಕರ್ತನ ಆಜ್ಞೆ–ನಿಷೇಧಗಳನ್ನು ಜೀವನ-
ದಲ್ಲಿ ಅಳವಡಿಸಿ ಏಕದೇವಾರಾಧಕರಾಗಿ ಬಾಳಬೇಕು.
ಅನ್ಯಥ ಾ ನಿಕೃಷ್ಟನ ಾಗಿ ನಿಂದ್ಯರ ಾಗಿ ಪರಲ�ೋಕದಲ್ಲಿ
ಘೋರ ಅಗ್ನಿಯ ಗೃಹವೇ ವಾಸಸ್ಥಾನವಾಗುವುದೆಂಬ
ಎಚ್ಚರಿಕೆಯನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ.
ಬಹುದೇವಾರಾಧನೆ ಎಂಬ ಮಹಾಪಾಪವನ್ನು ಸೃ-
ಷ್ಟಿಕರ್ತನು ಎಂದೂ ಕ್ಷಮಿಸುವುದಿಲ್ಲ. ಮರಣಾನಂತರ
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 25

ಭಯಂಕರ ಶಿಕ್ಷೆಗೆ ಒಳಪಡುವೆನೆಂಬ ಭಯ ಸದಾ


ಇರಲಿ.

ಕುರ್‌ಆನ್ ಸೃಷ್ಟಿಕರ್ತನಿಂದ ಅವತೀರ್ಣವಾದ


ಅಂತಿಮ ವೇದಗ್ರಂಥವಾಗಿದೆ:

“ನಿಸ್ಸಂದೇಹವಾಗಿಯೂ ಇದು ಸರ್ವಲ�ೋಕಗಳ ಪ್ರಭು-


ವಿನಿಂದ ಅವತೀರ್ಣಗೊಂಡದ್ದಾಗಿದೆ.” (26:192)

“ಇದು ಅಜೇಯನೂ ಕರುಣಾನಿಧಿಯೂ ಆದ ಅಲ್ಲಾ-


ಹನಿಂದ ಅವತೀರ್ಣವಾಗಿದೆ.” (36:5)

“ಅಜೇಯನು ವಿವೇಕಪೂರ್ಣನೂ ಆದ ಅಲ್ಲಾಹನಿಂದ


ಈ ಗ್ರಂಥ ಅವತೀರ್ಣವಾಗಿದೆ.” (39:1)

“ನಿಸ್ಸಂದೇಹ ಈ ನಾವು ಗ್ರಂಥವನ್ನು (ಕುರ್ಆನ್) ಆವ-


ತೀರ್ಣಗೊಳಿಸಿದ್ದೇವೆ ಮತ್ತು ನಾವೇ ಇದನ್ನು ಸಂರಕ್ಷಿಸು-
ತ್ತೇವೆ.” (15:9)
ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿ, ಸೃಷ್ಟಿಯನ್ನಲ್ಲ | 26

ಸಕಲ ಮಾನವರೂ ತಮ್ಮ ಸೃಷ್ಟಿಕರ್ತನನ್ನು ಮಾತ್ರ


ಆರಾಧಿಸುತ್ತಾ ಪರಸ್ಪರ ಸಹ�ೋದರರಂತೆ ಬಾಳಬೇ-
ಕೆಂದು ಕುರ್‌ಆನ್ ಕರೆ ನೀಡುತ್ತದೆ. ಈ ಕರೆಯನ್ನು ಸ್ವೀ-
ಕರಿಸಿ ಅದರ ಪ್ರಕ ಾರ ಜೀವನ ನಡೆಸಲು ಸೃಷ್ಟಿಕರ್ತನು
ನಮ್ಮನ್ನು ಆಶೀರ್ವದಿಸಲಿ.

‫الحركة النصيحة اإلسالمية‬


ANNASEEHA ISLAMIC MOVEMENT
SURATKAL, MANGALORE - 575 014
MOB: 9731593091 / 9945171612

Jamiyathe Ahle Hadees


Mangalore

You might also like