You are on page 1of 4

02. ವಚನಗಳು ನೋಟ್ಸ್ - KannadaPdf.

com

ತರಗತಿ : ದ್ವಿತೀಯ ಪಿ.ಯು.ಸಿ


ವಿಷಯ : ಕನ್ನಡ
ಪಾಠದ ಹೆಸರು : ವಚನಗಳು

ಕವಿ ಪರಿಚಯ :
“ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ” ಎಂಬ ಅಂಕಿತದಲ್ಲಿ ಉರಿಲಿಂಗಪೆದ್ದಿಯ 366 ವಚನಗಳು
ಇದುವರೆಗೂ ದೊರೆತಿವೆ . ಈತ ಗೋದಾವರಿ ತೀರದ ಹಳ್ಳಿಯೊಂದರಲ್ಲಿ ವಾಸವಿದ್ದ , ತಂದೆ –
ತಾಯಿಗಳು ಇವನಿಗೆ ಪೆದ್ದಣ್ಣ ಎಂಬ ಹೆಸರಿಟ್ಟರು . ಕಳ್ಳತನ ಮಾಡಿಕೊಂಡು ಜೀವಿಸುತ್ತಿದ್ದ . ಈತ ಒಮ್ಮೆ
ಉರಿಲಿಂಗದೇವರ ಮನೆಗೆ ಕನ್ನ ಹಾಕಿದ . ಆಗ ಉರಿಲಿಂಗದೇವರು ನಂದವಾಡ ಗ್ರಾಮದ ಸೂರಯ್ಯನಿಗೆ
ದೀಕ್ಷೆ ನೀಡುತ್ತಿದ್ದರು . ಇದನ್ನು ಕಂಡು ಮನಃ ಪರಿವರ್ತನೆ ಹೊಂದಿದ ಪೆದ್ದಣ್ಣ ದಿನವೂ ಉರಿಲಿಂಗಪೆದ್ದಿಗಳ
ಮಠಕ್ಕೆ ಒಂದು ಹೊರೆ ಸೌದೆ ತಂದು ಹಾಕುತ್ತಿದ್ದ . ಕೊನೆಗೊಂದು ದಿನ ಗುರುವನ್ನು ಕಾಡಿ ಬೇಡಿ
ದೀಕ್ಷೆಯನ್ನು ಪಡೆದು ‘ ಉರಿಲಿಂಗಪೆದ್ದಿ ‘ ಎಂಬ ಹೆಸರನ್ನು ಧರಿಸಿ ಗುರುವಿಗೆ ತಕ್ಕ ಶಿಷ್ಯನಾದನು .
ಗುರುವಿನ ನಂತರ ಸಕಲಶಾಸ್ತ್ರ ಪಾರಂಗತನಾಗಿ ತಾನೇ ಆ ಪೀಠಕ್ಕೆ ಒಡೆಯನಾದ ಮಹಾನುಭವಿ ಈತ .

ಚಿಂತೆಯಿಲ್ಲದ ಅತಿಶ್ರೇಷ್ಠನಾದ ಮನಸ್ಥಿತಿಯನ್ನು ಶಿವಧ್ಯಾನದಿಂದ ಸಾಧಿಸ ಬಹುದೆಂಬುದನ್ನು


ಮಂಗಳಕರವಾದ ಅಂಗದ ಸಾಂಗತ್ಯವುಳ್ಳವನೆಂದೂ ಬೇರೆಯವರ ಬಗ್ಗೆ ಚಿಂತಿಸನೆಂಬುದನ್ನು ಗುರುವಿನ
ನಡತೆಯು ಘನತೆಯುಳ್ಳದಾಗಿರ ಬೇಕೆಂಬುದನ್ನು ಉರಿಲಿಂಗಪೆದ್ದಿಯ ವಚನಗಳು ನಿರೂಪಿಸುತ್ತವೆ . ತನ್ನ
ವಿಚಾರಗಳನ್ನು ಮಂಡಿಸುವಾಗ ಬಳಸುವ ಹೋಲಿಕೆಗಳ ಔಚಿತ್ಯವನ್ನು ವಚನ ಬಂಧುರದಲ್ಲಿ ಹಿಡಿದಿರುವ
ಕುಶಲತೆ , ಕಲೆಗಾರಿಕೆಗಳಿಂದಾಗಿ ಈ ವಚನಗಳು ಗಮನಾರ್ಹವೆನಿಸಿವೆ .

ಪದಗಳ ಅರ್ಥ:
ಸಕಲ-ಸಮಗ್ರವಾದುದು . ಪರಿಪೂರ್ಣವುಳ್ಳದ್ದು ( ಸಕಲತತ್ತ್ವವೆಂದರೆ ಪರಶಿವನ ಸ್ವರೂಪವೇ ಆಗಿದೆ .
ಸಕಲ – ನಿಷ್ಕಲವೆಂಬವು ವಚನಕಾರರ ಆಕಾರ ಮತ್ತು ನಿರಾಕಾರ ಸ್ವರೂಪವನ್ನು ಕುರಿತ
ಜಿಜ್ಞಾಸೆಯಾಗಿದೆ ) ; ನಿಷ್ಕಲ – ನಿರಾಕಾರವಾದ , ಅಖಂಡವಾದ , ಕಲಾರಹಿತವಾದ ( ನಿರಾಕಾರ
ಸ್ವರೂಪವಾದ ಪರವಸ್ತು , ಶಿವಲಿಂಗ ) : ಮಹಾಘನ – ಅತಿಶ್ರೇಷ್ಠವಾದ , ಉನ್ನತವಾದ. ನಿರಾಳ –
ಚಿಂತೆಯಿಲ್ಲದ , ಪರುಷ – ಮುಟ್ಟಿದ್ದನ್ನು ಚಿನ್ನವಾಗಿಸುವ ( ಮಣಿ ) ಶಿಲೆ ; ಗೃಹ – ಮನೆ ; ತಿರಿ – ಬೇಡು ;
ತೊರೆ – ನದಿ ; ತೃಷೆ – ಬಾಯಾರಿಕೆ ; ಉದಕ – ನೀರು ; ಲಘು – ಸಣ್ಣದು ; ಗುರು – ದೊಡ್ಡದು ,
ಬೋಧಕ .

ಆ ) ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )

Download: KannadaPDF.com https://KannadaPdf.com/


02. ವಚನಗಳು ನೋಟ್ಸ್ - KannadaPdf.com
1 ) ಯಾವುದರಿಂದ ಪರಿಮಳವನ್ನು ಅರಿಯಬಹುದು ?

ಹೂವಿನಿಂದ ಪರಿಮಳವನ್ನು ಅರಿಯಬಹುದು .

2) ಗುರು ಹೇಗೆ ವರ್ತಿಸಬಾರದು ?

ಗುರು ಲಘುವಾಗಿ ವರ್ತಿಸಬಾರದು .

3 ) ಯಾರು ಅನ್ಯಲಿಂಗವನ್ನು ನೆನೆಯುವುದಿಲ್ಲ ?

ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾನ ಭಕ್ತನಾದವನು ಅನ್ನಲಿಂಗವನ್ನು ನೆನೆಯುವುದಿಲ್ಲ .

4 ) ಉರಿಲಿಂಗಪೆದ್ದಿಯ ವಚನಗಳ ಅಂಕಿತ ಯಾವುದು ?

ಉರಿಲಿಂಗಪೆದ್ದಿಯ ವಚನಗಳ ಅಂಕಿತ ‘ ಉರಿಲಿಂಗಪೆದ್ದಿಯ ವಿಶ್ವೇಶ್ವರಾ ‘ ಎಂಬುದು .

ಇ ) ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )


1 ) ಗುರುವಿನ ಲಕ್ಷಣಗಳೇನು ?

ಗುರು ಶ್ರೀಗುರುವಾಗಿದ್ದಾನೆ . ಆತನ ಆಚಾರ – ವಿಚಾರ , ನಡೆ – ನುಡಿ ಎಲ್ಲವೂ ಗುರುತರವಾಗಿರುತ್ತದೆ .


ಶ್ರೇಷ್ಠತರವಾಗಿರುತ್ತದೆ . ಆತ ಎಂದು ಶ್ರೀಗುರುವಾಗಿಯೇ ಉಳಿಯುವನೇ ಹೊರತು ಲಘುವಾಗಿ
ನಡೆದುಕೊಳ್ಳಲು . ಗುರು ಗುರುವಾಗಿ ಶ್ರೇಷ್ಠನಾಗಿರುವನು . ಬೋಧಕನಾಗಿ , ಮಾರ್ಗದರ್ಶಕನಾಗಿ
ಇರುವನು .

2 ) ಯಾರು ಮನೆಮನೆಯನ್ನು ತಿರಿಯನು ? ಕೆರೆಯುದಕವನ್ನರಸದವನು ಯಾರು ?

ಸ್ಪರ್ಶ ಮಣಿಯಿಂದ ( ಪರುಷ ಮಣಿಯಿಂದ ) ನಿರ್ಮಿಸಿದ ಮನೆಯಲ್ಲಿ ವಾಸಿಸುವವನು ಅಂದರೆ


ಶ್ರೀಮಂತನು ಮನೆಮನೆಗೆ ಹೋಗಿ ಭಿಕ್ಷೆ ಬೇಡನು . ತೊರೆಯೊಳಗಿದ್ದವನು ( ನದಿಯ ಬಳಿ ಇರುವವನು )
ಬಾಯಾರಿಕೆಯನ್ನಾರಿಸಿಕೊಳ್ಳಲು ಕೆರೆಯ ನೀರನ್ನು ಬಯಸುವುದಿಲ್ಲ .

3 ) ಸೂರ್ಯ ಮತ್ತು ದೀಪಗಳಿಂದಾಗುವ ಉಪಯೋಗಗಳಾವುವು ?

ಸೂರ್ಯನಿಲ್ಲದೆ ಹಗಲು ಇರುವುದಿಲ್ಲ , ದೀಪವಿಲ್ಲದೆ ಬೆಳಕು ಇರುವುದಿಲ್ಲ , ಅಂದರೆ ಸೂರ್ಯನಿಂದ ನಮಗೆ


ಬೆಳಕು ಹಗಲು ಹಾಗೂ ದೀಪದಿಂದ ಬೆಳಕು ರಾತ್ರಿ ದೊರೆಯುತ್ತದೆ .

ಈ ) ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕಗಳ ಪ್ರಶ್ನೆಗಳು )


1 ) ಉರಿಲಿಂಗಪೆದ್ದಿಯ ವಚನಗಳಲ್ಲಿನ ಆಶಯವೇನು ?

Download: KannadaPDF.com https://KannadaPdf.com/


02. ವಚನಗಳು ನೋಟ್ಸ್ - KannadaPdf.com
ಅತಿ ಶ್ರೇಷ್ಠವಾದ ಮನಸ್ಥಿತಿಯಿಂದ ಶಿವಧ್ಯಾನ ಮಾಡುತ್ತಾ ಮಂಗಳಕರವಾದ ಅಂಗಳದ ಸಾಂಗತ್ಯದಿಂದ
ಇತರರ ಬಗ್ಗೆ ಚಿಂತಿಸಬೇಕೆಂಬುದನ್ನು ಉರಿಲಿಂಗಪೆದ್ದಿಯ ವಚನಗಳಲ್ಲಿನ ಆಶಯವಾಗಿದೆ . ಅಲ್ಲದೆ
ಗುರುವಿನ ನಡತೆಯು ಗುರುತರವಾಗಿದ್ದು , ಘನತೆಯುಳ್ಳದ್ದಾಗಿಯೂ ಇರಬೇಕೆಂಬುದನ್ನು ಅದರ
ಔಚಿತ್ಯವನ್ನು ಹಲವಾರು ಉದಾಹರಣೆಗಳೊಂದಿಗೆ ಸ್ಪಷ್ಟಪಡಿಸುವುದೇ ಉರಿಲಿಂಗಪೆದ್ದಿಯ ವಚನಗಳ
ಆಶಯವಾಗಿದೆ .

2 ) ಮಂಗಳಲಿಂಗದ ಮಹತ್ವವನ್ನು ಹೇಗೆ ವಿವರಿಸಲಾಗಿದೆ ?

ಮಂಗಳಲಿಂಗವು ಅತ್ಯಂತ ಮಹತ್ವ ಪೂರ್ಣವಾದುದಾಗಿದೆ . ಏಕೆಂದರೆ ಮಂಗಳಲಿಂಗದಂಗಳದಲ್ಲಿಯೇ


ಇಡೀ ಜಗತ್ತು ಅಡಗಿದೆ . ಈ ಮಂಗಳಲಿಂಗದಂಗಳವು ಪರುಷದ ಗೃಹದಂತೆ , ಇಡೀ ಜಗತ್ತಿನ
ಕೃಷಿಯನ್ನರಿಸುವ ತೊರೆಯಂತಿರುವವನು . ಆದ್ದರಿಂದಲೇ ಮಂಗಳಲಿಂಗ ಅಂಗಳವಿರಲು
ಅನ್ಯಲಿಂಗಗಳನ್ನು ಭಕ್ತನು ನೆನೆವನೆ ? ಅಂದರೆ ಅಷ್ಟೊಂದು ಮಹತ್ವಪೂರ್ಣದ್ದಾಗಿದೆ .

3 ) ಗುರು ಲಘುವರ್ತನದಲ್ಲಿ ವರ್ತಿಸಬಾರದೇಕೆ ?

ಗುರು ಶ್ರೇಷ್ಠತಮ , ಬೋಧಕ , ಮಾರ್ಗದರ್ಶಕ , ಗುರುತರ ಮಾತ್ರವಲ್ಲದೆ ಶ್ರೀಗುರುವೇ ಆಗಿರುವನು .


ಆತನ ಆಚಾರ – ವಿಚಾರ , ವರ್ತನೆ ಎಲ್ಲದರಲ್ಲಿಯೂ ಗುರುವಾಗಿಯೇ ಇರಬೇಕು . ಲಘುತರನಾಗಿ
ವರ್ತಿಸಿದರೆ ಆ ಶ್ರೀಗುರುವಿಗೆ ಅಪಮಾನಕರ , ಯಾರು ಗೌರವ ಕೊಡಲಾರರು , ಗುರುಸ್ಥಾನಕ್ಕೆ ಚ್ಯುತಿ
ಬರುವುದು . ಆದ್ದರಿಂದ ಗುರು ಗುರುವಾಗಿಯೇ ಇರಬೇಕೆ ಹೊರತು ಲಘುತರನಾಗಿ ವರ್ತಿಸಬಾರದು .

೨.೧೧ ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :


1 “ ತಾನೆ ಲಘುಮಾಡಿ ಲಘುವಾದನಯ್ಯ ”

ಈ ಮೇಲಿನ ವಾಕ್ಯವನ್ನು ಉರಿಲಿಂಗಪೆದ್ದಿಯ ವಚನದಿಂದ ಆಯ್ದುಕೊಳ್ಳ ಲಾಗಿದೆ . ಗುರುವು ಲಘುವಾದ


ರೀತಿಯಲ್ಲಿ ವರ್ತಿಸಬಾರದೆಂಬುದನ್ನು ನಿರೂಪಿಸುವಾಗ ಕವಿಯು ಈ ವಾಕ್ಯವನ್ನಾಡಿದ್ದಾನೆ . ಗುರುವಿನ
ಸ್ಥಾನ ಹಿರಿದು . ತನ್ನ ಸಚ್ಚಾರಿತ್ರ್ಯ ವರ್ತನೆ ಮತ್ತು ವ್ಯಕ್ತಿತ್ವಗಳಿಂದ ಆತ ಸದಾ ತನ್ನ ಗುರುಸ್ಥಾನದ
ಘನತೆಯನ್ನು ಕಾಯ್ದುಕೊಳ್ಳಬೇಕು . ಆ ಮೂಲಕ ತನ್ನ ಶಿಷ್ಯರಿಗೆ ಹಾಗೂ ಸಮಾಜಕ್ಕೆ ಮಾದರಿಯಾಗಿ
ಬದುಕಬೇಕು . ಗುರುವು ಲಘುವರ್ತನೆಯನ್ನು ತೋರಿದರೆ ಅವನು ಉಳಿದವರ ದೃಷ್ಟಿಯಲ್ಲಿ ಲಘುವಾಗಿ
ಹೋಗುತ್ತಾನೆ . ಆದ್ದರಿಂದ ಹಗುರವಾದ ನಡವಳಿಕೆಯನ್ನು ತೋರದೆ ಘನವ್ಯಕ್ತಿತ್ವವನ್ನು
ಕಾಯ್ದುಕೊಳ್ಳುವುದು ನಿಜವಾದ ಗುರುವಾದವನ ಕರ್ತವ್ಯವಾಗಿದೆ ಎಂಬುದನ್ನು ಕವಿಯು ಇಲ್ಲಿ ವಿವರಿಸಿ
ಹೇಳಿದ್ದಾನೆ .

2. “ ಅನ್ಯ ಲಿಂಗಗಳ ನೆನೆವನೆ ನಿಮ್ಮ ಭಕ್ತನು ”

ಈ ಮೇಲಿನ ವಾಕ್ಯವನ್ನು ಉರಿಲಿಂಗಪೆದ್ದಿಯ ವಚನದಿಂದ ಆಯ್ದುಕೊಳ್ಳ ಲಾಗಿದೆ . ಲಿಂಗಸಾಮಿಪ್ಯವು


ಉಳಿದೆಲ್ಲವನ್ನೂ ಮರೆಯುವಂತೆ , ನೆನೆಯದಂತೆ ಮಾಡುವು ದೆಂಬುದನ್ನು ನಿರೂಪಿಸುವಾಗ ಕವಿ ಈ
ಮೇಲಿನ ಮಾತನ್ನು ಹೇಳಿದ್ದಾನೆ . ಪರುಷಗೃಹದಲ್ಲಿರುವವನು ಮನೆಮನೆ ತಿರುಗಿ ತಿರಿಯುವ ( ಬೇಡುವ )
ಅಗತ್ಯವಿಲ್ಲ , ತೊರೆಯೊಳಗಿರುವವನು ಕೆರೆಯ ನೀರನ್ನು ಬಯಸನು . ಅದರಂತೆಯೇ ಮೈಮೇಲೆ

Download: KannadaPDF.com https://KannadaPdf.com/


02. ವಚನಗಳು ನೋಟ್ಸ್ - KannadaPdf.com
ಲಿಂಗವನ್ನು ಧರಿಸಿದ ಮಹಾಭಕ್ತನು ಅನ್ಯಲಿಂಗಗಳನ್ನು ನೆನೆಯುವುದಿಲ್ಲ ಎಂದು ಉರಿಲಿಂಗಪೆದ್ದಿಯು
ಅಭಿಪ್ರಾಯಪಟ್ಟಿರುವನು .

3 “ ಪುಷ್ಟವಿಲ್ಲದೆ ಪರಿಮಳವನರಿಯಬಹುದೆ “

ಉರಿಲಿಂಗಪೆದ್ದಿಯ ವಚನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಮಹಾಘನ ನಿರಾಳನಾದ


ಪರಶಿವನಿಂದ ಲಿಂಗವು ವೇದ್ಯವಾಗುವುದೆನ್ನುವುದನ್ನು ನಿರೂಪಿಸುವಾಗ ಕವಿಯು ನಿದರ್ಶನವಾಗಿ ಈ
ಮೇಲಿನ ವಾಕ್ಯವನ್ನು ರಚಿಸಿದ್ದಾನೆ . ಪುಷ್ಟವಿದ್ದರೆ ಸುಗಂಧದ ಅನುಭವ ನಮಗಾಗುತ್ತವೆ . ಪುಷ್ಪವೇ
ಇಲ್ಲದಿದ್ದರೆ ಪರಿಮಳವನ್ನು ಅನುಭವಿಸಲು , ಅರಿಯಲು ಹೇಗೆ ನಮಗೆ ಅಸಾಧ್ಯವೋ ಅದರಂತೆಯೇ
ಪರಶಿವನಿಂದಾಗಿ ಲಿಂಗವು ಅನುಭವಕ್ಕೆ ಬರುತ್ತದೆಂದು ಕವಿ ಅಭಿಪ್ರಾಯಪಟ್ಟಿರುವನು . ಹೂವು –
ಪರಿಮಳಗಳು ಹೇಗೆ ಅಭಿನ್ನವೋ ಪರಶಿವಲಿಂಗಗಳೂ ಭಿನ್ನವಲ್ಲವೆಂಬುದು ಆತನ ಅಭಿಪ್ರಾಯವಾಗಿದೆ .

Download: KannadaPDF.com https://KannadaPdf.com/

You might also like