You are on page 1of 4

12. ಒಮ್ಮೆ ನಗುತ್ತೇವೆ ನೋಟ್ಸ್ - KannadaPdf.

com

ತರಗತಿ : ದ್ವಿತೀಯ ಪಿ.ಯು.ಸಿ


ವಿಷಯ : ಕನ್ನಡ
ಪಾಠದ ಹೆಸರು : ಒಮ್ಮೆ ನಗುತ್ತೇವೆ

ಕವಿ ಪರಿಚಯ :
ಧಾರವಾಡದ ಜೆ.ಎಸ್.ಎಸ್ . ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಪ್ರೊ . ಬಿ . ಸುಕನ್ಯಾ ಮಾರುತಿ
( ಜನನ : ೧.೩.೧೯೫೬ ) ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರಿನವರು .
ಬಂಡಾಯ ಸಾಹಿತ್ಯ – ಸಂಘಟನೆ , ಮಹಿಳಾ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ . ಇದುವರೆಗೆ ಪರಿಸರದಲ್ಲಿ
, ಪಂಚಾಗ್ನಿ ಮಧ್ಯೆ , ನಾನು ನನ್ನವರು , ತಾಜಮಹಲಿನ ಹಾಡು , ಬಿಂಬದೊಳಗಣ ಮಾತು , ಎಂಬ ಕವನ
ಸಂಕಲನಗಳನ್ನು ಪ್ರಕಟಿಸಿದ್ದಾರೆ . ‘ ನಾನೆಂಬ ಮಾಯೆ ‘ ಎಂಬ ಸಮಗ್ರ ಕಾವ್ಯ ೨೦೦೭ ರಲ್ಲಿ
ಪ್ರಕಟವಾಗಿದೆ . ಪ್ರಣಯಿನಿ , ಸಂಕೃತಿ , ಪ್ರಶಾಂತ ಎಂಬ ಕೃತಿಗಳನ್ನು ಇತರರೊಂದಿಗೆ ಸಂಪಾದಿಸಿದ್ದಾರೆ
.

ಕರ್ನಾಟಕ ವಿ.ವಿ. ಸಿಂಡಿಕೇಟ್ ಸದಸ್ಯೆ , ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ , ಕನ್ನಡ ಅಭಿವೃದ್ಧಿ
ಪ್ರಾಧಿಕಾರದ ಸದಸ್ಯೆಯಾಗಿ ಕೆಲಸ ನಿರ್ವಹಿಸಿರುವ ಇವರು ಗೋಕಾಕ್ ಚಳುವಳಿ , ದಲಿತ ಬಂಡಾಯ
ಚಳುವಳಿ , ಕುಲಕಸುಬು ದೇಶೀಕಲೆಗಳ ಅಭಿವೃದ್ಧಿಗಾಗಿ ಸಂಸ್ಕೃತಿ ಸಂಗ್ರಾಮ ಪ್ರತಿಷ್ಠಾನದ ಸ್ಥಾಪನೆ –
ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡವರು .

ಇವರ ಸಾಹಿತ್ಯ ಸಾಧನೆಗಾಗಿ ನಾಲ್ಕನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ‘ ಗೌರವ ಪ್ರಶಸ್ತಿ
, ‘ ಅಂಬೇಡ್ಕರ್ ‘ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ . – ಹೊಟ್ಟೆಗೆ ಅನ್ನವಿಲ್ಲದೆ ಬಳಲುವವರಲ್ಲಿ
ನಗು ಎಲ್ಲಿಂದ ಬಂದೀತು ? ಸಾಮಾಜಿಕ ಅಸಮಾನತೆಯು ಬಡವರನ್ನು ಹಸಿವಿನ ಸುಳಿಯಲ್ಲಿ ಸಿಲುಕಿಸಿ
ನರಳಿಸುತ್ತಿದೆ . ಅವರ ಮೊಗದಲ್ಲಿ ನಗೆ ಅರಳಬೇಕಾದರೆ ಮೂಲಭೂತ ಸೌಕರ್ಯಗಳನ್ನು ಮೊದಲು
ಒದಗಿಸಬೇಕು. ಆ ಮೂಲಕ ಹೊಗೆಯಾಗಿರುವ ಅವರ ಬದುಕಿನಲ್ಲಿ ನಗೆ ಮೂಡಿಸಬೇಕು ಎಂಬ ಕಳಕಳಿ
ಇಲ್ಲಿದೆ. ಕವಯಿತ್ರಿ ಶೋಷಿತರ ಪರವಾಗಿ ಹೊಮ್ಮಿಸಿರುವ ಪ್ರತಿಭಟನೆಯ ಧ್ವನಿ ಇಲ್ಲಿ ಸಶಕ್ತವಾಗಿ
ಮೂಡಿಬಂದಿದೆ.

ಕಾವ್ಯದ ಹಿನ್ನೆಲೆ :
ನಮ್ಮದು ಸಮೃದ್ಧ ದೇಶವಾದರೂ ಸಮಾನತೆಗಾಗಿ ಸಮೃದ್ಧತೆಯ ಬದುಕಿಗಾಗಿ ನಿರಂತರ ಹೋರಾಟ
ನಡದೇ ಇದೆ . ಶತಶತಮಾನಗಳಿಂದ ಶೋಷಣೆಗೆ ಒಳಗಾದ ಜನ ಸಮಪಾಲು – ಸಮಬಾಳು ಪಡೆಯಲು
ಅವಿರತ ಪ್ರಯತ್ನದಲ್ಲಿದ್ದಾರೆ . ಆದರೂ ಇಲ್ಲಿ ಎಲ್ಲ ಇದ್ದರೂ ‘ ಯಾರಿಗುಂಟು ಯಾರಿಗಿಲ್ಲ ‘ ಎನ್ನುವ
ವಾತಾವರಣ ಇದೆ . ಬಡವರ , ನಿರ್ಗತಿಕರ ಬದುಕಿನ ಆರ್ತ ನೋವಿಗೆ ಮನಮಿಡಿಯುವ ಅಂಶ ಇಲ್ಲಿದೆ .
ತಿನ್ನಲು ತುತ್ತನ್ನವೂ ಸಿಗದ ಜನಸಮುದಾಯದಲ್ಲಿ ನಗೆ ಎಲ್ಲಿಂದ ಬರಬೇಕು ? ಅವರ ದುಗುಡ ದುಮ್ಮಾನ

Download: KannadaPDF.com https://KannadaPdf.com/


12. ಒಮ್ಮೆ ನಗುತ್ತೇವೆ ನೋಟ್ಸ್ - KannadaPdf.com
ದೂರಮಾಡಿ , ಹೊಗೆ ಸರಿಸಿ , ಅವರ ಬಾಳಲ್ಲಿ ನಗೆ ಮೂಡಿಸುವ ಪ್ರಯತ್ನ ಈ ಕವಿತೆಯಲ್ಲಿದೆ . ಶೋಷಿತರ
ಪರವಾದ ಬಂಡಾಯದ ಧ್ವನಿ ಇಲ್ಲಿ ಸಶಕ್ತವಾಗಿ ಅಭಿವ್ಯಕ್ತಗೊಂಡಿದೆ .

ಶಬ್ದಾರ್ಥ :
ಕುದಿ – ಬೇಯು ; ಮೊರೆಯಿಡು – ಬೇಡು , ಯಾಚಿಸು ; ಕಂಬನಿ ಕಣ್ಣೀರು ; ಲಾವಾರಸ – ಭೂಮಿಯಿಂದ
ಹೊರಬರುವ ಜ್ವಾಲಾಮುಖಿ ; ಧಗೆ – ಹೊಗೆ ; ಹೊಳೆ – ಕಾಂತಿ ; ಆಪೋಶನ – ಊಟದ ಮೊದಲು ಮತ್ತು
ನಂತರ ಅಂಗೈಯಲ್ಲಿ ಹಾಕಿಕೊಂಡು ಕುಡಿಯುವ ನೀರು / ಹಾಲು .

I . ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )


1 ) ಕವಯಿತ್ರಿ ಯಾರಲ್ಲಿ ಮೊರೆ ಇಡುತ್ತಾರೆ ?
ಕವಯಿತ್ರಿ ತಾನೆಂದೂ ನಂಬಿರದ ದೇವರಲ್ಲಿ ಮೊರೆ ಇಡುತ್ತಾರೆ .

2 ) ಜನರನ್ನು ಯಾವುದರಿಂದ ಪಾರು ಮಾಡುತ್ತೇನೆಂದು ಕವಯಿತ್ರಿ ಹೇಳುವರು ?


ಜನರನ್ನು ದಾರಿದ್ರವೆಂಬ ಧಗೆಯಿಂದ ಹೊರನೂಗಿಸುತ್ತೇನೆಂದು ಕವಯಿತ್ರಿ ಹೇಳುವರು .

3 ) ಜನರಿಗೆ ಯಾವುದಕ್ಕೆ ಗತಿಯಿಲ್ಲ ?


ಜನರಿಗೆ ಗಂಜಿಗೂ ಗತಿಯಿಲ್ಲ .

4 ) ಕವಯಿತ್ರಿ ಯಾವುದಕ್ಕೆ ಧಿಕ್ಕಾರವಿರಲಿ ಎನ್ನುತ್ತಾರೆ ?


ಕವಯಿತ್ರಿ ದೀನದಲಿತತನಕ್ಕೆ ಧಿಕ್ಕಾರವಿರಲಿ ಎನ್ನುತ್ತಾರೆ .

5 ) ದನಗಳಿಗೆ ಏನಿಲ್ಲ ?
ದನಗಳಿಗೆ ಮೇವಿಲ್ಲ .

II. ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )


1 ) ಕವಯಿತ್ರಿ ಮುಗಿಲತ್ತ ಕೈಚಾಚಿ ಏಕೆ ನಿಂತಿದ್ದಾರೆ ?

ಕವಯಿತಿಗೆ ಏನು ಮಾಡಲಾಗದೆ , ಅವರ ಸ್ಥಿತಿ ನೋಡಲಾಗದೆ ಅವರಿಗಾಗಿ ಕವಯಿತ್ರಿ ಮುಗಿಲತ್ತ ಕೈಚಾಚಿ
ನಿಂತಿದ್ದಾರೆ .

2 ) ಕವಯಿತ್ರಿ ನಗುವ ನಗು ಎಂಥಹುದು ?

ಕವಯಿತ್ರಿ ನಗುವ ನಗು ಕೊನೆಯಿಲ್ಲದ್ದು , ಮೊನೆಯಿಲ್ಲದ್ದು , ಆಕಾಶದಲ್ಲಿ ಕಾರ್ಮೋಡ ಕಲಿಸುವ ನಗು ,


ಮಳೆ ಸುರಿಸುವ , ಹೊಳೆ ಹರಿಸುವ , ಬೆಳೆ ಬೆಳೆಸುವ ನಗು ಕವಯಿತ್ರಿಯದು .

3 ) ಜನರನ್ನು ಕವಯಿತ್ರಿ ಯಾವ ಯಾವುದರಿಂದ ಪಾರು ಮಾಡುವುದಾಗಿ ಹೇಳಿದ್ದಾರೆ ?

Download: KannadaPDF.com https://KannadaPdf.com/


12. ಒಮ್ಮೆ ನಗುತ್ತೇವೆ ನೋಟ್ಸ್ - KannadaPdf.com
ದಾರಿದ್ರವೆಂಬ ಬೆಂಕಿಯ ಧಗೆಯಲ್ಲಿ ಬೇಯುತ್ತಿರುವ ಜನರನ್ನು ಅವರ ಈ ದಾರಿದ್ರ ಎಂಬ ಬೆಂಕಿಯ
ಧಗೆಯಿಂದ ಪಾರು ಮಾಡುವುದಾಗಿ ಕವಯಿತ್ರಿ ಹೇಳಿದ್ದಾರೆ . ಅವರ ಎಂದರೆ ದೀನದಲಿತರ ನೋವನ್ನು
ಸರ್ವನಾಶ ಮಾಡುತ್ತೇನೆ ಎಂಬುದಾಗಿ ಹೇಳುವರು .

4 ) ದನಗಳಿಗೆ ಜನಗಳಿಗೆ ಏನೇನು ಇಲ್ಲ ?

ದನಗಳಿಗೆ ಮೇವಿಲ್ಲ . ಜನಗಳಿಗೆ ನೀರಿಲ್ಲ , ಗಂಜಿಗೂ ಗತಿಯಿಲ್ಲ . ತಿನ್ನಲು ತುತ್ತನ್ನ ಇಲ್ಲದ ಜನರಲ್ಲಿ
ನಗುವಂತು ಇಲ್ಲವೇ ಇಲ್ಲ .

III . ಐದಾರು ವಾಕ್ಯದಲ್ಲಿ ಉತ್ತರಿಸಿ : ( ನಾಲ್ಕು ಅಂಕದ ಪ್ರಶ್ನೆಗಳು )


1 ) ‘ ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯಲ್ಲಿ ವ್ಯಕ್ತವಾಗುವ ನಗುವಿನ ವೈಶಿಷ್ಟ್ಯ ವಿವರಿಸಿ .

‘ ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯಲ್ಲಿ ವ್ಯಕ್ತವಾಗುವ ನಗುವಿನ ವೈಶಿಷ್ಟ್ಯವೆಂದರೆ – ‘ ನಗು ಆರೋಗ್ಯ ,


ಆಯಸ್ಸು ಕೊಡುತ್ತದೆ . ಆದರೆ ಈ ದಲಿತರ ಜೀವನದಲ್ಲಿ ನಗ ಎಂಬುದಿಲ್ಲ . ಸಾಮಾಜಿಕ
ಅಸಮಾನತೆಯನ್ನು ಬಡವರನ್ನು ಹಸಿವಿನ ಸುಳಿಯಲ್ಲಿ ಸಿಲುಕಿಸಿ ನರಳಿಸುತ್ತದೆ . ಅವರ ಮೊಗದಲ್ಲಿ ನಗೆ
ಅರಳ ಬೇಕಾದರೆ ಮೂಲಭೂತ ಸೌಕಯ್ಯಗಳನ್ನು ಒದಗಿಸಬೇಕು . ಅದಕ್ಕಾಗಿ ಅವರ ಬಾಳಿನಲ್ಲಿ ಕವಯಿತ್ರಿ
ನಗೆ ಮೂಡಿಸುವ ಪ್ರಯತ್ನ ಮಾಡುತ್ತಾ ಅವರನ್ನು ನಗಿಸಿ ತಾನೂ ಕೂಡ ನಗುವ ವಿಚಾರ ವ್ಯಕ್ತಪಡಿಸಿದ್ದಾರೆ
. ಕವಯಿತ್ರಿ ತಾನೇ ಸ್ವಯಂ ಹೇಳುವಂತೆ ದೀನದಲಿತರನ್ನು ಹೊಗೆಯಿಂದ ಪಾರು ಮಾಡಿ . ಅವರನ್ನು
ನಗಿಸುತ್ತೇನೆ . ನಾನು ನಗುತ್ತೇನೆ , ಅದು ಕೊನೆಯಿಲ್ಲದ , ಮೊನೆಯಿಲ್ಲದ ನಗು , ಆಕಾಶದಲ್ಲಿ ಕಾರ್ಮೋಡ
ಕವಿಸುವ , ಮಳೆ ಸುರಿಸುವ ಹೊಳೆಹರಿಸುವ , ಬೆಳೆ ಬೆಳೆಸುವ , ದನ , ಜನ , ಎಲ್ಲ ಕೂಡಿ ನಕ್ಕೆ ನಗುತ್ತೇವೆ
‘ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುವುದೇ ಈ ಕವಿತೆಯ ವೈಶಿಷ್ಟ್ಯವಾಗಿದೆ .

2 ) ಕವಯಿತ್ರಿ ಅಗ್ನಿಪರ್ವತ ಜ್ವಾಲಾಮುಖಿ ಆಗಿದ್ದೇನೆ ಎನ್ನಲು ಕಾರಣಗಳೇನು ?

ಶೋಷಿತ ಸಮುದಾಯದವರು , ದೀನದಲಿತರು , ತುತ್ತಾನ್ನಕ್ಕೆ ಗತಿ ಇಲ್ಲದವರು , ದನಗಳಿಗೂ ಮೇವಿಲ್ಲ ,


ಜನಗಳಿಗೆ ನೀರಿಲ್ಲ , ಗಂಜಿಗೂ ಗತಿ ಇಲ್ಲ . ಸತ್ತ ದನಗಳನ್ನು ಕಿತ್ತು ತಿನ್ನುವುದನ್ನು ನೋಡಲಾಗದೆ ಈ
ಸಮಾಜದ ಸ್ಥಿತಿಗತಿಯನ್ನು ಕಂಡು ಆಕ್ರೋಶ ಭುಗಿಲೆಳೆತ್ತದೆ . ದೀನದಲಿತರ ಬಗ್ಗೆ ತೋರುವ ಸಮಾಜದ
ರೀತಿ – ನೀತಿಯಿಂದ ನೊಂದುಬೆಂದು ಕವಯಿತ್ರಿ ಜ್ವಾಲಾಮುಖಿಯಂತೆ ಸಿಡಿದಿದ್ದಾರೆ . ಆದ್ದರಿಂದ ಸ್ವತಃ
ಕವಯಿತ್ರಿಯವರು ‘ ಅಗ್ನಿಪರ್ವತ , ಜ್ವಾಲಾಮುಖಿ ಆಗಿದ್ದೇನೆ ‘ ಎಂದು ಹೇಳಿದ್ದಾರೆ .

IV ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :


1 ) “ ಒಮ್ಮೆ ನಕ್ಕೇ ನಗುತ್ತೇವೆ . ”

ಶ್ರೀಮತಿ ಸುಕನ್ಯಾ ಮಾರುತಿಯವರು ಬರೆದಿರುವ ‘ ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯ ಕೊನೆಯ


ವಾಕ್ಯವಿದು . ಜಗತ್ತನ್ನು ಆವರಿಸಿರುವ ಬರಗಾಲ ದೂರಾಗಿ , ಬಡತನ – ದಾರಿದ್ರ ತೊಲಗಿ ಜನರು
ಸಂತೋಷದಲ್ಲಿರಬೇಕು . ಆಕಾಶದಲ್ಲಿ ಕಾರ್ಮೋಡ ಕವಿದು , ಭೂಮಿಗೆ ಮಳೆ ಸುರಿದು , ಹೊಳೆ ತುಂಬಿ
ಹರಿದು , ಬೆಳೆ ಬೆಳೆಯುವಂತಾದಾಗ ಜನರೆಲ್ಲ ಸಂತೋಷದಿಂದ ಜೀವಿಸುತ್ತಾರೆ . ದನಕರುಗಳು

Download: KannadaPDF.com https://KannadaPdf.com/


12. ಒಮ್ಮೆ ನಗುತ್ತೇವೆ ನೋಟ್ಸ್ - KannadaPdf.com
ನೆಮ್ಮದಿಯಿಂದ ಬದುಕುತ್ತವೆ . ಈ ಎಲ್ಲ ಸಹಜೀವಿಗಳು ಸಂತೋಷದಿಂದಿರುವಾಗ ತಾವೂ ಅವರೊಂದಿಗೆ
ಒಮ್ಮೆ ನಕ್ಕೆ ನಗುತ್ತೇವೆ , ಎಲ್ಲರೂ ಕೂಡಿ ನಗುತ್ತೇವೆ . ಅಂತಹ ಕಾಲ ಬಂದೇ ತೀರುವುದೆಂಬ
ಆಶಯವನ್ನು ಕವಯಿತ್ರಿ ಈ ಮೇಲಿನ ವಾಕ್ಯದ ಮೂಲಕ ವ್ಯಕ್ತಪಡಿಸಿದ್ದಾರೆ .

2 ) “ ಧಗಧಗ ಉರಿವ ಜ್ವಾಲಾಮುಖಿಯಾಗಿದ್ದೇನೆ ”

ಶ್ರೀಮತಿ ಸುಕನ್ಯಾ ಮಾರುತಿ ಅವರ ` ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯಲ್ಲಿ ಕವಯಿತ್ರಿ ಈ ಮೇಲಿನ
ವಾಕ್ಯವನ್ನು ಹೇಳಿದ್ದಾರೆ . ಭೀಕರವಾದ ಬರಗಾಲದಲ್ಲಿ ದನಕರುಗಳು , ಜನರು ತಿನ್ನಲು ಆಹಾರವಿಲ್ಲದೆ ,
ಕುಡಿಯಲು ನೀರಿಲ್ಲದೆ ಸಾಯುತ್ತಿದ್ದಾರೆ . ಈಗ ಮಳೆ ಬಂದರೆ ಮಾತ್ರವೇ ಅವರ ಉಳಿಗಾಲ . ಇಂತಹ
ಸಂದರ್ಭದಲ್ಲಿ ಅವರ ದೀನ ಸ್ಥಿತಿ ನೋಡಲಾರದೆ ಕವಯಿತಿ ಮಳೆಗಾಗಿ ಮುಗಿಲತ್ತ ಕೈಚಾಚಿ ನಿಂತಿದ್ದಾರೆ .
ಮಳೆಗಾಗಿ ಬೇಡುತ್ತಿದ್ದರೂ ಮನದೊಳಗೆ ಧಗಧಗಿಸಿ ಉರಿಯುವ ಜ್ವಾಲಾಮುಖಿಯಾಗಿದ್ದೇನೆಂದು ಈ
ಸಂದರ್ಭದಲ್ಲಿ ಕವಯಿತ್ರಿ ಹೇಳಿರುವರು .

3 ) “ ದೀನದಲಿತತನಕ್ಕೆ ಧಿಕ್ಕಾರವಿರಲಿ ! ”

ಶ್ರೀಮತಿ ಸುಕನ್ಯಾ ಮಾರುತಿಯವರ ‘ ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು


ಆಯ್ದುಕೊಳ್ಳಲಾಗಿದೆ . ದೀನದಲಿತರಿಗಾಗಿ ಎಂದೂ ನಂಬದ , ಕಾಣದ ದೇವರನ್ನು ಪ್ರಾರ್ಥಿಸಿರುವ
ಕವಯಿತ್ರಿ ಯಾರೂ ಸಹಾಯಹಸ್ತವನ್ನು ಚಾಚದಿದ್ದ ಸಂದರ್ಭದಲ್ಲಿ ಇಡೀ ಜಗತ್ತನ್ನೇ ಮುಳುಗಿಸಿ ಬಿಡುವ
ಛಲ ಮೂಡುವುದೆಂದು ಹೇಳಿರುವರು . ಬೆಂಕಿ ನಾಲಗೆ ಚಾಚಿ ನನ್ನವರ ದಾರಿದ್ರವನ್ನೇ ಆಪೋಶನ
ಮಾಡಬೇಕೆನ್ನುವ ಅವರು ದಲಿತರಿಂದ ದೀನ ದಲಿತತನ ಸರ್ವನಾಶವಾಗಬೇಕೆಂಬ , ಸಮಾನತೆಯು
ಮೂಡಬೇಕೆಂಬ ಆಶಯ ಹೊಂದಿರುವುದನ್ನು ಈ ಮೇಲಿನ ವಾಕ್ಯದಲ್ಲಿ ಗಮನಿಸಬಹುದಾಗಿದೆ .

4 ) “ ಗಂಜಿಗೂ ಗತಿಯಿಲ್ಲ ”

ಶ್ರೀಮತಿ ಸುಕನ್ಯಾ ಮಾರುತಿಯವರು ಬರೆದಿರುವ ‘ ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯ ಆರಂಭದಲ್ಲಿ ಈ


ಮೇಲಿನ ವಾಕ್ಯವಿದೆ .ಜನಗಳು ಮತ್ತು ವನಗಳು ಭೀಕರ ಬರಗಾಲದ ಧಾಳಿಗೆ ಸಿಕ್ಕು ತತ್ತರಿಸಿ ,
ದಾರಿದ್ರವನ್ನು ಅನುಭವಿಸುತ್ತಿರುವ ಸ್ಥಿತಿಯನ್ನು ವಿವರಿಸುವ ಸಂದರ್ಭದಲ್ಲಿ ಕವಯಿತ್ರಿ ಈ ಮೇಲಿನ
ವಾಕ್ಯವನ್ನು ಹೇಳಿದ್ದಾರೆ . ದನಗಳಿಗೆ ಮೇವು ಸಿಗದಂತಹ ಪರಿಸ್ಥಿತಿ ಎದುರಾಗಿದೆ . ಜನರಿಗೆ ಕುಡಿಯಲು
ನೀರು ಸಿಗುತ್ತಿಲ್ಲ . ತಿನ್ನಲು ಗಂಜಿಗೂ ಗತಿಯಿಲ್ಲ . ಇಂತಹ ಪರಿಸ್ಥಿತಿಯಲ್ಲಿ ಜನರೆಲ್ಲ ಸತ್ತ ದನಗಳನ್ನು ಕಿತ್ತು
ಕಿತ್ತು ತಿನ್ನಬೇಕಾದ ಪರಿಸ್ಥಿತಿಗೆ ತಲುಪಿದ್ದಾರೆಂದು ಕವಯಿತ್ರಿ ಅತ್ಯಂತ ವಿಷಾದದಿಂದ ಹೇಳಿದ್ದಾರೆ

Download: KannadaPDF.com https://KannadaPdf.com/

You might also like