You are on page 1of 6

08. ಹಳ್ಳಿಯ ಚಹಾ ಹೋಟೇಲುಗಳು ನೋಟ್ಸ್ - KannadaPdf.

com

ತರಗತಿ : ದ್ವಿತೀಯ ಪಿ.ಯು.ಸಿ


ವಿಷಯ : ಕನ್ನಡ
ಪಾಠದ ಹೆಸರು : ಹಳ್ಳಿಯ ಚಹಾ ಹೋಟೇಲುಗಳು

ಕೃತಿಕಾರರ ಪರಿಚಯ :
ವೀರೇಂದ್ರ ಸಿಂಪಿ ( ೧೯೩೮ ) : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣದಲ್ಲಿ ಜನನ . ತಂದೆ
ಡಾ || ಸಿಂಪಿ ಲಿಂಗಣ್ಣ , ತಾಯಿ ಸೋಬಲು ೧೯೬೩ ರಿಂದ ೧೯೯೭ ರ ವರೆಗೆ ಬೀದರಿನ ಬಿ.ವಿ.
ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ಬೀದರ್‌ನಲ್ಲಿಯೇ ವಿಶ್ರಾಂತ
ಜೀವನ ನಡೆಸುತ್ತಿದ್ದಾರೆ.

ಕಾಗದದ ಚೂರು , ಭಾವ – ಮೈದುನ , ಸ್ವಚ್ಛಂದ ಮನದ ಸುಳಿದಾಟ , ಪರಿಸರ ಸ್ಪಂದನ ಇವರ ಪ್ರಮುಖ
ಲಲಿತ ಪ್ರಬಂಧ ಸಂಕಲನಗಳಾಗಿವೆ . ವಿಶ್ವಕಲ್ಯಾಣ ಪತ್ರಿಕೆ ಮತ್ತು ದಿಕ್ಕೂಚಿ ಮಾಸಪತ್ರಿಕೆಗೆ ನಿಯಮಿತ
೮೦ ಕ್ಕೂ ಮೇಲ್ಪಟ್ಟು ಅಂಕಣಗಳು ಬರೆದಿರುತ್ತಾರೆ . ಜೀವನಚರಿತ್ರೆ , ಅನುವಾದ , ಸಂಪಾದನೆ ,
ವೈಚಾರಿಕ ಲೇಖನಗಳು ಮುಂತಾಗಿ ಇಲ್ಲಿಯವರೆಗೆ ಇವರು ೩೨ ಕೃತಿಗಳನ್ನು ಪ್ರಕಟಿಸಿದ್ದಾರೆ.

ʼಭಾವ – ಮೈದುನ ‘ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು , ಎರಡು ಬಾರಿ ಸಾಹಿತ್ಯ
ಅಕಾಡೆಮಿಯ ಸದಸ್ಯರಾಗಿ ಸೇವೆಸಲ್ಲಿಸಿರುತ್ತಾರೆ . ಪ್ರಸಕ್ತ ಪ್ರಬಂಧವು ಇವರ ‘ ಸಮಗ್ರ ಲಲಿತ ಪ್ರಬಂಧ ‘
ಸಂಕಲನದಿಂದ ಆಯ್ದುಕೊಳ್ಳಲಾಗಿದೆ . ‘ ಬಹುಶ್ರುತತ್ವ ಹಾಗೂ ಜೀವನಾನುಭವದ ತಮ್ಮ ಆತ್ಮವೃತ್ತದ
ಎಳೆಗಳೊಂದಿಗೆ ಸಮೂಹ ಚಿಂತನೆಯನ್ನು ಜೋಡಿಸುವುದು ‘ ಇವರ ಪ್ರಬಂಧಗಳ ವೈಶಿಷ್ಟ್ಯವಾಗಿದೆ.

ಪಾಠದ ಆಶಯ :
ಭಾರತೀಯರನ್ನು ತಮ್ಮ ಗ್ರಾಹಕರನ್ನಾಗಿ ಮಾಡಿಕೊಳ್ಳಲು ಇಂಗ್ಲಿಷರು ಮೊದಮೊದಲು ಪುಕ್ಕಟೆಯಾಗಿ
ಜನರಿಗೆ ಚಹಾ ಕುಡಿಸುತ್ತಾ ಚಹಾ ಉದ್ಯಮ ಭಾರತದಲ್ಲಿ ಬೆಳೆಸಿದ್ದುಂಟು . ಕಾಡು ನಾಶವಾಗಿ ಚಹಾದ
ತೋಟ ತಲೆ ಎತ್ತಿದಾಗ ಪಟ್ಟಣಿಗರು ಹಾಗೂ ಹಳ್ಳಿಗರು ಮೆಲ್ಲಮೆಲ್ಲನೆ ಇದಕ್ಕೆ ಎಷ್ಟು ಹೊಂದಿಕೊಂಡರೆಂದರೆ
ಊಟವಿಲ್ಲದಿದ್ದರು ಅಡ್ಡಿಯಿಲ್ಲ ಪ್ರತಿಯೊಬ್ಬ ವ್ಯಕ್ತಿಗೂ ಇಂದು ನಿಯಮಿತವಾಗಿ ಚಹಾ ಸೇವನೆ ಬೇಕೇಬೇಕು .
ಹಾಗೂ ಪರಸ್ಪರ ಗೌರವ ಆದರಗಳ ಚಹಾರಾಧನೆ ಇಂದು ಅತ್ಯವಶ್ಯಕವಾಗಿದೆ.

ʼಹಳ್ಳಿಯ ಚಹಾ ಹೋಟೇಲುಗಳು ಹಳ್ಳಿಗರ ಬದುಕಿನಲ್ಲಿ ಆಧುನಿಕತೆಯ ಗಾಳಿ ಬೀಸುವುದರೊಂದಿಗೆ


ಬಹುಮುಖಿ ಸಾಮಾಜಿಕ ಸ್ತರಗಳ ಎಲ್ಲಾ ಸಮುದಾಯಗಳ , ವಯದ ಅಂತರವಿರದೆ ಒಂದೇ ಕಡೆ
ಕೂಡುವಂತೆ ಮಾಡಿವೆ . ಮನರಂಜನೆ ಹಾಗೂ ಸಾರ್ವಜನಿಕ ಸುದ್ದಿಗಳ ತಾಣವಾಗಿವೆ.

ಶಬ್ಧಾರ್ಥ :

Download: KannadaPDF.com https://KannadaPdf.com/


08. ಹಳ್ಳಿಯ ಚಹಾ ಹೋಟೇಲುಗಳು ನೋಟ್ಸ್ - KannadaPdf.com
ಫಳಾರ – ತಿಂಡಿ; ಮಾಣಿ – ಹೋಟೇಲಲ್ಲಿ ತಿಂಡಿ ತಿನಿಸುಗಳು, ಚಹಾ ಕೊಡುವ ಹುಡುಗ; ಹಚ್ರಿ –
ಖಾತೆಯಲ್ಲಿ ಬರೆಯುವುದು; ತರುಬಿ – ನಿಲ್ಲಿಸಿ; ಫರಸಿ – ಕಲ್ಲುಹಾಸು.

ಅ ) ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )


1. ಮೂರು ಕಾಲಿನ ಕುರ್ಚಿ ಎಲ್ಲಿದೆ ?

ಮೂರು ಕಾಲಿನ ಕುರ್ಚಿ ಹಳ್ಳಿಯ ಚಹಾ ಹೋಟೆಲುಗಳಲ್ಲಿವೆ .

2 .ಎತ್ತುಗಳು ಗಕ್ಕೆಂದು ಎಲ್ಲಿ ನಿಲ್ಲುತ್ತವೆ ?

ಎತ್ತುಗಳು ಗಕ್ಕೆಂದು ಹಳ್ಳಿಯ ಚಹಾ ಹೋಟೆಲ್ಲುಗಳ ಮುಂದೆ ನಿಲ್ಲುತ್ತವೆ .

3. ಕಲ್ಲಪ್ಪನವರ ಗೂಢ ಪ್ರಶ್ನೆ ಯಾವುದು ?

ಶಿವಶರಣಪ್ಪನಿಗೆ ಅಷ್ಟು ಸುಂದರ ಹೆಂಡತಿ ಯಾಕಿರಬೇಕು ? ಎಂದು ರಸಿಕ ಶಿಖಾಮಣಿ ಶ್ರೀಮಂತ ಕಲ್ಲಪ್ಪನವರ
ಗೂಢ ಪ್ರಶ್ನೆ .

4. ಬಾಯಿ ಚಪಲ ಯಾರಿಗೆ ಜಾಸ್ತಿ ಇರುತ್ತದೆ ?

ವೃದ್ಧರಿಗೆ ಬಾಯಿ ಚಪಲ ಜಾಸ್ತಿ ಇರುತ್ತದೆ .

5. ಕಲಿಯುಗದ ಅಮೃತ ಯಾವುದು ?

ಹಳ್ಳಿಯ ಚಹಾ ಹೋಟೆಲುಗಳಲ್ಲಿನ ಚಹಾ , ಕಲಿಯುಗದ ಅಮೃತವಾಗಿದೆ .

6. ಲೇಖಕರ ದೃಷ್ಟಿಯಲ್ಲಿ ಹಳ್ಳಿಯ ಚಹಾದ ಅಂಗಡಿ ಹೇಗೆ ?

ಲೇಖಕರ ದೃಷ್ಟಿಯಲ್ಲಿ ಹಳ್ಳಿಯ ಚಹಾದ ಅಂಗಡಿಗಳು ಇಲಾಖೆಯಿದ್ದಂತೆ ”

7. ಯಾರ ಬಗ್ಗೆ ಮೂಕರ್ಜಿಯ ದೂರನ್ನು ಹಳ್ಳಿಗರು ಕೊಡುತ್ತಾರೆ ?

ಬಿಸಿಯೂಟ ಬಂದ ಮೇಲೆ ಹೆಡ್‌ಮಾಸ್ತರರರು ಬಹಳ ಹಣಗಳಿಸಿದ್ದಾರೆಂದು ಅವರ ಬಗ್ಗೆ ಮೂಕರ್ಜಿಯೊಂದನ್ನು


ಹಳ್ಳಿಗರು ಕೊಡುತ್ತಾರೆ .

Download: KannadaPDF.com https://KannadaPdf.com/


08. ಹಳ್ಳಿಯ ಚಹಾ ಹೋಟೇಲುಗಳು ನೋಟ್ಸ್ - KannadaPdf.com

8. ಲೋಕಲ್ ಸುದ್ದಿಗಳಿಗೆ ಎಲ್ಲಿ ಪ್ರಾಶಸ್ತ್ರವಿದೆ ?

ಹಳ್ಳಿಯ ಚಹಾ ಹೋಟೆಲ್‌ಗಳಲ್ಲಿ ಲೋಕಲ್ ಸುದ್ದಿಗಳಿಗೆ ಪ್ರಾಶಸ್ತ್ರವಿದೆ .

9. ಲೇಖಕರು ಹೇಳುವ ಹಳ್ಳಿ ಹೋಟೇಲಿನ ಹೆಸರೇನು ?

ಲೇಖಕರು ಹೇಳುವ ಹಳ್ಳಿಯ ಹೋಟೇಲಿನ ಹೆಸರು “ ಹಳ್ಳಿಯ ಪಾರ್ಲಿಮೆಂಟ್ ”

10. ಯಾವುದಕ್ಕೆ ಭೇಟಿ ಕೊಡಬೇಕೆಂದು ಲೇಖಕರು ಹೇಳುತ್ತಾರೆ ?

ಒಮ್ಮೆ ಹಳ್ಳಿಯ ಚಹಾ ಹೋಟೆಲುಗಳಿಗೆ ಭೇಟಿ ಕೊಡಬೇಕೆಂದು ಲೇಖಕರು ಹೇಳುತ್ತಾರೆ .

ಆ ) ಎರಡು- ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕಗಳ ಪ್ರಶ್ನೆಗಳು )


1. ಹಳ್ಳಿಯ ಚಹಾದ ಅಂಗಡಿಯೆಂದರೆ ಹೇಗಿರುತ್ತದೆ ?

ಕುಬ್ಬಸ ತೊಟ್ಟ ಚೆಲುವೆಯಂತೆ ” ನೋಡಲು ಅಂದವಿರದಿದ್ದರೂ ಸ್ವರ್ಗ ಸುಖ , ತೃಪ್ತಿ ಹಳ್ಳಿಯ ಚಹಾದ
ಅಂಗಡಿ ಎಂದರೆ , ಇಳಕಲ್ಲ ಸೀರೆ ಉಟ್ಟು , ಗುಳೇದಗುಡ್ಡದ ಕೊಡುತ್ತವೆ . ಮುರುಕು ಬೆಂಚು
ಕುರ್ಚಿಗಳಿದ್ದರೂ ಪ್ರೀತಿಯ ಆಹ್ವಾನ , ಉಪ ಇಲ್ಲಿದೆ .

2. ರೋಗಿಗಳ ಹಾಗೂ ಪಥ್ಯ ಮಾಡುವವರ ಜಿದ್ದು ಎಂತಹುದು ?

ಮನೆಯಲ್ಲಿ ಪಥ್ಯ ಎಂದು ಕರೆದ ತಿಂಡಿಗಳನ್ನು ಕೊಡದಿದ್ದಾಗ ಅಂಥಹವರು ಕರಿದ ಪದಾರ್ಥಗಳನ್ನು


ಜಡಿಯುವ ಇವರ ಜಡ್ಡೆಂದೂ ನೆಟ್ಟಗಾಗದು . ಹಾಗೂ ಸಾಯುತ್ತೇವೆ . ಹೀಗೂ ಸಾಯುತ್ತೇವೆ . ಕರಿದಿದ್ದನ್ನು
ತಿಂದು ಸಾಯುತ್ತೇವೆ ಎನ್ನುವ ಜಿದ್ದು ಇವರದು .

3. ಭಾವೈಕ್ಯತೆ ಈ ದೇಶದಲ್ಲಿ ಎಲ್ಲಿದೆ ?

ಭಾವೈಕ್ಯತೆ ಎಂಬುದು ನಮ್ಮ ದೇಶದಲ್ಲಿ ಇರುವುದಾದರೆ ನಮ್ಮ ಹಳ್ಳಿಯ ಚಹಾಫಳಹಾರದ


ಹೊಟೇಲ್‌ಗಳಲ್ಲಿ ಮಾತ್ರ .

4. ಪಟ್ಟಣದ ಹೋಟೇಲಿನ ಕಟ್ಟಡ ಹೇಗಿದೆ ?

– ಮಾನವನನ್ನು ಆಕರ್ಷಿಸುವ ಕಟ್ಟಡಗಳು ಪಟ್ಟಣದ ಹೊಟೇಲಿನ ಕಟ್ಟಡಗಳಾಗಿವೆ . ಕಾಲು ಜಾರುವ


ನಯವಾದ ಫಾರಸಿಯ ನೆಲ , ಕೂತರೆ ಮಾಸಿ ಹೋಗಬಹುದೆನ್ನುವ ಕುರ್ಚಿ , ತಂಪಾದ ಫ್ಯಾನಿನ ಗಾಳಿ ,

Download: KannadaPDF.com https://KannadaPdf.com/


08. ಹಳ್ಳಿಯ ಚಹಾ ಹೋಟೇಲುಗಳು ನೋಟ್ಸ್ - KannadaPdf.com
ಡೆಕೋಲಮ್‌ಗಳಿಂದ ಅಲಂಕೃತವಾದ ಟೇಬಲ್ಲುಗಳು , ನೀರು ತುಂಬಿದ ಗ್ಲಾಸ್‌ಗಳಿಂದ ಶೋಭಿಸುತ್ತಿರುತ್ತವೆ
.

5. ಸುದ್ಧಿಯ ಸೂರಪ್ಪ ಗೊಂಬೆಯನ್ನು ಹೇಗೆ ವರ್ಣಿಸುತ್ತಾನೆ ?

“ ಏನ್ ಹೆಣ್ಣಪ್ಪಾ ಅದು , ಕೈ ತೊಳೆದು ಮುಟ್ಟಬೇಕು ಅದನ್ನು ” ಎಂದು ಸುದ್ದಿಯನ್ನು ಹನುಮಾನ್ ಭಕ್ತ
ಭರಮಣ್ಣ ತಾನು ಪಟ್ಟಣಕ್ಕೆ ಹೋದಾಗ ಶೋರಂನ ಎದುರಿಗೆ ನಿಲ್ಲಿಸಿದ ಹೆಣ್ಣು ಗೊಂಬೆಯನ್ನು ನೋಡಿ
ಹೇಳಿದ ಮಾತನ್ನು ಸುದ್ದಿ ಸೂರಪ್ಪ ಮತ್ತಷ್ಟು ಸೊಗಸಾಗಿ ವರ್ಣಿಸುತ್ತಾನೆ .

6. ಗಿಡ್ಡ ಮಾಸ್ತರು ಶಾಲೆಯಲ್ಲಿ ಹುಡುಗರಿಗೆ ಏಕೆ ಹೊಡೆಯುತ್ತಾರೆ ?

ಗಿಡ್ಡ ಮಾಸ್ತರರು ಶಾಲೆಯಲ್ಲಿ ಹುಡುಗರಿಗೆ ಬಹಳ ಹೊಡೆಯುತ್ತಾರಂತೆ ಏಕೆಂದರೆ ಮನೆಯಲ್ಲಿ ಅವರ


ಹೆಂಡತಿಯರು ಕೂಡ ಬಹಳ ಜಾಸ್ತಿಯೆಂಬುದೇ ಕಾರಣ .

7. ಹಳ್ಳಿಗರ ಆಕ್ಷೇಪದ ವಿಷಯ ಯಾವುದು ?

ಪಟ್ಟಣಗಳಲ್ಲಿ ಈ ಗಂಡು ಹೆಣ್ಣುಗಳಾಗುತ್ತಿವೆಂದು , ಹೆಣ್ಣು ಗಂಡುಗಳಾಗುತ್ತಿವೆ ಎಂಬುದು ಹಳ್ಳಿಗರ ಆಕ್ಷೇಪದ


ವಿಷಯವಾಗಿದೆ .

ಇ ) ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕಗಳ ಪ್ರಶ್ನೆಗಳು )


1. ಹಳ್ಳಿಗರು ಹೊತ್ತನ್ನು ಹೇಗೆ ಕಳೆಯುತ್ತಾರೆ ? ವಿವರಿಸಿ .

– ಹಳ್ಳಿಗರು ತಮ್ಮ ಹೆಚ್ಚಿನ ಸಮಯವನ್ನು ಈ ಹಳ್ಳಿಯ ಚಹಾದಂಗಡಿಯಲ್ಲಿಯೇ ಕಳೆಯುತ್ತಾರೆ . ವಾರ್ತಾ


ಇಲಾಖೆಯಂತೆ ಇಲ್ಲಿ ಎಲ್ಲಾ ರೀತಿಯ ಸುದ್ದಿಗಳು ಬಿತ್ತರಗೊಳ್ಳುತ್ತದೆ . ಊರಿನ ಲೋಕಲ್ ವಿಷಯವೆಲ್ಲಾ
ಚರ್ಚೆಗೊಳ್ಳುವುದು ಇದೇ ಹೊಟೇಲ್‌ಗಳಲ್ಲಿ ದೇಶ ವಿದೇಶಗಳ ಸುದ್ದಿಗೂ ಇಲ್ಲಿ ಪ್ರಾಶಸ್ಯವುಂಟು . ಆದರೆ
ಲೋಕಲ್ ಸುದ್ದಿಗಳಿಗಿರುವ ಮಹತ್ವ ಹೊರಗಿನ ಸುದ್ದಿಗಳಿಗಿರುವುದಿಲ್ಲ . ಪಟ್ಟಣದ ಸುದ್ದಿಗಳು ಕೂಡ ಇಲ್ಲಿ
ಒಬ್ಬರ ಮೇಲೊಬ್ಬರು ಹೇಳಿದ ವರ್ಣನೆಗಳನ್ನು ಸವಿಯುತ್ತಾ ಆನಂದಿಸುತ್ತಾರೆ . ಹಳ್ಳಿಯ ಎಲ್ಲಾ ಸುದ್ದಿ ,
ಮನೆ ಮನೆಯ ಸುದ್ದಿಯೂ ಇಲ್ಲಿ ಚರ್ಚೆಗೆ ಒಳಪಟ್ಟು ಈ ಚಹಾ ಹೋಟಲಿನಲ್ಲಿಯೇ ಹೊತ್ತು ಕಳೆಯುತ್ತಾರೆ .

2. ಪಟ್ಟಣದ ಚಹಾದಂಗಡಿಗಳು ಹೇಗಿರುತ್ತವೆ ?

ಪಟ್ಟಣದ ಚಹಾದಂಗಡಿಗಳು ನಯಾ ನಾಜೂಕಿಯ ಥಳುಕು ಬಳಕಿನಂತಿರುತ್ತದೆ . ಮನವನ್ನಾಕರ್ಷಿಸುವ


ಭವ್ಯ ಕಟ್ಟಡಗಳು , ನಡೆದರೆ ಕಾಲು ಜಾರುವ ನಯವಾದ ಪಾರಸಿಯ ನೆಲ , ಕೂತರೆ
ಮಾಸಿಹೋದೀತೆನ್ನುವ ಕುರ್ಚಿ , ತಂಪಾದ ಫ್ಯಾನಿನ ಗಾಳಿ , ಕೋಲಮ್‌ನಿಂದ ಅಲಂಕೃತವಾದ ಟೇಬಲ್ಲೂ
, ಟೇಬಲ್ ಮೇಲೆ ನೀರು ತುಂಬಿದ ಗ್ಲಾಸುಗಳು ಇರುತ್ತವೆ . ಇನ್ನು ಇಲ್ಲಿಯ ತಿಂಡಿಗಳು ತಾಜಾ ಯಾವುದು
, ಹಳಸಿದ್ದು ಯಾವುದು , ಹಸಿ – ಬಿಸಿಗಳು ಒಂದೂ ತಿಳೆಯದು .

3. ಹಳ್ಳಿ ಮತ್ತು ಪಟ್ಟಣ ಹೋಟೇಲುಗಳ ಮಾಣಿಯ ಕುರಿತು ಬರೆಯಿರಿ .

Download: KannadaPDF.com https://KannadaPdf.com/


08. ಹಳ್ಳಿಯ ಚಹಾ ಹೋಟೇಲುಗಳು ನೋಟ್ಸ್ - KannadaPdf.com
ಹಳ್ಳಿಯ ಮಾಣಿ , ನಮ್ಮ ಬೇಕು ಬೇಡಗಳನ್ನು ಅರಿತು , ಒಂದು ಕೈಯಿಂದ ಸಾಗು ತಂದಿಡುತ್ತಾನೆ .
ಬೆವರನ್ನು ಒರೆಸಿಕೊಳ್ಳುತ್ತಾ ಇನ್ನೊಂದು ಕೈಯಿಂದ ಪೂರಿ – ಹೆಂಡತಿಗಿಂತ ಹೆಚ್ಚಿನ ಉಪಚಾರ ಈ
ಮಾಣಿಯಿಂದ ದೊರೆಯುತ್ತದೆ . ಅಷ್ಟೆ ಅಲ್ಲದೆ ಅಂದಿನ ವಿಶೇಷ ತಿಂಡಿಯನ್ನು ಕಿವಿಯಲ್ಲಿ ಪ್ರೀತಿಯಿಂದ
ಹೇಳಿದಾಗ ಒಲ್ಲೆ ಎನ್ನಲು ಮನಸ್ಸೆ ಬಾರದು . ಇನ್ನು ಪಟ್ಟಣದ ಮಾಣಿ ಇದಕ್ಕೆ ತದ್ವಿರುದ್ಧ . ಈತನು ಶುಭ್ರ
ಸಮವಸ್ತ್ರವನ್ನು ಧರಿಸಿದ್ದು , ಇನ್ನೂ ತಿಂಡಿಯ ಬಗ್ಗೆ ವಿಚಾರಿಸಲು ಇರುವ ತಿಂಡಿಯ ಹೆಸರನ್ನೆಲ್ಲ ಪಟಪಟನೆ
ಒದರುತ್ತಾನೆ. ಅದರಲ್ಲಿ ಹಸಿ ಬಿಸಿಯ ಬಗ್ಗೆ ಆ ಮಾಣಿಗೂ ತಿಳಿಯದು.

4. ಹಳ್ಳಿಯ ಚಹಾದಂಗಡಿಯನ್ನು ಪರಿಚಯಿಸಿ .

ಹಳ್ಳಿಯ ಚಹಾದಂಗಡಿಗಳು ಮುರುಕು ಚಪ್ಪರದ ಕೆಳಗೆ ಇದ್ದು ಮುರುಕಲು ಕುರ್ಚಿ , ಮುರುಕಲು


ಬೆಂಚುಗಳನ್ನು ಹೊಂದಿರುತ್ತವೆ . ಆದರೆ ಇಲ್ಲಿನ ಚಹಾ ಅಮೃತಕ್ಕೆ ಸಮನಾಗಿರುತ್ತದೆ . ಗಟ್ಟಿ ಹಾಲಿನಲ್ಲಿ
ಘಮಘಮಿಸುವ ಚಹ , ಹಾಗೂ ಅದನ್ನು ಕೊಡುವ – ಆತ್ಮೀಯತೆ ಹಳ್ಳಿಯ ಚಹಾ ಅಂಗಡಿಯಲ್ಲಿ
ಕಾಣುತ್ತೇವೆ . ಹಳ್ಳಿಯ ಚಹಾ ಹೋಟೇಲುಗಳು ಹಳ್ಳಿಯ ಹೆಣ್ಣು ಇಳಕಲ್ಲ ಸೀರೆ ಉಟ್ಟು , ಗುಳೇದಗುಡ್ಡದ
ಕುಬ್ಬಸ ತೊಟ್ಟ ಚೆಲುವೆಯಂತೆ , ನೋಡಲು ಅಂದವಿಲ್ಲದಿದ್ದರೂ ಅಲ್ಲಿ ಸ್ವರ್ಗ ಸುಖ ಸಂತೋಷ ತೃಪ್ತಿ ಇದೆ .

5. ಹಳ್ಳಿಯ ಹೊಟೇಲುಗಳಲ್ಲಿ ಬಂದ ನವೀನತೆಯನ್ನು ಕುರಿತು ಬರೆಯಿರಿ .

ಇಂದು ಹಳ್ಳಿಯ ಹೊಟೇಲುಗಳಲ್ಲಿ ನವೀನತೆಯನ್ನು ಕಾಣಬಹುದಾಗಿದೆ . ಒಂದೆಡೆ ದೇವರ


ಚಿತ್ರಪಟಗಳಾದರೆ , ಮತ್ತೊಂದೆಡೆ ಐಶ್ವರ್ಯರೈ , ಹೇಮಮಾಲಿನಿ ಹಾಗೂ ಧರ್ಮೇಂದ್ರರ
ಕ್ಯಾಲೆಂಡರುಗಳನ್ನು ನೇತು ಹಾಕಿರುತ್ತಾರೆ , ಇಂದು ಟಿ.ವಿ. ರೇಡಿಯೋ , ಸ್ಟೀರಿಯೋ , ಟೇಪ್
ರೆಕಾರ್ಡ್‌ಗಳಿಂದ ಹಿಡಿದು ಎಫ್.ಎಂ ರೇಡಿಯೋ ಶೋತೃಗಳನ್ನು ಮನತಣಿಸುತ್ತಿವೆ . ರಾಮಾಯಣ –
ಮಹಾಭಾರತ ಸೀರಿಯಲ್ ಬರುವಾಗಲಂತೂ ಟಿ.ವಿ.ಗೆ ಪೂಜೆ ಸಲ್ಲಿಸಿ ಧಾರಾವಾಹಿಗಳನ್ನು ಬಹಳ ಭಯ
ಭಕ್ತಿಯಿಂದ ನೋಡಿದ್ದುಂಟು . ಹೀಗೆ ಇಂದು ನವೀನತೆಯ ಗಾಳಿ , ಹಳ್ಳಿಯ ಚಹಾ ಫಳಾರದ ಅಂಗಡಿಗಳಲ್ಲಿ
ಬೀಸಿದೆ .

ಈ ) ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :


1, “ ನನ್ನ ದೃಷ್ಟಿಯಲ್ಲಿ ವಾರ್ತಾ ಇಲಾಖೆ ಇದ್ದಂತೆ . ”

ಪ್ರೊ . ವೀರೇಂದ್ರ ಸಿಂಪಿಯವರು ತಮ್ಮ ‘ ಹಳ್ಳಿಯ ಚಹಾ ಹೊಟೇಲುಗಳು ‘ ಎಂಬ ಲಲಿತಪ್ರಬಂಧದಲ್ಲಿ


ಹಳ್ಳಿಯ ಹೊಟೇಲುಗಳನ್ನು ವಾರ್ತಾ ಇಲಾಖೆಗೆ ಹೋಲಿಸಿ ದ್ದಾರೆ . ಹಳ್ಳಿಯ ಚಹಾ ಹೊಟೇಲುಗಳೆಂದರೆ
ಸುದ್ದಿಯ ತಾಣ . ಯಾರ ಮನೆಯ ಹಸು ಕರುಹಾಕಿತು , ಯಾರ ಎಮ್ಮೆ ಸತ್ತಿತ್ತು . ಯಾರ ಹೆಂಡತಿ
ಸುಂದರಿ , ಯಾರು ಭ್ರಷ್ಟ , ಯಾರ ಮಗ ಪೋಲಿ – ಇತ್ಯಾದಿ ಇತ್ಯಾದಿ ಸಂಗತಿಗಳೆಲ್ಲವೂ ಅಲ್ಲಿ
ಹರಡುತ್ತಿರುತ್ತವೆ . ಇಲ್ಲಿ ಬರುವವರಿಗೆ ತಮ್ಮ ತಮ್ಮ ಮನೆಗಳ ಸ್ವಂತ ವಿಚಾರಗಳು ತಿಳಿದಿರದಿದ್ದರೂ
ಊರಿನ ಮೂಲೆ ಮೂಲೆಗಳ ವಿಚಾರವೂ ತಿಳಿದಿರುತ್ತದೆ . ಆದ್ದರಿಂದ ಲೇಖಕರು ಹಳ್ಳಿಯ ಚಹಾ
ಹೊಟೇಲುಗಳನ್ನು ವಾರ್ತಾ ಇಲಾಖೆಗೆ ಹೋಲಿಸಿರುವುದು ಸರಿಯಾಗಿದೆ .

2. “ ಇಂದು ಸ್ಪೆಶಲ್ ಅವಲಕ್ಕಿ ಸೂಸಲ ಮಾಡಿದ್ದೇನೆ . ”

Download: KannadaPDF.com https://KannadaPdf.com/


08. ಹಳ್ಳಿಯ ಚಹಾ ಹೋಟೇಲುಗಳು ನೋಟ್ಸ್ - KannadaPdf.com
ಪ್ರೊ . ವೀರೇಂದ್ರ ಸಿಂಪಿಯವರ ‘ ಹಳ್ಳಿಯ ಚಹಾ ಹೊಟೇಲು’ಗಳೆಂಬ ಲಲಿತ ಪ್ರಬಂಧದಿಂದ ಈ
ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಹಳ್ಳಿಯ ಚಹಾ ಹೊಟೇಲಿನ ಮಾಣಿಗಳು ಗ್ರಾಹಕರನ್ನು ಆದರಿಸಿ ಆತಿಥ್ಯ
ನೀಡವ ಬಗೆಯನ್ನು ವಿವರಿಸುತ್ತಾ ಲೇಖಕರು ಈ ಮೇಲಿನ ಮಾತನ್ನು ಹೇಳಿದ್ದಾರೆ .ಪೂರಿ ತಿಂದು ಪ್ಲೇಟನ್ನು
ಪಕ್ಕಕ್ಕೆ ಸರಿಸುವಷ್ಟರಲ್ಲಿ ಮಾಣಿ “ ಇಂದು ಸ್ಪೆಶಲ್ ಅವಲಕ್ಕಿ ಉಸಲಿ ಮಾಡಿದ್ದೇನೆ . ” ಎಂದು ಮತ್ತೊಂದು
ಪ್ಲೇಟನ್ನು ಪಕ್ಕದಲ್ಲಿ ತಂದಿರಿಸುತ್ತಾನೆ . ಈ ರೀತಿಯ ಉಪಚಾರವನ್ನು ಯಾವ ಹೆಂಡತಿಯೂ ತನ್ನ
ಗಂಡನಿಗೆ ಮಾಡಿರಲಾರ ಳೆಂದು ಲೇಖಕರು ಹಳ್ಳಿ ಹೊಟೇಲಿನ ಮಾಣಿಗಳನ್ನು ಕೊಂಡಾಡಿದ್ದಾರೆ .

3. “ ಅನಕ್ಷರಸ್ಥರ ಪಾರ್ಲಿಮೆಂಟು . ”

ಪ್ರೊ . ವೀರೇಂದ್ರ ಸಿಂಪಿಯವರು ಬರೆದಿರುವ ‘ ಹಳ್ಳಿಯ ಚಹಾ ಹೊಟೇಲುಗಳು ‘ ಎಂಬ ಲಲಿತಪ್ರಬಂಧದಲ್ಲಿ


ಈ ಮೇಲಿನ ವಾಕ್ಯವನ್ನು ಗಮನಿಸಬಹುದಾಗಿದೆ . ಹಳ್ಳಿಯ ಚಹಾ ಹೊಟೇಲುಗಳೆಂದರೆ ಅದೊಂದು
ಸಾರ್ವಜನಿಕರ ಕೂಟವೆಂದು ವರ್ಣಿಸಿರುವ ಲೇಖಕರು ಎಲ್ಲ ಬಗೆಯ , ಎಲ್ಲ ವರ್ಗದ , ಎಲ್ಲ ಚೌಕಿಯ
ಜನರೂ ಕೂಡುವ ಸ್ಥಳವಿದೆಂದು ಹೇಳಿ ಯಾರಾರಿಗೆ ಯಾವ ಯಾವ ರೀತಿ ಚಹಾ ಹೊಟೇಲು ಕಂಡಿದೆ
ಎಂಬುದನ್ನು ವಿವರಿಸುವಾಗ ಲೇಖಕರು ಅನಕ್ಷರಸ್ಥರ ಪಾಲಿಗೆ ಇದು ಪಾರ್ಲಿಮೆಂಟುಗಳಿದ್ದಂತೆ ಎಂದಿದ್ದಾರೆ
. ಎಲ್ಲ ವಿಚಾರಗಳನ್ನೂ ಅಲ್ಲಿ ಚರ್ಚಿಸುವುದರಿಂದ ಅದನ್ನು ಪಾರ್ಲಿಮೆಂಟಿಗೆ ಲೇಖಕರು ಹೋಲಿಸಿದ್ದಾರೆ .

4. “ ಅದು ಯಾವ ಶಸ್ತ್ರಕ್ಕೂ ಮಣಿಯದು . ”

ಪ್ರೊ . ವಿರೇಂದ್ರ ಸಿಂಪಿಯವರು ಬರೆದಿರುವ ‘ ಹಳ್ಳಿಯ ಚಹಾ ಹೊಟೇಲುಗಳು ಎಂಬ ಲಲಿತಪ್ರಬಂಧದಿಂದ


ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಪಟ್ಟಣದ ಹೊಟೇಲುಗಳ ಬಗ್ಗೆ ವಿವರಿಸುವಾಗ ಲೇಖಕರು
ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ . ಪಟ್ಟಣದ ಹೊಟೇಲಿನ ತಿಂಡಿಗಳು ತಾಜಾತನದಿಂದ
ಕೂಡಿರುವುದಿಲ್ಲ . ಅದು ಯಾವಾಗ ತಯಾರಾಗಿದೆಯೆಂಬುದು ಸ್ವತಃ ಮಾಣಿಗೇ ತಿಳಿದಿರುವುದಿಲ್ಲ . ವಡೆಗೆ
ಆದೇಶಿಸಿದರೆ ತಂಗಳಾದ ವಡೆ ನಮ್ಮೆದುರಿಗೆ ಬಂದು ಕೂರುತ್ತದೆ . ಅದು ಎಷ್ಟು ಪೆಡುಸಾಗಿರುತ್ತವೆಂದರೆ
ಯಾವ ಶಸ್ತ್ರದಿಂದಲೂ ಚೂರು ಮಾಡಿ ತಿನ್ನಲಾಗದಷ್ಟು ಒರಟಾಗಿರುತ್ತವೆಂದು ಲೇಖಕರು ವಿವರಿಸಿರುವ
ಅದನ್ನು ಸಂದರ್ಭವಿದಾಗಿದೆ .

5. “ ಇಳಕಲ್ ಸೀರೆ ಉಟ್ಟ ಗುಳೇದಗುಡ್ಡ ಕುಪ್ಪಸ ತೊಟ್ಟ ಹೆಣ್ಣಿದ್ದಂತೆ . ”

ಪ್ರೊ . ವೀರೇಂದ್ರ ಸಿಂಪಿಯವರು ರಚಿಸಿರುವ ‘ ಹಳ್ಳಿಯ ಚಹಾ ಹೊಟೇಲುಗಳು ‘ ಎಂಬ


ಲಲಿತಪ್ರಬಂಧದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಪೇಟೆಯ ಮತ್ತು ಹಳ್ಳಿಯ
ಹೊಟೇಲುಗಳನ್ನು ಹೋಲಿಸುತ್ತಾ ಲೇಖಕರು ಈ ಮೇಲಿನ ಮಾತನ್ನು ಹೇಳಿದ್ದಾರೆ . ಪೇಟೆಯ
ಹೊಟೇಲುಗಳು ನೋಡಲು ಅಂದ ಚೆಂದವಾಗಿ ಕಾಣುತ್ತವೆ . ಆದರೆ ಅಲ್ಲಿನ ತಿಂಡಿಗಳಲ್ಲಿ ರುಚಿಯ
ಸೊಗಸಿರುವುದಿಲ್ಲ . ಆದ್ದರಿಂದ ಅವು ನಾಜೂಕಾದ ಹೆಣ್ಣಿದ್ದಂತೆ , ಆದರೆ ಹಳ್ಳಿಯ ಹೊಟೇಲುಗಳ ಗುಳೇದ
ಗುಡ್ಡದ ಕುಸುಬು ತೊಟ್ಟ ಹೆಣ್ಣಿದ್ದಂತೆ , ನೋಡಲು ಚೆನ್ನಾಗಿಲ್ಲದಿದ್ದರೂ ಸುಖ ಹೆಚ್ಚು ಎಂದು ಹೋಲಿಕೆ ಮಾಡಿ
ಹೇಳಿದ್ದಾರೆ .

Download: KannadaPDF.com https://KannadaPdf.com/

You might also like