You are on page 1of 28

*ದಾಸ ವರ್ಗ ..ಕರುಣಾಸಂಧಿಯ ಪ್ರಶ್ನೆ ಉತ್ತರಗಳು..

ವಿಜಯನಗರ ಶಾಖೆ*

*ಕರುಣಾ ಸಂಧಿಯ ೧ ನೇ ನುಡಿಯ ಪ್ರಶ್ನೆ ಉತ್ತರಗಳು*

1. ಹರಿಕಥೆ ಕೇಳಿದರೂ ದುಃಖ


ಹೋಗಿಲ್ಲ ಎನ್ನುವವರೆಗೆ ದಾಸರು ಹೇಳಿದ ಮಾತುಗಳು ಯಾವುವು?
*ನಿತ್ಯ ಕೇಳಬೇಕು..ಲಕ್ಷ್ಯಗೊಟ್ಟು ಕೇಳಬೇಕು..ಬಲವಂತವಾಗಿ ಕೇಳದೆ ಉತ್ಸಾಹದಿಂದ ಕೇಳಬೇಕು*

2. ಭೂಸುರರು ಎಂದರೆ ಯಾರು?


*ಬ್ರಾಹ್ಮಣರು*

3. ಭುವನ ಪಾವನ ಕಥೆ ಯಾವುದು?


*ಪವನಾವತಾರಿ ಶ್ರೀ ಮಧ್ವಾಚಾರ್ಯರು ಹೇಳಿದ ಕಥೆ*

4. "ಕಿವಿಗೊಟ್ಟಾಲಿಪುದು"_ಈ ಪದ್ಯ ಯಾವುದರ ವ್ಯಾಖ್ಯನವಾಗಿದೆ?


*ಅನುವ್ಯಾಖ್ಯಾನ*

5. ಹರಿ ಕಥಾಕ್ಕೆ ಇರುವ ಮುಖ್ಯ ಫಲಗಳೆಷ್ಟು?


*ನಾಲ್ಕು*

6.ನಮ್ಮ ಪಾಲಿನ ದೇವತೆಗಳೆಂದರೆ ಯಾರು?


*ಭೂಮಿಯಲ್ಲಿರುವ ಯೋಗ್ಯ ಬ್ರಾಹ್ಮಣರು*

7. ಈ ನುಡಿಯ ಪೂರ್ವಭಾಗ ಯಾವುದರ ವ್ಯಾಖ್ಯಾನವಾಗಿದೆ?


*ಶ್ರೀಮದ್ಭಾಗವತದ ವ್ಯಾಖ್ಯಾನ*

8. ನಮ್ಮ ಯಾವುದೇ ಕ್ರಿಯೆಯು ಯಾವ ಮತ ಸಮ್ಮತವಾಗಬೇಕು?


*ಪವನ ಮತ*

9. ಯಾರ ಶ್ರವಣವು ಮನಸ್ಸಿಗೆ ಆನಂದವನ್ನು ಕೊಡುತ್ತದೆ?


*ಪರಮ ಪವಿತ್ರನಾದ ಲಕ್ಷ್ಮೀ ರಮಣನ ಕಥೆಯ*

10. ಭವಜನಿತ ದುಃಖಗಳನ್ನು ಕಳೆಯುವುದು ಯಾವುದು?


*ಸರ್ವೋತ್ತಮನಾದ ಶ್ರೀಹರಿಯ ಕಥೆ*

11. ಇಹ ಮತ್ತು ಪರದಲ್ಲಿ ಭೋಗವನ್ನಿತ್ತು ಸಲಹುವುದು ಯಾವುದು?


*ಲಕುಮಿಧವನ ಮಂಗಳ ಕಥೆ*

12. ಲಕ್ಷ್ಮೀಧವನ ಮಂಗಳ ಚರಿತ್ರೆಯನ್ನು ಹೇಗೆ ಕೇಳಬೇಕು?


*ಪರಮ ಉತ್ಸಾಹ ದಿಂದ ನಿತ್ಯದಲ್ಲಿಯೂ ಲಕ್ಷ್ಯ ಗೊಟ್ಟು*

13.ಈ ಪದ್ಯವನ್ನು ವ್ಯಾಖ್ಯಾನಕಾರರು ಏನೆಂದು ಕರೆದಿದ್ದಾರೆ?


*ಸಂಧಿಸೂಚಕ ಪದ್ಯ*

14. ದಾಸರು "ಲಕುಮಿಧವನ ಮಂಗಳ ಕಥೆ" ಎನ್ನಲು ಕಾರಣವೇನು?


*ಸಾಮಾನ್ಯ ಭಕ್ತರು ಹಣ ಮುಂತಾದ ಲಾಭವಿಲ್ಲದಿದ್ದರೆ ಯಾವುದೇ ಕಾರ್ಯದಲ್ಲಿ ಪ್ರವೃತ್ತನಾಗಲಾರ. ಅಂಥವರನ್ನು
ಸೆಳೆಯಲು ಸಂಪತ್ತು ಮತ್ತು ಜ್ಞಾನ ಎರಡಕ್ಕೂ ಅಭಿಮಾನಿಯದ ಲಕ್ಷ್ಮೀ ಪತಿಯ ಮಂಗಳ ಕಥೆ ಎಂದಿದ್ದಾರೆ*
15. ಶ್ರೀಮದಾಚಾರ್ಯರು ಹೇಳಿದ ಕಥೆಯು______ ಕಥೆಯಾಗಿದೆ.

💠💠💠💠💠💠💠💠💠💠💠💠
*ಭುವನ ಪಾವನ*

*ಕರುಣಾ ಸಂಧಿ ೨ ನೇ ನುಡಿಯ ಪ್ರಶ್ನೆ ಉತ್ತರಗಳು*

1. " ಮಳೆಯ ನೀರೊಣಿಯೊಳು"_ ಈ ನುಡಿ ಯಾವ ವ್ಯಾಖ್ಯಾನದಂತಿದೆ?


*ತತ್ವಪ್ರಕಾಶಿಕಾ ಮಂಗಳಾಚರಣೆಯ*

2. ಗಂಗೆಗೆ ಬಾಂಬೊಳೆ ಎಂದು ಕರೆಯಲು ಕಾರಣವೇನು?


*ಬಾನಿನಿಂದ ಬಂದ ಹೊಳೆಯಾದ್ದರಿಂದ*

3. ತ್ರಿವಿಕ್ರಮ ರೂಪಿ ಹರಿ ಗಂಗಾಜನಕ ಹೇಗೆ?


*ತ್ರಿವಿಕ್ರಮ ರೂಪಿ ಶ್ರೀಹರಿಯ ಪಾದದಿಂದ ಬಂದದ್ದರಿಂದ*

4. ಪ್ರಾಕೃತ ಭಾಷೆಯನ್ನು ಎಲ್ಲಿ


ನಿಷೇಧಿಸಲಾಗಿದೆ?
*ಯಜ್ಞ ಹಾಗೂ ಪೂಜೆಯಲ್ಲಿ*

5. ಜನರು ಮಳೆಯ ನೀರನ್ನು ಯಾವಾಗ ಉಪಯೋಗಿಸುತ್ತಾರೆ? ಯಾವಾಗ ಉಪಯೋಗಿಸುವುದಿಲ್ಲ?


*ನದಿಯನ್ನು ಸೇರಿದಾಗ ಉಪಯೋಗಿಸುತ್ತಾರೆ..ಬೀದಿಯಲ್ಲಿ ಹರಿಯುವಾಗ ಉಪಯೋಗಿಸುವುದಿಲ್ಲ*

6. ನಮ್ಮ ಮಾತಿನಲ್ಲಿ___ ಸ್ತುತಿ ಇದ್ದರೆ ಅದು ಗಂಗಾ ನೀರು. ಇಲ್ಲದಿದ್ದರೆ___ ನೀರು.


*ಗಂಗಾಜನಕನ....ಚರಂಡಿ*

7. ಉಪಮಾನ ಉಪಮೇಯ ತಿಳಿಸಿ.


ಮಳೆಯ ನೀರು ಮತ್ತು ಪ್ರಾಕೃತ ಭಾಷೆ,
ಸಮುದ್ರ ಮತ್ತು ಹರಿಪಾದ ಮಹಿಮೆ.
..*ಉಪಮಾನ#ಮಳೆಯನೀರು..ಉಪಮೆಯ#ಪ್ರಾಕೃತ ಭಾಷೆ*
*ಉಪಮಾನ#ಸಮುದ್ರ..ಉಪಮೇಯ#ಹರಿಪಾದ ಮಹಿಮೆ*

8. ಸಂಸ್ಕೃತವಾಗಿದ್ದರೂ ದಾಸರು ಯಾವ ಕಾವ್ಯವನ್ನು ನಿಷೇಧಿಸಿದ್ದಾರೆ?


*ಹರಿಗುಣಗಾನವಿಲ್ಲದ*

9. ದಾಸರ ಭಾವದಲ್ಲಿ ನಿಜವಾದ ಬ್ರಾಹ್ಮಣರು ಯಾರು?


*ಹರಿಕಥೆಗಳನ್ನೇ ಕೇಳುತ್ತಿದ್ದರೆ ಮತ್ತು ಹೇಳುತ್ತಿದ್ದರೆ*

10. "ಮಳೆಯನೀರೋಣಿಯೊಳು" -
ಈ ನುಡಿ ಯಾವುದರ ವ್ಯಾಖ್ಯಾನದಂತಿದೆ?
ತತ್ವಪ್ರಕಾಶಿಕಾ *ಮಂಗಳಾಚರಣೆಯ*

11. ಹೆದ್ದೊರೆ ಎಂದರೇನು?


*ಹಿರಿದಾದ ತೊರೆ*

💠💠💠💠💠💠💠💠💠💠💠💠
*ಕರುಣಾ ಸಂಧಿಯ ೩ನೇ ನುಡಿಯ ಪ್ರಶ್ನೆ ಉತ್ತರಗಳು*
1. ಸಂಸ್ತುತಿ ಮಾಡುವರಲ್ಲಿ ಅತ್ಯುತ್ತಮ ಸ್ಥಾನವಿರುವುದು ಯಾರಿಗೆ?
*ಲಕ್ಷ್ಮೀ ದೇವಿಗೆ*

2. ಶೃತಿ ಎಂದರೆ ಏನು?


*ವೇದಗಳು*

3. ಲಕ್ಷ್ಮೀ ಸ್ತುತಿಗೆ ವಶನಾದ ಹರಿ ಅವಳಿಗೆ ದೇಹದಲ್ಲಿ ಯಾವ ಭಾಗ ನೀಡಿದ?


*ತನ್ನ ದೇಹದ ಅರ್ಧ ಭಾಗವನ್ನು*

4. ಶೃತಿತತಿಗಳಿಗೆ ಅಭಿಮಾನಿ ಯಾರು?


*ಲಕ್ಷ್ಮೀದೇವಿ*

5. ಯಾರ ಸ್ತುತಿಗಳಿಗೆ ಪರಮಾತ್ಮನು ಗೋಚರಿಸಲಾರನು?


*ಲಕ್ಷ್ಮೀ ದೇವಿಯ*

6. ಪರಮಾತ್ಮನು ಯಾರು ಮಾಡುವ ಸಂಸ್ತುತಿಗೆ ವಶವಾಗುತ್ತಾನೆ?


*ಪ್ರತಿನಿತ್ಯ ತನ್ನ ಪಾದಸೇವೆ ಮಾಡುವ ಮಹಾತ್ಮರ*

7. ಮಹಾತ್ಮರು ಯಾರು?
*ಪ್ರತಿನಿತ್ಯ ಶ್ರೀಹರಿಯ ಸ್ತೋತ್ರ ಮಾಡುತ್ತಾ ಅವನ ಪಾದಸೇವೆ ಮಾಡುವವರು*

8. ಮಹಾತ್ಮರು ಪರಮಾತ್ಮನಲ್ಲಿ ಮಾಡುವ ಪಾದ ಸೇವೆಗೆ ವಶನಾಗುವುದು ಆತನ ಯಾವ ಗುಣವನ್ನು ಎತ್ತಿ ತೋರಿಸುತ್ತದೆ?
*ಕಾರುಣ್ಯವನ್ನು*

9. ದೇವತೆಗಳ ಸ್ತುತಿಗೆ ವಶನಾದ ಶ್ರೀಹರಿ ಅವರಿಗೆ ಏನನ್ನು ಕೊಟ್ಟ?


*ತನ್ನ ದೇಹದ ಒಂದೊಂದು ಭಾಗವನ್ನು*

10. ಅಪೌರುಷವಾದ ವೇದಗಳು ಎಷ್ಟು?


*ಅನಂತ ವೇದಗಳು*

11). ದಾಸರು "ಲಕ್ಷ್ಮಿಗೆ ಗೋಚರಿಸದ" ಎನಲು ಕಾರಣವೇನು?


*ಲಕ್ಷ್ಮೀ ದೇವಿಯು ಸದಾ ಭಗವಂತನ ಅನಂತ ರೂಪಗಳನ್ನು ನೋಡುತ್ತಲೇ ಇರುವುದರಿಂದ ಅವಳಿಗೆ ಪ್ರತ್ಯೇಕವಾಗಿ
ಗೋಚರಿಸುವ ಪ್ರಸಕ್ತಿ ಇಲ್ಲವಾದ್ದರಿಂದ*

12. ಉಪಮಾನ: ಸಮುದ್ರ:; ಉಪಮೇಯ:_____


*ಉಪಮಾನ..ಸಮುದ್ರ # ಉಪಮೆಯ.. ಭಗವಂತನ ಅನಂತ ಗುಣಗಳು*

💠💠💠💠💠💠💠💠💠💠💠💠
*ಕರುಣಾ ಸಂಧಿಯ ೪ ನೇ ನುಡಿಯ ಪ್ರಶ್ನೆ ಉತ್ತರಗಳು*

1. ಗಂಗೆಗೆ ಜಾನ್ಹವಿ ಎಂದು ಕರೆಯಲು ಕಾರಣವೇನು?


*ಜಹ್ನು ರಾಜರ್ಷಿಯ ಕಿವಿಯಿಂದ ಬಂದಿದ್ದರಿಂದ*

2. ಗಾಂಗೇಯ ಎಂದರೆ ಯಾರು?


*ಭೀಷ್ಮರು*
3. ಗಾಂಗೇಯ ಸ್ತುತಿಸಿದ ಸ್ತೋತ್ರ ಯಾವುದು?
*ವಿಷ್ಣು ಸಹಸ್ರನಾಮ*

4. " ದಿವೌಕಸರು" ಅರ್ಥ ತಿಳಿಸಿ.


*ದಿವ..ಸ್ವರ್ಗ*
*ಓಕಸ್..ಮನೆಯಾಗಿವುಳ್ಳ*
*ಸ್ವರ್ಗವೇ ಮನೆಯಾಗಿವುಳ್ಳ ದೇವತೆಗಳು*

5. ಭಗವಂತನು ಯಾವುದಕ್ಕೆ ಅತಿ ದೂರನಾಗಿದ್ದಾನೆ?


*ಮನಸ್ಸು ಮತ್ತು ಮಾತಿಗೆ*

6. ಮನ ಎಂದರೇನು?
*ಮನಸ್ಸು*

7. ವಚನ ಎಂದರೇನು?
*ಮಾತು*

8. ಯಾರನ್ನು ಅನುಸರಿಸಿ ಪರಮಾತ್ಮನು ತಿರುಗುವನು?


*ಯಾರು ಪರಮಾತ್ಮನನ್ನು ಭಕ್ತಿಯಿಂದ ಸ್ಮರಿಸುವರೋ*

9. "ಜನರೊಳಗಿದ್ದು ಜನಿಸುವ"- ವಿವರಿಸಿ.


*ಯಾರ ಮನಸ್ಸಿಗೂ ಮಾತಿಗೂ ನಿಲುಕದ ಪರಮಾತ್ಮ ತನ್ನನ್ನು ಭಕ್ತಿಯಿಂದ ಸ್ತುತಿಸುವವರಲ್ಲಿ ಇರುತ್ತಾನೆ. ಒಂದು
ರೂಪದಿಂದ ಇಡೀ ಜಗತ್ತನ್ನು ತನ್ನ ಉದರದಲ್ಲಿ ಧರಿಸುತ್ತಾನೆ. ಹಾಗೆಯೇ ಇನ್ನೊಂದು ರೂಪದಿಂದ ಭಕ್ತರ ಉದರದಲ್ಲಿಯೂ
ಅವತರಿಸುತ್ತಾನೆ*

10. ಪರಮಾತ್ಮನು "ಜಗದುದರನು" ಹೇಗೆ?


*ಜಗತ್ತನ್ನು ತನ್ನ ಉದರದಲ್ಲಿ ಇಟ್ಟುಕೊಂಡದ್ದರಿಂದ*

11. ಗಾಂಗೇಯನಿಂದ ನುತರಾದವರು ಯಾರು?


*ಶ್ರೀಹರಿ*

12. ಗಗನಚರ ಮತ್ತು ಗಗನಚರವಾಹನ ಯಾರು?


*ಗಗನಚರ.. ಗರುಡದೇವರು*
*ಗಗನಚರವಾಹನ..ಗರುಡವಾಹನನಾದ ಶ್ರೀಹರಿ*

13. ಏನನ್ನು ಕೇಳುತ್ತಾ ಗರುಡವಾಹನನು ದಿವೌಕಸರೊಡನೆ ಕೂಡಿ ಮನೆಮನೆಗಳಲ್ಲಿ ತಿರುಗುತ್ತಾನೆ?


*ತನ್ನ ಭಕ್ತರು ಮಾಡುವ ಸ್ತೋತ್ರಗಳನ್ನು ಕೇಳುತ್ತಾ*

14. ಮನ ಮತ್ತು ವಚನಕ್ಕೆ ಅಭಿಮಾನಿ ದೇವತೆಗಳು ಯಾರು?


*ಮನೋಭಿಮಾನಿ..ರುದ್ರದೇವರು*
*ವಾಗಭಿಮಾನಿ.. ಉಮಾದೇವಿ*

💠💠💠💠💠💠💠💠💠💠💠💠
*ಕರುಣಾ ಸಂಧಿಯ ೫ ನೇ ನುಡಿಯ ಪ್ರಶ್ನೆ ಉತ್ತರಗಳು*

1. ದೇವರ ಸರಳತೆ ದುರುಪಯೋಗಬಾರದೆಂದು ಈ


ನುಡಿಯಲ್ಲಿ ದಾಸರು ಬಳಸಿದ ಪದ ಯಾವುದು?
*ಪರಮಾದರದಿ*

2. ಮಲಗಿ ಪಾಡಿದವರು ಯಾರು?


*ಭೀಷ್ಮರು*

3. ಪುಂಡಲೀಕ ಹರಿಯನ್ನು
ಹೇಗೆ ಪಾಡಿದ?
*ಪರಮಾದರದಿ ಕುಳಿತು*

4. ನಿಂತು ಸ್ತುತಿಸಿದವರು ಯಾರು?


*ನಾರದಾದಿಗಳು*

5. ಹರಿ ಒಲಿದದ್ದು ಯಾರಿಗೆ?


*ಆದರದಿ ನಲಿದು ಪಾಡಿದವರಿಗೆ*

6. ಐತರೇಯ ಬ್ರಾಹ್ಮಣನ ಮಾತಿನಂತೆ ಮಲಗಿದವರು ಯಾರು?


*ಕಲಿಯುಗದವರು*

7. ಪರಮಾತ್ಮನು ಭಕ್ತನ ಹಾಡನ್ನು ಕುಳಿತುಕೊಂಡು ಕೇಳುವುದು ಯಾವಾಗ?


*ಮಲಗಿ ಪರಮಾದರದಿ ಪಾಡಿದಾಗ*

8. ಭಕ್ತನು ನಿಂತು ಹಾಡಿದಾಗ ಭಗವಂತ ಹೇಗೆ ಕೇಳುತ್ತಾನೆ?


*ನಲಿದು*

9.ಭಕ್ತನು ಹೇಗೆ ಹಾಡಿದರೆ ಭಗವಂತನು ಒಲಿಯುತ್ತಾನೆ?


*ಕುಣಿದು ಸ್ತುತಿಸಿದರೆ*

10. ಹರಿಯು ಯಾರನ್ನು ಅರ ಘಳಿಗೆ ಬಿಟ್ಟಗಲನು?


*ತನ್ನವರನು*

11. ಯಾರು ಸುಲಭದಲ್ಲಿ ದೊರಕುವವರಾಗಿದ್ದಾರೆ?


*ಶ್ರೀಹರಿ*

12. ಪಾಮರರು ಭವದಲ್ಲಿ ಏಕೆ ಬಳಲುತ್ತಾರೆ?


*ರಮಾಪತಿಯನ್ನು ಒಲಿಸಲು ಅರಿಯದೆ*

13. ಐತರೇಯ ಬ್ರಾಹ್ಮಣದ ಮಾತಿನಂತೆ ಕುಳಿತು ಪಾಡುವರು ಯಾರು?


*ದ್ವಾಪರದವರು*

14. "ಮಲಗಿ ಪರಮಾದರದಿಪಾಡಲು" -ಇದು ಯಾವ ಪುರಾಣದ ವ್ಯಾಖ್ಯಾನವಾಗಿದೆ?


*ಬೃಹನ್ನಾರದೀಯ ಪುರಾಣದ ವ್ಯಾಖ್ಯಾನ*

15. ಪರಮಾತ್ಮನನ್ನು ನಿಂತು ಸ್ತುತಿಸಿದವರು ಯಾರು?


*ನಾರದರು..ಪ್ರಹ್ಲಾದ.. ಧ್ರುವ ಮೊದಲಾದವರು*

16. ಪರಮಾತ್ಮನನ್ನು ನಲಿದು ಸ್ತುತಿಸುವವರು ಯಾರು?


*ದಾಸರುಗಳು*
17. ಸರ್ವತ್ರ ಭಗವಂತನ ಚಿಂತನೆ ಮಾಡುವವರು ಯಾರು?
*ಅಪರೋಕ್ಷ ಜ್ಞಾನಿಗಳು*

💠💠💠💠💠💠💠💠💠💠💠💠
*ಕರುಣಾ ಸಂಧಿಯ ೬ನೇ ನುಡಿಯ ಪ್ರಶ್ನೆ ಉತ್ತರಗಳು*

1. " ಮನದೊಳಗೆ ತಾನಿಪ್ಪ" ಇದು ಯಾವ ಉಪನಿಷತ್ತಿನ ವ್ಯಾಖ್ಯಾನವಾಗಿದೆ?


*ತಲವಕಾರೋಪನಿಷತ್ತು*

2. ತ್ರಿವಿಧ ಚೇತನರು ಯಾರು?


*a) ಸಾತ್ವಿಕರು*
*b) ರಾಜಸರು*
*c) ತಾಮಸರು*

3. ಬ್ರಹ್ಮ ಸೂತ್ರ ಭಾಷ್ಯದ ಪ್ರಕಾರ ಮನದ ವೃತ್ತಿಗಳು ಎಷ್ಟು?


*ಐದು*

4. ಎಲ್ಲಿ ಇರುವ ಭಗವಂತನು ಮನ ಎಂದು ಕರೆಯಲ್ಪಡುತ್ತಾನೆ?


*ನಮ್ಮ ಮನದೊಳಗಿರುವ ಭಗವಂತನು*

5. ತ್ರಿವಿಧ ಚೇತನರಿಗೆ ಭೋಗಗಳನ್ನು ಶ್ರೀಹರಿ ಏನನ್ನು ಅನುಸರಿಸಿ ನೀಡುವ?


*ನಮ್ಮ ಮನದ ವೃತ್ತಿಗಳನ್ನು ಅನುಸರಿಸಿ*

6. ಭಕ್ತರು ಏನನ್ನು ಇತ್ತರೆ ಪರಮಾತ್ಮನು ತನ್ನನ್ನೇ ಕೊಡುತ್ತಾನೆ?


*ತಮ್ಮ ಮನವನ್ನು ಇತ್ತರೆ*

7. ಸ್ವರ್ಗಾದಿ ಭೋಗಗಳನ್ನು ಪರಮಾತ್ಮನು ಯಾರಿಗೆ ಕೊಡುತ್ತಾನೆ?


*ತಮ್ಮ ದೇಹವನ್ನು ನಿತ್ಯದಲ್ಲಿ ದಂಡಿಸಿ ಸಾಧನೆ ಮಾಡಿದ ಜೀವರುಗಳಿಗೆ*

8. ನಮ್ಮ ಅಂತಃಕರಣ ಶುದ್ಧಿಯಾಗುವುದು ಎದರಿಂದ?


*ಎಲ್ಲಾ ವ್ರತ , ನೇಮ, ಉಪವಾಸಗಳನ್ನು ಮಾಡಿ ದೈಹಿಕ ಸಾಧನೆಯೊಂದಿಗೆ ಮಾನಸಿಕವಾಗಿ ಭಗವಂತನ ಜ್ಞಾನ
ಸಂಪಾದನೆ ಮಾಡುವುದರಿಂದ*

9. ಕೊನೆಗೆ ನಮಗೆ ಯಾವುದರಿಂದ ಮೋಕ್ಷ ಸಿಗುತ್ತದೆ?


*ದೈಹಿಕ ಸಾಧನೆಯ ಜೊತೆಗೆ ಮಾನಸಿಕವಾಗಿಯೂ ಸಾಧನೆ ಮಾಡುವುದರಿಂದ*

10. ಬೃಹದಾರಣ್ಯಕದ ಪ್ರಕಾರ ಮನದ ವೃತ್ತಿಗಳು ಎಷ್ಟು? ಯಾವವು?


*ಹತ್ತು....ಕಾಮ, ಸಂಕಲ್ಪ, ವಿಚಾರ, ಶ್ರದ್ಧೆ, ಅಶ್ರದ್ಧೆ, ಧೈರ್ಯ, ಅಧೈರ್ಯ, ಲಜ್ಜಾ, ಬುದ್ಧಿ, ಭಯ*

11. ಬ್ರಹ್ಮಸೂತ್ರಭಾಷ್ಯದ ಪ್ರಕಾರ ಮನದ ವೃತ್ತಿಗಳು ಎಷ್ಟು?


*ಐದು..ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಚೇತನ*

💠💠💠💠💠💠💠💠💠💠💠💠
*ಕರುಣಾ ಸಂಧಿಯ ೭ನೇ ನುಡಿಯ ಪ್ರಶ್ನೆ ಉತ್ತರಗಳು*

1. ಸುರಪ ಅರ್ಥ ತಿಳಿಸಿ


*ಸುರ..ದೇವತೆಗಳು*
*ಪ..ಪಾಲನೆ ಮಾಡುವ*
*ಸುರಪ..ದೇವತೆಗಳನ್ನು ಪಾಲನೆ ಮಾಡುವ ಇಂದ್ರದೇವರು*

2. ಪುರುಷಾರ್ಥಗಳು ಎಷ್ಟು?
*ನಾಲ್ಕು*

3. ಪರಮಸತ್ಪರುಷಾರ್ಥ ಯಾವುದು?
*ಮೋಕ್ಷ*

4. ಏಕಾಂತ ಭಕ್ತರು ಯಾರು?


*ಯಾವುದೇ ಪುರುಷಾರ್ಥವನ್ನು ಬೇಡದೆ ಚತುರವಿಧ ಪುರುಷಾರ್ಥನೇ ದೇವರು ಎನ್ನುವವರು ಏಕಾಂತ ಭಕ್ತರು*

5. ಅನೇಕಾಂತ ಭಕ್ತರು ಯಾರು?


*ದೇವರಿಂದ ಮೋಕ್ಷ ಎನ್ನುವವರು ಅನೇಕಾಂತ ಭಕ್ತರು*

6. ಮಹಾಭಾರತದ ಪ್ರಕಾರ ಧರ್ಮ & ಅರ್ಥ & ಕಾಮ ಎಂದರೇನು?


*ಧರ್ಮ..ನಿಷ್ಕಾಮ ಕರ್ಮ*
*ಅರ್ಥ..ಜ್ಞಾನ*
*ಕಾಮ..ದೇವರ ನಿರ್ಮಾಲ್ಯ*

7. ತನ್ನನ್ನು ಮರೆತು ಏನನ್ನು ಬಯಸುವವರಿಗೆ ನಗುತ್ತಾ ಅತಿಶೀಘ್ರದಲ್ಲಿ ಹರಿಯು ಕೊಡುತ್ತಾನೆ?


*ಲೌಕಿಕ ಪದಾರ್ಥಗಳನ್ನು.. ಐಹಿಕ ಸುಖಗಳನ್ನು*

8.ಸುರಪತನಯ ಯಾರು?
*ಸುರ..ದೇವತೆಗಳು*
*ಸುರಪ..ದೇವತೆಗಳನ್ನು ಪಾಲನೆ ಮಾಡುವ ಇಂದ್ರದೇವರು*
*ಸುರಪತನಯ..ಇಂದ್ರದೇವರ ಮಗನಾದ ಅರ್ಜುನ*

9. ಯುದ್ಧದಲ್ಲಿ ಅರ್ಜುನನು ಗೆಲ್ಲಲು ಕಾರಣವೇನು?


*ಬೇರೇನನ್ನೂ ಬೇಡದೆ ಕೇವಲ ಶ್ರೀಕೃಷ್ಣನ ಅನುಗ್ರಹವನ್ನು ಬಯಸಿದ ಕಾರಣ ಅರ್ಜುನ ಯುದ್ಧದಲ್ಲಿ ಗೆದ್ದನು*

10. ಅರ್ಜುನನಿಗೆ ಪರಮಾತ್ಮನು ಏನನ್ನು ಕೊಟ್ಟ?


*ತನ್ನನ್ನೇ ಕೊಟ್ಟ*

11. ಸುಯೋಧನನಿಗೆ ಪರಮಾತ್ಮನು ನೀಡಿದ್ದು ಏನು?


*ದೇವರನ್ನು ಬಿಟ್ಟು ಸೈನ್ಯವನ್ನು ಬಯಸಿದ ಸುಯೋಧನ ಮಹಾಭಾರತ ಯುದ್ಧದಲ್ಲಿ ಸೋತು ಸತ್ತ..ದುರ್ಯೋಧನನಿಗೆ
ಭಗವಂತ ಅಂಧಃತಮಸ್ಸನ್ನು ನೀಡಿದ*

12. ಪರಮಾದರದಿ ಸದುಪಾಸನೆಯನ್ನು ಮಾಡಿದವರು ಯಾರು?


*ಅರ್ಜುನ*

13. ಪುರುಷಾರ್ಥಗಳು ಎಷ್ಟು? ಯಾವುವು?


*ನಾಲ್ಕು*
*ಧರ್ಮ..ಅರ್ಥ..ಕಾಮ..ಮೋಕ್ಷ*

14. ಶ್ರೇಷ್ಠವಾದ ಪುರುಷಾರ್ಥ ಯಾವುದು?


*ಮೋಕ್ಷ*
15. ಪರಮಾತ್ಮ ಯಾವುದನ್ನು ಬೇಗನೆ ಮತ್ತು ಯಾವುದನ್ನು ನಿಧಾನವಾಗಿ ಕೊಡುವ?
*ಐಹಿಕ ಸುಖಗಳನ್ನು ಬೇಗನೇ ಕೊಡುವ ಮತ್ತು ಮೋಕ್ಷವನ್ನು ನಿಧಾನವಾಗಿ ಕೊಡುವ*

16. ಧರ್ಮವನ್ನು ಕೇಳಿದರೂ ನಮಗೆ ಶಿಕ್ಷೆ ಆಗುವುದು ಯಾವಾಗ?


*ಹರಿಯನ್ನು ಮರೆತು*

17. ಅರ್ಥ ಕಾಮ ಬೇಡಿದರು ನಮಗೆ ಹರಿ ಅನುಗ್ರಹ ಯಾವಾಗ ಆಗುವುದು?


*ಹರಿಯನ್ನು ಸ್ಮರಿಸಿ*

💠💠💠💠💠💠💠💠💠💠💠💠
*ಕರುಣಾ ಸಂಧಿಯ ೮ನೇ ನುಡಿಯ ಪ್ರಶ್ನೆ ಉತ್ತರಗಳು*

1. ಗಗನಕೇಶ ಎಂದರೆ ಯಾರು?


*ರುದ್ರದೇವರು*

2. ಸ್ವಗತ ಭೇದ_ ವಿವರ್ಜಿತನು ಅರ್ಥ ತಿಳಿಸಿ


*ತನ್ನ ರೂಪ ಅವಯವಗಳಲ್ಲಿ ಭೇದವಿಲ್ಲದೆ ಇರುವವನು*

3. ಬ್ರಹ್ಮ ಸೂತ್ರದ ಪ್ರಥಮಾಧ್ಯಾಯದ ಪ್ರಕಾರ ಸರ್ವ ಶಬ್ದ ಸಮನ್ವಯವನ್ನು ಎಷ್ಟು ಬಗೆಗಳಾಗಿ ವಿಭಾಗಿಸಲಾಗಿದೆ?
*ನಾಲ್ಕು ಬಗೆ*

4. ದೇವರಲ್ಲಿ ಅಸಂಭಾವಿತ ಎನಿಸುವ ಶಬ್ದಗಳು ಯಾವವು?


*ದುಃಖಿ , ಬದ್ಧ*

5. ಪರಮಾತ್ಮ ಯಾರ ಅಂತರ್ಗತನಾಗಿದ್ದು ಜಗತ್ತನ್ನು ಸೃಷ್ಟಿ ಮಾಡುವ?


*ಬ್ರಹ್ಮದೇವರಲ್ಲಿದ್ದು*

6. ಪರಮಾತ್ಮನು ಯಾವ ರೂಪದಿಂದ ಜಗತ್ತನ್ನು ಸಂಹರಿಸುವ?


*ರುದ್ರದೇವರಲ್ಲಿದ್ದು*

7. ಬಗೆಬಗೆಯ ನಾಮಗಳಿಂದ ಕರೆಯಲ್ಪಡುವ ಪರಮಾತ್ಮ ಯಾರನ್ನು ಪೋರೆಯುತ್ತಾನೆ?


*ವಿವಿಧ ಭಕ್ತರನ್ನು*

8. ರುದ್ರದೇವರು ಗಗನಕೇಶರಾಗಲು ಕಾರಣಗಳು ಎಷ್ಟು? ಯಾವುವು?


*ಮೂರು*
a) *ಗಂಗಾವತರಣದ ಸಂದರ್ಭದಲ್ಲಿ ಗಂಗೆಯನ್ನು ತಡೆಯಲು ಆಕಾಶದ ತುಂಬಾ ಕೂದಲನ್ನು ಹರಡಿದ್ದು*
b) *ವಿಷ್ಣು ಪಾದೋದಕವಾದ ಗಂಗೆಯ ಒಂದು ಹನಿಯೂ ವ್ಯರ್ಥವಾಗಬಾರದೆಂದು*
c) *ಲೋಕ ಸಂಹಾರದ ಪಾಪ ಬರಬಾರದೆಂದು*

9. ಹರಿಗೆ ಬ್ರಹ್ಮ ರುದ್ರಾದಿ ನಾಮಗಳಲ್ಲದೆ____ ರೂಪಗಳು ಉಂಟು.


*ಬ್ರಹ್ಮ ರುದ್ರಾದಿ*

10. ವಿಷ್ಣುವಿನ ಪ್ರಸಿದ್ಧ ನಾಮಗಳು ಯಾವುವು?


*ಕೇಶವಾದಿ ನಾಮಗಳು*
11. ಬ್ರಹ್ಮಾದಿಗಳಲ್ಲಿ ಪ್ರಸಿದ್ಧವಾದ ನಾಮಗಳು ಯಾವುವು?
*ಬ್ರಹ್ಮ ಶಿವಾದಿ ನಾಮಗಳು*

12. ಉಭಯತ್ರ ಪ್ರಸಿದ್ಧವಾದ ನಾಮಗಳನ್ನು ತಿಳಿಸಿ.


*ಪೂಜ್ಯಾದಿ ನಾಮಗಳು*

13. ______ಪ್ರಕಾರ ಭಗವಂತ ಸರ್ವಶಬ್ದವಾಚ್ಯ ನಾಗಿದ್ದಾನೆ.


*ಬ್ರಹ್ಮ ಸೂತ್ರದ ಪ್ರಕಾರ*

14. ಹರಿ "ಸದಾನಂದೈಕದೇಹನು" ತಿಳಿಸಿ.


*ತನ್ನ ರೂಪ ಅವಯವಗಳಲ್ಲಿ ಛೇಧ, ಭೇಧ, ದುಃಖ, ಬದ್ಧಗಳಿಲ್ಲದೆ ಸಚ್ಚಿದಾನಂದ ರೂಪಿಯಾದ ಶ್ರೀಹರಿಯು ಸದಾನಂದೈಕ
ದೇಹನು*

💠💠💠💠💠💠💠💠💠💠💠💠
*ಕರುಣಾ ಸಂಧಿಯ ೯ನೇ ನುಡಿಯ ಪ್ರಶ್ನೆ ಉತ್ತರಗಳು*

1. ಅಬ್ಬರ ಅರ್ಥ ತಿಳಿಸಿ


*ಆಶ್ಚರ್ಯಕರ*

2. ಪಾದಾಭಿಮಾನಿ ದೇವತೆ ಯಾರು?


*ಜಯಂತ*

3. ನೇತ್ರದಲ್ಲಿರುವ ಭಗವದ್ ರೂಪ ಯಾವುದು?


*ಮಧುಸೂದನ*

4. ಮನಸ್ಸಿನ ಅಭಿಮಾನಿ ದೈತ್ಯ


ಯಾರು?
*ಕಾಲನೇಮಿ*

5. ಹರಿ ಬಾಧ್ಯ ಎನಿಸಿದ್ದಾನೆ, ಹೇಗೆ?


*ನೋವು ಅನುಭವಿಸುವವರಲ್ಲಿ ಹರಿಯ ವೈಶಷ್ಟ್ಯವನ್ನು ತಿಳಿಸುವ ಪದ್ಯ ಯಾವುದು?
*ಒಬ್ಬನಲಿ ನಿಂತಾಡುವನು ಮತ್ತೊಬ್ಬನಲಿ ನೋಡುವನು*

7. ಹರಿ ಬಾಧಕ ಎನಿಸಿದ್ದಾನೆ, ಹೇಗೆ?


..*ದುಃಖದ ಅನುಭವ ಹರಿಗೆ ಇದ್ದರೂ ಅದರ ವಿಕಾರ ನೋವು ಅವನಿಗಿಲ್ಲ. ಹಾಗೆಯೇ ಶಿಕ್ಷೆ ಕೊಡುವವರಲ್ಲಿ ಇದ್ದುದ್ದರಿಂದ ಹರಿ
ಬಾಧಕ ಎನಿಸಿದ್ದಾನೆ*

8. ಪಾದದಲ್ಲಿರುವ ಇರುವ ಭಗವದ್ರೂಪ ಯಾವುದು?


*ದಾಮೋದರ*

9. ಹಸ್ತಾಭಿಮಾನಿ ಯಾರು? ಅಲ್ಲಿರುವ ಭಗವದ್ರೂಪ ಯಾವುದು?


*ದಕ್ಷ*

10. ಕಣ್ಣಿನಲ್ಲಿರುವ ಭಗವದ್ರೂಪ ಯಾವುದು?


*ಮಧುಸೂದನ*
11. ಪಾದಾಭಿಮಾನಿ ಮತ್ತು ನೇತ್ರಾಭಿಮಾನಿ ದೈತ್ಯ ಯಾರು?
*ತೃಣಾವರ್ತ....ಬಾಣಾಸುರ*

12. "ಬಾಧ್ಯಬಾಧಕನಾಹ ನಿರ್ಭೀತ" ಇದು ಯಾವುದರ ವ್ಯಾಖ್ಯಾನವಾಗಿದೆ?


*ಭಾಗವತದ ವ್ಯಾಖ್ಯಾನ*

13. ಪರಮಾತ್ಮನು ಎಂತಹ ದೈವವಾಗಿದ್ದಾನೆ?


*ಅಬ್ಬರದ ಹೆದ್ದೈವ*

14. ಪರಮಾತ್ಮನು "ಬಾಧ್ಯ" ಏಕೆ?


*ನೋವು ಅನುಭವಿಸುವವರಲ್ಲಿ ಇದ್ದುದ್ದರಿಂದ ನಿರ್ದುಃಖನಾದ ಹರಿ ಬಾಧ್ಯ*

15. ವಾಗಾಭಿಮಾನಿ ಯಾರು?


*ಅಗ್ನಿ*

💠💠💠💠💠💠💠💠💠💠💠💠
*ಕರುಣಾ ಸಂಧಿಯ ೧೦ನೇ ನುಡಿಯ ಪ್ರಶ್ನೆ ಉತ್ತರಗಳು*

1. ವರೇಣ್ಯ ಪದದ ಅರ್ಥ ತಿಳಿಸಿ


*ಅಪೇಕ್ಷಣೀಯ*

2. ಕೇಳಿದ್ದನ್ನು ಕೊಡುವ ದೇವಲೋಕದ ವೃಕ್ಷಗಳೆಷ್ಟು?


*ಐದು*

3. ಈ ನುಡಿಯಲ್ಲಿ ದಾಸರು ನೀಡಿದ ವಿಶೇಷಣಗಳೆಷ್ಟು?


*ಹತ್ತು*

4. ಪಾರ್ಥರು ಎಂದರೆ ಯಾರು?


*ಧರ್ಮರಾಜ , ಭೀಮಸೇನ , ಅರ್ಜುನ*

5. ಪೃಥಾಳಿಗೆ ಇರುವ ಇನ್ನೊಂದು ಹೆಸರು ಯಾವುದು?


*ಕುಂತಿ*

6. "ಶರಣಜನ ಮಂದಾರ" ಈ ನುಡಿಯಲ್ಲಿ ದಾಸರು ಎಷ್ಟು ವಿಶೇಷಣಗಳನ್ನು ನೀಡಿದ್ದಾರೆ?


*ಹತ್ತು*

7. ಪಾರ್ಥಸಖ ಯಾರು?
*ಭಗವಂತ*

8. ಶರಣ ಜನರಿಗೆ ಪರಮಾತ್ಮ ಏನಾಗಿದ್ದಾನೆ?


*ಕಲ್ಪವೃಕ್ಷ*

9.ಪರಮಾತ್ಮ ಎಂತಹ ಆತ್ಮನಾಗಿದ್ದಾನೆ?


*ಉಪಮೆಯಿಲ್ಲದ ಆನಂದ ಸ್ವರೂಪ* *( ನಿರೂಪಾನಂದಾತ್ಮ )*

10. ಏನೆಂದು ಕರೆಯಲು ಪರಮಾತ್ಮ ತನ್ನವರ ಬಳಿಗೆ ಬಂದೊದಗುವನು?


*ಅತ್ಯಂತ ಭಕ್ತಿಯಿಂದ, ಆದರದಿಂದ ಕರೆಯಲು*
11. ಪರಮಾತ್ಮ ಕಲ್ಪವೃಕ್ಷಕ್ಕೆ ವಿರುದ್ಧನಾಗಿದ್ದಾನೆಂಬುದನ್ನು ಎಲ್ಲಿ ತಿಳಿಸಿದ್ದಾರೆ?
*ಭಾಗವತ ತಾತ್ಪರ್ಯದಲ್ಲಿ*

12. ದಾಸರು ನೀಡಿದ ವಿಶೇಷಣಗಳನ್ನು ಯಾವುದಕ್ಕೆ ಹೋಲಿಸಿದ್ದಾರೆ?


*ದಶೇಂದ್ರಿಯಗಳಿಗೆ*

13. ಹರಿ ಯಾರ ಮೇಲೆ ಶಾಶ್ವತ ಕಾರುಣ್ಯವನ್ನು ಮಾಡುತ್ತಾನೆ?


*ಪಾಂಡವರಂತೆ ಸಜ್ಜನರಾದರೆ , ವಿಷ್ಣು ಭಕ್ತರಾದರೆ*

14. ದೇವಲೋಕದ ವೃಕ್ಷಗಳನ್ನು ತಿಳಿಸಿ.


a) *ಮಂದಾರ*
b) *ಪಾರಿಜಾತ*
c) *ಸಂತಾನ*
d) *ಕಲ್ಪವೃಕ್ಷ*
e) *ಹರಿಚಂದನ*

15. ಜನಾನುರಾಗವನ್ನು ಗಳಿಸಿದವರು ಮತ್ತು ಗಳಿಸದವರು ಯಾರು?


*ಪಾಂಡವರು ಮತ್ತು ಕೌರವರು*

💠💠💠💠💠💠💠💠💠💠💠
*ಕರುಣಾ ಸಂಧಿಯ 11ನೇ ನುಡಿಯ ಪ್ರಶ್ನೆ ಉತ್ತರಗಳು*

1. ಹರಿಗೆ ಮಧುಸೂದನ ಎಂದು ಕರೆಯಲು ಕಾರಣವೇನು?


*ಮಧು ಎಂಬ ದೈತ್ಯನನ್ನು ಕೊಂದದ್ದರಿಂದ*

2. ಕರುಣಾಸಮುದ್ರನಾದ ಹರಿ ಕಾರುಣ್ಯದ ಒಂದು ಬಿಂದುವನ್ನು ಯಾರ ಮೂಲಕ


ಹೊರಹೊಮ್ಮಿಸುವನು?
*ತಾಯಿಯ ಮೂಲಕ*

3. ಹರಿ ಯಾರ ಮೇಲೆ ಕರುಣೆ ತೋರುವ & ಮತ್ತು ಯಾರ ಮೇಲೆ ಕರುಣೆ ತೋರುವದಿಲ್ಲ?

..*ಸಜ್ಜನರ ಮೇಲೆ , ವಿಷ್ಣುಭಕ್ತರ ಮೇಲೆ ಹರಿ ಕರುಣೆ ತೋರಿಸುತ್ತಾನೆ*


*ದುರ್ಜನರು , ಧರ್ಮಭ್ರಷ್ಟರು , ಅಸುರ ಸ್ವಭಾವದವರು , ವಿಷ್ಣು ವೈಷ್ಣವ ದ್ರೋಹಿಗಳ ಮೇಲೆ ಹರಿ ಕರುಣೆ ತೋರುವುದಿಲ್ಲ*

4. ಬಾಲಕನು ಯಾರನ್ನು ಕಾಣದಿದ್ದರೆ ನೆನೆ ನೆನೆದು ಹಲುಬುತ್ತಾನೆ?


*ತಾಯಿಯನ್ನು*

5. ತಿಲಮಾತ್ರದಷ್ಟೂ ಸ್ವಾರ್ಥವಿಲ್ಲದವನು ಯಾರು?


*ಭಗವಂತನೆಂಬ ಮಹಾತಾಯಿ*

6. ಕನಲಿಕೆ ಎಂದರೇನು?
*ಕಳವಳ*

💠💠💠💠💠💠💠💠💠💠💠
*ಕರುಣಾ ಸಂಧಿಯ 12ನೇ ನುಡಿಯ ಪ್ರಶ್ನೆ ಉತ್ತರಗಳು*
1. ಚೈದ್ಯ ಎಂದರೆ ಯಾರು?
..*ಚೇದಿ ದೇಶದ ರಾಜ ಶಿಶುಪಾಲ*

2. ಈ ನುಡಿಯಲ್ಲಿ ದಾಸರು ಹೇಳದ ಭಕ್ತರ ಸಂಖ್ಯೆ ಎಷ್ಟು?


*ಅಸಂಖ್ಯಾತ*

3. ವಸುಗಳು ಎಷ್ಟು ಜನ?


*ಅಷ್ಟವಸುಗಳು*

4. ಭೀಷ್ಮರು ಯಾವ ವಸುವಿನ


ಅವತಾರ?
*ದ್ಯು ನಾಮಕ ವಸು*

5. ಅಸುರಾವೇಶದಿಂದ ದೇವರನ್ನು ನಿಂದಿಸಿದ ಭಕ್ತ ಯಾರು?


*ಜಯ*

6. ಕಲ್ಲ ಚೂಡಾಮಣಿ ಕೊಟ್ಟ ಭಕ್ತ ಯಾರು?


*ಹನುಮಂತ ದೇವರು*

7. ಭೀಷ್ಮರು ಸ್ತುತಿಸಿದ ಸ್ತೋತ್ರ ಯಾವುದು?


*ವಿಷ್ಣು ಸಹಸ್ರನಾಮ*

8. ಇಟ್ಟಿಕಲ್ಲನು ಕೊಟ್ಟ ಭಕ್ತ ಯಾರು?


*ಪುಂಡಲೀಕ*

9. ಬಡ ಬ್ರಾಹ್ಮಣ ಏನನ್ನು ಕೊಟ್ಟದ್ದರಿಂದ ಅಖಿಳಾರ್ಥಗಳನ್ನು ಹೊಂದುವಂತಾಯಿತು?


*ಒಂದು ಹಿಡಿ ಅವಲಕ್ಕಿ*

10. ಯಾರನ್ನು ಪರಮಾತ್ಮನು ಹೊಟ್ಟೆಯಲ್ಲಿ ಇಟ್ಟುಕೊಂಡನು?


*ಶಿಶುಪಾಲನನ್ನು*

11. ಬಾಣದಲಿಟ್ಟ ಯಾರ ಅವಗುಣಗಳನ್ನು ಕೃಷ್ಣನು ಎಣಿಸಲಿಲ್ಲ?


*ಭೀಷ್ಮರ*

12. ಕೌಸ್ತುಭಮಣಿ ಕೊಟ್ಟವರು ಯಾರು?


*ಬ್ರಹ್ಮದೇವರು*

13. ಮೂರ್ತಿಯ ಪ್ರತಿಷ್ಠೆ ಯಾವುದರ ಮೇಲೆ ಆಗಬೇಕು?


*ಕಲ್ಲಿನ ಮೇಲೆ*

14. ಶಿಶುಪಾಲನಲ್ಲಿ ಇದ್ದ ಸುಜೀವಿ ಯಾರು?


*ಜಯ*

15. ಜಯನು ____ ದ್ವಾರಪಾಲಕ ನಾಗಿದ್ದಾನೆ.


*ವೈಕುಂಠದ*

16.ಚೂಡಾಮಣಿ ಕೊಟ್ಟ ಭಕ್ತನಿಗೆ ಭಗವಂತ ನೀಡಿದ್ದು ಏನು?


*ಅಜ ಪದವಿಯನ್ನು*

17. ಸುಧಾಮ ಯಾರ ಮಾತಿನಂತೆ ಕೃಷ್ಣನ ದರ್ಶನಕ್ಕೆ ನಡೆದ?


*ಹೆಂಡತಿಯ ಮಾತಿನಂತೆ*

18. ಜಯ ಸಾತ್ವಿಕನಾದರೂ ಯಾರ ಆವೇಶದಿಂದ ಕೃಷ್ಣನನ್ನು ಬೈದ? ಬೈದವನಿಗೆ ಆದ ಗತಿ ಯಾವುದು?


*ಅಸುರಾವೇಶ ದಿಂದ*....*ಅಂಧಃ ತಮಸ್ಸು*

💠💠💠💠💠💠💠💠💠💠💠
*ಕರುಣಾ ಸಂಧಿಯ 13ನೇ ನುಡಿಯ ಪ್ರಶ್ನೆ ಉತ್ತರಗಳು*

1. " ಧನವ ಸಂರಕ್ಷಿಸುವ "_ ಈ ಪದ್ಯ ಯಾವ ಸ್ತೋತ್ರದ ವ್ಯಾಖ್ಯಾನವಾಗಿದೆ?


*ವಿಷ್ಣು ಸಹಸ್ರನಾಮದ*

2. ದೇವನೆಂಬ ನಿಧಿಯನ್ನು ಸೇವೆಗಾಗಿ ಕಾಯುುವವರು____..


*ಮಹಾಶೇಷ*

3. "ಸಂಪತ್ತಿನ ಆಸೆ ಹರಿಗಿಲ್ಲ "


ಎನ್ನುವಲ್ಲಿ ದಾಸರು ಬಳಸಿದ ಪದ ಯಾವುದು?
*ನಿಷ್ಕಾಮನದಿ*

4. ಸಂಪತ್ತನ್ನು ಕಾಯುವುದು ದೇವರಿಗೆ ಬೇಸರವಿಲ್ಲ ಎನ್ನುವಲ್ಲಿ ದಾಸರು ಬಳಸಿದ ಪದ ಯಾವುದು?


*ಸುಖಿಸುವಂದದಿ*

5. ಧನವ ಸಂರಕ್ಷಿಸುವ ಫಣಿ ಏನು ಮಾಡುತ್ತದೆ?


*ತಾನು ಭೋಗಿಸದೇ ತನ್ನವರಿಗೂ ನೀಡದೇ ಅದು ಯಾರಿಗೆ ಸೇರಬೇಕೋ ಅವರಿಗೇ ಸೇರುವಂತೆ ಮಾಡುತ್ತದೆ*

6. ನಿಷ್ಕಾಕಾಮನೆಯಿಂದ ಲಕುಮಿರಮಣನು ಯಾರನ್ನು ಕಾಯುತ್ತಾನೆ?


*ತನ್ನ ಭಕ್ತರಾದ ಸಜ್ಜನರನ್ನು*

7. ಪರಮಾತ್ಮನು ಯಾವುದಕ್ಕೆಲ್ಲ ಅಪ್ರತಿಮಲ್ಲನಾಗಿದ್ದಾನೆ?


*ಇಡೀ ಜಗತ್ತಿಗೆ*

8. ಭಗವಂತನು ಯಾರ ಸೇವೆಯನ್ನು ಸ್ವೀಕರಿಸುವುದಿಲ್ಲ?


*ದುರ್ಜನರ ಸೇವೆಯನ್ನು*

9. "ಅಸುರರಿಂದ ಸೇವೆಯನೊಲ್ಲ"ಇದು ಯಾವುದರ ಅರ್ಥವಾಗಿದೆ?


*ಶ್ರುತ್ಯರ್ಥವಾಗಿದೆ*

💠💠💠💠💠💠💠💠💠💠💠
*ಕರುಣಾ ಸಂಧಿಯ 14ನೇ ನುಡಿಯ ಪ್ರಶ್ನೆ ಉತ್ತರಗಳು*

1. ಕೃಷ್ಣನು ಯಾರ ಮನೆಯ ಔತಣವನ್ನು ಸ್ವೀಕರಿಸಿದ?


*ವಿದುರನ ಮನೆಯ ಔತಣವನ್ನು*

2. ಈ ನುಡಿಯಲ್ಲಿ ಕೃಷ್ಣನು ಯಾರ ಯಾರ ಮನೆಯ ಔತಣವನ್ನು ತ್ಯಜಿಸಿದ?


*ದುರ್ಯೋಧನನ ಹಾಗೂ ಭೀಷ್ಮಾದಿಗಳ*

3. ಇಲ್ಲಿ " ಪಾಲುಂಡ" _ ಪದದ ಅರ್ಥ ತಿಳಿಸಿ.


*ಹಾಲು ಕುಡಿದ ಎಂದು ಒಂದು ಅರ್ಥ ಅಥವಾ ತನ್ನ ಪಾಲಿನ ಸ್ವಾಖ್ಯ ರಸವನ್ನು ಭಕ್ತಿಯಿಂದ ನೀಡಿದ್ದಕ್ಕೆ ಉಂಡ ಎನ್ನುವುದು
ಮುಖ್ಯ ಅರ್ಥ*

4. ಪರಮಾತ್ಮನು ಇಲ್ಲಿ
ಯಾರ ಮಾನವನ್ನು ಕಳೆದನು?
*ದುರ್ಯೋಧನ*

5. ಬಾಲಕನ ಕಲಭಾಷೆಯನ್ನು ಕೇಳಿ ಯಾರು ಸುಖ ಪಡುತ್ತಾರೆ?


*ತಾಯಿ*

6. ಯಾರಲ್ಲಿ ಮಾಡುವ ಅವಹೇಳನವನ್ನು ಪರಮಾತ್ಮ ಸಹಿಸಲಾರ?


*ತನ್ನ ಭಕ್ತರಲ್ಲಿ ( ತನ್ನವರಲ್ಲಿ )*

7. ಪರಮಾತ್ಮನು ಭೀಷ್ಮಾದಿಗಳ ಮನೆಯನ್ನು ತ್ಯಜಿಸಲು ಕಾರಣವೇನು?


*ದ್ರೌಪದಿಯ ವಸ್ತ್ರಾಪಹರಣ ಕಾಲದಲ್ಲಿ ಭೀಷ್ಮಾದಿಗಳು ಮೌನ ತಾಳಿದ್ದಕ್ಕೆ*

8. ಭಗವಂತನು ದುರ್ಯೋಧನನ ಮನೆಯನ್ನು ತ್ಯಜಿಸಲು ಕಾರಣವೇನು?


*ದ್ರೌಪದಿ ಯ ವಸ್ತ್ರಾಪಹರಣಾದಿ ಅನ್ಯಾಯದಲ್ಲಿ ಭಾಗಿಯಾಗಿದ್ದಕ್ಕೆ*

9. ಶ್ರೀಹರಿಯು ಯಾವಾಗ ನಮ್ಮ ಮನೆಗೆ ಬರುವನೆಂದು ದಾಸರು ಈ ಪದ್ಯದಲ್ಲಿ ತಿಳಿಸಿದ್ದಾರೆ?


*ಅಧರ್ಮವನ್ನು ನಿಲ್ಲಿಸಲು ಸಾಧ್ಯವಾಗದಿದ್ದರೂ ವಿರೋಧಿಸಿದರೂ ಸಾಕು , ಶ್ರೀಹರಿಯೂ ನಮ್ಮ ಮನೆಗೆ ಬರುತ್ತಾನೆ*

💠💠💠💠💠💠💠💠💠💠💠
*ಕರುಣಾ ಸಂಧಿಯ 15ನೇ ನುಡಿಯ ಪ್ರಶ್ನೆ ಉತ್ತರಗಳು*

1. ಚಿನ್ಮಯಗಾತ್ರ ಪದದ ಅರ್ಥ ತಿಳಿಸಿ.


*ಜ್ಞಾನಪೂರ್ಣದೇಹವುಳ್ಳ*

2. ಪರಮಾತ್ಮನು ಯಾರ ಅಪರಾಧಗಳನ್ನು ಸ್ಮರಿಸನು?


*ತನ್ನನ್ನು ಸ್ಮರಿಸುವ ಭಕ್ತರ*

3. ಸ್ಮರಿಸುವವರ ಅಪರಾಧಗಳೆಂಬುದರಿಂದ ಇಲ್ಲಿ


ಯಾವ ಯಾವ ಪುರಾಣದಲ್ಲಿ
ಹೇಳಿದ ಶತಾಪರಾಧಗಳೆಂದು ಸ್ವೀಕರಿಸಬೇಕು?
*ಗರುಡಪುರಾಣದಲ್ಲಿ ಬ್ರಹ್ಮದೇವರು ನಾರದ ರಿಗೆ ಹೇಳಿದ್ದು*
*ವರಾಹ ಪುರಾಣದಲ್ಲಿ ವರಾಹದೇವರು ಭೂದೇವಿಗೆ ಹೇಳಿದ್ದು*

4. ಗರುಡ ಪುರಾಣದಲ್ಲಿ..*ತನ್ನನ್ನು ಸ್ಮರಿಸುವ ಭಕ್ತರ* ಅಪರಾಧಗಳನ್ನು ಯಾರು ಯಾರಿಗೆ ಹೇಳಿದ್ದಾರೆ?


*ಬ್ರಹ್ಮದೇವರು ನಾರದರಿಗೆ*

5. ಶತಾಪರಾಧಗಳನ್ನು ವರಾಹದೇವರು ಭೂದೇವಿಗೆ ಹೇಳಿದ ಪುರಾಣ ಯಾವುದು?


*ವರಾಹ ಪುರಾಣ*

6. ನಾವು ಯಾರ ಅಪರಾಧಗಳನ್ನು ಗಣನೆಮಾಡಿ


ಸಂಸಾರದಲ್ಲಿ ದುಃಖ ಪಡುತ್ತೇವೆ?
*ಲೇಶ ಅಪರಾಧವೂ ಇಲ್ಲದ ದೇವರ ಅಪರಾಧಗಳನ್ನು ಗಣನೆ ಮಾಡಿ ನಾವು ಸಂಸಾರದಲ್ಲಿ ದುಃಖ ಪಡುತ್ತೇವೆ*

7. ಪರಮಾತ್ಮನು ಏನನ್ನು ಅನಂತ ಮಡಿಮಾಡಿ ತನ್ನ ಭಕ್ತರಿಗೆ ಕೊಡುತ್ತಾನೆ?


*ತನ್ನನ್ನು ಸ್ಮರಿಸುವ ಭಕ್ತರು ಏನೇ ಸಮರ್ಪಿಸಿದರೂ ಅದನ್ನು ಸ್ವೀಕರಿಸಿ ಅನಂತ ಮಡಿ ಮಾಡಿ ಕೊಡುತ್ತಾನೆ*

8. ಭಗವಂತ ಸುಚರಿತ್ರನಾದ್ದರಿಂದ____ ಆಗಿದ್ದಾನೆ.


*ಲೋಕಪವಿತ್ರ*

9. ____ಇದ್ದವರು ಮಾತ್ರ ಇನ್ನೊಬ್ಬರನ್ನು ಶುದ್ಧರನ್ನಾಗಿ ಮಾಡಲು ಸಾಧ್ಯ.


*ಶುದ್ಧ ಚಾರಿತ್ರ್ಯ*

10. ನಾವು ಮರಳಿ ಅರ್ಪಿಸಿದರೆ___


*ಉಣಿಸುತ್ತಾನೆ*

💠💠💠💠💠💠💠💠💠💠💠
*ಕರುಣಾ ಸಂಧಿಯ 16ನೇ ನುಡಿಯ ಪ್ರಶ್ನೆ ಉತ್ತರಗಳು*

1. ಮೋಕ್ಷದ ವಿಭಾಗಗಳೆಷ್ಟು?
*ನಾಲ್ಕು*

2. ವಾಣ ಅಥವಾ ಬಾಣ ಎಂದರೆ ಏನು?


*ಲಿಂಗ ಶರೀರ*

3. ನಿರ್ವಾಣ ಎಂದರೇನು?
*ಲಿಂಗ ಶರೀರ ಇಲ್ಲದ ಸ್ಥಿತಿ ನಿರ್ವಾಣ ಅಂದರೆ ಮೋಕ್ಷ*

4. ಭಗವಂತ ನಮ್ಮನ್ನು ಸಂಹಾರ ಮಾಡುವುದು ಏತಕ್ಕಾಗಿ?


*ನಮ್ಮ ಮೇಲಿನ ಕರುಣೆಯಿಂದ ನಮ್ಮನ್ನು ಮೋಕ್ಷದಲ್ಲಿಟ್ಟು ಸ್ವರೂಪಾನಂದವನ್ನು ಅನುಗ್ರಹಿಸುವುದಕ್ಕಾಗಿ*

5. ಸಾಲೋಕ್ಯ ಮೋಕ್ಷ ಎಂದರೆ ಯಾವುದು?


*ದೇವರ ದರ್ಶನ ಮಾಡಿಕೊಳ್ಳುವುದು*

6. ಸಾಮಿಪ್ಯ ಎಂದರೆ ಯಾವುದು?


*ದೇವರ ಸಮೀಪದಲ್ಲಿರುವುದು*

7. ಸಾರೂಪ್ಯ ಮೋಕ್ಷ ಎಂದರೇನು?


*ದೇವರಂತೆ ರೂಪ ಸ್ವೀಕರಿಸುವುದು*

8. ದೇವರ ಅವಯವಗಳಿಂದ ಭೋಗಿಸುವ ಮೋಕ್ಷ ಯಾವುದು?


*ಸಾಯುಜ್ಯ ಮೋಕ್ಷ*

9. ಮೋಕ್ಷದ ವಿಭಾಗಗಳನ್ನು ತಿಳಿಸಿ.


*a. ಸಾಲೋಕ್ಯ*
*b. ಸಾಮೀಪ್ಯ*
*c. ಸಾರೂಪ್ಯ*
*d. ಸಾಯುಜ್ಯ*
💠💠💠💠💠💠💠💠💠💠💠
*ಕರುಣಾ ಸಂಧಿಯ 17ನೇ ನುಡಿಯ ಪ್ರಶ್ನೆ ಉತ್ತರಗಳು*

1. ಅಣುಗ ಪದದ ಅರ್ಥ ತಿಳಿಸಿ


*ಬಾಲಕ / ಸೇವಕ*

2. ಬಲಿಯ ಮನೆಯ ಅಂಗರಕ್ಷಕ ಯಾರು?


*ವಾಮನ ರೂಪಿ ಪರಮಾತ್ಮ*

3. ದೇವರ ಏಕಾಂತ ಗೃಹಗಳೆಷ್ಟು?


*ಮೂರು*

4. ಸಾಯುಜ್ಯ ಮೋಕ್ಷ ಹೊಂದಿದ ಭಕ್ತರಿಗೆ ಭಗವಂತನು


ಎನನ್ನು ಕೊಡುತ್ತಾನೆ?
*ತನ್ನ ಕಣ್ಣಿನಿಂದಲೇ ನೋಡುವಂತೆ, ತನ್ನ ಕಾಲಿನಿಂದಲೇ ಓಡಾಡುವಂತೆ ಹೀಗೆ ತನ್ನ ದೇಹವನ್ನೇ ಸಾಯುಜ್ಯ ಮೋಕ್ಷ
ಹೊಂದಿದ ಭಕ್ತರಿಗೆ ಕೊಡುತ್ತಾನೆ*

5. ದೇವರ ಏಕಾಂತ ಗೃಹಗಳು ಯಾವುವು?


*a. ಅನಂತಾಸನ*
*b. ಶ್ವೇತದ್ವೀಪ*
*c. ವೈಕುಂಠ*

6. ರಾಜನು ಮೆಚ್ಚಿದರೆ ಏನೆಲ್ಲಾ ಕೊಡಲು ಸಮರ್ಥನು?


*ಹಣ, ವಾಹನ, ಆಭರಣ, ವಸ್ತ್ರ, ಭೂಮಿಗಳನ್ನು*

7. ರಾಜನು ತಾನು ,
ಇಚ್ಛೆಪಟ್ಟರೂ ಸಹ ಏನನ್ನು ಕೊಡಲು ಅಸಮರ್ಥನು?
*ತನ್ನ ದೇಹವನ್ನು ಅಥವಾ ತನ್ನ ಮನಸ್ಸನ್ನು ಅಥವಾ ತನ್ನ ಏಕಾಂತ ಗೃಹವನ್ನು*

8. ಅನವರತ ನೆನೆಯುವವರನ್ನು ಪರಮಾತ್ಮನು ಎಲ್ಲಿ ಇಡುತ್ತಾನೆ?


*ತನ್ನ ಏಕಾಂತ ಗೃಹಗಳಾದ ಶ್ವೇತದ್ವೀಪ, ಅನಂತಾಸನ, ವೈಕುಂಠಗಳಲ್ಲಿ ಇಡುತ್ತಾನೆ.*

9. ಪರಮಾತ್ಮನು ಅಣುಗನಂದದಲಿ ಯಾರ ವಶನಾಗುತ್ತಾನೆ?


*ಅನವರತ ಸ್ಮರಿಸುವ ಭಕ್ತರ*

10. "ತನುಮನಗಳಿತ್ತಾದರಿಪರುಂಟೇನೊ" ಎಂಬುದರ ಮೂಲಕ ಯಾವ ಮುಕ್ತರ ಸುಖವನ್ನು ತಿಳಿಸಿದ್ದಾರೆ?


*ಸಾಯುಜ್ಯ ಮುಕ್ತರ ಸುಖವನ್ನು*

11. ಭೂಮಿಯಿಂದ ವೈಕುಂಠ ಲೋಕ ಎಷ್ಟು ಎತ್ತರದಲ್ಲಿದೆ?


*16 ಕೋಟಿ 25 ಲಕ್ಷ ಯೋಜನ*

12. ವೈಕುಂಠದ ದಕ್ಷಿಣಕ್ಕೆ ಮತ್ತು ಉತ್ತರಕ್ಕೆ ಇರುವ ಭಾಗ ಯಾವುದು? ಎರಡೂ ಎಷ್ಟು ಕೋಟಿ ಯೋಜನೆ ವಿಸ್ತಾರವಾಗಿವೆ?
*ದಕ್ಷಿಣಕ್ಕೆ ಇರುವ ಭೂಭಾಗ 2.5 ಕೋಟಿ ಯೋಜನ ವಿಸ್ತಾರ*
*ಉತ್ತರಕ್ಕೆ ಇರುವ ದುರ್ಗಾ ಭಾಗ 2.5 ಕೋಟಿ ಯೋಜನ ವಿಸ್ತಾರ*

13. ಅಮುಕ್ತ ಸ್ಥಾನಗಳು ಎಷ್ಟು? ಯಾವವು?


*2*
*1 ಭೂಭಾಗ*
*2 ದುರ್ಗಭಾಗ*

14. ಮುಕ್ತ ಸ್ಥಾನ ಯಾವುದು?


*ಅಯೋಧ್ಯ ನಾಮಕವಾದ ಶ್ರೀಭಾಗ*

15. ಭೂ ಮತ್ತು ದುರ್ಗಾ ಸ್ಥಾನದ ಮಧ್ಯ ಇರುವ ಭಾಗ ಯಾವುದು?


*ಅಯೋಧ್ಯ ನಾಮಕವಾದ ಶ್ರೀಭಾಗ*

16. ಅಯೋಧ್ಯ ಎಂದು ಕರೆಸಿಕೊಳ್ಳುವ ಸ್ಥಾನ ಯಾವುದು? ಎಷ್ಟು ಕೋಟಿ ಯೋಜನೆ ವಿಸ್ತಾರವಾಗಿದೆ?
*ಶ್ರೀಭಾಗ / 23 ಕೋಟಿ ಯೋಜನ ವಿಸ್ತಾರ*

💠💠💠💠💠💠💠💠💠💠💠💠💠💠💠
*ಕರುಣಾ ಸಂಧಿಯ 18ನೇ ನುಡಿಯ ಪ್ರಶ್ನೆ ಉತ್ತರಗಳು*

1. ಕವಿಭಿರೀಡಿತ ಪದದ ಅರ್ಥ ತಿಳಿಸಿ


*ಜ್ಞಾನಿಗಳಿಂದ ಸ್ತುತಿಸಲ್ಪಡುವವನು*

2.ಮೋಹಿನಿ ಅವತಾರ ಆದದ್ದು ಯಾವ ಕಾಲದಲ್ಲಿ?


*ಸಮುದ್ರಮಥನ ಕಾಲದಲ್ಲಿ*

3. ಯುವತಿ ವೇಷದಿಂದ ಪರಮಾತ್ಮನು ಯಾರನ್ನು


ಮೋಹಗೊಳಿಸಿದನು?
*ರುದ್ರದೇವರನ್ನು*

4. ಗೌರಿಧವ ಎಂದರೆ ಯಾರು?


*ಗೌರಿ: ಪಾರ್ವತಿ , ಧವ: ಪತಿ , ಪಾರ್ವತಿಯ ಪತಿ ಎಂದರೆ ರುದ್ರದೇವರು*

5. ಸಾಧನೆಯ ಪ್ರಥಮ ಸೋಪಾನ ______.


*ದೇವರ ಕಥೆಯ ಶ್ರವಣ*

6. ಭಗವಂತ ಕೈರವದಳಶ್ಯಾಮ ಹೇಗೆ?


*ಪ್ರಾಕೃತವಾದ ನೈದಿಲೆಯ ದಳದಂತೆ ನೀಲಿಬಣ್ಣ ಉಳ್ಳವನು ಎಂದು ಅರ್ಥ ಮಾಡದೆ ಜ್ಞಾನಾನಂದ ಬಣ್ಣ ಉಳ್ಳವನು ಎಂದು
ಅರ್ಥೈಸಬೇಕು*

7. ಗೌರಿಧವನನ್ನು ಮೋಹಿಸಿ, ಕೆಡಿಸಿ ಉಳಿಸಿದವರು ಯಾರು?


*ಪರಮಾತ್ಮ*

8. ಹರಿಕಥಾ ಶ್ರವಣವು ಅತ್ಯಂತ ಅವಶ್ಯವಾದದ್ದು ಎಂದು ದಾಸರು ತಿಳಿಸಲು ಕಾರಣವೇನು?


*ಭಕ್ತರ ಎಲ್ಲ ಪಾಪಗಳನ್ನು ನಾಶಮಾಡಿ ಆ ಮೂಲಕ ಸಾಧನೆ ಮಾಡಿಸಿ ಮೋಕ್ಷವನ್ನು ಕೊಡುವಂಥದ್ದು ಈ ಹರಿಕಥೆ.*

9. ___ಚರಿತ್ರೆಯ ಶ್ರವಣದಿಂದಲೂ ನಮಗೆ ಪುಣ್ಯಪ್ರಾಪ್ತಿ ಹಾಗೂ ಪಾಪ ನಿವೃತ್ತಿ.


*ಪಾವನರ*

💠💠💠💠💠💠💠💠💠💠💠💠💠💠💠
*ಕರುಣಾ ಸಂಧಿಯ 19ನೇ ನುಡಿಯ ಪ್ರಶ್ನೆ ಉತ್ತರಗಳು*

1. ಯಾವ ಕೋಶದ ಪ್ರಕಾರ ಗೋ ಶಬ್ದಕ್ಕೆ ಎಷ್ಟು ಅರ್ಥಗಳಿವೆ?


*ಅಮರಕೋಶದ ಪ್ರಕಾರ 7 ಅರ್ಥಗಳಿವೆ.*

2. ಗೋ ಶಬ್ದಕ್ಕೆ ಇರುವ ಅರ್ಥಗಳನ್ನು ತಿಳಿಸಿ.


*ಸ್ವರ್ಗ, ಎತ್ತು, ಚಂದ್ರ, ಮಾತು, ಭೂಮಿ, ದಿಕ್ಕು, ಆಕಳು.*

3. ನಂದಗೋಪ ಹಾಗೂ ಯಶೋದೆಯರು ಮಾಡಿದ ಅಪರಾಧ ಯಾವುದು?


*ತಂದೆ ತಾಯಿಯಿಲ್ಲದ ಶ್ರೀಕೃಷ್ಣನಿಗೆ ತಾವು ತಂದೆ ತಾಯಿ ಎಂದು ತಿಳಿದು ಮಗನ ಮೇಲೆ ಸಹಜವಾಗಿ ಅಧಿಕಾರ ಮಾಡುವ
ಹಾಗೆ ಪರಮಾತ್ಮನಲ್ಲಿ ಮಾಡಿದ್ದು ಮಹಾಪರಾಧ.*

4. ಗುರುವಿನ ಮಡದಿ ಯಾರು? ಅವಳು ಮಾಡಿದ ಅಪರಾಧ ಯಾವುದು?


..ಬೃಹಸ್ಪತಿ ಆಚಾರ್ಯರ ಮಡದಿ *ತಾರಾ..ಪರಪುರುಷನಾದ ಚಂದ್ರನ ಸಂಗ ಮಾಡಿದ್ದು ಮಹಾಪರಾಧ.*

5. ಇಂದ್ರನು ಮಾಡಿದ ಅಪರಾಧ ತಿಳಿಸಿ. ಇಂದ್ರ ಎಷ್ಟು ದಿನಗಳ ಕಾಲ ಮಳೆ ಸುರಿಸಿದ?
ಇಂದ್ರ ಸತತವಾಗಿ ಏಳು ದಿನಗಳ ಕಾಲ ಮಳೆ ಸುರಿಸಿ ಕೃಷ್ಣನನ್ನೇ ನೀರಿನಲ್ಲಿ ಮುಳುಗಿಸಲು ಪ್ರಯತ್ನ ಮಾಡಿದ್ದು
ಮಹಾಪರಾಧ.*

6. ಕೈಕೇಯಿಯ ದಾಸಿ ಯಾರು?


ಇವಳು ಮಾಡಿದ ಅಪರಾಧ ಯಾವುದು?
*ಮಂಥರೆ / ಶ್ರೀರಾಮಚಂದ್ರನ ಪಟ್ಟಾಭಿಷೇಕಕ್ಕೆ ಅಡ್ಡಿ ಮಾಡಿ ಶ್ರೀರಾಮನನ್ನು ಕಾಡಿಗೆ ಕಳಿಸುವ ಸಂಚು ಮಾಡಿದ್ದು
ಮಹಾಪರಾಧ.*

7. ಭೃಗು ಮಹರ್ಷಿಗಳು ಮಾಡಿದ ಅಪರಾಧ ತಿಳಿಸಿ.


*ಭಗವಂತನ ವಕ್ಷಸ್ಥಳಕ್ಕೆ ತಮ್ಮ ಪಾದ ಸ್ಪರ್ಶ ಮಾಡಿದ್ದು ಮಹಾಪರಾಧ.*

8. ನಗಚಾಪ ಎಂದರೆ ಯಾರು? ಈ ಪದದ ಅರ್ಥ ತಿಳಿಸಿ.


ರುದ್ರದೇವರು / ಗ - ಚಲಿಸುವುದು, ನಗ - ಚಲಿಸದೆ ಇರುವುದು, ನಗ ಎಂದರೆ ಪರ್ವತ*
*ನಗಚಾಪ - ಎಂದರೆ ಪರ್ವತವನ್ನು ಧನಸ್ಸು ಮಾಡಿಕೊಂಡ ರುದ್ರದೇವರು ನಗಚಾಪ.*

9.ರುದ್ರ ದೇವರು ಮಾಡಿದ ಅಪರಾಧ ಯಾವುದು?


*ತ್ರಿಪುರಾಸುರನ ಸಂಹಾರ ಕಾಲದಲ್ಲಿ ರುದ್ರದೇವರು ಬ್ರಹ್ಮದೇವರನ್ನು ಸಾರಥಿಯನ್ನಾಗಿ, ಭಗವಂತನನ್ನು ಬಾಣವನ್ನಾಗಿ
ಮಾಡಿಕೊಂಡದ್ದು ಮಹಾಪರಾಧ*

10. ಯಾವ ದೈತ್ಯನ ಸಂಹಾರದ ಸಮಯದಲ್ಲಿ ರುದ್ರದೇವರು ಬ್ರಹ್ಮನನ್ನು ಸಾರಥಿಯನ್ನಾಗಿ ಮತ್ತು ಹರಿಯನ್ನು ಬಾಣವನ್ನಾಗಿ
ಮಾಡಿಕೊಂಡರು?
*ತ್ರಿಪುರಾಸುರ*

11. ರುದ್ರದೇವರಿಗೆ ನಗಚಾಪ ಎಂದು ಹೆಸರು ಬರಲು ಕಾರಣವೇನು?


*ಮೇರುಪರ್ವತವನ್ನು ಧನಸ್ಸು ಮಾಡಿಕೊಂಡದ್ದಕ್ಕೆ ರುದ್ರದೇವರಿಗೆ ನಗಚಾಪ ಎನ್ನುವರು.*

12. ಚಂದ್ರನ ಅಪರಾಧ ತಿಳಿಸಿ.


*ಚಂದ್ರ ಪರಸ್ತ್ರೀ ತಾರಾಳ ಸಂಗ ಮಾಡಿದ್ದು ಮಹಾಪರಾಧ.*

13. ಗೋಪ ಪದದ ಅರ್ಥ ತಿಳಿಸಿ.


*ಇಂದ್ರ/ ಚಂದ್ರ/ ನಂದಗೋಪ.*
14. ಯಾರಲ್ಲಿ ಮಾಡಿದ ಅಪರಾಧವನ್ನು ಭಗವಂತ ಎಣಿಸಲಿಲ್ಲ?
*ನಂದಗೋಪ, ಚಂದ್ರ, ಇಂದ್ರ, ಕೈಕೇಯಿ, ಸಾಂದೀಪನಿ ಪತ್ನಿ, ಯಶೋದೆ, ತಾರಾ, ಭೃಗು, ರುದ್ರ ಮೊದಲಾದ ಭಕ್ತರು
ಮಾಡಿದ ಮಹಾಪರಾಧಗಳನ್ನು ಭಗವಂತ ಎಣಿಸಲಿಲ್ಲ.*

💠💠💠💠💠💠💠💠💠💠💠💠💠💠💠
*ಕರುಣಾ ಸಂಧಿಯ 20ನೇ ನುಡಿಯ ಪ್ರಶ್ನೆ ಉತ್ತರಗಳು*

1. ಈ ನುಡಿಯಲ್ಲಿ ದಾಸರು ಗಂಗೆಗಿಂತ _____ಮಿಗಿಲೆಂದು ತಿಳಿಸಿರುವರು.


*ಗಂಗಾಜನಕ*

2. ಅಮರತರಗಿಂಣಿ ಎಂದರೆ ಯಾರು?


*ದೇವಗಂಗೆ*

3. ಯಾವ ಕಲ್ಪದಲ್ಲಿ ಗಂಗೆಯು ತ್ರಿವಿಕ್ರಮನ ಎಡಪಾದದಿಂದ ಹುಟ್ಟಿದಳು?


*ವರಾಹ ಕಲ್ಪದಲ್ಲಿ*

4. ಪದ್ಮ ಕಲ್ಪದಲ್ಲಿ ಗಂಗೆಯು ತ್ರಿವಿಕ್ರಮನ ಯಾವ ಪಾದದಿಂದ ಹುಟ್ಟಿದಳು?


*ಬಲಪಾದದಿಂದ*

5. ಒಟ್ಟು ಆಕಾಶಗಳು ಎಷ್ಟು? ಅವು ಯಾವವು?


*ಎರಡು*
*ವ್ಯಾಕೃತಾಕಾಶ*
*ಅವ್ಯಾಕೃತಾಕಾಶ*

6. ಸಮುದ್ರಮಥನ ಕಾಲದಲ್ಲಿ ಲಕ್ಷ್ಮೀ ದೇವಿಯು ಹೊರಬಂದುದರಿಂದ ಯಾರ ಪುತ್ರಿ ಎನಿಸಿದಳು?


*ಸಮುದ್ರರಾಜನ ಪುತ್ರಿ*

7. ವ್ಯಾಕೃತ ಆಕಾಶ ಎಂದರೆ ಯಾವುದು? ಇದಕ್ಕಿರುವ ಇನ್ನೊಂದು ಹೆಸರು ಯಾವುದು?


*ಬ್ರಹ್ಮಾಂಡದ ಒಳಗಿರುವ ಜನ್ಯವಾದ ಆಕಾಶ* *ವ್ಯಾಕೃತಾಕಾಶ*
*ಭೂತಾಕಾಶ*

8. ಅವ್ಯಾಕೃತ ಆಕಾಶ ಎಂದರೆ ಯಾವುದು?


*ಬ್ರಹ್ಮಾಂಡದ ಹೊರಗಿರುವ ಅಜನ್ಯವಾದ ಆಕಾಶ ಅವ್ಯಾಕೃತಾಕಾಶ*

9. ಗಂಗೆಯು ತ್ರಿವಿಕ್ರಮನ ಪಾದದಿಂದ ಹುಟ್ಟಿದಳು ಎಂಬ ಆಧಾರವನ್ನು ಯಾರು ಯಾವ ಗ್ರಂಥದಲ್ಲಿ ತಿಳಿಸಿದ್ದಾರೆ?
*ಶ್ರೀಮದಾಚಾರ್ಯರು / ಭಾಗವತ ತಾತ್ಪರ್ಯದಲ್ಲಿ*

10. ಅಮರ ತರಂಗಿಣಿ ಎಂದರೆ ಯಾರು?


*ದೇವಗಂಗೆ*

11. ಅಮರ ತರಂಗಿಣಿಯು ಎಲ್ಲಿಂದ ಜನಿಸಿದಳು?


*ತ್ರಿವಿಕ್ರಮ ದೇವರ ಪಾದದ ಹೆಬ್ಬೆರಳಿನ ಉಗುರಿನ ತುದಿಯಿಂದ*

12. ಗಂಗೆಯು ಏನನ್ನು ಹಿಂಗಿಸುತ್ತಾಳೆ?


*ಮೂರು ಲೋಕಗಳ ಅಘಗಳನ್ನು*
13. ಗಂಗೆಯ ಅವತಾರ ಮಾಡಿದ ಎರಡು ಕಲ್ಪಗಳು ಎಷ್ಟು? ಯಾವವು?
*ಎರಡು*
*ವರಾಹ ಕಲ್ಪ ಮತ್ತು ಪದ್ಮ ಕಲ್ಪ*

14. ಯಾವ ಕಾಲದಲ್ಲಿ ಲಕ್ಷ್ಮೀದೇವಿಯು ಅವತಾರ ಮಾಡಿದಳು? ಇವಳ ತಂದೆ ಎನಿಸಿದವರು ಯಾರು?
*ಸಮುದ್ರ ಮಥನ ಕಾಲದಲ್ಲಿ*
*ಸಮುದ್ರ ರಾಜ*

💠💠💠💠💠💠💠💠💠💠💠💠💠💠💠
*ಕರುಣಾ ಸಂಧಿಯ 21ನೇ ನುಡಿಯ ಪ್ರಶ್ನೆ ಉತ್ತರಗಳು*

1. ಪಾಮರರು ಎಂದರೆ ಯಾರು?


*ಅಜ್ಞಾನಿಗಳು*

2. ನಾರದರು ಮಾಡಿದ ಹರಿನಾಮಸ್ಮರಣೆಯಿಂದ ನರಕಸ್ಥರು ಉದ್ಧಾರವಾದ ಕಥೆ ಯಾವ ಪುರಾಣದಲ್ಲಿ ಬಂದಿದೆ?


*ಬ್ರಹ್ಮಾಂಡ ಪುರಾಣದಲ್ಲಿ*

3. ಸಮುದ್ರ ಮಥನ ಕಾಲದಲ್ಲಿ ಉದ್ಭವಿಸಿದ ಗೋ ಯಾವುದು?


*ಸುರಭಿ*

4. ಕಪಿಲೆಯು ಯಾವ ಋಷಿಗಳ ಗೋವು?


*ಜಮದಗ್ನಿ*

5. ವಷಿಷ್ಠರ ಗೋವಿನ ಹೆಸರೇನು?


*ನಂದಿನಿ*

6. ಕಾಮಧೇನು, ಸುಕಲ್ಪತರು ಮತ್ತು ಚಿಂತಾಮಣಿ ಇರುವ ಲೋಕ ಯಾವುದು?


*ಸ್ವರ್ಗ ಲೋಕ*

7. ಶ್ರೀ ಮುಕುಂದನ ನಾಮವು ಯಾರನ್ನು ಸಲಹಿತು?


*ನರಕಸ್ಥರನು*

8. ಪಾಮರರನ್ನು ಪಂಡಿತರೆನಿಸಿ ಪುರುಷಾರ್ಥವನ್ನು ಯಾವುದು ಕೊಡುತ್ತದೆ?


*ಶ್ರೀ ಮುಕುಂದನ ಪರಮ ಮಂಗಳವಾದ ನಾಮ*

9. ಕಲ್ಪವೃಕ್ಷಗಳು ಯಾವ ದೇವತೆಗಳಾಗಿದ್ದಾರೆ?


*ಕರ್ಮಜ ದೇವತೆಗಳು*

10. ಈ ದೇವತೆಗಳ ವಿವರಣೆ ಯಾವ ಪುರಾಣದಲ್ಲಿದೆ?


*ಹರಿವಂಶದಲ್ಲಿ*

💠💠💠💠💠💠💠💠💠💠💠💠💠💠💠
*ಕರುಣಾಸಂಧಿಯ..22ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*..

1. ಮನದಲ್ಲಿಯೇ ಸುಂದರ ಪದಾರ್ಥಗಳನ್ನು ಪರಮಾತ್ಮನಿಗೆ ಅರ್ಪಿಸಿದರೆ ಆತನು ಏನನ್ನು ದಯಪಾಲಿಸುತ್ತಾನೆ?


*ಹೊಸದಾದ ಮನೋಹರವಾದ ಗಂಧ ರಸಗಳಿಂದ ಕೂಡಿದ ಫಲಗಳ ರಾಶಿಯನ್ನು ಗಂಗಾ ಪ್ರವಾಹದಂತೆ ನಿರಂತರವಾಗಿ
ಕೊಡುತ್ತಾನೆ.*

2. ಪರಮಾತ್ಮನು ಯಾರ ಅಘವನ್ನು ಕದಿಯುತ್ತಾನೆ?


*ತನ್ನ ಸದ್ಗುಣವ ಕದ್ದ ಭಕ್ತರ ಅಘವನ್ನು*

3. ಭಕ್ತರ ಪಾಪವನ್ನು ಕದ್ದರೂ ಪರಮಾತ್ಮನು ಎನೆನಿಸಿದ್ದಾನೆ?


*ಅನಘ*

4. ನಾವು ದೇವನಿಗೆ ಎಂತಹ ಪದಾರ್ಥವನ್ನು ಕೊಡಬೇಕು? ಹೇಗೆ ಕೊಡಬೇಕು?


*ಸುಂದರ ಪದಾರ್ಥಗಳನ್ನು ಕೊಡಬೇಕು / ಕೊಡುವಾಗ ಮನದಲ್ಲಿ ಭಕ್ತಿ, ಪ್ರೀತಿ, ಸುಂದರ ಭಾವನೆ ಇರಬೇಕು.*

5. ಹರಿಯಿಂದ ಸದ್ಗುಣವನ್ನು ಪಡೆದ ನಾವು ಅವನಿಗೆ ನೀಡುವುದು ಏನನ್ನು?


*ಜಗತ್ತಿನಲ್ಲಿ ಯಾರಿಗೂ ಬೇಡವಾದ ನಮಗೂ ಬೇಡವಾದ ಪಾಪಗಳನ್ನು*

6. ನಾವು ಹರಿಗೆ ___ ನೀಡಿದರೆ ಆತ ನಮಗೆ ____ ಕೊಡುವನು.


*ಒಂದು....ಹನ್ನೊಂದು*

7. ದೇವ ಅನಾಘ ಎಂದು ಕರೆಸಿಕೊಳ್ಳಲು ಕಾರಣವೇನು?


*ತನ್ನ ಸದ್ಗುಣಗಳನ್ನು ಕದ್ದವರ ಪಾಪಗಳನ್ನು ತಾನು ಪಡೆದರೂ ತನ್ನಲ್ಲಿಟ್ಟುಕೊಳ್ಳದೆ ಸುಟ್ಟು ಹಾಕುವುದರಿಂದ ದೇವ ಅನಘ
ಎಂದೆನಿಸಿಕೊಳ್ಳುತ್ತಾನೆ.*

💠💠💠💠💠💠💠💠💠💠💠💠💠💠💠
*ಕರುಣಾಸಂಧಿಯ..23ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*

1. ಜಾತರೂಪೋದರ ಎಂದರೆ ಯಾರು? ಹೇಗೆ ತಿಳಿಸಿ.


*ಹಿರಣ್ಯಗರ್ಭ (ಬ್ರಹ್ಮ)*
*ಚಿನ್ನದಂತಿರುವ ಕಮಲಗರ್ಭದಿಂದ ಬಂದಿರುವ*
*ಚಿನ್ನದಂತಿರುವ ಬ್ರಹ್ಮಾಂಡ ಗರ್ಭದಲ್ಲಿ ತುಂಬಿರುವ*
*ಚಿನ್ನದಂತಿರುವ ಬ್ರಹ್ಮಾಂಡವನ್ನು ಗರ್ಭದಲ್ಲಿ ತುಂಬಿಕೊಂಡಿರುವ*

2. ಪರಮಾತ್ಮನು ಚೇತನಾಚೇತನ ವಿಲಕ್ಷಣನು ಏಕೆ?


*ಹೊಸದಾದ ಪ್ರತಿವಸ್ತು, ಪ್ರತಿವ್ಯಕ್ತಿ ಕಾಲಾಂತರದಲ್ಲಿ ಹಳೆಯದಾಗುತ್ತದೆ. ಆದರೆ ದೇವರು ನಿತ್ಯನೂತನನಾಗಿದ್ದಾನೆ.
ಏಕೆಂದರೆ ದೇವರು ಚೇತನಾಚೇತನ ವಿಲಕ್ಷಣ ಅಂದರೆ ಜೀವ ಜಡಗಳಿಗಿಂತ ಭಿನ್ನನಾಗಿದ್ದಾನೆ.*

3. ಬ್ರಹ್ಮರುದ್ರಾದಿಗಳಲ್ಲಿ ವ್ಯಾಪ್ತನಾಗಿರುವ ಹರಿ ಧರೆಯಲ್ಲಿ ಯಾರೊಡನೆ ಆಟವಾಡುವ?


*ನಮ್ಮಂತಹ ಅತೀ ಸಾಮಾನ್ಯರೊಡನೆ*

4. "ನಮ್ಮಪ್ಪ" _ಈ ಪದಕ್ಕೆ ದಾಸರು ಯಾವ ಪ್ರಮಾಣವನ್ನು ಸ್ಮರಿಸಿದ್ದಾರೆ?


*ಶ್ರುತಿಯ ಪ್ರಮಾಣ*

5. ರಸಗಳಲ್ಲಿ ರೂಪನಾಗಿರುವನು ಯಾರು?


*ಪರಮಾತ್ಮ*

6."ಚೇತನಾಚೇತನ ವಿಲಕ್ಷಣ" ಈ ಪದ್ಯವು ಯಾವುದರ ವ್ಯಾಖ್ಯಾನವಾಗಿದೆ?


*ಕಾಠಕೋಪನಿಷತ್ತು*
💠💠💠💠💠💠💠💠💠💠💠💠💠💠💠
*ಕರುಣಾಸಂಧಿಯ..24ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*

1. ದೇಹ ಕೊಡುವದರಿಂದ ____ಎನಿಸುವ.


*ತಂದೆ*

2. ತಂದೆತಾಯಿಗಳು ತಮ್ಮ ಶಿಶುವನ್ನು ಕಾಯುವಂತೆ ಪರಮಾತ್ಮ ತನ್ನವರನ್ನು ಹೇಗೆ ಕಾಯುತ್ತಾನೆ?


*ಹಿಂದೆ ಮುಂದೆ, ಎಡ ಬಲ, ಒಳಗೆ ಹೊರಗೆ ಅಕಾಶದಂತೆ ತುಂಬಿದ ಪರಮಾತ್ಮ ತನ್ನವರಿಗೆ ಮಹಾ ಆಪತ್ತು ಬರದ ಹಾಗೆ
ಕಾಯುತ್ತಾನೆ*

3. ಹಿಂದೆ ಮುಂದೆ ಎಡಬಲದಿ ಎನ್ನುವುದರಿಂದ ಯಾರ ಶ್ಲೋಕವನ್ನು ಸ್ಮರಿಸಿದ್ದಾರೆ?


*ಯಾದವಾರ್ಯರ ಶ್ಲೋಕವನ್ನು*

4.ಭಗವಂತ ಮತ್ತು ಆಕಾಶದ ಮಧ್ಯೆ ಇರುವ ವ್ಯತ್ಯಾಸ ತಿಳಿಸಿ?


*ಆಕಾಶ ಅಸ್ವತಂತ್ರವಾಗಿ ಅನುಪಕಾರಿಯಾಗಿ ತುಂಬಿಕೊಂಡಿದ್ದರೆ, ಭಗವಂತ ಸ್ವತಂತ್ರನಾಗಿ ನಿರಂತರ ಉಪಕಾರಿಯಾಗಿ
ವ್ಯಾಪ್ತನಾಗಿದ್ದಾನೆ.*

5. ತಂದೆ-ತಾಯಿ ಹಾಗೂ ಪರಮಾತ್ಮ, ಮತ್ತು


ಶಿಶು _ಭಕ್ತ
ಇಲ್ಲಿ ಉಪಮಾನ ಹಾಗೂ ಉಪಮೇಯ ತಿಳಿಸಿ.
*ಉಪಮಾನ..ತಂದೆ ತಾಯಿ*
*ಉಪಮೇಯ..ಪರಮಾತ್ಮ*
*ಉಪಮಾನ..ಶಿಶು*
*ಉಪಮೇಯ..ಭಕ್ತ*

💠💠💠💠💠💠💠💠💠💠💠💠💠💠💠
*ಕರುಣಾಸಂಧಿಯ..25ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*

1. "ಕಾಮದ" ನೆಂದು ಹರಿ ಕರೆಸಿಕೊಳ್ಳಲು ಕಾರಣವೇನು?


*ನಮ್ಮ ದುಷ್ಟ ಕಾಮನೆಗಳನ್ನು ತಡೆಯುವುದರಿಂದ ಹಾಗೂ ಸತ್ಕಾಮನೆಗಳನ್ನು ಕೊಡುವುದರಿಂದ ಹರಿ ಕಾಮದ*

2. ನಮ್ಮೊಂದಿಗೆ ಹರಿ ಯಾವ ರೀತಿ ತಿರುಗುತ್ತಾನೆ?


*ದೇಹದ ನೆರಳಿನಂತೆ*

3. ಎಷ್ಟು ಸಮಯವು ಬಿಡದೆ ಬೆಂಬಲನಾಗಿ ಪರಮಾತ್ಮನು ನಮ್ಮೊಡನೆ ಇದ್ದಾನೆ?


*ಅರೆಕ್ಷಣ ಬಿಡದೆ*

4. ನಮಗೆ ಬರುವ ಏನನ್ನು ಪರಮಾತ್ಮನು ತಡೆಯುತ್ತಾನೆ?


*ಪಾಪಗಳ ಸಮೂಹವನ್ನು*

5. ಸಂತತವೂ ಪರಮಾತ್ಮನು ನಮಗೆ ಏನನ್ನು ಕೊಡುತ್ತಾನೆ?


*ಸಕಲ ಇಷ್ಟಾರ್ಥಗಳನ್ನು*

6. ನಮ್ಮಂದದಲಿ ಪರಮಾತ್ಮನು ಏನು ಮಾಡುತ್ತಾನೆ?


*ನಮ್ಮ ಶಕ್ತಿಗೆ ತಕ್ಕದಾಗಿ ನಡೆಯುತ್ತಾನೆ*
7. ಹರಿಯು ಭಕ್ತಾಧೀನ ಎನಿಸಿದ್ದಾನೆ_ ತಿಳಿಸಿ.
*ಭಕ್ತರಿಗಾಗಿಯೇ ಶ್ರೀಹರಿಯ ಸಕಲ ಕ್ರಿಯೆಗಳಾದ್ದರಿಂದ ಭಕ್ತಾಧೀನ*

8. "ನವಸುವಿಶೇಷಸನ್ಮಹಿಮ" ವಿವರಿಸಿ
*ಹೊಸದಾದ, ನಿರ್ದುಷ್ಟವಾದ, ವಿಶಿಷ್ಟವಾದ, ಸತ್ಯವಾದ ಮಹಿಮೆಯುಳ್ಳವ*

9. ನೆರಳು ನಮ್ಮ ಅಧೀನ ಆದರೆ ನೆರಳಿನಂತೆ ದೇವರು ನಮ್ಮ____


*ಅಧೀನನಂತೆ ಇದ್ದರೂ ಅಧೀನನಲ್ಲ*

10. ಓಘ ಎಂದರೇನು?
*ಸಮೂಹ*

💠💠💠💠💠💠💠💠💠💠💠💠💠💠💠
*ಕರುಣಾಸಂಧಿಯ..26ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*

1. ಸಿಟ್ಟು ಯಾವ ಗುಣದ ವಿಕಾರ ರೂಪವಾಗಿದೆ?


*ತಮೋಗುಣದ ವಿಕಾರ ರೂಪ

2. ಈ ಪದ್ಯದಲ್ಲಿ ದಾಸರು ಸಿಟ್ಟು ಪ್ರಕಟ ಮಾಡಿದ ಯಾವ ರೂಪವನ್ನು ತಿಳಿಸಿದ್ದಾರೆ?


*ನರಸಿಂಹ ರೂಪ*

3. ಶ್ರೀಹರಿ ತನ್ನ ಬಿಟ್ಟ ಸಾತ್ವಿಕರನ್ನು ಮತ್ತು ತಾಮಸರನ್ನು ಯಾವ ಪಾಶದಿಂದ ಬಂಧಿಸುವ?


*ಸಾತ್ವಿಕರಿಗೆ ಸಂಸಾರವೆಂಬ ಬಂಧನ ಮತ್ತು ತಾಮಸರಿಗೆ ತಮೋ ಬಂಧನ ರೂಪವಾದ ಪಾಶದಿಂದ ಬಂಧಿಸುತ್ತಾನೆ.*

4. ಸದ್ಭಕ್ತಿಯೆಂದರೆ ಯಾವುದು?
*ನವವಿಧ ದ್ವೇಷ ರಹಿತವಾದ ಭಕ್ತಿಯೇ ಸದ್ಭಕ್ತಿ*

5. ಭಕ್ತಿಯ ವಿಧಗಳೆಷ್ಟು? ಯಾವವು?


9.
*a) ಶಾಸ್ತ್ರ ಶ್ರವಣ*
*b) ಹರಿಗುಣ ಕೀರ್ತನ*
*c) ವಿಷ್ಣುವಿನ ಸ್ಮರಣ*
*d) ಭಕ್ತರ ಅಥವಾ ಮೂರ್ತಿಯ ಪಾದಸೇವನ*
*e) ಹರಿಯ ಚೇತನಾಚೇತನ ಪ್ರತಿಮೆಗಳ ಅರ್ಚನೆ*
*f) ಸಕಲ ಅಧಿಷ್ಠಾನಗಳಿಗೆ ವಂದನ*
*g) ಸರ್ವದಾ ಹರಿದಾಸ್ಯ ಚಿಂತನ*
*h) ಸಜ್ಜನರೊಡನೆ ಸಖ್ಯ*
*i) ಸರ್ವವನ್ನೂ ಪರಮಾತ್ಮನ ಅಧೀನವೆಂದು ಸಮರ್ಪಿಸುವ ಆತ್ಮನಿವೇದನ*

6. ನವವಿಧ ದ್ವೇಷಗಳನ್ನು ತಿಳಿಸಿ.


*a) ಜೀವೈಕ್ಯ ಚಿಂತನೆ*
*b) ಹರಿಯಲ್ಲಿ ನಿರಾಕಾರ ನಿರ್ಗುಣ ಚಿಂತನೆ*
*d) ಗುಣಕ್ಕೆ ಸೀಮೆ ಹಾಕುವುದು*
*e) ಬ್ರಹ್ಮ ರುದ್ರಾದಿಗಳು ಹರಿಗೆ ಸಮ ಎನ್ನುವುದು*
*f) ಹರಿಗಿಂತ ಉತ್ತಮರಿದ್ದಾರೆನ್ನುವುದು*
*g) ಹರಿಯ ಶರೀರ ಗುಣ ರೂಪಗಳಲ್ಲಿ ಭೇಧ ಚಿಂತನೆ*
*h) ಮೋಹಕ್ಕಾಗಿ ತೋರಿದ ಅವತಾರಗಳಲ್ಲಿ ತಪ್ಪುಗಳನ್ನು ಹಾಗೆಯೇ ತಿಳಿಯುವುದು*
*i) ಭಗವದ್ಭಕ್ತರಲ್ಲಿ ನಿಂದೆ ಹಾಗೂ ದ್ವೇಷ*
*j) ಶಾಸ್ತ್ರಗಳ ನಿಂದೆ ಹಾಗೂ ಅವುಗಳಲ್ಲಿ ಅವಿಶ್ವಾಸ

7. ನಾವು ಹರಿಯನ್ನು ಯಾವ ಹಗ್ಗದಿಂದ ಕಟ್ಟಬೇಕು?


*ಭಕ್ತಿಯೆಂಬ ಹಗ್ಗದಿಂದ*

*8. ಭಗವಂತನು ತನ್ನನ್ನು ಕಟ್ಟಿದವರ ಮೇಲೆ ಸಿಟ್ಟಾಗುತ್ತಾನೆಯೇ?


*ಇಲ್ಲ*

9. ಶಿಷ್ಟೇಷ್ಟ ಪದದ ಅರ್ಥ ತಿಳಿಸಿ.


*ಶಿಷ್ಟ : ಸಜ್ಜನ*
*ಇಷ್ಟ : ಪ್ರಿಯ* ..*ಸಜ್ಜನಪ್ರಿಯ*

💠💠💠💠💠💠💠💠💠💠💠💠💠💠💠
*ಕರುಣಾಸಂಧಿಯ..27ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*

1. ಈ ಪದ್ಯದಲ್ಲಿ ದಾಸರು ದೇವರ ಕಾರುಣ್ಯವನ್ನು ಎಷ್ಟು ದೃಷ್ಟಾಂತಗಳೊಂದಿಗೆ ಸಮರ್ಥಿಸಿದ್ದಾರೆ?


*ಮೂರು ತರಹದ ದೃಷ್ಟಾಂತಗಳೊಂದಿಗೆ*

2. ಭಗವಂತ ಉತ್ತಮ ಭಕ್ತರನ್ನು ಹೇಗೆ ರಕ್ಷಿಸುತ್ತಾನೆ?


*ಸದಾ ಜೊತೆಗಿದ್ದು ಶ್ರಮ ನೀಡದೆ ಕಣ್ಣಿಗೆ ರೆಪ್ಪೆ ಸಹಾಯ ಮಾಡುವಂತೆ ಉತ್ತಮ ಭಕ್ತರನ್ನು ರಕ್ಷಿಸುತ್ತಾನೆ*

3. ಕೈ ತಿಂಡಿಯಾದಾಗ ತುರಿಸುವಂತೆ ಶ್ರೀಹರಿ ಎಂತಹ ಭಕ್ತರನ್ನು ರಕ್ಷಿಸುವನು?


*ಮಧ್ಯಮ ಭಕ್ತರಿಗೆ*

4.ಭಗವಂತ ಅಧಮರನ್ನು ರಕ್ಷಿಸುವ ಪರಿ ತಿಳಿಸಿ.


*ಹಲ್ಲುಗಳು ಬಹಳ ಶ್ರಮದಿಂದ ಪಣ್ಣು ಫಲಗಳನ್ನು ಅಗೆದು ನಾಲಿಗೆಗೆ ರಸ ನೀಡಿ ಸುಖಪಡುವಂತೆ ಅಧಮ ಭಕ್ತರನ್ನು
ಅನುಗ್ರಹಿಸುವನು*

5.ದೇವನು___ ಕಾರಣವಿಲ್ಲದೆ___ ದುಃಖ ಕೊಡಲಾರ.


ಕರ್ಮ*....*ಅಜ್ಞಾನ ಅಥವಾ ದ್ವೇಷದಿಂದ

6. ಶ್ರೀರಾಮನು ಭಕ್ತರಿಗೆ ಹೇಗೆ ಬಂದು ಅನುಗ್ರಹಿಸುವನು?


*ನಮ್ಮ ಪುಣ್ಯಫಲಗಳನ್ನು ಕೊಡಲಿಕ್ಕಾಗಿ ಬ್ರಹ್ಮಾಂಡದೊಳಗೆ ಲಕ್ಷ್ಮಣನ ಅಣ್ಣನಾದ ಶ್ರೀರಾಮನು ಭಕ್ತರ ಸಮಯಕ್ಕೆ
ದೇವತೆಗಳೊಡನೆ ಬಂದು ಅನುಗ್ರಹಿಸುವನು.*

7. ದಾಸರು "ಲಕ್ಷ್ಮಣನ ಅಣ್ಣ" ಎಂಬ ಪದ ಪ್ರಯೋಗ ಮಾಡಲು ಕಾರಣವೇನು?


*ಪುಣ್ಯಕ್ಕೆ ಸಮವಾಗಿ ಫಲ ನೀಡುವವನೆಂಬುದನ್ನು ತಿಳಿಸಲು.*

8. "ನುಡಿವೆಣ್ಣಿನಾಣ್ಮಾಂಡ"__ ವಿವರಿಸಿ ಬರೆಯಿರಿ.


*ನುಡಿವೆಣ್ಣು : ಮಾತಿಗೆ ಅಭಿಮಾನಿಯದ ಸರಸ್ವತಿ*
*ಆಣ್ಮ: ಪತಿ*..*ಬ್ರಹ್ಮದೇವರು*
*ನುಡಿವೆಣ್ಣಿನಾಣ್ಮಾಂಡ..ಬ್ರಹ್ಮಾಂಡ*

9. ಈ ಪದ್ಯದಲ್ಲಿ ದಾಸರು ಎಷ್ಟು ವಿಧದ ಭಕ್ತರ ಬಗ್ಗೆ ತಿಳಿಸಿದ್ದಾರೆ?


*ಮೂರು ವಿಧದ ಭಕ್ತರ ಬಗ್ಗೆ*
💠💠💠💠💠💠💠💠💠💠💠💠💠💠💠
*ಕರುಣಾಸಂಧಿಯ..28ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*

1. ಸಮುದ್ರಮಥನದಲ್ಲಿ ಆದಿಯಿಂದ ಅಂತ್ಯದವರೆಗೆ ಸಕಲ ಕಾರ್ಯಗಳನ್ನು ಮಾಡಿದವರು ಯಾರು?


*ಶ್ರೀಹರಿ*

2. ಸಮುದ್ರಮಥನ ಕಾಲದಲ್ಲಿ ಆದ ಅವತಾರಗಳು ಎಷ್ಟು? ಯಾವವು?


*ನಾಲ್ಕು..ಕೂರ್ಮ, ಅಜಿತ, ಮೋಹಿನಿ, ಧನ್ವಂತರಿ*

3. ಪರಮಾತ್ಮನು ಎನನ್ನು ಕೈಗೊಂಬನು?


*ಭಕ್ತಿಯಿಂದ ಏನನ್ನೇ ಕೊಟ್ಟರೂ ಸ್ವೀಕರಿಸುವನು*

4. ದೇವ ಯಾರನ್ನು ಬಿಟ್ಟಗಲನು?


*ತನ್ನನ್ನು ನಂಬಿದ ಭಕ್ತರನ್ನು*

5. ಹರಿ ಏನನ್ನು ದೂರದಲ್ಲಿ ಅಟ್ಟುವನು?


*ನಮ್ಮ ಪಾಪಗಳನ್ನೆಲ್ಲ ದೂರದಲಿ ಅಟ್ಟುವನು*

6. ಭಗವಂತನು ಯಾವ ಅರಣ್ಯಕ್ಕೆ ಪಾವಕ ನಾಗಿದ್ದಾನೆ?


*ದುರಿತಗಳೆಂಬ ಅರಣ್ಯಕ್ಕೆ ಪಾವಕನಾಗಿದ್ದಾನೆ*

7. ಏನನ್ನು ಹೊರಿಸಿದವರ ಮೇಲೆ ಪರಮಾತ್ಮನು ಸಿಟ್ಟು ಮಾಡಲಿಲ್ಲ?


*ಬೆಟ್ಟ ಬೆನ್ನಲಿ ಹೊರಿಸಿದ ದೇವತೆಗಳ ಮೇಲೆ ಪರಮಾತ್ಮನು ಸಿಟ್ಟು ಮಾಡಲಿಲ್ಲ*

8. ಕಂಗೆಟ್ಟವರು ಯಾರು? ಅವರಿಗೆ ಹರಿಯು ಏನು ಉಣಿಸಿದ?


*ದೇವತೆಗಳು ಕಂಗೆಟ್ಟರು / ಅವರಿಗೆ ಹರಿಯು ಅಮೃತ ಉಣಿಸಿದ*

9. ಪರಮಾತ್ಮನು ಯಾರನ್ನು ಮುರಿದನು?


*ದೈತ್ಯರನ್ನು ಮುರಿದನು*

10. ಮಂದರ ಪರ್ವತ ಹೊತ್ತ ರೂಪ ಯಾವುದು?


*ಕೂರ್ಮರೂಪ*

11. ಹಾರುವ ಬೆಟ್ಟವನ್ನು ತಡೆದ ರೂಪ ಯಾವುದು?


*ಅಜಿತ ನಾಮಕ ಭಗವಂತ*

12. ದೈತ್ಯರನ್ನು ಮೋಹಿಸಿದ ರೂಪ ಯಾವುದು?


*ಮೋಹಿನಿ ರೂಪ*

14. ಅಮೃತ ತಂದ ಹರಿರೂಪ ಯಾವುದು?


*ಧನ್ವಂತರಿ ರೂಪ*

15. ದೇವತೆಗಳು ಬೆಟ್ಟವನ್ನು ಭಗವಂತನ ಮೇಲೆ ಹೊರಿಸಿದರು ಭಾರ ಎನಿಸಲಿಲ್ಲ ಏಕೆ?


ದೇವತೆಗಳು ಭಕ್ತಿಯಿಂದ ಬೆಟ್ಟವನ್ನು ಭಗವಂತನ ಮೇಲೆ ಹೊರಿಸಿದ್ದರಿಂದ ಭಾರವೆನಿಸಲಿಲ್ಲ*

16. ನಾವು ಭಾರ ನೀಡಿದರು ಹರಿ____ ನೀಡುವ.


*ಅಮೃತ*
💠💠💠💠💠💠💠💠💠💠💠💠💠💠💠
* ಕರುಣಾಸಂಧಿಯ..29ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*

1. ಈ ನುಡಿಯಲ್ಲಿ ದಾಸರು ಹರಿಯನ್ನು ಸ್ತುತಿಸುವಾಗ ಮುಖ್ಯವಾಗಿ ಏನು


ಇರಬೇಕೆಂದು ಸೂಚಿಸಿದ್ದಾರೆ?
*ಸಾದರ ಮತ್ತು ನಂಬಿಕೆ*

2. ಚಿನ್ಮಯ ಪದದ ಅರ್ಥ ತಿಳಿಸಿ.


*ಜ್ಞಾನಪೂರ್ಣ*

3. ಪರಮಾತ್ಮನಿಗೆ ಯಾವ ಯಾವ ದೋಷಗಳಿಲ್ಲ?


*ಸುಖದುಃಖ, ಜಯ ಅಪಜಯ ಮೊದಲಾದ ದೋಷಗಳಿಲ್ಲ*

4. ೨೯ ನೇ ನುಡಿಯಲ್ಲಿ ದಾಸರು ಯಾವ ಪುಷ್ಪದ ಸಮರ್ಪಣೆ ಹರಿಗೆ ಅತ್ಯಂತ ಪ್ರೀತಿಕರ ಎಂದು ತಿಳಿಸಿದ್ದಾರೆ?
*ಕ್ಷಮಾಪುಷ್ಪದ ಸಮರ್ಪಣೆ*

5. ಕರುಣ ಮಹೋದಧಿ ಯಾರು?


*ಶ್ರೀಹರಿ*

6. ಯಾರು ಮಾಡಿದ ಅಪರಾಧಗಳ ನೋಡದಲೆ ಸಲಹುವನು ಪರಮಾತ್ಮ?


*ಯಾವ ಭಕ್ತರು ತನ್ನನ್ನು ಸಾದರದಿಂದ, ಧೃಢವಾದ ನಂಬಿಕೆಯಿಂದ, ಭಕ್ತಿಯಿಂದ ಸ್ಮರಿಸುತ್ತಾರೋ ಅಂಥಾ ಭಕ್ತರ
ಅಪರಾಧಗಳನ್ನು ನೋಡದಲೆ ಸಲಹುವನು ಪರಮಾತ್ಮ*

7. ಹರಿಗೆ ಪ್ರಾಕೃತವಾದ ಸುಖವಾಗಲಿ ಜಯವಾಗಲಿ ಇಲ್ಲ ಏಕೆ?


*ಏಕೆಂದರೆ ಭಗವಂತ ಅಪ್ರಾಕೃತನಾಗಿದ್ದಾನೆ*

8. ಭಾವ ಪುಷ್ಪಗಳು ಎಷ್ಟು?


*ಎಂಟು*

💠💠💠💠💠💠💠💠💠💠💠💠💠💠💠
*ಕರುಣಾಸಂಧಿಯ..30ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*

1. ಯಾವ ಯಾವ ಮನ್ವಂತರದಲ್ಲಿ ಮತ್ಸಾವತಾರವಾಯಿತು?


*ವೈವಸ್ವತ ಮನ್ವಂತರ ಮತ್ತು ಚಾಕ್ಷುಷ ಮನ್ವಂತರ*

2. ಯಾವ ಯಾವ ಮನುವಿಗಾಗಿ ಮತ್ಸ್ಯಾವತಾರವಾಯಿತು?


*ವೈವಸ್ವತ ಮನು ಮತ್ತು ಸತ್ಯವ್ರತನಿಗಾಗಿ*

3. ವೇದಗಳನ್ನು ಅಪಹರಿಸಿದ ಅಸುರನಾರು?


*ಹಯಗ್ರೀವಾಸುರ*

4. ಒಟ್ಟು ಎಷ್ಟು ಬಾರಿ ಮತ್ಸ್ಯಾವತಾರವಾಗಿದೆ?


*ಎರಡು ಬಾರಿ*

5. ನಿರಂತರವಾಗಿ ಬ್ರಹ್ಮಾಂಡವನ್ನು ಹೊತ್ತವರು ಯಾರು?


*ಶೇಷದೇವರು*

6. ಶೇಷನನ್ನು ಹೊತ್ತವರು ಮತ್ತು ವಾಯು ಕೂರ್ಮನನ್ನು ಹೊತ್ತವರು ಯಾರು?


*ಶೇಷನನ್ನು ಹೊತ್ತವರು ವಾಯುಕೂರ್ಮ ಹಾಗೂ ವಾಯುಕೂರ್ಮನನ್ನು ಹೊತ್ತವರು ವಿಷ್ಣುಕೂರ್ಮ*

7. ಕೂರ್ಮಾವತಾರ ಆದದ್ದು ಯಾವಾಗ?


*ಸಮುದ್ರಮಥನ ಕಾಲದಲ್ಲಿ*

8. ರೈವತ ಮನ್ವಂತರದಲ್ಲಿ ಇಂದ್ರನಾದವನು ಯಾರು?


*ದಸ್ರನೆಂಬ ಅಶ್ವಿನಿ ದೇವತೆ*

9. ಪುರಂದರ ಇಂದ್ರನಾದದ್ದು ಯಾವ ಮನ್ವಂತರದಲ್ಲಿ?


*ವೈವಸ್ವತ ಮನ್ವಂತರದಲ್ಲಿ*

10. ಯಾವ ಮನ್ವಂತರದಲ್ಲಿ ಸಮುದ್ರ ಮಥನವಾಗಿದೆ?


*ರೈವತ ಮತ್ತು ವೈವಸ್ವತ ಮನ್ವಂತರದಲ್ಲಿ*

11. ಒಟ್ಟು ಹಿರಣ್ಯಾಕ್ಷರು ಎಷ್ಟು ಜನ?


*ಇಬ್ಬರು*

12. ಆದಿ ಹಿರಣ್ಯಾಕ್ಷನ ತಂದೆ ಯಾರು? ಈತನನ್ನು ಸಂಹರಿಸಿದವರು ಯಾರು?


*ಬ್ರಹ್ಮದೇವರು.. /.. ಶ್ವೇತವರಾಹರೂಪಿ ಭಗವಂತ*

13. ಹಿರಣ್ಯಾಕ್ಷನು ಯಾರ ಪುತ್ರ? ಇವನನ್ನು ಭಗವಂತ ಯಾವ ರೂಪದಿಂದ ಸಂಹರಿಸಿದ?


*ದಿತಿದೇವಿಯ ಪುತ್ರ.. /.. ನೀಲವರಾಹರೂಪಿ ಭಗವಂತ*

14. ರೇಣುಕಾಆತ್ಮಜ ಎಂದರೆ ಯಾರು? ಈತನ ತಾಯಿ ಯಾರು?


*ರೇಣುಕಾ : ಜಮದಗ್ನಿ ಋಷಿಗಳ ಪತ್ನಿ*
*ಆತ್ಮಜ : ಮಗ*
*ರೇಣುಕಾದೇವಿಯ ಮಗನಾದ ಪರಶುರಾಮ ದೇವರು (ಭಾರ್ಗವ)*

15. ದಸ್ರ ಇವನು ಯಾವ ದೇವತೆ?


*ಅಶ್ವಿನಿ ದೇವತೆ*

16. ಕತ್ತೆಯ ರೂಪದಲ್ಲಿದ್ದ ಅಸುರ ಯಾರು? ಇವನು ಯಾವ ವನದಲ್ಲಿ ವಾಸವಾಗಿದ್ದ?


*ಧೇನುಕಾಸುರ.. /.. ತಾಳೆಯ ವನದಲ್ಲಿ*

17. ತಾರಕಾಸುರನ ಮಕ್ಕಳು ಎಷ್ಟು? ಯಾರು?


*ಮೂರು ../ ..ತಾರಕ್ಷ, ಕಮಲಾಕ್ಷ, ವಿದ್ಯುನ್ಮಾಲಿ*

18. ಧೇನುಕಾಸುರನನ್ನು ಸಂಹರಿಸಿದವರಾರು?


*ಶುಕ್ಲ ಕೇಶ ರೂಪದಿಂದ ಬಲರಾಮ ನಲ್ಲಿದ್ದು ಕೃಷ್ಣನು ಸಂಹರಿಸಿದ.*

19. ಬಲರಾಮನಲ್ಲಿ ಪರಮಾತ್ಮನು ಯಾವ ರೂಪದಿಂದ ಇದ್ದನು?


*ಶುಕ್ಲ ಕೇಶ ರೂಪದಿಂದ*

20. ತ್ರಿಪುರವನ್ನು ಹಾನಿಗೈಸಿದವರು ಯಾರು?


*ಬುದ್ಧರೂಪಿಯಾದ ಪರಮಾತ್ಮ*
21. ತ್ರಿಪುರನ ಪತ್ನಿಯರ ಪಾತಿವ್ರತ್ಯವನ್ನು ಕೆಡಿಸಿದವರು ಯಾರು?
*ಬುದ್ದರೂಪಿ ಭಗವಂತ*

22. ಶಿವನನ್ನು ಎತ್ತಿನ ರೂಪದಲ್ಲಿ ಹೊತ್ತವರು ಯಾರು? ಈತನ ಅಸ್ತ್ರ ಯಾವುದು? ಈ ಅಸ್ತ್ರದಲ್ಲಿ ಇದ್ದವರು ಯಾರು?
*ಬುದ್ದರೂಪಿ ಪರಮಾತ್ಮ* / *ಅಘೋರಾಸ್ತ್ರ* / *ಪರಮಾತ್ಮ*

23. ತಾರಕಾಸುರನ ಸಂಹಾರ ಎಂದು ಆಯಿತು?


*ಕಾರ್ತಿಕ ಹುಣ್ಣಿಮೆಯಂದು*

24. ತಾರಕಾಸುರನ ಮಕ್ಕಳು ಎಂತಹ ಪಟ್ಟಣಗಳನ್ನು ಕಟ್ಟಿಕೊಂಡಿದ್ದರು?


*ಬಂಗಾರ, ಬೆಳ್ಳಿ ಹಾಗೂ ಕಬ್ಬಿಣದ ಪಟ್ಟಣಗಳನ್ನು*

25. ಈ ಪದ್ಯದಲ್ಲಿ ದಾಸರು ಹರಿಯ ಎಷ್ಟು ಅವತಾರಗಳನ್ನು ಸ್ಮರಿಸಿದ್ದಾರೆ? ಅವು ಯಾವವು?


*ದಶಾವತಾರ.... ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ಬುದ್ಧ, ಹಾಗೂ
ಕಲ್ಕಿ*

26. ಪಂಚಾನನ ಎಂದರೆ ಯಾರು?


*ವಿಸ್ತಾರವಾದ ಮುಖವುಳ್ಳ ಸಿಂಹ (ನರಸಿಂಹದೇವರು)*

💠💠💠💠💠💠💠💠💠💠💠💠💠💠💠
*ಕರುಣಾಸಂಧಿಯ..26ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*

1. "ಶರ್ಕರಾಕ್ಷ ಸಖ" ಪದಕ್ಕೆ ಇರುವ ಅರ್ಥ ತಿಳಿಸಿ.


*ಶರ್ಕರ: ಸಕ್ಕರೆ/ಸೂಕ್ಷ್ಮ*
*ಅಕ್ಷ : ಕಣ್ಣು*
*ಶರ್ಕರಾಕ್ಷ ಅಂದರೆ ಸೂಕ್ಮಗ್ರಾಹಿ..ಸೂಕ್ಷ್ಮಜ್ಞಾನಿಗಳು*....*ಸ್ಥೂಲ ವಿಚಾರಕ್ಕೆ ತೃಪ್ತರಾಗದೆ ಸೂಕ್ಷ್ಮ ವಿಷಯಗಳನ್ನು
ತಿಳಿಯುವವರಿಗೆ ಗೆಳೆಯನಾದವ*
*ಅಥವಾ ಶರ್ಕರಾಕ್ಷ ಮುನಿಗೆ ಗೆಳೆಯನಾದವ*

2. ಶರ್ಕರಾಕ್ಷಮುನಿ ಯಾವ ಭಾಷ್ಯದಲ್ಲಿ ಬರುತ್ತಾನೆ?


*ಛಾಂದೋಗ್ಯ ಭಾಷೆಯಲ್ಲಿ*

3. ಪರಮಾತ್ಮನಿಗೆ ಕೈರವದಳದಂತೆ ಶ್ಯಾಮವರ್ಣ ರೂಪವುಂಟು ಎಂದು ತಿಳಿಸಿದ ಭಾಷ್ಯ ಯಾವುದು?


*ಛಾoದೋಗ್ಯ ಭಾಷೆಯಲ್ಲಿ*

4. ಶಬಲ ರೂಪ ಯಾವುದು?


*ನಾನಾ ಬಣ್ಣಗಳಿಂದ ಕೂಡಿದ ಅಥವಾ ವಿಶ್ವರೂಪದ ರೂಪವೇ ಶಬಲ ರೂಪ*

5. ಈ ಪದ್ಯದಲ್ಲಿ ದಾಸರು ತಿಳಿಸಿದ ವಿಶೇಷಣಗಳು ಎಷ್ಟು


*ಹತ್ತು ವಿಶೇಷಣಗಳು*

💠💠💠💠💠💠💠💠💠💠💠💠💠💠💠

You might also like