You are on page 1of 5

ವೇದಕ್ಕೂ ವಾದಕ್ಕೂ ಇರುವ

ಸಂಬಂಧವೇನು?
ವೇದಗಳ ಕುರಿತಂತೆ
"ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್.
ನ ಬ್ರೂಯಾತ್ ಸತ್ಯಮಪ್ರಿಯಮ್"
ಎಂದು ಸುಮ್ಮನಿರೋಣವೇ?
ಅಥವಾ ಮೊದಲು ಬೆಲ್ಲದಿಂದ ಪ್ರಾರಂಭಿಸಿ
ನಂತರ ಬೇವಿಗೆ ಹೋಗೋಣವೆ?
ವೇದಕ್ಕೂ ವಾದಕ್ಕೂ ಇರುವ
ಸಂಬಂಧವೇನು?
1. ವೇದದ ಮೊದಲ ಮೂರುಭಾಗಗಳಿಗೆ
ಕರ್ಮಕಾಂಡವೆಂತಲೂ,
ಉಪನಿಷತ್ತಿಗೆ ಜ್ಞಾನ ಕಾಂಡವೆಂತಲೂ ಹೆಸರಿದೆ.
2. ವೇದಕ್ಕೂ ನಾಲ್ಕು ಸ್ಕಂದಗಳಿವೆ (ಭಾಗ).
ಸಂಹಿತೆ, ಬ್ರಾಹ್ಮಣ, ಆರಣ್ಯಕ, ಉಪನಿಷತ್ತು.
* ಸಂಹಿತೆಗಳು ಮಂತ್ರ ಭಾಗ
* ಬ್ರಾಹ್ಮಣಗಳು ಯಜ್ಞ ಕ್ರಮ ಹೇಳುವವು,
* ಆರಣ್ಯಕಗಳಲ್ಲಿ ಯಾಗ ವಿಧಾನ, ಅಧ್ಯಾತ್ಮಿಕ ವಿಚಾರ,
3. ಉಪನಿಷತ್ (ಬ್ರಹ್ಮ -ಮೂಲ ಚೈತನ್ಯ ವಿಚಾರ)
ಚರ್ಚೆಗೆ ಮುಖ್ಯವಾದುದು.
ಸ್ಮೃತಿ ಮತ್ತು ಶೃತಿ
 ಸತ್ಯಂ ಬ್ರೂಯಾತ ಪ್ರಿಯಂ ಬ್ರೂಯಾತ್| ನಬ್ರೂಯಾತ್
ಸತ್ಯಮಪ್ರಿಯಂ||
 ಪ್ರಿಯಂ ಚ ನಾನೃತಮ್ ಬ್ರೂಯಾತ್|
ಏಷ ಧರ್ಮಃ ಸನಾತನಃ ||
 ಸತ್ಯವನ್ನು ನುಡಿಯಬೇಕು, ಪ್ರಿಯವಾದ ಸತ್ಯವನ್ನು ಹೇಳಬೇಕು. ಅಪ್ರಿಯವಾದ,
ಎಂದರೆ ಪರರ ಮನಸ್ಸಿಗೆ ಅಥವಾ ಪರರಿಗೆ ಕೆಡುಕಾಗಬಹುದಾದ ನೋವುಂಟು
ಮಾಡುವ ಸತ್ಯವನ್ನು ಹೇಳಬೇಡ.
ಬೇರೆಯವರಿಗೆ ಅಥವಾ ಇತರರಿಗೆ ಸಂತೋಷವಾಗುವುದೆಂದು ಅಥವಾ
ಅನುಕೂಲವಾಗುವುದೆಂದು ಸುಳ್ಳನ್ನು ನುಡಿಯಬೇಡ.
ಇದೇ ಸನಾತನವಾದ ಶಾಶ್ವತವಾದ ಬಹುಕಾಲದಿಂದ ಒಪ್ಪಿತವಾದ ಧರ್ಮ.
- ಮನುಸ್ಮೃತಿ 4.138
 ಸತ್ಯಂ ವದ | ಧರ್ಮಮ್ ಚರ |
-ತೈತ್ತಿರೀಯೋಪನಿಷತ್
ಉಪನಿಷತ್ ಮತ್ತು ಶೃತಿ
The words “Satyameva Jayate” from Mundaka Upanishad,
meaning 'Truth Alone Triumphs'.
 "ಸತ್ಯಮೇವ ಜಯತೆ" ಎನ್ನುತ್ತದೆ ಮುಂಡಕ ಉಪನಿಷತ್.
ಇದಕ್ಕೇನಾದರೂ ದೈತ, ಅದ್ವೈತ, ವಿಶಿಶ್ಟಾದ್ವೈತದ ಬ್ರಾಹ್ಮಣರಲ್ಲಿ
ಭೇದವಿದೆಯೇ?
 "ಏಕಂ ಸದ್ ವಿಪ್ರಾಹ ಬಹುದಾ ವದಂತಿ" ಎನ್ನುತ್ತದೆ ಋಗ್ವೇದ.
ಏಕಂ + ಸತ್ +ವಿಪ್ರಾ: + ಬಹುದಾ + ವದಂತಿ.
ಒಂದೇ ಸತ್ಯವನ್ನು ಬ್ರಾಹ್ಮಣರು ಬೇರೆ ಬೇರೆ ರೀತಿ ಹೇಳುತ್ತಾರೆ ಎನ್ನುವುದು
ಅರ್ಥ.
 ಯಾವ, ಯಾವ ಬ್ರಾಹ್ಮಣರು?
ದೈತ, ವಿಶಿಶ್ಟಾದ್ವೈತ, ಅದ್ವೈತ ದ ಬ್ರಾಹ್ಮಣರು ಎನ್ನುವುದಕ್ಕೆ ಆಕ್ಷೇಪ
ಇದೆಯೇ?
 ಈ ಚರ್ಚೆಯಲ್ಲಿ ದುಃಖ ಉಂಟಾಗುತ್ತಿರುವುದು ಸುಳ್ಳೇ?
ದುಃಖ ಹೆಚ್ಚುತ್ತಿರುವುದು ಸುಳ್ಳೆ?
ಇದಕ್ಕೆ ನಿವಾರಣೋಪಾಯವೇ ಇಲ್ಲವೆ?
ಇರುವುದಾದರೆ ಆ ಮಾರ್ಗವಾದರೂ ಯಾವುದು?
ಸ್ಮೃತಿ, ಶೃತಿ ಮತ್ತು ಉಪನಿಷತ್
 ಹಾಗಾದರೆ ಚರ್ಚೆಯಲ್ಲಿ ಸಮಸ್ಯೆ ಉಳಿದಿರುವುದು ಏಕೆ?
 ಸಮಸ್ಯೆ ಇರುವುದು
"ನಬ್ರೂಯಾತ್ ಸತ್ಯಮಪ್ರಿಯಂ“,
“ಪ್ರಿಯಂ ಚ ನಾನೃತಮ್ ಬ್ರೂಯಾತ್|” ಮತ್ತು
"ಸತ್ಯಂ ವದ | ಧರ್ಮಮ್ ಚರ |”
ವಾಕ್ಯಗಳ ನಡುವಿನ "ಧರ್ಮ ಸೂಕ್ಷ್ಮ"ವನ್ನು ಅರಿತು ಆಚರಿಸುವುದರಲ್ಲಿ.
 ಇಲ್ಲಿ "ಸತ್ಯವನ್ನು ತಿಳಿಯುವುದಕ್ಕೆ ಇರುವ ಅವಕಾಶವನ್ನು ಹಾಳುಮಾಡು"
ಎಂದು ಹೇಳಿಲ್ಲ. "ಮನವರಿಕೆ ಮಾಡಿಸುವುದು" ಬೇಡ ಎಂದು ಹೇಳಿಲ್ಲ.
"ಸತ್ಯವನ್ನು ತಿಳಿಯಬೇಡ" ಎಂದು ಹೇಳಿಲ್ಲ.
 ಈಗ ಚರ್ಚೆ ಇರುವುದು ತಿಳಿದುಕೊಳ್ಳಬೇಕಾದವರ ಅರಿವಿನ ಸಾಮರ್ಥ್ಯ
ಮತ್ತು ತಿಳಿದುಕೊಳ್ಳಬೇಕಾದವರು ಅಪಾರ್ಥ ಮಾಡಿಕೊಂಡಲ್ಲಿ ಆಗಬಹುದಾದ
ಅನಾಹುತದ ಬಗ್ಗೆ ಇರುವ ಆತಂಕದಿಂದ.

You might also like