You are on page 1of 5

ವೈಶಂಪಾಯನ ಗಿಳಿ

ಕಾವ್ಯದ ಭಾವಾರ್ಥ:

ವ|| ಅಂತು ನುಡಿದ-ವೈಶಂಪಾಯನನಂ ನರೇಂದ್ರನಿಂತಂದಂ


ಭಾವಾರ್ಥ : ತನ್ನ ಜನ್ಮವೃತ್ತಾಂತವನ್ನು ವೈಶಂಪಾಯನ ಗಿಳಿಯು ಶೂದ್ರಕ
ರಾಜನಿಗೆ ಹೇಳಲಾಗಿ
ನಿನ್ನಯ ದೇಶದತ್ತಣದು ಪುಟ್ಟದೆಯಂತಭಿಧಾನಮಾವನಿಂ
ದಂ ನಿನಗಾಯ್ತು ದೇದನಿವಹ ಸೃತಿ ಶಾಸ್ತ್ರ ಕಳಾಕಳಾಪ ಸಂ
ಪನ್ನತೆಯಂತು ಬಂದುದು ಭವಸೃತಿ ಪುಟ್ಟ ಮೇಣ್ ವರಪ್ರಸಾ
ದೋನ್ನತಿಯಾದುದೊ ಮನಿಸಲೆಂದು ವಿಹಂಗಮವೇಷಿಯಾದೆಯೊ

ಭಾವಾರ್ಥ : ಶೂದ್ರಕ ರಾಜನ ಆಸ್ಥಾನಕ್ಕೆ ಬಂದ ಚಂಡಾಲಕನೆ ರಾಜನಿಗೆ


ಕಾಣಿಕೆಯಾಗಿ ಕೊಡಲೆಂದೇ ಗಿಳಿಯೊಂದನ್ನು ತಂದು, ಅದರ ವಿಶೇಷತೆಯನ್ನು
ಹೇಳಿ ಅದನ್ನು ಪಂಜರದಿಂದ ಹೊರಬಿಡಲು, ಹೊರಬಂದ ಗಿಳಿ ವೇದಶಾಸ್ತ್ರ
ಪುರಾಣಗಳನ್ನೂ ಸಂಗೀತ ಸಾಹಿತ್ಯಾದಿ ಕಲೆಗಳನ್ನೂ ಬಲ್ಲುದೆಂದು ಶೂದ್ರಕ
ರಾಜನು ತಿಳಿಯಲಾಗಿ ಅದರ ಬಗೆಗೆ ವಿಶೇಷ ಆಸಕ್ತಿಯನ್ನು ತಾಳಿದ ಆತನು.
ನಿನ್ನಯ ದೇಶ ಯಾವುದು, ನೀನು ಹುಟ್ಟಿದ್ದು ಎಲ್ಲಿ? ಈ ರೀತಿಯ ಸಂಸ್ಕಾರ
ನಿನಗೆ ದೊರೆತದ್ದಾದರೂ ಹೇಗೆ? ವೇದಗಳನ್ನು ಪಠಿಸುವುದು ಸೃತಿ, ಶಾಸ್ತ್ರ
ವಿವಿಧ ಕಲೆಗಳ ಈ ಸಂಪನ್ನ ಗುಣ ನಿನಗೆ ಬಂದಿದ್ದಾದರೂ ಹೇಗೆ, ಈ
ಭೂಮಿಯ ಪುಣ್ಯದಿಂದ ನೀನು ಹುಟ್ಟಿದೆಯೋ ಅಥವಾ ಯಾರದೋ
ವರಪ್ರಸಾದದಿಂದ ಹುಟ್ಟಿದ ನಿನಗೆ ಈ ಸಂಸ್ಕಾರ ಬಂದಿತೋ ಹೀಗೆ ವಿವಿಧ
ರೀತಿಯಿಂದ ಶೂದ್ರಕ ರಾಜ ಪ್ರಶ್ನಿಸಲಾರಂಭಿಸಿದೆ,

ದೊರೆಕೊಂಡೆಯಂತು ಮುಂ ಪಂ
ಜರಬಂಧನವಾದುದೆಂತು ನಿನಗೀ ಚಂಡಾ
లల ಸಂಗತಿಯೆಂತಿಲ್ಲಿಗೆ

ಬರವಾಯತ್ತೆಂತು ಪೇಟೆದೆಲ್ಲಮನೀಗಲ್

ಶೂದ್ರಕ ರಾಜನಿಗೆ ಈ ಗಿಳಿಯ ವೃತ್ತಾಂತವನ್ನು ಕೇಳುವ ಹಂಬಲ.


ಕೆಲವೊಮ್ಮೆ ನಮ್ಮ ಮನಸ್ಸಿಗೆ ಹಿತವಾಗುವ, ಖುಷಿ ಕೊಡುವ ವ್ಯಕ್ತಿಗಳನ್ನಾಗಲಿ,
ಪ್ರಾಣಿ, ಪಕ್ಷಿಗಳನ್ನಾಗಲಿ ಕಂಡಾಗ ಅವರ ಸ್ಥಿತಿಗತಿಗಳನ್ನು ಕೇಳುವ, ತಿಳಿದು
ಕೊಳ್ಳುವ ಬಯಕೆ ಸಹಜವಾದದ್ದು, ಅದರಂತೆ ತನ್ನ ವಿಶಿಷ್ಟ ನಡವಳಿಕೆ
ಯಿಂದ ತನ್ನ ಮನಸ್ಸನ್ನು ಆಕರ್ಷಿದ ಗಿಳಿಯನ್ನು ಕುಳಿತಂತೆ ಪ್ರಶ್ನಿಸುತ್ತಾ
ಅದರ ಬಗೆಗೆ ಮತ್ತಷ್ಟು ಮಾಹಿತಿ ಪಡೆಯಲು ಮುಂದಾಗುತ್ತಾನೆ.
ಅಂದ ಹಾಗೆ ನಿನ್ನಂಥ ಸುಸಂಸ್ಕೃತ ಗಿಳಿಗೆ ಈ ಚಂಡಾಲಕನೈಯೊಡನೆ
ಜೊತೆಯಾಗಲಿ, ಈ ಪಂಜರದಲ್ಲಿ ನಿನ್ನನ್ನು ಬಂಧಿಸಿರುವುದಾಗಲಿ, ನಿನ್ನನ್ನು
ಇಲ್ಲಿಗೆ ಕರೆತಂದ ಸಂಗತಿಯನ್ನಾಗಲಿ ತನಗೆ ನೀನು ತಿಳಿಯಹೇಳೆಂದು ಶೂದ್ರಕ
ರಾಜ ಗಿಳಿಯನ್ನು ಪ್ರಶ್ನಿಸಿ ಅದರಿಂದ ಮಾಹಿತಿಪಡೆಯಲು ಮುಂದಾದ.

ಎಂದು ಬೆಸಗೊಳೆ ವೈಶಂಪಾಯನಾಭಿದಾನಶುಕಂ ಪೇಅಲ್ಲಗುತ್ತು


ದದೆಂತೆನೆ ಭೂದೇವಿಯ ರುಚಿರಕಸೂತ್ರವೆಂಬಂತೆವೋಲೊಪ್ಪಂಭತ್ತ ವಿಂಧ್ಯಾ
ಚಳದ ಬೇರಡವಿಯೊಳ್ ಪೆಂಪುವಡೆಗುಂ ಗುಂದೆ ಪಂಪಾಸರಂ

ಭಾವಾರ್ಥ : ಶೂದ್ರಕರಾಜನು ವೈಶಂಪಾಯನ ಗಿಳಿಯನ್ನು ಕೇಳಲಾಗಿ


ಆ ರಾಜನ ಮಾತಿಗೆ ಮಾನ್ಯತೆ ಕೊಟ್ಟು ತನ್ನ ಮಾತನ್ನು ಆರಂಭಿಸಿತು.
ಭೂದೇವಿಗೆ ಸುಂದವರಾದ ಡಾಭಿನಂತೆ ಕಂಗೊಳಿಸುತ್ತಿರುವ (ಸೊಂಟದ
ಪಟ್ಟಿ) ವಿಂಧ್ಯಾಚಲವೆಂಬ ಭಯಂಕರವಾದ ಅಡವಿಯ ಮಧ್ಯೆ ಪಂಪಾಸರೋವರ
ಎಂಬ ಹೆಸರಿಗೆ ತಕ್ಕಂತೆ, ತನ್ನ ಶುಭ್ರತೆಯಿಂದ ನೋಡುಗರಿಗೆ
ಆಕರ್ಷಿಸುವಂತಿತ್ತು.
ವ!! ಅದು ಪಡುವಣ ತಡಿಯೊಳ್ ದಶರಥ ಸುತನ ಶರಪ್ರಹಾರ
ಜರ್ಜರಿತಮಪ್ಪ ತಾಳತರುಷಂಡಸಮೀಪದೊಳ್
- ಪಂಪಾ ಸರೋವರ ಪಶ್ಚಿಮ ದಡದಲ್ಲಿ ದಶರಥನ ಮಗನಾದ ಶ್ರೀರಾಮನ
ಬಾಣಗಳ ಹೊಡೆತಕ್ಕೆ ಜರ್ಜರಿತವಾದಂತೆ, ತಾಳಮರಗಳ ಸಮೂಹ ಅಲ್ಲಿ
ಗೋಚರವಾಗುತ್ತಿತ್ತು.
ಮರಗಟ್ಟೆಂಬಂತೆ ಸುತ್ತುಂ ಮೊದಲೊಳಗರಂ ಸುತ್ತೆ ದಿಕ್ಷಕ್ರವಾಳಾಂ
ತರಮಂ ನೋಡಿ ನೀಳಂತಿರೆ ಬೆಳೆದ ಮಹಾಶಾಖೆಗಳ ತಾಂಡವಾಡಂ
ಬರದೊಳ್ ನಾನಾವಿಧಂ ನರ್ತಿಪ ನಟನ ಭುಜಾದಂಡವೋ
ತಿರಮೇಯಸ್ಕಂಧಮುಂ ಸಂಧಿಸೆ ಜರಠ ಮಹಾಶಾಲ್ಮಲೀವೃಕ್ಷಮಿರ್ಕು೦
ಭಾವಾರ್ಥ : ತಾಳ ಮರಗಳ ಹಿರಿಮೆಯನ್ನು ಕೊಂಡಾಡಲಾಗಿದ.
ಶಾಲ್ಮಲೀ ಮರಕ್ಕೆ ಶಕ್ತಿಯನ್ನು ನೀಡುವಂತೆ ಅದರ ಕೊಂಬೆಗಳು ದಿಕ್ಕು ದಿಕ್ಕಿಗೆ
ಸಟೆದು ನಿಂತಿದ್ದು, ಅವು ನಟರಾಜನ ತಾಂಡವ ನೃತ್ಯದಲ್ಲಿ ವಿವಿಧ ಭಂಗಿಯಲ್ಲಿ
ನರ್ತಿಸುವ ಬಾಹುದಂಡಗಳ ಹೆಗಲಿನಂತೆ ಆ ಮಹಾವೃಕ್ಷ ಗೋಚರಿಸುತ್ತಿತ್ತು.
ವ ಮತ್ತಮದು ವಿಂಧ್ಯಾಚಳಸೋದರಮುಂ ದಂಡಕಾರುಣ್ಯದಧಿಪತಿಯುಂ
ವನಸ್ಪತಿಗಳ ನಾಯಕನುಮೆನಿಸಿತದಲ್ಲೂ
ವಿಂದ್ಯಾಚಲ ಬೆಟ್ಟದ ಸೋದರೆನುವಂತ ದಂಡಕಾರುಣ್ಯದ ಆ ಆಟವಿಯಲ್ಲಿ
ವನಸ್ಪತಿಗಳ ರಾಜನೆಂಬಂತೆ ಆ ವನಸ್ಪತಿಗಳಿಗೆ ಆಶ್ರಯ ತಾಣವಾಗಿತ್ತು.
ತಳಿರ್ಗಳಿಚಂಬಿನಲ್ಲಿ ತುದಿಗೊಡ ಮೊದಲ್ಗಳ ತಾಣದಲ್ಲಿ ನಾ
ರ್ಗಳ ಪೊರೆಯಲ್ಲಿ ಪೋಕಳೆಡಯಲ್ಲಿ ಕವಣೆಯಲ್ಲಿ ಸುತ್ತಲು
ಗಿಳಿಗಳ ಹಿಂಡುಗಳ ನೆರೆದು ಕೂಡಿಯುವಲ್ಲಿ ಸಹಸ್ರಮುಂ ನಿರಾ
ಕುಳಮನುರಾಗದಿಂ ಪಲವು ದೇಶದೊಳಿರ್ಪುವು ಬಂದು ಭೂಪತೀ |
ಯಾವುದೇ ವೃಕ್ಷದ ಸಾರ್ಥಕತೆ ಅದರ ವಿವಿಧ ರೀತಿಯಿಂದಾಗಬಹುದು.
ಕೆಲವು ವೃಕ್ಷಗಳು ಹಣ್ಣು, ಕಾಯಿ, ನೆರಳನ್ನು ನೀಡಿ ತಮ್ಮನ್ನು ಸಾರ್ಥಕ
ಗೊಳಿಸಿಕೊಂಡರೆ, ಇನ್ನು ಕೆಲವು ವೃಕ್ಷಗಳು ವಿವಿಧ ಜಾತಿಯ ಪಕ್ಷಿ ವೃಂದಕ್ಕೆ
ಆಶ್ರಯವಿಟ್ಟು ತಮ್ಮ ಜನ್ಮ ಪಾವನಗೊಳಿಸಿಕೊಳ್ಳುತ್ತವೆ.
- ಅದರಂತೆ ಶಾಲ್ಮಲೀ ವೃಕ್ಷವು ಅಸಂಖ್ಯಾತ ಪಕ್ಷಿಗಳಿಗೆ ಆಶ್ರಯತಾಣವಾಗಿತ್ತು.
ಚಿಗುರಿರುವಂಥಾ ಆ ಮರದ ತುದಿ, ಕೊನೆ ಎಂಬುವ ಭೇದವಿಲ್ಲದಂತೆ
ಕೊಂಬೆಗಳ ನಡುನಡುವೆ ಸಾಕಷ್ಟು ಪಕ್ಷಿಗಳು ವಾಸಿಸುತ್ತಿದ್ದವು. ಆ ಮರದ
ಪೊಟರೆ ಎಲೆಗಳ ಗೊಂಚಲಿನ ಮಧ್ಯೆ, ಕೊಂಬೆಗಳ ಸಂದು ಎಲ್ಲೆಂದರಲ್ಲಿ
ಬೇರೆ ಬೇರೆ ದೇಶಗಳಿಂದ ಬಂದ ವಿವಿಧ ಜಾತಿಯ, ವಿವಿಧ ಬಣ್ಣದ ಗಿಳಿಗಳು
ಯಾವುದೇ ಆತಂಕವಿಲ್ಲದೇ ಸಂತೋಷ-ಸಂಭ್ರಮದಿಂದ ಈ ವೃಕ್ಷದಲ್ಲಿ
ಆಶ್ರಯಪಡೆದಿದ್ದವು.

You might also like