You are on page 1of 4

ದಿನಾಂಕ:

ರವರಿಗೆ,
ಸನ್ಮಾನ್ಯ ಮುಖ್ಯ ಮಂತ್ರಿಗಳು,
ಕರ್ನಾಟಕ ಸರ್ಕಾರ,
ವಿಧಾನಸೌಧ, ಬೆಂಗಳೂರು-01.
ಮಾನ್ಯರೇ,
ವಿಷಯ:- “ರಾಷ್ಟ್ರೀಯ ಹೊರನಾಡು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ”ಕ್ಕೆ ಶುಭ
ಸಂದೇಶ ನೀಡಲು ಕೋರಿ.
ದಿನಾಂಕ:15..11.2023 ಸ್ಥಳ ಶ್ರೀ ಸಾಯಿ ಆಡಿಟೋರಿಯಂ ಲೋದಿ ರಸ್ತೆ,
ನವದೆಹಲಿ.

****
ಹಿರಿಯರಿಗೆ ಮಾತ್ರ ಮೀಸಲಾಗಿದ್ದ ಸಾಹಿತ್ಯ ಸಮ್ಮೇಳನಗಳು ಮಕ್ಕಳಿಗಾಗಿ ಏಕಿಲ್ಲ ಎಂಬ ವಿದ್ಯಾರ್ಥಿಗಳ
ಒಕ್ಕೊರಲಿನ ಧ್ವನಿಯ ಫಲವಾಗಿ ದಿನಾಂಕ 26-10-2013 ರಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಹಾಸನ ಜಿಲ್ಲೆಯ
ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಪರಿಸರವಾದಿ, ಮಕ್ಕಳ ಪ್ರೇಮಿ, ರಾಷ್ಟ್ರ ಪರಿಸರ ಪ್ರಶಸ್ತಿ ಪುರಸ್ಕೃತ ಶ್ರೀ ಚ. ನಂ. ಅಶೋಕ್
ಅವರ ಸಾರಥ್ಯದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ 10 ವರುಷ ಪೂರೈಸಿದ ಸಂದರ್ಭದಲ್ಲಿ
ದಶಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ.

ಕಳೆದ ಹತ್ತು ವರ್ಷಗಳಿಂದ ಕನ್ನಡ ನಾಡಿನ ಎಳೆಯ ಚೇತನಗಳಲ್ಲಿ ನಾಡು-ನುಡಿ, ನೆಲಜಲ, ಪರಿಸರ ಕಾಳಜಿ, ಮಾತೃ
ಭಾಷಾಪ್ರೇಮ, ಸಾಹಿತ್ಯಾಸಕ್ತಿ, ಸೃಜನಶೀಲ ಬರವಣಿಗೆ ಹಾಗೂ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಮಾನವೀಯ
ಮೌಲ್ಯಗಳನ್ನು ಬೆಳೆಸಿ ನಾಡಿನ ಮೂಲೆಮೂಲೆಯಲ್ಲೂ ವಿಶ್ವಮಾನವ ಸಂದೇಶವನ್ನು ಸಾರುತ್ತಿದೆ. ಮಕ್ಕಳಲ್ಲಿ ಹುದುಗಿರುವ
ಸುಪ್ತ ಪ್ರತಿಭೆಯನ್ನು ಹೊರತರಲು ನೂರಾರು ಕಾರ್ಯಕ್ರಮಗಳನ್ನು ರೂಪಿಸಿ, ಮಕ್ಕಳಿಗೆ ಚರ್ಚಾಸ್ಪರ್ಧೆ, ಆಶುಭಾಷಣ ಸ್ಪರ್ಧೆ,
ಪ್ರಬಂಧ ಸ್ಪರ್ಧೆ, ಸ್ಥಳದಲ್ಲೇ ಕವನ ರಚನೆ ಸ್ಪರ್ಧೆ, ಬೇಸಿಗೆ ಶಿಬಿರ, ಶಾಲೆಗಳಲ್ಲಿ ಸಂಸ್ಕಾರ-ಭಾರತಿ ಪರೀಕ್ಷೆ ಇನ್ನು ಹಲವಾರು
ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಇಷ್ಟೇ ಅಲ್ಲದೇ, ಮಕ್ಕಳಲ್ಲಿ ಸೃಜನಶೀಲ ಬರವಣಿಗೆ, ಸಾಹಿತ್ಯಾಭಿರುಚಿ ಬೆಳೆಸಿ
ಸಾರಸ್ವತ ಲೋಕಕ್ಕೆ ಬಾಲಸಾಹಿತಿಗಳನ್ನು ನೀಡುವ ಮಹದಾಸೆಯೊಂದಿಗೆ ನಾಡಿನ ಮೂಲೆಮೂಲೆಯಿಂದಲೂ 300 ಕ್ಕೂ
ಹೆಚ್ಚು ಆಸಕ್ತ ಮಕ್ಕಳನ್ನು ಸೇರಿಸಿ ನಡೆಸಿದ ಕಮ್ಮಟಗಳಲ್ಲಿ ಜಾನಪದ ಕಲೆ, ನಾಟಕ, ಸಾಹಿತ್ಯ ಮತ್ತು ಸಂಗೀತ ತರಬೇತಿ
ನೀಡಲಾಗಿದೆ. ಪ್ರತಿಭಾನ್ವಿತ ಮಕ್ಕಳು ರಚಿಸಿದ ಕವನ ಸಂಕಲನ ಪುಸ್ತಕಗಳನ್ನು ಪ್ರಕಟಿಸಿ ಪರಿಷತ್ತು ಬಿಡುಗಡೆ ಮಾಡಿದೆ.
ಪರಿಷತ್ತಿನ ವೇದಿಕೆಯಲ್ಲಿ ಅರಳಿದ ಅನೇಕ ಪ್ರತಿಭಾನ್ವಿತ ಮಕ್ಕಳು ಕೃತಿ ರಚಿಸಿ ಸಾರಸ್ವತ ಲೋಕಕ್ಕೆ ಬಾಲಸಾಹಿತಿಗಳಾಗಿ
ಹೊರಹೊಮ್ಮಿದ್ದಾರೆ.

ಪ್ರಥಮ ಬಾರಿಗೆ 2014 ರ ಫೆಬ್ರವರಿ 14 ರಂದು ಚನ್ನರಾಯಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಪ್ರಥಮ ಮಕ್ಕಳ ಸಾಹಿತ್ಯ
ಸಮ್ಮೇಳನ ನಡೆದು ಮೊದಲ ಕವಿಗೋಷ್ಠಿಯಲ್ಲಿ 80 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ದಾಖಲೆಯಾಗಿದೆ. ನಂತರ ಹೋಬಳಿ,
ತಾಲ್ಲೂಕು, ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳಗಳು ಆಯೋಜನೆಗೊಂಡಿವೆ. 2019 ರಲ್ಲಿ
ಹಾಸನ ಜಿಲ್ಲೆಯಲ್ಲಿ ಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನವು ನೂರಾರು ಮಕ್ಕಳ ಕಲಾತಂಡ,
ಜಾನಪದ ನೃತ್ಯ ವೈಭವಯುತವಾದ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ವಿಚಾರ ಸಂಕಿರಣ, ಸಂವಾದ, ಸಾಂಸ್ಕೃತಿಕ
ಕಾರ್ಯಕ್ರಮ, ನೆರೆದಿದ್ದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಕ್ಕಳು ಹಾಗೂ ಗಣ್ಯಾತಿಗಣ್ಯರು,

ಸಾಹಿತಿಗಳು, ಕನ್ನಡ ಸಹೃದಯ ಜನಸಾಗರದಿಂದ ಮರೆಯಲಾಗದ ಸವಿನೆನಪಿನ ಸಂಗೋಷ್ಠಿಯಾಗಿತ್ತು.

ಚನ್ನರಾಯಪಟ್ಟಣದಂತಹ ಚಿಕ್ಕ ತಾಲ್ಲೂಕಿನಲ್ಲಿ ಚಿಗುರೊಡೆದ ನಮ್ಮ ಮಕ್ಕಳ ಸಾಹಿತ್ಯ ಪರಿಷತ್ತು ಇಂದು ರಾಷ್ಟ್ರವ್ಯಾಪಿಯಾಗಿ
ದೆಹಲಿ, ಮಹಾರಾಷ್ಟ್ರ, ಪುಣೆ, ಗೋ ವಾ, ಕೇರಳದ ಕಾಸರಗೋಡು ಹಾಗೂ ರಾಜ್ಯದ 30 ಜಿಲ್ಲೆಗಳಲ್ಲಿ ಘಟಕ ಸ್ಥಾಪಿತಗೊಂಡು
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಾ ಮುನ್ನಡೆದಿದೆ. 2018 ರ ನವೆಂಬರ್ 28 ರಂದು ದೆಹಲಿ ಘಟಕ
ಸ್ಥಾಪಿತಗೊಂಡು ಐದು ವರುಷಗಳು ಪೂರೈಸಿದ್ದು, ದೆಹಲಿ ಹರಿಯಾಣದ ಗುರುಗ್ರಾಮ ಹಾಗೂ ರಾಜಸ್ಥಾನದ ಭಿವಾಡಿಯ
ಕನ್ನಡ ಮಕ್ಕಳಲ್ಲಿ ಸೃಜನಶೀಲ ಬರವಣಿಗೆ, ಸಾಹಿತ್ಯ, ಕಲೆ, ಸಂಸ್ಕಾರ, ಸಂಸ್ಕೃತಿಯನ್ನು ಬಿತ್ತುವ ಹತ್ತು ಹಲವು
ಕಾರ್ಯಯೋಜನೆಗಳನ್ನು ನಿರಂತರವಾಗಿ ರೂಪಿಸಿ, ವೈವಿದ್ಯಮಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜನೆ
ಮಾಡಿದೆ. ಈವರೆಗೂ ಹಲವಾರು ಚಿಣ್ಣರ ಕನ್ನಡ ಕಲರವ, ಚಿಣ್ಣರ ಅಂಗಳ, ಕವಿಗಳ ಸ್ಮರಣೆ, ಶೈಕ್ಷಣಿಕ-ಪರಿಸರ ಪ್ರವಾಸ,
ದೇಶ ಒಂದು ಭಾಷೆ ನೂರು, ಸಮ್ಮೇಳನ ಸವಿನೆನಪು, ನುಡಿ ಕನ್ನಡ-ನಡೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ಪುಸ್ತಕ
ವಂದನೆ, ಬಸವಣ್ಣ ಸ್ಮರಣೆ, ಕುವೆಂಪು ನುಡಿನಮನ, ಸೃಜನಶೀಲ ಕಾರ್ಯಾಗಾರ ಇನ್ನೂ ಹಲವಾರು ಕಾರ್ಯಕ್ರಮಗಳನ್ನು
ಯಶಸ್ವಿಯಾಗಿ ಏರ್ಪಡಿಸಿ ಕನ್ನಡೇತರ ಪ್ರದೇಶದ ಕನ್ನಡ ಮಕ್ಕಳಲ್ಲಿ ಮಾತೃ ಭಾಷಾಭಿಮಾನದ ಜೊತೆಗೆ ಸಾಹಿತ್ಯಾಸಕ್ತಿ
ಬೆಳೆಸಿ ಉತ್ತಮ ವ್ಯಕ್ತಿತ್ವ ರೂಪಿತಗೊಳ್ಳಲು ಸಹಕಾರಿಯಾಗಿದೆ.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಸಾರ್ಥಕ ದಶಮಾನೋತ್ಸವ ಆಚರಣೆ ಹಾಗೂ ದೆಹಲಿ ಘಟಕ ಆರಂಭಗೊಂಡು
ಯಶಸ್ವಿಯಾಗಿ ಐದು ವರುಷಗಳನ್ನು ಪೂರೈಸಿರುವ ಸಂದರ್ಭದ ಸಂಭ್ರಮಾಚರಣೆಯ ಅಂಗವಾಗಿ ನವದೆಹಲಿಯಲ್ಲಿ ಪ್ರಥಮ
ರಾಷ್ಟ್ರೀಯ ಹೊರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಮುಂಬರುವ ನವೆಂಬರ್ 15, 2023 ರಂದು ಜರುಗಲಿದ್ದು,
ಸಮ್ಮೇಳನಕ್ಕೆ ನಾಡಿನಿಂದ ನೂರಾರು ಪ್ರತಿಭಾನ್ವಿತ ಮಕ್ಕಳು, ಕನ್ನಡಿಗರು, ಬಾಲ ಕಲಾವಿದರು, ಪ್ರಸಿದ್ಧ ಸಾಹಿತಿಗಳು,
ಗಣ್ಯಾತಿಗಣ್ಯರು, ಪರಮ ಪೂಜ್ಯರು, ಪರಿಷತ್ತಿನ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಹಿಂದಿನ ಮಕ್ಕಳ ಸಾಹಿತ್ಯ ಸಮ್ಮೇಳನಗಳ
ಸಮ್ಮೇಳನಾಧ್ಯಕ್ಷರುಗಳು ಪಾಲ್ಗೊಳ್ಳುತ್ತಿದ್ದಾರೆ.

ಈ ಐತಿಹಾಸಿಕ ಸಮ್ಮೇಳನದ ಅಮೃತಗಳಿಗೆಯಲ್ಲಿ ಮಕ್ಕಳ ಸಾಹಿತ್ಯದ ಕೈಗನ್ನಡಿ ಎಂಬಂತೆ ಪರಿಷತ್ತಿನ ದೆಹಲಿ ಘಟಕದ ಐದು
ವರ್ಷದ ಕಾರ್ಯಕ್ರಮಗಳ ಸವಿನೆನಪಿನ ಕೈಪಿಡಿಯಾಗಿ ಸ್ಮರಣ ಸಂಚಿಕೆಯನ್ನು ಹೊರತರಲು ಪ್ರಸ್ತುತ ಕಾರ್ಯಕಾರಿ ಸಮಿತಿ
ನಿರ್ಧರಿಸಿದ್ದು, ಉದ್ದೇಶಿತ ಸ್ಮರಣ ಸಂಚಿಕೆಯಲ್ಲಿ ಪರಿಷತ್ತಿಗೆ ನಾಡಿನ ಪರಮ ಪೂಜ್ಯರು, ಸರ್ಕಾರಗಳ ಮಂತ್ರಿಗಳು,
ಸಂಸದರು, ಶಾಸಕರು, ಗಣ್ಯರು, ಸಾಹಿತಿಗಳು, ಸಾಧಕರು, ಗೌರವ ಸಲಹೆಗಾರರು, ಪರಿಷತ್ತಿನ ಏಳಿಗೆಗೆ ಶ್ರಮಿಸಿದ
ಶ್ರೇಯೋಭಿಲಾಷಿಗಳು ಸೇರಿದಂತೆ ಎಲ್ಲರ ಶುಭ ಸಂದೇಶಗಳು, ಲೇಖನಗಳು, ಪ್ರತಿಭಾನ್ವಿತ ಮಕ್ಕಳ ಸಾಹಿತ್ಯಿಕ
ಬರವಣಿಗೆಗಳು ಹಾಗೂ ಪರಿಷತ್ತಿನ ಕಾರ್ಯಚಟುವಟಿಕೆಗಳ ಕುರಿತ ಸವಿಸ್ತಾರ ಚಿತ್ರಣ ಮೂಡಿ ಬರಲಿದೆ.

ಮಕ್ಕಳ ಸಾಹಿತ್ಯಿಕ, ಸೃಜನಾತ್ಮಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಸಾಕ್ಷಿಯಾಗುವ ನಮ್ಮ ಈ ಸ್ಮರಣ ಸಂಚಿಕೆಗೆ
ನಿಮ್ಮ ಶುಭಸಂದೇಶವನ್ನು ಪ್ರಧಾನ ಸಂಪಾದಕರು, ಸ್ಮರಣ ಸಂಚಿಕೆ, ಕ.ರಾ.ಮ.ಸಾ.ಪ, ದೆಹಲಿ ಘಟಕ (Address: K.S.
Murthy, Chief Editor, No.J-301, Sarita Vihar, New Delhi-110076, Mob.9871140222) ಅಥವಾ
ಇಮೇಲ್: murthyks66@gmail.com ಮೂಲಕ ಕಳುಹಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.

ಧನ್ಯವಾದಗಳೊಂದಿಗೆ,

ತಮ್ಮ ವಿಶ್ವಾಸಿ,

(ಪಿ. ಜಯರಾಜ್)‌
ಗೌರವ ಅಧ್ಯಕ್ಷಕರು
ದೆಹಲಿ ಘಟಕ

ದಿನಾಂಕ:
ರವರಿಗೆ,
ಸನ್ಮಾನ್ಯ ಉಪ ಮುಖ್ಯ ಮಂತ್ರಿಗಳು,
ಕರ್ನಾಟಕ ಸರ್ಕಾರ,
ವಿಧಾನಸೌಧ, ಬೆಂಗಳೂರು-01.

ಮಾನ್ಯರೇ,
ವಿಷಯ:- “ರಾಷ್ಟ್ರೀಯ ಹೊರನಾಡು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ”ಕ್ಕೆ ಶುಭ ಸಂದೇಶ
ನೀಡಲು ಕೋರಿ.
ದಿನಾಂಕ:15..11.2023 ಸ್ಥಳ ಶ್ರೀ ಸಾಯಿ ಆಡಿಟೋರಿಯಂ ಲೋದಿ ರಸ್ತೆ,
ನವದೆಹಲಿ.

****
ಹಿರಿಯರಿಗೆ ಮಾತ್ರ ಮೀಸಲಾಗಿದ್ದ ಸಾಹಿತ್ಯ ಸಮ್ಮೇಳನಗಳು ಮಕ್ಕಳಿಗಾಗಿ ಏಕಿಲ್ಲ ಎಂಬ ವಿದ್ಯಾರ್ಥಿಗಳ
ಒಕ್ಕೊರಲಿನ ಧ್ವನಿಯ ಫಲವಾಗಿ ದಿನಾಂಕ 26-10-2013 ರಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಹಾಸನ ಜಿಲ್ಲೆಯ
ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಪರಿಸರವಾದಿ, ಮಕ್ಕಳ ಪ್ರೇಮಿ, ರಾಷ್ಟ್ರ ಪರಿಸರ ಪ್ರಶಸ್ತಿ ಪುರಸ್ಕೃತ ಶ್ರೀ ಚ. ನಂ. ಅಶೋಕ್
ಅವರ ಸಾರಥ್ಯದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ 10 ವರುಷ ಪೂರೈಸಿದ ಸಂದರ್ಭದಲ್ಲಿ
ದಶಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ.
ಕಳೆದ ಹತ್ತು ವರ್ಷಗಳಿಂದ ಕನ್ನಡ ನಾಡಿನ ಎಳೆಯ ಚೇತನಗಳಲ್ಲಿ ನಾಡು-ನುಡಿ, ನೆಲಜಲ, ಪರಿಸರ ಕಾಳಜಿ, ಮಾತೃ
ಭಾಷಾಪ್ರೇಮ, ಸಾಹಿತ್ಯಾಸಕ್ತಿ, ಸೃಜನಶೀಲ ಬರವಣಿಗೆ ಹಾಗೂ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಮಾನವೀಯ
ಮೌಲ್ಯಗಳನ್ನು ಬೆಳೆಸಿ ನಾಡಿನ ಮೂಲೆಮೂಲೆಯಲ್ಲೂ ವಿಶ್ವಮಾನವ ಸಂದೇಶವನ್ನು ಸಾರುತ್ತಿದೆ. ಮಕ್ಕಳಲ್ಲಿ ಹುದುಗಿರುವ
ಸುಪ್ತ ಪ್ರತಿಭೆಯನ್ನು ಹೊರತರಲು ನೂರಾರು ಕಾರ್ಯಕ್ರಮಗಳನ್ನು ರೂಪಿಸಿ, ಮಕ್ಕಳಿಗೆ ಚರ್ಚಾಸ್ಪರ್ಧೆ, ಆಶುಭಾಷಣ ಸ್ಪರ್ಧೆ,
ಪ್ರಬಂಧ ಸ್ಪರ್ಧೆ, ಸ್ಥಳದಲ್ಲೇ ಕವನ ರಚನೆ ಸ್ಪರ್ಧೆ, ಬೇಸಿಗೆ ಶಿಬಿರ, ಶಾಲೆಗಳಲ್ಲಿ ಸಂಸ್ಕಾರ-ಭಾರತಿ ಪರೀಕ್ಷೆ ಇನ್ನು ಹಲವಾರು
ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಇಷ್ಟೇ ಅಲ್ಲದೇ, ಮಕ್ಕಳಲ್ಲಿ ಸೃಜನಶೀಲ ಬರವಣಿಗೆ, ಸಾಹಿತ್ಯಾಭಿರುಚಿ ಬೆಳೆಸಿ
ಸಾರಸ್ವತ ಲೋಕಕ್ಕೆ ಬಾಲಸಾಹಿತಿಗಳನ್ನು ನೀಡುವ ಮಹದಾಸೆಯೊಂದಿಗೆ ನಾಡಿನ ಮೂಲೆಮೂಲೆಯಿಂದಲೂ 300 ಕ್ಕೂ
ಹೆಚ್ಚು ಆಸಕ್ತ ಮಕ್ಕಳನ್ನು ಸೇರಿಸಿ ನಡೆಸಿದ ಕಮ್ಮಟಗಳಲ್ಲಿ ಜಾನಪದ ಕಲೆ, ನಾಟಕ, ಸಾಹಿತ್ಯ ಮತ್ತು ಸಂಗೀತ ತರಬೇತಿ
ನೀಡಲಾಗಿದೆ. ಪ್ರತಿಭಾನ್ವಿತ ಮಕ್ಕಳು ರಚಿಸಿದ ಕವನ ಸಂಕಲನ ಪುಸ್ತಕಗಳನ್ನು ಪ್ರಕಟಿಸಿ ಪರಿಷತ್ತು ಬಿಡುಗಡೆ ಮಾಡಿದೆ.
ಪರಿಷತ್ತಿನ ವೇದಿಕೆಯಲ್ಲಿ ಅರಳಿದ ಅನೇಕ ಪ್ರತಿಭಾನ್ವಿತ ಮಕ್ಕಳು ಕೃತಿ ರಚಿಸಿ ಸಾರಸ್ವತ ಲೋಕಕ್ಕೆ ಬಾಲಸಾಹಿತಿಗಳಾಗಿ
ಹೊರಹೊಮ್ಮಿದ್ದಾರೆ.

ಪ್ರಥಮ ಬಾರಿಗೆ 2014 ರ ಫೆಬ್ರವರಿ 14 ರಂದು ಚನ್ನರಾಯಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಪ್ರಥಮ ಮಕ್ಕಳ ಸಾಹಿತ್ಯ
ಸಮ್ಮೇಳನ ನಡೆದು ಮೊದಲ ಕವಿಗೋಷ್ಠಿಯಲ್ಲಿ 80 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ದಾಖಲೆಯಾಗಿದೆ. ನಂತರ ಹೋಬಳಿ,
ತಾಲ್ಲೂಕು, ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳಗಳು ಆಯೋಜನೆಗೊಂಡಿವೆ. 2019 ರಲ್ಲಿ
ಹಾಸನ ಜಿಲ್ಲೆಯಲ್ಲಿ ಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನವು ನೂರಾರು ಮಕ್ಕಳ ಕಲಾತಂಡ,
ಜಾನಪದ ನೃತ್ಯ ವೈಭವಯುತವಾದ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ವಿಚಾರ ಸಂಕಿರಣ, ಸಂವಾದ, ಸಾಂಸ್ಕೃತಿಕ
ಕಾರ್ಯಕ್ರಮ, ನೆರೆದಿದ್ದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಕ್ಕಳು ಹಾಗೂ ಗಣ್ಯಾತಿಗಣ್ಯರು,

ಸಾಹಿತಿಗಳು, ಕನ್ನಡ ಸಹೃದಯ ಜನಸಾಗರದಿಂದ ಮರೆಯಲಾಗದ ಸವಿನೆನಪಿನ ಸಂಗೋಷ್ಠಿಯಾಗಿತ್ತು.

ಚನ್ನರಾಯಪಟ್ಟಣದಂತಹ ಚಿಕ್ಕ ತಾಲ್ಲೂಕಿನಲ್ಲಿ ಚಿಗುರೊಡೆದ ನಮ್ಮ ಮಕ್ಕಳ ಸಾಹಿತ್ಯ ಪರಿಷತ್ತು ಇಂದು ರಾಷ್ಟ್ರವ್ಯಾಪಿಯಾಗಿ
ದೆಹಲಿ, ಮಹಾರಾಷ್ಟ್ರ, ಪುಣೆ, ಗೋ ವಾ, ಕೇರಳದ ಕಾಸರಗೋಡು ಹಾಗೂ ರಾಜ್ಯದ 30 ಜಿಲ್ಲೆಗಳಲ್ಲಿ ಘ ಟಕ ಸ್ಥಾಪಿತಗೊಂಡು
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಾ ಮುನ್ನಡೆದಿದೆ. 2018 ರ ನವೆಂಬರ್ 28 ರಂದು ದೆಹಲಿ ಘಟಕ
ಸ್ಥಾಪಿತಗೊಂಡು ಐದು ವರುಷಗಳು ಪೂರೈಸಿದ್ದು, ದೆಹಲಿ ಹರಿಯಾಣದ ಗುರುಗ್ರಾಮ ಹಾಗೂ ರಾಜಸ್ಥಾನದ ಭಿವಾಡಿಯ
ಕನ್ನಡ ಮಕ್ಕಳಲ್ಲಿ ಸೃಜನಶೀಲ ಬರವಣಿಗೆ, ಸಾಹಿತ್ಯ, ಕಲೆ, ಸಂಸ್ಕಾರ, ಸಂಸ್ಕೃತಿಯನ್ನು ಬಿತ್ತುವ ಹತ್ತು ಹಲವು
ಕಾರ್ಯಯೋಜನೆಗಳನ್ನು ನಿರಂತರವಾಗಿ ರೂಪಿಸಿ, ವೈವಿದ್ಯಮಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜನೆ
ಮಾಡಿದೆ. ಈವರೆಗೂ ಹಲವಾರು ಚಿಣ್ಣರ ಕನ್ನಡ ಕಲರವ, ಚಿಣ್ಣರ ಅಂಗಳ, ಕವಿಗಳ ಸ್ಮರಣೆ, ಶೈಕ್ಷಣಿಕ-ಪರಿಸರ ಪ್ರವಾಸ,
ದೇಶ ಒಂದು ಭಾಷೆ ನೂರು, ಸಮ್ಮೇಳನ ಸವಿನೆನಪು, ನುಡಿ ಕನ್ನಡ-ನಡೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ಪುಸ್ತಕ
ವಂದನೆ, ಬಸವಣ್ಣ ಸ್ಮರಣೆ, ಕುವೆಂಪು ನುಡಿನಮನ, ಸೃಜನಶೀಲ ಕಾರ್ಯಾಗಾರ ಇನ್ನೂ ಹಲವಾರು ಕಾರ್ಯಕ್ರಮಗಳನ್ನು
ಯಶಸ್ವಿಯಾಗಿ ಏರ್ಪಡಿಸಿ ಕನ್ನಡೇತರ ಪ್ರದೇಶದ ಕನ್ನಡ ಮಕ್ಕಳಲ್ಲಿ ಮಾತೃ ಭಾಷಾಭಿಮಾನದ ಜೊತೆಗೆ ಸಾಹಿತ್ಯಾಸಕ್ತಿ
ಬೆಳೆಸಿ ಉತ್ತಮ ವ್ಯಕ್ತಿತ್ವ ರೂಪಿತಗೊಳ್ಳಲು ಸಹಕಾರಿಯಾಗಿದೆ.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಸಾರ್ಥಕ ದಶಮಾನೋತ್ಸವ ಆಚರಣೆ ಹಾಗೂ ದೆಹಲಿ ಘಟಕ ಆರಂಭಗೊಂಡು
ಯಶಸ್ವಿಯಾಗಿ ಐದು ವರುಷಗಳನ್ನು ಪೂರೈಸಿರುವ ಸಂದರ್ಭದ ಸಂಭ್ರಮಾಚರಣೆಯ ಅಂಗವಾಗಿ ನವದೆಹಲಿಯಲ್ಲಿ ಪ್ರಥಮ
ರಾಷ್ಟ್ರೀಯ ಹೊರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಮುಂಬರುವ ನವೆಂಬರ್ 15, 2023 ರಂದು ಜರುಗಲಿದ್ದು,
ಸಮ್ಮೇಳನಕ್ಕೆ ನಾಡಿನಿಂದ ನೂರಾರು ಪ್ರತಿಭಾನ್ವಿತ ಮಕ್ಕಳು, ಕನ್ನಡಿಗರು, ಬಾಲ ಕಲಾವಿದರು, ಪ್ರಸಿದ್ಧ ಸಾಹಿತಿಗಳು,
ಗಣ್ಯಾತಿಗಣ್ಯರು, ಪರಮ ಪೂಜ್ಯರು, ಪರಿಷತ್ತಿನ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಹಿಂದಿನ ಮಕ್ಕಳ ಸಾಹಿತ್ಯ ಸಮ್ಮೇಳನಗಳ
ಸಮ್ಮೇಳನಾಧ್ಯಕ್ಷರುಗಳು ಪಾಲ್ಗೊಳ್ಳುತ್ತಿದ್ದಾರೆ.

ಈ ಐತಿಹಾಸಿಕ ಸಮ್ಮೇಳನದ ಅಮೃತಗಳಿಗೆಯಲ್ಲಿ ಮಕ್ಕಳ ಸಾಹಿತ್ಯದ ಕೈಗನ್ನಡಿ ಎಂಬಂತೆ ಪರಿಷತ್ತಿನ ದೆಹಲಿ ಘಟಕದ ಐದು
ವರ್ಷದ ಕಾರ್ಯಕ್ರಮಗಳ ಸವಿನೆನಪಿನ ಕೈಪಿಡಿಯಾಗಿ ಸ್ಮರಣ ಸಂಚಿಕೆಯನ್ನು ಹೊರತರಲು ಪ್ರಸ್ತುತ ಕಾರ್ಯಕಾರಿ ಸಮಿತಿ
ನಿರ್ಧರಿಸಿದ್ದು, ಉದ್ದೇಶಿತ ಸ್ಮರಣ ಸಂಚಿಕೆಯಲ್ಲಿ ಪರಿಷತ್ತಿಗೆ ನಾಡಿನ ಪರಮ ಪೂಜ್ಯರು, ಸರ್ಕಾರಗಳ ಮಂತ್ರಿಗಳು,
ಸಂಸದರು, ಶಾಸಕರು, ಗಣ್ಯರು, ಸಾಹಿತಿಗಳು, ಸಾಧಕರು, ಗೌರವ ಸಲಹೆಗಾರರು, ಪರಿಷತ್ತಿನ ಏಳಿಗೆಗೆ ಶ್ರಮಿಸಿದ
ಶ್ರೇಯೋಭಿಲಾಷಿಗಳು ಸೇರಿದಂತೆ ಎಲ್ಲರ ಶುಭ ಸಂದೇಶಗಳು, ಲೇಖನಗಳು, ಪ್ರತಿಭಾನ್ವಿತ ಮಕ್ಕಳ ಸಾಹಿತ್ಯಿಕ
ಬರವಣಿಗೆಗಳು ಹಾಗೂ ಪರಿಷತ್ತಿನ ಕಾರ್ಯಚಟುವಟಿಕೆಗಳ ಕುರಿತ ಸವಿಸ್ತಾರ ಚಿತ್ರಣ ಮೂಡಿ ಬರಲಿದೆ.

ಮಕ್ಕಳ ಸಾಹಿತ್ಯಿಕ, ಸೃಜನಾತ್ಮಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಸಾಕ್ಷಿಯಾಗುವ ನಮ್ಮ ಈ ಸ್ಮರಣ ಸಂಚಿಕೆಗೆ
ನಿಮ್ಮ ಶುಭಸಂದೇಶವನ್ನು ಪ್ರಧಾನ ಸಂಪಾದಕರು, ಸ್ಮರಣ ಸಂಚಿಕೆ, ಕ.ರಾ.ಮ.ಸಾ.ಪ, ದೆಹಲಿ ಘಟಕ (Address: K.S.
Murthy, Chief Editor, No.J-301, Sarita Vihar, New Delhi-110076, Mob.9871140222) ಅಥವಾ
ಇಮೇಲ್: murthyks66@gmail.com ಮೂಲಕ ಕಳುಹಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.

ಧನ್ಯವಾದಗಳೊಂದಿಗೆ,

ತಮ್ಮ ವಿಶ್ವಾಸಿ,
(ಪಿ. ಜಯರಾಜ್)‌
ಗೌರವ ಅಧ್ಯಕ್ಷಕರು
ದೆಹಲಿ ಘಟಕ

You might also like