You are on page 1of 2

ಕನ್ನಡ ನೋಟ್ಸ್

ತರಗತಿ: ೭
ಪದ್ಯ ೧. ಗಿಡ ಮರ

ಸೂಚನೆ: ನಿಮ್ಮ ಕನ್ನಡ ನೋಟ್ಸ್ ನಲ್ಲಿ ಕೆಳಗೆ ನೀಡಿರುವ ಪದ್ಯವನ್ನು ಪೂರ್ತಿಯಾಗಿ ಬರೆದುಕೊಳ್ಳಿ.

I. ಪದ್ಯ ಬರೆವಣಿಗೆ:

II. ಕವಿ ಪರಿಚಯ:


ಹೆಸರು: ಡಾ. ಸತ್ಯಾನಂದ ಪಾತ್ರೋಟ

ಜನ್ಮ ಸ್ಥಳ: ಬಾಗಲಕೋಟೆ

ಕೃತಿಗಳು: ಕರಿ ನೆಲದ ಕಲೆಗಳು, ಜಾಜಿ ಮಲ್ಲಿಗೆ, ಕಲ್ಲಿಗೂ ಗೊತ್ತಿರುವ ಕಥೆ, ಕರಿಯ ಕಟ್ಟಿದ ಕವನ, ನನ್ನ ಕನಸಿನ ಹುಡುಗಿ,
ನದಿಗೊಂದು ಕನಸು ಮತ್ತು ಅವಳು ಎಂಬ ಕವನಸಂಕಲನಗಳು. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ, ಮತ್ತೊಬ್ಬ ಏಕಲವ್ಯ
ಎಂಬ ನಾಟಕಗಳು. ಒಂದಿಷ್ಟು ಕ್ಷಣಗಳು ಎಂಬ ಪ್ರಬಂಧ ಸಂಕಲನವನ್ನು ಪ್ರಕಟಿಸಿದ್ದಾರೆ.

ಧ್ವನಿಸುರುಳಿ: ಎದೆಯ ಮಾತು

ಪ್ರಶಸ್ತಿ: ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.

ಆಕರ ಗ್ರಂಥ: 'ಕರಿಯ ಕಟ್ಟಿದ ಕವನ' ಎಂಬ ಕವನ ಸಂಕಲನದಿಂದ 'ಗಿಡ ಮರ' ಎಂಬ ಪದ್ಯವನ್ನು ಆರಿಸಿಕೊಳ್ಳಲಾಗಿದೆ.

III. ಪದಗಳ ಅರ್ಥ:

೧. ಬೊಡ್ಡೆ - ಮರದ ಕಾಂಡದ ಭಾಗ


೨. ಅನುದಿನ - ದಿನನಿತ್ಯ
೩. ಕರಿದು - ಕಪ್ಪಾದ ಬಣ್ಣ
೪. ತರತರ - ವಿಧವಿಧವಾದ
೫. ಕಡಲುಕ್ಕುವ - ಸಮುದ್ರ ಉಕ್ಕಿದಂತೆ
೬. ಮನ - ಮನಸ್ಸು
೭. ಹಾಳು ಕೊಂಪೆ - ನಾಶ ಹೊಂದಿದ ಊರು

IV. ಒಂದು ವಾಕ್ಯದಲ್ಲಿ ಉತ್ತರಿಸಿ.


೧. ಯಾರೇ ಏನೇ ಮಾಡಿದರೂ ಗಿಡಮರ ಏನು ಮಾಡುತ್ತವೆ?
ಉ : ಯಾರೇ ಏನೇ ಮಾಡಿದರೂ ಗಿಡಮರ ದಿವ್ಯಮೌನ ತಾಳುತ್ತವೆ.

೨. ಕಡಲುಕ್ಕುವ ಚೇತನ ಎಲ್ಲಿ ಕಾಣಬರುತ್ತದೆ?


ಉ : ಕಡಲುಕ್ಕುವ ಚೇತನ ರೆಂಬೆಕೊಂಬೆಗಳು ಚಿಗುರುವಲ್ಲಿ ಕಾಣಬರುತ್ತದೆ.

೩. ಅದು ಇದು ಎಣಿಸದಿರುವುದು ಯಾವುದು?


ಉ : ಅದು ಇದು ಎಣಿಸದಿರುವುದು ಗಿಡಮರ.

೪. ಗಿಡಮರಗಳು ಹೇಗೆ ಬೆಳೆದು ಅರಳುತ್ತಿವೆ?


ಉ : ಗಿಡಮರಗಳು ಬಿಸಿಲು ಮಳೆ ಚಳಿಯನ್ನು ತಡೆದು ಬೆಳೆದು ಅರಳುತ್ತಿವೆ.

V. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

೧. ಬೆಳೆದು ನಿಂತ ಗಿಡ ಮರ ಹೇಗಿವೆ?


ಉ : ಬೆಳೆದು ನಿಂತ ಗಿಡಮರಗಳು ಕರಿದಾದ ಬೊಡ್ಡೆಯನ್ನು ಹೊಂದಿದ್ದು, ಹಸಿರು ಎಲೆಗಳಿಂದ ಕಂಗೊಳಿಸುತ್ತಿವೆ. ವಿವಿಧ
ರೀತಿಯ ಹೂವು, ಕಾಯಿ, ಹಣ್ಣುಗಳನ್ನು ಬಿಟ್ಟು; ಪರಿಮಳವನ್ನು ಬೀರುತ್ತ, ಪ್ರಕೃತಿಗೆ ಸೊಬಗನ್ನು ನೀಡುತ್ತಿವೆ.

೨. ಯಾರ ಮಾತಿನಂತೆ ಮನ ಇಲ್ಲ? ಏಕೆ ?


ಉ : ಮನುಷ್ಯನ ಮಾತಿನಂತೆ ಮನ ಇಲ್ಲ. ಏಕೆಂದರೆ ಮನುಷ್ಯನ ಮನಸ್ಸು ಲಿಂಗ, ವರ್ಣ ಜಾತಿ, ಧರ್ಮಗಳೆಂಬ ಕೆಟ್ಟ
ಆಲೋಚನೆಗಳನ್ನು ಹೊಂದಿದ್ದು ಹಾಳುಕೊಂಪೆಯಂತೆ ಆಗಿದೆ.

೩. ಗಿಡಮರಗಳು ಯಾವುದನ್ನು ಮೀರಿ ಬೆಳೆದಿವೆ?


ಉ : ಗಿಡಮರಗಳು ಎಂದಿಗೂ ಅವನು-ಇವಳು, ಅದು-ಇದು, ಮೇಲು-ಕೀಳು ಎಂಬ ವಿಚಾರಗಳನ್ನು ಎಣಿಸುವುದಿಲ್ಲ. ಅವು
ಜಾತಿ, ಲಿಂಗ, ಧರ್ಮ ಎಲ್ಲವನ್ನು ಮೀರಿ ಬೆಳೆದಿವೆ.

VI. ಬಿಟ್ಟಸ್ಥಳ ತುಂಬಿರಿ.

೧. ಎಂಥ ಸೊಗಸು ಏನು ಕಂಪು


೨. ಬೆಳೆದು ನಿಂತ ಗಿಡ ಮರ
೩. ರೆಂಬೆ-ಕೊಂಬೆ ಚಿಗುರುವಲ್ಲಿ
೪. ಕಡಲುಕ್ಕುವ ಚೇತನ
೫. ಮನುಷ್ಯನಲ್ಲಿ ಮಾತು ಉಂಟು
೬. ಮಾತಿನಂತೆ ಇಲ್ಲ ಮನ
೭. ಜಾತಿ-ಗೀತಿ ಲಿಂಗ-ಧರ್ಮ
೮. ಮೀರಿ ಬೆಳೆದ ಗಿಡಮರ
೯. ಬೆಳದಿಂಗಳ ರಾತ್ರಿಯಲ್ಲಿ ಚಂದ್ರನಿರುವ ಆಗಸವನ್ನು ನೋಡುವುದೇ ಆನಂದ.
೧೦. ನಿನಗೆ ಪೆಟ್ಟಾಗಿರುವುದನ್ನು ಕಂಡಾಗ ನನಗೆ ಅಳು ಬಂದಿತು.
೧೧. ನನ್ನ ಊರು ಬೆಂಗಳೂರು.
೧೨. ಸಂಜೆ ಆಟ ಆಡಿ ಓದಿದ ಅನಂತರ ಊಟ ಮಾಡುತ್ತೇನೆ.
೧೩. ಒಲೆಯ ಮೇಲೆ ಹಾಲನ್ನು ಇಡಲಾಗಿದೆ.

You might also like